ಸಿನಿಮಾರಂಗ ಹೊಸ ಮನ್ವಂತರಕ್ಕೆ ತೆರೆದುಕೊಳ್ಳಲು ರೆಡಿಯಾಗುತ್ತಿದೆ.ಇಷ್ಟರಲ್ಲಿಯೇ ಚಿತ್ರಮಂದಿರಗಳಲ್ಲಿನ ನೂರರಷ್ಟು ಸೀಟು ಭರ್ತಿಗೆ ಸರ್ಕಾರ ಅವಕಾಶನೀಡುವ ಸಾದ್ಯತೆ ಇದೆ. ಹಾಗೊಂದು ಸುಳಿವು ಮಂಗಳವಾರ ಸರ್ಕಾರದಿಂದ ಸಿಕ್ಕಿದೆ. ಮಂಗಳವಾರ ಸಿನಿಮಾ ರಂಗವನ್ನು ಪ್ರತಿನಿಧಿಸಿ ನಿರ್ಮಾಪಕರಾದ ಸೂರಪ್ಪ ಬಾಬು, ಕೆ.ಪಿ.ಶ್ರೀಕಾಂತ್ ಹಾಗೂ ಜಯಣ್ಣ ಸೇರಿದಂತೆ ಒಂದು ನಿಯೋಗವು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿತ್ತು . ಈ ಸಂದರ್ಭದಲ್ಲಿ ಚಿತ್ರರಂಗದ ಸದ್ಯದ ಸ್ಥಿತಿಗತಿ ಹಾಗೂ ಸದ್ಯಕ್ಕೆ ಇರುವ ವಾತಾವರಣ ವನ್ನು ವಿವರಿಸಿ, ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿಮಾಡಿತು.ನಿರ್ಮಾಪಕರ ಜತೆಗಿನ ಮಾತುಕತೆ ನಂತರ ಸಚಿವ ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಕಾರಣಕ್ಕೆ ಸಿನಿಮಾ ರಂಗ ಆನುಭವಿಸಿದ ಕಷ್ಟದ ಅರಿವು ನಮಗೂ ಇದೆ. ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮಾತನಾಡುತ್ತೇವೆ. ಬಹುತೇಕ ತಾಂತ್ರಿಕ ಸಮಿತಿ ಕೂಡ ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಇಷ್ಟರಲ್ಲಿಯೇ ಅವಕಾಶ ನೀಡುವ ಆಶಾಭಾವನೆ ನಮಗೂ ಇದೆ ಎಂದರು.
ಚಿತ್ರಮಂದಿರಗಳಲ್ಲಿ ಈಗಾಗಲೇ ಶೇ.೫೦ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಈಗಷ್ಟೇ ನಿರ್ಮಾಪಕರು ನನ್ನನ್ನ ಭೇಟಿ ಮಾಡಿದ್ದರು. ಅವರು ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾ ರಂಗಕ್ಕಾದ ನಷ್ಟದ ಬಗ್ಗೆ ಅವರು ಹೇಳಿದ್ದಾರೆ. ಸಿನಿಮಾ ರಂಗದವರು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರ ಬಗ್ಗೆ ನಮಗೂ ಅರಿವಿದೆ. ಇದನ್ನು ಮುಖ್ಯಮಂತ್ರಿಗಳ ಜತೆಗೂ ಮಾತನಾಡುತ್ತೇನೆ. ಆದಷ್ಟು ಬೇಗ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.
ಕೊರೋನಾ ಈಗಲೂ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗಲೂ ಒಂದಷ್ಟು ಪಾಸಿಟಿವ್ ಕೇಸುಗಳು ಬರುತ್ತಿವೆ. ಈಗ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ತಜ್ಞರ ಸಲಹೆಯೇ ಅಂತಿಮ. ಈ ನಿಟ್ಟಿನಲ್ಲಿಯೇ ಈಗಾಗಲೇ ತಾಂತ್ರಿಕ ಪರಿಣಿತರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮತ್ತೆ ಮಾತನಾಡುತ್ತೇವೆ. ಆ ಸಮಿತಿ ಯಾವ ಅಭಿಪ್ರಾಯ ನೀಡಬಹುದು ಎನ್ನುವ ಬಗ್ಗೆ ನಮಗೂ ಕುತೂಹಲ ಇದೆ. ಸದ್ಯಕ್ಕೆ ಕೊರೋನಾ ಪಾಸಿಟಿವ್ ಸಂಖ್ಯೆ ಕಮ್ಮಿ ಆಗುತ್ತಿರುವುದರಿಂದ ಸಿನಿಮಾ ಮಂದಿರಗಳಿಗೆ ಶೇ.100 ರಷ್ಟು ಅವಕಾಶ ಸಿಗಬಹುದು ಎಂಬ ಆಶಾಭಾವನೆ ಇದೆ ಎಂದರು.
ಪೂರ್ಣಪ್ರಮಾಣದ ಸೀಟು ಭರ್ತಿಗೆ ಅವಕಾಶ ನೀಡುವುದಕ್ಕೂ ಮೊದಲು ಚರ್ಚೆ ನಡೆಸಬೇಕಿದೆ. ಬಳಿಕ ಸೋಂಕಿತರ ಸಂಖ್ಯೆ ನೋಡಿಕೊಂಡು ತೀರ್ಮಾನ ಮಾಡಲಿದ್ದೇವೆ. ಸೋಂಕು ಮತ್ತೆ ಹೆಚ್ಚಳವಾಗದಂತೆ ಕ್ರಮ ವಹಿಸಬೇಕಾಗುತ್ತದೆ. ಸಿಎಂ, ನಾನು ಹಾಗೂ ಎಲ್ಲರೂ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಕನ್ನಡದ ಸಿನಿಪ್ರೇಮಿಗಳಿಗೆ ಗೋಲ್ಡನ್ ಆಪರ್ಚುನಿಟಿ. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರದ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ರವರು, ಮಾಗಡಿ ರಸ್ತೆಯ ವೀರೇಶ್ ಚಿತ್ರ ಮಂದಿರದಲ್ಲಿ ಚಡ್ಡಿದೋಸ್ತ್ ಚಿತ್ರ ವೀಕ್ಷಿಸಿದವರಿಗೆ ಉಚಿತವಾಗಿ ಬಂಗಾರದ ನಾಣ್ಯ ವನ್ನು ಕೊಡುವುದಾಗಿ ಘೋಷಿಸಿದ್ದಾರೆ.
