Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ಆ ಕೋಟೆಗೆ ರಾಜನೂ ನಾನೇ, ಕಾವಲು ಗಾರನೂ ನಾನೇ.. ಹೀಗಂತ ಬೆಳ್ಳಿತೆರೆಗೆ ಬರಲು ರೆಡಿಯಾಗಿದೆ ʼ ಯಾರ ಮಗ ʼ ಹೆಸರಿನ ಚಿತ್ರ. ಇದು ಭೂಗತ ಲೋಕದ ಕಥೆ. ಹಾಗೆಯೇ ತಾಯಿ ಸೆಂಟಿಮೆಂಟ್ ಮೇಲೂ ನಿರ್ಮಣವಾದ ಚಿತ್ರ. ರಘು ಪಡುಕೋಟೆ ಇದರ ನಾಯಕ ನಟ ಕಮ್ ನಿರ್ದೇಶಕ. ಇವರು ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಪುತ್ರ. ಬಸವರಾಜ್ ಅವರು ತಮ್ಮ ಪುತ್ರನನ್ನು ಬೆಳ್ಳಿ ತೆರೆಗೆ ಹೀರೋ ಆಗಿ ಪರಿಚಯಿಸಲು ಯಾರ ಮಗ ಹೆಸರಿನ ಚಿತ್ರವೊಂದನ್ನು ನಿರ್ಮಿಸಿ ಬೆಳ್ಳಿ ತೆರೆಗೆ ಹೊರಟಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ಟೀಸರ್ ಹೊರ ಬಂದಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಚಿತ್ರಮಂದಿರದಲ್ಲಿ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಕ್ಷಣಾ ವೇದಿಕೆ ಯುವಘಟಕದ ರಾಜ್ಯಾಧ್ಯಕ್ಷ ಧರ್ಮರಾಜ್, ಡಿ.ಎಸ್. ಮ್ಯಾಕ್ಸ್ ನ ದಯಾನಂದ್, ಮಾರುತಿರಾವ್ ಮೋರೆ, ವೀರಶೈವ ಯುವ ವೇದಿಕೆಯ ಪ್ರಶಾಂತ್ ಕಲ್ಲೂರ್, ಕೆ.ಜಿ.ಹನುಮಂತಯ್ಯ ಆ ದಿನ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದರು. ಟೀಸರ್ ಲಾಂಚ್ ಮಾತನಾಡಿದ ಗಣ್ಯರು, ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಶುಭ ಹಾರೈಸಿದರು. ಚಿತ್ರ ತಂಡದ ಪರವಾಗಿ ಮೊದಲು ಮಾತನಾಡಿದ ನಿರ್ಮಾಪಕ,ʼ ನಾನು ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ, ಸಿನಿಮಾ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದೆ, ಈಗ ನನ್ನ ಮಗನಿಗಿರುವ ಸಿನಿಮಾ ಆಸಕ್ತಿ ಕಂಡು ಈಚಿತ್ರ ನಿರ್ಮಾಣ ಮಾಡಿದ್ದೇನೆ. ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಇಷ್ಟರಲ್ಲಿಯೇ ತೆರೆಗೆ ಬರಲಿದೆ ಅಂತ ಹೇಳಿಕೊಂಡರು.
ಚಿತ್ರಕ್ಕೆ ಸುರಪುರ ತಾಲ್ಲೂಕಿನ ಪಡುಕೋಟೆ, ಬೆಂಗಳೂರಿನ ಶಿವಾಜಿನಗರ, ವೈಟ್‌ಫೀಲ್ಡ್ ಸುತ್ತಮುತ್ತ ಶೇ. 60 ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಸಾಕಷ್ಟು ಹೊಸಬರಿಗೆ ಅವಕಾಶ ಸಿಕ್ಕಿದೆಯಂತೆ. ಪ್ಲಾನ್ ಪ್ರಕಾರ ಆದರೆ ಇದೇ ಜೂನ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡಕ್ಕಿದೆ.” ಈಗಿನ ಕಾಲದ ಹುಡುಗರು ಹೇಗೆಲ್ಲಾ ಹಾಳಾಗ್ತಿದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ, ತಾಯಿ ಸೆಂಟಿಮೆಂಟ್, ಲವ್, ಡ್ರಗ್ ಮಾಫಿಯಾ ಕೂಡ ಚಿತ್ರದಲ್ಲಿದೆ. ಒಬ್ಬ ಮಗನಾದವನು ತನ್ನ ತಾಯಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳಬಹುದು ಅಂತ ನನ್ನ ಪಾತ್ರದ ಮೂಲಕ ನಿರೂಪಿಸಲಾಗುತ್ತಿದೆ. ತಾಯಿ ಕೂಡ ತನ್ನ ಮಗನ ಮೇಲೆ ಎಷ್ಟು ಕಾಳಜಿ ವಹಿಸುತ್ತಾಳೆ ಎಂಬ ಕಂಟೆಂಟ್ ಚಿತ್ರದಲ್ಲಿದೆʼ ಎನ್ನುವುದು ನಿರ್ದೇಶಕ ಕಮ್ ನಾಯಕ ನಟ ರಘು ಪಡುಕೋಟೆ ಮಾತು. ಚಿತ್ರದಲ್ಲಿ 5 ಹಾಡುಗಳಿದ್ದು, ಅವಗಳಿಗೆ ಪ್ರವೀಣ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸುಕೃತ ಅಭಿನಯಿಸುತ್ತಿದ್ದು, ಕಾಕ್ರೋಚ್‌ಸುಧೀ, ಬಲ ರಾಜವಾಡಿ ಸೇರಿದಂತೆ ದೊಡ್ಡ ತಂಡವೇ ಚಿತ್ರದಲ್ಲಿದೆ.
