ನಿರ್ದೇಶಕ ಹೇಮಂತ್ ಹೆಗಡೆ ಅವರ ನೆಟ್ ವರ್ಕ್ ಸಿಕ್ತು!

ಪ್ರಭಂಜನ ಅವರು ನಿರ್ಮಿಸುತ್ತಿರುವ, ಹೇಮಂತ್ ಹೆಗಡೆ ನಿರ್ದೇಶಿಸುತ್ತಿರುವ “ನೆಟ್ ವರ್ಕ್” ಚಿತ್ರಕ್ಕೆ ಚಾಲನೆ ದೊರಕಿದೆ.

“ನೆಟ್ ವರ್ಕ್” ಒಂದು ಕುಟುಂಬದ ಕಥೆಯಲ್ಲ. ಸಾಕಷ್ಟು ಜನರು ಎದುರಿಸುತ್ತಿರುವ ಸಮಸ್ಯೆ. ಮೊಬೈಲ್ ನಿಂದ ಉಪಯೋಗ ಇರುವ ಹಾಗೆ, ದುಷ್ಪರಿಣಾಮಗಳು ಹೆಚ್ಚಿದೆ. ಮೊಬೈಲ್ ಬಂದ ಮೇಲೆ ಮಕ್ಕಳು ಆಟವಾಡುವುದನ್ನು ಮರೆತಿದ್ದಾರೆ. ಮನೆಯಲ್ಲೂ ಅಷ್ಟೇ . ಮೂರು ಜನ ಇದ್ದರೆ, ಮೂರು ಕಡೆ ಮೊಬೈಲ್ ನೋಡುವುದರಲ್ಲಿ ತಲೀನರಾಗಿರುತ್ತಾರೆ.

ಹೀಗೆ ಈ ಸಮಸ್ಯೆಗಳ ಸುತ್ತ “ನೆಟ್ ವರ್ಕ್” ಚಿತ್ರದ ಕಥೆ ಸಾಗುತ್ತದೆ. ಮೂವತ್ತು ವರ್ಷಗಳ ಹಿಂದೆ ನಾವು ಗೆಳೆಯರು ಸೇರಿ “ದೃಷ್ಟಿ” ಎಂಬ ಸಂಸ್ಥೆ ಕಟ್ಟಿದ್ದೆವು. ಆ ತಂಡದಲ್ಲಿದ್ದ ಬಹುತೇಕರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಫ್ಟ್ ವೇರ್ ಕಂಪನಿ ಮಾಲೀಕರಾಗಿರುವ ಪ್ರಭಂಜನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೇ 15 ರಿಂದ ಬೆಂಗಳೂರಿನಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಟ ಹಾಗೂ ನಿರ್ದೇಶಕ ಹೇಮಂತ್ ಹೆಗಡೆ ಹೇಳಿದರು.

ಹೇಮಂತ್ ಹೆಗಡೆ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕ ಪ್ರಭಂಜನ.

ಚಿತ್ರದಲ್ಲಿ ನಟಿಸುತ್ತಿರುವ ರಾಜೇಶ್ ನಟರಂಗ, ಸುಚೀಂದ್ರ ಪ್ರಸಾದ್, ಕೆ.ಎಂ.ಚೈತನ್ಯ, ಸಾಕ್ಷಿ ಮೇಘನ, ರಕ್ಷಿಕಾ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು.

Related Posts

error: Content is protected !!