ಹೌದು, ಈ ಕೊಡುಗೆ ಪ್ರತಿ ಪ್ರದರ್ಶನಕ್ಕೂ ಅನ್ವಯಿಸಲಿದೆ. ಒಂದು ಪ್ರದರ್ಶನದಲ್ಲಿ ಎಷ್ಟು ಜನ ಸಿನಿಮಾ ನೋಡುತ್ತಾರೋ ಅವರಲ್ಲಿ ಒಬ್ಬರನ್ನು ಲಕ್ಕಿ ಡಿಪ್ ಮೂಲಕ ಆರಿಸಿ ಅವರಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ಕೊಡಲಿದ್ದಾರೆ.
ಸ್ವತಃ ನಿರ್ಮಾಪಕ ಸೆವೆನ್ ರಾಜ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆಸ್ಕರ್ ಕೃಷ್ಣ ನಿರ್ದೇಶಿಸಿ, ಅವರೊಂದಿಗೆ ಲೋಕೇಂದ್ರ ಸೂರ್ಯ ನಾಯಕ ನಟರಾಗಿ ಅಭಿನಯಿಸಿರುವ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರವು ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸಿನ ಖುಷಿಯಲ್ಲಿ ನಿರ್ಮಾಪಕ ಸೆವೆನ್ ರಾಜ್ ರವರು ಈ ಕೊಡುಗೆ ನೀಡಲು ಮುಂದಾಗಿದ್ದಾರೆ.
ಈ ಕೊಡುಗೆಯು 21-09-2021 ರಿಂದ ವೀರೇಶ್ ಚಿತ್ರಮಂದಿರದಲ್ಲಿ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಮಾತ್ರ ಅನ್ವಯಿಸಲಿದೆ.
ಇನ್ನೇಕೆ ತಡ, ನಾಳೆಯಿಂದ ‘ಚಡ್ಡಿ ದೋಸ್ತ್’ ಸಿನಿಮಾ ನೋಡಿ, ಬಂಗಾರದ ನಾಣ್ಯ ಗೆಲ್ಲಿ.
ಗಂಧದಗುಡಿಯಲ್ಲಿ ಹೊಡೆದ ಹೊಂಬಾಳೆ ಗೊನೆಗೆ ಇವತ್ತು ಪಕ್ಕದ ರಾಜ್ಯದಲ್ಲಿ ಮಾತ್ರವಲ್ಲ ಹೊರದೇಶದಲ್ಲೂ ಬೇಡಿಕೆ ಇದೆ. ಅದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುವ ಚಿತ್ರಗಳು ಸಿನಿಮಾ ಪ್ರೇಕ್ಷಕರಿಗೆ ಬಾಳೆದೆಲೆಯಲ್ಲಿ ಹಬ್ಬದೂಟ ಸವಿದಂತಿರುತ್ತದೆ. ಅಟ್ ದಿ ಸೇಮ್ ಟೈಮ್ ಬಾಳೆದೆಲೆಯಲ್ಲಿಯೇ ಬಿರಿಯಾನಿ ಬಡಿದ್ಹಂಗೆ ಇರುತ್ತೆ. ಸದ್ಯ ಹಾಟ್ ಅಂಡ್ ಸ್ಮೈಸಿ ಸಮಾಚಾರ್ ಅಂದರೆ ಹೊಂಬಾಳೆ ಮುಖ್ಯಸ್ಥರು ಸೆಪ್ಟೆಂಬರ್ 22 ರಂದು ಹಬ್ಬದೂಟ ಬಡಿಸೋದಕ್ಕೆ ರೆಡಿಯಾಗಿರುವುದು.
ಹೌದು, ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ. ‘ಅನ್ನದಾತೋ ಸುಖೀಭವ’ ಹೀಗಂತ ಬಾಳೆದೆಲೆಯಲ್ಲಿಯೇ ಬರೆದು ತಮ್ಮ ಹೊಂಬಾಳೆಯ 12ನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ನ ಇದೇ ಸೆಪ್ಟೆಂಬರ್ 22 ರಂದು ರಿವೀಲ್ ಮಾಡುವುದಾಗಿ ಹೊಂಬಾಳೆ ಮುಖ್ಯಸ್ಥರು ಸೋಷಿಯಲ್ ಮೀಡಿಯಾ ದಲ್ಲಿ ಅನೌನ್ಸ್ ಮಾಡಿದ್ದಾರೆ.
ಹೊಂಬಾಳೆಯ 12ನೇ ಚಿತ್ರದ ಹೀರೋ ಯಾರು? ನಿರ್ದೇಶಕರು ಯಾರು? ಈ ಕೂತೂಹಲದ ಪ್ರಶ್ನೆಗೆ ಉತ್ತರ ಬಾಳೆದೆಲೆಯ ಪೋಸ್ಟರ್ ಉತ್ತರ ಕೊಟ್ಟಿಲ್ಲ. ಆದರೆ, ಕಳೆದೆರಡು ದಿನಗಳ ಹಿಂದೆ ರಾಜಕುಮಾರ ಸಾರಥಿ ಸಂತೋಷ್ ಆನಂದ್ ರಾಮ್ ಅವರು, ಪವರ್ ಸ್ಟಾರ್ ಗೆ ಮತ್ತೆ ಆಕ್ಷನ್ ಕಟ್ ಹೇಳ್ತಿರುವುದಾಗಿ ತಿಳಿಸಿದ್ದರು. ಹ್ಯಾಟ್ರಿಕ್ ಬಾರಿಸೋ ಜುಗಲ್ ಬಂಧಿಗೆ ಹೊಂಬಾಳೆ ಸಂಸ್ಥೆ ದುಡ್ಡುಹಾಕುವ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು. ಹೀಗಾಗಿ, ಹೊಂಬಾಳೆ ಬ್ಯಾನರ್ ನ 12ನೇ ಚಿತ್ರ ಪುನೀತ್-ಸಂತೋಷ್ ಆನಂದ್ ರಾಮ್ ಕಾಂಬೋದ ಮೂರನೇ ಚಿತ್ರ ಆಗಿರ್ಬೋದು ಅಂತ ಪ್ರಿಡಿಕ್ಟ್ ಮಾಡ್ಬೋದು.
ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ ತೋಟದಲ್ಲಿ ಆರು ಚಿತ್ರಗಳು ಅರಳುವ ಹಂತದಲ್ಲಿವೆ. ಕೆಜಿಎಫ್ ಚಾಪ್ಟರ್ 2, ಸಲಾರ್, ಭಗೀರ, ದ್ವಿತ್ವ, ರಿಚರ್ಡ್ ಆಂಟನಿ, ಕಾಂತಾರ, ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಅದ್ದೂರಿಯಾಗಿ ನಿರ್ಮಾಣಗೊಳ್ತಿವೆ.
ಕೆಜಿಎಫ್ ಚಾಪ್ಟರ್ ೨ ಹಾಗೂ ಸಲಾರ್ ಗಾಗಿ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಎದುರುನೋಡ್ತಿದೆ. ಈ ಮಧ್ಯೆಯೇ ಒಂದಾದ ಮೇಲೊಂದರಂತೆ ಹೊಂಬಾಳೆ ಸಂಸ್ಥೆ ಸಿನಿಮಾ ಅನೌನ್ಸ್ ಮಾಡ್ತಿದೆ. ಸೆ.22 ರಂದು 12 ನೇ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಹೊರಬರಲಿದೆ. ಹೇಗಿರಲಿದೆ ಟೈಟಲ್ ಕಮ್ ಫಸ್ಟ್ ಲುಕ್ ಜಸ್ಟ್ ವೇಯ್ಟ್ ಅಂಡ್ ವಾಚ್.
ಮೈಸೂರು ಅಂದಾಕ್ಷಣ ನೆನಪಾಗೋದೇ ಅರಮನೆ, ದಸರಾ ವೈಭವ. ಈಗ ಮೈಸೂರು ಹೆಸರಿನ ಸಿನಿಮಾವೊಂದು ಸದ್ದಿಲ್ಲದೆಯೇ ಚಿತ್ರೀಕರಣಗೊಂಡಿದೆ. ಹೌದು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೆಸರಿನ ಸಿನಿಮಾ ರೆಡಿಯಾಗಿದ್ದು, ಇನ್ನೇನು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗುತ್ತಿದೆ. ಇದು ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗನೊಬ್ಬನ ಲವ್‌ಸ್ಟೋರಿ ಹೊಂದಿದೆ.
ಸದ್ಯ ಚಿತ್ರೀಕರಣಗೊಂಡಿರುವ ಈ ಚಿತ್ರ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್ ಇತರೆ ಸ್ಥಳಗಳಲ್ಲಿ ಸುಮಾರು ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕಿರುತೆರೆಯಲ್ಲಿ ಕೆಲಸ ಮಾಡಿ ಅನುಭವ ಇರುವ ವಾಸುದೇವ ರೆಡ್ಡಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಸ್. ಆರ್. ಕಂಬೈನ್ಸ್ ಬ್ಯಾನರ್‌ನಲ್ಲಿ ವಾಸುದೇವ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಜಗದೀಶ್ (ಜೆ.ಕೆ), ಕೆ.ಆರ್.ಅಪ್ಪಾಜಿ (ಕೊಡವತ್ತಿ) ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗುತ್ತಿದೆ ಎಂಬುದು ವಿಶೇಷ. ಸಂವಿತ್ ಈ ಚಿತ್ರದ ನಾಯಕರಾಗಿದ್ದಾರೆ. ಅವರು ತೆಲುಗು, ಬಂಗಾಳಿ, ಭೋಜಪುರಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಕನ್ನಡದ ಮೊದಲ ಚಿತ್ರವಿದು. ಇನ್ನು, ಪೂಜಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಜೂ.ನರಸಿಂಹರಾಜು, ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈ ಶ್ರೀ, ರವಿಕುಮಾರ್ ಇತರರು ಈ ಚಿತ್ರದಲ್ಲಿದ್ದಾರೆ. ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ. ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣವಿದೆ. ಸಿದ್ದು ಭಗತ್ ಸಂಕಲನ ಮಾಡಿದರೆ, ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶ್ರೀಕಾಂತ್ ಸಾಹಸವಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಚಿತ್ರಕ್ಕೆ ಸೈಮಾ ಪ್ರಶಸ್ತಿ ಸಿಕ್ಕಿದೆ. ಒಡೆಯನ ಅನುಪಸ್ಥಿತಿಯಲ್ಲಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರು ಸ್ವೀಕರಿಸಿದ್ದರು. ಹೈದ್ರಾಬಾದ್ ನಿಂದ ಮರಳಿದ ಬೆನ್ನಲ್ಲೇ ಸೈಮಾ ಅವಾರ್ಡ್ ನ ಚಕ್ರವರ್ತಿಗೆ ತಲುಪಿಸಿದ್ದಾರೆ. ಖುಷಿ ಖುಷಿಯಾಗಿ ಕ್ಯಾಮೆರಾಗೆ ಒಂದು ಪೋಸ್ ಕೊಟ್ಟಿದ್ದಾರೆ. ಆ ಸಂತೋಷದ ಗಳಿಗೆಯ ಪಿಕ್ಚರ್ ಇದು.
ಅಂದ್ಹಾಗೇ,2021ರ ಸೈಮಾ ಅವಾರ್ಡ್ ಹೈದ್ರಾಬಾದ್ ಅಖಾಡದಲ್ಲಿ ಅದ್ದೂರಿಯಾಗಿ ತೆರೆಬಿದ್ದಿದೆ. ಯಾವತ್ತೂ ಕೂಡ ಸಿನಿಮಾ ಚಿತ್ರೋತ್ಸವದಲ್ಲಿ ಚಕ್ರವರ್ತಿ ಭಾಗಿಯಾಗಲ್ಲ. ಅದಕ್ಕೆ ಬಲವಾದ ಕಾರಣ ಇದೆ.
ಗುಂಪಲ್ಲಿ ಗೋವಿಂದ ಅಂತ ಎದ್ದುಬರುವ ಜಾಯಮಾನ ಗಂಧದಗುಡಿಯ ಮಂದಿಯ ಕಲಾವಿದರದ್ದಲ್ಲ ಬಿಡಿ.ಯಾವತ್ತು ಕನ್ನಡ ಚಿತ್ರರಂಗದ ಸಿನಿಮಾ ಮಂದಿಗೆ ಫ್ರಂಟ್ ರೋ ನಲ್ಲಿ ಕೂರೋದಕ್ಕೆ ಅವಕಾಶ ಸಿಗುತ್ತೋ, ಅವತ್ತು ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗ್ತೇನೆ. ಅಲ್ಲಿವರೆಗೂ, ಯಾವುದೇ ಕಾರಣಕ್ಕೆ ಚಿತ್ರೋತ್ಸವಕ್ಕೆ ಬಂದು ಹಿಂದೆ ಎಲ್ಲೋ ಮೂಲೆಯಲ್ಲಿ ಕನ್ನಡದ ಕಲಾವಿದರೆಲ್ಲ ಕೂರೋದಕ್ಕೆ ನಂಗೆ ಇಷ್ಟವಿಲ್ಲ.
