ದೊಡ್ಮನೆಯ ರಾಜಕುಮಾರನ ಅಗಲಿಕೆ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮೂಲಕ ಭಾವುಕತೆಯನ್ನು ಹೊರಹಾಕಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ದುಃಖ ತಾಳಲಾರದೇ ಫ್ಲೈಟ್ ಹತ್ಕೊಂಡು ಬೆಂಗಳೂರಿಗೆ ಬಂದಿಳಿದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದುಕೊಂಡರು.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ರಮ್ಯಾ, ಅಪ್ಪು ನನಗೆ
ಕೋಸ್ಟಾರ್ ಮಾತ್ರವಲ್ಲ ಒಳ್ಳೆಯ ಫ್ರೆಂಡ್ ಕೂಡ ಆಗಿದ್ದರು. ಅಭಿ, ಆಕಾಶ್, ಅರಸು ಸೇರಿ ಮೂರು ಚಿತ್ರ ಒಟ್ಟಿಗೆ ಮಾಡಿದ್ದೇನೆ. ಮೂರು ವಾರಗಳ ಹಿಂದಷ್ಟೇ ಅವರೊಟ್ಟಿಗೆ ಮಾತನಾಡಿದ್ದೆ ಈಗ ನೋಡಿದರೆ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೊರಟುಬಿಟ್ಟಿದ್ದಾರೆ. ಈ ಸತ್ಯವನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಬಿಗಿಹಿಡಿದ ಗಂಟಲಲ್ಲೇ ಮಾತನಾಡಿದ ಮೋಹಕತಾರೆ ರಮ್ಯಾ,
ದೊಡ್ಮನೆ ಬ್ಯಾನರ್ ಚಿತ್ರ ಬಂದಾಗ ನನಗೆ ಫಸ್ಟ್ ಪ್ರಿಪ್ರೆನ್ಸ್ ಕೊಡ್ತಿದ್ದರು. ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದ್ಮೇಲೂ ಕೂಡ ಅವರೊಟ್ಟಿಗೆ ನಿರಂತರ ಸಂಪರ್ಕದಲ್ಲಿದ್ದೆ. ಕಂಬ್ಯಾಕ್ ಮಾಡುವುದಾದರೆ ದೊಡ್ಮನೆಯ ರಾಜಕುಮಾರ ನೊಟ್ಟಿಗೆ ಮಾಡಬೇಕು ಅಂತ ನಿರ್ಧರಿಸಿದ್ದೆ ಎಂದರು.
ಕಂಬ್ಯಾಕ್ ವಿಚಾರದ ಬಗ್ಗೆ ಎಷ್ಟೋ ಭಾರಿ ಅಪ್ಪು ಜೊತೆ ಡಿಸ್ ಕಷನ್ ಕೂಡ ಮಾಡಿದ್ದೆ. ಅಭಿ, ಆಕಾಶ್, ಅರಸು ಜಾನರ್ ನಂಥ ಕಥೆಗಳು ಅರಸಿಕೊಂಡು ಬಂದರೆ ಇಬ್ಬರು ಒಟ್ಟಾಗಿ ಸಿನಿಮಾ ಮಾಡಬೇಕು ಎನ್ನುವುದು ನಮ್ಮಿಬ್ಬರ ಕನಸಾಗಿತ್ತು. ಅಭಿಮಾನಿಗಳು ಕೂಡ ಇದನ್ನೇ ಬಯಸ್ತಿದ್ದರು. ಪವರ್ ಸ್ಟಾರ್ ಹಾಗೂ ಪದ್ಮಾವತಿ ಜೊತೆಯಾಗಬೇಕು, ಬಿಗ್ ಸ್ಕ್ರೀನ್ ಮೇಲೆ ದಿಬ್ಬಣ ಹೊರಡಬೇಕು ಅಂತ ಆಸೆಪಟ್ಟಿದ್ದರು. ಆದರೆ, ಅದಕ್ಕೂ ಮೊದಲೇ ದೊಡ್ಮನೆಯ ಅರಸು, ಕೋಟ್ಯಾಂತರ ಭಕ್ತರ ನಾಯಕ ಅಪ್ಪು ಬಹುದೂರ ಹೋಗಿಬಿಟ್ಟರು. ಈ ಸುದ್ದಿ ಈ ಕ್ಷಣಕ್ಕೂ ಶಾಕಿಂಗ್ಗೇ. ಭಗವಂತ ಕರುಣಾಮಯಿ ಆಗಿ ಯುವರತ್ನನನ್ನು ಉಳಿಸಿಕೊಡಲಿ ಅಂತಾನೇ ಸಕಲರೂ ಪ್ರಾರ್ಥನೆ ಮಾಡಿಕೊಳ್ತಿದ್ದಾರೆ.
ಆದರೆ ವಾಸ್ತವ ಕಟುಸತ್ಯ ಅಲ್ಲವೇ ಅದನ್ನು ಎಲ್ಲರೂ ನಂಬಲೆಬೇಕು. ಅಪ್ಪು ಆತ್ಮಕ್ಕೆ ಶಾಂತಿ ಸಿಗುವ ಹಾಗೇ ಕಳುಹಿಸಿಕೊಡಬೇಕು.ಇದನ್ನೇ ದೊಡ್ಮನೆ ಕುಟುಂಬ ವರ್ಗ ಹೇಳ್ತಿದೆ. ಅದಕ್ಕೆ ಅಭಿಮಾನಿಗಳು ಕೂಡ ಸ್ಪಂಧಿಸುತ್ತಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಅಪ್ಪು ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಟ್ಟಿದ್ದು ಲಕ್ಷಾಂತರ ಜನರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