Author: ದೇಶಾದ್ರಿ ಹೊಸ್ಮನೆ
Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ಹಿರಿಯ ನಟ ಶನಿಮಹದೇವಪ್ಪ ವಿಧಿ ವಶರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯ ದ ಜತೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು, ಭಾನುವಾರ ಸಂಜೆ ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
88ವರ್ಷದ ಹಿರಿಯ ನಟ ಶನಿ ಮಹದೇವಪ್ಪ. ಕನ್ನಡ, ತೆಲುಗು, ತಮಿಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಮೇರು ನಟ ಡಾ ರಾಜ್ಕುಮಾರ್ ಜೊತೆಯಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಟಿಸಿದ್ದರು. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಇತರೆ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು.
ನಾಳೆ( ಜ.೪) ಸುಮನಹಳ್ಳಿಯ ಚಿತಾಗಾರದಲ್ಲಿ ಮಹದೇವಪ್ಪರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬೆಳಕವಾಡಿ ಶನಿಮಹದೇವಪ್ಪರ ಹುಟ್ಟೂರು. ಅವರ ತಂದೆ ಕೆಂಚಪ್ಪ ಹಳ್ಳಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಂದೆ ನಟಿಸುತ್ತಿದ್ದ ನಾಟಕಗಳನ್ನು ನೋಡುತ್ತಾ ಬೆಳೆದ ಅವರು ರಂಗಭೂಮಿಯತ್ತ ಆಕರ್ಷಿತರಾದರು. ‘ರಾಜಾ ವಿಕ್ರಮ’ ನಾಟಕದೊಂದಿಗೆ ಬಣ್ಣ ಹಚ್ಚಿದ ಅವರಿಗೆ ‘ಶನೀಶ್ವರ ಮಹಾತ್ಮೆ’ಯ ಶನಿದೇವನ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಯಶಸ್ಸಿನೊಂದಿಗೆ ‘ಮಹದೇವಪ್ಪ’ ಮುಂದೆ ‘ಶನಿಮಹದೇವಪ್ಪ’ ಎಂದೇ ಹೆಸರಾದರು. ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ‘ಬಡವನ ಬಾಳು’, ‘ಅತ್ತೆ ಸೊಸೆ’, ‘ಬಿಡುಗಡೆ’, ‘ಸತ್ಯವಿಜಯ’, ‘ಚಂದ್ರಹಾಸ’ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದರು.
‘ಧರ್ಮಸ್ಥಳ ಮಹಾತ್ಮೆ’ (1962) ಚಿತ್ರದ ಬ್ರಹ್ಮನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಶನಿಮಹದೇವಪ್ಪ ಮುಂದೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ‘ಭಕ್ತ ಕುಂಬಾರ’ ಚಿತ್ರದಲ್ಲಿ ಜ್ಞಾನೇಶ್ವರನಾಗಿ, ‘ಮೂರೂವರೆ ವಜ್ರಗಳು’ ಚಿತ್ರದಲ್ಲಿ ಶಕುನಿಯಾಗಿ, ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿ ಡಿಂಡಿಮ ಕವಿಯಾಗಿ… ಹೀಗೆ ಹತ್ತಾರು ಪಾತ್ರಗಳಲ್ಲಿ ಶನಿಮಹದೇವಪ್ಪ ಸಿನಿಪ್ರೇಮಿಗಳಿಗೆ ನೆನಪಾಗುತ್ತಾರೆ. ವರನಟ ರಾಜಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ರಾಜ್ ಅಭಿನಯದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶನಿಮಹದೇವಪ್ಪ ಇಂದು ಇಹಲೋಕ ತ್ಯಜಿಸಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ರಾತ್ರೋರಾತ್ರಿ ಸ್ಟಾರ್ ಆದ ಪವನ್ ಕುಮಾರ್!
ರಾತ್ರೋರಾತ್ರಿ ಏನಾಗಬಹುದು? ಸುಮ್ಮನೆ ಉಹಿಸಿಕೊಂಡರೆ, ನೂರೆಂಟು ಘಟನೆಗಳು ನೆನಪಾಗಬಹುದು. ದರ್ಘಟನೆಗಳು ನಡೆಯಬಹುದು, ಸರ್ಕಾರಗಳೇ ಬದಲಾಗಬಹುದು, ಅಪರಿಚಿತ ಕೂಡ ರಾತ್ರೋರಾತ್ರಿ ಸ್ಟಾರ್ ಆಗಬಹುದು, ಇಲ್ಲವೇ ರಾತ್ರೋರಾತ್ರಿ ಒಂದು ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಪಯಣ ಬೆಳಿಸಿಬಿಡಬಹುದು, ಇಲ್ಲವೇ ರಾತ್ರೋರಾತ್ರಿ ದರೋಡೆಗಳು,ಕೊಲೆ – ಸುಲಿಗೆಗಳು..ಹೀಗೆ ಏನೇನೋಆಗಬಹುದು. ಸದ್ಯಕ್ಕೆ ಇದರಲ್ಲಿ ಇಲ್ಲಿ ಯಾವುದು ಘಟಿಸುತ್ತೋ ಗೊತ್ತಿಲ್ಲ. ನಿರ್ಮಾಪಕ ಪವನ್ ಕುಮಾರ್ ಮಾತ್ರ ‘ರಾತ್ರೋರಾತ್ರಿ’ ಎನ್ನುವ ಹೆಸರಲ್ಲಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ.
ಚಿತ್ರಕ್ಕೆ ಅವರು ನಿರ್ಮಾಪಕ ಕಮ್ ನಾಯಕ ನಟ. ಡೀಲ್ ಮುರುಳಿ ಇದರ ನಿರ್ದೇಶಕ. ಶ್ರೀಧರ್ ನರಸಿಂಹನ್ ಇದರ ಸಂಗೀತ ನಿರ್ದೇಶಕ. ಹಾಗೆಯೇ, ಕಿರಣ್ ಗಜ, ಅರುಣ್ ಥಾಮಸ್, ಹರೀಶ್ ನಟರಾಜನ್, ಸುನೀಲ್ ಮಂಡ್ಯ ಚಿತ್ರದ ತಾಂತ್ರಿಕ ವಿಭಾಗದಲ್ಲಿದ್ದಾರೆ. ಉಳಿದಂತೆ ಚಿತ್ರದ ತಾರಾಗಣದ ಜತೆಗೆ ಪವನ್ ಕುಮಾರ್ ಪ್ರಕಾರ ರಾತ್ರೋರಾತ್ರಿ ಏನ್ ನಡೆಯುತ್ತೆ ಅಂತ ಜ.4 ರಂದು ಚಿತ್ರ ತಂಡ ಸುದ್ದಿ ಗೋಷ್ಠಿಯಲ್ಲಿ ಎಲ್ಲವನ್ನು ರಿವೀಲ್ ಮಾಡಲಿದೆ.
ಕೃತಿಕಾ ರವೀಂದ್ರಗೆ ಸಾಥ್ ಕೊಟ್ಟ ಹ್ಯಾಂಡ್ ಸಮ್ ಗಾಯ್ ವರುಣ್ ಗೌಡ
ಸ್ಟಾರ್ ಗಳೇ ಈಗ ಅದ್ದೂರಿ ವೆಚ್ಚದ ಆಲ್ಬಂಗಳಲ್ಲಿ ಕಾಣಿಸಿಕೊಳ್ಳುವುದು ಮಾಮೂಲಾಗುತ್ತದೆ.ಮೊನ್ನೆ ಮೊನ್ನೆಯಷ್ಟೇ ಲಾಂಚ್ ಆಗಿದ್ದ ಚಂದನ್ ಶೆಟ್ಟಿ ಅವರ ಮ್ಯೂಜಿಕ್ ವಿಡಿಯೋ ಆಲ್ಬಂನಲ್ಲಿ ನಟಿ ನಿಶ್ವಿಕಾ ನಾಯ್ಡ ಸೊಂಟ ಬಳುಕಿಸಿದ್ದನ್ನು ನೀವು ನೋಡಿದ್ರಿ. ಈಗ ಸುಕೃಶಿ ಕ್ರಿಯೇಷನ್ಸ್ ಸುಕೃಶಿ ಕ್ರಿಯೇಷನ್ಸ್ ಸಂಸ್ಥೆ ಹೊರ ತಂದಿರುವ ಅಂತಹದೇ ಅದ್ದೂರಿ ವೆಚ್ಚದ ಆಲ್ಬಮ್ ಸಾಂಗ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ ರವೀಂದ್ರ ಭರ್ಜರಿ ಯಾಗಿ ಮಿಂಚಿದ್ದಾರೆ.ಹ್ಯಾಂಡ್ ಸಮ್ ಗಾಯ್ ವರುಣ್ ಗೌಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ಇದೊಂದು ಸಮಾನ ಮನಸ್ಕ ಯುವಕರು ನಿರ್ಮಾಣ ಮಾಡಿರುವ ಅದ್ದೂರಿ ವೆಚ್ಚದ ವಿನೂತನ ವಿಡಿಯೋ ಸಾಂಗ್ ಆಲ್ಬಂ. ಒಲವೇ ಎನ್ನುವ ಹೆಸರಲ್ಲಿ ಹೊರ ಬಂದಿದೆ. ಸಿನಿಮಾ ಹಾಡಿನ ಹಾಗೆಯೇ ಎಲ್ಲಾ ರೀತಿಯಲ್ಲೂ ಗುಣಮಟ್ಟದೊಂದಿಗೆ ನಿರ್ಮಾಣವಾಗಿದೆ. ಹಾಗೆಯೇ ನಾನಾ ಬಗೆಯಲ್ಲಿ ಸಿನಿಮೀಯ ರೂಪುರೇಷೆ ಹೊಂದಿದೆ.
