Categories
ಸಿನಿ ಸುದ್ದಿ

ಒಳ್ಳೇ ಹುಡುಗನ ಕುರಿ, ಹಸು ಮೇಯಿಸೋ ಕೆಲಸ

ಹಸು ಹಾಲು ಹಿಂಡುತ್ತಿರುವ ಪ್ರಥಮ್

ನಟ ಭಯಂಕರ ಅಲಿಯಾಸ್ ಒಳ್ಳೇ ಹುಡುಗ ಅಂದುಕೊಳ್ಳುವ ಪ್ರಥಮ್ ಬಗ್ಗೆ ಎಲ್ಲರಿಗೂ ಗೊತ್ತು. ಮಾತಲ್ಲೇ ಮೋಡಿ‌ ಮಾಡುವ ಪ್ರಥಮ್, ಸದ್ಯ ತನ್ನೂರಲ್ಲಿದ್ದಾರೆ. ಅಲ್ಲಿ ಕೃಷಿಯತ್ತ ಗಮನಹರಿಸಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಹಸು , ಕುರಿ ಮರಿಗಳನ್ನು ಮೇಯಿಸುವುದರ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ಹಸುವಿನ‌ ಹಾಲು ಕರೆದು ತಾನೊಬ್ಬ ಪಕ್ಕಾ ರೈತ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ತಾವು ಮಾಡುತ್ತಿರುವ ಕೆಲಸಗಳ ಫೋಟೋ ತೆಗೆದು ತಮ್ಮ ಮುಖಪುಟದಲ್ಲಿ ಹಾಕಿಕೊಂಡಿದ್ದಾರೆ.
‘ಈಗಷ್ಟೇ ನಾನು ಕುರಿ ಮೇಯಿಸುವಾಗ ನಮ್ ಚಿಕ್ಕಪ್ಪನ ಕುರಿ,ಮರಿ ಹಾಕ್ತು!ಗಂಡುಮರಿ ಆದ್ರಿಂದ ಮುಂದಿನ ತಿಂಗಳು ಸ್ವಲ್ಪ ಬಲಿತ ಮೇಲೆ ಮಾರಿಬಿಡ್ತಾರೆ!
ಹೆಣ್ಣು ಮರಿ ಆಗಿದ್ರೆ ಸಾಕೋದು ವಾಡಿಕೆ. ಹಾಗಾಗಿ ನಾನೇ
ಅದನ್ನು ಖರೀದಿಸಿದ್ದೇನೆ.
ಖುಷಿ ಅಂದ್ರೆ ಶೀಘ್ರದಲ್ಲೇ ನನ್ನ ಕುರಿಗಳ ಸಂಖ್ಯೆ ಜಾಸ್ತಿಆಗ್ತಿದೆ! ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.
ಇನ್ನೊಂದು ಸ್ಟೇಟಸ್ ನಲ್ಲಿ
ಪ್ರತಿದಿನ ಕುರಿ ಮೇಯಿಸೋದು, ಹಾಲು ಕರೆಯೋದನ್ನು ಕಲೀತಾ ಇದೀನಿ ಎಂಬ ಸಾಲು ಬರೆದುಕೊಂಡಿದ್ದಾರೆ.
ಸದ್ಯ ನಟಭಯಂಕರ ಸಿನಿಮಾದ ಕೆಲಸ‌ ಪೆಂಡಿಂಗ್ ಇರುವುದರಿಂದ ಊರಲ್ಲೇ ಕುರಿ, ಹಸು‌ ಮೇಯಿಸಿಕೊಂಡು ಹಾಲು ಕರೆಯುವುದನ್ನು ಕಲೀತಾ ಇದಾರೆ.
ಸಿನಿಮಾ ಚಟುವಟಿಕೆಗಳು ಶುರುವಾದರೆ ಪ್ರಥಮ್ ಮತ್ತೆ ಗಾಂಧಿನಗರದಲ್ಲಿ ಸದ್ದು ಮಾಡುವ ಉತ್ಸಾಹದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹೊಸಬರ ಕನಸಿಗೆ ಜೋಗಿ ಪ್ರೇಮ್ ಸಾಥ್-

