Categories
ಸಿನಿ ಸುದ್ದಿ

ಕೆಜಿಎಫ್ ಸಾಮ್ರಾಜ್ಯಕ್ಕೆ `ಅಧೀರ’ ಕಮ್ ಬ್ಯಾಕ್ – ಬೆಂಕಿ ಖಬರ್ ! ಇನ್ಮೇಲೆ ಶುರು ಇಂಟರ್ ನ್ಯಾಷನಲ್ ಫೀವರ್!

ನರಾಚಿ ಲೋಕದಲ್ಲಿ ಸ್ಯಾಂಡಲ್ ವುಡ್ ಷೆಹಜಾದ್ ರಾಕಿಭಾಯ್ ಜೊತೆ ಸೆಣಸಾಡಿ ಮುಂಬೈಗೆ ವಾಪಾಸ್ ಆಗಿದ್ದ ಬಿಟೌನ್ ಮುನ್ನಭಾಯ್ ಮತ್ತೆ ರಾಕಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಧೀರನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಎಲ್ಲರನ್ನೂ ದಂಗು ಬಡಿಸಿ ಹೋಗಿದ್ದ ಬಿಟೌನ್ ಬಾಬ ಈಗ ಅಧೀರನ ಪಾತ್ರಕ್ಕೆ ಜೀವತುಂಬಲಿಕ್ಕೆ ಕೆಜಿಎಫ್ ಅಖಾಡಕ್ಕೆ ಭೇಟಿಕೊಟ್ಟಿದ್ದಾರೆ. ಹೌದು, ಅಧೀರ ಇಡೀ ಜಗತ್ತು ಕಣ್ಣರಳಿಸಿ ಕಾಯ್ತಿರುವ ಖಳನಾಯಕ ಪಾತ್ರ. ಕೆಜಿಎಫ್ ಮೇಲೆ ಕಣ್ಣಿಟ್ಟಿದ್ದ ಗರುಡನನ್ನು ಹೊಡೆದುರುಳಿಸಿದ ರಾಕಿಭಾಯ್, ಅಧೀರನನ್ನು ಯಾವ್ ರೀತಿಯಾಗಿ ಮಟ್ಟಹಾಕಿ ಚಿನ್ನದ ಲೋಕಕ್ಕೆ ಅಧಿಪತಿಯಾಗಬಹುದು ಅಂತ ವಲ್ಡ್ ವೈಡ್ ಸಿನಿಮಾ ಪ್ರೇಕ್ಷಕರು ಕೂತೂಹಲದಿಂದ ಎದುರು ನೋಡ್ತಿದ್ದಾರೆ. ಇಂತಹ ಹೈವೋಲ್ಟೇಜ್ ಕ್ಯಾರೆಕ್ಟರ್ ಗೆ ಬಿಟೌನ್ ಬಾಬ ಜೀವ ತುಂಬಿ‌ ಅಭಿನಯಿಸಿದ್ದಾರೆ.ಇತ್ತೀಚಿಗೆ ಕೆಜಿಎಫ್ ತಂಡ ಸೇರಿಕೊಂಡಿರುವ ನಟ ಸಂಜಯ್ ದತ್ತ್ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ.

ಈ ಬೆಂಕಿ ಸಮಾಚಾರವನ್ನು ಚಿತ್ರತಂಡ ಸೋಷಿಯಲ್ ಸಮುದ್ರದಲ್ಲಿ ಹಂಚಿಕೊಂಡಿದೆ. ಸುದ್ದಿ ಕೇಳಿ ರಾಕಿಂಗ್ ಫ್ಯಾನ್ಸ್ ಮಾತ್ರವಲ್ಲ ಇಡೀ ಚಿತ್ರಪ್ರೇಮಿಗಳು ದಿಲ್ ಖುಷ್ ಆಗಿದ್ದಾರೆ. ಆದಷ್ಟು ಬೇಗ ಟ್ರೈಲರ್ ಮತ್ತು ಸಾಂಗ್ಸ್ ಝಲಕ್ ತೋರ್ಸಿ ಅಂತ ಹೊಂಬಾಳೆಗೆ ಬೇಡಿಕೆ ಇಡ್ತಿದ್ದಾರೆ. ಬೆಳ್ಳಿತೆರೆ ಅಖಾಡದಲ್ಲಿ ಚಂಡಮಾರುತದ ಅಲೆ ಎಬ್ಬಿಸೋ ಮುನ್ನ ಸೋಷಿಯಲ್ ಸಮುದ್ರದಲ್ಲಿ ಸುನಾಮಿ ಎಬ್ಬಿಸೋದಕ್ಕೆ ಚಿತ್ರತಂಡ‌ ಕೂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈಗಾಗಲೇ ಪ್ರಮೋಷನ್ ಕೆಲಸಗಳನ್ನು ಶುರುವಿಟ್ಟುಕೊಂಡಿದೆ. ಅದರ ಭಾಗವಾಗಿ ಮೊದಲು ಕೆಜಿಎಫ್ ಚಾಪ್ಟರ್ 1 ದೃಶ್ಯಗಳನ್ನು ಪ್ರೇಕ್ಷಕರಿಗೆ ರೀಕಾಲ್ ಮಾಡಿಸುವಂತಹ ಕೆಲಸವನ್ನು ಮಾಡ್ತಿದೆ. ಶೀಘ್ರದಲ್ಲೇ ಕೆಜಿಎಫ್ ಚಾಪ್ಟರ್ 2 ಪೋಸ್ಟರ್ ಗಳ ದರ್ಬಾರ್ ಸೋಷಿಯಲ್ ಜಗತ್ತಿನಲ್ಲಿ ಆರಂಭಗೊಳ್ಳಲಿದೆ. ಅಲ್ಲಿಂದ ಶುರುವಾಗಲಿದೆ ಕೆಜಿಎಫ್ ಅಸಲಿ ಇಂಟರ್ ನ್ಯಾಶನಲ್ ಫೀವರ್

ಅಂದ್ಹಾಗೇ, ‘ ಅಧೀರ’ನ ಪಾತ್ರ ಹೊರತು ಪಡಿಸಿ ಬಹುತೇಕ ಎಲ್ಲಾ ಪಾತ್ರಗಳ ಡಬ್ಬಿಂಗ್ ಪೂರ್ಣಗೊಂಡಿತ್ತು. ಬಾಬ ಕಾಲ್ ಶೀಟ್ ಗಾಗಿ ಚಿತ್ರತಂಡ ಎದುರು ನೋಡ್ತಿತ್ತು. ಫೈನಲೀ, ಸಂಜು ಬಾಬು ಕೆಜಿಎಫ್ ಅಂಗಳಕ್ಕೆ ಭೇಟಿಕೊಟ್ಟು ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಅಲ್ಲಿಗೆ ಕೆಜಿಎಫ್ ಚಾಪ್ಟರ್ 2 ಮಾತಿನ ಮನೆಯ ಸಂಪೂರ್ಣ ಕೆಲಸ ಮುಕ್ತಾಯಗೊಂಡಿದೆ. ಈ ಖುಷಿ ಸಮಾಚಾರವನ್ನು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ತಿಳಿಸಿದೆ. ಇಡೀ ಜಗತ್ತು ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಸಿನಿಮಾ ಪ್ರೇಕ್ಷಕರಿಗೆ ಚಿನ್ನದ ಸಾಮ್ರಾಜ್ಯ ತೋರಿಸೋಕೆ ಕೆಜಿಎಫ್ ಚಾಪ್ಟರ್ 2 ತಂಡ ಸಕಲ ಸಿದ್ದತೆ ನಡೆಸಿದೆ.ಏಪ್ರಿಲ್ 14 ರಂದು ವಲ್ಡ್ ವೈಡ್ ಕೆಜಿಎಫ್ ಚಾಪ್ಟರ್ 2 ತೆರೆಗೆ ಬರಲಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಗಂಧದಗುಡಿಗೆ `ಶರಪಂಜರ’ ಶಿವರಾಮಣ್ಣರ ಕೊಡುಗೆ ಅಪಾರ !

ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಅಪ್ಪುನಾ ಕಳೆದುಕೊಂಡು ಒಂದು ತಿಂಗಳು ಕಳೆಯುವಷ್ಟರಲ್ಲಿ ಹಿರಿಯ ನಟ ಶಿವರಾಮಣ್ಣರ ಸಾವಾಗಿದ್ದು ಸ್ಯಾಂಡಲ್‌ವುಡ್‌ಗೆ ಆಘಾತ ತಂದೊಡ್ಡಿದೆ. ಶಿವರಾಮಣ್ಣರಿಗೆ ವಯಸ್ಸಾಗಿತ್ತು ನಿಜ ಆದರೆ ಕಲೆ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಭಕ್ತಿ, ಜೀವನದ ಮೇಲೆ ಅವರಿಗಿದ್ದ ಹುಮ್ಮಸ್ಸು ಮತ್ತು ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ರಾಜ್‌ಕುಮಾರ್-ಕಲ್ಯಾಣ್‌ಕುಮಾರ್-ಉದಯ್ ಕುಮಾರ್ ಅವ್ರಂಥ ದಿಗ್ಗಜರಿಂದ ಹಿಡಿದು ಇತ್ತೀಚಿನ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆಗೆ ಹೊಸ ಕಲಾವಿದರ ಜೊತೆಗೆ ತೆರೆಹಂಚಿಕೊಂಡಿದ್ದ ಶಿವರಾಮ್ ಅವರು ಶಿವರಾಮಣ್ಣ ಅಂತನೇ ಜನಪ್ರಿಯತೆ ಗಳಿಸಿಕೊಂಡಿದ್ದರು. ಬರೋಬ್ಬರಿ ೬ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಗೊಂಡಿದ್ದ ಶಿವರಾಮಣ್ಣ, ಹೀರೋ ಪಾತ್ರದಿಂದ ಹಿಡಿದು, ಸಹಾಯಕ ಪಾತ್ರ, ಕಾಮಿಡಿ ಕ್ಯಾರೆಕ್ಟರ್, ಪೋಷಕ ಪಾತ್ರ ಹೀಗೆ ಎಲ್ಲದಕ್ಕೂ ತಮ್ಮನ್ನು ತಾವು ತೊಡಗಿಸಿಕೊಂಡು ಕಲಾಸರಸ್ವತಿಯ ಸೇವೆ ಮಾಡುತ್ತಾ ಕನ್ನಡಿಗರನ್ನು ಮನರಂಜಿಸುತ್ತಾ ಬಂದಿದ್ದಾರೆ.

