ಈಗಾಗಲೇ ಸಾಕಷ್ಟು ಸೂಪರ್ ಹೀರೋ ಕಾನ್ಸೆಪ್ಟ್ ಸಿನಿಮಾಗಳು ಬಂದಿವೆ. ಆದರೆ, ಮಹಿಳಾ ಪ್ರಧಾನದ ಸೂಪರ್ ಹೀರೋ ಕಾನ್ಸೆಪ್ಟ್ ಚಿತ್ರ ಭಾರತದಲ್ಲಿ ಈವರೆಗೂ ಬಂದಿಲ್ಲ. “ಆನ” ಮೂಲಕ ನಟಿ ಅದಿತಿ ಪ್ರಭುದೇವ ಅವರು ಇಲ್ಲಿ ಮಹಿಳಾ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಹಿಂದೆ ಅದಿತಿ ಪ್ರಭುದೇವ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ, ಈ ರೀತಿಯ ಪಾತ್ರ ನಿರ್ವಹಿಸಿಲ್ಲ. “ಆನ” ಅವರಿಗೊಂದು ವಿಶೇಷ ಸಿನಿಮಾ ಎನ್ನುವುದಂತೂ ಹೌದು. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹೆಸರುಫಟ್ಟ ಬಳಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಅಲ್ಲೇ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಈಗಷ್ಟೇ ಡಬ್ಬಿಂಗ್ ಕೆಲಸ ಕೂಡ ಮುಕ್ತಾಯ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್ ವೇಳೆ ಚಿತ್ರವನ್ನು ಪ್ರೇಕ್ಷಕರ ಎದುರು ತರಲು ತಯಾರಿ ನಡೆಸಲಾಗುತ್ತಿದೆ.
ಈ ಚಿತ್ರಕ್ಕೆ ಮನೋಜ್ ಪಿ.ನಡುಲಮನೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಹಿಂದೆ ಹಲವು ಕಿರುಚಿತ್ರಗಳು ಹಾಗೂ ಟೆಲಿ ಸಿನಿಮಾ ನಿರ್ದೇಶಿಸಿ ಅನುಭವ ಇರುವ ಮನೋಜ್ ಅವರಿಗೆ ಇದು ಮೊದಲ ಸಿನಿಮಾ. ಯು.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂಜಾ ವಸಂತಕುಮಾರ್ ಈ
ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣವಿದೆ. ರಿತ್ವಿಕ್ ಮುರಳೀಧರನ್ ಅವರ ಸಂಗೀತ ನಿರ್ದೇಶನವಿದೆ. ವಿಜೇತ್ ಚಂದ್ರ ಸಂಕಲನ ಮಾಡುತ್ತಿದ್ದಾರೆ. ಚಿತ್ರದಲ್ಲಿ. ಸುನೀಲ್ ಪುರಾಣಿಕ್, ಚೇತನ್ ಗಂಧರ್ವ, ಸುನೀಲ್ ಕುಮಾರ್ ಡಿ.ಕೆ, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಂ, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜನ್, ಶಿವಮಂಜು ಸೇರಿದಂತೆ ಇತರರು ಇದ್ದಾರೆ.
ಈ ಹಿಂದೆ ನಟ ಶರಣ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಶರಣ್ ಅಮ್ಮಂದಿರ ಮಾತಿಗೆ ಶರಣ್ ಉತ್ತರಿಸದೆ, ಬರೀ ವಿಷಲ್ ಹಾಕುವ ಮೂಲಕ ಹೊಸದೊಂದು ಕುತೂಹಲ ಮೂಡಿಸಿದ್ದರು.
ಆಮೇಲೆ ಅದೊಂದು ಹೊಸ ಚಿತ್ರ ಅನ್ನೋದು ಗೊತ್ತಾಗಿತ್ತು.
ಅಂದಹಾಗೆ, ಜಡೇಶ್ ಹಂಪಿ ನಿರ್ದೇಶನದ ಆ ಚಿತ್ರಕ್ಕೆ ಶೀರ್ಷಿಕೆ ಇಟ್ಟಿರಲಿಲ್ಲ. ಈಗ ನಾಮಕರಣ ಮಾಡುವ ಸಂದರ್ಭ ಒದಗಿ ಬಂದಿದೆ.
ಹೌದು, ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಸೇರಿ ನಿರ್ಮಾಣ ಮಾಡುತ್ತಿರುವ ಆ ಹೊಸ ಚಿತ್ರದ ಟೈಟಲ್ ಡಿಸೆಂಬರ್ 21ರಂದು ಅನಾವರಣಗೊಳ್ಳಲಿದೆ.
ಸದ್ಯಕ್ಕೆ ಶೀರ್ಷಿಕೆ ಅನಾವರಣ ಮಾಡಲಿರುವ ಚಿತ್ರತಂಡ ಹಂತ ಹಂತವಾಗಿ ಆ ಸಿನ್ಮಾದ ತಂತ್ರಜ್ಞರು, ಕಲಾವಿದರಾಹಿತಿ ಹೊರ ಹಾಕಲಿದೆ.
ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್” ಬಹುದೊಡ್ಡ ಬಜೆಟ್‌ನ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತು. ಆ ಸಿನಿಮಾ ದೇಶ, ವಿದೇಶಗಳಲ್ಲೂ ಭಾರೀ ಸದ್ದು ಮಾಡಿತು ಅನ್ನೋದು ಗೊತ್ತು. ಈಗ “ಕೆಜಿಎಫ್ ಚಾಪ್ಟರ್ ೨” ಕೂಡ ದೊಡ್ಡ ಬಜೆಟ್ ಸಿನಿಮಾ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ದೊಡ್ಡ ಬಜೆಟ್ ಸಿನಿಮಾ ಅನೌನ್ಸ್ ಮಾಡಿದ್ದೂ ಸಹ ದೊಡ್ಡ ಸುದ್ದಿಯಾಗಿದೆ. ಹೌದು, ತೆಲುಗು ಸ್ಟಾರ್ ನಟ ಪ್ರಭಾಸ್ ಅವರಿಗೆ “ಸಲಾರ್” ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿತ್ತು. ಆ ಚಿತ್ರಕ್ಕೆ “ಕೆಜಿಎಫ್” ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಕ ಎನ್ನುವುದನ್ನೂ ಹೇಳಿತ್ತು. ಈಗ ಜೋರಾಗಿ ಹರಿದಾಡುತ್ತಿರುವ ಸುದ್ದಿ ಅಂದರೆ, “ಸಲಾರ್” ಚಿತ್ರದ ನಟನೆಗಾಗಿ ಪ್ರಭಾಸ್ ಅವರಿಗೆ ಹೊಂಬಾಳೆ ಫಿಲ್ಮ್ಸ್ ಕೊಟ್ಟಿರುವ ಸಂಭಾವನೆ ಕುರಿತು. ಗಾಂಧಿನಗರದ ಮೂಲಗಳ ಪ್ರಕಾರ, ಪ್ರಭಾಸ್ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗುತ್ತಿದೆ ಎಂಬುದು ದೊಡ್ಡ ಸುದ್ದಿ.
ಇನ್ನು, ಈ ಚಿತ್ರವನ್ನು ಸುಮಾರು ೫೦೦ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅದೇನೆ ಇರಲಿ, “ಕೆಜಿಎಫ್” ಬಳಿಕ ಹೊಂಬಾಳೆ ಫಿಲ್ಮ್ಸ್ ಕೈಗೆತ್ತಿಕೊಂಡ ಅದ್ಧೂರಿ ಸಿನಿಮಾ “ಸಲಾರ್”. “ಬಾಹುಬಲಿ” ಖ್ಯಾತಿಯ ಪ್ರಭಾಸ್ ಈ ಹಿಂದೆ ಹಿಂದಿಯಲ್ಲಿ “ಸಾಹೋ” ಚಿತ್ರ ಮಾಡಿದ್ದರು. ಆ ಚಿತ್ರಕ್ಕೂ ಅವರಿಗೆ ೧೦೦ ಕೋಟಿ ಸಂಭಾವನೆ ಕೊಡಲಾಗಿತ್ತು ಎಂಬ ಸುದ್ದಿ ಇತ್ತು. ಅದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ, ಈಗ ಹೀಗೊಂದು ಸುದ್ದಿ ಗಾಂಧಿನಗರದಲ್ಲೂ ಜೋರಾಗಿ ಹರಿದಾಡುತ್ತಿದೆ. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್ ಶ್ರೀಮುರಳಿ ಅವರಿಗೆ “ಬಘೀರ” ಸಿನಿಮಾವನ್ನು ಅನೌನ್ಸ್ ಮಾಡಿದೆ. ಈ ಚಿತ್ರ ಏಪ್ರಿಲ್ ವೇಳೆಗೆ ಶುರುವಾಗಬಹುದು.