ಕೊರೋನಾ ಕಾರಣಕ್ಕೆ ಮಿಸ್ ಮಾಡ್ಕೊಂಡ್ ಅನೇಕ ಸಂಗತಿಗಳ ಪೈಕಿ ಸ್ಕೂಲ್ ಕೂಡ ಒಂದು. ರಾಜ್ಯದ ಅದೆಷ್ಟೋ ವಿದ್ಯಾರ್ಥಿಗಳು ಸ್ಕೂಲ್ ಮುಖ ನೋಡದೆ ಹೆಚ್ಚು ಕಡಿಮೆ ವರ್ಷವೇ ಆಗುತ್ತಾ ಬಂತು. ಮನೆಯಲ್ಲೇ ಕುಳಿತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪುಟಾಣಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲೀಗ ಹೊಸ ಬಗೆಯ ವಿಡಿಯೋ ಸಾಂಗ್ ವೊಂದು ಹೊರ ಬಂದಿದೆ. ನಿರ್ದೇಶಕ ಸಾಯಿ ಲಕ್ಷ್ಮಣ್ ತಂಡ ಈ ಪ್ರಯತ್ನ ಮಾಡಿದೆ. ಸುಮಾರು 300 ಮಕ್ಕಳು ಈ ವಿಡಿಯೋ ಸಾಂಗ್ ನಲ್ಲಿ ನೃತ್ಯ ಮಾಡಿದ್ದಾರೆ. ವಿಶೇಷ ಅಂದ್ರೆ ಇದು ಮಕ್ಕಳಿಂದ ಮಕ್ಕಳಿಗೋಸ್ಕರ ತಯಾರಾದ ವಿಡಿಯೋ ಸಾಂಗ್ ಆಲ್ಬಂ ಇದು. ಮಂಗಳವಾರವಷ್ಟೇ ( ಮಾ.23) ಈ ವಿಡಯೋ ಸಾಂಗ್ ಆಲ್ಬಂ ಸಾಂಗ್ ರಿಲೀಸ್ ಆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ವಿಡಿಯೋ ಸಾಂಗ್ ಲಾಂಚ್ ಮಾಡಿ ಶುಭ ಹಾರೈಸಿದರು. ” ಸಂಜಯ್ ಅವರ ಸಾಹಸ ಮೆಚ್ಚಬೇಕು. ಮಕ್ಮಳಲ್ಲಿ ನಟಿಸಲು ಹೇಳಲು ತಾಳ್ಮೆ ಬೇಕೆ ಬೇಕು.ನಟ ಪುನೀತ್ ರಾಜ್ ಕುಮಾರ್ ಮಗುವಿದ್ದಾಗ ಚಲಿಸುವ ಮೋಡಗಳು ಸಿನಿಮಾದಲ್ಲಿ ನಟಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಲ್ಲಿ ಕಚ್ಚೆ ಕಟ್ಟಿಕೊಂಡು ನಟಿಸಬೇಕಿತ್ತು. ನಾನು ಮಾಡಲ್ಲ ಅಂತ ಓಡೋರು. ಮಕ್ಕಳನ್ನು ಸಹಿಸಿಕೊಂಡು ತಯಾರಿಸಿರೋದು ಅತಿಶಯೋಕ್ತಿಯಲ್ಲ. ಮಕ್ಕಳ ಕೈಯಲ್ಲಿ ಮೂರು ದಿನಗಳಲ್ಲಿ ಶೂಟಿಂಗ್ ಮುಗಿಸಿರೋದು ಖುಷಿತಂದಿದೆ. ನಿರ್ದೇಶಕರ ತಾಳ್ಮೆಗೆ ಶರಣು. ಎಲ್ಲರಿಗೂ ತನ್ನ ಮಗ, ಮಗಳು ಚೆನ್ನಾಗಿ ಕಾಣಬೇಕು ಎಂದು ಆಸೆಯಿರುತ್ತದೆ. ಇವತ್ತು ತಂದೆ ತಾಯಿಗಳಿಗೆ ಖುಷಿಯಾಗಿರುತ್ತದೆʼ ಅಂತ ತಂಡಕ್ಕೆ ಶುಭ ಹಾರೈಸಿದರು.
ಸಾಯಿ ಲಕ್ಷಣ್ ನಿರ್ದೇಶನದ ಜತೆಗೆ ನೃತ್ಯ ನಿರ್ದೇಶನ ಮಾಡಿದ್ದು, ಅನ್ಮೂಲ್ ವಿಜಯ್ ಭಟ್ಕಳ, ಅಜಿಂಶಾ ಸೇರಿದಂತೆ ೩೦೦ ಕ್ಕೂ ಹೆಚ್ಚು ಪುಟಾಣಿಗಳು ಈ ವಿಡಿಯೋ ಸಾಂಗ್ ಆಲ್ಬಂ ನಲ್ಲಿ ಕಾಣಸಿಕೊಂಡಿದ್ದಾರೆ. ವಿಡಿಯೋ ಲಾಂಚ್ ಗೆ ಅಥಿಯಾಗಿ ಬಂದಿದ್ದ ಸಾಮಾಜಿಕ ಕಾರ್ಯಕರ್ತ ರವಿ ಮಾತನಾಡಿ, ಮನುಷ್ಯ ಎಳೆಯ ಮಕ್ಕಳಿಂದಲೇ ಬೆಳೆಯಬೇಕು ಎನ್ನುವ ಮನೋಭಾವ ಖುಷಿಯಾಯಿತು. ನಮ್ಮ ವಿದ್ಯೆಯೇ ದೇವಸ್ಥಾನ ಎನ್ನುವುದು ಅರಿವಾಗಬೇಕು. ಕೊರೋನಾದಿಂದ ಬೇಸತ್ತವರಿಗೆ ಇಂತಹ ವೀಡಿಯೋ ಸಾಂಗ್ ಮುಖ್ಯವಾಗಿದೆ ಎಂದರು. ಈ ವಿಡಿಯೋ ಸಾಂಗ್ ಈಗ ಸೋಷಲ್ ಮೀಡಿಯಾದಲ್ಲಿ ಲಭ್ಯವಿದೆ.
