ಹೊಸ ವರ್ಷಕ್ಕೆ ಲಾಂಚ್‌ ಆಗುತ್ತೆ ಸಲಗ ಸ್ಪೆಷಲ್‌ ಪೋಸ್ಟರ್‌

ಅಭಿಮಾನಿಗಳಲ್ಲಿ ಹುಟ್ಟಿದೆ ಭರ್ಜರಿ ಕಾತರ

ದುನಿಯಾ  ವಿಜಯ್‌ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ʼಸಲಗʼ ಚಿತ್ರ ಹೊಸ ವರ್ಷದಲ್ಲಿ ಭರ್ಜರಿಯಾಗಿಯೇ ಅಬ್ಬರಿಸಲು ಸಕಲ  ರೀತಿಯಲ್ಲೂ ಸಜ್ಜಾಗುತ್ತಿದೆ. ಸದ್ಯಕ್ಕೆ ಅದರ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿಲ್ಲ. ಆದರೆ ಫೆಬ್ರವರಿ ಅಥವಾ ಮಾರ್ಚ್‌ ನಲ್ಲಿ ಚಿತ್ರಮಂದಿರಕ್ಕೆ ʼಸಲಗʼಎಂಟ್ರಿ ಆಗುವುದು ಖಚಿತ ಅನ್ನುವ ಮಾತುಗಳು ಚಿತ್ರ ತಂಡದಿಂದ ಕೇಳಿಬರುತ್ತಿವೆ. ಒಟ್ಟಿನಲ್ಲಿ ಹೊಸ ವರ್ಷದ ಆರಂಭದಲ್ಲೇ ಚಿತ್ರವನ್ನು ತೆರೆಗೆ ತರಲು ಮುಂದಾಗಿರುವ ಚಿತ್ರತಂಡ ಅದಕ್ಕೆ ಪೂರಕವಾಗಿ ಹೊಸ ವರ್ಷದ ದಿನ ಚಿತ್ರದ ಸ್ಪೆಷಲ್‌  ಪೋಸ್ಟರ್‌ ಲಾಂಚ್‌ ಮಾಡುತ್ತಿದೆ.

ಆ ಮೂಲಕ ಮೂಲಕ ಚಿತ್ರದ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡುತ್ತಿದೆ. ಈಗಾಗಲೇ ಸಲಗ ಚಿತ್ರದ ಸಾಕಷ್ಟು ಲುಕ್‌, ಸ್ಟಿಲ್‌ ರಿವೀಲ್‌ ಆಗಿವೆ. ಆದರೆ ಈಗ ಚಿತ್ರ ತಂಡ ಅನಾವರಣ ಮಾಡುತ್ತಿರುವ ಪೋಸ್ಟರ್‌ ಸ್ಪೆಷಲ್‌ ಏನು ಎನ್ನುವುದು ನಿಗೂಢವಾಗಿದೆ. ನಿರ್ಮಾಪಕ ಶ್ರೀಕಾಂತ್‌, ಇದೊಂದು ವಿಶೇಷ, ವಿಭಿನ್ನ ಲುಕ್.‌ ಆ ಕಾರಣಕ್ಕಾಗಿಯೇ ಚಿತ್ರ ತಂಡವು ಸ್ಪೆಷಲ್‌ ಪೋಸ್ಟರ್‌ ಅಂತಲೇ ಲಾಂಚ್‌ ಮಾಡುತ್ತಿದೆ. ಅದು ಹೊರ ಬಂದಾಗ ಗೊತ್ತಾಗಲಿದೆ ಅದರ ವಿಶೇಷತೆ ಏನು ಅಂತ ಎನ್ನುವ ಮೂಲಕ ಪೋಸ್ಟರ್‌ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸುತ್ತಾರೆ. ಇದುವರೆಗೂ ನಾಯಕ ನಟರಾಗಿ, ನಿರ್ಮಾಪಕರಾಗಿ ಸದ್ದು ಮಾಡಿರುವ ದುನಿಯಾ ವಿಜಯ್‌ ಇದೇ ಮೊದಲು ನಿರ್ದೇಶಿಸಿದ ಸಿನಿಮಾ ಇದು. ಹಾಗೆಯೇ ಚಿತ್ರಕ್ಕೆ ಕತೆ, ಚಿತ್ರಕತೆ ಕೂಡ ಅವರದೇ. ಇದರ ಜತೆಗೆ ಚಿತ್ರದ ನಾಯಕ ನಟ ಕೂಡ ಅವರೆ.

ಉಳಿದಂತೆ ಅವರೊಂದಿಗೆ  ಸಂಜನಾ ಆನಂದ್‌ ನಾಯಕಿಯಾಗಿ ಕಾಣಿಸಿಕೊಂಡರೆ, ಡಾಲಿ ಧನಂಜಯ್‌, ಕಾಕ್ರೋಚ್‌ ಸುಧಿ, ಯಶ್‌ ಶೆಟ್ಟಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು ಇದೊಂದು ಫುಲ್‌ ಮಾಸ್‌ ಮೂವೀ. ಲವ್‌, ಸೆಂಟಿಮೆಂಟ್‌, ಆಕ್ಷನ್‌ ಜತೆಗೆ ಭರ್ಜರಿ ಮನರಂಜನೆ ಇಲ್ಲಿ ಗ್ಯಾರಂಟಿ. ಅದೇ ಕಾರಣಕ್ಕೆ ಸಲಗ ಸ್ಯಾ ಂಡಲ್‌ ವುಡ್‌ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದುನಿಯಾ ವಿಜಯ್‌ ಅಭಿಮಾನಿಗಳ ಜತೆಗೆ ಸಿನಿಮಾ ಪ್ರೇಕ್ಷಕರು ಬಹು ಕಾತರದಿಂದ ಕಾಯುತ್ತಿದ್ದಾರೆ.

Related Posts

error: Content is protected !!