ಈ ಎಲ್ಲಾ ಬೆಳವಣಿಗೆಗಳ ಸುದ್ದಿ ಕೇಳುತ್ತಿದ್ದರೆ, ಕನ್ನಡ ಚಿತ್ರರಂಗ ಇನ್ನಷ್ಟು ಮಟ್ಟಕ್ಕೆ ಬೆಳವಣಿಗೆಯಲ್ಲಿದೆ ಎಂಬುದು ಗೊತ್ತಾಗುತ್ತದೆ. ಒಂದಂತೂ ಸತ್ಯ, ಹೊಂಬಾಳೆ ಫಿಲ್ಮ್ಸ್ ಮಾಡುವ ಚಿತ್ರಗಳಲ್ಲಿ ಅದ್ಧೂರಿತನಕ್ಕೇನೂ ಕೊರತೆ ಇರೋದಿಲ್ಲ.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹೊಸಬರ ಆಲ್ಬಂ ಸಾಂಗ್ ಹೊರಬಂದಿವೆ. ಇದಷ್ಟೇ ಅಲ್ಲ, ಬಹಳಷ್ಟು ಯುವಕರು ಹಿಪ್ಪಪ್ ಸಾಂಗ್, ರ್ಯಾಪ್ ಸಾಂಗ್‌ಗಳನ್ನೂ ಬಿಡುಗಡೆ ಮಾಡುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಸಾಂಗ್ ಕಂಪೋಸ್ ಮಾಡಿ, ಅದಕ್ಕೊಂದು ಚಂದದ ನೃತ್ಯ ನಿರ್ದೇಶನ ಮಾಡಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಅಂತಹ ಪ್ಯಾಷನ್ ಇರೋ ಡ್ಯಾನ್ಸರ್ಸ್ ಸಾಲಿಗೆ ದಾವಣಗೆರೆ ಹುಡುಗರೂ ಸೇರಿದ್ದಾರೆ ಅನ್ನೋದೇ ವಿಶೇಷ.
ಹೇಳಿ ಕೇಳಿ ದಾವಣಗೆರೆ ಅಂದಾಕ್ಷಣ ನೆನಪಾಗೋದೇ ವಿದ್ಯಾನಗರಿ ಅನ್ನೋದು. ಅಲ್ಲಿ ವಿದ್ಯೆಯ ಜೊತೆಗೆ ಕಲೆಗೂ ಸಾಕಷ್ಟು ನಂಟು ಇದೆ. ರಂಗಭೂಮಿಯ ಅನೇಕ ಕಲಾವಿದರು ಬೀಡುಬಿಟ್ಟಿರುವ ನಗರವದು. ವಾಣಿಜ್ಯ ನಗರಿ ಎಂದೇ ಕರೆಸಿಕೊಳ್ಳುವ ದಾವಣಗೆರೆ ಮೊದಲಿನಿಂದಲೂ ಎಲ್ಲಾ ಪ್ರಾಕಾರಗಳಲ್ಲೂ ಸೈ ಎನಿಸಿಕೊಂಡಿದೆ. ಅಲ್ಲಿ, ಲಲಿತಕಲೆ, ನಾಟಕ, ಸಾಹಿತ್ಯ, ಕಲೆ, ಕ್ರೀಡೆ, ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಕಲೆಯನ್ನು ಹೊಂದಿರುವ ನೆಲವದು. ಈಗಾಗಲೇ ದಾವಣಗೆರೆ ಮಂದಿ ಈ ಕಲಾಕ್ಷೇತ್ರದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದುಂಟು. ಈಗ ಅಲ್ಲೊಂದು ಯುವಕರ ಗುಂಪು ರ್ಯಾಪ್ ಸಾಂಗ್‌ವೊಂದಕ್ಕೆ ಹಿಪ್ಪಪ್ ಸ್ಟೆಪ್ ಹಾಕುವ ಮೂಲಕ ಜೋರು ಸುದ್ದಿ ಮಾಡುತ್ತಿದೆ. ಅದೇ ಈ ಹೊತ್ತಿನ ವಿಶೇಷ.
ದಾವಣಗೆರೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದಲೂ ನಡೆಯುತ್ತಿರುವ ಡಿ-ವೈರಸ್ ಸ್ಟನ್ನರ್ಸ್ ಎಂಬ ಹೆಸರಿನ ಡ್ಯಾನ್ಸ್ ಶಾಲೆಯ ಹುಡುಗರು ಸೇರಿಕೊಂಡು “ಸುಮ್ ಸುಮ್ನೆ..” ಎಂಬ ಅಫಿಶಿಯಲ್ ಕನ್ನಡ ರ್ಯಾಪ್ ಡ್ಯಾನ್ಸ್ ಕವರ್” ಸಾಂಗ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಸುಮಾರು ೩.೨೦ ನಿಮಿಷ ಅವಧಿಯ ಈ ಹಾಡು “ಡಿ-ವೈರಸ್ ಸ್ಟನ್ನರ್ಸ್ ಡ್ಯಾನ್ಸ್ ಅಕಾಡೆಮಿ” ಹೆಸರಿನ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಗಂಟೆಗಳಲ್ಲೇ ಒಳ್ಳೆಯ ಮೆಚ್ಚುಗೆಗೂ ಪಾತ್ರವಾಗಿದೆ.
ಅಂದಹಾಗೆ, ಮಾರ್ಟಿನ್ ಯೊ, ಲೇಜಿ, ಬಿ ಅವರು ಬರೆದಿರುವ “ರ್ಯಾಪ್ ಅಂದ್ರೆ ಹೇಳೋದಲ್ಲ ಸುಮ್‌ಸುಮ್ನೆ… ಎಲ್ಲ ಗೊತ್ತು ಅನ್ನಬೇಡಿ ಸುಮ್ ಸುಮ್ನೆ.. ಹಾಡಲ್ಲಿ ಒಂದೊಳ್ಳೆಯ ತಾತ್ಪರ್ಯವಿದೆ. ಈಗಿನ ಯೂಥ್‌ಗೆ ಹೇಳುವಂತಹ ಸಂದೇಶವೂ ಇದೆ. ವಾಸ್ತವತೆಯ ಚಿತ್ರಣವೂ ಇದೆ. ಈ ಹಾಡಿಗೆ ಆನಂದ್ ಡಿವಿಎಸ್ ನೃತ್ಯ ನಿರ್ದೇಶನ ಮಾಡಿದ್ದಾರೆ. ತಮ್ಮ ಡ್ಯಾನ್ಸ್ ಶಾಲೆಯ ಸ್ಟುಡೆಂಟ್ ಇಟ್ಟುಕೊಂಡೇ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ಈ ಹುಡುಗರ ರ್ಯಾಪ್ ಸಾಂಗ್ ಸ್ಟೆಪ್‌ಗೆ ವಿಜಯಕುಮಾರ್ ಜೆ.ಎಸ್. ಅವರು ಕ್ಯಾಮೆರಾ ಹಿಡಿದಿದ್ದಾರೆ. ಓಂಕಾರ್ ಅವರ ಸಂಕಲನವಿದೆ.
