ಅಮರ ಪ್ರೇಮಿ ಅರುಣ್ ಸಿನಿಮಾದ ವಿಶೇಷ ಪಾತ್ರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ ಜೋಗತಿ ಮಂಜಮ್ಮ ನಟಿಸಿದ್ದಾರೆ…
ಒಲವು ಸಿನಿಮಾ ಸಂಸ್ಥೆಯು ನಿರ್ಮಿಸುತ್ತಿರುವ ʼಅಮರ ಪ್ರೇಮಿ ಅರುಣ್ʼ ಸಿನಿಮಾ, ತನ್ನ ಮೊದಲ ಸುತ್ತಿನ ಚಿತ್ರೀಕರಣವನ್ನು ಬಳ್ಳಾರಿ ನಗರದಲ್ಲಿ ಮುಗಿಸಿದ್ದು, ಈಗ ಮತ್ತೆ ಬಳ್ಳಾರಿಯಲ್ಲಿಯೇ ನಡೆಯಲಿರುವ ಎರಡನೇ ಸುತ್ತಿನ ಚಿತ್ರೀಕರಣಕ್ಕೆ ತಂಡ ತಯಾರಾಗುತ್ತಿದೆ.
ಬಳ್ಳಾರಿ ನಗರದ ಪ್ರಮುಖ ಜಾಗಗಳಲ್ಲಿ ನಾಯಕ ಹರಿಶರ್ವಾ, ನಾಯಕಿ ದೀಪಿಕಾ ಆರಾಧ್ಯ ಸೇರಿದಂತೆ ಧರ್ಮಣ್ಣ, ಭೂಮಿಕಾ ಭಟ್, ಮಹೇಶ್ ಬಂಗ್, ಬಲರಾಜ್ವಾಡಿ, ರೋಹಿಣಿ, ವಿಜಯಲಕ್ಷ್ಮಿ ಮತ್ತು ಅನೇಕ ಕಲಾವಿದರ ನಟನೆಯಲ್ಲಿ ದೃಶ್ಯಗಳನ್ನು ಚಿತ್ರಿಸಲಾಗಿದೆ.
ʼಅಮರ ಪ್ರೇಮಿ ಅರುಣ್ʼ ಸಿನಿಮಾ ವಿಶೇಷ ಪಾತ್ರಗಳಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ ಜೋಗತಿ ಮಂಜಮ್ಮನವರು ಮತ್ತು ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ ಅವರು ನಟಿಸಿದ್ದಾರೆ.
ಚಿತ್ರಕ್ಕೆ ಪ್ರವೀಣ್ ಕುಮಾರ್ ಜಿ ಅವರ ರಚನೆ-ನಿರ್ದೇಶನ, ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ನಿರಂಜನ್ ದೇವರ ಮನೆಯವರ ಸಂಕಲನ, ಮಂಡ್ಯ ಮಂಜು ಅವರ ಕಾರ್ಯಕಾರಿ ನಿರ್ಮಾಣವಿದೆ. ಜಯಂತ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ.
ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು,ಕಾದಿದ್ದೆ ನಿನಗಾಗಿ ಯಾಕೇ, ಹೇಳು ಯಾಕೇ, ಹೇಳು ಯಾಕೇ.ಆಣೆಯ ಇಟ್ಟು ಭಾಷೆಯ ಕೊಟ್ಟು, ಹಿಂದಿಂದೆ ಬಂದಿದ್ದು ಯಾಕೇ,ಹೇಳು ಯಾಕೇ, ಹೇಳು ಯಾಕೇ, ಈ ರೀತಿ ಸಾಗುವ ಏಕ್ ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿ ಬರಲಿದೆ…
ವಿಶಾಲಾಕ್ಷಿ
ಹೊಡಿರೀ ಹಲಗಿ.. ಹಚ್ಚಿ ಪಟಾಕಿ… ಹಳ್ಳಿಹೈದ ಹನುಮಂತಣ್ಣ ಮತ್ತೆ ಅಖಾಡಕ್ಕೆ ಇಳಿದಿದ್ದಾನೆ. ಮ್ಯೂಸಿಕ್ ಲೋಕದಲ್ಲಿ ಮ್ಯಾಜಿಕ್ ಮಾಡೋದಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾನೆ. ಅಂದ್ಹಾಗೇ, ಚಿಲ್ಲೂರು ಚಿಂಗಾರಿಯನ್ನು ಮತ್ತೆ ಕಣಕ್ಕೆ ಇಳಿಸಿರುವುದು ಡೈರೆಕ್ಟರ್ ಜೋಗಿ ಪ್ರೇಮ್ ಹಾಗೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ . ಹಾವೇರಿ ಜಿಲ್ಲೆ ಸವಣೂರ್ ತಾಲೂಕ್ ಬಡ್ನಿ ತಾಂಡಾದಲ್ಲಿ ಮತ್ತೆ ಕುರಿ ಕಾಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಹನುಮನನ್ನು ಮತ್ತೆ ಬೆಂಗಳೂರಿಗೆ ಕರೆತಂದಿದ್ದಾರೆ. ಜನ್ಯಾಜೀ ಫೋನ್ ಹೋಗಿದ್ದೇ ತಡ ಬಡ್ನಿ ಹೈದ ಹನುಮ ಅಂಗಿ-ಲುಂಗಿ ತೊಟ್ಟು ಹೆಗಲಿಗೊಂದು ಟವಲ್ ಹಾಕಿಕೊಂಡು ಬೆಂಗಳೂರಿಗೆ ಬಂದಿಳಿದಿದ್ದಾನೆ.
ಸವಣೂರ್ ಸೂಪರ್‌ಸ್ಟಾರ್ ಎನಿಸಿಕೊಂಡಿದ್ದ ಹನುಮಂತನಿಗೆ ಅರ್ಜುನ್ ಜನ್ಯಾ ತಮ್ಮ ಸಿನಿಮಾದಲ್ಲಿ ಒಂದು ಅವಕಾಶ ಕೊಡ್ತೀನಿ ಅಂತ ಸಾರೆಗಾಮ' ಅಂಗಳದಲ್ಲೇ ಅನೌನ್ಸ್ ಮಾಡಿದ್ದರು. ಪ್ರೇಮ್ ನಿರ್ದೇಶನದ ಸಿನೆಮಾದಲ್ಲಿ ಸಾರೆಗಾಮ ರನ್ನರ್ ಅಪ್ ಹನುಮನಿಗೆ ಹಾಡುವ ಅವಕಾಶ ಸಿಗಲಿದೆ ಎನ್ನುವ ಸುದ್ದಿಯೊಂದು ಈ ಹಿಂದೆ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ಇದೀಗ, ಆ ಸುದ್ದಿ ನಿಜವಾಗಿದೆ. ಹಳ್ಳಿಹಕ್ಕಿ ಹನುಮನಿಗೆ ಜೋಗಿ ಪ್ರೇಮ್ ನಿರ್ದೇಶನದಏಕ್ ಲವ್’ ಯಾ’ ಚಿತ್ರದಲ್ಲಿ ಹಾಡುವ ಚಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದು, `ಸಾರೆಗಾಮ’ ಸೀಸನ್ 13ರ ವಿನ್ನರ್ ಸುನೀಲ್ ಜೊತೆ ಚಿಲ್ಲೂರು ಚಿಂಗಾರಿ ಹನುಮಂತ ಕಂಠಕುಣಿಸಿದ್ದಾರೆ.