ಯುವ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ನಿರ್ದೇಶನದ ‘ಕನಸು ಮಾರಾಟಕ್ಕಿದೆ’ ಚಿತ್ರ ಈಗಾಗಲೇ ಜೋರು ಸುದ್ದಿಯಾಗುತ್ತಿದ್ದು, ಸಿನೆಮಾದ ಮೊದಲ ಟೀಸರ್ ರಿಲೀಸ್ ಗೆ ನಿರ್ದೇಶಕ ಜೋಗಿ ಪ್ರೇಮ್ ಬುಧವಾರ ಸಂಜೆ 5 ಕ್ಕೆ ಚಾಲನೆ‌ ನೀಡುತ್ತಿದ್ದಾರೆ. ಶಿವಕುಮಾರ್ ನಿರ್ಮಾಣದ ಈ ಚಿತ್ರಕ್ಕೆ‌ ಶರತ್ ಕುಮಾರ್ , ಪ್ರಶಾಂತ್ ಕೋಟ್ಯಾನ್ ಪಾದೆಗುತ್ತು, ಸೆಲ್ವ ರಾಜ್ ಸಹ ನಿರ್ಮಾಣವಿದೆ. ಕೊಡಲಿದ್ದಾರೆ. ನವೀನ್ ಪೂಜಾರಿ ಕಥೆ ಬರೆದರೆ, ಅನೀಶ್ ಪೂಜಾರಿ ಚಿತ್ರಕಥೆ, ಸಂಭಾಷಣೆ ಇದೆ. ಮಾನಸ‌ ಹೊಳ್ಳ ಸಂಗೀತವಿದೆ. ಸಂತೋಷ ಆಚಾರ್ಯ ಛಾಯಾಗ್ರಹಣವಿದೆ. ಗಣೇಶ್ ನೀರ್ಜಾಲ್ ಸಂಕಲನವಿದೆ.

Categories
ಸಿನಿ ಸುದ್ದಿ

ಲಗ್ನ ಪತ್ರಿಕೆ ಹಂಚಲು ರೆಡಿಯಾದ ಅರವಿಂದ್ ಕೌಶಿಕ್- ಕಲರ್ಸ್ ನಲ್ಲಿ ಕಲರ್ ಫುಲ್ ಸ್ಟೋರಿ

 

 

 

 

ನಿರ್ದೇಶಕ ಅರವಿಂದ್ ಕೌಶಿಕ್ ಇದೀಗ ಲಗ್ನ ಪತ್ರಿಕೆ ಹಂಚೋಕೆ ರೆಡಿಯಾಗಿದ್ದಾರೆ!