ನಟ ಆದಿತ್ಯ, ಯೂಟ್ಯೂಬ್ ವಿಮರ್ಶಕರ ಮೇಲೆ ಗರಂ ಆಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ದೂರು ನೀಡಿರುವ ಅವರು, ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದ್ದಾರೆ. ಹೌದು, ಇತ್ತೀಚೆಗಷ್ಟೆ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ನಟ ಆದಿತ್ಯ ಹರಿಹಾಯ್ದಿದ್ದರು. ವಿಡಿಯೋ ಮೂಲಕ ಯೂಟ್ಯೂಬ್ ವಿಮರ್ಶಕರ ಮೇಲೆ ಚಾಟಿ ಬೀಸಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಅವರು, ಫಿಲ್ಮ್ ಚೇಂಬರ್ನಲ್ಲಿ ಯೂಟ್ಯೂಬರ್ಗಳ ವಿರುದ್ಧ ದೂರು ಸಲ್ಲಿಸಿದ್ದಾರೆ. ಮುಂದುವರೆದ ಅಧ್ಯಾಯ ಸಿನಿಮಾ ಬಗ್ಗೆ ಅವಹೇಳನಕಾರಿಯಾಗಿ ರಿವ್ಯೂ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
“ಮುಂದುವರೆದ ಅಧ್ಯಾಯʼ ಸಿನಿಮಾ ನಿರ್ದೇಶಕ ಬಾಲು ಚಂದ್ರಶೇಖರ್, ನಿರ್ಮಾಪಕರು ಹಾಗೂ ಚಿತ್ರತಂಡದ ಜತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ನಾಯಕ ಆದಿತ್ಯ, ಆರು ಮಂದಿ ಯೂಟ್ಯೂಬರ್ಗಳ ಮೇಲೆ ದೂರು ಸಲ್ಲಿಸಿದರು. ದೂರು ಸ್ವೀಕರಿಸಿ ಮಾತನಾಡಿದ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್‍ಎಮ್ ಸುರೇಶ್, ಕನ್ನಡ ಚಿತ್ರಗಳಿಗೆ, ಕನ್ನಡ ಚಿತ್ರರಂಗಕ್ಕೆ ಇವರೇ ಮಾರಕವಾಗುತ್ತಿದ್ದಾರೆ. ಹೀಗಾಗಿ ಸಿನಿಮಾಗಳನ್ನು ವಿಮರ್ಶೆ ಮಾಡದಂತೆ ಬ್ಯಾನ್ ಮಾಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಂದುವರೆದ ಅಧ್ಯಾಯ ಚಿತ್ರದ ನಾಯಕ ನಟ ಆದಿತ್ಯ, ಸಿನಿಮಾ ನೋಡಿದ ಹಿರಿಯ ಪತ್ರಕರ್ತರು, ಟಿವಿ ಹಾಗೂ ದಿನಪತ್ರಿಕೆಯ ಪರ್ತಕರ್ತರು ಮಾತ್ರವಲ್ಲ ಪ್ರೇಕ್ಷಕರೂ ಸಹ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಹಣದಾಸೆಗೆ ಕೆಲ ಯೂಟ್ಯೂಬರ್ಗಳು ಹೀಗೆ ನೆಗೆಟಿವ್ ರಿವ್ಯೂ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ಪ್ರಕಟಿಸಿದ ಸಂದರ್ಭದಲ್ಲಿ ಒಳ್ಳೆಯ ವಿಮರ್ಶೆ ನೀಡಲು ಹಣ ಕೇಳಿದ್ದರು. ಆದರೆ ನಮ್ಮ ಚಿತ್ರತಂಡದವರು ಅವರಿಗೆ ಸ್ಪಂದಿಸಿರಲಿಲ್ಲ, ಹೀಗಾಗಿಯೇ ಈ ರೀತಿ ನೆಗಟಿವ್ ರಿವ್ಯೂ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯುವ ನಿರ್ದೇಶಕ ದೇವರಾಜ್ ” ತಾಜ್‌ಮಹಲ್ 2ʼ ಕಟ್ಟಿ ನಿಲ್ಲಿಸಿದ್ದಾರೆ. ಈ ಹಿಂದೆ ಇವರು ʼ ಡೇಂಜರ್ ಜೋನ್ʼ , ʼನಿಶ್ಯಬ್ದ -2ʼ ಹಾಗೂ ʼಅನೂಷ್ಕʼ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಅದಕ್ಕೂ ಮೊದಲು ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಅದೇ ಅನುಭದಲ್ಲಿ ಆಕ್ಷನ್ ಕಟ್ ಹೇಳುವ ಸಾಹಸಕ್ಕೆ ಕೈ ಹಾಕಿ, ಅದರಲ್ಲೂ ಸಕ್ಸಸ್ ಕಂಡರು. ಅಲ್ಲಿಂದೀಗ ಅವರು ಹೀರೋ ಆಗಿ ಪರಿಚಿಯಿಸಿಕೊ ಳ್ಳುತ್ತಿರುವ ಹೊಸ ಸಾಹಸಕ್ಕೆ ʼ ತಾಜ್ ಮಹಲ್ 2ʼ ಅಂತ ಹೆಸರಿಟ್ಟು ಕೊಂಡಿದ್ದಾರೆ. ಅಂದಹಾಗೆ ಅವರೇ ನಿರ್ಮಾಣ, ನಿರ್ದೇಶನದೊಂದಿಗೆ ಹೀರೋ ಆಗಿ ಅಭಿನಯಿಸಿರುವ ಚಿತ್ರ ʼತಾಜ್ ಮಹಲ್ 2ʼ.
ಕಳೆದ ವರ್ಷವೇ ಈ ಚಿತ್ರ ಸೆಟ್ಟೇರಿ, ಚಿತ್ರೀಕರಣ ಆರಂಭಿಸಿತ್ತು. ಅದೀಗ ಚಿತ್ರೀಕರಣ ಮುಗಿಸಿಕೊಂಡು ರಿಲೀಸ್ ಗೆ ರೆಡಿಯಾಗಿದೆ.ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ನಿರ್ಮಿಸಿದ ಅದ್ದೂರಿ ಸೆಟ್‌ನಲ್ಲಿ ಇತ್ತೀಚೆಗೆ ಹಾಡು ಹಾಗೂ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣದೊಂದಿಗೆ ಚಿತ್ರತಂಡ ಕುಂಬಳ ಕಾಯಿ ಒಡೆದಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಪಕ್ಕಾ ಲವ್ ಕಮ್ ಆಕ್ಷನ್ ಸಿನಿಮಾ. ಹಾಗೆಯೇ ಎಮೋಷನ್ ಕಥಾ ಹಂದರದ ಚಿತ್ರವೂ ಹೌದು. ನಿರ್ದೇಶಕ ಕಮ್ ಚಿತ್ರದ ನಾಯಕ ನಟ ದೇವರಾಜ್ ಕುಮಾರ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರೀಕರಣ ಮುಕ್ತಾಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿದ್ದ ಚಿತ್ರ ತಂಡ ಚಿತ್ರೀಕರಣದ ಅನುಭವದ ಜತೆಗೆ ಮುಂದಿನ ಯೋಜನೆಗಳನ್ನು ಹೇಳಿಕೊಂಡಿತು.
” ಹೆಚ್ಚು ಕಡಿಮೆ ಒಂದು ಒಂದೂವರೆ ವರ್ಷ ಆಯಿತು. ಚಿತ್ರೀಕರಣ ಶುರುವಾಗಿ, ಎರಡು ವರ್ಷಗಳೇ ಆದವು. ಕೊರೋನಾ ಕಾರಣದಿಂದ ಸಿನಿಮಾ ಚಟುವಟಿಕೆ ಎಲ್ಲವೂ ಸ್ತಬ್ದವಾಗಿದ್ದವು. ಮತ್ತೆ ಚುಟುವಟಿಕೆ ಶುರುವಾದ ನಂತರ ಚಿತ್ರೀಕರಣ ಶುರುವಾಯಿತು. ಇತ್ತೀಚೆಗಷ್ಟೇ ಬೆಂಗೂರಿನ ಎಚ್ ಎಂಟಿ ಫ್ಯಾಕ್ಟರಿ ಆವರಣದಲ್ಲಿ ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮುಗಿಸಿಕೊಳ್ಳುವ ಮೂಲಕ ಕುಂಬಳ ಕಾಯಿ ಒಡೆದಿದ್ದೇವೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಮೇ ತಿಂಗಳಲ್ಲಿ ಫಸ್ಟ್ ಲುಕ್ ಟೀಸರ್ ಲಾಂಚ್ ಮಾಡುವ ಯೋಚನೆ ಇದೆ. ಆನಂತರ ಅಂದ್ರೆ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಹಾಕಿಕೊಂಡಿದ್ದೇವೆʼ ಎಂದರು ನಿರ್ದೇಶಕ ಕಮ್ ನಾಯಕ ನಟ ದೇವರಾಜ್ ಕುಮಾರ್.