ಯುವ ನಿರ್ದೇಶಕಿ ನಟಿ M S ಶಿವಾನಿ ಯವರ ಪರಿಕಲ್ಪನೆಗೆ ಗಾಯನ,ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಗಾಯಕರಾದ ಡಾ॥ಸುಚೇತನ್ ರಂಗಸ್ವಾಮಿಯವರು. ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು ಕಾರ್ತಿಕ್ ಹಾಗೂ ನವೀನ್ ಛಾಯಾಗ್ರಹಣ ಮಾಡಿದ್ದಾರೆ. ಆಲ್ಭಂ ಅದ್ಬುತವಾಗಿ ಮೂಡಿ ಬರುವಲ್ಲಿ ಇವರಿಬ್ಬರ ಕೈಚಳಕ ಕೂಡ ಪ್ಲಸ್ ಆಗಿದೆ.
ಕೆಜಿಎಫ್ ಚಿತ್ರ ದ ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ಈ ಹಾಡಿನ ವೀಡಿಯೋ ಎಡಿಟ್ ಮಾಡಿದ್ದಾರೆ. ಸುಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋಸ್ ಈ ಗೀತೆಯನ್ನು ಲಾಂಚ್ ಮಾಡುತ್ತಿದೆ. ಜ.3 ರಿಂದ ಆನಂದ್ ಆಡಿಯೋಸ್ ನ ಎಲ್ಲಾ ಅಂತರ್ಜಾಲ ವೇದಿಕೆಗಳಲ್ಲಿ ಈ ಹಾಡು ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ವಿಡಿಯೋಸಾಂಗ್ ಆಲ್ಬಂ ಮೂಲಕ ಸದ್ದುಮಾಡಲು ಹೊರಟಿರುವ ಸುಕೃಶಿ ಸಂಸ್ಥೆಮುಂದೆ ಸಿನಿಮಾ ನಿರ್ಮಾಣಕ್ಕೂ ಸಿದ್ಧತೆ ನಡೆಸಿದೆ ಎನ್ನುತ್ತಿವೆ ಸಂಸ್ಥೆಯ ಮೂಲಗಳು.
ವಸಿಷ್ಠ ಸಿಂಹ ಈಗ ಸೌತ್ ಸ್ಟಾರ್ !
ಕನ್ನಡದಾಚೆಗೂ ಶುರುವಾಗಿದೆ ʼಚಿಟ್ಟೆʼಯ ಹಾರಾಟ
ವಸಿಷ್ಠ ಸಿಂಹ ಎಂಬ ವಿಶಿಷ್ಟ ಮ್ಯಾನರಿಸಂನ ನಟ ಈಗ ಸೌತ್ ಸ್ಟಾರ್ ! ಹೌದು, ಈಗವರು ಕನ್ನಡದಾಚೆ ತೆಲುಗು, ತಮಿಳು ಹಾಗೂ ಮಲಯಾಳಂಗೂ ಹೀರೋ ಆಗಿ ಎಂಟ್ರಿ ಆಗುತ್ತಿದ್ದಾರೆ. ಆ ಮೂಲಕ ಕನ್ನಡದ ಸ್ಟಾರ್ ನಟರ ಹಾಗೆ ವಸಿಷ್ಠ ಕೂಡ ಈಗ ತಮ್ಮದೇ ವಿಶಿಷ್ಟ ಮ್ಯಾನರಿಸಂ ಮೂಲಕ ವಸಿಷ್ಠ ಸಿಂಹ, ಸೌತ್ ಇಂಡಸ್ಟ್ರಿಗೆ ಹೀರೋ ಆಗಿ ಪರಿಚಯವಾಗುತ್ತಿರುವುದು ವಿಶೇಷ.
ಕನ್ನಡದಾಚೆ ಅವರೀಗ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿರುವುದನ್ನು ಅಧಿಕೃತವಾಗಿಯೇ ರಿವೀಲ್ ಮಾಡಿದ್ದಾರೆ. ಹಾಗೆಯೇ 2020 ಎನ್ನುವ ಕರಾಳ ವರ್ಷ ತಮ್ಮ ಸಿನಿ ಕರಿಯರ್ ದೃಷ್ಟಿಯಿಂದ ಹೇಗೆಲ್ಲ ವರವಾಯಿತು ಅಂತಲೂ ಹೇಳಿಕೊಂಡಿದ್ದಾರೆ. ಹೊಸ ವರ್ಷದ ಆರಂಭದ ದಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದ ಮರಿಯನ್ನು ದತ್ತು ಪಡೆದ ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವೀಗ ಸೌತ್ ಸ್ಟಾರ್ ಎನ್ನುವುದರ ವಿವರ ಕೊಟ್ಟರು.
“ಹೊಸ ವರ್ಷದ ಮೊದಲ ದಿನವಿದು. 2020 ಕಳೆದು ಹೋಯಿತು. ಬರೀ ಸಿನಿಮಾ ಮಂದಿಗೆ ಮಾತ್ರವಲ್ಲ, ಇಡೀ ಜಗತ್ತಿನ ಪಾಲಿಗೆ ಇದೊಂದು ಕರಾಳ ವರ್ಷ. ಆದರೆ ನನಗೆ ೨೦೨೦ ಅನೇಕ ಆವಕಾಶಗಳನ್ನು ತಂದ ವರ್ಷ. ತೆಲುಗಿನಲ್ಲೀಗ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದೇನೆ. ಇನ್ನೊಂದು ಸಿನಿಮಾದ ಚಿತ್ರೀಕರಣ ಶುರುವಾಗಬೇಕಿದೆ. ಇನ್ನೇರೆಡು ಸಿನಿಮಾಗಳ ಮಾತುಕತೆ ಫೈನಲ್ ಆಗಿದೆ. ಹಾಗೆಯೇ ತಮಿಳಿನಲ್ಲೂ ಎರಡು ಸಿನಿಮಾಗಳಿಗೆ ಮಾತುಕತೆ ಶುರುವಾಗಬೇಕಿದೆ. “ಕಾಲಚಕ್ರʼ ದೊಂದಿಗೆ ಮಲಯಾಳಂನಲ್ಲೂ ಒಂದು ಸಿನಿಮಾದ ಆವಕಾಶ ಸಿಕ್ಕಿದೆʼ ಎನ್ನುತ್ತಾ ಹೊಸ ವರ್ಷಕ್ಕೆ ಭರ್ಜರಿ ಅವಕಾಶಗಳ ಸುದ್ದಿ ರಿವೀಲ್ ಮಾಡಿದರು. ಹಾಗಾದ್ರೆ ಸೌತ್ ಇಂಡಿಯಾ ಒಂದು ಸುತ್ತು ಹಾಕಿದ್ರೀ ಅಂತನ್ನಿ, ಅಂತೆನ್ನುವ ಮಾಧ್ಯಮದವರ ಪ್ರಶ್ನೆಗೆ , ಸೌತ್ ಇಂಡಿಯಾವೇ ಯಾಕೆ, ಇಡೀ ವಿಶ್ವವನ್ನೇ ಒಂದ್ ರೌಂಡ್ ಹಾಕೋಣ ಬಿಡಿ ಅಂತ ನಗು ಬೀರಿದರು ವಸಿಷ್ಠ.