ಅರೇ, ಹೀಗಂದಾಕ್ಷಣ ಮತ್ತೊಂದು ಮದ್ವೆಗೆ ಏನಾದರೂ ಅವರು ತಯಾರಿ ನಡೆಸಿದ್ದಾರಾ ಅನ್ನೋ ಪ್ರಶ್ನೆ ಸಹಜ. ಆದರೆ, ಅವರು ಹೊಸ ಮದ್ವೆ ಆಗ್ತಾ ಇಲ್ಲ, ಬದಲಾಗಿ ಮದ್ವೆಗೆ ಸಂಬಂಧಿಸಿದ ಹೊಸ ಬಗೆಯ ಕಥೆ ಹೆಣೆದು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿದ್ದಾರೆ.
ಹೌದು, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅರವಿಂದ್ ಕೌಶಿಕ್ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಲರ್ ಫುಲ್ ಸ್ಟೋರಿ ಮೂಲಕ ರಂಜಿಸಲು ತಮ್ಮ ತಂಡದೊಂದಿಗೆ ತಯಾರಾಗಿದ್ದಾರೆ.
ಬರೀ ರಿಮೇಕ್ ಹಾವಳಿ ಇರುವ ಈ ದಿನಮಾನದಲ್ಲೂ ಅವರು ದೇಸಿ ಸೊಗಡಿನ‌ ಪಕ್ಕಾ ನಮ್ಮತನ ಇರುವ ಸ್ವಂಥದ್ದೊಂದು ಕಥೆ ಹೆಣೆದು ಧಾರಾವಾಹಿ ಮೂಲಕ ಮನೆ ಮಂದಿಯ‌ ಮನ ತಣಿಸಲು ಹೊರಟಿದ್ದಾರೆ.
ಈ ಧಾರಾವಾಹಿ ಮೂಲಕ ಅಪ್ಪಟ ಕನ್ನಡದ ಪ್ರತಿಭಾವಂತರನ್ನ ಹಾಗೂ ಕ್ರಿಯಾಶೀಲ ಬರಹಗಾರರಿರುವ ತಂಡ ಕಟ್ಟಿಕೊಂಡು ಹೊಸ ಸವಿರುಚಿ ಉಣಬಡಿಸುವ ಉತ್ಸಾಹದಲ್ಲಿದ್ದಾರೆ.
ಅವರ ನಿರ್ದೇಶನದ ‘ಲಗ್ನಪತ್ರಿಕೆ’ ಧಾರಾವಾಹಿಯಲ್ಲಿ
ಸುಂದರ್ ಮತ್ತು ನವೀನ್ ಸಾಗರ್ ಕೈ ಜೋಡಿಸಿದ್ದಾರೆ. ಅವರ ಜೊತೆ ಅರವಿಂದ್ ಕೂಡ ಕಥೆ, ಚಿತ್ರಕಥೆಯಲ್ಲಿ ನಿರತರಾಗಿದ್ದಾರೆ.
ಕ್ರಿಯಾಶೀಲ ಬರಹಗಾರ ನವೀನ್ ಸಾಗರ್ ಲಗ್ನ ಪತ್ರಿಕೆಗೆ ಮಾತುಗಳನ್ನು ಪೋಣಿಸುತ್ತಿರುವುದು ವಿಶೇಷ.
ಅರವಿಂದ್ ಕೌಶಿಕ್ ಅವರ ಲಗ್ನ ಪತ್ರಿಕೆ ಸಂಭ್ರಮಕ್ಕೆ ಕಲಾವಿದರಾದ ಸುಂದರ್,ರವಿ ಭಟ್, ರೇಣುಕ,ಮರೀನಾ ತಾರಾ ,ಜ್ಯೋತಿ ,ಕುಲ್ದೀಪ್ ,ಸುಪ್ರಿಯಾ,ದರ್ಶನ್ ಸೂರ್ಯ , ಸಂಜನಾ ಬುರ್ಲಿ , ಸೂರಜ್ ಹೂಗಾರ್ ಸಾಕ್ಷಿಯಾಗಲಿದ್ದಾರೆ.
ಮನೋಹರ್ ಯಾಪ್ಲರ್, ಕ್ಯಾಮೆರಾ ಹಿಡಿದರೆ, ಗಣಪತಿ ಭಟ್ ಸಂಕಲನವಿದೆ. ಸಂಗೀತ ಅರ್ಜುನ್ ರಾಮು ಸಂಗೀತವಿದೆ. ಗಣೇಶ್ ಕಾರಂತ್ , ಸ್ಪರ್ಶಾ ಹಾಡಿದ್ದಾರೆ. ಸಹ ನಿರ್ದೇಶಕ ಸುರೇಶ್ ಕುಣಿಗಲ್ ಸಾಥ್ ನೀಡಿದ್ದಾರೆ. ಕುಲ್ದೀಪ್ ಹಾಗು ಚೇತನ್ ನಿರ್ಮಾಣ ಕೆಲಸದ ಉಸ್ತುವಾರಿ ಹೊತ್ತಿದ್ದಾರೆ.
ಅಂತೂ ಲಾಕ್ ಡೌನ್ ಆಗಿ ಬೇಸತ್ತಿದ್ದ ಮನೆ ಮಂದಿ ಒಂದೊಳ್ಳೆಯ ಮದುವೆ ಊಟದಷ್ಟು ರುಚಿ ಈ ಧಾರಾವಾಹಿಯಿಂದ ನಿರೀಕ್ಷಿಸಬಹುದು.