ಹೊತ್ತಿಲ್ಲದ ಹೊತ್ತು, ತುತ್ತಿಲ್ಲದೇ ನಿಂತು.. ಕಾದಿದ್ದೆ ನಿನಗಾಗಿ ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಆಣೆಯ ಇಟ್ಟು ಭಾಷೆಯ ಕೊಟ್ಟು.. ಹಿಂದಿಂದೆ ಬಂದಿದ್ದು ಯಾಕೇ.. ಹೇಳು ಯಾಕೇ.. ಹೇಳು ಯಾಕೇ.. ಈ ರೀತಿಯಾಗಿ ಸಾಗುವಏಕ್ಲವ್ ಯಾ’ ಚಿತ್ರದ ಹಾಡು ಸುನೀಲ್ ಹಾಗೂ ಹನುಮನ ಕಂಠಸಿರಿಯಲ್ಲಿ ಮೂಡಿಬರಲಿದೆ. ಇತ್ತೀಚೆಗೆ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಕಾರ್ಯ ಮುಗಿದಿದೆ. ಅದರ ಝಲಕ್‌ನ ಡೈರೆಕ್ಟರ್ ಪ್ರೇಮ್ ಹಾಗೂ ಜನ್ಯಾಜೀಯವರು ತಮ್ಮ ಸೋಷಿಯಲ್ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ನೋಡಿ ಬಡ್ನಿಭೀಮನ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಂತಹ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾಗೆ ಉಘೇ ಉಘೇ ಎನ್ನುತ್ತಿದ್ದಾರೆ. ಸೆನ್ಸೇಷನಲ್ ಡೈರೆಕ್ಟರ್ ಸಿನಿಮಾದಲ್ಲಿ ಹನುಮ ಹಾಡಿದ್ದಾಯ್ತು ಈ ಹಾಡಿನಿಂದ ಹಳ್ಳಿ ಹೈದನ ಸಂಗೀತ ಪಯಣಕ್ಕೆ ಕಿಕ್‌ಸ್ಟಾರ್ಟ್ ಸಿಗುವಂತಾಗಲಿ, ಬಣ್ಣದ ಲೋಕದಲ್ಲಿ ಬಡ್ನಿಭೀಮನ ಜವಾರಿ ಬಂಡಿ ಸಾಗಲಿ ಅನ್ನೋದೇ ಸಿನಿಲಹರಿ ಆಶಯ
ಚಿನ್ನದ ಸಾಮ್ರಾಜ್ಯದ ಅಧಿಪತಿಗಳಿಗೆ ಆಫರ್ ಕೊಡ್ತಿರಾ, ಕೋಟಿ ಆಸೆ ತೋರಿಸಿ ಕ್ಯಾಚ್ ಹಾಕಿಕೊಳ್ಳೋ ದುರಾಸೆ ಬುಟ್ಬುಡಿ…
ಇಡೀ ಜಗತ್ತೇ ಎದುರು ನೋಡ್ತಿರುವ ಕನ್ನಡದ ಹೆಮ್ಮೆಯ ಸಿನಿಮಾ ಅಂದರೆ ಅದು ಎಲ್ಲರಿಗೂ ಗೊತ್ತು ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಪಾರ್ಟ್ 1 ಬಿಡುಗಡೆಯಾಗಿ ಎರಡೂವರೆ ವರ್ಷಗಳು ಉರುಳಿವೆ. ಆದರೂ ಕೂಡ ಈ ಸಿನಿಮಾದ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ದಿನಗಳು ಉರುಳಿದಂತೆ ಕೆಜಿಎಫ್ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಆಲ್ ಓವರ್ ಇಂಡ್ಯಾ ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ ಅಂತ ಕೇಳ್ತಿದ್ದಾರೆ. ವಲ್ಡ್ ವೈಡ್ ಕನ್ನಡದ ಚಿತ್ರಕ್ಕಿರುವ ಬೇಡಿಕೆಯನ್ನು ಗಮನಿಸಿದ ಓಟಿಟಿ ಕೆಜಿಎಫ್ ಚಾಪ್ಟರ್ 2 ಮೇಲೆ ಕಣ್ಣಿಟ್ಟು ಬಿಗ್ ಆಫರ್ ಮಾಡಿದೆಯಂತೆ.
ಹೌದು, ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಭಾರೀ ಬೇಡಿಕೆ ಇದೆ. ಆಚೆ-ಈಚೆ-ನೀಚೆ- ಪೀಚೆ ಮಾತ್ರವಲ್ಲ ದೇಶ- ವಿದೇಶದ ಸಿನಿಮಾ ಮಂದಿ ಕೂಡ ಕನ್ನಡದ ಕೆಜಿಎಫ್ ನ ನಮ್ಮ ಅಂಗಳದಲ್ಲಿ ರಿಲೀಸ್ ಮಾಡೋಕೆ ಅವಕಾಶ ಕೊಡಿ ಅಂತ ಹೊಂಬಾಳೆ ನಿರ್ಮಾಣ ಸಂಸ್ಥೆಯ ದುಂಬಾಲು ಬಿದ್ದಿದ್ದಾರೆ. ಈ ಮಧ್ಯೆ ಲೀಡಿಂಗ್ ನಲ್ಲಿರುವ ಜನಪ್ರಿಯ ಓಟಿಟಿ ಸಂಸ್ಥೆ ಕೆಜಿಎಫ್ ಚಾಪ್ಟರ್ ೨ ಗೆ 250 ಕೋಟಿ ಆಫರ್ ಮಾಡಿದೆಯಂತೆ. ಆದರೆ, ಈ ಆಫರ್ ನ ರಾಕಿಭಾಯ್ ಎಡಗೈ ನಲ್ಲಿ ಸರಿಸಿದ್ದಾರಂತೆ.
ವಿಜಯ್ ಕಿರಗಂದೂರು, ನಿರ್ಮಾಪಕರು
ಕೊರೊನಾ ಅಟ್ಟಹಾಸ ಮುಗಿಯುತ್ತಿಲ್ಲ, ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿಲ್ಲ. ಶೇಕಡ 100 ರಷ್ಟು ಆಸನ ಭರ್ತಿಗೆ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಹೀಗಾಗಿ ಕೆಜಿಎಫ್ ಸೇರಿದಂತೆ ಬಹುತೇಕ ಎಲ್ಲಾ ದೊಡ್ಡ ಸಿನಿಮಾಗಳು ಹಾಗೂ ಕಡಿಮೆ ಬಜೆಟ್ ನ ಹೊಸಬರ ಚಿತ್ರಗಳು ತೆರೆಗೆ ತರುವುದಕ್ಕೆ ಚಿತ್ರತಂಡಗಳು ಹಿಂದೇಟು ಹಾಕುತ್ತಿವೆ. ಇದೇ ಟೈಮ್ ನ ಸದುಪಯೋಗ ಪಡಿಸಿಕೊಳ್ಳಬೇಕು ಅಂತ ಜನಪ್ರಿಯ ಓಟಿಟಿ ಸಂಸ್ಥೆ 250 ಕೋಟಿ ಕೊಡ್ತೀವಿ ನೇರವಾಗಿ ಕೆಜಿಎಫ್ ಚಾಪ್ಟರ್ 2 ನ ಓಟಿಟಿ ವೇದಿಕೆಯಲ್ಲಿ ರಿಲೀಸ್ ಮಾಡ್ತೀರಾ ಅಂತ ಕೇಳಿಕೊಂಡಿದ್ದಾರೆ. ಇದಕ್ಕೆ ಹೊಂಬಾಳೆ ಬ್ಯಾನರ್ ನ ಓನರ್ ಏನಂದ್ರೋ ಗೊತ್ತಿಲ್ಲ ಆದರೆ, ರಾಕಿಭಾಯ್ ಮಾತ್ರ ನೋ ವೇ ಚಾನ್ಸೇ ಇಲ್ಲ ಗುರು ಎಂದಿದ್ದಾರಂತೆ.