ಮುಂಬೈ ಮೂಲದ ಬೆಡಗಿ ಸಮೃದ್ಧಿ ಶುಕ್ಲ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ತಮ್ಮನ್ನು ನಾಯಕಿ ಆಗಿ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಚಿತ್ರ ತಂಡಕ್ಕೆ ಧನ್ಯವಾದ ಹೇಳಿದರು. ಹಾಗೆಯೇ ಚಿತ್ರೀಕರಣದ ಅನುಭವ ಚೆನ್ನಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಅನುಭವ ಸಿಗುವ ಭರವಸೆ ಇದೆ ಎಂದರು. ವಿಕ್ಟರಿ ವಾಸು, ಕಾಕ್ರೋಚ್ ಸುಧೀ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ವಾಸು ಹಾಗೂ ಕಾಕ್ರೋಚ್ ಸುಧೀ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ ಸೇರಿದಂತೆ ವಿವಿಧೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಸುಮಾರು 25 ದಿನಗಳ ಕಾಲ ಸಕಲೇಶಪುರದಲ್ಲಿ ಸೆಟ್ ಹಾಕಿ ಮಳೆಯಲ್ಲೇ ಚಿತ್ರೀಕರಣ ನಡೆದಿದೆಯಂತೆ. ಮನ್ವರ್ಷಿ ಚಿತ್ರಕ್ಕೆ ಸಂಬಾಷಣೆ ಬರೆದಿದ್ದಾರೆ. ಚಂದ್ರು ಬಂಡೆ ಅವರು ರೆಗ್ಯುಲರ್ ಆಕ್ಷನ್‌ಗಿಂತ ಬೇರೆ ಥರದಲ್ಲಿ ಆಕ್ಷನ್ ಕಂಪೋಜ್ ಮಾಡಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಬಸಣ್ಣಿ ಹಾಡಿನ ಖ್ಯಾ ತಿಯ ವರ್ಷ ಸುರೇಶ್ ಕೂಡ ಒಂದು ಹಾಡಿದ್ದಾರೆ.
ಕನ್ನಡದ ಕಿರುತೆರೆಗೆ ಚಿರಪರಿಚಿತವಾದ ಹೆಸರು ರವಿ ಆರ್. ಗರಣಿ. ಸೀರಿಯಲ್ ನಿರ್ಮಾಣದ ಜತೆಗೆ ಸಿನಿಮಾದಲ್ಲೂ ಸಖತ್ ಸುದ್ದಿ ಮಾಡಿದವರು. ಅವರು ನಿರ್ಮಾಣ ಮಾಡಿದʼ ನಾನು ಅವನಲ್ಲ ಅವಳುʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಕೂಡ ನಿಮಗೆಲ್ಲ ಗೊತ್ತೇ ಇದೆ. ಈಗವರು ಸುಮಂತ್ ಶೈಲೇಂದ್ರ ಹಾಗೂ ಭಾವನಾ ಮೆನನ್ ಅಭಿನಯದ ʼಗೋವಿಂದ ಗೋವಿಂದʼ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಇದು ಇವರೇ ನಿರ್ಮಾಣದ ಚಿತ್ರ. ಈ ಚಿತ್ರಕ್ಕೂ ಮೊದಲು ಅವರು ಕಾಲಿವುಡ್ ನ ಬಹುಬೇಡಿಕೆಯ ನಟ ವಿಜಯ್ ಸೇತುಪತಿ ಜತೆಗೆ ಸಿನಿಮಾ ನಿರ್ಮಾಣ ಮಾಡುವ ಯೋಚನೆಯಲ್ಲಿದ್ರಂತೆ. ಇದಕ್ಕೆ ಕನ್ನಡದ ಜನಪ್ರಿಯ ನಿರ್ಮಾಪಕ ಶೈಲೇಂದ್ರ ಬಾಬು ಕೂಡ ಸಾಥ್ ನೀಡಿದ್ರಂತೆ. ಆದ್ರೆ ಆ ಹೊತ್ತಿಗೆ ವಿಜಯ್ ಸೇತುಪತಿ ಕಾಲ್ ಶೀಟ್ ಸಿಗುವುದು ಕಷ್ಟವಾಯಿ ತ್ತಂತೆ. ಹೆಚ್ಚು ಕಡಿಮೆ ಎರಡು ವರ್ಷ ಕಾಯಬೇಕಾಗ ಬಹುದು ಅಂದ್ರಂತೆ. ಸೀದಾ ಚೆನ್ನೈನಿಂದ ಬಂದವರಿಗೆ ಹೊಳೆದಿದ್ದೇ ” ಗೋವಿಂದ ಗೋವಿಂದʼ ಚಿತ್ರವಂತೆ.