ಗೆಳೆಯರ ಪ್ರೀತಿ ಗೀತಿ ಇತ್ಯಾದಿ…
ಇಷ್ಟಕ್ಕೂ ಇಂಥದ್ದೊಂದು ರ್ಯಾಪ್ ಸಾಂಗ್ ಮಾಡೋಕೆ ಕಾರಣ, ಗೆಳೆತನ. ಆನಂದ್ ಡಿವಿಎಸ್, ವಿಜಯಕುಮಾರ್ ಗೆಳೆಯರು. ಆ ಗೆಳೆತನ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಇನ್ನು, ಕೋರಿಯೋಗ್ರಾಫರ್ ಆನಂದ್ ಡಿವಿಎಸ್ ಕುರಿತು ಹೇಳುವುದಾದರೆ, ಆನಂದ್ ಒಬ್ಬ ಪ್ರೊಫೆಷನಲ್ ಡ್ಯಾನ್ಸರ್. ಅಷ್ಟೇ ಅಲ್ಲ, ಡ್ಯಾನ್ಸನ್ನೇ ಬದುಕನ್ನಾಗಿಸಿಕೊಂಡಿದ್ದಾರೆ. ಇವರ ತಂದೆ ಆಟೋ ಓಡಿಸುತ್ತಿದ್ದಾರೆ. ಮಗನಿಗೆ ಡ್ಯಾನ್ಸ್ ಮೇಲಿರುವ ಪ್ರೀತಿ ಕಂಡು ಅವನಿಷ್ಟಕ್ಕೆ ಬಿಟ್ಟು ಬಿಟ್ಟಿದ್ದಾರೆ. ಸದಾ ಡ್ಯಾನ್ಸ್ ಮೇಲೆ ಪ್ರೀತಿ ಇಟ್ಟುಕೊಂಡಿರುವ ಆನಂದ್, ಈಗಾಗಲೇ ದಾವಣಗೆರೆ ಮಟ್ಟಿಗೆ ಸಾಕಷ್ಟು ಗುರುತಿಸಿಕೊಂಡಿದ್ದಾರೆ.
ಅಪ್ಪಟ ಕನ್ನಡಿಗನಾದರೂ ತೆಲುಗಿನ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಡಿ ಜೋಡಿ ರಿಯಾಲಿಟಿ ಶೋನಲ್ಲಿ ಅಸಿಸ್ಟೆಂಟ್ ಕೋರಿಯಾಗ್ರಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವ ಮಹಾದಾಸೆ ಹೊಂದಿದ್ದಾರೆ. ಇತ್ತೀಚೆಗೆ ವಾಹಿನಿಯೊಂದರ ಡ್ಯಾನ್ಸ್ ಆಡಿಷನ್‌ನಲ್ಲೂ ಭಾಗವಹಿಸಿ ಗಮನಸೆಳೆದಿದ್ದಾರೆ. ಇನ್ನಷ್ಟೇ ವಾಹಿನಿಯಿಂದ ಕರೆ ಬರುವುದನ್ನು ನಿರೀಕ್ಷೆಯಲ್ಲಿದ್ದಾರೆ.
ಡ್ಯಾನ್ಸ್ ಪ್ರಿಯರಿಗೆ ಉಚಿತ ತರಬೇತಿ
ಈ ನಡುವೆ ದಾವಣಗೆರೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ಶುರುವಾದ “ಡಿ-ವೈರಸ್ ಸ್ಟನ್ನರ್ಸ್ ಡ್ಯಾನ್ಸ್ ಅಕಾಡೆಮಿ”ಯಲ್ಲಿ ಕೋರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಡ್ಯಾನ್ಸ್ ಶಾಲೆ ಹುಟ್ಟು ಹಾಕಿದ್ದು, ದಯಾನಂದ್ ಎಸ್.ನಾಯಕ ಇವರು ಈ ಡ್ಯಾನ್ಸ್ ಶಾಲೆಯ ಮಾಸ್ಟರ್. ಸದ್ಯ ಬೆಂಗಳೂರಲ್ಲಿ ನೆಲೆಸಿರುವ ದಯಾನಂದ್ ಅವರು, ಆನಂದ್ ಡಿವಿಎಸ್ ಅವರಿಗೆ ಆ ಡ್ಯಾನ್ಸ್ ಶಾಲೆ ಒಪ್ಪಿಸಿದ್ದಾರೆ.
ಆನಂದ್ ಕೂಡ ಮಧ್ಯಮ ವರ್ಗದ ಹುಡುಗನಾಗಿದ್ದರಿಂದ ಡ್ಯಾನ್ಸ್ ಮೇಲೆ ಪ್ರೀತಿ ಇರುವ, ಶಾಲೆಗೆ ಶುಲ್ಕ ಕಟ್ಟಲು ಸಾಧ್ಯವಾಗದ ಹುಡುಗರಿಗೆ ಉಚಿತವಾಗಿಯೇ ಡ್ಯಾನ್ಸ್ ಕಲಿಕೆಯ ತರಬೇತಿ ಕೊಡುತ್ತಿದ್ದಾರೆ. ಅವರನ್ನೇ ಇಟ್ಟುಕೊಂಡು ಈಗ “ಸುಮ್ ಸುಮ್ನೆ” ಎಂಬ ರ್ಯಾಪ್ ಸಾಂಗ್ ಮಾಡಿದ್ದಾರೆ.
ಈ ಸಾಂಗ್ ಸ್ಪೆಷಾಲಿಟಿ ಅಂದರೆ, ಸಾಮಾನ್ಯವಾಗಿ ಈ ರ್ಯಾಪ್ ಸಾಂಗ್‌ನಲ್ಲಿ ಡ್ಯಾನ್ಸ್ ಕಮ್ಮಿ. ಬರೀ ಕೈ ಮೂವ್‌ಮೆಂಟ್ ಇರುತ್ತೆ. ಈ ಹಾಡಿಗೆ ಆನಂದ್ ತಮ್ಮ ತಂಡ ಕಟ್ಟಿಕೊಂಡು ಹಿಪ್ಪಪ್ ಸ್ಟೆಪ್ ಹಾಕಿದ್ದಾರೆ. ಈ ಹಾಡಲ್ಲಿ ರಜತ್ ತೆರದಾಳ್, ಪ್ರೀತಮ್, ಭರತ್, ಗುಣಶ್ರೀ, ಸೌಮ್ಯ ಕಾಣಿಸಿಕೊಂಡಿದ್ದು, ಹಾಡಿಗೆ ತಕ್ಕಂತೆ ಕಲರ್‌ಫುಲ್ ಸ್ಟೆಪ್ ಹಾಕಿದ್ದಾರೆ. ಅದೇನೆ ಇರಲಿ, ದಾವಣಗೆರೆ ಹುಡುಗರ ಈ ರ್ಯಾಪ್ ಸಾಂಗ್ ನೋಡುವುದರ ಜೊತೆಗೆ ಒಂದು ಮೆಚ್ಚುಗೆ ಇರಲಿ.
– ಈಗ ಎಲ್ಲೆಡೆ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ್ದೇ ಸುದ್ದಿ. ಅದಕ್ಕೆ ಕಾರಣ, ಅವರ ಹುಟ್ಟು ಹಬ್ಬಕ್ಕೆ ಬಿಡುಗಡೆಯಾದ ಸಖತ್ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಇನ್ನು, ಕೇವಲ 24 ಗಂಟೆಯಲ್ಲಿ 30 ಲಕ್ಷ (ಮೂರು ಮಿಲಿಯನ್) ಜನರಿಂದ ರಿಯಲ್ ಟೈಮ್‌ನಲ್ಲಿ ವೀಕ್ಷಣೆ ಪಡೆದು, ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. ಸಹಜವಾಗಿಯೇ ಈ ಬೆಳವಣಿಗೆ ಚಿತ್ರತಂಡಕ್ಕೆ ಖುಷಿ ತಂದಿದೆ. ೨೪ ಗಂಟೆಯಲ್ಲೆ ವೇಗವಾಗಿ ಅತೀ ಹೆಚ್ಚು ವೀಕ್ಷಣೆ ಕಂಡಿರುವ ಕನ್ನಡದ ಮೊದಲ ಫಸ್ಟ್ ಲುಕ್ ಟೀಸರ್ ಎಂಬ ಹೆಗ್ಗಳಿಕೆಗೂ ಈ ಚಿತ್ರದ ಟೀಸರ್ ಪಾತ್ರವಾಗಿದೆ.
ನ್ನು, “ಉಗ್ರಂ” , “ಕೆಜಿಎಫ್” ಖ್ಯಾತಿಯ ಪ್ರಶಾಂತ್ ನೀಲ್ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ, ಶುಭಹಾರೈಸಿದ್ದರು. ಶ್ರೀಮುರಳಿ ಅಭಿನಯದ “ಮದಗಜ” ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶಕರು. ಉಮಾಪತಿ ನಿರ್ಮಾಣವಿದೆ. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ.