ಆಲ್ ಓವರ್ ಇಂಡ್ಯಾದಲ್ಲಿರುವ ನನ್ನ ಫ್ಯಾನ್ಸ್ ಹಾಗೂ ಕೆಜಿಎಫ್ ಸಿನಿಮಾಗಾಗಿ ಕಾದು ಕುಳಿತಿರುವ ಪ್ರೇಕ್ಷಕ ಮಹಾಷಯರು ಕೆಜಿಎಫ್ ಚಾಪ್ಟರ್-2 ನ ಥಿಯೇಟರ್ ನಲ್ಲೇ ನೋಡಬೇಕು, ಬಿಗ್ ಸ್ಕ್ರೀನ್ ನಲ್ಲೇ ನಮ್ಮ ಸಿನಿಮಾನ ಕಣ್ತುಂಬಿಕೊಳ್ಳಬೇಕು. ಇಂತಹದ್ದೊಂದು ಟೈಮ್ ಬರುವುವವರೆಗೂ ಕಾಯ್ತೇವೆ ಹೊರೆತು ಯಾವುದೇ ಕಾರಣಕ್ಕೂ ಓಟಿಟಿಯಲ್ಲಿ ರಿಲೀಸ್ ಮಾಡೋದಿಲ್ಲ ಅಂತ ನ್ಯಾಷನಲ್‌ಸ್ಟಾರ್ ರಾಕಿಭಾಯ್ ತೀರ್ಮಾನ ಮಾಡಿದ್ದಾರಂತೆ. ಹೀಗಂತ ತಮಿಳಿನ ಖ್ಯಾತ ಅಂಕಣಕಾರರು ಹಾಗೂ ಲೇಖಕರಾಗಿ ಗುರ್ತಿಸಿ ಕೊಂಡಿರುವ ಮನೋಬಾಲ ಅವರು ತಮ್ಮ ಟ್ವೀಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಈ ಸುದ್ದಿ ಕೇಳಿ ರಾಕಿಂಗ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಥಿಯೇಟರ್ ನಲ್ಲಿ ಕೆಜಿಎಫ್ ರಿಲೀಸ್ ಆಗಬೇಕು ಎನ್ನುವ ರಾಕಿ ನಿರ್ಧಾರಕ್ಕೆ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಅಧೀರ ಹಾಗೂ ರಾಕಿ ಕಾಳಗ ಹೇಗಿರಬಹುದು ಅಂತ ಲೆಕ್ಕಚ್ಚಾರ ಹಾಕುತ್ತಾ ಕೆಜಿಎಫ್ ಸಾಮ್ರಾಜ್ಯನ ಕಣ್ಮುಂದೆ ತಂದುಕೊಳ್ತಿದ್ದಾರೆ. ಎನಿವೇ, ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಬಿಗ್ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಆಗಲಿದೆ. ಅಲ್ಲಿವರೆಗೂ ವೇಯ್ಟ್ ಅಂಡ್ ಸೀ
‘ಲವ್ ಯೂ ರಚ್ಚು’ ಸಿನಿಮಾ ಸೆಟ್ ನಲ್ಲಿ ನಡೆದ ದುರಂತದ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೆಯಿದೆ. ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಪ್ರಾಣಬಿಟ್ಟ ಫೈಟರ್ ವಿವೇಕ್ ಸಾವಿಗೆ ನೀವೆಲ್ಲರೂ ಕೂಡ ಕಂಬನಿ ಮಿಡಿದಿದ್ದೀರಾ, ಮರುಕ ಪಟ್ಟಿದ್ದೀರಾ ಅದೇ ರೀತಿ ಚಿತ್ರತಂಡ ಕೂಡ ಕೊರಗುತ್ತಿದೆ, ನಿರ್ಮಾಪಕ ಗುರು ದೇಶ್ ಪಾಂಡೆ ಕುಟುಂಬ ಕೂಡ ವಿಷಾದ ವ್ಯಕ್ತಪಡಿಸುತ್ತಿದೆ.
ನಮ್ಮ ಬ್ಯಾನರ್ ನ ಸಿನಿಮಾದಲ್ಲಿ ಇಂತಹದ್ದೊಂದು ಅವಘಡ ಸಂಭವಿಸಿಬಾರದಿತ್ತು, ದುರದೃಷ್ಟವಶಾತ್ ದುರಂತ ಸಂಭವಿಸಿದೆ. ಈಗ ಮೃತ ವಿವೇಕ್ ನ ಜೀವಂತವಾಗಿ ತಂದು ಕೊಡುವುದಕ್ಕಂತೂ ಆಗೋದಿಲ್ಲ ಹಾಗಂತ ವಿವೇಕ್ ಕುಟುಂಬವನ್ನೂ ನಾವು ಕೈಬಿಡುವುದಿಲ್ಲ. ವಿವೇಕ್ ಅಂತಿಮ ಕಾರ್ಯಕ್ಕೂ ಹಣ ನೀಡಿದ್ದೇವೆ, ಗಾಯಗೊಂಡು ಆಸ್ಪತ್ರೆ ಸೇರಿರುವ ರಂಜಿತ್ ಚಿಕಿತ್ಸಾ ವೆಚ್ಚ ಕೂಡ ಭರಿಸಿದ್ದಾರೆ ಎಂದಿದ್ದಾರೆ.
ಸದ್ಯ ಗುರುದೇಶ್ ಪಾಂಡೆ ಎಲ್ಲಿದ್ದಾರೋ ಗೊತ್ತಿಲ್ಲ. ಘಟನೆ ನಡೆದ ಕ್ಷಣದಿಂದ ಯಾರ ಕೈಗೂ ಕೂಡ ಸಿಗುತ್ತಿಲ್ಲ. ಅಜ್ಞಾತ ಸ್ಥಳದಿಂದಲೇ ಲಾಯರ್ ಗೆ ಮೇಲ್ ಮಾಡಿ ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿ ಎಂದು ಹೇಳಿದ್ದರಂತೆ. ಹೀಗಾಗಿ, ಗುರು ದೇಶ್ ಪಾಂಡೆಯವರ ಪತ್ನಿ ಪ್ರಿತಿಕಾ ದೇಶ್ ಪಾಂಡೆ ಜಿ ಸಿನಿಮಾ ಅಕಾಡೆಮಿ ಪರ ವಕೀಲ ನಾಗಭೂಷಣ್, ಹಾಗೂ ಗುರು ದೇಶ್ ಪಾಂಡೆ ಪರ ವಕೀಲ ಕೆಂಪೇಗೌಡರ ಜೊತೆ ಸುದ್ದಿಗೋಷ್ಠಿ ನಡೆಸಿದರು.
10 ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದೇವೆ, ಸದ್ಯ 5 ಲಕ್ಷ ಚೆಕ್ ನ ಹಸ್ತಾಂತರಿಸುತ್ತೇವೆ. ವಿವೇಕ್ ಮನೆಗೆ ನಾವೇ ಖುದ್ದಾಗಿ ಹೋಗಿ ಅವರ ತಾಯಿ ಕೈಗೆ 5 ಲಕ್ಷ ಚೆಕ್ ಒಪ್ಪಿಸಲಿದ್ದೇವೆ ಅಂತ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು.