ಹೀಗಾಗಿ, ನಾನು ಬರುವುದಿಲ್ಲ ಎನ್ನುವ ತೀರ್ಮಾನ ಡಿಬಾಸ್ ದರ್ಶನ್ ರದ್ದು. ಅವರ ನಿರ್ಧಾರ ಸರಿಯಾಗಿದೆ ಬಿಡ್ರಿ. ಯಾವತ್ತು ಕನ್ನಡ ಚಿತ್ರರಂಗದ ಸಾಧಕರನ್ನ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೊದಲ ಸಾಲಿನಲ್ಲಿ ಕೂರಿಸುವ ತೀರ್ಮಾನಕ್ಕೆ ಚಿತ್ರೋತ್ಸವದ ಮಂದಿ ಬರ್ತಾರೋ, ಅಂದೇ ಬಾಕ್ಸ್ ಆಫೀಸ್ ಸುಲ್ತಾನ್ ಹೋಗಲಿ ಅಲ್ಲವೇ.
“ವಾರ್ತೆಗಳು ಓದುತ್ತಿರುವವರು ಗೋಪಾಲ ಉಲ್ಲಾಳ. ಕಂದಕದಲ್ಲಿ ಬೇಸಾಯ ಮಾಡಲು ಸುಮಾರು ೬೫ ವರ್ಷದ ವ್ಯಕ್ತಿ ಮೃತಪಟ್ಟಿರೋದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಹೊಲ, ಗದ್ದೆ, ತೋಟಗಳಲ್ಲಿ ಬೇಸಾಯ ಮಾಡುವ ಪದ್ಧತಿ ಬಿಟ್ಟು ನೇರವಾಗಿ ಕಂದಕಕ್ಕೆ ಬಿದ್ದಿರುವ ಬಗ್ಗೆ ಕೃಷಿ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಜಾಹಿರಾತು. ನಂತರ ವಾರ್ತೆಗಳು ಮುಂದುವರೆಯುವುದು…” ಸದ್ಯದ ಮಟ್ಟಿಗೆ ಮೇಲಿನ ಈ ಡೈಲಾಗ್‌ಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಹೌದು, ಈ ಡೈಲಾಗ್‌ಗಳು ಜೋರು ಸುದ್ದಿಯಾಗಿರೋದಂತೂ ನಿಜ. ಅದು “ಪೆಟ್ರೋಮ್ಯಾಕ್ಸ್” ಸಿನಿಮಾದ್ದು.
“ಪೆಟ್ರೋಮ್ಯಾಕ್ಸ್” ಅಂದಾಕ್ಷಣ, ಬೇರೆ ಏನೇನೋ ನೆನಪಾಗುತ್ತೆ. ಆದರೆ, ಇದು ಅದಲ್ಲ. ಬದುಕಿಗೊಂದು ಭರವಸೆ ಮೂಡಿಸಿದ್ದೇ ಈ ಪೆಟ್ರೋಮ್ಯಾಕ್ಸ್ ಅನ್ನೋದನ್ನು ಇಡೀ ತಂಡ ಹೇಳುತ್ತಿದೆ. ಅಂದಹಾಗೆ, ಇದು ವಿಜಯ ಪ್ರಸಾದ್ ನಿರ್ದೇಶನದ ಚಿತ್ರ. ಇಲ್ಲಿ ನೀನಾಸಂ ಸತೀಶ್ ಇದ್ದಾರೆ. ಅವರಿಗೆ ಹರಿಪ್ರಿಯಾ ಜೋಡಿ. ಉಳಿದಂತೆ ಸಾಕಷ್ಟು ಕಲಾವಿದರು ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಪ್ರಸಾದ್ ಅಂದಾಕ್ಷಣ, ನೆನಪಾಗೋದೇ ಮತ್ತದೇ “ನೀರ್‌ದೋಸೆ”. ಅಲ್ಲಿ ಬರೀ ಡೈಲಾಗ್‌ನಿಂದಲೇ ಸಾಕಷ್ಟು ಮೋಡಿ ಮಾಡಿದ್ದ ವಿಜಯ್‌ಪ್ರಸಾದ್, ಈಗ “ಪೆಟ್ರೋಮ್ಯಾಕ್ಸ್” ಹಿಂದೆ ನಿಂತಿದ್ದಾರೆ. ಈ ಚಿತ್ರದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ವೀಕ್ಷಣೆ ಪಡೆದಿರುವುದಷ್ಟೇ ಅಲ್ಲ, ಅದು ಎಲ್ಲೆಡೆ ಸುದ್ದಿಗೂ ಗ್ರಾಸವಾಗಿದೆ. ಟ್ರೇಲರ್‌ನಲ್ಲಿರುವ ಡೈಲಾಗ್‌ಗಳೇ ಸಿನಿಮಾದ ಜೀವಾಳ ಅನ್ನುವಷ್ಟರ ಮಟ್ಟಿಗೆ ಟ್ರೇಲರ್ ಮೂಡಿಬಂದಿದೆ. ಟ್ರೇಲರ್ ನೋಡಿದವರಿಗೆ ನಿಜಕ್ಕೂ ಸಿನಿಮಾ ನೋಡಲೇಬೇಕೆನಿಸದೇ ಇರದು. ಅಷ್ಟರಮಟ್ಟಿಗೆ ನಿರ್ದೇಶಕ ವಿಜಯ್‌ಪ್ರಸಾದ್ ಅವರು ಅದನ್ನು ಕಟ್ಟಿಕೊಟ್ಟಿದ್ದಾರೆ.