ಅರವಿಂದ್ ಕೌಶಿಕ್

Categories
ಸಿನಿ ಸುದ್ದಿ

ಅಪ್ಪು ʼಮಾರ್ಗʼದರ್ಶನ

ಆ ದಿನಗಳು ಖ್ಯಾತಿಯ ಚೇತನ್‌ ಅಭಿನಯದ ಹೊಸ ಚಿತ್ರ ಮಾರ್ಗ ಇತ್ತೀಚೆಗೆ ಮುಹೂರ್ತ ಕಂಡಿದೆ. ಚಿತ್ರತಂಡಕ್ಕೆ ಪುನೀತ್‌ ರಾಜಕುಮಾರ್‌ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಚೇತನ್‌ ಜೊತೆ ಅಪ್ಪು ಮಾತುಕತೆ ಜೋರಾಗಿಯೇ ನಡೆದಿದೆ. ಒಂದಷ್ಟು ಹೊಸ ಮಾರ್ಗದರ್ಶನ ಕೊಟ್ಟ ಪುನೀತ್,‌ ಚೇತನ್‌ ಹಾಗೂ ಇತರೆ ಕನ್ನಡ ನಟರ ಜೊತೆ ಅಪ್ತ ಮಾತುಕತೆ ನಡೆಸಿದರು. ಅಂದಿನ ಫೋಟೋ ಮಾತುಕತೆ…

Categories
ಗ್ಲಾಮರ್‌ ಕಾರ್ನರ್

ಖುಷ್‌ ಮೂಡಿನಲ್ಲಿ ಖುಷಿ…

 

ದಿಲ್‌ ದಿಯಾ…

Categories
ಗ್ಲಾಮರ್‌ ಕಾರ್ನರ್

ಶುಭನುಡಿ…

ಮ್ಯಾರೇಜ್‌ ಮೂಡ್ ನಲ್ಲಿ ಕರಾವಳಿ ಬೆಡಗಿ…

 

 

Categories
ಸಿನಿ ಸುದ್ದಿ

ಲಾಕ್‌ ಡೌನ್‌ ಟೈಮಲ್ಲಿ ‌ಅಜೇಯ್‌ ರಾವ್ ಮಾಡಿದ್ದೇನು ಗೊತ್ತಾ? ಒಂದೊಳ್ಳೆ ಕಥೆಯಾಯ್ತು, ನಿರ್ದೇಶನಕ್ಕೂ ಮನಸ್ಸಾಯ್ತು

