ವಸಿಷ್ಠ ಸಿಂಹ ಈಗ ಸೌತ್‌ ಸ್ಟಾರ್‌ !

ಕನ್ನಡದಾಚೆಗೂ ಶುರುವಾಗಿದೆ ʼಚಿಟ್ಟೆʼಯ ಹಾರಾಟ

ವಸಿಷ್ಠ ಸಿಂಹ ಎಂಬ ವಿಶಿಷ್ಟ ಮ್ಯಾನರಿಸಂನ ನಟ ಈಗ ಸೌತ್‌ ಸ್ಟಾರ್‌ ! ಹೌದು, ಈಗವರು ಕನ್ನಡದಾಚೆ ತೆಲುಗು, ತಮಿಳು ಹಾಗೂ ಮಲಯಾಳಂಗೂ ಹೀರೋ ಆಗಿ ಎಂಟ್ರಿ ಆಗುತ್ತಿದ್ದಾರೆ. ಆ ಮೂಲಕ ಕನ್ನಡದ ಸ್ಟಾರ್‌ ನಟರ ಹಾಗೆ ವಸಿಷ್ಠ ಕೂಡ ಈಗ ತಮ್ಮದೇ ವಿಶಿಷ್ಟ ಮ್ಯಾನರಿಸಂ ಮೂಲಕ ವಸಿಷ್ಠ ಸಿಂಹ, ಸೌತ್‌ ಇಂಡಸ್ಟ್ರಿಗೆ ಹೀರೋ ಆಗಿ ಪರಿಚಯವಾಗುತ್ತಿರುವುದು ವಿಶೇಷ.

 

ಕನ್ನಡದಾಚೆ ಅವರೀಗ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿರುವುದನ್ನು ಅಧಿಕೃತವಾಗಿಯೇ ರಿವೀಲ್‌ ಮಾಡಿದ್ದಾರೆ. ಹಾಗೆಯೇ 2020 ಎನ್ನುವ ಕರಾಳ ವರ್ಷ ತಮ್ಮ ಸಿನಿ ಕರಿಯರ್‌ ದೃಷ್ಟಿಯಿಂದ ಹೇಗೆಲ್ಲ ವರವಾಯಿತು ಅಂತಲೂ ಹೇಳಿಕೊಂಡಿದ್ದಾರೆ. ಹೊಸ ವರ್ಷದ ಆರಂಭದ ದಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದ ಮರಿಯನ್ನು ದತ್ತು ಪಡೆದ ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವೀಗ ಸೌತ್‌ ಸ್ಟಾರ್‌ ಎನ್ನುವುದರ ವಿವರ ಕೊಟ್ಟರು.

“ಹೊಸ ವರ್ಷದ ಮೊದಲ ದಿನವಿದು. 2020 ಕಳೆದು ಹೋಯಿತು. ಬರೀ ಸಿನಿಮಾ ಮಂದಿಗೆ ಮಾತ್ರವಲ್ಲ, ಇಡೀ ಜಗತ್ತಿನ ಪಾಲಿಗೆ ಇದೊಂದು ಕರಾಳ ವರ್ಷ. ಆದರೆ ನನಗೆ ೨೦೨೦ ಅನೇಕ ಆವಕಾಶಗಳನ್ನು ತಂದ ವರ್ಷ. ತೆಲುಗಿನಲ್ಲೀಗ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದೇನೆ. ಇನ್ನೊಂದು ಸಿನಿಮಾದ ಚಿತ್ರೀಕರಣ ಶುರುವಾಗಬೇಕಿದೆ. ಇನ್ನೇರೆಡು ಸಿನಿಮಾಗಳ ಮಾತುಕತೆ ಫೈನಲ್‌ ಆಗಿದೆ. ಹಾಗೆಯೇ ತಮಿಳಿನಲ್ಲೂ ಎರಡು ಸಿನಿಮಾಗಳಿಗೆ ಮಾತುಕತೆ ಶುರುವಾಗಬೇಕಿದೆ. “ಕಾಲಚಕ್ರʼ ದೊಂದಿಗೆ ಮಲಯಾಳಂನಲ್ಲೂ ಒಂದು ಸಿನಿಮಾದ ಆವಕಾಶ ಸಿಕ್ಕಿದೆʼ ಎನ್ನುತ್ತಾ ಹೊಸ ವರ್ಷಕ್ಕೆ ಭರ್ಜರಿ ಅವಕಾಶಗಳ ಸುದ್ದಿ ರಿವೀಲ್‌ ಮಾಡಿದರು. ಹಾಗಾದ್ರೆ ಸೌತ್‌ ಇಂಡಿಯಾ ಒಂದು ಸುತ್ತು ಹಾಕಿದ್ರೀ ಅಂತನ್ನಿ, ಅಂತೆನ್ನುವ ಮಾಧ್ಯಮದವರ ಪ್ರಶ್ನೆಗೆ , ಸೌತ್‌ ಇಂಡಿಯಾವೇ ಯಾಕೆ, ಇಡೀ ವಿಶ್ವವನ್ನೇ ಒಂದ್‌ ರೌಂಡ್‌ ಹಾಕೋಣ ಬಿಡಿ ಅಂತ ನಗು ಬೀರಿದರು ವಸಿಷ್ಠ.