ಟ್ರೇಲರ್ ನೋಡಿದವರಿಗೆ ಬರೀ ಪೋಲಿ ಮಾತುಗಳು ಕೇಳಿಸುತ್ತವೆ. ಹಾಗಂತ. ಇಲ್ಲಿ ಬರೀ ಪೋಲಿತನವಿಲ್ಲ. ಸಿನಿಮಾದಲ್ಲಿ ಪೆಟ್ರೋಮ್ಯಾಕ್ಸ್‌ನ ಭರವಸೆಯ ಬೆಳಕೂ ಕೂಡ ಇರಲಿದೆ ಎಂಬುದನ್ನು ಸ್ವತಃ ನಿರ್ದೇಶಕ ವಿಜಯ್ ಪ್ರಸಾದ್ ಹೇಳಿದ್ದಾರೆ. ಅವರು ಪೋಲಿ ಮಾತುಗಳ ಜೊತೆ ಜೊತೆಯಲ್ಲಿ “ಈ ಪ್ರೆಟ್ರೋಮ್ಯಾಕ್ಸ್ ಬದುಕಿನ ಅವಿಭಾಜ್ಯ ಅಂಗ” ಅಂತಾನೂ ಹೇಳಿದ್ದಾರೆ. ಅದು ಹೇಗೆ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನು, ಟ್ರೇಲರ್ ಬಗ್ಗೆ ಹೇಳುವುದಾದರೆ, ಒಂದು ಮಜ ಎನಿಸುವ ಟ್ರೇಲರ್ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ ಸಂಭಾಷಣೆಯೇ ಟ್ರೇಲರ್‌ನ ಹೈಲೈಟ್ ಅನ್ನಬಹುದು. ಟ್ರೇಲರ್‌ನ ಒಂದು ಡೈಲಾಗ್ ಹೀಗಿದೆ.
” ನಮ್ಮೂರಲ್ಲಿ ಒಬ್ಬ ಹುಡುಗಿ ಇದಾಳೆ. ಬಿಎಸ್ಸಿ ಓದಿದ್ದಾಳೆ. ನೀನು ಏನಾದ್ರೂ ಹೂ ಅಂದ್ರೆ ನಾಳೇನೆ ಕರೆಸಿಬಿಡ್ತೀನಿ” ಅಂತ ಒಂದು ಪಾತ್ರ ಹೀರೋ ಮುಂದೆ ಹೇಳುತ್ತೆ. ಆಗ ಹೀರೋ ಹೇಳುವ ಡೈಲಾಗ್ ಇದು. “ದಯವಿಟ್ಟು ಕ್ಷಮಿಸಿ, ನಂದಿಕಂಬ ನಿಲ್ಸೋಕೋಸ್ಕರ ಜಾತ್ರೆನೆ ಮಾಡಿಕೊಳ್ಳೋಕ್ಕಾಗಲ್ಲ…” ಅನ್ನೋ ಮಾತಿಗೆ ಜೋರು ನಗೆ ಬರದೇ ಇರದು. ಟ್ರೇಲರ್‌ನಲ್ಲಿ ಬರುವ ಪ್ರತಿ ಪಾತ್ರಗಳೂ ಕೂಡ ಪಂಚಿಂಗ್ ಡೈಲಾಗ್ ಹೇಳುವ ಮೂಲಕ ಟ್ರೇಲರ್ ಅನ್ನು ಇನ್ನಷ್ಟು ನೋಡಿಸಿಕೊಂಡು ಹೋಗುವಂತೆ ಮಾಡಿವೆ. ಕೊನೇ ಮಾತು: ನಿರ್ದೇಶಕ ವಿಜಯ್ ಪ್ರಸಾದ್ ಹೇಳೋದಿಷ್ಟು. “ಪೆಟ್ರೋಮ್ಯಾಕ್ಸ್ ಅಂದ್ರೆ ತಾಯಾಣೆ ಅದಲ್ಲ..” ಹೀಗೆ ಅವರು ಹೇಳೋಕೆ ಕಾರಣವೇನು? ಅದನ್ನು ಸಹ ಸಿನಿಮಾದಲ್ಲೇ ನೋಡಬೇಕು. ಮುಖಪುಟದಲ್ಲಿ ಬಂದ ವಿಜಯ್ ಪ್ರಸಾದ್, ನಮ್ಮ “ಪೆಟ್ರೋಮ್ಯಾಕ್ಸ್”ಗೆ ಹೆಗಲು ಕೊಟ್ಟವರಿಗೆಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅದರಲ್ಲೂ, ಅಕಾಶದಲ್ಲಿ ಮೋಡಗಳು ಹೇಗೆ ಇರುತ್ತವೋ, ಹಾಗೆಯೇ ಚಿತ್ರದಲ್ಲೂ ಚೇಷ್ಟೇಗಳೂ ಇರುತ್ತವೆ. ನಿಮ್ಮ ಆಶೀರ್ವಾದ ಇರಲಿ ಅಂತಾರೆ ನಿರ್ದೇಶಕರು.
ದೊಡ್ಮನೆ ಅಭಿಮಾನಿ ದೇವರುಗಳು ಹಬ್ಬ ಮಾಡಿ ಸಂಭ್ರಮಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ.ರಾಜಕುಮಾರ ಹಾಗೂ ಯುವರತ್ನದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಂತಹ ಜೋಡಿ ಮತ್ತೆ ಮತ್ತೆ ಒಂದಾಗಿದೆ. ಮೂರನೇ ಭಾರಿಗೆ ಈ ಜಬರ್ದಸ್ತ್ ಕಾಂಬೋ ಜೊತೆಯಾಗಿರುವುದು ಅಭಿಮಾನಿ ದೇವರುಗಳಲ್ಲಿ ಮಾತ್ರವಲ್ಲ ಮಾಯಬಜಾರ್ ನಲ್ಲೂ ನಿರೀಕ್ಷೆ ಹೆಚ್ಚಿಸಿದೆ.
ಅಪ್ಪು ಮತ್ತು ಸಂತೋಷ್ ಮತ್ತೆ ಒಂದಾಗಬೇಕು ಎನ್ನುವುದು ದೊಡ್ಮನೆ ಭಕ್ತರ ಆಶಯವಾಗಿತ್ತು. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಪವರ್ ಸ್ಟಾರ್ ಗೆ ಮತ್ತೆ ಯಾವಾಗ ಡೈರೆಕ್ಷನ್ ಮಾಡ್ತೀರ ಅಂತ ಕೇಳ್ತಿದ್ದರು. ಫೈನಲೀ, ಪುನೀತ್ ಹಾಗೂ ಸಂತೋಷ್ ಕಾಂಬೋ ಹ್ಯಾಟ್ರಿಕ್ ಬಾರ್ಸೋಕೆ ಸಜ್ಜಾಗಿದೆ.
ರಾಜಕುಮಾರ ಹಾಗೂ ಯುವರತ್ನ ಚಿತ್ರ ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆಯೇ ಪವರ್ ಫುಲ್ ಕಾಂಬೋ ಚಿತ್ರಕ್ಕೆ ಬಂಡವಾಳ ಹೂಡ್ತಿದೆ. ಈ ಖುಷಿಯ ಸಮಾಚಾರವನ್ನ ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ.
