‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಫೋಟೋಶೂಟ್ -ದಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ‘ರಾಕಿಂಗ್’ ಜೋಡಿ !

ರಾಕಿಂಗ್ ದಂಪತಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ದಬೂ ರತ್ನಾನಿ ಕ್ಯಾಮೆರಾಗೆ ರಾಕಿಭಾಯ್ ಮತ್ತು ರಾಧಿಕಾ ಪಂಡಿತ್ ಪೋಸ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ದಬೂ ರತ್ನಾನಿ ಜೊತೆಗಿದ್ದ ಯಶ್ ಪೋಟೋ ಸೋಷಿಯಲ್ ಲೋಕದಲ್ಲಿ ವೈರಲ್ ಆಗಿತ್ತು. ಇದೀಗ, ಯಶ್ ಮತ್ತು ರಾಧಿಕಾ ಇಬ್ಬರು ದಬೂ ರತ್ನಾಗಿ ಜೊತೆಗೆ ನಿಂತು ಕ್ಯಾಮೆರಾಗೆ ಲುಕ್ ಕೊಟ್ಟಿರುವ ಫೋಟೋ ರಿವೀಲ್ ಆಗಿದೆ. ಬಾಲಿವುಡ್‌ನ ಹೆಸರಾಂತ ಫೋಟೋಗ್ರಾಫರ್ ಬಳಿ ಫೋಟೋಶೂಟ್ ಮಾಡಿಸಿರುವುದರಿಂದ ಕೂತೂಹಲ ಇಮ್ಮಡಿಯಾಗಿದೆ.

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯ ಈ ಫೋಟೋಶೂಟ್ ಪರ್ಸನಲ್ ಫೋಟೋಗ್ರಫಿಯಾ? ಈ ಪ್ರಶ್ನೆಗೆ ಒಂದೇ ಮಾತಿನಲ್ಲಿ ಹೂಃ ಹೌದು ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಹಾಗಂತ ಅಲ್ಲ ಗಳೆಯೋದಕ್ಕೂ ಸಾಧ್ಯವಿಲ್ಲ. ಯಾಕಂದ್ರೆ, ದಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ತಾವು ಸೆರೆಯಾಗ್ಬೇಕು ಎನ್ನುವುದು ಅದೆಷ್ಟೋ ಮಂದಿಯ ಕನಸು. ಮಾಯಲೋಕದಲ್ಲಿ ಮಿಂಚ್ಬೇಕು ಎಂದುಕೊಂಡವರು ಮಾತ್ರವಲ್ಲ ಈಗಾಗಲೇ ಮಾಯಲೋಕದಲ್ಲಿ ಮೆರೆಯುತ್ತಿರುವವರು ಕೂಡ ದಬೂ ಕ್ಯಾಮೆರಾ ಕೈಚಳಕಕ್ಕೆ ಮನಸ್ಸು ಕೊಟ್ಟು ಕೂತುಬಿಡ್ತಾರೆ. ಪ್ರತಿವರ್ಷ ಜಗತ್ತಿನ ಮುಂದೆ ಅನಾವರಣಗೊಳ್ಳುವ ದಬೂ ಕ್ಯಾಲೆಂಡರ್‌ನಲ್ಲಿ ಲಕಲಕ ಹೊಳೆಯೋ ಲಕ್ ನಮಗೆ ಯಾವಾಗ ಕೂಡಿಬರುತ್ತೆ ದೇವಾ ಅಂತ ಎಷ್ಟೋ ಮಂದಿ ಆಕಾಶ ನೋಡ್ತಿದ್ದಾರೆ.

ದಬೂ ರತ್ನಾನಿ ಕ್ಯಾಲೆಂಡರ್ ಸಿಕ್ಕಾಪಟ್ಟೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಪಿಕ್ಚರ್‌ಗಳಿಂದ ಕೂಡಿರುತ್ತೆ. ನಾನಾ-ನೀನಾ ನೋಡೆಬಿಡೋಣ ಎನ್ನುವ ರೇಂಜ್ಗೆ ನಟರು ಲುಕ್ ಕೊಟ್ಟರೆ,
ಕ್ಯಾಮೆರಾ ಹೀಟಾಗುವಂತೆ ನಟಿಮಣಿಯರು ತಮ್ಮ ಸುಂದರ ದೇಹಸಿರಿಯನ್ನು ಎಕ್ಸ್ ಪೋಸ್ ಮಾಡ್ತಾರೆ. ದಬೂ ಕಲರ್‌ಫುಲ್ ಕಲ್ಪನೆಗೆ- ಯೂನಿಕ್ ಕಾನ್ಸೆಪ್ಟ್ನ ಫೋಟೋಗ್ರಫಿಗೆ ಬಾಲಿವುಡ್ ತಾರೆಯರು ಸಾಥ್ ಕೊಡ್ತಾರೆ. ಹೀಗಾಗಿಯೇ, ಔಟ್‌ಫುಟ್ ಚೆನ್ನಾಗಿ ಬರುತ್ತೆ ಹಾಲಿವುಡ್ ತಾರೆಯರು ಕೂಡ ಕಣ್ಣರಳಿಸಿ ನೋಡುವಂತಾಗುತ್ತದೆ.