ಬೆರತ ಜೀವ'ಇವರ ಮೊದಲ ಸಿನಿಮಾ.ಕಲ್ಯಾಣ್‌ಕುಮಾರ್ ಹೀರೋ ಆಗಿದ್ದರು. ಬಿ.ಸರೋಜಾದೇವಿ ಹಾಗೂ ಜಯಂತಿ ಈ ಚಿತ್ರದ ನಾಯಕಿಯರಾಗಿದ್ದರು. ಇವರುಗಳೊಟ್ಟಿಗೆ ಸ್ಕ್ರೀನ್ ಶೇರ್ ಮಾಡುವುದರ ಜೊತೆಗೆ ಸಹ ನಿರ್ಮಾಪಕನಾಗಿ ಬಣ್ಣದ ಲೋಕದಲ್ಲಿ ಪಯಣ ಆರಂಭಿಸಿದ ಶಿವರಾಮ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.ಮುಖಕ್ಕೆ ಬಣ್ಣ ಹಚ್ಚುವ ಮೊದಲು ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದರು. ೧೯೫೮ರಿಂದ ೧೯೬೫ರವರೆಗೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಸಕ್ರಿಯಗೊಂಡಿದ್ದರು.ಅದ್ಯಾವಾಗ ನಿರ್ದೇಶಕ ಸೀತರಾಮ ಶಾಸ್ತ್ರಿಯವರು ‘ಬೆರತ ಜೀವ’ದಲ್ಲಿ ಶಿವರಾಮಣ್ಣಂಗೆ ಪಾರ್ಟ್ ಮಾಡಿಸಿದ್ರೋ ಫಿನಿಶ್ ಅಲ್ಲಿಂದ ೨೦೨೧ರವರೆಗೆ ಕನ್ನಡ ಚಿತ್ರಕ್ಕಾಗಿ ದುಡಿಯುತ್ತಲೇ ಇದ್ದಾರೆ. ಕೆ.ಎಸ್.ಎಲ್ ಸ್ವಾಮಿ, ಗೀತಪ್ರಿಯ, ಸಂಗೀತಂ ಶ್ರೀನಿವಾಸ್ ರಾವ್, ಪುಟ್ಟಣ್ಣ ಕಣಗಾಲ್‌ರಂತಹ ದಿಗ್ಗಜ ನಿರ್ದೇಶಕರುಗಳೊಟ್ಟಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ೧೯೭೦ರಿಂದ ಹಿಡಿದು ೨೦೨೧ರ ತನಕ ಬಹುತೇಕ ನಿರ್ದೇಶಕರುಗಳ ಕನಸಿನ ಚಿತ್ರಕ್ಕೆ ಜೀವತುಂಬಿ ಅಭಿನಯಿಸಿದ್ದಾರೆ.

ಹೌದು, ಶರಪಂಜರ-ನಾಗರಹಾವು-ಶುಭಮಂಗಳ ಚಿತ್ರದಲ್ಲಿನ ಶಿವರಾಮ್ ಅವರ ಅಭಿನಯಕ್ಕೆ ಸರಿಸಾಟಿ ಮತ್ಯಾರು? ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ದ ಈ ಚಿತ್ರಗಳು ಈ ಕಾಲಕ್ಕೂ ಎವರ್‌ಗ್ರೀನ್ ಸಿನಿಮಾ ಪಟ್ಟಿಯಲ್ಲಿ ಮೊದಲು ಬರುತ್ತವೆ. ಇಂತಹ ಚಿತ್ರಗಳಲ್ಲಿ ಪಾರ್ಟ್ ಆಗಿದ್ದ ಶಿವರಾಮಣ್ಣನ್ನ ಕಳೆದುಕೊಂಡು ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಕರುನಾಡೇ ಕಂಬನಿ ಮಿಡುಯುತ್ತಿದೆ. ಆಪ್ತಮಿತ್ರ ಹಾಗೂ ಹುಚ್ಚ ಸಿನಿಮಾದ ಶಿವರಾಮಣ್ಣರ ಪಾತ್ರಗಳು ಕಣ್ಮುಂದೆ ಬರುತ್ತಿವೆ. ಗಂಭೀರ ಪಾತ್ರಕ್ಕೂ ಹಾಸ್ಯಕ್ಕೂ ಜೈ ಎನ್ನುವ ಶಿವರಾಮ್ ಅವರು, ಗುರುಶಿಷ್ಯರು-ಹೊಸಬೆಳಕು-ಚಲಿಸುವ ಮೋಡಗಳು ಚಿತ್ರದಲ್ಲಿ ಕಾಮಿಕ್ ಪಾತ್ರಕ್ಕೆ ಬಣ್ಣ ಹಚ್ಚಿ ಚಿತ್ರಪ್ರೇಮಿಗಳನ್ನು ಹುಚ್ಚೆಬ್ಬಿಸಿದ್ದರು. `ಡ್ರೈವರ್ ಹನುಮಂತು’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ವಿಷ್ಣುದಾದ ಹಾಗೂ ರೆಬೆಲ್‌ಸ್ಟಾರ್ ಗೆಸ್ಟ್ ಆಗಿ ಡ್ರೈವರ್ ಹನುಮಂತುಗೆ ಸಪೋರ್ಟ್ ಮಾಡಿದರು. ಕಮರ್ಷಿಯಲಿ ಈ ಸಿನಿಮಾ ಹಿಟ್ ಆಗದೇ ಹೋದರು ಪ್ರೇಕ್ಷಕರ ಮನಸ್ಸಲಿ ಉಳಿಯಿತು.

ಹೆಸರಾಂತ ಸಿನಿಮಾಟೋಗ್ರಫರ್ ಬೊಮ್ಮನ್. ಡಿ. ಇರಾನಿ ಯವರ ಬಳಿ ಅಸಿಸ್ಟೆಂಟ್ ಕ್ಯಾಮೆರಮೆನ್ ಆಗಿ ಬಣ್ಣದ ಲೋಕದ ಜೊತೆ ನಂಟು ಬೆಸೆದುಕೊಂಡ ಶಿವರಾಮಣ್ಣ, ಸಹಾಯಕ ನಿರ್ದೇಶಕರಾಗಿ, ನಟರಾಗಿ, ನಿರ್ದೇಶಕರಾಗಿ ಜೊತೆಗೆ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡರು. ಸಹೋದರ ರಾಮನಾಥನ್ ಜೊತೆ ಸೇರಿ ಕನ್ನಡ ಹಾಗೂ ಹಿಂದಿ ಚಿತ್ರಗಳನ್ನು ನಿರ್ಮಿಸಿದ್ದರು. ‘ರಾಶಿ ಬ್ರದರ್ಸ್'ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಶುರು ಮಾಡಿ ಅದರ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಹೋದರು. ಗೆಜ್ಜೆಪೂಜೆ,ಉಪಾಸನೆ,ನಾನೊಬ್ಬ ಕಳ್ಳ,ಡ್ರೈವರ್ ಹನುಮಂತು,ಧರ್ಮದುರೈ, ಬಹಳ ಚೆನ್ನಾಗಿದೆ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಿಗೆ ಬಂಡವಾಳ ಸುರಿದು ಗೆಲ್ಲಿಸಿದ ಖ್ಯಾತಿ ಶಿವರಾಮಣ್ಣರ ಬ್ಯಾನರ್‌ಗೆ ಸಲ್ಲುತ್ತೆ. ಗಂಧದಗುಡಿ ಕಟ್ಟಿ ಬೆಳೆಸಿದ ಅಣ್ಣಾವ್ರಿಗೆ ‘ಹೃದಯ ಸಂಗಮ’ ಎನ್ನುವ ಸಿನಿಮಾ ನಿರ್ದೇಶನ ಮಾಡುವ ಅದೃಷ್ಟ ಶಿವರಾಮಣ್ಣರಿಗೆ ಸಿಕ್ಕಿತ್ತು. ಅಮಿತಾಬ್ ಬಚ್ಚನ್-ಕಮಲ್‌ಹಾಸನ್-ರಜನಿಕಾಂತ್ ಹೀಗೆ ಭಾರತೀಯ ಚಿತ್ರರಂಗದ ದಂತಕತೆಗಳು ಒಟ್ಟಿಗೆ ಅಭಿನಯಿಸಿದ್ದ `ಗೆರಫ್ತಾರ್’ ಚಿತ್ರವನ್ನು ಶಿವರಾಮಣ್ಣ ಹಾಗೂ ಸಹೋದರ ಎಸ್. ರಾಮನಾಥನ್ ಸೇರಿ ನಿರ್ಮಾಣ ಮಾಡಿದ್ದರು. ಹೀಗೆ ಬಣ್ಣದ ಲೋಕಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. 84ನೇ ವಯಸ್ಸಲ್ಲೂ ಇನ್ನೂ ಚಿತ್ರರಂಗದಲ್ಲಿ ಸಕ್ರಿಯಗೊಂಡಿದ್ದರು. ಇಂತಿಪ್ಪ ಹಿರಿಯ ನಟ ಇನ್ನಿಲ್ಲ ಎನ್ನುವುದೇ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಸರಿಸುಮಾರು ೨೭೦ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ ಶಿವರಾಮಣ್ಣ 2010-2011 ಸಾಲಿನಲ್ಲಿ ಡಾ.ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದರು. 2013ರಲ್ಲಿ ಪದ್ಮಭೂಷಣ ಡಾ. ಬಿ ಸರೋಜಾ ದೇವಿ ಪ್ರಶಸ್ತಿ ಪಡೆದುಕೊಂಡಿದ್ದರು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

`ಬೆಂಕಿಚೆಂಡಿ’ಗೆ ಸಿಕ್ಕಳು ಬೆಣ್ಣೆಯಂತಹ ಚೆಲುವೆ ! ಧ್ರುವ ‘ಮಾರ್ಟಿನ್’ ಹೀರೋಯಿನ್ ಇವ್ರೇ ನೋಡಿ !

ಗಂಧದಗುಡಿಯ ಬೆಂಕಿಚೆಂಡಿಗೆ ಬೆಣ್ಣೆಯಂತಹ ಚೆಲುವೆ ಸಿಕ್ಕಿದ್ದಾಳೆ. ಬಹದ್ದೂರ್ ಗಂಡಿನ ಬಗಲಲ್ಲಿ ನಿಲ್ಲೋದಕ್ಕೆ ಜಿಗಿಜಿಗಿದು ಬಂದಿರುವ ಆಕೆ, ‘Who is martin'ಎಂದು ಪ್ರಶ್ನೆ ಮಾಡಿ ಕೊನೆಗೆ ಆಕ್ಷನ್‌ಪ್ರಿನ್ಸ್ ಪಕ್ಕದಲ್ಲಿ ನಿಂತಿದ್ದಾಳೆ.ಹಾಗಾದ್ರೆ ಯಾರಾಕೆ? ಅದ್ದೂರಿ ಹುಡುಗನಿಗೆ ಜೊತೆಯಾಗುವ ಅವಕಾಶ ಸಿಕ್ಕಿದ್ದೇಗೆ? ‘ಮಾರ್ಟಿನ್’ ಮಹಾನಟಿಯ ಚರಿತ್ರ್ಯೆ ಏನು? ಈ ಕ್ಷಣ ನಿಮ್ಮ ಮುಂದೆ `ಮಾರ್ಟಿನ್ ಹೀರೋಯಿನ್ ಮ್ಯಾಟರ್’ ನೋಡ್‌ಬಿಡಿ

ಅದ್ದೂರಿ ಹುಡುಗನ ‘ಮಾರ್ಟಿನ್'ಚಿತ್ರಕ್ಕೆ ನಾಯಕಿ ಯಾರಾಗ್ತಾರೆ? ಇದೊಂದು ಪ್ರಶ್ನೆ ಇತ್ತೀಚೆಗೆ ಮಿಲಿಯನ್ ಡಾಲರ್ ಸ್ವರೂಪ ಪಡೆದಿತ್ತು.ಆಕ್ಷನ್‌ಪ್ರಿನ್ಸ್ ಗೆ ಜೊತೆಯಾಗುವ ಅದೃಷ್ಟ ಅದ್ಯಾವ ನಟಿಗೆ ಸಿಗುತ್ತೆ? ಅದ್ಯಾರನ್ನು ಚಿತ್ರತಂಡ ಹೀರೋಯಿನ್ನಾಗಿ ಆಯ್ಕೆಮಾಡಿಕೊಳ್ಳುತ್ತೆ? ಎನ್ನುವ ಕೂತೂಹಲ ಧ್ರುವ ಸರ್ಜಾರ ವಿಐಪಿಗಳನ್ನು ಹಾಗೂ ಗಾಂಧಿನಗರದ ಮಂದಿಯನ್ನು ಬಹುವಾಗಿ ಕಾಡಿತ್ತು. ಫೈನಲೀ,ವಿಐಪಿಗಳ ಕೌತುಕಕ್ಕೆ ತೆರೆಬಿದ್ದಿದೆ.ಮಾರ್ಟಿನ್’ ಚಿತ್ರಕ್ಕೆ ನಾಯಕಿ ಸೇರಿಕೊಂಡಿದ್ದು ಆಗಿದೆ.

