ತೆಲುಗು ನಟ ವಿಜಯ್‌ ರಂಗರಾಜು ವಿರುದ್ದ ಕಿಡಿ ಕಾರಿದ ಕಿಚ್ಚ

ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಇರಲಿ- ಸುದೀಪ್‌ ಖಡಕ್ ವಾರ್ನಿಂಗ್

-‌ವಿಷ್ಣುವರ್ಧನ್‌ ಬಗ್ಗೆ ಮಾತಾಡಿದ್ದಕ್ಕೆ ಕನ್ನಡಿಗರ ಆಕ್ರೋಶ

ವಾಣಿಜ್ಯ ಮಂಡಳಿಗೆ ಅಭಿಮಾನಿಗಳ ದೂರು

ತೆಲುಗು ನಟ ವಿಜಯರಂಗರಾಜು ಡಾ.ವಿಷ್ಣುವರ್ಧನ್‌ ಅವರ ಕುರಿತಂತೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಒಳಗಾಗಿದ್ದು, ಕನ್ನಡ ಚಿತ್ರರಂಗವನ್ನು ಕೆರಳಿಸಿದೆ. ಅಷ್ಟೇ ಅಲ್ಲ, ಕನ್ನಡ ಚಿತ್ರಂಗದ ಕಲಾವಿದರು, ತಾಂತ್ರಿಕವರ್ಗದವರು, ಅಪಾರ ಅಭಿಮಾನಿಗಳು ನಟ ವಿಜಯರಂಗರಾಜು ವಿರುದ್ಧ ಗುಡುಗಿದ್ದಾರೆ. ನಟರಾದ ಜಗ್ಗೇಶ್‌, ಪುನೀತ್‌ ರಾಜಕುಮಾರ್‌, ಸುದೀಪ್‌ ಸೇರಿದಂತೆ ಹಲವರು ಟ್ವೀಟ್‌ ಮಾಡಿ, ವಿಜಯ ರಂಗರಾಜು ಅವರ ವಿರುದ್ಧ ಕಿಡಿಕಾರಿದ್ದಾರೆ. ಹಲವರು ವಿಜಯರಂಗರಾಜು ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

ನಡೆದದ್ದೇನು?
ಹಲವು ವರ್ಷಗಳ ಹಿಂದೆ “ಮುತ್ತೈದೆ ಭಾಗ್ಯ” ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಆ ಚಿತ್ರದಲ್ಲಿ ಪ್ರಭಾಕರ್‌ ಪ್ರಮುಖ ಅಕರ್ಷಣೆಯಾಗಿದ್ದರು. ವಿಷ್ಣುವರ್ಧನ್‌ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ಒಂದು ಘಟನೆ ನಡೆದಿತ್ತು. ವಿಷ್ಣುವರ್ಧನ್‌ ಅವರು ನಟ ವಿಜಯರಂಗರಾಜು ಅವರನ್ನು ಹೊರಗೆ ಕಳುಹಿಸಿ ಎಂದಿದ್ದರು. ಯಾಕೆ ಹಾಗೆ ಹೇಳಿದ್ದರು ಎಂಬುದಕ್ಕೂ ಕಾರಣವಿತ್ತು. ಆಗಿನ ಘಟನೆ ಬಗ್ಗೆ ನಟ ವಿಜಯರಂಗರಾಜು ಅವರು, ಇತ್ತೀಚೆಗೆ ವಿಷ್ಣುವರ್ಧನ್‌ ಬಗ್ಗೆ ತುಂಬಾ ಕೆಟ್ಟದ್ದಾಗಿ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. ಆ ವಿರುದ್ಧ ಕನ್ನಡಿಗರು ಧ್ವನಿ ಎತ್ತಿದ್ದು, ಎಲ್ಲೆಡೆ, ಆಕ್ರೋಶ ವ್ಯಕ್ತವಾಗುತ್ತಿದೆ. ಡಾ.ವಿಷ್ಣುವರ್ಧನ್‌ ಅವರು ಆದರ್ಶ ವ್ಯಕ್ತಿ. ಅವರ ಬಗ್ಗೆ ಈವರೆಗೆ ಯಾರೂ ಮಾತಾಡಿಲ್ಲ. ಆದರೆ, ತೆಲುಗು ನಟ ಹಾಗೆಲ್ಲಾ ಮಾತಾಡಿದ್ದಾರೆ. ಇದು ಸಹಜವಾಗಿಯೇ ಕನ್ನಡ ಸ್ಟಾರ್‌ ನಟರಿಗೂ ನೋವಾಗಿದೆ. ಹಾಗಾಗಿ ಒಂದಷ್ಟು ಮಂದಿ ಟ್ವೀಟ್‌ ಮಾಡಿದರೆ, ಒಂದಷ್ಟು ಜನರು ವಿಡಿಯೋ ಮಾಡಿದ್ದಾರೆ. ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಜಯರಂಗರಾಜು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದಾರೆ.


ಅತ್ತ, ಸುದೀಪ್‌ ವಿಡಿಯೋ ಮೂಲಕ ವಿಜಯ್‌ ರಂಗರಾಜುಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಪುನೀತ್‌ ಕೂಡ ಟ್ವೀಟ್‌ ಮಾಡಿದ್ದು, “ಒಬ್ಬ ಕಲಾವಿದನಾಗಬೇಕಾದರೆ, ಅವನಿಗರಬೇಕಾದ ಮೊದಲ ಅರ್ಹತೆ ತನ್ನ ಸಹೋದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿ ತೋರುವುದು. ಯಾವುದೇ ಭಾಷೆ ನಟರಾದರೂ, ಗೌರವ ಮೊದಲು. ನಮ್ಮ ನಾಡಿನ ಮೇರು ನಟರಾದ ವಿಷ್ಣು ಸರ್‌ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಕಲಾವಿದ ಕ್ಷಮೆ ಕೇಳಿ ತಮ್ಮ ಮಾತನ್ನು ಹಿಂಪಡೆಯಬೇಕು. ಭಾರತೀಯ ಚಿತ್ರಂರಂಗ ನಮ್ಮ ಮನೆ. ಎಲ್ಲಾ ಕಲಾವಿದರು ಒಂದು ಕುಟುಂಬ ಕಲೆಗೆ, ಕಲಾವಿದರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಮೊದಲು ಮಾನವನಾಗು” ಎಂದು ಟ್ವೀಟ್‌ ಮಾಡಿದ್ದಾರೆ.

Related Posts

error: Content is protected !!