ಪ್ರಕರಣ ತನಿಖೆಯ ಹಂತದಲ್ಲಿದೆ ಹೆಚ್ಚು ಮಾತನಾಡುವುದಿಲ್ಲ, ತಪ್ಪಿತಸ್ಥರು ನೀವೇ ಅಂತ ನಮ್ಮ ನಿರ್ಮಾಣ ಸಂಸ್ಥೆಯ ಮೇಲೆ ಬಂದರೆ ಅದರ ಹೊಣೆಯನ್ನ ನಾವೇ ಹೊರುತ್ತೇವೆ ಎಂದು ಕ್ಯಾಮೆರಾ ಮುಂದೆ ಹೇಳಿದ್ದಾರೆ. ಪ್ರಕರಣ ಸಂಬಂಧ ಲವ್ ಯೂ ರಚ್ಚು ಚಿತ್ರದ ನಿರ್ದೇಶಕ ಶಶಾಂಕ್ ರಾಜ್, ನಿರ್ಮಾಪಕ ಗುರುದೇಶ್ ಪಾಂಡೆ, ಸಾಹಸ ನಿರ್ದೇಶಕ ವಿನೋದ್, ಸಿನಿಮಾ ಇನ್ ಚಾರ್ಜ್ ಫರ್ನಾಂಡೀಸ್, ಕ್ರೇನ್ ಆಪರೇಟರ್ ಮಹದೇವ್ ಸೇರಿದಂತೆ ಐವರ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಈಗಾಗಲೇ ಮೂವರನ್ನು ಅರೆಸ್ಟ್ ಮಾಡಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನು ಯಾವ ರೀತಿಯ ತೀರ್ಪು ಕೊಡುತ್ತೆ ಕಾದುನೋಡಬೇಕಿದೆ.
ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಬುಧವಾರ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಕೆಲ ಹೊತ್ತು ಮಾತನಾಡಿ ಅವರ ಆಶೀರ್ವಾದ ಪಡೆದರು. ಶಿವಣ್ಣ ಅವರ ಕಾಲಿಗೆ ನಮಸ್ಕರಿಸೀದ ಮಂಜು ಪಾವಗಡ, ಸಿಹಿ ತಿನಿಸಿ ಸಂಭ್ರಮಪಟ್ಟರು.
ಶಿವರಾಜ್ ಕುಮಾರ್ ಅವರೊಂದಿಗೆ ಮಾತನಾಡಬೇಕೆನ್ನುವ ಬಹುದೊಡ್ಡ ಆಸೆಯನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಈಡೇರಿಸಿಕೊಂಡಿದ್ದ ಮಂಜು, ಬುಧವಾರ ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸಕ್ಕೆ ತೆರಳಿ ತಮ್ಮ ಮತ್ತೊಂದು ಆಸೆಯನ್ನು ಈಡೇರಿಸಿಕೊಂಡಿದ್ದುವಿಶೇಷ.
ಬಿಗ್ ಬಾಸ್ ಟ್ರೋಪಿ ಸಮೇತ ತೆರಳಿದ್ದ ಮಂಜು ಪಾವಗಡ, ಟ್ರೋಪಿ ಹಿಡಿದುಕೊಂಡೇ ಶಿವರಾಜ್ ಕುಮಾರ್ ಜತೆಗೆ ಕ್ಯಾಮಾರಾಕ್ಕೆ ಪೋಸು ಕೊಟ್ಟರು.
ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿ, ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಪಡೆದಿದೆ. ಈಗ ಈ ಚಿತ್ರದ ಹೊಸ ಸುದ್ದಿ ಅಂದರೆ, ಚಿತ್ರತಂಡ ಬಿಡುಗಡೆ ದಿನವನ್ನು ಘೋಷಿಸಿದೆ. ಹೌದು, “ಪ್ರೇಮಂ ಪೂಜ್ಯಂ” ಪ್ರೇಮ್ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ ಕೂಡ. ಚಿತ್ರದ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ ಅಂತ. ಸಿನಿಮಾ ಯಾವಾಗ ಅಂತ ಪ್ರೇಮ್ ಫ್ಯಾನ್ಸ್ ಕೇಳುತ್ತಲೇ ಇದ್ದರು. ಅವರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಅದೇ ಚಿತ್ರ ಬಿಡುಗಡೆ ಆಗುತ್ತಿರುವ ಸುದ್ದಿ. ಅಕ್ಟೋಬರ್ 29 ರಂದು ಚಿತ್ರ ಬಿಡುಗಡೆಯಾಗುತ್ತಿದೆ.
ಈ ಬಿಡುಗಡೆ ಸುದ್ದಿಯನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಸಹಜವಾಗಿಯೇ ಇದು ಪ್ರೇಮ್ ಫ್ಯಾನ್ಸ್‌ಗೆ ಖುಷಿ ಹೆಚ್ಚಿಸಿದೆ. ಅಂದಹಾಗೆ, ಈ ಚಿತ್ರವನ್ನು ಜಗತ್ತಿನಾದ್ಯಂತ ರಿಲೀಸ್ ಮಾಡಲು ಚಿತ್ರತಂಡ ತಯಾರು ಮಾಡಿಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಶೇ.50ರಷ್ಟು ಮಾತ್ರ ಚಿತ್ರಮಂದಿರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ ಹೊತ್ತಿಗೆ ಶೇ.100ರಷ್ಟು ಅನುಮತಿ ಸಿಗಬಹುದು. ಹಾಗಾಗಿ, ಚಿತ್ರತಂಡ ಎಲ್ಲವನ್ನೂ ಯೋಚಿಸಿಯೇ ಈ ನಿರ್ಧಾರ ಪ್ರಕಟಿಸಿದೆ. ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ, ಎಲ್ಲರಲ್ಲೂ ಒಂದಷ್ಟು ನಿರಿಕ್ಷೆಯನ್ನು ಹೆಚ್ಚಿಸಿದೆ. ಕಳೆದ ಯುಗಾದಿಗೆ ಚಿತ್ರದ ಟೈಟಲ್ ಸಾಂಗ್ ಲಿರಿಕಲ್ ಸಾಂಗ್ ವಿಡಿಯೊ ಬಿಡುಗಡೆಯಾಗಿತ್ತು.
ಅದಕ್ಕೆ ಮಿಲಯನ್ಸ್ ವೀವ್ಸ್ ಬಂದಿತ್ತು. ಅದರ ಬೆನ್ನಲ್ಲೇ ಚಿತ್ರತಂಡ “ವೈದ್ಯೋ ನಾರಾಯಣ ಹರಿಹಿ.. ಎಂದು ಸಾಗುವ… ಸಾಗುವ ಲಿರಿಕಲ್ ಸಾಂಗ್ ವಿಡಿಯೋ ಕೂಡ ಬಿಡುಗಡೆ ಮಾಡಿತ್ತು. ಅದೊಂದು ಒಳ್ಳೆಯ ಪ್ರಯತ್ನವಾಗಿ ಹೊರಬಂದಿತ್ತು. ” ನನ್ನ ಜೀವನ ನಿನಗೆ ಸಮರ್ಪಣ ಕೈ ಮುಗಿವೆನು ಈ ನಾರಾಯಣ” ಎಂಬ ಹಾಡು ಅರ್ಥಪೂರ್ಣವಾಗಿದೆ. ಇನ್ನು, ಈ ಚಿತ್ರ ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿದ್ದು, ಲವ್ಲಿ ಸ್ಟಾರ್ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.
ಡಾ.ರಾಘವೇಂದ್ರ ಬಿ.ಎಸ್. ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿರುವುದು ವಿಶೇಷ. ಈ ಚಿತ್ರದ ಪೋಸ್ಟರ್‌ಗಳು ಸಾಕಷ್ಟು ಸುದ್ದಿ ಮಾಡಿದ್ದಂತೂ ನಿಜ. ಅವೆಲ್ಲವನ್ನೂ ನೋಡಿದವರಿಗೆ ಪ್ರೇಮ್ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್ ಲೊಕೇಷನ್ ಜೊತೆ ಅಷ್ಟೇ ಕ್ಯೂಟ್ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ಹರೀಶ್ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್ ಕೆಡಂಬದಿ, ಡಾ.ರಾಜಕುಮಾರ್ ಜಾನಕಿರಾಮನ್, ಡಾ.ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ನಿರ್ಮಾಪಕರು.
ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ 25ನೇ ಹೊಸ್ತಿಲಲ್ಲಿ ಇರುವ ಪ್ರೇಮ್, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಶಾಕ್ ಆಯ್ತಾ…ಶಾಕ್ ಆಗ್ಲೆಬೇಕು ಅಂತ ತಾನೇ ಕಲರ್ಸ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಇಂತಹದ್ದೊಂದು ಪ್ಲ್ಯಾನ್ ಮಾಡಿದ್ದು. ಸೈಲೆಂಟಾಗಿ ಮಾಡಿದ ಆ ಮೆಗಾ ಪ್ಲ್ಯಾನ್ ಈ ಮಟ್ಟಿಗೆ ಸುದ್ದಿಸದ್ದು ಮಾಡ್ತಿರುವುದು. ಯಸ್, ಪರಂ ಮಾಡಿದ ಮಾಸ್ಟರ್ ಪ್ಲ್ಯಾನ್‌ಗೆ ಕಲರ್ಸ್ ಕನ್ನಡದ ಪ್ರೇಕ್ಷಕರು, ಬಿಗ್ಬಾಸ್ ರಿಯಾಲಿಟಿ ಶೋನ ವೀಕ್ಷಕರು ಮಾತ್ರವಲ್ಲ ಸ್ವತಃ ದೊಡ್ಮನೆ ಅಖಾಡವೇ ಶಾಕ್ ಆಗಿದೆ. ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಮುಗೀತು ಇನ್ನೇನು ನನ್ನ ಅರಮನೆಗೆ ಬೀಗ ಹಾಕ್ತಾರೆ ಅಂತ ಬೇಸರದಲ್ಲಿದ್ದ ಬಿಗ್ಬಾಸ್ ಅರಮನೆ ಈಗ ಕೇಕೆ ಹಾಕಿಕೊಂಡು ಕುಣಿದಾಡ್ತಿದೆ. ಇಡೀ ಕರ್ನಾಟಕದ ಕಿರುತೆರೆಯ ಪ್ರೇಕ್ಷಕ ಮಹಾಷಯರು ಮತ್ತೆ ತನ್ನತ್ತ ತಿರುತಿರುಗಿ ನೋಡುತ್ತಾರಲ್ಲ ಅಷ್ಟು ಸಾಕು ಎನ್ನುತ್ತಿದೆ ಬಿಗ್ಬಾಸ್ ಮನೆ.
ಪ್ರತಿದಿನ ಒಂಭತ್ತು ಗಂಟೆ ಆದರೆ ಸಾಕು ಬಿಗ್ಬಾಸ್ ಬಿಗ್ಬಾಸ್' ಎನ್ನುವ ಜಿಂಗಲ್ ಮನೆಯ ಪಡಸಾಲೆಯಲ್ಲಿ ರಿಂಗಣಿಸುತ್ತಿತ್ತು. ಮದುವಣಗಿತ್ತಿಯಂತೆ ಸಿಂಗಾರಗೊಂಡ ಅರಮನೆಯನ್ನು ಕಿರುತೆರೆ ಪ್ರೇಕ್ಷಕರು ಕಣ್ಣರಳಿಸಿ ನೋಡ್ತಿದ್ದರು. ಸ್ಪರ್ಧಿಗಳ ನೀಡುವ ಮನರಂಜನೆಗೆ ಮನಸ್ಸು ಒಡ್ಡುತ್ತಿದ್ದರು. ವೀಕೆಂಡ್‌ನಲ್ಲಂತೂ ಬಿಗ್ಬಾಸ್ ಹವಾ ಜೋರಾಗಿರುತ್ತಿತ್ತು. ಅದಕ್ಕೆ ಕಾರಣ ಆಲ್ ಇಂಡಿಯಾ ಕಟೌಟ್ ಕಿಚ್ಚ ಎನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತು. ಹೀಗೆ, ವೀಕೆಂಡ್‌ನಲ್ಲಿ ಹುಚ್ಚೆಬ್ಬಿಸುತ್ತಿದ್ದ ಬಿಗ್‌ಬಾಸ್ ಶೋ ಮುಗೀತು, ಮನರಂಜನೆಗೆ ಕೊರತೆಯಾಯ್ತು ಎನ್ನುವಷ್ಟರಲ್ಲಿ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಪ್ಲ್ಯಾನ್ ಮಾಡಿದ್ದಾರೆ. 100 ದಿನದ ಬದಲಾಗಿ ಆರು ದಿನದಬಿಗ್ಬಾಸ್ ಫ್ಯಾಮಿಲಿ’ ಕಿರುಸೀಸನ್ ಆರಂಭಿಸಿದ್ದಾರೆ. ಕಲರ್ಸ್ ಕುಟುಂಬದ ಹದಿನೈದು ಮಂದಿ ಕಲಾವಿದರು ದೊಡ್ಮನೆ ಪ್ರವೇಶಿಸಿದ್ದಾರೆ. ಈಗಾಗಲೇ ಇದರ ಪ್ರೋಮೋ ಕೂಡ ರಿಲೀಸ್ ಆಗಿದ್ದು ಕೂತೂಹಲ ಗರಿಗೆದರುವಂತೆ ಮಾಡಿದೆ.
ಕಲರ್ಸ್ ಕುಟುಂಬದ ಸೂಪರ್ ಸ್ಟಾರ್ಸ್ ಗಳನ್ನು ನೋಡಿ ಬಿಗ್ಬಾಸ್ ಮನೆ ಖುಷಿಯಾಗಿದೆ, ದೊಡ್ಮನೆ ಅಂಗಳಕ್ಕೆ ಕಾಲಿಡುವ ಸೌಭಾಗ್ಯ ಸಿಕ್ಕವರು ಸಂತೋಷದಲ್ಲಿದ್ದಾರೆ. ಬಿಗ್ಬಾಸ್ ಸೀಸನ್ ೮ ಅದ್ದೂರಿಯಾಗಿ ಅಂತ್ಯಗೊಂಡ ಬೆನ್ನಲ್ಲೇ `ಬಿಗ್ಬಾಸ್ ಫ್ಯಾಮಿಲಿ’ ಶೋ ಆರಂಭಗೊಂಡಿರುವುದನ್ನು ಕಂಡು ಟಿವಿ ವೀಕ್ಷಕರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಆರು ದಿನದ ಬಿಗ್ಬಾಸ್ ಫ್ಯಾಮಿಲಿ ಕಾರ್ಯಕ್ರಮ ಹೇಗಿರಬಹುದು ಅಂತ ಲೆಕ್ಕಚ್ಚಾರ ಶುರುವಿಟ್ಟುಕೊಂಡಿದ್ದಾರೆ. ದೊಡ್ಮನೆ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿರುವ ಕಿರುತೆರೆ ಸೂಪರ್‌ಸ್ಟರ‍್ಸ್ಗಳಿಗೆ ಉಘೇ ಉಘೇ ಎನ್ನುತ್ತಿರುವ ವೀಕ್ಷಕ ಮಹಾಪ್ರಭುಗಳು ಹದಿನೈದು ಮಂದಿ ಕಂಟೆಸ್ಟೆಂಟ್‌ಗೆ ಗುಡ್ ಲಕ್ ಹೇಳ್ತಿದ್ದಾರೆ.