ಚಿತ್ರ ತಂಡದ ಪ್ರಕಾರ ‘ ಗೋವಿಂದ ಗೋವಿಂದ’ ಚಿತ್ರ ಶುರುವಾಗುವುದಕ್ಕೆ ರವಿ. ಆರ್. ಗರಣಿ ಅವರೇ ಕಾರಣ. ವಿಶೇಷ ಅಂದ್ರೆ, ಅವರದೇ ತಂಡ ಇದನ್ನು ಶುರು ಮಾಡಿದ್ದು. ರವಿ ಗರಣಿ ಪ್ರೊಡಕ್ಷನ್ ಮೂಲಕ ಈಗಾಗಲೇ ಒಂದೆರೆಡು ಧಾರಾವಾಹಿ ನಿರ್ದೇಶನ ಮಾಡಿದ ತಿಲಕ್ ಅವರೇ ಇದಕ್ಕೆ ನಿರ್ದೇಶಕರಾಗಿದ್ದಕ್ಕೂ ರವಿ ಆರ್. ಗರಣಿ ಕಾರಣವಂತೆ. ಹಾಗೆಯೇ ಕಥೆ, ಚಿತ್ರಕಥೆ ಸೇರಿದಂತೆ ಚಿತ್ರದ ಸ್ಕ್ರೀಫ್ಟ್ ವಿಚಾರದಲ್ಲೂ ರವಿ ಆರ್. ಗರಣಿ ಹೆಚ್ಚು ನಿಗಾವಹಿಸಿ ಈ ಚಿತ್ರದ ನಿರ್ಮಾಣ ಮಾಡಿದ್ದಾರಂತೆ. ಹಾಗಾಗಿ ಪ್ರೇಕ್ಷಕರಿಗೆ ಒಂದೊಳ್ಳೆಯ ಚಿತ್ರದ ಸಿಗುತ್ತೆ ಎನ್ನುವ ವಿಶ್ವಾಸಚಿತ್ರ ತಂಡದ್ದು. ಅದೇ ಮಾತನ್ನು ನಿರ್ಮಾಪಕ ರವಿ ಆರ್. ಗರಣಿ ಕೂಡ ಹೇಳುತ್ತಾರೆ. ” ಈ ಚಿತ್ರ ಶುರುವಾಗಿದ್ದು ತುಂಬಾ ಆಕಸ್ಮಿಕ. ವಿಜಯ್ ಸೇತುಪತಿ ಅವರೊಂದಿಗೆ ಸಿನಿಮಾ ಮಾಡುವ ಪ್ಲಾನ್ ಇತ್ತು. ಕೊನೆಗೆ ಕೊರೋನಾದಿಂದ ಎಲ್ಲವೂ ಬದಲಾಯಿತು. ಆಗ ಶುರುವಾಗಿದ್ದೇ ಈ ಸಿನಿಮಾ. ಪ್ರತಿ ಹಂತದಲ್ಲೂ ಈ ಸಿನಿಮಾ ಹೀಗೆಯೇ ಬರಬೇಕು ಅಂತ ಯೋಚಿಸಿ, ಚಿಂತಿಸಿ ನಿರ್ಮಾಣ ಮಾಡಿದ್ದೇವೆ. ಕ್ಲಾಸ್ ಮಾಸ್ ಅಂತ ವರ್ಗಿಕರಿಸುವುದಕ್ಕಿಂತ ಮನೆ ಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ ಮಾಡಬೇಕು ಅನ್ನೋದು ನಮ್ಮ ಟಾರ್ಗೆಟ್ ಆಗಿತ್ತು. ಆ ಪ್ರಕಾರವೇ ಈ ಸಿನಿಮಾ ಮೂಡಿಬಂದಿದೆ. 2021ಕ್ಕೆ ಇದೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲಾ ನಂಬಿಕೆ ನಮಗಿದೆ. ಜತೆಗೆ ಕೊರೋನಾ ಕಾರಣಕ್ಕೆ ಜನ ಚಿತ್ರಮಂದಿರಕ್ಕೆ ಬಂದಿಲ್ಲ. ಎಲ್ಲಾ ಮನೆ ಹಿಡಿದು ಕುಳಿತಿದ್ದಾರೆ. ಅವರೆಲ್ಲ ಹೊರ ಬಂದು ಈ ಸಿನಿಮಾ ನೋಡುವುದು ಗ್ಯಾರಂಟಿ ʼ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ನಿರ್ಮಾಪಕ ರವಿ. ಆರ್. ಗರಣಿ.
ಸುಮಂತ್ ಶೈಲೇಂದ್ರ ಅಭಿನಯದ” ಗೋವಿಂದ ಗೋವಿಂದ ʼ ಚಿತ್ರ ಏಪ್ರಿಲ್ ಕ್ಕೆ16 ತೆರೆಗೆ ಬರುತ್ತಿದೆ. ಚಿತ್ರ ತಂಡ ಅಧಿಕೃತವಾಗಿಯೇ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಸದ್ಯಕ್ಕೆ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀತಿ ಜೋರಾಗಿದೆ. ಇನ್ನೇನು ಲಾಕ್ ಡೌನ್ ಆಗುತ್ತೆ ಎನ್ನುವ ಭಯಕ್ಕೆ ತೆರೆ ಬಿದ್ದಿದೆ. ಲಾಕ್ ಡೌನ್ ಇಲ್ಲ ಅಂತ ಸರ್ಕಾರ ಸ್ಪಷ್ಟ ಪಡಿಸಿದೆ. ಈ ನಡುವೆಯೇ “ರಾಬರ್ಟ್ʼ ರಾರಾಜಿಸುತ್ತಿದೆ. ಇನ್ನೇನು “ಯುವ ರತ್ನʼ ಆಗಮನಕ್ಕೆ ವೇದಿಕೆ ಭರ್ಜರಿ ಆಗಿ ರೆಡಿ ಆಗಿದೆ.” ಯುವ ರತ್ನʼ ಚಿತ್ರ ತಂಡ ರಾಜ್ಯದಲ್ಲಿ ದೊಡ್ಡ ಹವಾ ಸೃಷ್ಟಿಸಿದೆ. ಇದು ತೆರೆ ಕಂಡ ನಂತರದ ದಿನಗಳಲ್ಲಿ ಸುಮಂತ್ ಶೈಲೇಂದ್ರ ಅಭಿನಯದ ” ಗೋವಿಂದ ಗೋವಿಂದʼ ಚಿತ್ರ ತೆರೆಗೆ ಬರುತ್ತಿದೆ.
ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್ ಹಾಗೂ ರವಿ ಗರಣಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾದ ಚಿತ್ರ ಇದು. ತಿಲಕ್ ಇದರ ನಿರ್ದೇಶಕರು. ಇಷ್ಟು ದಿನ ಕಿರುತೆರೆಯಲ್ಲಿ ದೊಡ್ಡ ಸುದ್ದಿಯಲ್ಲಿದ್ದರು. ಇದೀಗ “ಗೋವಿಂದ ಗೋವಿಂದʼ ಅಂತ ಹಿರಿತೆರೆಗೆ ಎಂಟ್ರಿ ಆಗಿದ್ದಾರೆ. ದೇವ್ ರಂಗಭೂಮಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಸುಮಂತ್ , ರೂಪೇಶ್, ಭಾವನಾ ಮೆನನ್ , ಕವಿತಾ ಗೌಡ ಸೇರಿದಂತೆ ಚಿತ್ರದಲ್ಲಿ ದೊಡ್ಡ ತೃಾಗಣವೇ ಇದೆ. ಶೈಲೇಂದ್ರ ಬಾಬು, ಕಿಶೋರ್ ಎಂ.ಕೆ.ಮಧುಗಿರಿ ಹಾಗೂ ರವಿ ಆರ್. ಗರಣಿ ಈ ಚಿತ್ರದ ನಿರ್ಮಾಪಕರು.
