ಕನ್ನಡತಿ ಪೂಜಾ ಹೆಗ್ಡೆ ಕಾಲಿಡಿದರೇಕೆ ಡಾರ್ಲಿಂಗ್ ಪ್ರಭಾಸ್ ?`ಸ್ವೀಟಿ’ ಡೋಂಟ್ ವರೀ ಎಂದ್ರು ಫ್ಯಾನ್ಸ್ !

ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿರುವ ಡಾರ್ಲಿಂಗ್ ಪ್ರಭಾಸ್ ಕನ್ನಡತಿ ಪೂಜಾಹೆಗ್ಡೆ ಕಾಲಿಡಿದರು ಅಂತೇಳಿದರೆ ಯಾರಾದ್ರೂ ನಂಬೋ ಮಾತ? ನೋ ವೇ ಚಾನ್ಸ್ ಇಲ್ಲ ಎನ್ನುವ ರೆಬೆಲ್ ಡೈಲಾಗ್ ಪ್ರಭಾಸ್ ಫ್ಯಾನ್ಸ್ ಬಾಯಿಂದ ಬಂದೇಬಿಡುತ್ತೆ. ಇತ್ತ ಅನುಷ್ಕಾ ಫ್ಯಾನ್ಸ್ ಬಾಯಲ್ಲೂ ಇದೇ ಮಾತು ಕುಣಿದು ಕುಪ್ಪಳಿಸುತ್ತೆ. ಹಾಗಾದ್ರೆ, ಮತ್ಯಾಕ್ ತಡ ಮಿರ್ಚಿ ಹುಡುಗ ಕನ್ನಡತಿಯ ಕಾಲಿಡಿದಿದ್ದು ನಿಜನಾ ಅಥವಾ ಸುಳ್ಳಾ ನೋಡಿಕೊಂಡು ಬರೋಣ ಬನ್ನಿ

ಟಾಲಿವುಡ್ ರೆಬೆಲ್‌ಸ್ಟಾರ್ ಡಾರ್ಲಿಂಗ್ ಪ್ರಭಾಸ್ ನಿಜ ಜೀವನದಲ್ಲಿ ಅದ್ಯಾರನ್ನ ಕೈಹಿಡಿಯುತ್ತಾರೋ, ಅದ್ಯಾರ ಕೊರಳಿಗೆ ಮೂರು ಗಂಟು ಬೆಸೆಯುತ್ತಾರೋ, ಕಾಲುಂಗರ ತೊಡಿಸೋಕೆ ಅದ್ಯಾರ ಕಾಲ್ಬೆರಳನ್ನು ಹಿಡಿಯುತ್ತಾರೋ, ಅದ್ಯಾರ ಜೊತೆಗೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯುತ್ತಾರೋ, ಅದ್ಯಾರನ್ನು ಹೆಂಡ್ತಿಯನ್ನಾಗಿ ಸ್ವೀಕರಿಸಿ ದಿಬ್ಬಣ ಹೊರಡುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ, ‘ರಾಧೆ ಶ್ಯಾಮ್'ಚಿತ್ರದ ಕ್ಲ್ಯಾಸಿಕಲ್ ರೊಮ್ಯಾಂಟಿಕ್ ಟ್ರ್ಯಾಕ್ ವೊಂದರಲ್ಲಿ ಕನ್ನಡತಿ ಪೂಜೆ ಹೆಗ್ಡೆ ಕಾಲಿನ ಮೇಲೆ ಚಿತ್ತಾರ ಬಿಡಿಸಿ ‘ಆಶಿಕಿ ಆ ಗಯಿ’ ಎಂದು ಹಾಡುತ್ತಾ ಮೆರವಣಿಗೆ ಹೊರಟಿದ್ದಾರೆ. ಇದನ್ನು ನೋಡಿದ ಅನುಷ್ಕಾ ಅಭಿಮಾನಿಗಳು ಡೋಂಟ್ ವರೀ ಅಕ್ಕ, `ನಿನ್ನ ಕಾಲ್ಬೆರಳಿಗೆ ಪ್ರಭಾಸ್ ಅಣ್ಣ ನೈಲ್ ಪಾಲಿಶ್ ಹಚ್ಚಿದ್ದರು. ಆದರೆ, ಆ ಪೂಜಾ ಹೆಗ್ಡೆ ಕಾಲನ್ನು ಕೈಬೆರಳುಗಳಿಂದ ಜಸ್ಟ್ ಟಚ್ ಮಾಡಿದ್ದಾರೆ ಅಷ್ಟೇ ಎನ್ನುತ್ತಿದ್ದಾರಂತೆ.