ಶ್ರೀಮುರಳಿ ಅವರ ಹುಟ್ಟುಹಬ್ಬದ ದಿನ ಈ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಕೂಡ ಶ್ರೀಮುರಳಿ ಅವರಿಗೆ ಹೊಸ ಚಿತ್ರವನ್ನು ಅನೌನ್ಸ್ ಮಾಡಿದೆ. “ಬಘೀರ” ಸಿನಿಮಾ ಅನೌನ್ಸ್ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಕಾಣಿಕೆ ನೀಡಿದೆ. ಈ ಚಿತ್ರಕ್ಕೆ ಡಾ.ಸೂರಿ ನಿರ್ದೇಶಕರು. ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬಜೆಟ್‌ನ ಸಿನಿಮಾ ಆಗಿದ್ದು, ಈಗಾಗಲೇ ಬಿಡುಗಡೆ ಮಾಡಿರುವ “ಬಘೀರ” ಪೋಸ್ಟರ್ ಕೂಡ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಒಂದಷ್ಟ ಕುತೂಹಲವೂ ಇದೆ.
ಕನ್ನಡದ ಯಂಗೆಸ್ಟ್ ನಿರ್ದೇಶಕ ಅಂತಲೇ ಚಿತ್ರರಂಗಕ್ಕೆ ಪರಿಚಯವಾದ ಗುರುದತ್ ಗಾಣಿಗ, “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರದ ಮೂಲಕ ನಿರ್ದೇಶಕರಾದವರು. ಆ ಸಿನಿಮಾ ಬಳಿಕ ಅವರು ಮುಂದೆ ಯಾರ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಗೊಂದಲವಿತ್ತು. ಆ ಗೊಂದಲಕ್ಕೀಗ ತೆರೆಬಿದ್ದಿದೆ. ಹೌದು, ಗುರುದತ್ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅಭಿಷೇಕ್ ಅಂಬರೀಶ್ ಜೊತೆ ಮಾಡಲಿದ್ದಾರೆ ಎಂದು ಜೋರು ಸುದ್ದಿಯಾಗಿತ್ತು. ಆದರೆ, ಆ ಚಿತ್ರದ ಬಗ್ಗೆ ಎಲ್ಲೂ ಅಪ್‌ಡೇಟ್ ಸಿಗಲಿಲ್ಲ. ಈಗ ಗುರುದತ್ ಗಾಣಿಗ ತಮ್ಮ ಎರಡನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ಹೌದು, ಈಗ ಎರಡನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿರುವ ಅವರು, ಸದ್ದಿಲ್ಲದೆಯೇ ಹೊಸ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸವನ್ನು ಮುಗಿಸಿದ್ದಾರೆ. ವಿಶೇಷ ಅಂದರೆ, ಗುರುದತ್ ಗಾಣಿಗ ತಮ್ಮ ಎರಡನೇ ನಿರ್ದೇಶನದ ಸಿನಿಮಾಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಸ್ಕ್ರಿಪ್ಟ್ ವರ್ಕ್ ಮುಗಿದಿದೆ. ಆದರೆ ಇನ್ನೂ, ಆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಜನವರಿ ಸಂಕ್ರಾಂತಿ ವೇಳೆಗೆ ಚಿತ್ರತಂಡ ಫಸ್ಟ್ ಲುಕ್ ಲಾಂಚ್ ಮಾಡುವುದರ ಜೊತೆಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು, ಈ ಚಿತ್ರವನ್ನು ಬೆಂಗಳೂರು ಕುಮಾರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಮಾನವ ಕಳ್ಳಸಾಗಣೆ ಕುರಿತಾದ ಕಥೆಯಾಗಿದ್ದು, ಸಾಕಷ್ಟು ಥ್ರಿಲ್ಲರ್ ಅಂಶಗಳು ಇಲ್ಲಿರಲಿವೆ. “ಸಿನಿಲಹರಿ” ಜೊತೆ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ, “ಪ್ರಜ್ವಲ್ ದೇವರಾಜ್ ಅವರಿಗೆ ಈ ಚಿತ್ರ ಬೇರೆಯದ್ದೇ ಇಮೇಜ್ ತಂದುಕೊಡುವ ವಿಶ್ವಾಸವಿದೆ. ಅವರ ಕೆರಿಯರ್‌ನಲ್ಲೇ ಇದೊಂದು ನೆಕ್ಸ್ಟ್ ಲೆವೆಲ್‌ಗೆ ಕರೆದುಕೊಂಡು ಹೋಗುವ ಸಿನಿಮಾ ಎಂಬ ಗ್ಯಾರಂಟಿ ಕೊಡುತ್ತೇನೆ.
ಪ್ರಜ್ವಲ್ ದೇವರಾಜ್ ಅವರು ಕೂಡ ಕಥೆ ಹಾಗೂ ಪಾತ್ರದ ಬಗ್ಗೆ ಕೇಳಿ ತುಂಬಾನೇ ಥ್ರಿಲ್ ಆಗಿದ್ದಾರೆ. ನಿರ್ಮಾಪಕ ಕುಮಾರ್ ಅವರು, ಕಥೆಗೆ ತಕ್ಕಂತೆ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಗುಣಮಟ್ಟದ ಸಿನಿಮಾ ಕೊಡುವ ಉದ್ದೇಶವಿದೆ. ಚಿತ್ರಕ್ಕೆ “ಮುಂದಿನ ನಿಲ್ದಾಣ” ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ಅಭಿ ಇಲ್ಲಿ ಕ್ಯಾಮೆರಾ ಹಿಡಿಯಲಿದ್ದಾರೆ. ಸಂಗೀತ ನಿರ್ದೇಶಕರ ಜೊತೆ ಮಾತುಕತೆ ನಡೆಯುತ್ತಿದೆ. ಉಳಿದಂತೆ ಚಿತ್ರದಲ್ಲಿ ದೇವರಾಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಹೀರೋ ಒಬ್ಬರು, ಖಳನಟರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅವರು ಕಥೆ ಕೇಳಿ ಈಗಾಗಲೇ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದೊಂದು ಮೇಜರ್ ಪಾತ್ರ. ಉಳಿದಂತೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದೂ ಸ್ಟಾರ್ ನಟಿಯರ ಜೊತೆಯೇ ಚರ್ಚೆ ಆಗುತ್ತಿದೆʼ ಎಂದಷ್ಟೇ ಹೇಳುವ ಗುರುದತ್ ಗಾಣಿಗ, ಉಳಿದ ವಿಷಯವನ್ನು ಸಂಕ್ರಾಂತಿ ಸಮಯದಲ್ಲಿ ಹಂಚಿಕೊಳ್ಳುವುದಾಗಿ ಹೇಳುತ್ತಾರೆ.
ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್ ಡಿಸೆಂಬರ್ ೧೭ರಂದು ಹೊಸ ಸಿನಿಮಾ ಅನೌನ್ಸ್ ಮಾಡುವುದಾಗಿ ತಮ್ಮ ಟ್ವೀಟ್ ಮೂಲಕ ಹೇಳಿಕೊಂಡಿತ್ತು. ಹೊಸ ಚಿತ್ರದ ಘೋಷಣೆ ಮಾಡುವ ಸುದ್ದಿ ಸಾಕಷ್ಟು ಕುತೂಹಲವೂ ಮೂಡಿಸಿತ್ತು. ಅವರ ಹೊಸ ಸಿನಿಮಾ ಅನೌನ್ಸ್ ಕುರಿತಂತೆ “ಸಿನಿಲಹರಿ” ಈ ಹಿಂದೆಯೇ ಒಂದು ಸುದ್ದಿಯನ್ನು ಪೋಸ್ಟ್ ಮಾಡಿತ್ತು. ಡಿಸೆಂಬರ್ 17ರಂದು ಅನೌನ್ಸ್ ಮಾಡಲು ಕಾರಣ, ಅಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಹುಟ್ಟುಹಬ್ಬ. ಹಾಗಾಗಿ, ಅವರ ಹೊಸ ಚಿತ್ರವನ್ನು ಅನೌನ್ಸ್ ಮಾಡಬಹುದು ಎಂದು ಹೇಳಿತ್ತು. ಈಗ ಆ ಸುದ್ದಿ ನಿಜವಾಗಿದೆ. ಹೌದು, ಶ್ರೀಮುರಳಿ ಅವರಿಗೆ ಹೊಂಬಾಳೆ ಫಿಲ್ಮ್ಸ್ “ಬಘೀರ” ಎಂಬ ಸಿನಿಮಾವನ್ನು ಅನೌನ್ಸ್ ಮಾಡಿದೆ.