32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗಾರ್ ಹಿಡಿದು ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.
ಚಂದನವನ ಕಂಡ ಚೆಂದದ ಚೆಲುವೆ ನಟಿ ಶ್ರುತಿ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. 45 ನೇ ವಸಂತಕ್ಕೆ ಕಾಲಿಟ್ಟಿರುವ ಶ್ರುತಿ, ಕುಟುಂಬದ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಭಿಮಾನಿಗಳು, ಸ್ನೇಹಿತರು,ಹಿತೈಷಿಗಳು ಸೇರಿದಂತೆ ಎಲ್ಲರಿಂದ ನಟಿ ಶ್ರುತಿಗೆ ಶುಭಾಶಯಗಳ ಮಹಾಪೂರ ಹರಿದುಬರ್ತಿದೆ.
32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗಾರ್ ಹಿಡಿದು ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.
ಶ್ರುತಿಯವರ ಲುಕ್-ಗೆಟಪ್ ಖಡಕ್ ಖಳನಾಯಕಿ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಕಾಟನ್ ಸೀರೆ,ಹಣೆಗೆ ಚಂದಿರನಂತಹ ಬಿಂದಿ, ಕೈ ಬೆರಳಿಗೆ ಸಿಲ್ವರ್ ಉಂಗುರ, ಕೈ ಖಡಗ ತೊಟ್ಟು ಸುರಳಿ ಕೂದಲ ಬಿಟ್ಟುಕೊಂಡು ಖಡಕ್ಕಾಗಿಯೇ ಪೋಸ್ ಕೊಟ್ಟಿದ್ದಾರೆ. ನಟಿ ಶ್ರುತಿ ಫ್ಯಾನ್ಸ್ ಮಾತ್ರವಲ್ಲ ಚಿತ್ರಪ್ರೇಮಿಗಳೆಲ್ಲ ಕಾತುರರಾಗಿದ್ದಾರೆ. ಭಜರಂಗಿ ಅಖಾಡಲ್ಲಿ ಹೇಗಿರಲಿದೆ ನಟಿ ಶ್ರುತಿಯ ಅಬ್ಬರ ಆರ್ಭಟ ಜಸ್ಟ್ ವೇಯ್ಟ್ ಅಂಡ್ ವಾಚ್. ಅತೀ ಶೀಘ್ರದಲ್ಲೇ ಭಜರಂಗಿ 2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.
ತಾರಾಗಣ: ಲೋಕೇಂದ್ರ ಸೂರ್ಯ, ಗೌರಿ ನಾಯರ್ ಆಸ್ಕರ್ ಕೃಷ್ಣ, ಸೆವೆನ್ ರಾಜ್, ಹರ್ಷಿತಾ ಕಲ್ಲಿಂಗಲ್, ಮಾ.ರಾಕಿನ್ ಇತರರು
ಚಿತ್ರ ವಿಮರ್ಶೆ: ವಿಶಾಲಾಕ್ಷಿ
ಲಾಂಗು- ಮಚ್ಚು ಝಳಪಿಸಲ್ಲ, ಕತ್ತಿ-ಗುರಾಣಿ ಹಿಡಿದು ಬಡಿದಾಡಲ್ಲ ಗುರು ಬರೀ ಕಡ್ಡಿ ಅಲ್ಲಾಡಿಸಿ ಚಿತ್ರಪ್ರೇಮಿಗಳಿಂದ ಜೈಕಾರ ಹಾಕಿಸಿಕೊಳ್ತೀವಿ ಅಂತ ಚಡ್ಡಿದೋಸ್ತ್ ಗಳಿಬ್ಬರು ಡಿಸೈಡ್ ಮಾಡಿದ್ದರು. ಅದರಂತೇ, ಅಖಾಡಕ್ಕೆ ಇಳಿದಿದ್ದಾರೆ. ಕರ್ನಾಟಕದಾದ್ಯಂತ ಅಬ್ಬರ ಆರ್ಭಟ ಶುರುವಾಗಿದೆ. ಚಿತ್ರಮಂದಿರಕ್ಕೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಸಿನಿಮಾ ಗ್ರ್ಯಾಂಡ್ ಆಗಿಯೇ ಎಂಟ್ರಿಕೊಟ್ಟಿದೆ. ಹೇಗಿದೆ ಸಿನಿಮಾ? ಚಡ್ಡಿದೋಸ್ತ್ ಚಮಕ್ ಮಾಡಿದ್ರಾ? ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ಡಬ್ಬದಲ್ಲಿ ಸೆವೆನ್ ರಾಜ್ ‘7’ ಸಸ್ಪೆನ್ಸ್ ಸೀಕ್ರೇಟ್ ವರ್ಕೌಟ್ ಆಯ್ತಾ? ಗಾಂಧಿನಗರದಲ್ಲಿ ಫಸ್ಟ್ ಡೇ ಫಸ್ಟ್ ಶೋ ರೆಸ್ಪಾನ್ಸ್ ಹೇಗಿತ್ತು? ಅದರ ರಿವ್ಯೂ ಪ್ಲಸ್ ರಿಪೋರ್ಟ್ ಇಲ್ಲಿದೆ ನೋಡಿ
ಕೊರೊನಾ ಕಾರಣದಿಂದ ಕಳೆಗುಂದಿದ್ದ ಚಿತ್ರಮಂದಿರಗಳಿಗೆ ಮದುವಣಗಿತ್ತಿಯ ಕಳೆಬಂದಿದೆ. ಥಿಯೇಟರ್ ಮುಂಭಾಗದಲ್ಲಿ ಕಟೌಟ್ ಗಳು ತಲೆ ಎತ್ತಿವೆ, 50 ಪರ್ಸೆಂಟ್ ಅಕ್ಯೂಪೆನ್ಸಿಯಲ್ಲೂ ಹೌಸ್ ಫುಲ್ ಆಗುವಷ್ಟು ಜನ ಚಿತ್ರಮಂದಿರದ ಕಡೆ ಮುಖಮಾಡ್ತಿದ್ದಾರೆ. ಇದರಿಂದ ಬಿಗ್ ಸ್ಕ್ರೀನ್ ವಿಸಿಲ್ ಹೊಡೆಯುತ್ತಿದೆ, ಬಾಕ್ಸ್ ಆಫೀಸ್ ಹಣ ಬಾಚಿಕೊಳ್ಳೋಕೆ ಎದುರುನೋಡ್ತಿದೆ. ಇಂತಹ ಹೊತ್ತಲ್ಲಿ ಚಡ್ಡಿದೋಸ್ತ್ ಗಳು ಕಣಕ್ಕಿಳಿದಿದ್ದಾರೆ.
‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಸಿನಿಮಾ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಸುಮಾರು 50 ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಗಾಂಧಿನಗರದ ತ್ರಿವೇಣಿ ಮುಖ್ಯ ಚಿತ್ರಮಂದಿರವಾಗಿದ್ದು, ರೆಡ್ ಅಂಡ್ ವೈಟ್ ಕಾಂಬಿನೇಷನ್ ನಲ್ಲಿ ಅಲಂಕಾರಗೊಂಡಿತ್ತು. ಚಿತ್ರತಂಡದ ನಿರೀಕ್ಷೆಗೂ ಮೀರಿದ ಜನ ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡೇ ಫಸ್ಟ್ ಡೇ ಫಸ್ಟ್ ಶೋ ಮುಗೀತು. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದ ಫ್ಯಾನ್ಸ್ ಗಡಾರಿ ಗುಂಗಿನಲ್ಲಿದ್ದರು. ಕುಯ್ಯ ಎಲ್ಲಿ ಎನ್ನುತ್ತಾ? ಫ್ಯಾಷನ್ ರಾಜ್ ನ ಹುಡುಕಾಡುತ್ತಿದ್ದರು. ಅಷ್ಟಕ್ಕೂ , ಆ ಫ್ಯಾಷನ್ ರಾಜ್ ಬೇರಾರು ಅಲ್ಲ ನಿರ್ದೇಶಕ ಆಸ್ಕರ್ ಕೃಷ್ಣ. ಆಸ್ಕರ್ ಕೃಷ್ಣ ಅವರ ಸಿನಿಮಾ ಅಭಿರುಚಿ ಹೇಗೆ ಅಂತ ಗೊತ್ತಿದ್ದವರಿಗೆ ಚಡ್ಡಿದೋಸ್ತ್ ಗಳು ಕಡ್ಡಿ ಅಲ್ಲಾಡಿಸೋದು ಹೇಗೆ ಅಂತ ಗೊತ್ತಿತ್ತು.
ಆದರೆ, ನ್ಯೂ ಕಾಮರ್ಸ್ ಗೆ ಆಸ್ಕರ್ ಅಭಿರುಚಿ ಗೊತ್ತಿರಲಿಲ್ಲ. ಕ್ಯಾಚಿ ಟೈಟಲ್ ವೊತ್ತಿದ್ದ, ಕಿಕ್ಕೇರಿಸಿದ್ದ ಚಡ್ಡಿದೋಸ್ತ್ ಮೇಲೆ ಒಂದಿಷ್ಟು ನಿರೀಕ್ಷೆ ಇಟ್ಟುಕೊಂಡೇ ಚಿತ್ರಮಂದಿರ ಪ್ರವೇಶ ಮಾಡಿದರು. ಹಾಗೇ ಎಂಟ್ರಿಕೊಟ್ಟವರಿಗೆ ಫಸ್ಟ್ ಹಾಫ್‌ಕಿಕ್ ಕೊಡಲಿಲ್ಲ. ಚಡ್ಡಿದೋಸ್ತ್ ಅದ್ಯಾವ ಕಡ್ಡಿ ಅಲ್ಲಾಡಿಸುತ್ತಿದ್ದಾರೆನ್ನುವುದಕ್ಕೆ ಕ್ಲ್ಯಾರಿಟಿ ಸಿಗಲಿಲ್ಲ. ಆದರೆ, ಗಡಾರಿ ಪಾತ್ರಧಾರಿ ಲೋಕೇಂದ್ರ ಸೂರ್ಯ ಹುಡ್ಗೀರ್ ಜೊತೆ ಚೇಷ್ಟೆ ಮಾಡಿಕೊಂಡೇ ತುಂಡೈಕ್ಳಿಗೆ ಮಜಾ ಕೊಟ್ಟರು. ಫ್ಯಾಷನ್ ರಾಜ್ ಕ್ಯಾರೆಕ್ಟರ್ ಮಾಡಿದ್ದ ಆಸ್ಕರ್ ಕೃಷ್ಣ ಅವರು ನ್ಯಾಚುರಲ್ ಸ್ಟಾರ್ ಎನಿಸಿಕೊಳ್ಳುವಂತಹ ಆಕ್ಟಿಂಗ್ ಮಾಡ್ತಿದ್ದರು. ಕೆಲವೇ ಕೆಲವು ಸೀನ್ ಗಳಲ್ಲಿ ಮಿಂಚಿದ ಕುಯ್ಯ ಪಾತ್ರಧಾರಿ ನೋಡುಗರ ಗಮನ ಸೆಳೆಯುತ್ತಾ ಹೋದ. ಪ್ರೇಕ್ಷಕರಿಗೆ ಪಾಪ್ ಕಾರ್ನ್ ಬೇಕಿತ್ತು ಎನಿಸುವಷ್ಟರಲ್ಲಿ ಡಿ.ಸಿ ಮರ್ಡರ್ ಮೂಲಕ ಇಂಟರ್ ವಲ್‌ಬಿಡ್ತು.
ಪಪ್ಸ್- ಜ್ಯೂಸ್ ತಗೊಂಡು ಬಂದು ಮತ್ತದೇ ಸೀಟ್ ಮೇಲೆ ಕುಳಿತವರಿಗೆ ಸೆಕೆಂಡ್ ಆಫ್ ಒಂದಿಷ್ಟು ಇಂಟ್ರೆಸ್ಟಿಂಗ್ ಎನಿಸಿಸ್ತು. ಡಿ.ಸಿ ಕೊಲೆ, ಎಂ.ಎಲ್.ಎ ಸುಫಾರಿ, ದೋಸ್ತಿಗಳ ನಡುವೆ ಬರುವ ಹುಡ್ಗಿ, ಹುಡ್ಗೀರ್ ಶೋಕಿಯಿಂದ ಗೆಳೆಯ ಗಡಾರಿನಾ ಆಚೆ ತರಬೇಕು ಅಂತ ಟ್ರೈ ಮಾಡುವ ಫ್ಯಾಷನ್, ಗಡಾರಿಗೆ ದುಡ್ಡು ಕೊಟ್ಟು ಬೆನ್ನ ಹಿಂದೆ ಕತ್ತಿಮಸೆದ ಎಂಎಲ್‌ಎ, ಗಡಾರಿಗೆ ಲಾಠಿ ರುಚಿ, ಫ್ಯಾಷನ್ ಗೆ ದೀಪಾ ಜೊತೆ ಪ್ರೀತಿ, ಮಾತ್ ಎತ್ತಿದರೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಎನ್ನುವ ಗಡಾರಿಗೆ ಹುಡ್ಗೀರ್ ಶೋಕಿಯಿಂದ ಚಡ್ಡಿದೋಸ್ತ್ ಗಳ ಬುಡಕ್ಕೆ ಬರುತ್ತೆ. ಆಗ ದೋಸ್ತಿಗಳಿಬ್ಬರು ಏನ್ಮಾಡ್ತಾರೆ? ಹೊಡೆದಾಡ್ತಾರಾ ಅಥವಾ ಹೋರಾಡ್ತಾರಾ? ನಿಮ್ಮ ಈ ಕೂತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು.