 ಈ ಲಾಕ್ ಡೌನ್‌ ಸಮಯವನ್ನಂತೂ ಪ್ರತಿಯೊಬ್ಬರೂ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಅದರಲ್ಲೂ ಕನ್ನಡದ ನಟರ ಪೈಕಿ ಕೆಲವರು ಹಾಡು ಬರೆದರೆ, ಕೆಲವರು ಹಾಡು ಹಾಡಿದರು. ಇನ್ನೂ ಕೆಲವರು ಮನೆಯವರ ಜೊತೆ ಸಂತಸದಿಂದ ಕಾಲ ಕಳೆದರು. ಈಗ ನಟ ಅಜೇಯ್ ರಾವ್‌ ಅವರು ಈ ಸಮಯವನ್ನು ವ್ಯರ್ಥ ಮಾಡದೆ ಅವರೊಂದು ಕಥೆ ಹೆಣೆದಿದ್ದಾರೆ ಎಂಬುದು ವಿಶೇಷ.
ಹೌದು, ಅವರು ಲಾಕ್‌ ಡೌನ್‌ ಸಮಯದಲ್ಲಿ ಮನೆಯಲ್ಲಿದ್ದರು. ಅಮ್ಮ, ಪತ್ನಿ ಮತ್ತು ಮಗಳ ಜೊತೆ ಸಮಯ ಕಳೆಯುತ್ತಲೇ ಜೊತೆಯಲ್ಲೊಂದು ಒಳ್ಳೆಯ ಕಥೆ ರೆಡಿಮಾಡಿದ್ದಾರೆ. ಈಗಾಗಲೇ ಸಂಪೂರ್ಣ ಸ್ಕ್ರಿಪ್ಟ ಮುಗಿದಿದ್ದು, ಸಂಭಾಷಣೆ ಮಾತ್ರ ಬಾಕಿ ಉಳಿದಿದೆ. ಅಂತೂ ಅಜೇಯ್‌ ರಾವ್‌ ಒಂದು ಕಥೆ ಬರೆದಿದ್ದಾರೆ. ಅದೊಂದು ಹೊಸ ಬಗೆಯ ಕಥೆ. ಕಥೆಯೇ ಹೈಲೈಟ್.‌ ಮಾಸ್‌,ಕ್ಲಾಸ್‌,ಲವ್‌, ಎಮೋಷನಲ್‌, ಥ್ರಿಲ್ಲರ್‌ ಜೊತೆಯಲ್ಲಿ ಬೇರೆ ಹೊಸ ವಿಷಯವೂ ಇದೆ. ಯುನಿಕ್‌ ಅಗಿರುವಂತಹ ಕುತೂಹಲ ಕೆರಳಿಸುವಂತಹ ಕಥೆ ಇದಾಗಿದೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಕಥೆ ಮಾಡಿಕೊಂಡಿದ್ದಾರೆ. ಎಲ್ಲಾ ಸರಿ, ಅಜೇಯ್‌ ರಾವ್‌ ಮುಂದೆ ನಿರ್ದೇಶನ ಮಾಡಬಹುದಾ? ಗೊತ್ತಿಲ್ಲ. ಅದರೆ, ಅಜೇಯ್ ರಾವ್‌ ಕಥೆ ಆಗಿರುವುದರಿಂದ ನಿರ್ದೇಶನ ಮಾಡಿದರೂ ಅಚ್ಚರಿಯೇನಿಲ್ಲ. ಸದ್ಯಕ್ಕೆ ಅಜೇಯ್‌ ರಾವ್‌ ಕಥೆ ರೆಡಿಯಾಗಿದೆ. ಅವರ ಅಭಿನಯದ ಕೃಷ್ಣ ಟಾಕೀಸ್‌ ಮತ್ತು ಶೋಕಿವಾಲ ಮುಗಿದಿದೆ. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸ ಮುಗಿಸಿಕೊಂಡು ಇನ್ನೇನು ಸೆನ್ಸಾರ್‌ ಬಳಿಕ ಪ್ರೇಕ್ಷಕರ ಮುಂದೆ ಬರಬೇಕಿದೆ. ಅದು ಬಿಟ್ಟರೆ, ಗುರುದೇಶಪಾಂಡೆ ಅವರ ಜೊತೆಗೆ ಒಂದು ಸಿನಿಮಾ ಮಾಡಬೇಕಿದೆ. ಇನ್ನು ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಲ್ಲಿ ಇನ್ನೊಂದು ಸಿನಿಮಾ ಬಾಕಿ ಇದೆ.