ತೆಲುಗಿನಲ್ಲಿ ಈಗಾಗಲೇ ʼಒದೆಲಾ ರೈಲ್ವೆಸ್ಟೇಷನ್ʼ ಸಾಕಷ್ಟು ಸದ್ದು ಮಾಡಿದೆ. ಹೊಸ ವರ್ಷಕ್ಕೆ ಅದರ ಹೊಸ ಪೋಸ್ಟರ್ ಕೂಡ ಲಾಂಚ್ ಆಗಿದೆ. ಮತ್ತೊಂದೆಡೆ ತಲ್ವಾರ್ ಪೇಟೆ ಕೂಡ ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣ ವಾಗಿದೆ. ಈ ಸಿನಿಮಾಗಳ ಜತೆಗೆ ಮತ್ತೇರೆಡು ಸಿನಿಮಾ ಸೆಟ್ಟೇರುತ್ತಿವೆ. ಅದರ ಜತೆಗೆ ಎರಡು ತಮಿಳು ಸಿನಿಮಾ ಕೂಡ ಶುರುವಾಗುತ್ತಿರುವುದು ವಿಶೇಷ. ಕನ್ನಡದ ಮಟ್ಟಿಗೆ ವಸಿಷ್ಠ ಸಿಂಹ, ಒಂದೆಡೆ ಹೀರೋ, ಮತ್ತೊಂದೆಡೆ ವಿಲನ್. ಎರಡು ಕಡೆ ಕೂಡ ಬ್ಯುಸಿ. ಹೀರೋ ಆಗಿ ʼಕಾಲಚಕ್ರʼ,ʼ ತಲ್ವಾರ್ ಪೇಟೆʼ, “ಪಂತʼ ಚಿತ್ರಗಳ ಜತೆಗೀಗ ಕಿಶೋರ್ ಕಾಂಬಿನೇಷ್‌ನಲ್ಲೂ ಒಂದು ಸಿನಿಮಾ ಶುರುವಾಗುತ್ತಿದೆಯಂತೆ. ಅದರ ಜತೆಗೆ ವಿಲನ್ ಆಗಿ” ಕೆಜಿಎಫ್ ೨ʼ ನಲ್ಲೂ ವಸಿಷ್ಠ ಅಬ್ಬರಿಸಲು ರೆಡಿಯಾಗಿದ್ದಾರೆ. ಆದರೆ ಇಲ್ಲಿ ಅವರಿಗೆ ಬಾಲಿವುಡ್ ನಟ ಸಂಜಯ್ ದತ್ ಜತೆಗೆ ಮುಖಾಮುಖಿ ಆಗಿಲ್ಲ ಎನ್ನುವ ಬೇಸರ ಇದೆಯಂತೆ. ಇನ್ನು “ಯುವರತ್ನʼ ಚಿತ್ರದಲ್ಲೂ ವಸಿಷ್ಠ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಸಿಷ್ಠ , ಬಲು ವಿಶಿಷ್ಟ
ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದಲ್ಲಿ ಅಂದು ‘ಸಿಂಹ’ ಓಡಾಡಿತು. ಅದನ್ನು ಹಿಂಬಾಲಿಸಿ ನಾವು ನಡೆದವು. ಒಂದು ಕಾಳಜಿಗಾಗಿ ನಡೆದ ಮ್ಯಾರಥಾನ್ ಅದಾಗಿತ್ತು. ಹೊಸ ವರ್ಷ 2021 ರ ಮೊದಲ ದಿನ ಒಂದೆಡೆ ‘ಸಿಂಹ’, ಮತ್ತೊಂದೆಡೆ ನಾವು ಒಟ್ಟಾಗಿಯೇ ಹೆಜ್ಜೆ ಹಾಕಿದ ಪರಿಯೇ ಅತ್ಯಾದ್ಬುತವಾಗಿತ್ತು. ಹೆಚ್ಚು ಕಡಿಮೆ ಒಂದೀಡಿ ದಿನ ಅದರಲ್ಲಿಯೇ ಕಳೆದು ಹೋಯಿತು. ಅರೆ, ಇದೇನು ಸಿಂಹದ ಜತೆಗಿನ ನಡಿಗೆಯಾ ಅಂತಂದು ಭಾವಿಸಬೇಡಿ. ಅದು ಹಾಗಲ್ಲ, ನಾವು ಜತೆಯಾಗಿ ಸಾಗಿದ್ದು ಬನ್ನೇರುಘಟ್ಟ ಉದ್ಯಾನವನದೊಳಗಿನ ಸಿಂಹದ ಜತೆಗಲ್ಲ, ಬದಲಿಗೆ ನಟ ವಸಿಷ್ಠ ಸಿಂಹ ಅವರ ಜತೆ. ಅದು ಕೂಡ ಒಂದು “ಸಿಂಹʼ ದ ಕಾರಣಕ್ಕೆ…
ಹೊಸ ವರ್ಷದ ಹೊಸ ಹೆಜ್ಜೆ
ಹೊಸ ವರ್ಷ ಬಂದ್ರೆ, ಬದುಕಿಗೊಂದಿಷ್ಟು ರೆಸ್ಯೂಲೇಷನ್ ಮಾಡ್ಕೊಂಡು ಹೊಸ ವರ್ಷವನ್ನು ಹೊಸದಾಗಿ ಸ್ವಾಗತಿಸೋಣ ಅಂದುಕೊಳ್ಳುವರೆ ಹೆಚ್ಚು. ನಾವು- ನೀವೂ ಕೂಡ ಹೀಗೆಲ್ಲ ಅಂದುಕೊಂಡವರೆ ಅನ್ನಿ, ಆದ್ರೆ ಅವೆಲ್ಲ ಎಷ್ಟರ ಮಟ್ಟಿಗೆ ಅನುಷ್ಟಾನಗೊಂಡವು ಅಂತಂದುಕೊಂಡಾಗ, ಥಟ್ಟಂತ ನೆನಪಾಗೋದು ಅದೇ ರಾಗ, ಅದೇ ಹಾಡು. ಹೊಸ ವರ್ಷ 2021ಕ್ಕೂ ಅಂತಹ ರೆಸ್ಯೂಲೇಷನ್ ಎಷ್ಟು ಜನ ಮಾಡ್ಕೊಂಡ್ರೋ ಗೊತ್ತಿಲ್ಲ, ಆದ್ರೆ ಕನ್ನಡದ ಸ್ಟಾರ್ ಗಳ ಪೈಕಿ ನಟ ವಸಿಷ್ಠ ಸಿಂಹ, 2021ಕ್ಕೆ ಹಾಗೊಂದಿಷ್ಟು ರೆಸ್ಯೂಲೇಷನ್ ಮಾಡ್ಕೊಂಡು, ಆ ಪೈಕಿ ಒಂದು ಯೋಜನೆಯನ್ನು ಹೊಸ ವರ್ಷದ ದಿನವೇ ಕಾರ್ಯಗತಕ್ಕೆ ತಂದು, ಗಮನ ಸೆಳೆದಿದ್ದು ಮಾತ್ರ ವಿಶೇಷ ಮತ್ತು ವಿಭಿನ್ನ.
ನಟನೆಯಾಚೆಯ ಇನ್ನೊಂದು ಮುಖ
ಚಿಟ್ಟೆ ಖ್ಯಾತಿಯ ವಿಲನ್ ವಸಿಷ್ಠ ಸಿಂಹ, ನಟರಾಗಿ ಹೇಗೆಲ್ಲ ವಿಭಿನ್ನ ಅನ್ನೋದು ನಿಮಗೆಲ್ಲ ಗೊತ್ತಿರುವ ವಿಚಾರ. ಕಂಚಿನ ಕಂಠ, ಖಡಕ್ ಲುಕು, ಮನೋಜ್ಞ ಅಭಿನಯದ ಮೂಲಕ ಕನ್ನಡ ಪ್ರೇಕ್ಷಕರನ್ನು ಭರಪೂರ ರಂಜಿಸುವ ವಿಶಿಷ್ಟ ಮ್ಯಾನರಿಸಂನ ನಟ. ಈಗವರು ಬರೀ ವಿಲನ್ ಅಲ್ಲ, ‘ಇಂಡಿಯಾ ವರ್ಸಸ್ ಇಂಗ್ಲೆಂಡ್ ‘ಚಿತ್ರದ ಮೂಲಕ ಶುರುವಾದ ಅವರ ಹೀರೋಯಿಸಂ ಈಗ ಟಾಲಿವುಡ್, ಮಾಲಿವುಡ್ ಗೂ ತಲುಪಿದೆ. ಸಾಲು ಸಾಲು ಸಿನಿಮಾಗಳೀಗ ಅವರು ಹೀರೋ. ಜತೆಗೆ ಗಾಯಕ ಕೂಡ. ಇದೆಲ್ಲ ಅವರ ಸಿನಿಮಾ ಜರ್ನಿಯ ವಿಶೇಷ. ಇದರಾಚೆ ಅವರು ಒಬ್ಬ ಪರಿಸರ ಪ್ರೇಮಿ. ಹಾಗೆಯೇ ಸಾಮಾಜಿಕ ಕಾರ್ಯಕರ್ತ. ಅದನ್ನೀಗ ಅಧಿಕೃತವಾಗಿ ರಿವೀಲ್ ಮಾಡಿದ್ದಾರೆ. ಅದರ ಒಂದು ಸ್ಯಾಂಪಲ್ ಸಿಂಹ, ಅಂದ್ರೆ ಹೆಸರಿಗೆ ತಕ್ಕಂತೆ ಅವರು ಸಿಂಹವನ್ನೇ ದತ್ತು ಪಡೆದು ಸಾಕಲು ಹೊರಟಿದ್ದು.ಅದು ಹೊಸ ವರ್ಷದ ಹೊಸ ರೆಸ್ಯೂಲೇಷನ್.