ಹೌದು, ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್ ತೆಲುಗು ಸ್ಟಾರ್ ನಟ ಪ್ರಭಾಸ್ ಅಭಿನಯದ “ಸಲಾರ್” ಸಿನಿಮಾ ನಿರ್ಮಿಸುವ ಕುರಿತು ಅನೌನ್ಸ್ ಮಾಡಿತ್ತು. ಆ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಕ ಎಂಬುದನ್ನೂ ಹೇಳಿತ್ತು. ಅದರ ಬೆನ್ನೆಲ್ಲೇ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಅನೌನ್ಸ್ ಮಾಡುವುದಾಗಿ ಹೇಳಿಕೊಂಡ ವಿಷಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಹೊಂಬಾಳೆ ಫಿಲ್ಮ್ಸ್ ಶ್ರೀಮುರಳಿ ಅವರಿಗೆ “ಬಘೀರ” ಘೋಷಣೆ ಮಾಡಿದೆ.
ಈ ಚಿತ್ರವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಅವರ ಕಥೆ ಇದಾಗಿದ್ದು, ವಿಜಯ್ ಕಿರಗಂದೂರು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ, “ಸಿನಿಲಹರಿ” ಕೂಡ ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ತ್ರಿಬಲ್ ಧಮಾಕ ಶೀರ್ಷಿಕೆಯಡಿ ಸುದ್ದಿಯೊಂದನ್ನು ಪೋಸ್ಟ್ ಮಾಡಿತ್ತು. ಆ ಸುದ್ದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈಗ ಹೊಂಬಾಳೆ ಫಿಲ್ಮ್ಸ್ ಹೊಸ ಚಿತ್ರ ಅನೌನ್ಸ್ ಮಾಡಿದೆ. ಅಲ್ಲದೆ, “ಜಂಗಲ್ ಬುಕ್”ನ ವಿಶೇಷ ಪಾತ್ರವಾಗಿದ್ದ ಬಘೀರ ಪಾತ್ರದ ಹೆಸರೇ ಈಗ ಶ್ರೀಮುರಳಿ ಅವರ ಚಿತ್ರಕ್ಕೂ ಇಡಲಾಗಿದೆ. ಇದೊಂದು ಭಾರೀ ನಿರೀಕ್ಷೆ ಹುಟ್ಟಿಸಿರುವ ಶೀರ್ಷಿಕೆಯಾಗಿದೆ. ಈಗ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದು, ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.
“ಈ ಪಾಪದ ಪ್ರಪಂಚದಲ್ಲಿ ನಮ್ ಪ್ರಯಾಣ… ಕೊಚ್ಚೆಯಲ್ಲಿ ಹವಾಯಿ ಚಪ್ಪಲಿ ಹಾಕ್ಕಂಡ್ ನಡೆದಂಗೆ. ನಾವ್ ಸರಿಯಾಗ್ ನಡೆದ್ರೂ, ಅದು ನಮ್ಮೇಲೆ ಹಾರದೇ ಇರಲ್ಲ…”
ಪಂದ್ಯ ಗೆಲ್ಲಬೇಕು ಅನ್ನೋನು ಪಾಯಿಂಟ್‌ಗೋಸ್ಕರ ಹೊಡಿತಾನೆ. ಪಕ್ಕಾ ಗೆಲ್ಲಬೇಕು ಅನ್ನೋನು ಪಾಯಿಂಟಲ್ಲೇ ಹೊಡಿತಾನೆ..” ಎಂಬ ಮಾಸ್ ಡೈಲಾಗ್ ಇನ್ನಷ್ಟು ಕುತೂಹಲ ಕೆರಳಿಸಿರುವುದಂತೂ ಸುಳ್ಳಲ್ಲ…
-ಇದು ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ “ಮದಗಜ” ಚಿತ್ರದೊಳಗಿರುವ ಪಂಚ್ ಡೈಲಾಗ್… ಡೈಲಾಗ್ ಜೊತೆ ಆ ದೃಶ್ಯಗಳನ್ನೂ ನೋಡೋದೋ ಒಂದು ಮಜಾ… ಇದೊಂದು ಪಕ್ಕಾ ಮಾಸ್ ಫೀಲ್ ಇರುವ ಚಿತ್ರ. ಫ್ಯಾನ್ಸ್‌ಗೆ ಹೇಳಿಮಾಡಿಸಿದ ಡೈಲಾಗ್ ಸಾಕಷ್ಟು ಇದೆ ಅನ್ನುವುದಕ್ಕೆ ಇಷ್ಟು ಸಾಕು… ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಟೀಸರ್ ನೋಡಿ…
ಶ್ರೀಮರಳಿ ಅಭಿನಯದ ‘ಮದಗಜ’ ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಗೆ ಕಾರಣವಾಗುತ್ತಲೇ ಇತ್ತು. ಆದು ಶೀರ್ಷಿಕೆಯಿಂದ ಹಿಡಿದು, ಪೋಸ್ಟರ್, ಫಸ್ಟ್ ಲುಕ್, ಹೀಗೆ ಹಲವು ಕಾರಣಗಳಿಗೆ ಒಂದಷ್ಟು ಕುತೂಹಲ ಮೂಡಿಸಿತ್ತು. ಸಿನಿಮಾದ ಕಥೆ ಇರಲಿ, ಕಲಾವಿದರ ಆಯ್ಕೆ ಇರಲಿ, ಲೊಕೇಷನ್‌ಗಳಿರಲಿ, ತಾಂತ್ರಿಕ ವರ್ಗವೇ ಇರಲಿ ಎಲ್ಲದ್ದರಲ್ಲೂ ಸೈ ಎನಿಸಿಕೊಂಡಿದ್ದ “ಮದಗಜ” ಫಸ್ಟ್ ಲುಕ್ ಅಫಿಷಿಯಲ್ ಟೀಸರ್ ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಿದ್ದೇ ತಡ, ಸಾಕಷ್ಟು ಕುತೂಹಲವಿತ್ತು. ಆ ಕುತೂಹಲ ಎಳ್ಳಷ್ಟೂ ಸುಳ್ಳು ಮಾಡಿಲ್ಲ.
ಹೌದು, ಶ್ರೀಮುರಳಿ ಅವರ ಹುಟ್ಟುಹಬ್ಬ (ಡಿಸೆಂಬರ್ 17)ರ ಬೆಳಗ್ಗೆ 9.09ಕ್ಕೆ “ಮದಗಜ” ಚಿತ್ರದ ಫಸ್ಟ್ ಲುಕ್ ಟೀಸರ್ ಹೊರಬಂದಿದೆ. ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ತಂಡ ಅವರಿಗೆ ಈ ಸಖತ್ ರಗಡ್ ಆಗಿರುವ, ಪಕ್ಕಾ ಮಾಸ್ ಎನಿಸಿರುವ ಚಿತ್ರದಲ್ಲೇನೋ ಇದೆ ಎನಿಸುವಂತಹ ಟೀಸರ್ ಅದಾಗಿದ್ದು, ಫ್ಯಾನ್ಸ್‌ಗಂತೂ ಸಖತ್ ಕುತೂಹಲ ಕೆರಳಿಸಿದೆ. ಟೀಸರ್‌ನೊಳಗಿರುವ ಡೈಲಾಗ್, ಆ ಮಾಸ್ ಎಂಟ್ರಿ, ಹಿನ್ನೆಲೆ ಸಂಗೀತ, ಲೊಕೇಷನ್ ಎಲ್ಲವೂ ಹೊಸದಾಗಿದೆ. ಈ ಬಾರಿ ಶ್ರೀಮುರಳಿ ಅವರು “ಮದಗಜ” ಮೂಲಕ ಇನ್ನೊಂದು ಘರ್ಜನೆ ಮಾಡಲಿದ್ದಾರೆ ಎಂಬುದಕ್ಕೆ ಈ ಟೀಸರ್ ಸಾಕ್ಷಿಯಂತಿದೆ.