Categories
ಸಿನಿ ಸುದ್ದಿ

ಸೆಪ್ಟೆಂಬರ್ ನಲ್ಲಿ ಥಿಯೇಟರ್ ಓಪನ್- ಸಿನಿ ಮಂದಿ ಮೊಗದಲ್ಲಿ ಮಂದಹಾಸ

ಕೇಂದ್ರ ಸರ್ಕಾರ ಸೆಪ್ಟೆಂಬರ್ ವೇಳೆಗೆ ಥಿಯೇಟರ್ ಶುರುವಿಗೆ ಸೂಚನೆ ಕೊಡುವ ಭರವಸೆ ಕೊಟ್ಟಿದೆ. ಹಾಗಾಗಿ ಸಿನಿಮಾ ರಂಗದಲ್ಲಿ ಮತ್ತೆ ಚೈತನ್ಯ ಮೂಡಿದೆ. ಈಗಾಗಲೇ ಕೆಲ ಸಿನಿಮಾಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

……….,…………………………

ಕೊರೊನಾ ಆವರಿಸಿದ್ದರಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿತ್ತು. ಕಳೆದ ಆರು ತಿಂಗಳಿಂದಲೂ ಸಿನಿಮಾ ರಂಗ ರಂಗು‌ ಕಳೆದುಕೊಂಡಿತ್ತು. ಈಗ ಚಿತ್ರಮಂದಿರಗಳು ಶುರುವಾಗುವ ಸೂಚನೆ ಕೊಟ್ಟಿವೆ. ಹೌದು, ಸೆಪ್ಟೆಂಬರ್ 15 ರ ನಂತರ ಥಿಯೇಟರ್ ಓಪನ್ ಆಗಲಿವೆ ಎನ್ನಲಾಗುತ್ತಿದೆ. ಫಿಲ್ಮ್ ಚೇಂಬರ್ ಕೂಡ ಕೇಂದ್ರ ಸರ್ಕಾರ ಹೇಳಿಕೆಯಿಂದ ಉತ್ಸಾಹದಲ್ಲಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ ವೇಳೆಗೆ ಥಿಯೇಟರ್ ಶುರುವಿಗೆ ಸೂಚನೆ ಕೊಡುವ ಭರವಸೆ ಕೊಟ್ಟಿದೆ. ಹಾಗಾಗಿ ಸಿನಿಮಾ ರಂಗದಲ್ಲಿ ಮತ್ತೆ ಚೈತನ್ಯ ಮೂಡಿದೆ. ಈಗಾಗಲೇ ಕೆಲ ಸಿನಿಮಾಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಥಿಯೇಟರ್ ಆರಂಭಗೊಳ್ಳುತ್ತಿದ್ದಂತೆಯೇ ಪ್ರೇಕ್ಷಕರಿಗೆ ದರ್ಶನ ನೀಡಲಿವೆ. ಕಿರುತೆರೆ ಕೂಡ ಚಿತ್ರೀಕರಣ ಶುರು ಮಾಡಿ ತಮ್ಮ ಪ್ರೇಕ್ಷಕ ವಲಯವನ್ನು ಖುಷಿಪಡಿಸುತ್ತಿದೆ. ಸೆಪ್ಟೆಂಬರ್ ನಲ್ಲಿ ಚಿತ್ರರಂಗ ಕೂಡ ತನ್ನ ಕಾರ್ಯ ಶುರು ಮಾಡಲಿದೆ.


 

Categories
ಸಿನಿ ಸುದ್ದಿ

ಅಪ್ಪು ಗಡ್ಡದ ಕಥೆ – ಪವರ್ ದಾಡಿ ಬಿಟ್ಟಿದ್ದು ಯಾಕೆ ಗೊತ್ತಾ?