ಇದೇ ಮೊದಲ ರೆಸ್ಯೂಲೇಷನ್
ನಾನು ಯಾವ ವರ್ಷ ಕೂಡ ರೆಸ್ಯೂಲೇಷನ್ ಮಾಡ್ಕೊಂಡು ಹೊಸ ವರ್ಷ ಸ್ವಾಗತಿಸಿದ್ದಿಲ್ಲ. ಆದ್ರೆ ಈ ವರ್ಷ ಅಂತಹದೊಂದು ರೆಸ್ಯೂಲೇಷನ್ ಮಾಡ್ಕೊಂಡೆ .ಅದು ಸಿಂಹದ ದತ್ತು ಪ್ರಕ್ರಿಯೆ ಮೂಲಕಲೇ ಶುರುವಾಗಲಿ ಅಂತಂದುಕೊಂಡೆ. ಆಗಲೇ ಶರುವಾಗಿದ್ದು ಈ ಸಿಂಹದ ಮರಿ ದತ್ತು ಪ್ರಕ್ರಿಯೆ. ಖುಷಿ ಆಗ್ತಿದೆ. ಲೈಫ್ ಗೆ ಇಂತಹ ರೆಸ್ಯೂಲೇಷನ್ ಬೇಕು. ಯಾಕಂದ್ರೆ ಹಾಗೊಂದುಕೊಂಡಾಗಲೇ ಏನಾದ್ರೂ ಮಾಡ್ಲಿಕ್ಕೆ ಸಾಧ್ಯ ಅಂತ ನಂಗೆ ಈಗಲೇ ಗೊತ್ತಾಗಿದೆ ಎನ್ನುತ್ತಾ ಮೊದಲ ಮಾತಿಗೆ ಅಡಿಯಿಟ್ಟರು ವಸಿಷ್ಠ ಸಿಂಹ.
ಬನ್ನೇರುಘಟ್ಟದಲ್ಲಿದೆ ಆ ಮರಿ ಸಿಂಹ
ನಟ ವಸಿಷ್ಠ ಸಿಂಹ ದತ್ತು ಪಡೆದಿರುವ ಸಿಂಹದ ಮರಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇದು ಎಂಟು ತಿಂಗಳ ಸಿಂಹದ ಮರಿ. ವಿಶೇಷ ಅಂದ್ರೆ ಇದು ಡಾ. ರಾಜ್ ಕುಮಾರ್ ಹುಟ್ಟಿದ ದಿನದಂದೇ ಹುಟ್ಟಿದ್ದಂತೆ. ಹಾಗೊಂದು ವಿಶೇಷತೆ ಈ ಸಿಂಹದ ಮರಿಗಿದೆ. ಒಂದು ವರ್ಷದ ಮಟ್ಟಿಗೆ ಅದನ್ನು ಸಾಕುವ ಜವಾಬ್ದಾರಿಯನ್ನು ಈಗ ನಟ ವಸಿಷ್ಠ ಸಿಂಹ ವಹಿಸಿಕೊಂಡಿದ್ದಾರೆ. ಹೊಸ ವರ್ಷದ ದಿನವೇ ಅವರು ಬನ್ನೇರುಘಟ್ಟಕ್ಕೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿ ಜತೆಗೆ ಮಾತುಕತೆ ನಡೆಸಿದರು. ಹಾಗೆಯೇ ದತ್ತು ಪ್ರಕ್ರಿಯೆಯ ದಾಖಲೆಗಳನ್ನು ಅಲ್ಲಿನ ಸಿಬ್ಬಂದಿಯಿಂದ ಪಡೆದುಕೊಂಡರು. ಜತೆಗೆ ತಾವು ಜವಾಬ್ದಾರಿ ಹೊತ್ತುಕೊಂಡಂತೆ ವರ್ಷಕ್ಕೆ ೧ ಲಕ್ಷ ರೂ. ಗಳ ಚೆಕ್ ಅನ್ನು ಅಲ್ಲಿನ ಸಿಬ್ಬಂದಿಗೆ ಹಸ್ತಾಂತರಿಸಿದರು.
ಮರಿ ಸಿಂಹಕ್ಕಿಟ್ಟ ಹೆಸರು ವಿಜಯನರಸಿಂಹ
ದತ್ತು ಸ್ವೀಕಾರ ಪ್ರಕ್ರಿಯೆ ಸಂದರ್ಭದಲ್ಲೇ ನಿನ್ನೆ ಮರಿ ಸಿಂಹಕ್ಕೆ ನಾಮಕರಣ ಪ್ರಕ್ರಿಯೆ ಕೂಡ ನಡೆಯಿತು. ವಿಜಯ ನರಸಿಂಹ ಅಂತ ಹೆಸರಿಡಲಾಯಿತು. ವಸಿಷ್ಠ ಸಿಂಹ ಹಾಗೂ ಉದ್ಯಾವನದ ಹಿರಿಯ ಅಧಿಕಾರಿ ವನಶ್ರೀ ನಾಮಕರಣದ ಫಲಕ ಆನಾವರಣ ಗೊಳಿಸಿದರು.ವಿಜಯ ನರಸಿಂಹ ಎನ್ನುವುದು ವಸಿಷ್ಠ ಅವರ ತಂದೆಯ ಹೆಸರು ಹೌದು. ಅದನ್ನೇ ದತ್ತು ಪಡೆದ ಸಿಂಹದ ಮರಿಗೆ ನಾಮಕರಣ ಮಾಡಿ, ಸಂತಸ ವ್ಯಕ್ತಪಡಿಸಿದ್ದು, ನಿಜಕ್ಕೂ ವಿಶೇಷ ಎನಿಸಿತು. ವಿಜಯ ನರಸಿಂಹ ಎನ್ನುವುದು ನನ್ನ ತಂದೆ ಹೆಸರು, ಅದರ ಮೇಲಿನ ಸೆಂಟಿಮೆಂಟ್ ಗೆ ಅದನ್ನೇ ಫೈನಲ್ ಮಾಡಿಕೊಂಡಿದ್ದೇನೆ, ಇದು ನನಗೂ ಖುಷಿ ಆಗಿದೆ ಎನ್ನುತ್ತಾ ನಾಮಕರಣ ಪ್ರಕ್ರಿಯೆಯ ವಿವರ ಬಹಿರಂಗ ಪಡಿಸಿದರು ನಟ ವಸಿಷ್ಠ ಸಿಂಹ.
ಬನ್ನೇರುಘಟ್ಟದಲ್ಲಿ ಇದೇ ಮೊದಲು
ಉದ್ಯಾನವನ ಅಥವಾ ಮೃಗಾಲಯದಲ್ಲಿನ ಪ್ರಾಣಿ- ಪಕ್ಷಿಗಳನ್ನು ಸಿನಿಮಾ ಮಂದಿ ದತ್ತು ಪಡೆಯುವುದು ಹೊಸದಲ್ಲ. ಈಗಾಗಲೇ ಶಿವರಾಜ್ ಕುಮಾರ್, ದರ್ಶನ್, ವಿನೋದ್ ಪ್ರಭಾಕರ್ ಸೇರಿದಂತೆ ಅನೇಕರು ಪ್ರಾಣಿ ಹಾಗೂ ಪಕ್ಷಿಗಳನ್ನು ದತ್ತು ಪಡೆದು, ಅವುಗಳನ್ನು ಸಾಕುವ ಹೊಣೆ ಹೊತ್ತುಕೊಂಡಿದ್ದು ನಿಮಗೂ ಗೊತ್ತು. ಆದರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿನಿಮಾ ಮಂದಿ ಕಡೆಯಿಂದ ಪ್ರಾಣಿ ದತ್ತು ಪಡೆದಿದ್ದು ಇದೇ ಮೊದಲು.ಆ ಸಾಲಿನಲ್ಲಿ ವಸಿಷ್ಠ ಅವರ ನಡೆ ವಿಭಿನ್ನ ಹಾಗೂ ವಿಶೇಷ.