ಹಾಗಾದ್ರೆ ಯಾರು ಆ ಚೆಲುವೆ? ಈ ಕೂತೂಹಲಕ್ಕೆ ಉತ್ತರ ನಟಿ ವೈಭವಿ ಶಾಂಡಿಲ್ಯ. ಮರಾಠಿ ಹಾಗೂ ತಮಿಳು ಚಿತ್ರಗಳಲ್ಲಿ ಗುರ್ತಿಸಿಕೊಂಡಿರುವ ಈ ನಟಿಗೆ ಇದು ಮೊದಲ ಕನ್ನಡ ಸಿನಿಮಾವೇನಲ್ಲ. ಈ ಹಿಂದೆ ಶರಣ್ ಹಾಗೂ ಚಿಕ್ಕಣ್ಣ ಜೊತೆ ‘ರಾಜ್-ವಿಷ್ಣು' ಹೆಸರಿನ ಸಿನಿಮಾ ಮಾಡಿದ್ದರು.ಅನಂತ್ರ ಭಟ್ರು ಗಣಿ ಜೊತೆ ಗಾಳಿಪಟ ಹಾರ‍್ಸೋಕೆ ಸೆಲೆಕ್ಟ್ ಮಾಡಿಕೊಂಡರು.ಈಗ ಎ.ಪಿ ಅರ್ಜುನ್ ಸಾಹೇಬ್ರು ‘ಮಾರ್ಟಿನ್’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಆಕ್ಷನ್‌ಪ್ರಿನ್ಸ್ ಗೆ ಜೋಡಿಯನ್ನಾಗಿಸಿ ಸಾಂಸ್ಕೃತಿಕ ನಗರಿಯಲ್ಲಿ ಶೂಟಿಂಗ್ ಕೂಡ ಶುರು ಹಚ್ಚಿಕೊಂಡಿದ್ದಾರೆ. ಸದ್ಯ, ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ, ಅಲ್ಲಿ ಧ್ರುವ ಸರ್ಜಾ ಹಾಗೂ ವೈಭವಿ ಕಾಂಬಿನೇಷನ್ ದೃಶ್ಯಗಳ ಶೂಟಿಂಗ್ ಭರದಿಂದ ಸಾಗಿದೆ.

ಕಳೆದ ಎರಡು ದಿನಗಳಿಂದ ಬಹದ್ದೂರ್ ಹುಡುಗ ಹಾಗೂ ನಟಿ ವೈಭವಿ ಜೊತೆಯಾಗಿ ಲುಕ್ ಕೊಟ್ಟಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ‘ಮಾರ್ಟಿನ್'ಚಿತ್ರದ ನಾಯಕಿ ಇವರೇ ಇರ‍್ಬೋದು ಎನ್ನುವ ಶಂಕೆ ಮೂಡಿತ್ತಾದರೂ ಕೂಡ ಫಿಲ್ಮ್ ಟೀಮ್ ಖಚಿತಪಡಿಸಿರಲಿಲ್ಲ.ಆದರೆ,ಧ್ರುವ ಬಾಸ್ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಶೂಟಿಂಗ್ ಸೆಟ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.ಇತ್ತ ‘ಮಾರ್ಟಿನ್’ ಅಂಗಳಕ್ಕೆ ಬಂದು ಸೇರಿಕೊಂಡಿರುವ ನಟಿ ವೈಭವಿ ಕೂಡ `Who is martin’ಎಂದು ಕೇಳುತ್ತಾ ಎಕ್ಸ್ ಪ್ರೆಷನ್ ಕೊಟ್ಟಿರುವ ವಿಡಿಯೋ ಝಲಕ್‌ನ ಹಂಚಿಕೊಂಡಿದ್ದಾರೆ. ಅಲ್ಲಿಗೆ, ಬಹದ್ದೂರ್ ಗಂಡಿಗೆ ಬೆಣ್ಣೆಯಂತಹ ಚೆಲುವೆ ಸಿಕ್ಕಹಾಗೇ ಅಲ್ಲವೇ.

ಮಾರ್ಟಿನ್'ಆಕ್ಷನ್‌ಪ್ರಿನ್ಸ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ.ಅದ್ದೂರಿ ಜೋಡಿ ಮತ್ತೆ ಒಂದಾಗಿರುವ ಕಾರಣಕ್ಕೆ ‘ಮಾರ್ಟಿನ್’ ಸಿನಿಮಾದ ಮೇಲಿರುವ ನಿರೀಕ್ಷೆ ಮುಗಿಲುಮುಟ್ಟಿದೆ. ನಟ ಧ್ರುವ ಸರ್ಜಾ-ನಿರ್ದೇಶಕ ಎ.ಪಿ ಅರ್ಜುನ್ ಕಾಂಬಿನೇಷನ್‌ನ `ಮಾರ್ಟಿನ್’ ಚಿತ್ರ ಹೊಸ ಮೇನಿಯಾ ಸೃಷ್ಟಿಸೋದ್ರಲ್ಲಿ ಡೌಟೇ ಇಲ್ಲ ಎನ್ನುವ ಮಾತು ಕೂಡ ಕೇಳಿರ‍್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣಗೊಳ್ತಿರೋ ಈ ಚಿತ್ರಕ್ಕೆ ಉದಯ್. ಕೆ.ಮೆಹ್ತಾ ಬಂಡವಾಳ ಹೂಡಿದ್ದಾರೆ. ಐದು ಭಾಷೆಯಲ್ಲಿ ಅದ್ದೂರಿಯಾಗಿಯೇ ಸಿನಿಮಾ ಬರಬೇಕು ಎಂದು ಅನ್ನದಾತರು ಕೋಟಿ ಕೋಟಿ ಹಣ ಹೂಡಿಕೆ ಮಾಡ್ತಿದ್ದಾರೆ. ಚಿತ್ರತಂಡ ಕೂಡ ಆದಷ್ಟು ಬೇಗ ಸಿನಿಮಾ ಮುಗಿಸಬೇಕು, ವರ್ಷದೊಳಗೆ ಸಿನಿಮಾ ರಿಲೀಸ್ ಮಾಡ್ಬೇಕು ಎನ್ನುವ ಉತ್ಸಾಹದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

`ಡಿಬಾಸ್’ ಅಂಗಳಕ್ಕೆ ಮತ್ತೊಂದು ಐಷರಾಮಿ ಕಾರು-`ಕಾಸ್ಟ್ಲೀ ಕಾರು’ ಗಳ `ಒಡೆಯ’ ದಾಸ ದರ್ಶನ್ !

ಸ್ಯಾಂಡಲ್‌ವುಡ್‌ನ ಯಜಮಾನ, ಬಾಕ್ಸ್ಆಫೀಸ್‌ನ ಸುಲ್ತಾನ ದರ್ಶನ್, ಐಷರಾಮಿ ಕಾರುಗಳಿಗೆ ಒಡೆಯನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರೋ ಸಂಗತಿ. ಚಾಲೆಂಜಿಂಗ್ ಸ್ಟಾರ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳಿವೆ. ಹತ್ತಾರು ಕಾರುಗಳಿಗೆ ಯಜಮಾನರಾಗಿರೋ ದರ್ಶನ್ ಇದೀಗ 90 ಲಕ್ಷ ಮೌಲ್ಯದ ದುಬಾರಿ ಕಾರನ್ನು ಖರೀದಿಸಿದ್ದಾರೆ. ನೆಚ್ಚಿನ ನಟನ ಹೊಸ ಕಾರನ್ನು ನೋಡಿ ಸಂತಸ ವ್ಯಕ್ತಪಡಿಸ್ತಿರೋ ಡಿಬಾಸ್ ಅಭಿಮಾನಿಗಳು, ಸೋಷಿಯಲ್ ಜಗತ್ತಿನಲ್ಲಿ ದಚ್ಚು ಕಾರಿನ ಪೋಟೋಗಳನ್ನು ಹಾಗೂ ವಿಡಿಯೋಗಳನ್ನು ವೈರಲ್ ಮಾಡ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕಾರುಗಳಂದ್ರೆ ಬಲು ಪ್ರೀತಿ. ಹೌದು, ಕಾರ್ ಕ್ರೇಜ್ ಹೊಂದಿರುವ ದಚ್ಚು, ವರ್ಷಕ್ಕೊಂದು ಕಾರು ಖರೀದಿ ಮಾಡಿಯೇ ತೀರುತ್ತಾರೆ. ಮಾರುಕಟ್ಟೆಗೆ ಹೊಸ ಮಾಡೆಲ್ ಕಾರು ಬಂದ್ರೆ ಸಾಕು, ಆ ಕಾರಿನ ಮೇಲೆ ಕಣ್ಣು ಬಿದ್ದರೆ ಸಾಕು ಡಿಬಾಸ್ ಅಂಗಳಕ್ಕೆ ಆ ಕಾರು ಬಂದು ನಿಂತಿರುತ್ತೆ. ಅದೇ ರೀತಿ, ಯಜಮಾನರ ಅಖಾಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಹೊಸ ಕಾರಿನ ಹೆಸರು ಟೊಯೋಟೋ ವೆಲ್‌ಫೈರ್. ಟೊಯೋಟೋ ಕಂಪೆನಿಯ ಈ ಕಾರು ಬರೋಬ್ಬರಿ 90 ಲಕ್ಷ ಬೆಲೆ ಬಾಳುತ್ತೆ.

ಅಚ್ಚರಿ ಅಂದರೆ ಇದಕ್ಕಿಂತ ದುಬಾರಿ ಬೆಲೆಯ ಕಾರುಗಳು ಚಕ್ರವರ್ತಿಯ ಅಂಗಳದಲ್ಲಿವೆ. ಹೌದು, ಸುಮಾರು ಐದು ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಉರುಸ್ ಗಾಡಿ ಸ್ಯಾಂಡಲ್‌ವುಡ್ ಸಾರಥಿಯನ್ನು ಸವಾರಿ ಮಾಡಿಸುತ್ತಿದೆ. ಹಳದಿ ಹಾಗೂ ಬಿಳಿ ಬಣ್ಣದ ಎರಡು ಲ್ಯಾಂಬೋರ್ಗಿನಿ, ರೇಂಜ್ ರೋವರ್, ಫೋರ್ಡ್ ಮುಸ್ಟಾಂಗ್, ಬಿ ಎಂ ಡಬ್ಲ್ಯೂ, ಹಮ್ಮರ್, ಆಡಿ ಕ್ಯೂ 7, ಜಾಗ್ವಾರ್, ಫಾರ್ಚುನರ್, ಮಿನಿಕೂಪರ್, ಬೆಂಜ್, ಐ 20 ಸೇರಿದಂತೆ ಹಲವು ಐಷರಾಮಿ ಕಾರುಗಳು ಒಡೆಯನ ಬಳಿಯಿವೆ. ಕೋಟ್ಯಾಂತರ ಮಂದಿ ಅಭಿಮಾನಿಗಳು ಆರಾಧಿಸುವ-ಅಭಿಮಾನಿಸುವ ಆರಾಧ್ಯದೈವ ದಾಸನನ್ನು ಕ್ಷೇಮವಾಗಿ-ಸುರಕ್ಷಿತವಾಗಿ ನೋಡಿಕೊಳ್ಳುತ್ತಿವೆ.

ಹೊಸ ಕಾರುಗಳನ್ನು ಪರ್ಚೈಸ್ ಮಾಡಿದಾಗ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರೋದು ವಾಡಿಕೆ. ಅದರಂತೇ, ಗೆಳೆಯರ ಜೊತೆ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ಸ್ನೇಹಿತರ ಜೊತೆ ರೈಡ್ ಹೋಗಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸದ್ಯ, ‘ಕ್ರಾಂತಿ'ಸಿನಿಮಾದಲ್ಲಿ ಡಿಬಾಸ್ ಬ್ಯುಸಿಯಾಗಿದ್ದಾರೆ.ಬೆಂಗಳೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.ವಿ ಹರಿಕೃಷ್ಣ ನಿರ್ದೇಶನ ಚಿತ್ರಕ್ಕಿದ್ದು,ಶೈಲಜಾ ನಾಗ್ ನಿರ್ಮಾಣದಲ್ಲಿ ‘ಕ್ರಾಂತಿ’ ಮೂಡಿಬರ‍್ತಿದೆ.