ಪುನೀತ್ ರಾಜಕುಮಾರ್ ಅಂದಾಕ್ಷಣ ಎಲ್ಲರ ಕಣ್ಣ ಮುಂದೆ ಹಾದು ಹೋಗೋದು‌ ಸದಾ‌ ಹಸನ್ಮುಖಿ, ಪಾಸಿಟಿವ್ ವ್ತಕ್ತಿತ್ವ , ಯಾವಾಗಲೂ ನೀಟ್ ಶೇವ್ ಮಾಡಿದ ನಗು ಮುಖ. ಅಷ್ಟೇ ಅಲ್ಲ ಪ್ರೀತಿಯ ಮಾತುಕತೆ ಜೊತೆಗೆ ಅಪ್ಪುಗೆ. ಸದ್ಯ ಪುನೀತ್ ಗೆಟಪ್ ಬದಲಾಗಿದೆ. ಅವರೀಗ ಗಡ್ಡ ಬಿಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾ ಪಾತ್ರಕ್ಕಾಗಿ ಅವರು ದಾಡಿ ಬಿಟ್ಟಿದ್ದುಂಟು. ಆದರೆ, ಈಗ ಯಾವ ಚಿತ್ರದ ಚಿತ್ರೀಕರಣ ಯಾವುದೂ ಇಲ್ಲ. ಆದರೂ ಅಪ್ಪು ಹೀಗೆ ದಾಡಿ ಬಿಡೋಕೆ ಕಾರಣ ಬೇರೆ ಇದೆ. ಯುವರತ್ನ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ನಡುವೆ ಅವರು ಹೊಸ ಚಿತ್ರಗಳತ್ತವೂ ಗಮನ ಹರಿಸಿದ್ದಾರೆ. ಶಶಾಂಕ್ ಹಾಗೂ ಪವನ್ ಒಡೆಯರ್ ಜೊತೆಯಲ್ಲಿ ಸಿನಿಮಾ ಮಾಡಲಿದ್ದಾರೆ. ಅದಲ್ಲದೆ ಇನ್ನೂ ಕೈ ತುಂಬಾ ಚಿತ್ರಗಳಿವೆ. ಆ ಚಿತ್ರಗಳ ಪಾತ್ರಕ್ಕಾಗಿ ಅಪ್ಪು ಗಡ್ಡ ಬಿಟ್ಟಿರಬಹುದು. ಅದೇನೆ ಇರಲಿ, ಅಪ್ಪು ಫುಲ್ ಶೇವ್ ಮಾಡ್ಕೊಂಡು ಸದಾ ನಗುಮೊಗದಲ್ಲಿ ನೋಡೋದೆ ಚಂದ‌. ಅಪ್ಪು ಫ್ಯಾನ್ಸ್ ಮಾತ್ರ ಪವರ್ ಹೇಗಿದ್ರೂ ಸರಿ ಅವರ ಸಿನಿಮಾ ಮೂಲಕ ರಂಜಿಸುತ್ತಿರಬೇಕಷ್ಟೇ ಅಂತ ಯುವರತ್ನನ‌ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಗಡ್ಡ ಬಿಟ್ಟಿರೋದಕ್ಕೆ ಕಾರಣ ಇಷ್ಟರಲ್ಲೇ ಗೊತ್ತಾಗಲಿದೆ. ಆ‌ ಮೂಲಕ ಅವರು ಬಿಗ್ ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ. ಅಲ್ಲಿಯವರೆಗೆ ಕಾಯಬೇಕು

Categories
ಸಿನಿ ಸುದ್ದಿ

ಮಳೆಯ ಹಾಡಲ್ಲಿ ಮಿಂದೆದ್ದ ಸಲಗ

ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ಸಲಗ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ನಾಲ್ಕು ಕ್ವಾರ್ಟರ್ ಕುಡಿದ್ರು ಸ್ಟಡಿಯಾಗಿ ನಿಲ್ತಿದ್ದೆ ಸೂರಿಯಣ್ಣ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊದು ಮಳೆಯ ಹಾಡು ಹೊರ ಬಂದಿದೆ. ಮಳೆಯೇ ಮಳೆಯೇ ಲೊರಿಕಲ್ ಸಾಂಗ್ ರಿಲೀಸ್ ಆಗಿದ್ದು, ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ.

error: Content is protected !!