ಬಿಗ್ಬಾಸ್ ಸೀಸನ್ 2ರ ವಿನ್ನರ್ ಅಕುಲ್ ಬಾಲಾಜಿ ಮತ್ತೆ ದೊಡ್ಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್, ಗಿಣಿರಾಮ ಸೀರಿಯಲ್ ಕೋಸ್ಟಾರ್ಸ್ ಗೀತಾ ಸೀರಿಯಲ್ ಜೋಡಿ, ನನ್ನರಸಿ ರಾಧೆ ಧಾರಾವಾಹಿಯ ಅಗಸ್ತ್ಯ ಹಾಗೂ ಇಂಚರ, ಪದ್ಮಾವತಿಯ ಸೀರಿಯಲ್ ಹೀರೋ, ಮಂಗಳಗೌರಿ ಸೀರಿಯಲ್‌ನ ಕಥಾನಾಯಕ ರಾಜೀವ್, ಮಜಾಭಾರತದ ಸುಂದರಿ ಸೇರಿದಂತೆ ಈಗಾಗಲೇ ಬಿಗ್ಬಾಸ್ ಅಂಗಳಕ್ಕೆ ಬಂದುಹೋಗಿದ್ದ ನಿರಂಜನ್ ದೇಶ್‌ಪಾಂಡೆ ಕೂಡ ಈಗ ಬಿಗ್ಬಾಸ್ ಫ್ಯಾಮಿಲಿ'ಗೆ ಜೊತೆಯಾಗಿದ್ದಾರೆ. ಒಟ್ಟು ಹದಿನೈದು ಜನ ಕಲರ್ಸ್ ಕನ್ನಡದ ಸ್ಪರ್ಧಿಗಳು ದೊಡ್ಮನೆ ಅಖಾಡಕ್ಕೆ ಜಿಗಿದಿದ್ದಾರೆ.
ಒಂದು ವಾರದ ಮಟ್ಟಿಗೆ ನಡೆಯುವ ಶೋಗೆ ರಂಗುತುಂಬಿ ಕರುನಾಡ ಜನರನ್ನು ಮನರಂಜಿಸೋಕೆ ಮನಸ್ಸು ಮಾಡಿದ್ದಾರೆ. ವಿವಿಧ ರೀತಿಯ ಟಾಸ್ಕ್ ಗಳಿರಲಿದ್ದು, ಹದಿನೈದು ಜನ ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯಲಿದೆ. ಗೆದ್ದವರಿಗೆಬಿಗ್‌ಬಾಸ್ ಫ್ಯಾಮಿಲಿ ಅವಾರ್ಡ್’ ಸಿಗಲಿದೆ. ಶನಿವಾರ ಹಾಗೂ ಭಾನುವಾರ ಸಂಜೆ ೪ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ. ವೀಕೆಂಡ್‌ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವುದರಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆನ್ನುವ ಕೂತೂಹಲ ಮನೆಮಾಡಿದೆ. ಆ ಕೌತುಕಕ್ಕೆ ಹಾಗೂ `ಬಿಗ್‌ಬಾಸ್ ಫ್ಯಾಮಿಲಿ ಅವಾರ್ಡ್’ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.
ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಮೂಕನಾಯಕ” ಸಿನಿಮಾಗೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ನೋಯ್ಡಾದ ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಹೌದು, ಕಳೆದ 2017 ರಲ್ಲಿ ಈ ಚಿತ್ರವನ್ನು ಮಾಡಲಾಗಿತ್ತು. ಬಾಲರಾಜ್ ಅವರ ನಿರ್ಮಾಣದ ಈ ಚಿತ್ರವನ್ನು ಬರಗೂರು ರಾಮಚಂದ್ರಪ್ಪ ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶಿಸಿದ್ದರು. ನೋಯ್ಡಾದ ಸಂಸ್ಥೆಯೊಂದು ಇನ್‌ಕ್ರೆಡಿಬಲ್ ಸಿನಿ ಅವಾರ್ಡ್ಸ್‌ಗಾಗಿ ಹತ್ತು ವರ್ಷಗಳ ಒಳಗೆ ನಿರ್ಮಾಣಗೊಂಡ ವಿಶ್ವದ ಎಲ್ಲಾ ಭಾಷೆಯ ಚಿತ್ರಗಳನ್ನೂ ಆಹ್ವಾನಿಸಿತ್ತು. “ಮೂಕ ನಾಯಕ” ಚಿತ್ರವನ್ನೂ ಸ್ಪರ್ಧೆಗೆ ಕಳಿಸಲಾಗಿತ್ತು. ಪ್ರವೇಶ ಪಡೆದ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ವಿವಿಧ ವಿಭಾಗಗಳ ಸ್ಪರ್ಧೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಹೀಗೆ ನಾಮ ನಿರ್ದೇಶನಗೊಂಡ “ಮೂಕ ನಾಯಕ” ಚಿತ್ರವು ವಿಶ್ವದ ವಿವಿಧ ಭಾಷೆಗಳ ನಾಮ ನಿರ್ದೇಶಿತ ಚಿತ್ರಗಳೊಂದಿಗೆ ಸ್ಪರ್ಧಿಸಿ, ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜವಾಗಿದೆ.
ಮಾತು ಬಾರದ ಮೂಕ ಚಿತ್ರಕಲಾವಿದರ ಆಶಯ ಮತ್ತು ಅಭಿವ್ಯಕ್ತಿ ವಿನ್ಯಾಸವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರವು ಚಿತ್ರಕಲೆಯ ವಿವಿಧ ಸಾಧ್ಯತೆಗಳನ್ನು ಸಾದರಪಡಿಸಿದೆ. ಸಮುದಾಯದತ್ತ ಸಿನಿಮಾ ಎಂಬ ಪರಿಕಲ್ಪನೆಯಡಿಯಲಿ ಚಿತ್ರಯಾತ್ರೆ ನಡೆಸಿ, ಈಗಾಗಲೇ ಅನೇಕ ಊರುಗಳಲ್ಲಿ ಈ ಚಿತ್ರ ಪ್ರದರ್ಶನ ಮಾಡಲಾಗಿದೆ. ಈ ಹಿಂದೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು.
ಮೂಕ ಚಿತ್ರ ಕಲಾವಿದನ ಪಾತ್ರದಲ್ಲಿ ಗೋವಿಂದ್ ನಟಿಸಿದ್ದು, ಸೋದರಿ ಪಾತ್ರದಲ್ಲಿ “ಸ್ಪರ್ಶ” ರೇಖಾ ನಟಿಸಿದ್ದರು. ಅವರ ಪಾತ್ರಕ್ಕೆ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟಿ ಪ್ರಶಸ್ತಿಯೂ ಸಿಕ್ಕಿತ್ತು. ಚಿತ್ರದಲ್ಲಿ ಸುಂದರರಾಜ್, ಯತಿರಾಜ್, ಶೀತಲ್ ಶೆಟ್ಟಿ, ವೆಂಕಟರಾಜ್ ಇತರರು ಇದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣವಿದೆ. ಸುರೇಶ್ ಅರಸು ಸಂಕಲನವಿದೆ. ಶಮಿತಾ ಮಲ್ನಾಡ್ ಸಂಗೀತವಿದೆ.
ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ “ಎದೆ ತುಂಬಿ ಹಾಡುವೆನು” ಈಗ ಮತ್ತೆ ಅವರ ನೆನಪಲ್ಲಿ ಶುರುವಾಗುತ್ತಿದೆ. ಈ ಕುರಿತಂತೆ ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಒಂದಷ್ಟು ಮಾಹಿತಿ ನೀಡಿದ್ದಾರೆ. “ನಾನು ಮೂರು ವರ್ಷಗಳ ಹಿಂದೆ ಚೆನ್ನೈ ನಲ್ಲಿ ಎಸ್. ಪಿ. ಬಿ. ಅವರನ್ನು ಭೇಟಿ ಮಾಡಿ, “ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಪುನಃ ಆರಂಭಿಸೋಣ ಎಂದು ಕೇಳಿದ್ದೆ. ಆಗ ಅವರು ನನ್ನ ಶೆಡ್ಯುಲ್ ನೋಡಿ ತಿಳಿಸುತ್ತೀನಿ ಅಂದರು. ಆನಂತರ ಅವರಿಂದ ನನಗೊಂದು ಕಾಗದ ಬಂತು. ನನ್ನ ಬೇರೆ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿರುವುದರಿಂದ 2019 ರಲ್ಲಿ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮ ಆರಂಭಿಸೋಣ ಅಂತ ಬರೆದಿದ್ದರು.