ಇಂಟ್ರೆಸ್ಟಿಂಗ್ ಅಂದರೆ ದಬೂ ರತ್ನಾನಿಯವರ ಕ್ಯಾಲೆಂಡರ್ ಪೋಟೋಶೂಟ್, ಬಾಲಿವುಡ್ ಸಿನಿಮಾ ಫೋಟೋಶೂಟ್‌ನ ಕೂಡ ಮೀರಿಸುತ್ತೆ. ಇಂತಹ ಹೆಸರಾಂತ ಫೋಟೋಗ್ರಾಫರ್ ಬಳಿ ನಮ್ಮ ರಾಕಿಂಗ್ ಜೋಡಿ ಫೋಟೋಶೂಟ್ ಮಾಡಿಸಿಕೊಂಡಿದೆ ಅಂದರೆ, ಅದರ ಅರ್ಥ ದಬೂ `೨೦೨೨’ರ ಕ್ಯಾಲೆಂಡರ್‌ನಲ್ಲಿ ಯಶ್-ರಾಧಿಕಾ ಇರುತ್ತಾರೆ ಅಂತಾನಾ? ಅಥವಾ ಇಬ್ಬರು ಸೈಲೆಂಟಾಗಿ ಹೊಸ ಸಿನಿಮಾ ಏನಾದರೂ ಮಾಡ್ತಿದ್ದಾರೆ ಅಂತಾನಾ? ಇದ್ಯಾವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ.

ಅಂದ್ಹಾಗೇ, ರೀಲ್‌ನಲ್ಲಿ ಸಕ್ಸಸ್‌ಫುಲ್ ಜೋಡಿಯಾಗಿ ಮಿಂಚಿ ಮೆರೆದು, ರಿಯಲ್ ಲೈಫ್‌ನಲ್ಲಿ ಆದರ್ಶ ದಂಪತಿಗಳಾಗಿ ಬದುಕುತ್ತಿರುವ ರಾಕಿಂಗ್ ಜೋಡಿಯನ್ನು, ಸ್ಕ್ರೀನ್ ಮೇಲೆ ಒಟ್ಟಿಗೆ ನೋಡ್ಬೇಕು ಎನ್ನುವುದು ಸಾಕಷ್ಟು ಅಭಿಮಾನಿಗಳ ಕನಸು. ಫ್ಯಾನ್ಸ್ ಆಸೆ-ಕನಸಿಗೆ ಯಶ್-ರಾಧಿಕಾ ಜೀವತುಂಬಲಿಕ್ಕೆ ರೆಡಿ ಇದ್ದಾರೆ. ಒಳ್ಳೆ ಸ್ಕ್ರಿಪ್ಟ್ ಬಂದರೆ, ಆ ಸ್ಕ್ರಿಪ್ಟ್ ನಮ್ಮಿಬ್ಬರನ್ನು ಚೂಸ್ ಮಾಡಿದರೆ ಒಟ್ಟಿಗೆ ತೆರೆಮೇಲೆ ಬರುತ್ತೀವಿ ಎಂದು ಇಬ್ಬರು ಹೇಳಿಕೊಂಡಿದ್ದಾರೆ. ಬಹುಷಃ ಅಂತಹದ್ದೊಂದು ಸ್ಕ್ರಿಪ್ಟ್ ಅರಸಿ ಬಂದಿರಬಹುದು? ಬಂದಿಲ್ಲದೆಯೂ ಇರ‍್ಬೋದು? ಈ ಹಿಂದೆ ಫ್ರೀಡಂ ಅಡುಗೆ ಎಣ್ಣೆಗೆ ರಾಯಭಾರಿಗಳಾಗಿದಂತೆ ಮತ್ಯಾವುದೋ ಖಾಸಗಿ ಜಾಹೀರಾತಿಗೆ ಬ್ರ್ಯಾಂಡ್ ಅಂಬಾಸೀಡರ್ಸ್ ಆಗಿರಬಹುದು. ಒಟ್ನಲ್ಲಿ ಸೈಲೆಂಟಾಗಿ ದಬೂ ರತ್ನಾನಿ ಅವರ ಕ್ಯಾಮೆರಾಗೆ `ರಾಕಿಂಗ್ ಜೋಡಿ’ ಜೊತೆಯಾಗಿ ಪೋಸ್ ಕೊಟ್ಟಿರುವುದು ಹಲವು ಕೂತೂಹಲಕ್ಕೆ ಕಾರಣವಾಗಿದೆ. ಈ ಕೂತೂಹಲದ ಕೋಟೆಯ ರಹಸ್ಯಕ್ಕೆ ರಾಕಿಭಾಯ್ ಏನ್ ಹೇಳ್ತಾರೆ ಕಾದು ನೋಡೋಣ ಅಲ್ಲವೇ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!