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಫೋಟೋಶೂಟ್ -ದಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ‘ರಾಕಿಂಗ್’ ಜೋಡಿ !

ರಾಕಿಂಗ್ ದಂಪತಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ದಬೂ ರತ್ನಾನಿ ಕ್ಯಾಮೆರಾಗೆ ರಾಕಿಭಾಯ್ ಮತ್ತು ರಾಧಿಕಾ ಪಂಡಿತ್ ಪೋಸ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ದಬೂ ರತ್ನಾನಿ ಜೊತೆಗಿದ್ದ ಯಶ್ ಪೋಟೋ ಸೋಷಿಯಲ್ ಲೋಕದಲ್ಲಿ ವೈರಲ್ ಆಗಿತ್ತು. ಇದೀಗ, ಯಶ್ ಮತ್ತು ರಾಧಿಕಾ ಇಬ್ಬರು ದಬೂ ರತ್ನಾಗಿ ಜೊತೆಗೆ ನಿಂತು ಕ್ಯಾಮೆರಾಗೆ ಲುಕ್ ಕೊಟ್ಟಿರುವ ಫೋಟೋ ರಿವೀಲ್ ಆಗಿದೆ. ಬಾಲಿವುಡ್‌ನ ಹೆಸರಾಂತ ಫೋಟೋಗ್ರಾಫರ್ ಬಳಿ ಫೋಟೋಶೂಟ್ ಮಾಡಿಸಿರುವುದರಿಂದ ಕೂತೂಹಲ ಇಮ್ಮಡಿಯಾಗಿದೆ.

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯ ಈ ಫೋಟೋಶೂಟ್ ಪರ್ಸನಲ್ ಫೋಟೋಗ್ರಫಿಯಾ? ಈ ಪ್ರಶ್ನೆಗೆ ಒಂದೇ ಮಾತಿನಲ್ಲಿ ಹೂಃ ಹೌದು ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಹಾಗಂತ ಅಲ್ಲ ಗಳೆಯೋದಕ್ಕೂ ಸಾಧ್ಯವಿಲ್ಲ. ಯಾಕಂದ್ರೆ, ದಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ತಾವು ಸೆರೆಯಾಗ್ಬೇಕು ಎನ್ನುವುದು ಅದೆಷ್ಟೋ ಮಂದಿಯ ಕನಸು. ಮಾಯಲೋಕದಲ್ಲಿ ಮಿಂಚ್ಬೇಕು ಎಂದುಕೊಂಡವರು ಮಾತ್ರವಲ್ಲ ಈಗಾಗಲೇ ಮಾಯಲೋಕದಲ್ಲಿ ಮೆರೆಯುತ್ತಿರುವವರು ಕೂಡ ದಬೂ ಕ್ಯಾಮೆರಾ ಕೈಚಳಕಕ್ಕೆ ಮನಸ್ಸು ಕೊಟ್ಟು ಕೂತುಬಿಡ್ತಾರೆ. ಪ್ರತಿವರ್ಷ ಜಗತ್ತಿನ ಮುಂದೆ ಅನಾವರಣಗೊಳ್ಳುವ ದಬೂ ಕ್ಯಾಲೆಂಡರ್‌ನಲ್ಲಿ ಲಕಲಕ ಹೊಳೆಯೋ ಲಕ್ ನಮಗೆ ಯಾವಾಗ ಕೂಡಿಬರುತ್ತೆ ದೇವಾ ಅಂತ ಎಷ್ಟೋ ಮಂದಿ ಆಕಾಶ ನೋಡ್ತಿದ್ದಾರೆ.

ದಬೂ ರತ್ನಾನಿ ಕ್ಯಾಲೆಂಡರ್ ಸಿಕ್ಕಾಪಟ್ಟೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಪಿಕ್ಚರ್‌ಗಳಿಂದ ಕೂಡಿರುತ್ತೆ. ನಾನಾ-ನೀನಾ ನೋಡೆಬಿಡೋಣ ಎನ್ನುವ ರೇಂಜ್ಗೆ ನಟರು ಲುಕ್ ಕೊಟ್ಟರೆ,
ಕ್ಯಾಮೆರಾ ಹೀಟಾಗುವಂತೆ ನಟಿಮಣಿಯರು ತಮ್ಮ ಸುಂದರ ದೇಹಸಿರಿಯನ್ನು ಎಕ್ಸ್ ಪೋಸ್ ಮಾಡ್ತಾರೆ. ದಬೂ ಕಲರ್‌ಫುಲ್ ಕಲ್ಪನೆಗೆ- ಯೂನಿಕ್ ಕಾನ್ಸೆಪ್ಟ್ನ ಫೋಟೋಗ್ರಫಿಗೆ ಬಾಲಿವುಡ್ ತಾರೆಯರು ಸಾಥ್ ಕೊಡ್ತಾರೆ. ಹೀಗಾಗಿಯೇ, ಔಟ್‌ಫುಟ್ ಚೆನ್ನಾಗಿ ಬರುತ್ತೆ ಹಾಲಿವುಡ್ ತಾರೆಯರು ಕೂಡ ಕಣ್ಣರಳಿಸಿ ನೋಡುವಂತಾಗುತ್ತದೆ.

ಇಂಟ್ರೆಸ್ಟಿಂಗ್ ಅಂದರೆ ದಬೂ ರತ್ನಾನಿಯವರ ಕ್ಯಾಲೆಂಡರ್ ಪೋಟೋಶೂಟ್, ಬಾಲಿವುಡ್ ಸಿನಿಮಾ ಫೋಟೋಶೂಟ್‌ನ ಕೂಡ ಮೀರಿಸುತ್ತೆ. ಇಂತಹ ಹೆಸರಾಂತ ಫೋಟೋಗ್ರಾಫರ್ ಬಳಿ ನಮ್ಮ ರಾಕಿಂಗ್ ಜೋಡಿ ಫೋಟೋಶೂಟ್ ಮಾಡಿಸಿಕೊಂಡಿದೆ ಅಂದರೆ, ಅದರ ಅರ್ಥ ದಬೂ `೨೦೨೨’ರ ಕ್ಯಾಲೆಂಡರ್‌ನಲ್ಲಿ ಯಶ್-ರಾಧಿಕಾ ಇರುತ್ತಾರೆ ಅಂತಾನಾ? ಅಥವಾ ಇಬ್ಬರು ಸೈಲೆಂಟಾಗಿ ಹೊಸ ಸಿನಿಮಾ ಏನಾದರೂ ಮಾಡ್ತಿದ್ದಾರೆ ಅಂತಾನಾ? ಇದ್ಯಾವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ.

ಅಂದ್ಹಾಗೇ, ರೀಲ್‌ನಲ್ಲಿ ಸಕ್ಸಸ್‌ಫುಲ್ ಜೋಡಿಯಾಗಿ ಮಿಂಚಿ ಮೆರೆದು, ರಿಯಲ್ ಲೈಫ್‌ನಲ್ಲಿ ಆದರ್ಶ ದಂಪತಿಗಳಾಗಿ ಬದುಕುತ್ತಿರುವ ರಾಕಿಂಗ್ ಜೋಡಿಯನ್ನು, ಸ್ಕ್ರೀನ್ ಮೇಲೆ ಒಟ್ಟಿಗೆ ನೋಡ್ಬೇಕು ಎನ್ನುವುದು ಸಾಕಷ್ಟು ಅಭಿಮಾನಿಗಳ ಕನಸು. ಫ್ಯಾನ್ಸ್ ಆಸೆ-ಕನಸಿಗೆ ಯಶ್-ರಾಧಿಕಾ ಜೀವತುಂಬಲಿಕ್ಕೆ ರೆಡಿ ಇದ್ದಾರೆ. ಒಳ್ಳೆ ಸ್ಕ್ರಿಪ್ಟ್ ಬಂದರೆ, ಆ ಸ್ಕ್ರಿಪ್ಟ್ ನಮ್ಮಿಬ್ಬರನ್ನು ಚೂಸ್ ಮಾಡಿದರೆ ಒಟ್ಟಿಗೆ ತೆರೆಮೇಲೆ ಬರುತ್ತೀವಿ ಎಂದು ಇಬ್ಬರು ಹೇಳಿಕೊಂಡಿದ್ದಾರೆ. ಬಹುಷಃ ಅಂತಹದ್ದೊಂದು ಸ್ಕ್ರಿಪ್ಟ್ ಅರಸಿ ಬಂದಿರಬಹುದು? ಬಂದಿಲ್ಲದೆಯೂ ಇರ‍್ಬೋದು? ಈ ಹಿಂದೆ ಫ್ರೀಡಂ ಅಡುಗೆ ಎಣ್ಣೆಗೆ ರಾಯಭಾರಿಗಳಾಗಿದಂತೆ ಮತ್ಯಾವುದೋ ಖಾಸಗಿ ಜಾಹೀರಾತಿಗೆ ಬ್ರ್ಯಾಂಡ್ ಅಂಬಾಸೀಡರ್ಸ್ ಆಗಿರಬಹುದು. ಒಟ್ನಲ್ಲಿ ಸೈಲೆಂಟಾಗಿ ದಬೂ ರತ್ನಾನಿ ಅವರ ಕ್ಯಾಮೆರಾಗೆ `ರಾಕಿಂಗ್ ಜೋಡಿ’ ಜೊತೆಯಾಗಿ ಪೋಸ್ ಕೊಟ್ಟಿರುವುದು ಹಲವು ಕೂತೂಹಲಕ್ಕೆ ಕಾರಣವಾಗಿದೆ. ಈ ಕೂತೂಹಲದ ಕೋಟೆಯ ರಹಸ್ಯಕ್ಕೆ ರಾಕಿಭಾಯ್ ಏನ್ ಹೇಳ್ತಾರೆ ಕಾದು ನೋಡೋಣ ಅಲ್ಲವೇ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಗೋಲ್ಡನ್ ಕ್ವೀನ್ ತಾಯಿಯಾಗ್ತಿದ್ದಾರೆ; ಮೊದಲ ಮಗುವಿನ ನಿರೀಕ್ಷೆಯಲ್ಲಿ ಅಮೂಲ್ಯ- ಜಗದೀಶ್ !

ಗೋಲ್ಡನ್ ಕ್ವೀನ್ ಅಮೂಲ್ಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ತಾಯಿಯಾಗ್ತಿರೋ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈಗ ನಾವಿಬ್ಬರಲ್ಲ ಮೂವರಾಗುತ್ತಿದ್ದೇವೆ ಅನ್ನೋದನ್ನು ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. 2022ರಲ್ಲಿ ಕಂದಮ್ಮನ ಆಗಮನವಾಗಲಿದ್ದು, ಚೊಚ್ಚಲ ಕಂದಮ್ಮನ ಬರುವಿಕೆಗಾಗಿ ಕುಟುಂಬ ಎದುರು ನೋಡ್ತಿದೆ.

