ಸಿಎಂಗೆ ಆಹ್ವಾನ ನೀಡಿದ ನಟ ರಮೇಶ್‌ ಅರವಿಂದ್‌-ಅರ್ಚನಾ ದಂಪತಿ

ಜನವರಿ ಎರಡನೇ ವಾರದಲ್ಲಿ ಮಗಳ ಮದುವೆ ಆರತಕ್ಷತೆ

ಬಹುಭಾಷಾ ನಟ ರಮೇಶ್‌ ಅರವಿಂದ್‌ ಪುತ್ರಿ ನಿಹಾರಿಕಾ ಅವರ ವಿವಾಹ ಕಾರ್ಯಕ್ರಮ ಡಿಸೆಂಬರ್‌ 28 ರಂದು ನಡೆಯಿತು. ಗೆಳೆಯ ಅಕ್ಷಯ್‌ ಅವರನ್ನು ನಿಹಾರಿಕಾ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಎರಡು ಕುಟುಂಬದವರ ಸಮ್ಮುಖದಲ್ಲಿ ಅಕ್ಷಯ್‌ ಹಾಗೂ ನಿಹಾರಿಕಾ ವಿವಾಹ ಕಾರ್ಯಕ್ರಮ ನಡೆಯಿತು. ಇದೀಗ ಈ ನವ ದಂಪತಿಯ ಆರತಕ್ಷತೆ ಕಾರ್ಯಕ್ರಮ ಜನವರಿ ಎರಡನೇ ವಾರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಮೇಶ್‌ ಅರವಿಂದ್‌ ಹಾಗೂ ಅರ್ಚನಾ ದಂಪತಿ ಈಗ ಗಣ್ಯರನ್ನು ಆಹ್ವಾನಿಸುವುದರಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರೋದ್ಯಮ, ರಾಜಕೀಯ ಸೇರಿದಂತೆ ಎಲ್ಲಾ ವಿಭಾಗದ ಸ್ನೇಹಿತರು, ಹಿತೈಷಿಗಳಿಗೂ ಆಹ್ವಾನ ನೀಡಲಾಗುತ್ತಿದೆ. ವಿಶೇಷವಾಗಿ ರಮೇಶ್‌ ಅರವಿಂದ್‌ ಹಾಗೂ ಅರ್ಚನಾ ದಂಪತಿ, ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಗಳ ಆರತಕ್ಷತೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.

” ನಾವು ಅವರನ್ನು ನಿಗದಿತ ಸಮಯದಲ್ಲಿ ಭೇಟಿ ಮಾಡಿದ ಸಂದರ್ಭ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಮುಖ್ಯಮಂತ್ರಿ ಅವರು, ಉಭಯ ಕುಶಲೋಹಾರಿ ಮಾತುಗಳ ನಂತರ ನಮ್ಮ ಆಹ್ವಾನ ಸ್ವೀಕರಿಸಿ, ಪ್ರೀತಿಯಿಂದ ಬರುವುದಾಗಿ ಹೇಳಿದ್ದಾರೆ. ಅವರು ಬರುವ ನಿರೀಕ್ಷೆ ನಮಗಿದೆʼ ಎಂದು ನಟ ರಮೇಶ್‌ ಅರವಿಂದ್‌ ಪ್ರತಿಕ್ರಿಯಿಸಿದ್ದಾರೆ.

Related Posts

error: Content is protected !!