ರೋರಿಂಗ್‌ ಸ್ಟಾರ್‌ ಬರ್ತ್‌ಡೇಗೆ ಸ್ಪೆಷಲ್‌ ಗಿಫ್ಟ್‌ – ಡಿಸೆಂಬರ್‌ 17ಕ್ಕೆ ಮದಗಜ ಫಸ್ಟ್‌ ಲುಕ್‌ ಟೀಸರ್‌

ಅನೌನ್ಸ್‌ಮೆಂಟ್‌ ವಿಡಿಯೋದಲ್ಲಿ ಕೆರಳಿದ ಕುತೂಹಲ!

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹೌದು, “ಮದಗಜ” ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ. ಚಿತ್ರದ ಶೀರ್ಷಿಕೆಯಲ್ಲೇ ಒಂದು ಫೋರ್ಸ್‌ ಇದೆ. ಮೊದಲ ಪೋಸ್ಟರ್‌ ಕೂಡ ಅಷ್ಟೇ ಮಜವಾಗಿತ್ತು. ಒಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿರುವ ಈ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಡಿಸೆಂಬರ್‌ 17 ರಂದು ಶ್ರೀಮುರಳಿ ಅವರ ಹುಟ್ಟುಹಬ್ಬ. ಅವರ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಲಿದೆ.

ಈಗಾಗಲೇ ಫಸ್ಟ್‌ ಲುಕ್‌ ಟೀಸರ್‌ ಅನೌನ್ಸ್‌ಮೆಂಟ್‌ ವಿಡಿಯೋ ಆನಂದ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಒಂದು ಲಕ್ಷ ವೀಕ್ಷಣೆ ಪಡೆದಿದೆ. ಹೌದು, ಕೇವಲ ೨೧ ಸೆಕೆಂಡ್‌ನಷ್ಟಿರುವ ಆ ವಿಡಿಯೋ ನೋಡಿದರೆ, ಸಾಕಷ್ಟು ಕುತೂಹಲ ಮೂಡಿಸುವಂತಿದೆ. ಯಾವುದೇ ದೃಶ್ಯಗಳಿಲ್ಲದೆ, ಕೇವಲ ಹಿನ್ನೆಲೆ ಸಂಗೀತ ಇಟ್ಟುಕೊಂಡು ಹರಿದಾಡುವ ಸ್ಮೋಕ್‌ನಲ್ಲೇ ಹೊಸದ್ದೊಂದು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು.

ಉಮಾಪತಿ, ನಿರ್ಮಾಪಕ

ಅದನ್ನು ನೋಡಿದವರಿಗೆ ಇನ್ನಷ್ಟು ಹೊತ್ತು ಇರಬೇಕಿತ್ತು ಎನಿಸದೇ ಇರದು. ಆದರೆ, ಅದು ಕೇವಲ ಅನೌನ್ಸ್‌ಮೆಂಟ್‌ ವಿಡಿಯೋ ಆಗಿರುವುದರಿಂದ ಡಿಸೆಂಬರ್‌ ೧೭ಕ್ಕೆ ಪೂರ್ಣಪ್ರಮಾಣದ ಟೀಸರ್‌ ಹೊರಬರಲಿದೆ. ಅಂದು ರೋರಿಂಗ್‌ ಸ್ಟಾರ್‌ ಬರ್ತ್‌ಡೇ. ಹಾಗಾಗಿ ಶ್ರೀಮುರಳಿ ಅವರ ಅಭಿಮಾನಿಗಳಿಗೊಂದು ಸ್ಪೆಷಲ್‌ ಗಿಫ್ಟ್‌ ಕೊಡಲು ವಿಶೇಷ ತಯಾರಿ ಮಾಡಿಕೊಂಡಿದೆ ಚಿತ್ರತಂಡ.


ಅಂದಹಾಗೆ, ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್‌ ಗೌಡ ನಿರ್ಮಾಪಕರು. ಎಸ್.‌ ಮಹೇಶ್‌ ಕುಮಾರ್‌ ನಿರ್ದೇಶನವಿದ್ದು, ಭರ್ಜರಿಯಾಗಿಯೇ ಸಿನಿಮಾವನ್ನು ನಿರ್ದೇಶಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದ್ದು, ಮೂರನೇ ಹಂತದ ಚಿತ್ರೀಕರಣ ಬಿನ್ನಿಮಿಲ್‌ನಲ್ಲಿ ಸಖತ್‌ ಸೆಟ್‌ನಲ್ಲಿ ನಡೆಯುತ್ತಿದೆ. ಡಿಸೆಂಬರ್‌ ೧೭ರಂದು ಬೆಳಗ್ಗೆ ೯. ೯ ಕ್ಕೆ ಬಿಡುಗಡೆಯಾಗಲಿದೆ.

ಮಹೇಶ್‌ ಕುಮಾರ್‌, ನಿರ್ದೇಶಕ

Related Posts

error: Content is protected !!