ಸದ್ಯಕ್ಕೀಗ ಈ ಚಿತ್ರದ ಆಡಿಯೋ ಜೂಕ್ ಬಾಕ್ಸ್ ಲಾಂಚ್ ಮೂಲಕ ಸದ್ದ ಮಾಡಿದೆ. ಪುಷ್ಕರ್ ಫಿಲಂಸ್ ಮೂಲಕ ಹಾಡುಗಳು ಹೊರಬಂದಿದ್ದು, ಈಗಾಗಲೇ “ಗೋವಿಂದ ಗೋವಿಂದʼ ಹಾಡಿಗೆ ಯೂಟ್ಯೂಬ್ ಮೂಲಕ ಸಖತ್ ರೆಸ್ಪಾನ್ಸ್ ಸಿಕ್ಕಿದೆಯಂತೆ. ಇದೊಂದು ಪಕ್ಕಾ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾವಂತೆ. 2021ಕ್ಕೆ ಇದು ದೊಡ್ಡ ಹಿಟ್ ಆಗಲಿದೆ ಎನ್ನುವ ಭರವಸೆ ಚಿತ್ರ ತಂಡದ್ದು. ಆ ದಿನ ಚಿತ್ರದ ಆಡಿಯೋ ಜೂಕ್ ಬಾಕ್ಸ್ ಲಾಂಚ್ ಗೆ ರಾಜಕಾರಣಿ ಕೆ.ಎನ್. ರಾಜಣ್ಣ ಬಂದಿದ್ದರು. ಅವರೊಂದಿಗೆ ಹಿರಿಯ ನಿರ್ದೇಶಕ ಲಿಂಗದೇವರು ಇದ್ದರು. ಆಡಿಯೋ ಜೂಕ್ ಬಾಕ್ಸ್ ಲಾಂಚ್ ಅವರು ಚಿತ್ರ ತಂಡಕ್ಕೆ ಶುಭ ಕೋರಿದರು.
ಸಿನಿಮಾ ರಂಗಕ್ಕೆ ಕರಾವಳಿ ಹುಡುಗಿಯರು ಸರದಿಯಂತೆ ದಾಂಗುಡಿ ಇಡುತ್ತಿದ್ದಾರೆ. ಈಗಾಗಲೇ ಅಲ್ಲಿಂದ ಇಲ್ಲಿಗೆ ಬಂದು ಹೆಸರು ಮಾಡಿದವರದ್ದು ದೊಡ್ಡ ಪಟ್ಟಿಯಿದೆ. ಆ ಸಾಲಿಗೆ ಈಗ ಮತ್ತೊಬ್ಬರು ಕರಾವಳಿ ಚೆಲುವೆ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ಹೆಸರು ವಿರಾನಿಕಾ ಶೆಟ್ಟಿ. “ಚಿ. ತು. ಯುವಕರ ಸಂಘʼ ಎನ್ನುವ ಚಿತ್ರದ ನಾಯಕಿ. ಇದು ಇವರ ಮೊದಲ ಚಿತ್ರ. ಸಿನಿಮಾ ರಂಗಕ್ಕೆ ಎಂಟ್ರಿಯಾದ ಬಗೆ, ಚಿತ್ರೀಕರಣದ ಅನುಭವ ಕುರಿತು ಸಿನಿಲಹರಿ ಜತೆಗೆ ನಟಿ ವಿರಾನಿಕಾ ಶೆಟ್ಟಿ ಮಾತನಾಡಿದ್ದು ಹೀಗೆ..
-ಎಂಥಾ ನೀವೂ ಕೂಡ ಕರಾವಳಿ ಕಡೆಯವ್ರಾ ?
ಮೂಲತಃ ನಾನು ಸಕಲೇಶಪುರ ಹುಡುಗಿ. ಹೈಸ್ಕೂಲ್ ತನಕ ಓದಿದ್ದೆಲ್ಲವೂ ಅಲ್ಲಿಯೇ. ಉನ್ನತ ಶಿಕ್ಷಣಕ್ಕೆ ಅಂತ ಮಂಗಳೂರಿಗೆ ಬಂದೆ. ಅಲ್ಲಿಂದ ಮಂಗಳೂರಿನಲ್ಲಿಯೇ ಉಳಿದುಕೊಂಡೆ. ಅದೇ ನಮ್ಮೂರಾಯ್ತು.
– ಅದು ಸರಿ, ಈ ಸಿನಿಮಾರಂಗದ ನಂಟು ಶುರುವಾಗಿದ್ದು ಹೆಂಗೆ?
ಸಿನಿಮಾ ಅಂದ್ರೆ ಎಲ್ಲರಿಗೂ ಆಸಕ್ತಿಯೇ. ಅಂತೆಯೇ ಬಾಲ್ಯದಿಂದಲೂ ನಂಗೂ ಸಿನಿಮಾ ಬಗೆಗೆ ಒಂದ್ರೀತಿಯ ಕುತೂಹಲ, ಆಸಕ್ತಿ ಇದ್ದೇ ಇತ್ತು. ಆನಂತರ ಕಾಲೇಜು ದಿನಗಳಲ್ಲಿ ಅದು ಇನ್ನಷ್ಟು ಆಕರ್ಷಿಸತೊಡಗಿತು. ನಟಿಯಾದ್ರೆ ಹೆಂಗೆ ಅಂತ ಯೋಚಿಸತೊಡಗಿದೆ. ಅವಕಾಶ ಸಿಕ್ಕರೆ ಸಿನಿಮಾದಲ್ಲಿ ಅಭಿನಯಿಸೋಣ ಅಂತ ಕಾಯುತ್ತಿದ್ದೆ. ಆ ಟೈಮ್ ನಲ್ಲಿಯೇ ಜಾಹೀರಾತುಗಳಲ್ಲಿ ಕಾಣಸಿಕೊಂಡೆ. ನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು. ಅದೇ ವೇಳೆ ಪರಿಚಿತರೊಬ್ಬರು “ ಚಿ.ತು. ಯುವಕರ ಸಂಘʼ ಸಿನಿಮಾದ ಬಗ್ಗೆ ಹೇಳಿದ್ರು. ಅಲ್ಲಿಂದ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಭೇಟಿ ಮಾಡಿದೆ. ಫೋಟೋ ಮತ್ತು ಪ್ರೊಪೈಲ್ ಕಳುಹಿಸಿದೆ. ಒಂದಷ್ಟು ದಿನಗಳ ನಂತರ ಟೀಮ್ ಕಡೆಯಿಂದ ಕರೆ ಬಂತು. ಕಥೆಯ ಜತೆಗೆ ನನ್ನ ಪಾತ್ರದ ಬಗ್ಗೆ ಕೇಳಿದೆ. ಚೆನ್ನಾಗಿತ್ತು. ಒಪ್ಪಿಕೊಂಡೆ.
– ಆಕ್ಟಿಂಗ್ ಬಗ್ಗೆ ಮೊದಲೇ ಗೊತ್ತಿತ್ತಾ ಅಥವಾ ಸಿನಿಮಾಕ್ಕೆ ಸೆಲೆಕ್ಟ್ ಆದ್ಮೇಲೆ ಕಲಿತುಕೊಂಡ್ರಾ?