ಇನ್ನು, ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಎಂದೇ ಹೆಸರಾಗಿರುವ ‘ಉಗ್ರಂ’, ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಮದಗಜ’ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಶುಭ ಹಾರೈಸಿರುವುದು ವಿಶೇಷ.
ಸದ್ಯಕ್ಕೆ ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ “ಮದಗಜ” ಚಿತ್ರದ ಟೀಸರ್ ಲಕ್ಷಾಂತರ ವೀಕ್ಷಣೆಗೊಂಡು, ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ. ಉಮಾಪತಿ ಅವರು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ.
ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ಕೂಡ ಇದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಶ್ರೀಮುರಳಿ ಅವರ ಹೊಸ ಚಿತ್ರ ಕೂಡ ಅನೌನ್ಸ್ ಆಗಿದೆ. “ಜಂಗಲ್‌ಬುಕ್” ಒಳಗಿರುವ ಒಂದಷ್ಟು ಪಾತ್ರಗಳು ಸದಾ ಎಲ್ಲರನ್ನೂಕಾಡುತ್ತವೆ. ಅಂಥದೊಂದು ಕಾಡುವ ಪಾತ್ರವನ್ನೇ ಇಟ್ಟುಕೊಂಡು ಹೊಸದ್ದೊಂದು ಕಥೆ ಹೆಣೆದು ಶ್ರೀಮುರಳಿ ಅವರಿಗೊಂದು ಚಿತ್ರ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಶ್ರೀಮುರಳಿ ಯಾವ ಕಥೆ ಹಿಂದೆ ಹೊರಟಿದ್ದಾರೆ, ಯಾರು ನಿರ್ದೇಶಕ ಇತ್ಯಾದಿ ವಿಷಯವನ್ನು ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಲು ಸಜ್ಜಾಗಿದೆ.
ಪ್ರಜ್ವಲ್ ದೇವರಾಜ್ ಅಭಿನಯದ ಹೊಸ ಚಿತ್ರ “ವೀರಂ” ಇತ್ತೀಚೆಗಷ್ಟೇ ಶುರುವಾಗಿದೆ. ಅದಕ್ಕೂ ಮುನ್ನ ಶುರುವಾಗಿದ್ದ ಅವರ ಹೊಸ ಚಿತ್ರ “ಅಬ್ಬರ” ಈಗ ಅಬ್ಬರಿಸಲು ಸಜ್ಜಾಗಿದೆ. ಈಗಾಗಲೇ ಶೇ.೭೦ರಷ್ಟು ಚಿತ್ರೀಕರಣ ಮುಗಿಸಿರುವ “ಅಬ್ಬರ” ಇನ್ನುಳಿದ ಚಿತ್ರೀಕರಣ ಪೂರೈಸಿದರೆ ಪ್ರೇಕ್ಷಕರ ಮುಂದೆ ಬರಲು ರೆಡಿ. ಇತ್ತೀಚೆಗೆ ಚಿತ್ರತಂಡದ ಜೊತೆ ಆಗಮಿಸಿದ್ದ ನಿರ್ದೇಶಕ ರಾಮ್‌ನಾರಾಯಣ್, ತಮ್ಮ “ಅಬ್ಬರ” ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದು ಹೀಗೆ.
“ನಾನು ಈಗಾಗಾಲೇ ದೇವರಾಜ್ ಸರ್ ಜೊತೆ, ಪ್ರಣವ್ ಅವರ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಪ್ರಜ್ವಲ್ ದೇವರಾಜ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಅದು “ಅಬ್ಬರ” ಮೂಲಕ ಸಿಕ್ಕಿದೆ. ಈ ಸಿನಿಮಾದ ಕಥೆ ಹೇಳಬೇಕು ಅಂತ ಫೋನ್ ಮಾಡಿದಾಗ, ಪ್ರಜ್ವಲ್ ಅವರು, ಒಪ್ಪಿ, ಕಥೆ ಹೇಳೋಕೆ ಕರೆದರು. ಹೋಗಿ ಕಥೆ ಹೇಳಿದೆ. ನಾನು ಇಷ್ಟು ವರ್ಷಗಳ ಅನುಭವದಲ್ಲಿ ಸಾಕಷ್ಟು ಹೀರೋಗಳಿಗೆ ಕಥೆ ಹೇಳಿದ್ದೇನೆ. ಆದರೆ, ಪ್ರಜ್ವಲ್ ಅವರಿಗೆ ಹೇಳಿದ ಅನುಭವ ಮರೆಯಲಾರೆ. ಯಾಕೆಂದರೆ, ಅವರು ತುಂಬಾ ಆಸಕ್ತಿಯಿಂದ, ಶ್ರದ್ಧೆಯಿಂದ ಕಥೆ ಕೇಳಿದ್ದಲ್ಲದೆ, ಒಮ್ಮೆಲೇ ಈ ಸಿನಿಮಾ ಮಾಡೋಣ ಎಂದು ಗ್ರೀನ್‌ಸಿಗ್ನಲ್ ಕೊಟ್ಟರು. ಹಾಗಾಗಿ ಈ “ಅಬ್ಬರ” ಶುರುವಾಯ್ತು.
ಅಪ್ಪ ಮಗನ ಬಾಂಧವ್ಯ ಹೈಲೆಟ್
ಇಲ್ಲಿ ಮೂವರು ನಾಯಕಿಯರು ಇದ್ದಾರೆ. ಕಥೆಯಲ್ಲಿ ಸಸ್ಪೆನ್ಸ್ ಇದೆ. ರಾಜ್‌ಶ್ರೀ ಪೊನ್ನಪ್ಪ, ಲೇಖಾಚಂದ್ರ, ನಿಮಿಕಾ ರತ್ನಾಕರ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅವರಿಗಿಲ್ಲಿ ಮೂರು ವಿಭಿನ್ನ ಶೇಡ್ ಇರುವ ಪಾತ್ರವಿದೆ. ಶೂಟಿಂಗ್ ವೇಳೆ ಒಂದೇ ದಿನ ಮೂರು ಶೇಡ್ ಇರುವ ಪಾತ್ರ ಮಾಡಿದ್ದು ವಿಶೇಷ. ಒಂದು ಶಾಟ್ ಆದ ಕೂಡಲೇ, ಇನ್ನೊಂದು ಶೇಡ್ ಪಾತ್ರಕ್ಕೆ ರೆಡಿಯಾಗಿ ಬರುತ್ತಿದ್ದರು. ಎಲ್ಲೂ ಸಮಯ ತೆಗೆದುಕೊಳ್ಳದೆ, ತುಂಬಾ ಸ್ಪೀಡ್ ಆಗಿಯೇ ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಅವರ ಶ್ರದ್ಧೆ ನನಗೆ ಇಷ್ಟವಾಯಿತು. ಚೆನ್ನೈ ಮೂಲದ ಜಿ.ಕೆ.ಗಣೇಶ್ ಕ್ಯಾಮೆರಾ ಹಿಡಿದಿದ್ದಾರೆ.
