ನರಾಚಿ ಲೋಕದಲ್ಲಿ ಸ್ಯಾಂಡಲ್ ವುಡ್ ಷೆಹಜಾದ್ ರಾಕಿಭಾಯ್ ಜೊತೆ ಸೆಣಸಾಡಿ ಮುಂಬೈಗೆ ವಾಪಾಸ್ ಆಗಿದ್ದ ಬಿಟೌನ್ ಮುನ್ನಭಾಯ್ ಮತ್ತೆ ರಾಕಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಧೀರನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಎಲ್ಲರನ್ನೂ ದಂಗು ಬಡಿಸಿ ಹೋಗಿದ್ದ ಬಿಟೌನ್ ಬಾಬ ಈಗ ಅಧೀರನ ಪಾತ್ರಕ್ಕೆ ಜೀವತುಂಬಲಿಕ್ಕೆ ಕೆಜಿಎಫ್ ಅಖಾಡಕ್ಕೆ ಭೇಟಿಕೊಟ್ಟಿದ್ದಾರೆ. ಹೌದು, ಅಧೀರ ಇಡೀ ಜಗತ್ತು ಕಣ್ಣರಳಿಸಿ ಕಾಯ್ತಿರುವ ಖಳನಾಯಕ ಪಾತ್ರ. ಕೆಜಿಎಫ್ ಮೇಲೆ ಕಣ್ಣಿಟ್ಟಿದ್ದ ಗರುಡನನ್ನು ಹೊಡೆದುರುಳಿಸಿದ ರಾಕಿಭಾಯ್, ಅಧೀರನನ್ನು ಯಾವ್ ರೀತಿಯಾಗಿ ಮಟ್ಟಹಾಕಿ ಚಿನ್ನದ ಲೋಕಕ್ಕೆ ಅಧಿಪತಿಯಾಗಬಹುದು ಅಂತ ವಲ್ಡ್ ವೈಡ್ ಸಿನಿಮಾ ಪ್ರೇಕ್ಷಕರು ಕೂತೂಹಲದಿಂದ ಎದುರು ನೋಡ್ತಿದ್ದಾರೆ. ಇಂತಹ ಹೈವೋಲ್ಟೇಜ್ ಕ್ಯಾರೆಕ್ಟರ್ ಗೆ ಬಿಟೌನ್ ಬಾಬ ಜೀವ ತುಂಬಿ ಅಭಿನಯಿಸಿದ್ದಾರೆ.ಇತ್ತೀಚಿಗೆ ಕೆಜಿಎಫ್ ತಂಡ ಸೇರಿಕೊಂಡಿರುವ ನಟ ಸಂಜಯ್ ದತ್ತ್ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ.
ಈ ಬೆಂಕಿ ಸಮಾಚಾರವನ್ನು ಚಿತ್ರತಂಡ ಸೋಷಿಯಲ್ ಸಮುದ್ರದಲ್ಲಿ ಹಂಚಿಕೊಂಡಿದೆ. ಸುದ್ದಿ ಕೇಳಿ ರಾಕಿಂಗ್ ಫ್ಯಾನ್ಸ್ ಮಾತ್ರವಲ್ಲ ಇಡೀ ಚಿತ್ರಪ್ರೇಮಿಗಳು ದಿಲ್ ಖುಷ್ ಆಗಿದ್ದಾರೆ. ಆದಷ್ಟು ಬೇಗ ಟ್ರೈಲರ್ ಮತ್ತು ಸಾಂಗ್ಸ್ ಝಲಕ್ ತೋರ್ಸಿ ಅಂತ ಹೊಂಬಾಳೆಗೆ ಬೇಡಿಕೆ ಇಡ್ತಿದ್ದಾರೆ. ಬೆಳ್ಳಿತೆರೆ ಅಖಾಡದಲ್ಲಿ ಚಂಡಮಾರುತದ ಅಲೆ ಎಬ್ಬಿಸೋ ಮುನ್ನ ಸೋಷಿಯಲ್ ಸಮುದ್ರದಲ್ಲಿ ಸುನಾಮಿ ಎಬ್ಬಿಸೋದಕ್ಕೆ ಚಿತ್ರತಂಡ ಕೂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈಗಾಗಲೇ ಪ್ರಮೋಷನ್ ಕೆಲಸಗಳನ್ನು ಶುರುವಿಟ್ಟುಕೊಂಡಿದೆ. ಅದರ ಭಾಗವಾಗಿ ಮೊದಲು ಕೆಜಿಎಫ್ ಚಾಪ್ಟರ್ 1 ದೃಶ್ಯಗಳನ್ನು ಪ್ರೇಕ್ಷಕರಿಗೆ ರೀಕಾಲ್ ಮಾಡಿಸುವಂತಹ ಕೆಲಸವನ್ನು ಮಾಡ್ತಿದೆ. ಶೀಘ್ರದಲ್ಲೇ ಕೆಜಿಎಫ್ ಚಾಪ್ಟರ್ 2 ಪೋಸ್ಟರ್ ಗಳ ದರ್ಬಾರ್ ಸೋಷಿಯಲ್ ಜಗತ್ತಿನಲ್ಲಿ ಆರಂಭಗೊಳ್ಳಲಿದೆ. ಅಲ್ಲಿಂದ ಶುರುವಾಗಲಿದೆ ಕೆಜಿಎಫ್ ಅಸಲಿ ಇಂಟರ್ ನ್ಯಾಶನಲ್ ಫೀವರ್
ಅಂದ್ಹಾಗೇ, ‘ ಅಧೀರ’ನ ಪಾತ್ರ ಹೊರತು ಪಡಿಸಿ ಬಹುತೇಕ ಎಲ್ಲಾ ಪಾತ್ರಗಳ ಡಬ್ಬಿಂಗ್ ಪೂರ್ಣಗೊಂಡಿತ್ತು. ಬಾಬ ಕಾಲ್ ಶೀಟ್ ಗಾಗಿ ಚಿತ್ರತಂಡ ಎದುರು ನೋಡ್ತಿತ್ತು. ಫೈನಲೀ, ಸಂಜು ಬಾಬು ಕೆಜಿಎಫ್ ಅಂಗಳಕ್ಕೆ ಭೇಟಿಕೊಟ್ಟು ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಅಲ್ಲಿಗೆ ಕೆಜಿಎಫ್ ಚಾಪ್ಟರ್ 2 ಮಾತಿನ ಮನೆಯ ಸಂಪೂರ್ಣ ಕೆಲಸ ಮುಕ್ತಾಯಗೊಂಡಿದೆ. ಈ ಖುಷಿ ಸಮಾಚಾರವನ್ನು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ತಿಳಿಸಿದೆ. ಇಡೀ ಜಗತ್ತು ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಸಿನಿಮಾ ಪ್ರೇಕ್ಷಕರಿಗೆ ಚಿನ್ನದ ಸಾಮ್ರಾಜ್ಯ ತೋರಿಸೋಕೆ ಕೆಜಿಎಫ್ ಚಾಪ್ಟರ್ 2 ತಂಡ ಸಕಲ ಸಿದ್ದತೆ ನಡೆಸಿದೆ.ಏಪ್ರಿಲ್ 14 ರಂದು ವಲ್ಡ್ ವೈಡ್ ಕೆಜಿಎಫ್ ಚಾಪ್ಟರ್ 2 ತೆರೆಗೆ ಬರಲಿದೆ.
ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