ವಸಿಷ್ಠ ಅವರ ಕಾರ್ಯ ಹೆಮ್ಮೆ ತಂದಿದೆ..
“ರಾಜಕಾರಣಿಗಳು, ಅಧಿಕಾರಿಗಳು, ಪರಿಸರ ಪ್ರೇಮಿಗಳು ಈಗಾಗಲೇ ಇಲ್ಲಿನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಆದರೆ ಸಿನಿಮಾ ಕಡೆಯಿಂದ ಇಲ್ಲಿನ ಪ್ರಾಣಿಯನ್ನು ದತ್ತು ಪಡೆದಿದ್ದು ಇದೇ ಮೊದಲು. ಆ ಕಾರಣಕ್ಕಾಗಿ ನಾವು ನಟ ವಸಿಷ್ಠ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಈ ಸಂಖ್ಯೆ ಇನ್ನು ಹೆಚ್ಚಲಿ, ಬೇರೆಯವರು ಕೂಡ ಆಸಕ್ತಿ ತೆಗೆದುಕೊಂಡರೆ ಒಳ್ಳೆಯದುʼ ಅಂತ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹಿರಿಯ ಅಧಿಕಾರಿ ವನಶ್ರೀ ಸುದ್ದಿ ಗೋಷ್ಠಿಯಲ್ಲಿ ವಿವರಿಸಿದರು. ಹಾಗಾದ್ರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲೇ ಸಿಂಹದ ಮರಿ ದತ್ತು ಪಡೆದಿದ್ದು ಯಾಕೆ?
ಪ್ರಾಣಿ ರಕ್ಷಣೆ ನಮ್ಮ ಕರ್ತವ್ಯ..
ಕಾಡು ಅಂದ್ರೆ ನಂಗೆ ತುಂಬಾ ಇಷ್ಟ. ಅಲ್ಲಿನ ಪ್ರಾಣಿಗಳಂದ್ರು ಕೂಡ ಅಷ್ಟೇ ಇಷ್ಟ. ಅದೇ ಕಾರಣಕ್ಕೆ ನಾನು ರಾಜ್ಯದ ಅನೇಕ ಕಾಡುಗಳನ್ನು ಸುತ್ತಿದ್ದೇನೆ. ಈ ಸುತ್ತಾಟದ ನಡುವೆ ಕಳೆದ ಬಾರಿ ಒಮ್ಮ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದೆ. ಆಗ ಇಲ್ಲಿನ ಸಿಬ್ಬಂದಿ ಜತೆ ಮಾತನಾಡುತ್ತಿದ್ದಾಗ, ಇಲ್ಲಿನ ಪ್ರಾಣಿ, ಪಕ್ಷಿಗಳನ್ನು ಸಾಕುವುದು ಎಷ್ಟು ಕಷ್ಟ ಅಂತ ಗೊತ್ತಾಯಿತು. ಹಾಗೆಯೇ ಮಾತನಾಡುತ್ತಿದ್ದಾಗ ಒಂದು ಪ್ಲಾನ್ ಹೊಳೆಯಿತು. ಅಧಿಕಾರಿಗಳೇ ಪ್ರಾಣಿ ದತ್ತು ಸ್ವೀಕಾರದ ಬಗ್ಗೆ ಹೇಳಿದರು. ಆಗ ನಂಗೆ ಹೊಳೆದಿದ್ದು ಸಿಂಹದ ಮರಿ ದತ್ತು ಪಡೆಯುವುದು. ಯಾಕಂದ್ರೆ, ಪ್ರಕೃತಿ ಅಥವಾ ಪ್ರಾಣಿ ರಕ್ಷಣೆ ನಮ್ಮ ಹೊಣೆ. ಅದೇ ಕಾರಣಕ್ಕೆ ಸಿಂಹದ ಮರಿ ದತ್ತು ಪಡೆದಿದ್ದೇನೆ ಎಂದರು ನಟ ನಟ ವಸಿಷ್ಠ.
ಕರಾಳ ಕಾಲದಲ್ಲೂ ಇತಿಹಾಸ ಬರೆದರು..
ಕನ್ನಡ ಚಿತ್ರರಂಗದ ಪಾಲಿಗೆ ಪಾಲಿಗೆ 2020 ಕರಾಳ ವರ್ಷ. ಸ್ಟಾರ್ ಸಿನಿಮಾಗಳು ಬರಲಿಲ್ಲ, ತೆರೆ ಮೇಲೆ ಸ್ಟಾರ್ ಕೂಡ ಕಾಣಿಸಿಕೊಳ್ಳಲಿಲ್ಲ.ಹಾಗೆಯೇ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಚಿತ್ರ ಮಂದಿರಕ್ಕೆ ಬಂದು ಹೋದವು. ಅಷ್ಟರಲ್ಲೂ ಅದೃಷ್ಟ ಎನ್ನುವುದು ಒಲಿದಿದ್ದು ಕೆಲವರಿಗೆ ಮಾತ್ರ. ಅದರಲ್ಲೂ ಗೆದ್ದು ದಾಖಲೆ ಬರೆದವರು ‘ಲವ್ ಮಾಕ್ಟೆಲ್ ‘ಹಾಗೂ’ ದಿಯಾ’ ಚಿತ್ರ ತಂಡದವರು. ಯಾರಿಗೆ ಯಾವ ಸಮಯದಲ್ಲಿ ಅದೃಷ್ಟ ಒಲಿದು ಬರುತ್ತೆ ಅಂತ ಗೊತ್ತೇ ಆಗೋದಿಲ್ಲ ನೋಡಿ, ಕೊರೋನಾಕಾಲದ ಕರಾಳ ದಿನಗಳಲ್ಲೂ ಅಂತಹ ಅದೃಷ್ಟ ಒಲಿದಿದ್ದು ಈ ಚಿತ್ರ ತಂಡಗಳಿಗೆ ಮಾತ್ರ. ಹಾಗಂತ ಇವರು ಕೊರೋನಾ ದಲ್ಲೂ ಗೆದ್ದರು ಅಂತಲ್ಲ, ಕೊರೋನಾ ಬರುವ ಮುನ್ನ ಚಿತ್ರ ರಿಲೀಸ್ ಮಾಡಿಕೊಂಡು ಗೆದ್ದರು.
ಇನ್ನೇನುಮಾರ್ಚ್ ನಂತರ ಬರೋಣ ಎಂದವರು ಈಗಲೂ ಚಿತ್ರದ ಬಿಡುಗಡೆಗೆ ಒದ್ದಾಡುತ್ತಲೇ ಇದ್ದಾರೆ.ಹಾಗೆಯೇ ಕೊರೋನಾ ದ ನಡುವೆಯೇ ಗೆದ್ದವರು ‘ಆಕ್ಟ್ 1978 ‘ಚಿತ್ರ ತಂಡದವರು. ಇನ್ನೇನು ಚಿತ್ರಮಂದಿರಗಳು ಒಪನ್ ಆಗಿಯೂ ಜನ ಬರುತ್ತಿಲ್ಲ ಅಂದಾಗಲೂ ಈ ಚಿತ್ರ ಇಲ್ಲಿಗೆ ಯಶಸ್ವಿ 50 ದಿನದ ಪ್ರದರ್ಶನ ಕಂಡಿದೆ.ಅಲ್ಲಿಗೆ ಅದೃಷ್ಟ ಅವರಿಗೂ ಇದೆ.
ಅಭಿಮಾನಿಗಳಲ್ಲಿ ಹುಟ್ಟಿದೆ ಭರ್ಜರಿ ಕಾತರ
ದುನಿಯಾ ವಿಜಯ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ʼಸಲಗʼ ಚಿತ್ರ ಹೊಸ ವರ್ಷದಲ್ಲಿ ಭರ್ಜರಿಯಾಗಿಯೇ ಅಬ್ಬರಿಸಲು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಸದ್ಯಕ್ಕೆ ಅದರ ರಿಲೀಸ್ ದಿನಾಂಕ ಫಿಕ್ಸ್ ಆಗಿಲ್ಲ. ಆದರೆ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಚಿತ್ರಮಂದಿರಕ್ಕೆ ʼಸಲಗʼಎಂಟ್ರಿ ಆಗುವುದು ಖಚಿತ ಅನ್ನುವ ಮಾತುಗಳು ಚಿತ್ರ ತಂಡದಿಂದ ಕೇಳಿಬರುತ್ತಿವೆ. ಒಟ್ಟಿನಲ್ಲಿ ಹೊಸ ವರ್ಷದ ಆರಂಭದಲ್ಲೇ ಚಿತ್ರವನ್ನು ತೆರೆಗೆ ತರಲು ಮುಂದಾಗಿರುವ ಚಿತ್ರತಂಡ ಅದಕ್ಕೆ ಪೂರಕವಾಗಿ ಹೊಸ ವರ್ಷದ ದಿನ ಚಿತ್ರದ ಸ್ಪೆಷಲ್ ಪೋಸ್ಟರ್ ಲಾಂಚ್ ಮಾಡುತ್ತಿದೆ.