ನಟಿ ಅಮೂಲ್ಯ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಫಾರಿನ್ ರಿಟರ್ನ್ ಜಗದೀಶ್ ರನ್ನು ವರಿಸಿದ್ದರು. ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್ ಕೈ ಹಿಡಿದ ಜಗದೀಶ್ ಅಮೂಲ್ಯರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಿದ್ದಾದೆ. ಜಗದೀಶ್ ಜೊತೆ ಸುಖ ಸಂಸಾರ ಸಾಗಿಸ್ತಿರೋ ಅಮ್ಮು ಮದುವೆ ಆದ್ಮೇಲೆ ಬಣ್ಣದ ಲೋಕದಿಂದ ದೂರ ಉಳಿದರು. ಇದೀಗ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Categories
ಸಿನಿ ಸುದ್ದಿ

‘ಆರ್‌ಆರ್‌ಆರ್’ ಟ್ರೈಲರ್ ಬಿಡುಗಡೆ ಮುಂದೂಡಿಕೆ – `ದೋಸ್ತಿ’ ಚಿತ್ರ ಸಾಹಿತಿ ಅಗಲಿಕೆಯ ನೋವಲ್ಲಿ ಚಿತ್ರತಂಡ !

ಆರ್‌ಆರ್‌ಆರ್ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿತ್ತು. ಡಿಸೆಂಬರ್ ೦೩ರಂದು ಕನ್ನಡ-ತೆಲುಗು-ತಮಿಳು-ಮಲೆಯಾಳಂ ಹಾಗೂ ಹಿಂದಿಯಲ್ಲಿ ಒಟ್ಟಿಗೆ ಟ್ರೈಲರ್ ರಿಲೀಸ್ ಮಾಡೋದಾಗಿ ಫಿಲ್ಮ್ ಟೀಮ್ ಮಾಹಿತಿ ಹಂಚಿಕೊಂಡಿತ್ತು. ನಿರ್ದೇಶಕ ರಾಜಮೌಳಿ ಸೇರಿದಂತೆ ಇಡೀ ಸಿನಿಮಾ ತಂಡ ಟ್ರೈಲರ್ ಬಿಡುಗಡೆಯ ಸುದ್ದಿಯನ್ನು ತಿಳಿಸಿದ್ದೇ ತಡ ಚಿತ್ರಪ್ರೇಮಿಗಳು ಕೂತೂಹಲ ಹೊರಗಾಕಿದ್ದರು. ಥ್ರಿಬಲ್ ಆರ್ ಟ್ರೈಲರ್ ವೀಕ್ಷಣೆಗೆ ಕೌಂಟ್‌ಡೌನ್ ಶುರುಹಚ್ಚಿಕೊಂಡಿದ್ದರು. ಈ ಮಧ್ಯೆ ಆರ್‌ಆರ್‌ಆರ್ ತಂಡ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದೆ. ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಇದಕ್ಕೆ ಕಾರಣ ಅನಿರೀಕ್ಷಿತ ಬೆಳವಣಿಗೆಗಳು ಎನ್ನಲಾಗ್ತಿದೆ.

ಥ್ರಿಬಲ್ ಆರ್ ಇಡೀ ಜಗತ್ತು ಜಾತಕ ಪಕ್ಷಿಯಂತೆ ಕಾದು ಕುಳಿತಿರೋ ಸಿನಿಮಾ. ಜಕ್ಕಣ್ಣ ಕಲ್ಪನೆಯಲ್ಲಿ ಅರಳಿ ಬೆಳ್ಳಿತೆರೆಗೆ ಕಿಚ್ಚು ಹಚ್ಚಲು ಬರುತ್ತಿರುವ ‘ಆರ್‌ಆರ್‌ಆರ್'ಚಿತ್ರವನ್ನು ಕಣ್ತುಂಬಿಕೊಳ್ಳೋದಕ್ಕೆ ಕೂತೂಹಲಭರಿತರಾಗಿದ್ದಾರೆ.ಇತ್ತ ಚಿತ್ರತಂಡ ಸೂಪ್ ರೂಪದಲ್ಲಿ ಟೀಸರ್ ಬಿಟ್ಟು,ಸಲಾಡ್ ರೂಪದಲ್ಲಿ ಸಾಂಗ್ಸ್ ತೋರಿಸಿದ್ದರಿಂದ ಟ್ರೈಲರ್,ವೆಜ್ ರೂಪದಲ್ಲಿ ಬರುತ್ತಾ ಅಥವಾ ನಾನ್‌ವೆಜ್ ರೂಪದಲ್ಲಿ ನಿರೀಕ್ಷೆಯ ಬಾಳೆದೆಲೆಗೆ ಬೀಳುತ್ತಾ ಅಂತ ಕ್ಯಾಲುಕೇಷನ್ ಮಾಡ್ತಿದ್ದರು.ಇದೇ ಹೊತ್ತಿಗೆ ಚಿತ್ರತಂಡ ಟ್ರೈಲರ್ ರಿಲೀಸ್ ಡೇಟ್‌ನ ಅನೌನ್ಸ್ ಮಾಡಿತ್ತು.ಡಿಸೆಂಬರ್ ೦೩ರಂದು ಐದು ಭಾಷೆಗಳಲ್ಲೂ ‘ಆರ್‌ಆರ್‌ಆರ್’ ಟ್ರೈಲರ್ ಬಿಡುಗಡೆ ಮಾಡೋದಾಗಿ ತಿಳಿಸಿದ್ದರು. ಇದಾಗಿ ೨೪ ಗಂಟೆ ಕಳೆಯೋದ್ರೊಳಗೆ ಟ್ರೈಲರ್ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಇದಕ್ಕೆ ಕಾರಣ ತೆಲುಗು ಚಿತ್ರರಂಗದ ಖ್ಯಾತ ಗೀತ ರಚನೆಕಾರರಾದ ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರ ಅಗಲಿಕೆ ರ‍್ಬೋದು. ಅಂದ್ಹಾಗೇ, ಇವರು ‘ಆರ್‌ಆರ್‌ಆರ್' ಚಿತ್ರದ ‘ದೋಸ್ತಿ’ ಹಾಡಿಗೆ ಸಾಹಿತ್ಯ ಬರೆದು ಕೊಟ್ಟಿದ್ದರು.

ಹೌದು, ತೆಲುಗು ಚಿತ್ರರಂಗದ ಖ್ಯಾತ ರಚನೆಕಾರರಾದ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರು ವಿಧಿವಶರಾಗಿದ್ದಾರೆ. ೬೬ ವರ್ಷ ವಯಸ್ಸಾಗಿತ್ತು, ಕಾನ್ಸರ್‌ನಿಂದ ಬಳಲುತ್ತಿದ್ದು ಹೈದ್ರಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನವೆಂಬರ್ ೩೦ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸೀತಾರಾಮ ಶಾಸ್ತ್ರಿಯವರ ಅಗಲಿಕೆಗೆ ಇಡೀ ಟಾಲಿವುಡ್ ಕಂಬನಿ ಮಿಡಿದಿದೆ. ತೆಲುಗು ಸಿನಿಮಾ ರಂಗಕ್ಕೆ ಇವರ ಕೊಡುಗೆ ಅಪಾರ. ೮೦೦ಕ್ಕೂ ಹೆಚ್ಚು ಸಿನಿಮಾಗಳು, ೩೦೦೦ಕ್ಕೂ ಹೆಚ್ಚು ಹಾಡುಗಳನ್ನು ಕಟ್ಟಿಕೊಟ್ಟಿದ್ದ ಸೀತಾರಾಮ ಶಾಸ್ತ್ರಿಯವರು ತೆಲುಗು ಸಿನಿಮಾ ಸಾಹಿತ್ಯಕ್ಕೆ ರಥಚಕ್ರವೇ ಆಗಿದ್ದರು ಅಂತ ಟಾಲಿವುಡ್‌ನ ಸೂಪರ್‌ಸ್ಟಾರ್‌ಗಳು-ನಿರ್ದೇಶಕರು-ನಿರ್ಮಾಪಕರು ಕಣ್ಣೀರಾಗುತ್ತಿದ್ದಾರೆ. ಖ್ಯಾತ ಕೊರಿಯೋಗ್ರಾಫರ್, ಹಿರಿಯ ನಟ ಶಿವಶಂಕರ್ ಮಾಸ್ಟರ್ ನಿಧನದ ಬೆನ್ನಲ್ಲೇ ಸೀತಾರಾಮ ಶಾಸ್ತ್ರಿಯವರ ಅಗಲಿಕೆ ಟಾಲಿವುಡ್‌ಗೆ ಆಘಾತ ತಂದೊಡ್ಡಿದೆ.

ಮೇಲೆ ಹೇಳಿದ ಹಾಗೇ ‘ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ'ಯವರು ‘ಥ್ರಿಬಲ್ ಆರ್’ ಚಿತ್ರದ ‘ದೋಸ್ತಿ'ಹಾಡಿಗೆ ಮುತ್ತಿನಂತೆ ಪದಗಳನ್ನು ಪೋಣಿಸಿಕೊಟ್ಟಿದ್ದರು. ಈಗಾಗಲೇ ಬಿಡುಗಡೆಯಾಗಿರುವ ದೋಸ್ತಿ ಹಾಡು ‘ಆರ್‌ಆರ್‌ಆರ್’ ಮೇಲಿನ ನಿರೀಕ್ಷೆಯನ್ನು ಒಂದು ತೂಕ ಜಾಸ್ತಿ ಮಾಡಿದೆ. ಎಂ.ಎಂ. ಕೀರವಾಣಿ ಸಂಗೀತದಲ್ಲಿ-ಸೆಂಥಿಲ್ ಕ್ಯಾಮೆರಾ ಕಣ್ಣಲ್ಲಿ ಧಗಧಗಿಸ್ತಿರೋ ಹಾಡು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದೆ. ಚಿತ್ರದ ಮೇಲೆ ಕ್ರೇಜ್ ಹೆಚ್ಚಾಗಲಿಕ್ಕೆ ಸೀತಾರಾಮ ಶಾಸ್ತ್ರಿಯವರು ಬರೆದುಕೊಟ್ಟಿರುವ ಸಾಲುಗಳು ಕೂಡ ಕಾರಣವಾಗಿರುವಾಗಿವೆ. ಈಗ ಅವರನ್ನು ಕಳೆದುಕೊಂಡು ದುಃಖದಲ್ಲಿರುವಾಗ ಟ್ರೈಲರ್ ಬಿಡುಗಡೆ ಮಾಡಿ ಸಂಭ್ರಮಿಸೋದು ಹೇಗೆ ಎನ್ನುವ ಕಾರಣಕ್ಕೆ ಚಿತ್ರತಂಡ ಟ್ರೈಲರ್ ಬಿಡುಗಡೆಯನ್ನು ಕ್ಯಾನ್ಸಲ್ ಮಾಡಿದೆ. ಅತೀ ಶೀಘ್ರದಲ್ಲೇ ಹೊಸ ಡೇಟ್‌ನ ಅನೌನ್ಸ್ ಕೂಡ ಮಾಡೋದಾಗಿ ಮಾಹಿತಿ ಹಂಚಿಕೊಂಡಿದೆ.

ಆರ್‌ಆರ್‌ಆರ್'ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕಥೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇತಿಹಾಸದ ಪುಟಗಳನ್ನು ತಿರುಚಿ ನೋಡಿ ಅಲ್ಲೂರಿ ಸೀತರಾಮರಾಜು ಹಾಗೂ ಕೊಮರಾಮ್ ಭೀಮ್ ಕಥೆಯನ್ನು ತಿಳಿದುಕೊಂಡಿರಬಹುದು.ಆದರೆ,ಜಕ್ಕಣ್ಣ ಕೆತ್ತಿರುವ ಕಥೆ ಹೇಗಿರಬಹುದು ಎನ್ನುವುದೇ ಇಡೀ ಸಿನಿಮಾ ಜಗತ್ತಿಗಿರುವ ಕೂತೂಹಲ.ಇಲ್ಲಿವರೆಗೂ ರಿಲೀಸ್ ಆಗಿರುವ ಚಿತ್ರದ ಒಂದೊಂದು ಪೋಸ್ಟರ್ ಕೂಡ ಒಂದೊಂದು ತೂಕವನ್ನು ಹೊತ್ತಿದೆ.ಟೀಸರ್-ಮೇಕಿಂಗ್-ಸಾಂಗ್ಸ್ ಗಳು ಪ್ರೇಕ್ಷಕಮಹಾಷಯರಿಗೆ ಹೈದ್ರಬಾದ್ ಬಿರಿಯಾನಿ ಫಿಕ್ಸು ಎನ್ನುತ್ತಿವೆ.

