ಕಷ್ಟ ಕಾಲದಲ್ಲೂ ದಾಖಲೆ ಬರೆದರು,ಅದೃಷ್ಟ ಅವರ ಕೈ ಹಿಡಿಯಿತು!

ಕರಾಳ ಕಾಲದಲ್ಲೂ ಇತಿಹಾಸ ಬರೆದರು..

 

ಕನ್ನಡ ಚಿತ್ರರಂಗದ ಪಾಲಿಗೆ ಪಾಲಿಗೆ 2020 ಕರಾಳ ವರ್ಷ. ಸ್ಟಾರ್ ಸಿನಿಮಾಗಳು ಬರಲಿಲ್ಲ, ತೆರೆ ಮೇಲೆ ಸ್ಟಾರ್ ಕೂಡ ಕಾಣಿಸಿಕೊಳ್ಳಲಿಲ್ಲ.ಹಾಗೆಯೇ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಚಿತ್ರ ಮಂದಿರಕ್ಕೆ ಬಂದು ಹೋದವು. ಅಷ್ಟರಲ್ಲೂ ಅದೃಷ್ಟ ಎನ್ನುವುದು ಒಲಿದಿದ್ದು ಕೆಲವರಿಗೆ ಮಾತ್ರ. ಅದರಲ್ಲೂ ಗೆದ್ದು ದಾಖಲೆ ಬರೆದವರು ‘ಲವ್ ಮಾಕ್ಟೆಲ್ ‘ಹಾಗೂ’ ದಿಯಾ’ ಚಿತ್ರ ತಂಡದವರು. ಯಾರಿಗೆ ಯಾವ ಸಮಯದಲ್ಲಿ ಅದೃಷ್ಟ ಒಲಿದು ಬರುತ್ತೆ ಅಂತ ಗೊತ್ತೇ ಆಗೋದಿಲ್ಲ ನೋಡಿ, ಕೊರೋನಾ‌ಕಾಲದ ಕರಾಳ ದಿನಗಳಲ್ಲೂ ಅಂತಹ ಅದೃಷ್ಟ ಒಲಿದಿದ್ದು ಈ ಚಿತ್ರ ತಂಡಗಳಿಗೆ ಮಾತ್ರ. ಹಾಗಂತ ಇವರು ಕೊರೋನಾ ದಲ್ಲೂ ಗೆದ್ದರು ಅಂತಲ್ಲ, ಕೊರೋನಾ ಬರುವ ಮುನ್ನ ಚಿತ್ರ ರಿಲೀಸ್ ಮಾಡಿಕೊಂಡು ಗೆದ್ದರು.

ಇನ್ನೇನು‌ಮಾರ್ಚ್ ನಂತರ ಬರೋಣ ಎಂದವರು ಈಗಲೂ ಚಿತ್ರದ ಬಿಡುಗಡೆಗೆ ಒದ್ದಾಡುತ್ತಲೇ ಇದ್ದಾರೆ.ಹಾಗೆಯೇ ಕೊರೋನಾ ದ ನಡುವೆಯೇ ಗೆದ್ದವರು ‘ಆಕ್ಟ್ 1978 ‘ಚಿತ್ರ ತಂಡದವರು. ಇನ್ನೇನು ಚಿತ್ರಮಂದಿರಗಳು ಒಪನ್ ಆಗಿಯೂ ಜನ ಬರುತ್ತಿಲ್ಲ ಅಂದಾಗಲೂ ಈ ಚಿತ್ರ ಇಲ್ಲಿಗೆ ಯಶಸ್ವಿ 50 ದಿನದ ಪ್ರದರ್ಶನ ಕಂಡಿದೆ.ಅಲ್ಲಿಗೆ ಅದೃಷ್ಟ ಅವರಿಗೂ ಇದೆ.

Related Posts

error: Content is protected !!