ಆ ಮೂಲಕ ಮೂಲಕ ಚಿತ್ರದ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡುತ್ತಿದೆ. ಈಗಾಗಲೇ ಸಲಗ ಚಿತ್ರದ ಸಾಕಷ್ಟು ಲುಕ್, ಸ್ಟಿಲ್ ರಿವೀಲ್ ಆಗಿವೆ. ಆದರೆ ಈಗ ಚಿತ್ರ ತಂಡ ಅನಾವರಣ ಮಾಡುತ್ತಿರುವ ಪೋಸ್ಟರ್ ಸ್ಪೆಷಲ್ ಏನು ಎನ್ನುವುದು ನಿಗೂಢವಾಗಿದೆ. ನಿರ್ಮಾಪಕ ಶ್ರೀಕಾಂತ್, ಇದೊಂದು ವಿಶೇಷ, ವಿಭಿನ್ನ ಲುಕ್. ಆ ಕಾರಣಕ್ಕಾಗಿಯೇ ಚಿತ್ರ ತಂಡವು ಸ್ಪೆಷಲ್ ಪೋಸ್ಟರ್ ಅಂತಲೇ ಲಾಂಚ್ ಮಾಡುತ್ತಿದೆ. ಅದು ಹೊರ ಬಂದಾಗ ಗೊತ್ತಾಗಲಿದೆ ಅದರ ವಿಶೇಷತೆ ಏನು ಅಂತ ಎನ್ನುವ ಮೂಲಕ ಪೋಸ್ಟರ್ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸುತ್ತಾರೆ. ಇದುವರೆಗೂ ನಾಯಕ ನಟರಾಗಿ, ನಿರ್ಮಾಪಕರಾಗಿ ಸದ್ದು ಮಾಡಿರುವ ದುನಿಯಾ ವಿಜಯ್ ಇದೇ ಮೊದಲು ನಿರ್ದೇಶಿಸಿದ ಸಿನಿಮಾ ಇದು. ಹಾಗೆಯೇ ಚಿತ್ರಕ್ಕೆ ಕತೆ, ಚಿತ್ರಕತೆ ಕೂಡ ಅವರದೇ. ಇದರ ಜತೆಗೆ ಚಿತ್ರದ ನಾಯಕ ನಟ ಕೂಡ ಅವರೆ.
ಉಳಿದಂತೆ ಅವರೊಂದಿಗೆ ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡರೆ, ಡಾಲಿ ಧನಂಜಯ್, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು ಇದೊಂದು ಫುಲ್ ಮಾಸ್ ಮೂವೀ. ಲವ್, ಸೆಂಟಿಮೆಂಟ್, ಆಕ್ಷನ್ ಜತೆಗೆ ಭರ್ಜರಿ ಮನರಂಜನೆ ಇಲ್ಲಿ ಗ್ಯಾರಂಟಿ. ಅದೇ ಕಾರಣಕ್ಕೆ ಸಲಗ ಸ್ಯಾ ಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದುನಿಯಾ ವಿಜಯ್ ಅಭಿಮಾನಿಗಳ ಜತೆಗೆ ಸಿನಿಮಾ ಪ್ರೇಕ್ಷಕರು ಬಹು ಕಾತರದಿಂದ ಕಾಯುತ್ತಿದ್ದಾರೆ.
ಮಿಲನಾ ನಾಗರಾಜ್ , ನಿಮಿಕಾ ರತ್ನಾಕರ್ ಜತೆಗೆ ಡಾರ್ಲಿಂಗ್ ಡ್ಯುಯೆಟ್
ಡಾರ್ಲಿಂಗ್ ಕೃಷ್ಣ , ಮಿಲನ ನಾಗರಾಜ್ ಹಾಗೂ ನಿಮಿಕಾ ರತ್ನಾಕರ್ ಅಭಿನಯದ ” ವರ್ಜಿನ್ʼ ಚಿತ್ರದ ಟೈಟಲ್ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡ ಟೈಟಲ್ ಬದಲಾವಣಿಗೆ ಮುಂದಾಗಿದೆ. ಹೊಸ ವರ್ಷದ ದಿನವೇ ಈ ಚಿತ್ರದ ಹೊಸ ಟೈಟಲ್ ಅನಾವರಣಗೊಳ್ಳುತ್ತಿದೆ.
ಆ ಮೂಲಕ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರಲು ಹೊರಟಿದೆ ಚಿತ್ರ ತಂಡ. ಲಾಕ್ ಡೌನ್ ಸಮಯದಲ್ಲೇ ಶುರುವಾದ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಮುಗಿದಿದೆ. ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆಯಂತೆ. ಈ ಹಂತದಲ್ಲೇ ಚಿತ್ರ ತಂಡ ಟೈಟಲ್ ಲಾಂಚ್ ಮಾಡಲು ಹೊರಟಿದೆ.
ಸದ್ಯಕ್ಕೆ ಈ ಚಿತ್ರದ ವಿಶೇಷತೆಗಳೇನು ಅನ್ನೋದು ರಿವೀಲ್ ಆಗಿಲ್ಲ. ಆದರೆ ಈ ಚಿತ್ರ ಟೈಟಲ್ ಮೂಲಕವೇ ದೊಡ್ಡ ವಿವಾದ ಸೃಷ್ಟಿಸಿತ್ತು. ʼವರ್ಜಿನ್ʼ ಎನ್ನುವ ಚಿತ್ರದ ಶೀರ್ಷಿಕೆಗೆ ಪ್ರೇಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಚಿತ್ರ ತಂಡವು “ಶೀಘ್ರಮೇವ ಕಲ್ಯಾಣ ಮಸ್ತುʼ ಎನ್ನುವ ಟೈಟಲ್ ಸೆಲೆಕ್ಟ್ ಮಾಡಿಕೊಂಡಿತು. ಆ ಹೆಸರಲ್ಲೇ ಚಿತ್ರೀಕರಣ ಮುಗಿಸಿಕೊಂಡು ಬಂತು. ಅದು ಕೂಡ ಚಿತ್ರದ ಕತೆಗೆ ಸೂಕ್ತ ಎನಿಸದ ಕಾರಣ, ಈಗ ಬೇರೆ ಟೈಟಲ್ ಸೆಲೆಕ್ಟ್ ಮಾಡಿಕೊಂಡಿದ್ದು, ಅದನ್ನು ಹೊಸ ವರ್ಷದ ದಿನದಂದೇ ಲಾಂಚ್ ಮಾಡುತ್ತಿದೆ. ಅಂದ ಹಾಗೆ ಇದು ಆಂಧ್ರ ಮೂಲದ ಹೊಸ ಪ್ರತಿಭೆ ನಾಯ್ಡು ಬಂಡಾರ ನಿರ್ದೇಶನದ ಚಿತ್ರ. ಇವರು ಪೂರಿ ಜಗನ್ನಾಥ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರಂತೆ.
ಕನ್ನಡಕ್ಕೆ ಇದೇ ಮೊದಲು ನಿರ್ದೇಶಕರಾಗಿ ಎಂಟ್ರಿ ಆಗುತ್ತಿದ್ದಾರೆ. ನಿರ್ದೇಶಕರ ಹಾಗೆ ನಿರ್ಮಾಕರದ್ದು ಕೂಡ ಆಂಧ್ರ ಮೂಲ. ಶ್ರೀನಿವಾಸ್ ಹಾಗೂ ಡಿ. ಸ್ವರ್ಣಲತಾ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಸಹ ನಿರ್ಮಾಪಕರಾಗಿ ಚಲಪತಿ, ಕಿರಣ್ ಕುಮಾರ್ ಇದ್ದಾರೆ.
ಕದ್ರಿ ಮಣಿಕಾಂತ್ ನಿರ್ದೇಶನ ಹಾಗೂ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರ ತಂಡದ ಮೂಲಗಳ ಪ್ರಕಾರ ಕಾಮಿಡಿ ಡ್ರಾಮಾ, ಹಾಗೆಯೇ ಕ್ಯೂಟ್ ಲವ್ ಸ್ಟೋರಿ ಸಿನಿಮಾ. ಚಿತ್ರ ತಂಡ ಈಗ ಟೈಟಲ್ ಲಾಂಚ್ ಮೂಲಕ ಸದ್ದು ಮಾಡಲು ಹೊರಟಿದೆ. ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಬರುವ ಸಾಧ್ಯತೆಯಿದೆ. ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ತೆರೆಗೆ ಬರಲಿದೆಯಂತೆ.
ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ , ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಮಗಳಾದ್ರೂ ಅಂದ್ರೆ ತಮಾಷೆನಾ?
ಸಿನಿಮಾದ ಮಟ್ಟಿಗೆ ಟ್ಯಾಲೆಂಟ್ ಅಥವಾ ಗ್ಲಾಮರ್ ಎರಡು ಇದ್ದಾಕ್ಷಣ ಸಕ್ಸಸ್ ಸಿಗುತ್ತೆ ಅನ್ನೋದು ಶುದ್ದ ಸುಳ್ಳು.ಎರಡೂ ಇದ್ದೂ ಅವಕಾಶ ಇಲ್ಲದೆ ಸೈಡ್ ಗೆ ಸರಿದವರು ಇಲ್ಲಿ ಸಾಕಷ್ಟು ನಟಿಯರಿದ್ದಾರೆ. ಅವರೆಡು ಇದ್ದಾಗಿಯೂ ಇಲ್ಲಿ ಅದೃಷ್ಟ ಎನ್ನುವುದು ಇರಬೇಕು. ಜತೆಗೆ ಸರಿಯಾದ ಮಾರ್ಗದರ್ಶನವೂ ಮುಖ್ಯ. ಅವೆಲ್ಲವೂ ಒಟ್ಟಿಗೆ ಸೇರಿಕೊಂಡಾಗ ಸ್ಟಾರ್ ಪಟ್ಟ ಸಿಗುತ್ತೆ ಎನ್ನುವುದಕ್ಕೆ ಬೆಸ್ಟ್ ಎಕ್ಸಾಂಪಲ್ ಕೊಡಗಿನಬೆಡಗಿ ರಶ್ಮಿಕಾಮಂದಣ್ಣ ಸಾಕ್ಷಿ.
ಕನ್ನಡದ ಸಿನಿ ಪ್ರೇಕ್ಷಕರಿಗೆ ಒಂಥರ ಸೋಜಿಗ. ಇನ್ನೊಂಥರ ಹೊಟ್ಟೆ ಉರಿ. ಮತ್ತೊಂದೆಡೆ ಕನ್ನಡದ ಹುಡುಗಿ ಅಲ್ಬಾ, ಇರಲಿ ಬಿಡಿ, ಆ ಮಟ್ಟಕ್ಕೆ ಬೆಳೆದಿದ್ದಾಳೆ ಅಂದ್ರೆ ಒಂಚೂರು ಖುಷಿ ಪಡೋಣ ಎನ್ನುವ ಸಮಾಧಾನ….
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಈಗ ಹೀಗೆಲ್ಲ ಲೆಕ್ಕಚಾರಕ್ಕೆ ಕಾರಣ ಆದವರು ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ. ಟಾಲಿವುಡ್ ನಲ್ಲಿ ಇಷ್ಟು ದಿನ ಸ್ಟಾರ್ ಸಿನಿಮಾಗಳಿಗೆಲ್ಲ ನಾಯಕಿ ಆಗಿ ಕನ್ನಡದಲ್ಲೂ ಭರ್ಜರಿಯಾಗಿಯೇ ಸುದ್ದಿ ಮಾಡುತ್ತಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಅಲ್ಲಿಂದ ಬಾಲಿವುಡ್ ಗೂ ಕಾಲಿಟ್ಟಿದ್ದಾರೆ.
ವಿಕಾಸ್ ಬಾಲ್ ನಿರ್ದೇಶನದ ‘ ಮಿಷನ್ ಮಜ್ನು’ ಹೆಸರಿನ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಬಾಲಿವುಡ್ ನಲ್ಲೂ ಖಾತೆ ತೆರೆದರೂ ಎನ್ನುವುದರ ಜತೆಗೆ, ಆ ಚಿತ್ರದಲ್ಲಿ ಅವರು, ಬಿಗ್ ಬಿ ಅಮಿತಾಬ್ ಬಚ್ಚನ್ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆನ್ನುವುದು ದೊಡ್ಡ ಸುದ್ದಿ.
ಯಾರಿಗುಂಟು ಯಾರಿಗಿಲ್ಲ ಇಂತಹ ಅವಕಾಶ? ಪ್ರೇಕ್ಷಕರಿರಲಿ, ಸ್ವತಹಃ ರಶ್ಮಿಕಾ ಕೂಡ ನಟಿಯಾಗಿ ಇಂತಹ ಆವಕಾಶ ಸಿಗುತ್ತೆ ಅಂತ ಕನಸು ಕಂಡಿರಲಿಲ್ಲವೋ ಏನೋ. ಆದ್ರೆ ಅದೃಷ್ಟ ಅನ್ನೋದು ಇದೆಯಲ್ಲಾ, ಅದು ಈಗ ಅವರಿಗೆ ಅಚ್ಚರಿ ಎನ್ನುವಂತ ಅವಕಾಶ ಹೊತ್ತು ತರುತ್ತಿದೆ. ಯಾರಿಗೆ ಗೋತ್ತು, ದೀಪಿಕಾ ಪಡುಕೋಣೆ ತರಹ ರಶ್ಮಿಕಾ ಮಂದಣ್ಣ ಕೂಡ ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಬಹುದು. ಅದೇ ಈಗ ಬಾಲಿವುಡ್ ಆಚೆ ಟಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಸೌತ್ ಸಿನಿ ದುನಿಯಾದಲ್ಲೇ ದೊಡ್ಡ ಸುದ್ದಿ ಆಗಿದೆ. ಇದೆಲ್ಲವನ್ನು ಕಂಡ ಕನ್ನಡದ ಸಿನಿ ಪ್ರೇಕ್ಷಕರ ಪೈಕಿ ಕೆಲವರಿಗೆ ರಶ್ಮಿಕಾ ಕನ್ನಡದ ಹುಡುಗಿ ಎನ್ನುವ ಹೆಮ್ಮೆ. ಮತ್ತೆ ಕೆಲವರಿಗೆ ಅವರೀಗ ಟಾಲಿವುಡ್ ಬೆಡಗಿ ಅಂತ ಬೇಸರ. ಇನ್ನು ಕನ್ನಡ ಮರೆತರು ಅಂತ ಕೆಲವರಿಗೆ ಹೊಟ್ಟೆ ಉರಿ. ಅದೆಲ್ಲ ಯಾಕೆ ? ರಶ್ಮಿಕಾ ಕನ್ನಡದವರೇ ಆದರೂ,ಅವರ ಮೇಲೆ ಯಾಕೆ ಇಂತಹ ಬೇಸರ? ಉತ್ತರ ಎಲ್ಲರಿಗೂ ಗೊತ್ತು !!
ರಶ್ಮಿಕಾ ಸಿನಿ ಜಗತ್ತಿಗೆ ಆಕಸ್ಮಿಕವಾಗಿ ಬಂದ ಹುಡುಗಿ. ಆದರೂ ಇಷ್ಟು ಬೇಗ ಇದೆಲ್ಲ ಘಟಿಸುತ್ತೆ, ಅಚ್ಚರಿಯ ಬೆಳವಣಿಗೆಗಳು ಆಗಬಹುದು, ಅತೀ ಕಡಿಮೆ ಅವದಿಯಲ್ಲೆ ದೊಡ್ಡ. ಆದರ್ ಪಟ್ಟ ಸಿಗಬಹುದು ಅಂತೆಲ್ಲ ಕನಸು ಕೂಡ ಕಂಡಿರಲ್ಲಿಲ್ಲವೋ ಏನೋ. ಆದರೆ ಅದೆಲ್ಲ ಹಣೆಬರಹ. ಮೊದಲ ಚಿತ್ರ ‘ ಕಿರಿಕ್ ಪಾರ್ಟಿ’ ಬಂತು. ಅದು ದೊಡ್ಡ ಗೆಲುವು ಕಂಡಿತು. ಸಾನ್ವಿ ಎನ್ನುವ ಚಳಾಸಿನ ಹುಡುಗಿ ಕೋಟ್ಯಾಂತರ ಹುಡುಗರ ಮನ ಗೆದ್ದಳು. ಅದು ರಶ್ಮಿಕಾಗೂ ದೊಡ್ಡ ಯಶಸ್ಸು ಸಿಗುವಂತೆ ಮಾಡಿತು. ರಾತ್ರೋರಾತ್ರಿ ರಶ್ಮಿಕಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದರು. ಎಲ್ಲಲ್ಲೂ ಅವರದೇ ಮಾತು ಎನ್ನುವಂತಾಯಿತು. ಇನ್ನೇನು ಕನ್ನಡದಲ್ಲಿ ರಶ್ಮಿಕಾ ಸ್ಟಾರ್ ನಟಿ ಆಗುತ್ತಾರೆನ್ನುವ
ಷ್ಟರಲ್ಲಿಯೇ ತೆಲುಗು ಆಫರ್ ಬಂತು. ವಿಜಯ್ ದೇವರ ಕೊಂಡ ಅಭಿನಯದ ʼಗೀತಾ ಗೋವಿದಂʼ ಚಿತ್ರಕ್ಕೆ ನಾಯಕಿಯಾದರು. ಅಲ್ಲಿಂದ ರಶ್ಮಿಕಾ ಅವರ ತಾರಾ ವರ್ಚಸ್ಸು ಬದಲಾಗಿ ಹೋಯಿತು. ಅಲ್ಲಿಂದ ಮುಂದೇನಾಯ್ತು? ಎಲ್ಲವೂ ಗೊತ್ತಿರುವ ವಿಚಾರ.