ಇನ್ನೇನಿದ್ರು ಟ್ರೈಲರ್ ರಿಲೀಸ್ ಆಗ್ಬೇಕು 'ಸೌತ್ ಟು ನಾರ್ತ್' ಸ್ಟಾರ್‌ಗಳನ್ನು ಹೊತ್ಕೊಂಡು ಬರುತ್ತಿರುವ ‘ಆರ್‌ಆರ್‌ಆರ್’ ಸ್ವಾಗತಿಸೋಕೆ ಪ್ರೇಕ್ಷಕ ಮಹಾಷಯರು ಸಜ್ಜಾಗಬೇಕು. ಅಂದ್ಹಾಗೇ, ಜನವರಿ ೦೭ರಂದು ಸಿನಿಮಾ ತೆರೆಗೆ ತರಲು ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದೆ. ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್ ತೇಜಾ, ಅಜಯ್ ದೇವ್‌ಗಾನ್, ಆಲಿಯಾ ಭಟ್ ಸೇರಿದಂತೆ ಹಾಲಿವುಡ್ ಸ್ಟಾರ್‌ಗಳು ಚಿತ್ರದಲ್ಲಿದ್ದಾರೆ. ಡಿ.ವಿ.ವಿ ದಾನಯ್ಯ ನಿರ್ಮಾಣದಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ಕನ್ನಡದಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ ವಿತರಣೆ ಮಾಡ್ತಿದೆ. ಏಕಕಾಲಕ್ಕೆ ಐದು ಭಾಷೆಗಳಲ್ಲೂ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮಗನಿಗೆ ಕೇಶಮುಂಡನ ಮಾಡಿಸಿದರು ಮೇಘನಾ ರಾಜ್-ಬಾಲ್ಡೆಡ್ ಲುಕ್‌ನಲ್ಲಿ ರಾಯನ್ ರಾಜ್ ಸರ್ಜಾ ಪೋಸ್ !

ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ತಮ್ಮ ಮುದ್ದು ಮಗನ ತಲೆ ಕೂದಲು ತೆಗೆಸಿದ್ದಾರೆ. ಇತ್ತಿಚೆಗಷ್ಟೇ ಅದ್ದೂರಿಯಾಗಿ ನಾಮಕರಣ ಮಾಡಿ ತನ್ನ ಕಂದನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದ ಮೇಘನಾ ರಾಜ್ ಇದೀಗ ಶಾಸ್ತ್ರದ ಪ್ರಕಾರ ಮಗನಿಗೆ ಕೇಶಮುಂಡನ ಮಾಡಿಸಿದ್ದಾರೆ. ಎಲ್ಲಿ? ಯಾವಾಗ? ಮಗನ ತಲೆ ಕೂದಲು ತೆಗೆಸುವ ಶಾಸ್ತ್ರವನ್ನು ಮಾಡಿದರು ಅನ್ನೋದನ್ನು ಡಿಸ್‌ಕ್ಲೋಸ್ ಮಾಡಿಲ್ಲ. ಆದರೆ, ಚಿರು ಫೋಟೋ ಮುಂದೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. `ನಮ್ಮ ಮನೆಯ ಮೊಟ್ಟೆ ಬಾಸ್’ ಎಂದು ಟ್ಯಾಗ್‌ಲೈನ್ ಕೊಟ್ಟು, ಕೇಶ ಮುಂಡನದ ನಂತರ ರಾಯನ್ ರಾಜ್ ಸರ್ಜಾ ಕೊಟ್ಟಿರುವ ಎಕ್ಸ್ ಪ್ರೆಷನ್ಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಡೆಡ್ ಲುಕ್ ನಲ್ಲಿ ಜೂನಿಯರ್ ಸಿಂಬನ ನೋಡಿದ ಅಭಿಮಾನಿಗಳು ದೃಷ್ಟಿ ತೆಗೆಯುತ್ತಿದ್ದಾರೆ.

ರಾಯನ್ ರಾಜ್ ಸರ್ಜಾನ ರಾಯಲ್ಲಾಗಿ ಬೆಳೆಸ್ಬೇಕು ಎನ್ನುವುದು ನಟಿ ಮೇಘನಾ ಕನಸು.ಮಗ ಬೆಳೆದು ದೊಡ್ಡವನಾದ್ಮೇಲೆ ನನ್ನ ಬಗ್ಗೆ ಹೆಮ್ಮೆ ಪಡಬೇಕು ಎನ್ನುವ ಆಸೆ ಮೇಘನಾಗಿದೆ.ಹೀಗಾಗಿಯೇ ಅಪ್ಪ ಮತ್ತು ಅಮ್ಮನ ಪ್ರೀತಿಯನ್ನು ಮೇಘನಾ ಒಬ್ಬರೇ ತುಂಬುತ್ತಿದ್ದಾರೆ.ತಂದೆಯಿಲ್ಲ ಎನ್ನುವ ಕೊರಗು ಕಾಡದಂತೆ ತಂದೆ-ತಾಯಿ ಇಬ್ಬರ ಪ್ರೀತಿಯನ್ನು ಕೊಡುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ‘ಚಿರು ನನ್ನ ಪಾಲಿನ ರಾಜನಾದರೆ, ನನ್ನ ಮಗ ರಾಯನ್ ನನ್ನ ಪಾಲಿಗೆ ಯುವರಾಜ’. ಯುವಸಾಮ್ರಾಟ ಚಿರಂಜೀವಿಯ ಅಗಲಿಕೆಯಿಂದ ಕತ್ತಲೆ ತುಂಬಿದ್ದ ಎರಡು ಕುಟುಂಬದಲ್ಲೂ ಬೆಳಕು ಮೂಡಿದ್ದೇ ರಾಯನ್ ಬಂದ್ಮೇಲೆ. ಹೀಗಾಗಿ, ರಾಯನ್ ರಾಜ್ ಸರ್ಜಾ ಮೇಲೆ ಎರಡು ಕುಟುಂಬಕ್ಕೂ ಅಘಾದವಾದ ಪ್ರೀತಿಯಿದೆ ಮತ್ತು ಹೆಮ್ಮೆಯಿದೆ. ದೀಪದಂತೆ ಕಾಪಾಡಿಕೊಳ್ಳಬೇಕು ಮತ್ತು ಮುಗಿಲೆತ್ತರಕ್ಕೆ ಬೆಳೆಸಬೇಕು ಎನ್ನುವ ಕನಸು ಹೆಮ್ಮರವಾಗಿ ಬೆಳೆದಿದೆ.

ದಿನೇ ದಿನೇ ರಾಯನ್ ಬೆಳೆದು ದೊಡ್ಡವನಾಗ್ತಿದ್ದಾನೆ. ಇಷ್ಟು ದಿನ ರಾಯನ್ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದ ಮೇಘನಾ ಈಗ ಬದುಕು ಕಟ್ಟಿಕೊಟ್ಟ ಸಿನಿಮಾ ಕಾಯಕದೆಡೆಗೆ ತಮ್ಮನ್ನು ತಾವು ತೊಡಗಿಸಿಕೊಳ್ತಿದ್ದಾರೆ. ಚಿರು ಗೆಳೆಯ ಪನ್ನಗಾಭರಣ ನಿರ್ಮಾಣ ಮಾಡ್ತಿರುವ ಚಿತ್ರದಲ್ಲಿ ನಟಿ ಮೇಘನಾ ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಯುವಸಾಮ್ರಾಟ್ ಚಿರುಗೆ ಡೈರೆಕ್ಟ್ ಮಾಡ್ಬೇಕು ಎನ್ನುವುದು ಪನ್ನಗಾಭರಣ ಕನಸಾಗಿತ್ತು. ಚಿರು ಹಾಗೂ ಪ್ರಜ್ವಲ್ ದೇವರಾಜ್ ಕಾಂಬಿನೇಷನ್‌ನಲ್ಲಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡ್ಬೇಕು ಎಂದುಕೊಂಡಿದ್ದರು.

ದುರದೃಷ್ಟವಶಾತ್ ಚಿರಂಜೀವಿಯನ್ನು ಆ ವಿಧಿ ಹೊತ್ತೊಯ್ದರಿಂದ ಸಿನಿಮಾ ಹಾಳಾಗಿ ಹೋಗಲಿ ಗೆಳೆಯನನ್ನು ಕಳೆದುಕೊಂಡು ಬದುಕೇ ಕತ್ತಲು ಎನ್ನುವಂತಾಯ್ತು. ಅಲ್ಲಿಂದ ಬಹುದೂರ ಸಾಗಿ ಬಂದು ವಾಯುಪುತ್ರನ ಆಶೀರ್ವಾದದೊಂದಿಗೆ ನಟಿ ಮೇಘನಾಗೆ ಸಿನಿಮಾ ಮಾಡುತ್ತಿದ್ದಾರೆ. ಯುವಪ್ರತಿಭೆ ವಿಶಾಲ್ ಆಕ್ಷನ್ ಕಟ್ ಹೇಳ್ತಿದ್ದಾರೆ, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಪಿ,ಬಿ ಸ್ಟುಡಿಯೋಸ್ ಲಾಂಛನದಲ್ಲಿ ತಯ್ಯಾರಾಗ್ತಿರೋ ಈ ಸಿನಿಮಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕನ್ನಡತಿ ಪೂಜಾ ಹೆಗ್ಡೆ ಕಾಲಿಡಿದರೇಕೆ ಡಾರ್ಲಿಂಗ್ ಪ್ರಭಾಸ್ ?`ಸ್ವೀಟಿ’ ಡೋಂಟ್ ವರೀ ಎಂದ್ರು ಫ್ಯಾನ್ಸ್ !

ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿರುವ ಡಾರ್ಲಿಂಗ್ ಪ್ರಭಾಸ್ ಕನ್ನಡತಿ ಪೂಜಾಹೆಗ್ಡೆ ಕಾಲಿಡಿದರು ಅಂತೇಳಿದರೆ ಯಾರಾದ್ರೂ ನಂಬೋ ಮಾತ? ನೋ ವೇ ಚಾನ್ಸ್ ಇಲ್ಲ ಎನ್ನುವ ರೆಬೆಲ್ ಡೈಲಾಗ್ ಪ್ರಭಾಸ್ ಫ್ಯಾನ್ಸ್ ಬಾಯಿಂದ ಬಂದೇಬಿಡುತ್ತೆ. ಇತ್ತ ಅನುಷ್ಕಾ ಫ್ಯಾನ್ಸ್ ಬಾಯಲ್ಲೂ ಇದೇ ಮಾತು ಕುಣಿದು ಕುಪ್ಪಳಿಸುತ್ತೆ. ಹಾಗಾದ್ರೆ, ಮತ್ಯಾಕ್ ತಡ ಮಿರ್ಚಿ ಹುಡುಗ ಕನ್ನಡತಿಯ ಕಾಲಿಡಿದಿದ್ದು ನಿಜನಾ ಅಥವಾ ಸುಳ್ಳಾ ನೋಡಿಕೊಂಡು ಬರೋಣ ಬನ್ನಿ