ಹೈವೋಲ್ಟೇಜ್ ಸ್ಟಂಟ್ಸ್
ಚಾಲೆಂಜಿಂಗ್ ಸೀನ್‌ಗಳನ್ನು ತುಂಬಾನೇ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಎಂದಿನಂತೆ ನನ್ನ ಜೊತೆ ವೆಂಕಟೇಶ್ ಯುಡಿವಿ ಸಂಕಲನ ಮಾಡಿದ್ದಾರೆ. ರವಿಬಸ್ರೂರು ಅವರ ಅದ್ಭುತ ಸಂಗೀತವಿದೆ. ಯೋಗರಾಜ್‌ಭಟ್, ವಿಜಯ್ ಭರಮಸಾಗರ ಸಾಹಿತ್ಯವಿದೆ. ನಾನೂ ಒಂದು ಹಾಡು ಬರೆದಿದ್ದೇನೆ. ಚಿತ್ರದಲ್ಲಿ ಸ್ಟಂಟ್ಸ್ ಕೂಡ ಹೈಲೈಟ್. ವಿನೋದ್, ಪಳನಿರಾಜ್, ಡಿಫರೆಂಟ್ ಡ್ಯಾನಿ ಮತ್ತು ಮಾಸ್‌ಮಾದ ಒಂದೊಂದು ಫೈಟ್ ಸಂಯೋಜಿಸಿದ್ದಾರೆ. ಸದ್ಯಕ್ಕೆ ಹಿನ್ನೆಲೆ ಸಂಗೀತ ಬಾಕಿ ಇದೆ. ಇಷ್ಟೊತ್ತಿಗಾಗಲೇ ಚಿತ್ರೀಕರಣ ಮುಗಿಯಬೇಕಿತ್ತು. ಕೊರೊನಾ ಸಮಸ್ಯೆಯಿಂದ ತಡವಾಗಿದೆ” ಎಂದು ವಿವರ ಕೊಟ್ಟ ರಾಮ್‌ನಾರಾಯಣ್, ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ದುಷ್ಟನ ಸಂಹಾರ ಮಾಡಲು ಭಗವಂತ ಹೇಗೆ ಹಲವು ಅವತಾರ ಎತ್ತುತ್ತಾನೋ, ಹಾಗೆ ನಮ್ಮ ಚಿತ್ರದ ಹೀರೋ ಹಲವು ಅವತಾರಗಳನ್ನು ತಾಳಿ ಎದುರಾಳಿಯನ್ನು ಸಂಹರಿಸುತ್ತಾನೆ. ತಂದೆ ಮೇಲೆ ಮಗನಿಗಿರುವ ಗೌರವ, ಪ್ರೀತಿಸಿದ ಹುಡುಗಿಯನ್ನೇ ತನ್ನ ಪ್ರತೀಕಾರಕ್ಕೆ ಬಳಸಿಕೊಳ್ಳುವಂತಹ ಸಂದರ್ಭ ಬಂದಾಗ ಮಾಡುವ ಕೆಲಸ, ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಮಾಡುವಂತಹ ತ್ಯಾಗ, ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನೂ ನಿಭಾಹಿಸುವ ಕರ್ತವ್ಯದಲ್ಲಿ ಹೀರೋ ಹೇಗೆಲ್ಲಾ ವರ್ತಿಸುತ್ತಾನೆ ಅನ್ನೋದು ಕಥೆ ಎನ್ನುತ್ತಾರೆ ಅವರು.
ಕಥೆಯಲ್ಲೊಂದು ವಿಶೇಷತೆ ಇದೆ
ಪ್ರಜ್ವಲ್ ದೇವರಾಜ್ ಅವರಿಗೆ ಈ ಚಿತ್ರ ಮಾಡಬೇಕೆನಿಸಿದ್ದು, ಕಥೆ ಮತ್ತು ಪಾತ್ರವಂತೆ. ಅದರ ಜೊತೆಗೆ ನಿರ್ದೇಶಕ ರಾಮ್‌ನಾರಾಯಣ್ ಅವರು ಕಮರ್ಷಿಯಲ್ ನಿರ್ದೇಶಕರು ಎಂಬ ಕಾರಣವೂ ಕೂಡ. “ಕಥೆ ಕೇಳಿದಾಗ, ಅದರಲ್ಲೊಂದು ವಿಶೇಷತೆ ಇತ್ತು. ಮೂರು ಶೇಡ್ ಪಾತ್ರ ಇದ್ದುದರಿಂದ ನನಗೂ ಚಾಲೆಂಜ್ ಎನಿಸಿತ್ತು. ರಾಮ್‌ನಾರಾಯನ್ ಹೆಣೆದ ಕಥೆಯೊಳಗೆ ಗಟ್ಟಿತನವಿತ್ತು. ಹಾಗಾಗಿ ಅವರೊಂದಿಗೆ ಕೆಲಸ ಮಾಡಲೇಬೇಕು ಎನಿಸಿ ಈ ಚಿತ್ರ ಒಪ್ಪಿದೆ. ನಾನು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿಯೇ ಸಿನಿಮಾ ಮಾಡಿದ್ದಾರೆ. ರಾಮ್‌ನಾರಾಯಣ್ ಒಮ್ಮ ಕಮರ್ಷಿಯಲ್ ನಿರ್ದೇಶಕರ ಜೊತೆಗೆ ಒಳ್ಳೆಯ ಮನುಷ್ಯ. ಹಾಗಾಗಿಯೇ ಈ ಚಿತ್ರ ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ನಾನು ಮೂರು ವಿಭಿನ್ನ ಶೇಡ್ ಇರುವ ಪಾತ್ರಕ್ಕೆ ಎಷ್ಟರಮಟ್ಟಿಗೆ ನ್ಯಾಯ ಸಲ್ಲಿಸಿದ್ದೇನೋ ಗೊತ್ತಿಲ್ಲ. ಆದರೂ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಇನ್ನು, ನಿರ್ಮಾಪಕ ಬಸವರಾಜ್ ಅವರು ಸಾಕಷ್ಟು ಖರ್ಚು ಮಾಡಿದ್ದಾರೆ. “ಅಬ್ಬರ” ಅಂದಾಕ್ಷಣ, ಎಲ್ಲವೂ ಅಬ್ಬರವಾಗಿರಬೇಕು. ಅದು ತೆರೆಯ ಮೇಲೆ ನೋಡಿದರೆ, ಅಷ್ಟೊಂದು ಅಬ್ಬರ ಅಂತ ಗೊತ್ತಾಗುತ್ತೆ. ಸಿನಿಮಾಗೆ ಏನೆಲ್ಲಾ ಬೇಕೋ ಅದನ್ನು ಕೊಟ್ಟಿದ್ದಾರೆ. ಸಿನಿಮಾ ಅಬ್ಬರವಾಗಿದೆʼ ಎನ್ನುತ್ತಾರೆ ಪ್ರಜ್ವಲ್ ದೇವರಾಜ್.
ಮೂವರ ಬೆಡಗಿಯರ ಜೊತೆ ಡಿಂಗು ಡಾಂಗು
ನಾಯಕಿ ನಿಮಿಕಾ ರತ್ನಾಕರ್ ಅವರಿಗೆ ಇಲ್ಲಿ ಒಂದು ರೀತಿಯ ಬಜಾರಿ ಪಾತ್ರವಂತೆ. ಪ್ರಜ್ವಲ್ ಅವರ ಜೊತೆ ಕೆಲಸ ಮಾಡಿದ್ದು ಅವರಿಗೆ ಮರೆಯಲಾರದ ಅನುಭವವಂತೆ. ತುಂಬಾನೇ ಕಂಫರ್ಟಬಲ್ ಟೀಮ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ” ಎಂಬುದು ನಿಮಿಕಾ ಮಾತು. ಇನ್ನು, ರಾಜ್‌ಶ್ರೀ ಪೊನ್ನಪ್ಪ ಅವರು ಇಷ್ಟು ದಿನ ಮುಂಬೈನ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಹಾಗಾಗಿ, ಕನ್ನಡದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವ ಅವರು, “ಅಬ್ಬರ” ಮೂಲಕ ಎಂಟ್ರಿಯಾಗಿದ್ದೇನೆ. ನಾನಿಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಮೊದಲ ಸಲ ಪ್ರಜ್ವಲ್ ಸರ್ ಜೊತೆ ಕೆಲಸ ಮಾಡಿದ್ದೇನೆ. ಪಾತ್ರದ ಬಗ್ಗೆ ಹೇಳುವುದಾದರೆ, ಅದೊಂದು ಸಿಂಪಲ್ ಹುಡುಗಿಯ ಪಾತ್ರ. ತುಂಬಾನೇ ಮುಗ್ಧತೆ ಇರುವಂಥದ್ದು. ನಿರ್ದೇಶಕ ರಾಮ್ ನಾರಾಯಣ್ ಸರ್, ನನ್ನ ನಂಬಿ ಅವಕಾಶ ಕೊಟ್ಟಿದ್ದಾರೆ. ಅದಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆಯೂ ಇದೆ. ಇನ್ನು, ನಿರ್ಮಾಪಕ ಬಸವರಾಜ್ ಅವರು, ಯಾವುದಕ್ಕೂ ಕಡಿಮೆ ಮಾಡದೆ, ಅದ್ಧೂರಿಯಾಗಿಯೇ ಸಿನಿಮಾ ಮಾಡಿದ್ದಾರೆ ಎಂದರು ರಾಜ್‌ಶ್ರೀ ಪೊನ್ನಪ್ಪ. ಲೇಖಾಚಂದ್ರ ಅವರಿಲ್ಲಿ ಡಾಕ್ಟರ್ ಪಾತ್ರ ಮಾಡಿದ್ದು, ಅವರಿಗೇ ಇಲ್ಲೊಂದು ಖಾಯಿಲೆ ಇರುವ ಪಾತ್ರ ಕೊಟ್ಟಿದ್ದಾರಂತೆ. ಅದು ಏನೆಂಬುದನ್ನು ಸಿನಿಮಾದಲ್ಲೇ ನೋಡಬೇಕು ಎನ್ನುವ ಲೇಖಾಚಂದ್ರ, ಪ್ರಜ್ವಲ್ ಜೊತೆ ರವಿಶಂಕರ್ ಕಾಂಬಿನೇಷನ್‌ನಲ್ಲಿ ಕಾಣಿಸಿಕೊಂಡಿದ್ದು ಹೆಮ್ಮೆ ಎನಿಸಿದೆ ಎನ್ನುತ್ತಾರೆ ಅವರು.