ನಂತರ ಕಾರ್ಯಕ್ರಮದ ರೂಪುರೇಷೆ ಸಿದ್ದಗೊಂಡು, ಆರಂಭ ಮಾಡೋಣ ಅಂದುಕೊಳ್ಳುತ್ತಿರುವಾಗ “ಕೊರೊನಾ” ಶುರುವಾಯಿತು. ನಂತರದ ದಿನಗಳಲ್ಲಿ ಎಸ್ ಪಿ ಬಿ ನಮ್ಮಿಂದ ದೂರವಾದರು. ಈಗ ಅವರ ನೆನಪಲ್ಲಿ ಈ ಕಾರ್ಯಕ್ರಮ ಇದೇ ಆಗಸ್ಟ್ 14 ರಿಂದ ಆರಂಭವಾಗಲಿದೆ. ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ತೀರ್ಪುಗಾರರಾಗಿ ಎಸ್ ಪಿ ಬಿ ಅವರ ಪುತ್ರ ಎಸ್ ಪಿ ಚರಣ್ ಇರಲಿದ್ದಾರೆ. ಈಗಾಗಲೇ ಆಡಿಷನ್ ಮೂಲಕ ಹದಿನಾರರಿಂದ, ಹದಿನೆಂಟು ಗಾಯಕರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಕೊಟ್ಟರು ಪರಮೇಶ್ವರ ಗುಂಡ್ಕಲ್.
ತೀರ್ಪುಗಾರರಾಗಿರುವ ರಘು ದೀಕ್ಷಿತ್, “ನಾನು ಚಿಕ್ಕವನಾಗಿದಾಗ ನಮ್ಮಮ್ಮ ರೆಡಿಯೋ ಹಾಕಿದ ತಕ್ಷಣ ಎಸ್ ಪಿ ಬಿ ಅವರ ಹಾಡು ಬರುತಿತ್ತು. ಆಗಿನಿಂದ ಅವರ ಕಂಠಕ್ಕೆ ಅಭಿಮಾನಿ ನಾನು. ಅಂತಹ ಮಹಾನ್ ಗಾಯಕ ನಡೆಸುಕೊಡುತ್ತಿದ್ದ ಕಾರ್ಯಕ್ರಮಕ್ಕೆ ನೀವು ತೀರ್ಪುಗಾರರಾಗಬೇಕು ಎಂದು ಪರಮೇಶ್ವರ್ ಅವರು ಹೇಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ ಎಂಬುದು ರಘು ದೀಕ್ಷಿತ್ ಮಾತು.
ಎಸ್ ಪಿ ಬಿ ಅವರ ಮಾನಸ ಪುತ್ರರೆಂದೇ ಖ್ಯಾತರಾಗಿರುವ ರಾಜೇಶ್ ಕೃಷ್ಣನ್, “ಈ ಕಾರ್ಯಕ್ರಮವನ್ನು ಎಸ್ ಪಿ ಬಿ ಅವರೆ ನಮ್ಮಲ್ಲಿ ನಿಂತು ನಡೆಸಿಕೊಡುತ್ತಾರೆ. ಅವರಿಂದ ನಾವು ತಿಳಿದುಕೊಂಡದ್ದನ್ನು, ಈಗಿನ ಗಾಯಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಾನು ಹಂಸಲೇಖ ಅವರ ಬಳಿ ಟ್ರ್ಯಾಕ್ ಹಾಡುವ ಕಾಲದಲ್ಲಿ ನಾನು ಎಸ್ ಪಿ ಬಿ ಅವರು ಇಲ್ಲಿಗೆ ಬಂದಾಗ ತುಂಬಾ ಹತ್ತಿರದಿಂದ ನೋಡಿದವನು ನಾನು ಅವರು ನೀನು ಏಕೆ ನನ್ನ ಹಾಗೆ ಹಾಡುತ್ತೀಯಾ? ಎಂದು ಕೇಳಿದ್ದು ಉಂಟು.. ಅವರು ನನ್ನ ಮೇಲಿಟ್ಟಿದ ಪ್ರೀತಿ ಅಪಾರ. ಹೀಗೆ ಎಸ್ ಪಿ ಬಿ ಅವರೊಂದಿಗಿನ ಒಡನಾಟವನ್ನು ರಾಜೇಶ್ ಕೃಷ್ಣನ್ ನೆನಪಿಸಿಕೊಂಡರು.
ಕೆಲವು ವರ್ಷಗಳ ಹಿಂದೆ ಭಾನುವಾರ ರಾಮಾಯಣ ಹಾಗೂ ಮಹಾಭಾರತ ಎಂಬ ಎರಡು ಮಹಾನ್ ಧಾರಾವಾಹಿಗಳು ದೂರದರ್ಶನದಲ್ಲಿ ಬರುತ್ತಿದ್ದವು. ಕೋಟ್ಯಾಂತರ ಜನ ಅದನ್ನು ವೀಕ್ಷಿಸುತ್ತಿದ್ದರು. ಆನಂತರ ಅಷ್ಟೇ ಜನಪ್ರಿಯವಾಗಿದ್ದು “ಎದೆ ತುಂಬಿ ಹಾಡುವೆನು”. ನಾನು ಈಗ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ವಿಟಿ ನೋಡಿದಾಗ ಭಯವಾಗುತ್ತಿದೆ. ಅಲ್ಲಿ ಬರುವ ಹೊಸ ಗಾಯಕರಿಗಿಂತ ನಾವು ತಿಳಿದುಕೊಳ್ಳುವುದು ಸಾಕಷ್ಟಿದೆ. ತೀರ್ಪುಗಾರರಾಗಿ ಎಸ್ ಪಿ ಬಿ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರೀತಿ ಅನುಕರಣೀಯ. ಅವರ ಹೆಸರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಿಕೊಡುವುದು ನಮ್ಮ ಕರ್ತವ್ಯ ಎಂದರು ವಿ.ಹರಿಕೃಷ್ಣ.
ಅಪ್ಪನ ನೇತೃತ್ವದಲ್ಲಿ ಮೂಡಿಬರುತ್ತಿದ್ದ, ” ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿರುವುದಕ್ಕೆ. ಕಲರ್ಸ್ ವಾಹಿನಿಗೆ ಧನ್ಯವಾದ ಎಂದರು ಎಸ್ ಪಿ ಬಿ ಪುತ್ರ ಎಸ್ ಪಿ ಚರಣ್. ರಾಮೋಜಿರಾವ್ ಅವರು ತೆಲುಗಿನಲ್ಲಿ “ಪಾಡುತ ತಿಯಗ” ಎಂಬ ಕಾರ್ಯಕ್ರಮ ನಡೆಸುತ್ತಿದ್ದರು. ಆನಂತರ ಅಪ್ಪ ಈ ಕಾರ್ಯಕ್ರಮವನ್ನು ಕನ್ನಡದಲ್ಲಿ “ಎದೆ ತುಂಬಿ ಹಾಡುವೆನು” ಎಂಬ ಶೀರ್ಷಿಕೆಯಿಂದ ಆರಂಭಿಸಿದರು. ಕಾರ್ಯಕ್ರಮ ಅತ್ಯಂತ ಜನಪ್ರಿಯವೂ ಆಯಿತು. ಈ ಟಿವಿ ಅವರು ಈ ಕಾರ್ಯಕ್ರಮ ನಿಲಿಸಿದಾಗ ಅಪ್ಪನಿಗೆ ಬೇಸರವಾಗಿದ್ದು ಉಂಟು. ತೆಲುಗು, ಕನ್ನಡದಲ್ಲಿ ಜನಪ್ರಿಯವಾಗಿದ್ದ ಈ ಕಾರ್ಯಕ್ರಮವನ್ನು ತಮಿಳಿನಲ್ಲಿ ಮಾಡಲಿಲ್ಲ ಎಂಬ ಕೊರಗು ಅಪ್ಪನಲ್ಲಿತ್ತು ಎಂದರು ಚರಣ್.