ಟಾಲಿವುಡ್ ರೆಬೆಲ್‌ಸ್ಟಾರ್ ಡಾರ್ಲಿಂಗ್ ಪ್ರಭಾಸ್ ನಿಜ ಜೀವನದಲ್ಲಿ ಅದ್ಯಾರನ್ನ ಕೈಹಿಡಿಯುತ್ತಾರೋ, ಅದ್ಯಾರ ಕೊರಳಿಗೆ ಮೂರು ಗಂಟು ಬೆಸೆಯುತ್ತಾರೋ, ಕಾಲುಂಗರ ತೊಡಿಸೋಕೆ ಅದ್ಯಾರ ಕಾಲ್ಬೆರಳನ್ನು ಹಿಡಿಯುತ್ತಾರೋ, ಅದ್ಯಾರ ಜೊತೆಗೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯುತ್ತಾರೋ, ಅದ್ಯಾರನ್ನು ಹೆಂಡ್ತಿಯನ್ನಾಗಿ ಸ್ವೀಕರಿಸಿ ದಿಬ್ಬಣ ಹೊರಡುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ, ‘ರಾಧೆ ಶ್ಯಾಮ್'ಚಿತ್ರದ ಕ್ಲ್ಯಾಸಿಕಲ್ ರೊಮ್ಯಾಂಟಿಕ್ ಟ್ರ್ಯಾಕ್ ವೊಂದರಲ್ಲಿ ಕನ್ನಡತಿ ಪೂಜೆ ಹೆಗ್ಡೆ ಕಾಲಿನ ಮೇಲೆ ಚಿತ್ತಾರ ಬಿಡಿಸಿ ‘ಆಶಿಕಿ ಆ ಗಯಿ’ ಎಂದು ಹಾಡುತ್ತಾ ಮೆರವಣಿಗೆ ಹೊರಟಿದ್ದಾರೆ. ಇದನ್ನು ನೋಡಿದ ಅನುಷ್ಕಾ ಅಭಿಮಾನಿಗಳು ಡೋಂಟ್ ವರೀ ಅಕ್ಕ, `ನಿನ್ನ ಕಾಲ್ಬೆರಳಿಗೆ ಪ್ರಭಾಸ್ ಅಣ್ಣ ನೈಲ್ ಪಾಲಿಶ್ ಹಚ್ಚಿದ್ದರು. ಆದರೆ, ಆ ಪೂಜಾ ಹೆಗ್ಡೆ ಕಾಲನ್ನು ಕೈಬೆರಳುಗಳಿಂದ ಜಸ್ಟ್ ಟಚ್ ಮಾಡಿದ್ದಾರೆ ಅಷ್ಟೇ ಎನ್ನುತ್ತಿದ್ದಾರಂತೆ.

ಮಿರ್ಚಿ'ಸಿನಿಮಾದಲ್ಲಿ ಪ್ರಭಾಸ್, ಅನುಷ್ಕಾ ಪಾದಗಳನ್ನು ತನ್ನ ಅಂಗೈ ಮೇಲೆ ಇರಿಸಿಕೊಂಡು ಸ್ವೀಟಿ ಕಾಲ್ಬೆರಳಿಗೆ ನೈಲ್ ಪಾಲಿಶ್ ಹಚ್ಚಿದ್ದರು.ಇದೊಂದು ಸೀನ್ ಹೆಣೈಕ್ಳ ಹೃದಯವನ್ನು ಚೆಲ್ಲಾಪಿಲ್ಲಿ ಮಾಡಿತ್ತು.ಸಿಕ್ಕರೆ ಡಾರ್ಲಿಂಗ್ ಥರ ಹುಡುಗ ಸಿಗ್ಬೇಕು ಅಂತ ಹೆಣೈಕ್ಳು ಬಯಸಿದರೆ,ದಕ್ಕಿದರೆ ಸ್ವೀಟಿಯಂತಹ ಸುಂದರಿ ದಕ್ಕಬೇಕು ಎಂದು ಹುಡುಗರು ಬಯಸಿದ್ದರು.‘ಇದೇದೋ ಬಾಗುಂದೆ ಸರೀ’ ಹಾಡಂತೂ ಹುಡುಗ-ಹುಡುಗಿಯರ ತಲೆ ಕೆಡಿಸಿತ್ತು.

ಬೆಳ್ಳಿಪರದೆ ಇವರಿಬ್ಬರಿಗೆ ದೃಷ್ಟಿ ತೆಗೆದಿತ್ತು. ಅಷ್ಟರ ಮಟ್ಟಿಗೆ ಇವರಿಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ರೊಮ್ಯಾಂಟಿಕ್ ಜೋಡಿಯಾಗಿ ಬಿಗ್‌ಸ್ಕ್ರೀನ್‌ಗೆ ಕಿಚ್ಚು ಹಚ್ಚಿದ್ದ ಈ ಜೋಡಿ ರೀಲ್‌ನಲ್ಲಿ ಮಾತ್ರವಲ್ಲ ರಿಯಲ್‌ನಲ್ಲೂ ಒಂದಾಗ್ಬೇಕು ಅಂತ ಇವರಿಬ್ಬರ ಫ್ಯಾನ್ಸ್ ಅಂದೇ ಷರಾ ಬರೆದಿದ್ದರು. ಆದ್ರೆ ಏನ್ಮಾಡೋದು ಶುಭಮುಹೂರ್ತ ಇನ್ನೂ ಕೂಡಿಬಂದಿಲ್ಲ. ನಮ್ಮಿಬ್ಬರ ನಡುವೆ ಪ್ರೀತಿ ಚಿಗುರಿದೆ ಮದುವೆಯಾಗುವ ಮನಸ್ಸಾಗಿದೆ ಅಂತ ಅವರಿಬ್ಬರು ಹೇಳಿಕೊಂಡಿಲ್ಲ.

ಅಂದ್ಹಾಗೇ, ಡಾರ್ಲಿಂಗ್ ಪ್ರಭಾಸ್ ಬೇರೆ ಹೀರೋಯಿನ್ಸ್ ಜೊತೆ ರೊಮ್ಯಾನ್ಸ್ ಮಾಡಿದ್ದನ್ನು ನೋಡಿದಾಗ ಬೊಮ್ಮಾಲಿಗೆ ಬೇಜಾರಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ವೀಟಿ ಫ್ಯಾನ್ಸ್ಗೆ ಮಾತ್ರ ಕರುಳು ಕಿತ್ತುಬಂದ್ಹಾಗೇ ಆಗುತ್ತಂತೆ. ಹೀಗಾಗಿಯೇ ಅನುಷ್ಕಾ ಫ್ಯಾನ್ಸ್ ಸೋಷಿಯಲ್ ಸಮುದ್ರದಲ್ಲಿ ಆಗಾಗ ಯುದ್ದ ಮಾಡ್ತಾರೆ. ಅಕ್ಕನ ಪರವಾಗಿ ಬ್ಯಾಟಿಂಗ್ ಮಾಡುತ್ತಾ, ಪ್ರಭಾಸ್ ಅಣ್ಣ ಯಾವತ್ತಿದ್ರೂ ಅನುಷ್ಕಾ ಅಕ್ಕನ ಡಾರ್ಲಿಂಗ್ ಅಂತೇಳ್ತಿರುತ್ತಾರೆ. ಇದೀಗ, ‘ರಾಧೆಶ್ಯಾಮ'ಚಿತ್ರದ ಹಾಡಿನಲ್ಲಿ ಪ್ರಭಾಸ್ ಹಾಗೂ ಪೂಜಾ ಕೆಮಿಸ್ಟ್ರಿಯ ಝಲಕ್ ನೋಡಿರುವ ಅನುಷ್ಕಾ ಅಭಿಮಾನಿಗಳು,ಅಕ್ಕಾ ಡೋಂಟ್ ವರೀ ನಿನ್ನ-ಅಣ್ಣನ ಕೆಮಿಸ್ಟ್ರಿನಾ ಯಾರು ಮ್ಯಾಚ್ ಮಾಡೋದಕ್ಕೆ ಆಗಲ್ಲ.ಅಷ್ಟೇ ಯಾಕೇ ಕ್ರಾಸ್ ಮಾಡೋದಕ್ಕೂ ಆಗಲ್ಲ ಎನ್ನುತ್ತಿದ್ದಾರಂತೆ. ಅಪ್‌ಕೋರ್ಸ್ ರೊಮ್ಯಾಂಟಿಕ್ ಜೋಡಿಗೆ ಬ್ರಾಂಡ್ ಅಂಬಾಸೀಡರ್ ಥರ ಇರುವ ‘ಮಿರ್ಚಿ’ ಜೋಡಿನಾ ಯಾರೂ ಮ್ಯಾಚ್ ಮಾಡೋದಕ್ಕೆ ಆಗಲ್ಲ.

ಹಾಗಂತ, ಡಾರ್ಲಿಂಗ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಂಬೋ ಕಿಕ್ ಕೊಡಲ್ಲ ಅಂತೇನಿಲ್ಲ. ಸದ್ಯ ರಿಲೀಸ್ ಆಗಿರುವ ‘ಆಶಿಕಿ ಆ ಗಯಿ'ಸಾಂಗ್ ಟೀರ‍್ರೇ ಸೌತ್‌ನಿಂದ-ನಾರ್ತ್ ವರೆಗೂ ಸದ್ದು ಮಾಡುತ್ತಿದೆ.ಮಿಥುನ್ ಲಿರಿಕ್ಸ್ ಬರೆದು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ,ಅರ್ಜಿತ್ ಸಿಂಗ್ ಕಂಠ ಕುಣಿಸಿದ್ದಾರೆ.ಇದೊಂದು ಲವ್ ಆ್ಯಂಥಮ್ ಸಾಂಗ್ ಆಗಿದ್ದು ಡಿಸೆಂಬರ್ ೦೧ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗ್ತಿದೆ.

ಒನ್ ಹಾರ್ಟ್...ಟು ಹಾರ್ಟ್ ಬೀಟ್ಸ್ ಪ್ರೇಮಕಥೆ ಹಾಡಿನ ಮೂಲಕ ನಾಳೆ ಅರಳಲಿದೆ.ಈಗಾಗಲೇ ಬಿಡುಗಡೆಯಾಗಿರುವ `ಯಾರೋ ಇರ‍್ಯಾರೋ ಕನವರಿಸೋ ಪ್ರೇಮಿಗಳಾ’ ಹಾಡಿಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಜಸ್ಟಿನ್ ಪ್ರಭಾಕರನ್ ಸಂಗೀತ, ಶುರುವಲ್ಲೇ ಮೋಡಿ ಮಾಡ್ತಿದೆ. ರೊಮ್ಯಾಂಟಿಕ್ ಕಥಾಹಂದರವುಳ್ಳ ಈ ಚಿತ್ರಕ್ಕೆ ರಾಧಾಕೃಷ್ಣಕುಮಾರ್ ನಿರ್ದೇಶನವಿದೆ. ೧೯೭೦ ಯುರೋಪ್ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರಿತಗೊಂಡಿದ್ದು, ಭೂಷಣ್‌ಕುಮಾರ್- ವಂಶಿ- ಪ್ರಮೋದ್ ಮೂವರು ಸೇರಿ ಬಂಡವಾಳ ಹೂಡಿದ್ದಾರೆ. ಮನೋಜ್ ಪರಮಹಂಸ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನವಿರುವ ಈ ಚಿತ್ರ ಜನವರಿ ೧೪ರಂದು ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಚರಿತ್ರ್ಯೆ ಸೃಷ್ಟಿಸಲು ಹೊರಟ ಸಿನಿಮಾ, ಕಿಚ್ಚನ ಕೈಗೆ ಬಂತು -ಸುದೀಪ್‌ಗೆ ಜೈ ಎಂದ್ರು ರಣವೀರ್-ದೀಪಿಕಾ !