ಗೆಳೆಯನಿಗೆ ಮಾಡಿದ ಚಿತ್ರ
ನಿರ್ಮಾಪಕ ಬಸವರಾಜ್ ಮಂಚಯ್ಯ (ಹಿತ್ತಲಪುರ) ಅವರು ಈ ಹಿಂದೆ “ಬಿ೩” ಸಿನಿಮಾ ಮಾಡಿದ್ದರು. ನಿರ್ದೇಶಕ ರಾಮ್‌ನಾರಾಯಣ್ ಮತ್ತು ನಿರ್ಮಾಪಕ ಬಸವರಾಜ್ ಕಳೆದ ಹತ್ತು ವರ್ಷಗಳ ಗೆಳೆಯರಂತೆ. ಹತ್ತು ವರ್ಷದ ಹಿಂದೆ ಒಂದು ಸಿನಿಮಾ ಮಾಡೋಣ ಅಂತ ನಿರ್ಮಾಪಕರು ಹೇಳಿದ್ದರಂತೆ. ಆದರೆ, ಕಾಲ ಕೂಡಿ ಬಂದಿರಲಿಲ್ಲವಂತೆ. ಈಗ “ಅಬ್ಬರ” ಮೂಲಕ ಅದು ಸಾಧ್ಯವಾಗಿದೆ. ಒಂದೊಳ್ಳೆಯ ಚಿತ್ರ ಮಾಡಿರುವ ಖುಷಿ ನನಗಿದೆ” ಎನ್ನುತ್ತಾರೆ ಬಸವರಾಜ್ ಮಂಚಯ್ಯ.
ಈ ಚಿತ್ರರಂಗವೇ ಹಾಗೆ. ಇಲ್ಲಿ ಯಾರು ಏನ್ ಬೇಕಾದರೂ ಆಗಬಹುದು. ನಿರ್ಮಾಪಕ ನಿರ್ದೇಶಕರಾಗಿದ್ದಾರೆ, ನಿರ್ದೇಶಕ ಹೀರೋ ಆಗಿದ್ದಾರೆ, ಹೀರೋ, ನಿರ್ದೇಶಕರಾಗಿದ್ದಾರೆ, ಒಮ್ಮೊಮ್ಮೆ ಒಬ್ಬರೇ ಎಲ್ಲವೂ ಆಗಿ ಹೋಗಿದ್ದಾರೆ. ಈಗಾಗಲೇ ಅನೇಕ ನಾಯಕರು ಗಾಯಕರೂ ಆಗಿದ್ದಾರೆ. ಆ ಸಾಲಿಗೆ ಈಗ ಯುವ ನಟ ಪೃಥ್ವಿ ಅಂಬರ್ ಕೂಡ ಗಾಯಕರಾಗಿದ್ದಾರೆ.
ಹೌದು, “ಲೈಫ್ ಈಸ್ ಬ್ಯೂಟೀಫುಲ್” ಸಿನಿಮಾಗೆ ಪೃಥ್ವಿ ಅಂಬರ್ ಹಾಡಿದ್ದಾರೆ. ಈ ಚಿತ್ರಕ್ಕೆ ಮೊದಲ ಬಾರಿಗೆ ಹಾಡುವ ಮೂಲಕ ಗಾಯಕ ಎನಿಸಿಕೊಂಡಿದ್ದಾರೆ. “ಖುಷಿಗಾಗಿ ಈವರೆಗೂ ಗುನುಗುತ್ತಿದ್ದವರು, ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡಿರುವುದೇ ಈ ಹೊತ್ತಿನ ವಿಶೇಷ. ತಮ್ಮ ಮೊದಲ ಹಾಡಿನ ಕುರಿತು ಹೇಳುವ ಪೃಥ್ವಿ, “ನಾನು ಸಂಗೀತ ಕಲಿತಿಲ್ಲ. ಆದರೆ, ಆಗಾಗ ಅವಕಾಶ ಸಿಕ್ಕಾಗ ಆರ್ಕೆಸ್ಟ್ರಾದಲ್ಲಿ ಖುಷಿಗಾಗಿ ಹಾಡುತ್ತಿದ್ದೆ ಅಷ್ಟೇ. ಮೈಕಲ್ ಜಾಕ್ಸನ್ ನನಗೆ ಅಚ್ಚುಮೆಚ್ಚು. ಅವರಂತೆ ಡಾನ್ಸ್ ಮಾಡುವುದು ಮತ್ತು ಹಾಡುವುದನ್ನು ಪ್ರಾಕ್ಟಿಸ್ ಮಾಡುತ್ತಿದ್ದೆ. ಅವರ ಮೇಲಿ ಆ ಪ್ರೀತಿಯೇ ಇಂದು ನನ್ನದೇ ಚಿತ್ರಕ್ಕೆ ಹಾಡಲು ಅವಕಾಶ ಸಿಕ್ಕಿದೆ” ಎಂಬುದು ಪೃಥ್ವಿ ಅಂಬರ್ ಮಾತು.
ನೊಬಿನ್ ಪೌಲ್ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಟ್ಯೂನ್ ಕೇಳಿದ ಕೂಡಲೇ ಪೃಥ್ವಿ ಅಂಬರ್, ಸ್ವತಃ ತಾವೇ ಒಂದು ಸಾಹಿತ್ಯ ಬರೆದು ಹಾಡಿದ್ದಾರೆ. ಇವರ ಹಾಡು ಕೇಳಿದ ಚಿತ್ರತಂಡಕ್ಕೂ ಖುಷಿಯಾಗಿದೆ. ಸಂಗೀತ ನಿರ್ದೇಶಕರಿಗೂ ಇವರ ಹಾಡಿನ ಮೇಲೆ ಪ್ರೀತಿ ಮೂಡಿದ್ದರಿಂದ ಅವರಿಂದಲೇ ಹಾಡಿಸಿದ್ದಾರೆ. ಹೀಗಾಗಿ ಬಯಸದೇ ಬಂದ ಅವಕಾಶ ಆಗಿದ್ದರಿಂದ ನನ್ನ ಲೈಫ್‌ನಲ್ಲಿ ಮೊದಲ ಹಾಡು ಹಾಡಿರುವ ಖುಷಿ ಎನ್ನುತ್ತಾರೆ ಪೃಥ್ವಿ. ಮದನ್ ಬೆಳ್ಳಿಸಾಲು ಈ ಹಾಡಿಗೆ ಸಾಹಿತ್ಯವಿದೆ. ಅರುಣ್ ಕುಮಾರ್ ಎಂ. ಮತ್ತು ಸಾಬು ಅಲೋಶಿಯಸ್ ಜಂಟಿಯಾಗಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ನಿರ್ಮಾಪಕರು.
ಫ್ರೈಡೆ ಫಿಲ್ಮ್ಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್ ನ್ಯಾಷಿನಲ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.