ನಾನೊಬ್ಬಳು ಥಿಯೇಟರ್ ಆರ್ಟಿಸ್ಟ್. ಕಾಲೇಜು ದಿನಗಳಲ್ಲೇ ರಂಗಭೂಮಿ ನಂಟಿತ್ತು. ಆಗಲೇ ನಟನೆ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೆ. ಒಂದೆರೆಡು ನಾಟಕಗಳಲ್ಲೂ ಅಭಿನಯಿಸಿದ್ದೆ. ಅದೇ ಅನುಭವದಲ್ಲಿ ಸಿನಿಮಾ ನಟಿ ಆಗಲು ಬಯಸಿದ್ದೆ. ಅದಕ್ಕೆ ಪೂರಕವಾಗಿಲೇ ಒಂದಷ್ಟು ಸಿದ್ಧತೆ ನಡೆಸಿದ್ದೆ. ಅದೇ ಈ ಸಿನಿಮಾಕ್ಕೆ ಅನುಕೂಲವಾಯಿತು. ಹಾಗೆಯೇ ಇಲ್ಲಿಗೆ ಬಂದ ನಂತರ ರಿಹರ್ಸಲ್ ಮಾಡಿಕೊಂಡು, ಶೂಟಿಂಗ್ ಹೊರಟೆವು.
-ಏಜುಕೇಷನ್ ಏನ್ ಮಾಡ್ಕೊಂಡಿದ್ದೀರಿ, ಮುಂದೆ ಹೇಗೆ ?
ಏವಿಯೇಷನ್ ಅಂಡ್ ಹೋಟೆಲ್ ಮ್ಯಾನೆಜ್‌ಮೆಂಟ್ ಕೋರ್ಸ್ ಮುಗಿದಿದೆ. ನಂಗೆ ಅದರಲ್ಲಿಯೇ ಏನಾದ್ರೂ ಸಾಧಿಸಬೇಕು ಅನ್ನೋ ಆಸೆ ಇದೆ. ಆದ್ರೆ ನಂಗೀಗ ಸಿನಿಮಾದ ಮೇಲೆ ಹೆಚ್ಚಿನ ಆಸಕ್ತಿ ಇದೆ. ಸದ್ಯಕ್ಕೆ ಇಲ್ಲಿಯೇ ಕಾಂಸ್ಟ್ರೇಷನ್ ಮಾಡಿದ್ದೇನೆ. ಮುಂದೆ ನೋಡ್ಬೇಕು ಹೇಗಾಗುತ್ತೋ ಅಂತ.
ಜಾಹೀರಾತುಗಳಲ್ಲಿನ ಅನುಭವ ಹೇಗಿತ್ತು ?
ಐಯಾನ್ ಎನ್ನುವ ಬ್ರಾಂಡ್ ಗೆ ಕ್ರಿಸ್ ಗೇಲ್ ಜೊತೆ ಕಾಣಸಿಕೊಳ್ಳುವ ಅವಕಾಶ ಬಂತು. ಅದರ ಜತೆಗೆ ಸಾಕಷ್ಟು ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿದ್ದೆ. ನನ್ನ ಪ್ರಕಾರ ಇದೆಲ್ಲಾ ಅದ್ಭುತ ಅನುಭವ. ನೇಮ್ ಅಂಡ್ ಫೇಮ್ ಎರಡೂ ಅಲ್ಲಿ ಸಿಕ್ಕವು. ಜಾಹೀರಾತು ಪ್ರಪಂಚದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು. ಹಾಗೆಯೇ ಒಂದು ಆಲ್ಬಂ ಸಾಂಗ್ ವೊಂದರಲ್ಲಿ ನಟಿಸಿದ್ದೇನೆ. ಅದಿನ್ನು ರಿಲೀಸ್ ಆಗಿಲ್ಲ. ಶೂಟಿಂಗ್ ಮುಗಿದಿದೆ. ಅಲ್ಲಿಂದ ಈಗ ಸಿನಿಮಾ ಪಯಣ.
-ಚಿ. ತು. ಯುವಕರ ಸಂಘದ ಸಿನಿಮಾ ಬಗ್ಗೆ ಹೇಳಿ ?
ಇದೊಂದು ಪಕ್ಕಾ ಕಾಮಿಡಿ ಜಾನರ್ ಸಿನಿಮಾ. ಟೈಟಲ್ ನಲ್ಲಿಯೇ ಅಂತಹದೊಂದು ಇಂಡಿಕೇಷನ್ ಇರೋದು ನಿಮಗೂ ಗೊತ್ತು. ಹಾಗಂತ ಸಿನಿಮಾವೀಡಿ ಕಾಮಿಡಿ ಸಿನಿಮಾ ಅಲ್ಲ, ಅದರೊಳಗೊಂದು ನವೀರಾದ ಪ್ರೀತಿಯ ಕಥೆ ಇದೆ. ಹಾಗೆಯೇ ಒಂದಷ್ಟು ಸೆಂಟಿಮೆಂಟ್, ಆಕ್ಷನ್ ಎಲ್ಲವೂ ಇರುವಂತಹ ಪಕ್ಕಾ ಕಮರ್ಷಿಯಲ್ ಸಿನಿಮಾ ಇದು. ಕಥೆ ತುಂಬಾ ಚೆನ್ನಾಗಿದೆ. ಗುಂಡಾಡಿ ಗುಂಡನಂತಿರುವ ನಾಯಕ. ಚಿಂತೆ ಇಲ್ಲದವ ಸಂತೆಯಲ್ಲೂ ನಿದ್ದೆ ಮಾಡುವಂತಿದ್ದವ. ಆತನಿಗೆ ನಾಯಕಿಯ ಮೇಲೆ ಪ್ರೀತಿ ಹುಟ್ಟುತ್ತೆ. ಅಲ್ಲಿಂದ ಮುಂದೇನಾಗುತ್ತೆ ಅನ್ನೋದು ಚಿತ್ರದ ಕಥೆ.
ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?
ಹೀರೋ ಗುಂಡಾಡಿ ಗುಂಡ ಅಂತದ್ಮೇಲೆ ನಾಯಕಿ ಆತನಿಗೆ ಕಾಂಟ್ರಾಸ್ಟ್ ಆಗಿರ್ತಾಳೆ ಅನ್ನೋದನ್ನ ವಿವರಿಸಿ ಹೇಳಬೇಕಿಲ್ಲ. ತುಂಬಾ ಗಂಭೀರವಾದ ಹುಡುಗಿ. ಜೀವನದಲ್ಲಿ ಏನನ್ನಾದ್ರೂ ಸಾಧಿಸಬೇಕೆಂದುಕೊಂಡವಳು. ಆದ್ರೆ ಗುಂಡಾಡಿ ಗುಂಡನಂತಿದ್ದ ಹೀರೋ ಆಕೆಯ ಜೀವನದಲ್ಲಿ ಎಂಟ್ರಿಯಾದ ನಂತ್ರ ಅವರಿಬ್ಬರ ಬದುಕಲ್ಲಿ ಏನಾಗುತ್ತೆ ಅನ್ನೋದು ನನ್ನ ಪಾತ್ರ.