ತೆಲುಗಿಗೆ ಇಷ್ಟ, ಕನ್ನಡಕ್ಕೆ ಕಷ್ಟ ಎನ್ನುವಂತಾದರೂ ರಶ್ಮಿಕಾ. ಟಾಲಿವುಡ್ ಎಂಟ್ರಿ ಮೂಲಕ ದುಬಾರಿಯಾದ ರಶ್ಮಿಕಾ ಅವರ ಸಂಭಾವನೆಗೆ ಬೆಚ್ಚಿ ಬಿದ್ದ ಗಾಂಧಿ ನಗರದ ಮಂದಿ, ರಶ್ಮಿಕಾ ಕನ್ನಡ ದ್ರೋಹಿ ಎನ್ನುವ ಪಟ್ಟ ಕಟ್ಟಿದರು. ಬಣ್ಣದ ಲೋಕಕ್ಕೆ ಪರಿಚಯಿಸಿದವರನ್ನೇ ಮರೆತು, ಹಣದ ಹಿಂದೆ ಹೊರಟರು ಅಂತೆಲ್ಲ ದೂರಿದರು. ಆದರೆ ಅದ್ಯಾವುದಕ್ಕೂ ತಲೆ ಕಡೆಸಿಕೊಳ್ಳದ ರಶ್ಮಿಕಾ ಮಾತ್ರ, ಟಾಲಿವುಡ್ ಜತೆಗೆ ಸ್ಯಾಂಡಲ್‌ವುಡ್ ನಲ್ಲೂ ಅಭಿನಯಿಸುತ್ತಾ ಬಂದರು. ಅದರ ಫಲವೇ ಎನ್ನುವ ಹಾಗೆ ದೊಡ್ಡ ಎತ್ತರಕ್ಕೆ ಬೆಳೆದರು. ಸೌತ್ ಇಂಡಸ್ಟ್ರಿಯಲ್ಲೇ ಸಂಚಲನ ಸೃಷ್ಟಿಸಿದರು. ಅಲ್ಲಿಂದೀಗ ಬಾಲಿವುಡ್ ಜರ್ನಿ.
ಹಾಗಂತ ಕನ್ನಡದ ನಟಿಯರಿಗೇನು ಬಾಲಿವುಡ್‌ಗೆ ಹೊಸದಲ್ಲ. ರಶ್ಮಿಕಾ ಮೊದಲಿಗರು ಅಲ್ಲ.ಆದರೆ ಬಾಲಿವುಡ್ ಆಫರ್ ಗಳೇ ದೊಡ್ಡ ಆಫರ್ ಅಂತೆಲ್ಲ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡು ಮುಂಬೈ ಫ್ಲೈಟ್ ಹತ್ತಿದ ಅನೇಕ ನಟಿಯರ ಪೈಕಿ, ಕೆಲವರು ಅಲ್ಲಿಗೆ ಹೋದಷ್ಟೇ ವೇಗದಲ್ಲೇ ವಾಪಾಸ್ ಬೆಂಗಳೂರಿಗೆ ಬಂದಿದ್ದೂ ಇದೆ. ಕೆಲವರು ಬಹುಕಾಲ ಅಲ್ಲಿಯೇ ಇದ್ದರೂ, ದೊಡ್ಡ ಅವಕಾಶ ಸಿಗದೆ ಬೇಸತ್ತು ಹೋದರು. ಹಾಗೆ ನೋಡಿದರೆ ಇಲ್ಲಿಂದ ಅಲ್ಲಿಗೆ ಹೋಗಿ ದೊಡ್ಡ ಸಕ್ಸಸ್ ಕಂಡಿದ್ದು ದೀಪಿಕಾ ಪಡುಕೋಣೆ ಮಾತ್ರ. ಸದ್ಯಕ್ಕೆ ಅದೇ ರೇಂಜ್ ನಲ್ಲಿ ಈಗ ಗಮನ ಸೆಳೆದವರು ರಶ್ಮಿಕಾ ಮಂದಣ್ಣ. ಎಂಟ್ರಿಯಲ್ಲೇ ಬಿಗ್ ಬಿ ಅಮಿತಾಬ್ ಬಚ್ಚನ್ ಜತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆಂದರೆ, ಅದೇನು ಸಣ್ಣ ಅವಕಾಶ ಅಲ್ಲ. ಮುಂದೆ ಬಾಲಿವುಡ್ ಗೆ ಬಿಗ್ ಎಂಟ್ರಿಯ ಸೂಚನೆಯೂ ಆಗಿರಬಹುದು.
ರಶ್ಮಿಕಾ ಅವರಿಗೆ ಇದೆಲ್ಲ ಹೇಗೆ ಸಾಧ್ಯವಾಯಿತು ? ಅವರ ಬೆಳವಣಿಗೆ ಕಂಡವರಿಗೆ ಮೊದಲು ಏದುರಾಗುವ ಪ್ರಶ್ನೆ ಅದು.ಅದಕ್ಕೆ ಸಿಗುವ ಉತ್ತರ ಅವರ ಅಮ್ಮಸುಮನ್ ಮಂದಣ್ಣ. ಅದೃಷ್ಟ ಇದ್ದರೂ ಒಂದಷ್ಟು ವಿವಾದ, ಬೇಸರಗಳ ನಡುವೆಯೂ ರಶ್ಮಿಕಾ ಈ ಮಟ್ಟಕ್ಕೆ ಬೆಳೆಯುವುದಕ್ಕೆ ಅವರೇ ಮೂಲ ಕಾರಣ .ರಶ್ಮಿಕಾಗೆ ತೆಲುಗು ಆಫರ್ ಬಂದಾಗಿನಿಂದ ಅವರೆಲ್ಲ ಬೇಕು, ಬೇಡಗಳನ್ನು ಡಿಸೈಡ್ ಮಾಡೋದೇ ಅವರ ತಾಯಿ. ಅದು ಸಿನಿಮಾ ಮಾಧ್ಯಮದವರಿಗೆಲ್ಲ ಗೊತ್ತು. ರಶ್ಮಿಕಾ ಅವರ ಸಂಪರ್ಕಕ್ಕೆ ಯಾರೇ ಫೋನಾಯಿಸಿದರೂ, ಮೊದಲು ಫೋನ್ ಫಿಕ್ ಮಾಡೋದೇ ಅವರ ತಾಯಿ ಸುಮನ್.
ಹಾಗೆ ನೋಡಿದರೆ ರಶ್ಮಿಕಾ ಅವರಿಗೇನು ಸಿನಿಮಾದ ದೊಡ್ಡ ಹಿನ್ನೆಲೆ ಇಲ್ಲ. ಅವರ ಕುಟುಂಬದಿಂದಲೂ ಈ ಮುಂಚೆ ಯಾರು ಸಿನಿಮಾ ಜಗತ್ತಿಗೆ ಬಂದವರಲ್ಲ. ರಶ್ಮಿಕಾನೇ ಅವರ ಫ್ಯಾಮಿಲಿಗೆ ಮೊದಲ ನಟಿ. ಇಷ್ಟಾಗಿಯೂ, ರಶ್ಮಿಕಾ ನಟಿಯಾಗಿ ಅತೀ ಕಡಿಮೆ ಅವದಿಯಲ್ಲಿ ದೊಡ್ಡ ಸಕ್ಸಸ್ ಕಂಡಿದ್ದು, ಬಾಲಿವುಡ್ ಮಟ್ಟಕ್ಕೆ ಹಾರಿದ್ದು ಎಲ್ಲವೂ ಅವರ ಟ್ಯಾಲೆಂಟ್ ಜತೆಗೆ ಅವರ ತಾಯಿಯ ಬೆಂಬಲವೂ ಕಾರಣ ಎನ್ನುತ್ತಿವೆ ಮೂಲಗಳು.