ನಮ್ಮ ಬಾಲ್ಯದಲ್ಲಿ ಅಪ್ಪನೊಂದಿಗೆ ಹೆಚ್ಚು ಸಮಯ ಕಳೆಯಲಿಲ್ಲ.. ಅಪ್ಪ ಯಾವಗಲೂ ಬ್ಯುಸಿ ಇರುತ್ತಿದ್ದರು. ನನ್ನ ಕಿರಿಯ ಸಹೋದರನಂತಿರುವ ರಾಜೇಶ್ ಕೃಷ್ಣನ್ ಅಪ್ಪನೊಂದಿಗೆ ಸಾಕಷ್ಟು ಸಮಯ ಕಳೆದಿದ್ದಾರೆ ಎಂದು ಚರಣ್ ಹಿಂದಿನ ದಿನಗಳನ್ನು ಮೆಲಕು ಹಾಕಿದರು.
ಕೆಜಿಎಫ್ ಸುಂದರಿ ಅರೆಸ್ಟ್ ಅಂದಾಕ್ಷಣ ಅರೆಕ್ಷಣ ಶಾಕ್ ಆಗೋದು ಸತ್ಯ. ಚಿನ್ನದ ಸಾಮ್ರಾಜ್ಯದ ಯುವರಾಣಿ ಕಣ್ಮುಂದೆ ಬರೋದು ಖಚಿತ. ಆದರೆ ಇದು ಕಥಾನಾಯಕಿಯ ಕಥೆಯಲ್ಲ ಸೆಲ್ಫ್ ಮೇಡ್ ಷೆಹಜಾದ್ ಜೊತೆ ಕುಣಿದು ಕುಪ್ಪಳಿಸಿದ ಸೆಕ್ಸಿ ಗರ್ಲ್ ಸ್ಟೋರಿ.
ಯಾರಪ್ಪ ಆ ಮಾದಕ ಮದನಾರಿ ಅಂತೀರಾ? ಮತ್ಯಾರು ಅಲ್ಲಾರ್ರೀ ಕೆಜಿಎಫ್ ಚಾಪ್ಟರ್ 1 ಹಿಂದಿ ಅವತರಣಿಕೆಯ ‘ಗಲಿ ಗಲಿ ಮೇ’ ಸ್ಪೆಷಲ್ ಸಾಂಗ್ ನಲ್ಲಿ ರಾಕಿಭಾಯ್ ಜೊತೆ ಲೆಗ್ ಶೇಕ್ ಮಾಡುತ್ತಾ, ಕಣ್ಣಲ್ಲೇ ಕಥಕ್ಕಳಿ ಆಡಿದ ಮನಮೋಹಕ ಬೆಡಗಿ ಮೌನಿರಾಯ್.
ಸರ್ರೀ ಎಲ್ಲಾ ಓಕೆ, ಕೆಜಿಎಫ್ ಸುಂದರಿ ಅರೆಸ್ಟ್ ಅಂದರಲ್ಲ ಅದರ ಬಗ್ಗೆ ಕ್ಲ್ಯಾರಿಟಿ ಕೊಡಿ ಎನ್ನುವವರಿಗೆ ಉತ್ತರ ಕೊಡ್ಲೆಬೇಕು ಕೊಡ್ತೀವಿ. ಹೆಡ್ಡಿಂಗ್ ನಲ್ಲೇ ಕೆಜಿಎಫ್ ಸುಂದರಿನಾ ಅರೆಸ್ಟ್ ಮಾಡಿದ್ದು ಪೊಲೀಸರಲ್ಲ ಅಂತ ಹೇಳಿಬಿಟ್ಟಿದ್ದೇವೆ.ಹಾಗಾದ್ರೆ ಮತ್ತಿನ್ಯಾರು ಎನ್ನುವ ಕೌತುಕದ ಪ್ರಶ್ನೆಗೆ ಉತ್ತರ ಪಡ್ಡೆಹೈಕ್ಳು ಹಾಗೂ ಫ್ಯಾನ್ ಫಾಲೋಯರ್ಸ್.
ಬಿಟೌನ್ ಹಾಟ್ ಬ್ಯೂಟಿ, ಸ್ಟ್ರಾಬೆರಿಯಷ್ಟೇ ಸೊಗಸಾದ ಸ್ವೀಟಿ ಮೌನಿರಾಯ್ ಗೆ ಕೋಟಿಗಟ್ಟಲೇ ಫ್ಯಾನ್ಸ್ ಇದ್ದಾರೆ. ಮಾದಕ ಮೈಮಾಟದಿಂದ ಮಾತ್ರವಲ್ಲ ಮಜ್ಬೂತ್ ಅಭಿನಯದ ಮೂಲಕವೂ ಮೌನಿ ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ ಟೂ ಪೀಸ್ ಹಾಕಿಕೊಂಡು, ಫೋಟೋಶೂಟ್ ಮಾಡಿಸೋಣವೆಂದು ಸ್ವಿಮ್ಮಿಂಗ್ ಫುಲ್ ಗಿಳಿದ ಮೌನಿ ಫ್ಯಾನ್ಸ್ ಫಾಲೋಯರ್ಸ್ ಹಾರ್ಟ್ನ ಬ್ರೇಕ್ ಮಾಡಿದರು. ಇದರ ಬೆನ್ನಲ್ಲೇ ಪಡ್ಡೆಹೈಕ್ಳು ಮೌನಿಯನ್ನ ಕೆಂಪಾದ ಹೃದಯದ ಲಾಕಪ್ ನಲ್ಲಿ ಬಂಧಿಸಿಬಿಟ್ಟರು. ಅರೆಸ್ಟ್ ಆದ ಮೌನಿ ಕೇಕೆಹಾಕಿದರು.
ನಟ- ನಟಿಯರನ್ನ ಅಭಿಮಾನಿ ದೇವರುಗಳು ತಮ್ಮ ಹೃದಯ ಸಿಂಹಾಸನದಲ್ಲಿ ಬಂಧಿಸಿಕೊಂಡು ಪೂಜೆ ಮಾಡ್ತಾರೆ. ಅದರಂತೇ, ಮೌನಿರಾಯ್ ನ ಕೂಡ ಅವರ ಫ್ಯಾನ್ಸ್ ಫಾಲೋಯರ್ಸ್ ಅಭಿಮಾನಿಸುತ್ತಾರೆ. ಈ ಮಧ್ಯೆ ಪಡ್ಡೆಹೈಕ್ಳು ಆಗಾಗ ಮಾದಕ ನಟಿಯರನ್ನ ಅರೆಸ್ಟ್ ಮಾಡುತ್ತಲೇ ಇರುತ್ತಾರೆ. ವೆದರ್ ಕೈಕೊಟ್ಟಾಗ ಹಾಗೂ ಚಳಿಗಾಲ ಬಂದಾಗ ಸೆಕ್ಸಿಬೊಂಬೆಗಳನ್ನು ಕಣ್ತುಂಬಿಕೊಂಡು ಮೈಮನಸ್ಸನ್ನು ತಂಪುಮಾಡಿಕೊಳ್ತಾರೆ. ಹೀಗ್ ಮಾಡೋದು ಪಡ್ಡೆಹೈಕ್ಳ ತಪ್ಪಲ್ಲ ಸೃಷ್ಠಿಕರ್ತ ಬ್ರಹ್ಮನದ್ದೇ ತಪ್ಪು ತಪ್ಪು ತಪ್ಪು