ಭಾರತೀಯ ಚಿತ್ರರಂಗದಲ್ಲಿ ನಯಾ ಇತಿಹಾಸವನ್ನು ಬರೆಯೋದ್ರಲ್ಲಿ ಸಂಶಯವೇ ಇಲ್ಲ ಎಂದು ಹೇಳಲಾಗುತ್ತಿರುವ ಆ ಒಂದು ಚಿತ್ರ ಗಂಧದಗುಡಿಯ ಅಭಿನಯ ಚಕ್ರವರ್ತಿ, ಸ್ಯಾಂಡಲ್‌ವುಡ್‌ನ ಬಾದ್‌ಷಾ ಕಿಚ್ಚ ಸುದೀಪ್ ಅವರ ಕೈ ಸೇರಿದೆ. ಹಾಗಂತ ಆ ಸಿನಿಮಾದಲ್ಲಿ ಕನ್ನಡದ ಮಾಣಿಕ್ಯ ಅಭಿನಯಿಸ್ತಿಲ್ಲ ಬದಲಾಗಿ ಆ ಚಿತ್ರವನ್ನು ಕರುನಾಡ ಮೂಲೆ ಮೂಲೆಗೆ ತಲುಪಿಸುವ ಜವಬ್ದಾರಿಯನ್ನು ಹೊತ್ಕೊಂಡಿದ್ದಾರೆ. ಹಾಗಾದ್ರೆ, ಆ ಮೂವೀ ಯಾವುದು? ಸ್ಯಾಂಡಲ್‌ವುಡ್ ಬಚ್ಚನ್‌ಗೆ ಬಿಟೌನ್ ಕ್ಯೂಟ್ ಅಂಡ್ ಮೋಸ್ಟ್ ಟ್ಯಾಲೆಂಟೆಡ್ ಕಪಲ್ಸ್ ರಣವೀರ್ ಹಾಗೂ ದೀಪಿಕಾ ಜೈ ಎಂದಿದ್ದೇಕೆ ? ಈ ಇಂಟ್ರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ

ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಸೌತ್‌ಗೆ ಮಾತ್ರ ಸೀಮಿತವಾಗಿಲ್ಲ ಅದರಾಚೆಗೂ ಬೆಳೆದಿದ್ದಾರೆ. ವರ್ಲ್ಡ್ ವೈಡ್ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ರನ್ನ, ಜಗತ್ತಿನ ತುಂಬೆಲ್ಲಾ ಹವಾ ಮೆಂಟೇನ್ ಮಾಡಿದ್ದಾರೆ. ಸ್ಯಾಂಡಲ್‌ವುಡ್-ಕಾಲಿವುಡ್-ಟಾಲಿವುಡ್-ಬಾಲಿವುಡ್‌ನಲ್ಲಿ ಧಗಧಗಿಸಿರೋ ಮಾಣಿಕ್ಯನಿಗೆ ಹಾಲಿವುಡ್ ಮಂದಿ ರತ್ನಗಂಬಳಿ ಹಾಸಿದ್ದು ಕನ್ನಡಿಗರ ಕಣ್ಮುಂದೆಯೇ ಇದೆ. ಹೀಗೆ ಇಂಗ್ಲೀಷ್ ಮಂದಿಯ ಕಣ್ಣುಕುಕ್ಕಿರೋ ಕಿಚ್ಚ, ಭಾರತೀಯ ಚಿತ್ರರಂಗ ಕೂತೂಹಲದಿಂದ ಕಾಯ್ತಿರೋ ಹೆಮ್ಮೆಯ ಸಿನಿಮಾವನ್ನು ಕನ್ನಡಿಗರಿಗೆ ತೋರಿಸಬೇಕು ಎಂದು ಹೊರಟಿದ್ದಾರೆ. ಅಷ್ಟಕ್ಕೂ, ಇಂಡಿಯನ್ ಸಿನಿಮಾ ಇಂಡಸ್ಟ್ರಿ ಕಣ್ಣರಳಿಸಿ ಕೂತಿರೋ ಆ ಸಿನಿಮಾ ಬೇರಾವುದು ಅಲ್ಲ… 1983ರಲ್ಲಿ ಇಡೀ ಜಗತ್ತು ಬೆಕ್ಕಸ ಬೆರಗಾಗಿ ಇಂಡಿಯಾದತ್ತ ನೋಡಿದಂತಹ ಆ ಒಂದು ಘಟನೆಯನ್ನು ಆಧರಿಸಿ ಸಿದ್ದಗೊಂಡಿರೋ `83′

ಅಷ್ಟಕ್ಕೂ 1983ರಲ್ಲಿ ಏನ್ ನಡೀತು? ಅದ್ಯಾವ ಐತಿಹಾಸಿಕ ಘಟನೆಗೆ ಭಾರತ ಸಾಕ್ಷಿಯಾಯ್ತು ಅಂತ ನಿಮ್ಮೆಲ್ಲರಿಗೂ ಗೊತ್ತೆಯಿದೆ. ಭಾರತೀಯರು ಮಾತ್ರವಲ್ಲ ಜಗತ್ತಿನಾದ್ಯಂತ ಯಾರೂ ಊಹಿಸದ ಚರಿತ್ರ್ಯೆ ಇತಿಹಾಸದ ಪುಟಗಳಲ್ಲಿ ದಾಖಲಾಯ್ತು. ಹೌದು, 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತೀಯ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಮೊದಲ ಭಾರಿಗೆ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟರು. ಅಲ್ಲಿವರೆಗೂ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ವಿಂಡೀಸ್ ತಂಡಕ್ಕೆ ಮಣ್ಣುಮುಕ್ಕಿಸಿ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಭಾರತೀಯರು ವರ್ಲ್ಡ್ ಕಪ್‌ನ ಎತ್ತಿಹಿಡಿದರು. ಈ ಮೂಲಕ ಯಾರೂ ತಿಕ್ಕಿ ಅಳಿಸಲಾಗದ ಇತಿಹಾಸ ಸೃಷ್ಟಿಗೆ ಕಾರಣಕರ್ತರಾದರು. ಈಗ ಇದೇ ರೋಚಕ ಘಟನೆ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ. ಕಬೀರ್ ಖಾನ್ ನಿರ್ದೇಶನದಲ್ಲಿ `83′ ಹೆಸರಲ್ಲಿ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ.

ಕಪಿಲ್ ದೇವ್ ಪಾತ್ರಕ್ಕೆ ಬಿಟೌನ್ ಹ್ಯಾಂಡ್ಸಮ್ ಹಂಕ್ ರಣವೀರ್ ಸಿಂಗ್ ಜೀವ ತುಂಬಿದ್ದಾರೆ. ಕಪಿಲ್ ದೇವ್ ಪತ್ನಿ ರೂಮಿ ಭಾಟಿಯಾ ಪಾತ್ರದಲ್ಲಿ ನಟಿ ದೀಪಿಕಾ ಮಿಂಚಿದ್ದಾರೆ. ರಿಯಲ್ ಲೈಫ್‌ನಲ್ಲಿ ಸತಿಪತಿಗಳಾಗಿರುವ ವೀರ್-ಡಿಪ್ಪಿ `83′ ಚಿತ್ರದಲ್ಲಿ ಪತಿ-ಪತ್ನಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಸುನೀಲ್ ಗಾವಸ್ಕರ್ ಪಾತ್ರಕ್ಕೆ ತಹೀರ್ ರಾಜ್ ಭಾಸಿನ್, ಪಿ,ಆರ್ ಮಾನ್‌ಸಿಂಗ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ, ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ಜೀವಾ, ಮೊಹಿಂದರ್ ಅಮರನಾಥ್ ಪಾತ್ರಕ್ಕೆ ಸಾಕಿಬ್ ಸಲೀಂ, ಸಂದೀಪ್ ಪಾಟೀಲ್ ಪಾತ್ರಕ್ಕೆ ಚಿರಾಗ್ ಪಾಟೀಲ್ ಜೀವತುಂಬಿ ಅಭಿನಯಿಸಿದ್ದಾರೆ. ಸದ್ಯ ಇದರ ಟೀಸರ್ ರಿಲೀಸ್ ಆಗಿದ್ದು ಕ್ರಿಕೆಟ್ ಪ್ರೇಮಿಗಳನ್ನು ಮಾತ್ರವಲ್ಲ ಚಿತ್ರ ಪ್ರೇಮಿಗಳನ್ನು ಕೂಡ ಹುಚ್ಚೆಬ್ಬಿಸಿದೆ.

ಇಂಟ್ರೆಸ್ಟಿಂಗ್ ಅಂದರೆ ‘83'ಪ್ಯಾನ್ ಇಂಡಿಯಾ ತುಂಬೆಲ್ಲಾ ಬಿಡುಗಡೆಯಾಗ್ತಿ ರುವುದು.ಯಸ್,ಮೂಲ ಹಿಂದಿ ಭಾಷೆಯಲ್ಲಿ ನಿರ್ಮಾಣಗೊಂಡಿದೆಯಾದರೂ ಕೂಡ ಕನ್ನಡ-ತೆಲುಗು-ತಮಿಳು-ಮಲೆಯಾಳಂ ಭಾಷೆಗೆ ಡಬ್ ಆಗ್ತಿದೆ. ಕನ್ನಡ ಭಾಷೆಯಲ್ಲಿ ಡಬ್ ಆಗಿರುವ ’83’ ಚಿತ್ರವನ್ನು ಕರುನಾಡಿನ ಮೂಲೆ ಮೂಲೆಗೂ ತಲುಪಿಸುವ ಜವಬ್ದಾರಿಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊತ್ತುಕೊಂಡಿದ್ದಾರೆ. ಇದೇ ಡಿಸೆಂಬರ್ 24 ರಂದು ಸಿನಿಮಾ ಜಗತ್ತಿನಾದ್ಯಂತ ತೆರೆಗೆ ಬರುತ್ತಿದೆ. ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಕಬೀರ್ ಖಾನ್ ಸಹನಿರ್ಮಾಪಕರಾಗಿದ್ದು, ಕರ್ನಾಟಕದಲ್ಲಿ `83′ ಡಿಸ್ಟ್ರಿಬ್ಯೂಟ್ ಮಾಡೋದಕ್ಕೆ ಕಿಚ್ಚನಿಗೆ ಒಪ್ಪಿಗೆ ಕೊಟ್ಟಿದ್ದಾರೆ.

ಬಾದ್ ಷಾ ಸುದೀಪ್‌ಗೆ ಸಿನಿಮಾ ಮೇಲೆ ಎಷ್ಟು ಪ್ರೀತಿ ಮತ್ತು ಆಸಕ್ತಿ ಇದೆಯೋ ಅಷ್ಟೇ ಪ್ರೀತಿ ಮತ್ತು ಆಸಕ್ತಿ ಕ್ರಿಕೆಟ್ ಮೇಲೆ ಕೂಡ ಇದೆ. ಹೀಗಾಗಿಯೇ, ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್'ನಂತಹ ತಂಡ ಕಟ್ಟಿ ಸ್ಟಾರ್‌ಗಳನ್ನು ಒಟ್ಟುಗೂಡಿಸಿದ್ದು.ನಾವೆಲ್ಲರೂ ಒಂದೇ ಎನ್ನುವ ಒಗ್ಗಟ್ಟಿನ ಮಂತ್ರದ ಜೊತೆಗೆ ಕ್ರಿಕೆಟ್ ಪ್ರೇಮವನ್ನು ಹೊರಗಾಕಿದ್ದರು.ಟೈಮ್ ಸಿಕ್ಕಾಗ ಮೈದಾನಕ್ಕಿಳಿದು ಬ್ಯಾಟ್ ಬೀಸುವ,ಫ್ಲೈಟ್ ಏರಿ ಕ್ರಿಕೆಟ್ ನೋಡಲಿಕ್ಕೆ ಹೊರದೇಶಕ್ಕೂ ಹೋಗಿಬರುವ ಕಿಚ್ಚ,ಕ್ರಿಕೆಟ್ ಮೇಲಿನ ಪ್ರೀತಿಗಾಗಿ ವರ್ಲ್ಡ್ ಕಪ್ ಕಥೆಯ ’83’ ಚಿತ್ರವನ್ನು ಕನ್ನಡಿರಿಗೆ ತೋರ‍್ಸೋಕೆ ಹೊರಟಿದ್ದಾರೆ. ಶುಭವಾಗಲಿ ಕೋಟಿಗೊಬ್ಬ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!