ತೆಲುಗಿನಲ್ಲಿ ಈಗಾಗಲೇ ʼಒದೆಲಾ ರೈಲ್ವೆಸ್ಟೇಷನ್‌ʼ ಸಾಕಷ್ಟು ಸದ್ದು ಮಾಡಿದೆ. ಹೊಸ ವರ್ಷಕ್ಕೆ ಅದರ ಹೊಸ ಪೋಸ್ಟರ್‌ ಕೂಡ ಲಾಂಚ್‌ ಆಗಿದೆ. ಮತ್ತೊಂದೆಡೆ ತಲ್ವಾರ್‌ ಪೇಟೆ ಕೂಡ ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣ ವಾಗಿದೆ. ಈ ಸಿನಿಮಾಗಳ ಜತೆಗೆ ಮತ್ತೇರೆಡು ಸಿನಿಮಾ ಸೆಟ್ಟೇರುತ್ತಿವೆ. ಅದರ ಜತೆಗೆ ಎರಡು ತಮಿಳು ಸಿನಿಮಾ ಕೂಡ ಶುರುವಾಗುತ್ತಿರುವುದು ವಿಶೇಷ. ಕನ್ನಡದ ಮಟ್ಟಿಗೆ ವಸಿಷ್ಠ ಸಿಂಹ, ಒಂದೆಡೆ ಹೀರೋ, ಮತ್ತೊಂದೆಡೆ ವಿಲನ್.‌ ಎರಡು ಕಡೆ ಕೂಡ ಬ್ಯುಸಿ. ಹೀರೋ ಆಗಿ ʼಕಾಲಚಕ್ರʼ,ʼ ತಲ್ವಾರ್‌ ಪೇಟೆʼ, “ಪಂತʼ ಚಿತ್ರಗಳ ಜತೆಗೀಗ ಕಿಶೋರ್‌ ಕಾಂಬಿನೇಷ್‌ನಲ್ಲೂ ಒಂದು ಸಿನಿಮಾ ಶುರುವಾಗುತ್ತಿದೆಯಂತೆ. ಅದರ ಜತೆಗೆ ವಿಲನ್‌ ಆಗಿ” ಕೆಜಿಎಫ್‌ ೨ʼ ನಲ್ಲೂ ವಸಿಷ್ಠ ಅಬ್ಬರಿಸಲು ರೆಡಿಯಾಗಿದ್ದಾರೆ. ಆದರೆ ಇಲ್ಲಿ ಅವರಿಗೆ ಬಾಲಿವುಡ್‌ ನಟ ಸಂಜಯ್‌ ದತ್‌ ಜತೆಗೆ ಮುಖಾಮುಖಿ ಆಗಿಲ್ಲ ಎನ್ನುವ ಬೇಸರ ಇದೆಯಂತೆ. ಇನ್ನು “ಯುವರತ್ನʼ ಚಿತ್ರದಲ್ಲೂ  ವಸಿಷ್ಠ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Related Posts

error: Content is protected !!