ಮಿರ್ಚಿ'ಸಿನಿಮಾದಲ್ಲಿ ಪ್ರಭಾಸ್, ಅನುಷ್ಕಾ ಪಾದಗಳನ್ನು ತನ್ನ ಅಂಗೈ ಮೇಲೆ ಇರಿಸಿಕೊಂಡು ಸ್ವೀಟಿ ಕಾಲ್ಬೆರಳಿಗೆ ನೈಲ್ ಪಾಲಿಶ್ ಹಚ್ಚಿದ್ದರು.ಇದೊಂದು ಸೀನ್ ಹೆಣೈಕ್ಳ ಹೃದಯವನ್ನು ಚೆಲ್ಲಾಪಿಲ್ಲಿ ಮಾಡಿತ್ತು.ಸಿಕ್ಕರೆ ಡಾರ್ಲಿಂಗ್ ಥರ ಹುಡುಗ ಸಿಗ್ಬೇಕು ಅಂತ ಹೆಣೈಕ್ಳು ಬಯಸಿದರೆ,ದಕ್ಕಿದರೆ ಸ್ವೀಟಿಯಂತಹ ಸುಂದರಿ ದಕ್ಕಬೇಕು ಎಂದು ಹುಡುಗರು ಬಯಸಿದ್ದರು.‘ಇದೇದೋ ಬಾಗುಂದೆ ಸರೀ’ ಹಾಡಂತೂ ಹುಡುಗ-ಹುಡುಗಿಯರ ತಲೆ ಕೆಡಿಸಿತ್ತು.

ಬೆಳ್ಳಿಪರದೆ ಇವರಿಬ್ಬರಿಗೆ ದೃಷ್ಟಿ ತೆಗೆದಿತ್ತು. ಅಷ್ಟರ ಮಟ್ಟಿಗೆ ಇವರಿಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ರೊಮ್ಯಾಂಟಿಕ್ ಜೋಡಿಯಾಗಿ ಬಿಗ್‌ಸ್ಕ್ರೀನ್‌ಗೆ ಕಿಚ್ಚು ಹಚ್ಚಿದ್ದ ಈ ಜೋಡಿ ರೀಲ್‌ನಲ್ಲಿ ಮಾತ್ರವಲ್ಲ ರಿಯಲ್‌ನಲ್ಲೂ ಒಂದಾಗ್ಬೇಕು ಅಂತ ಇವರಿಬ್ಬರ ಫ್ಯಾನ್ಸ್ ಅಂದೇ ಷರಾ ಬರೆದಿದ್ದರು. ಆದ್ರೆ ಏನ್ಮಾಡೋದು ಶುಭಮುಹೂರ್ತ ಇನ್ನೂ ಕೂಡಿಬಂದಿಲ್ಲ. ನಮ್ಮಿಬ್ಬರ ನಡುವೆ ಪ್ರೀತಿ ಚಿಗುರಿದೆ ಮದುವೆಯಾಗುವ ಮನಸ್ಸಾಗಿದೆ ಅಂತ ಅವರಿಬ್ಬರು ಹೇಳಿಕೊಂಡಿಲ್ಲ.