ಚಡ್ಡಿದೋಸ್ತ್ ಗಳು ಏನೇ ಆಗಲೀ, ಎಂತಹದ್ದೇ ಸಂದರ್ಭ- ಸನ್ನಿವೇಶ ಎದುರಾಗಲಿ ಎದುರಿಸಿ ನಿಲ್ತಾರೆ. ಹಾಗೆಯೇ, ಒಬ್ಬರನ್ನೊಬ್ಬರು ಬಿಟ್ಟುಕೊಡಲ್ಲ. ಅದೇ ರೀತಿ ಚಡ್ಡಿದೋಸ್ತ್ ಗಳು ಕೂಡ. ಅದ್ಹೇಗೆ ಎನ್ನುವದನ್ನ ನೀವು ಥಿಯೇಟರ್ ನಲ್ಲೇ ನೋಡಬೇಕು. ಆಸ್ಕರ್ ಕೃಷ್ಣ ನಿರ್ದೇಶನ ಮಾಡಿ ಫ್ಯಾಷನ್ ರಾಜ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಥೆ- ಚಿತ್ರಕಥೆ- ಸಂಭಾಷಣೆ ಬರೆದಿರುವ ಲೋಕೇಂದ್ರ ಸೂರ್ಯ ಗಡಾರಿ ಪಾತ್ರದ ಮೂಲಕ ಕಿಕ್ಕೇರಿಸಿದ್ದಾರೆ. ಚಡ್ಡಿದೋಸ್ತ್ ಗಳಿಗೆ ಬಂಡವಾಳ ಹೂಡಿರುವ ನಿರ್ಮಾಪಕ ಸೆವೆನ್ ರಾಜ್ ಖಳನಾಯಕನಾಗಿ ಮಿಂಚಿದ್ದಾರೆ. ಮನುಷ್ಯನಾಗಿ ಹುಟ್ಟಿದ್ಮೇಲೆ ತಿಂದು ಸಾಯಬೇಕು, ಇಲ್ಲ ಕುಡಿದು ಸಾಯಬೇಕು ಅಂತ ಐಟಂ ಹಾಡಿನಲ್ಲಿ ಹರ್ಷಿತಾ ಕಲ್ಲಿಂಗಲ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಅನಂತ್ ಆರ್ಯನ್ ಒಳ್ಳೆ ಮ್ಯೂಸಿಕ್ ಕೊಟ್ಟಿದ್ದಾರೆ. ಕ್ಯಾಮೆರಾ ಕೈಚಳಕ ತೋರ್ಸೋಕೆ ಒಳ್ಳೆ ಕ್ಯಾಮೆರಾ ಕೊಟ್ಟಿಲ್ಲ ಅನ್ಸುತ್ತೆ. ಕ್ವಾಲಿಟಿ ಕಣ್ಣಿಗೆ ಹೊಡೆಯಲ್ಲ. ಆದರೆ, ಸೆವೆನ್ ಸಂಖ್ಯಾಶಾಸ್ತ್ರದ ಮೇಲೆ ನಂಬಿಕೆ ಇಟ್ಟು 17 ರಂದು ಸೆವೆನ್ ರಾಜ್ ತೆರೆಗೆ ತಂದಿದ್ದಾರೆ. ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಸಂಖ್ಯಾ ಶಾಸ್ತ್ರ ವರ್ಕ್ ಆಗುತ್ತಾ ಕಾದುನೋಡಬೇಕು.
ಸೆವೆನ್ ರಾಜ್ ಅಂತ ಹೆಸರಿಟ್ಟುಕೊಂಡಿದ್ದೇನೆ, ಹೆಸರಿಗೆ ತಕ್ಕಂತೆ ಕನ್ನಡ ಚಿತ್ರರಂಗಕ್ಕೆ ಏಳು ಸಿನಿಮಾ ಕೊಡಬೇಕು ಅಂತ ನಿರ್ಧರಿಸಿದ್ದಾರೆ. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರಾನಾ ಪ್ರೇಕ್ಷಕರು ಕೈಹಿಡಿದರೆ ಮುಂದೆ ಆರು ಸಿನಿಮಾ ಮಾಡ್ತಾರಂತೆ. ಇವತ್ತಿಗೆ ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೊಡ್ಯೂಸರ್ ಸೆವೆನ್ ರಾಜ್ ಖುಷಿಯಲ್ಲಿದ್ದಾರೆ. ಒಂದು ವಾರ ಕಳೆದ ಮೇಲೂ ಜನರಿಂದ ಚಿತ್ರಕ್ಕೆ ಇದೇ ರೀತಿ ಪ್ರತಿಕ್ರಿಯೆ ಸಿಕ್ಕರೆ ಹಂಡ್ರೆಡ್ ಪರ್ಸೆಂಟ್ ಸೆವೆನ್ ರಾಜ್ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದುಕೊಳ್ತಾರೆ. ಅವರನ್ನ ಕನ್ನಡ ಪ್ರೇಕ್ಷಕರು ಉಳಿಸಿಕೊಳ್ಳಲಿ ಅನ್ನೋದೇ ಸಿನಿಲಹರಿ ಆಶಯ
ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳು ಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ
ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ.
ಆ ಶಿಲ್ಪ ಕನ್ನಡದ ಮೇರು ನಟರಾದ ಡಾ.ವಿಷ್ಣುವರ್ಧನ್ ಅವರದ್ದು. ಇದೇ ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳು ಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ.
ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.