ಅಂದ್ಹಾಗೇ, ಡಾರ್ಲಿಂಗ್ ಪ್ರಭಾಸ್ ಬೇರೆ ಹೀರೋಯಿನ್ಸ್ ಜೊತೆ ರೊಮ್ಯಾನ್ಸ್ ಮಾಡಿದ್ದನ್ನು ನೋಡಿದಾಗ ಬೊಮ್ಮಾಲಿಗೆ ಬೇಜಾರಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ವೀಟಿ ಫ್ಯಾನ್ಸ್ಗೆ ಮಾತ್ರ ಕರುಳು ಕಿತ್ತುಬಂದ್ಹಾಗೇ ಆಗುತ್ತಂತೆ. ಹೀಗಾಗಿಯೇ ಅನುಷ್ಕಾ ಫ್ಯಾನ್ಸ್ ಸೋಷಿಯಲ್ ಸಮುದ್ರದಲ್ಲಿ ಆಗಾಗ ಯುದ್ದ ಮಾಡ್ತಾರೆ. ಅಕ್ಕನ ಪರವಾಗಿ ಬ್ಯಾಟಿಂಗ್ ಮಾಡುತ್ತಾ, ಪ್ರಭಾಸ್ ಅಣ್ಣ ಯಾವತ್ತಿದ್ರೂ ಅನುಷ್ಕಾ ಅಕ್ಕನ ಡಾರ್ಲಿಂಗ್ ಅಂತೇಳ್ತಿರುತ್ತಾರೆ. ಇದೀಗ, ‘ರಾಧೆಶ್ಯಾಮ'ಚಿತ್ರದ ಹಾಡಿನಲ್ಲಿ ಪ್ರಭಾಸ್ ಹಾಗೂ ಪೂಜಾ ಕೆಮಿಸ್ಟ್ರಿಯ ಝಲಕ್ ನೋಡಿರುವ ಅನುಷ್ಕಾ ಅಭಿಮಾನಿಗಳು,ಅಕ್ಕಾ ಡೋಂಟ್ ವರೀ ನಿನ್ನ-ಅಣ್ಣನ ಕೆಮಿಸ್ಟ್ರಿನಾ ಯಾರು ಮ್ಯಾಚ್ ಮಾಡೋದಕ್ಕೆ ಆಗಲ್ಲ.ಅಷ್ಟೇ ಯಾಕೇ ಕ್ರಾಸ್ ಮಾಡೋದಕ್ಕೂ ಆಗಲ್ಲ ಎನ್ನುತ್ತಿದ್ದಾರಂತೆ. ಅಪ್‌ಕೋರ್ಸ್ ರೊಮ್ಯಾಂಟಿಕ್ ಜೋಡಿಗೆ ಬ್ರಾಂಡ್ ಅಂಬಾಸೀಡರ್ ಥರ ಇರುವ ‘ಮಿರ್ಚಿ’ ಜೋಡಿನಾ ಯಾರೂ ಮ್ಯಾಚ್ ಮಾಡೋದಕ್ಕೆ ಆಗಲ್ಲ.

ಹಾಗಂತ, ಡಾರ್ಲಿಂಗ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಂಬೋ ಕಿಕ್ ಕೊಡಲ್ಲ ಅಂತೇನಿಲ್ಲ. ಸದ್ಯ ರಿಲೀಸ್ ಆಗಿರುವ ‘ಆಶಿಕಿ ಆ ಗಯಿ'ಸಾಂಗ್ ಟೀರ‍್ರೇ ಸೌತ್‌ನಿಂದ-ನಾರ್ತ್ ವರೆಗೂ ಸದ್ದು ಮಾಡುತ್ತಿದೆ.ಮಿಥುನ್ ಲಿರಿಕ್ಸ್ ಬರೆದು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ,ಅರ್ಜಿತ್ ಸಿಂಗ್ ಕಂಠ ಕುಣಿಸಿದ್ದಾರೆ.ಇದೊಂದು ಲವ್ ಆ್ಯಂಥಮ್ ಸಾಂಗ್ ಆಗಿದ್ದು ಡಿಸೆಂಬರ್ ೦೧ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗ್ತಿದೆ.

ಒನ್ ಹಾರ್ಟ್...ಟು ಹಾರ್ಟ್ ಬೀಟ್ಸ್ ಪ್ರೇಮಕಥೆ ಹಾಡಿನ ಮೂಲಕ ನಾಳೆ ಅರಳಲಿದೆ.ಈಗಾಗಲೇ ಬಿಡುಗಡೆಯಾಗಿರುವ `ಯಾರೋ ಇರ‍್ಯಾರೋ ಕನವರಿಸೋ ಪ್ರೇಮಿಗಳಾ’ ಹಾಡಿಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಜಸ್ಟಿನ್ ಪ್ರಭಾಕರನ್ ಸಂಗೀತ, ಶುರುವಲ್ಲೇ ಮೋಡಿ ಮಾಡ್ತಿದೆ. ರೊಮ್ಯಾಂಟಿಕ್ ಕಥಾಹಂದರವುಳ್ಳ ಈ ಚಿತ್ರಕ್ಕೆ ರಾಧಾಕೃಷ್ಣಕುಮಾರ್ ನಿರ್ದೇಶನವಿದೆ. ೧೯೭೦ ಯುರೋಪ್ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರಿತಗೊಂಡಿದ್ದು, ಭೂಷಣ್‌ಕುಮಾರ್- ವಂಶಿ- ಪ್ರಮೋದ್ ಮೂವರು ಸೇರಿ ಬಂಡವಾಳ ಹೂಡಿದ್ದಾರೆ. ಮನೋಜ್ ಪರಮಹಂಸ ಛಾಯಾಗ್ರಹಣ, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನವಿರುವ ಈ ಚಿತ್ರ ಜನವರಿ ೧೪ರಂದು ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!