ಚಿ .ತು. ಯುವಕರ ಸಂಘದ ಸದಸ್ಯರ ಬಗ್ಗೆ ಏನ್ ಹೇಳ್ತೀರಾ ?
ನನಗಿಲ್ಲಿ ಕೋ ಆರ್ಟಿಸ್ಟ್ ನಟ ಸನತ್. ಹಾಗೆಯೇ ನಿರ್ಮಾಪಕರು ಚೇತನ್ ರಾಜ್. ತುಂಬಾ ಪ್ರೇಂಡ್ಲಿ ಆಗಿರ್ತಾರೆ. ಹಾಗೆಯೇ ಡೈರೆಕ್ಟರ್ ಶಿವು ಅವರಂತೂ ಪಕ್ಕಾ ಪ್ರಪೋಷನ್ ಆಗಿದ್ದಾರೆ. ಕಥೆಗೆ ತಾವು ಅನಿಸಿದ್ದೂ ಬರೋ ತನಕ ಶೂಟ್ ನಿಲ್ಲಿಸೋದಿಲ್ಲ. ಅವರ ಕಲಾವಿದರ ಆಯ್ಕೆಯೇ ಅದ್ಬುತವಾಗಿದೆ. ನಂಗಂತೂ ಎಂಟ್ರಿಯಲ್ಲೇ ಒಂದೊಳ್ಳೆಯ ತಂಡ ಸಿಕ್ಕಿದೆ. ಆ ಮಟ್ಟಿಗೆ ನಾನು ಲಕ್ಕಿ ಅಂತಲೇ ಹೇಳಬಹುದು.
ಸಿನಿಮಾ ಅಂದ್ರೆ ಒಂಥರ ಗಾಸಿಪ್ ಅಂಡ್ ಗ್ಲಾಮರ್. ಈ ಬಗ್ಗೆ ನಿಮ್ಮ ನಿಲುವೇನು?
ಸಿನಿಮಾ ಅಂದ್ಮೇಲೆ ಗ್ಲಾಮರ್ ಇರಲೇಬೇಕು. ಹಾಗೆಯೇ ಗಾಸಿಪ್ ಕೂಡ ಇರುತ್ತೆ. ಅದೆಲ್ಲವನ್ನು ನಾವು ಹೇಗೆ ಸ್ವೀಕರಿಸುತ್ತೇವೋ ಅದರ ಮೇಲೆ ನಿಂತಿರುತ್ತದೆ. ನಂಗಂತೂ ಗಾಸಿಪ್ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಆ ಬಗ್ಗೆ ತಲೆ ಕೆಡಿಸಕೊಳ್ಳುವುದಿಲ್ಲ ಬಿಡಿ.
ಸ್ಯಾಂಡಲ್ ವುಡ್ ನಲ್ಲಿ ನಿಮಗೆ ಯಾವ ನಟ ಅಂದ್ರೆ ಇಷ್ಟ ?
ನಟ ದರ್ಶನ್ ಅಂದ್ರೆ ನಂಗೆ ತಂಬಾ ಇಷ್ಟ. ಅವರಗ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕರೆ ಕಣ್ಣ್ಮುಚ್ಚಿಕೊಂಡು ಓಕೆ ಹೇಳಿ ಬಿಡುವೆ. ಅವರ ಜತೆಗೆ ತೆರೆಯಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು ನನ್ನ ಕನಸು ಕೂಡ. ಅದು ನನಸಾಗುತ್ತಾ ಅಂತ ಕಾಯುತ್ತಿದ್ದೇನೆ.
ವರ್ಕೌಟ್ ಸ್ಟ್ರೈನ್ ಹೇಗಿರುತ್ತೆ ?
ನಿಜ ಹೇಳ್ತೀನಿ, ನಾನು ವರ್ಕೌಟ್ ಮಾಡೋದ್ರಿಂದಲೇ ಇಷ್ಟು ಸಣ್ಣ ಆಗಿದ್ದು. ನಾನು ತುಂಬಾ ದಪ್ಪ ಇದ್ದೆ. ವರ್ಕೌಟ್ ಮಾಡಿ ಅರ್ಧದಷ್ಟು ಸಣ್ಣ ಆದೆ. ನಾನು ಯೋಗ ಮಾಡಲ್ಲ. ಬೇಯಿಸಿದ ಮೊಟ್ಟೆ , ತರಕಾರಿ, ಚಿಕನ್ ತಿನ್ನುತ್ತೇನೆ. ಪ್ರತೀ ನಿತ್ಯ ಚೆನ್ನಾಗಿ ನೀರು ಕುಡಿಯುತ್ತೇನೆ ಇದೇ ನನ್ನ ಆರೋಗ್ಯದ ಗುಟ್ಟು.
ಬೆಣ್ಣೆನಗರಿ ದಾವಣಗೆರೆಯ ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಸದ್ಯಕ್ಕೆ ಕನ್ನಡದ ಬಹುಬೇಡಿಕೆಯ ನಟಿ. ಅವರೀಗ ಸಾಲು ಸಾಲು ಸಿನಿಮಾಗಳಿಗೆ ನಾಯಕಿ. ಅದರಲ್ಲೂ ಅವರೀಗ ಸೂಪರ್ ಹೀರೋ ಆಗಿಯೂ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಅದೇ ಕಾರಣಕ್ಕೆ ಅವರ ಸಿನಿ ಜರ್ನಿಯಲ್ಲೀಗ ತೀವ್ರ ಕುತೂಹಲ ಮೂಡಿಸಿದ ಚಿತ್ರ “ಆನʼ.
ಶೀರ್ಷೀಕೆಯೇ ತೀರಾ ಡಿಫೆರೆಂಟ್ ಎನಿಸುವ ಈ ಚಿತ್ರ ಹಾರರ್ ಕಥಾ ಹಂದರದ್ದು. ಅಷ್ಟು ಮಾತ್ರವೇ ಅಲ್ಲ, ಭಾರತದಲ್ಲೇ ಇದೇ ಮೊದಲು ನಟಿ ಅದಿತಿ ಪ್ರಭುದೇವ ಸೂಪರ್ ಹೀರೋ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ” ಜಾಗ್ವಾರ್ ‘ಚಿತ್ರದಲ್ಲಿ ನಟ ನಿಖಿಲ್ ಕುಮಾರ್ ಕೂಡ ಇಂತಹದೊಂದು ಲುಕ್ ನಲ್ಲಿ ಕಾಣಸಿಕೊಂಡಿದ್ದರು. ಅದೇ ತರಹ ನಟಿಯಾಗಿ ಅದಿತಿ ಪ್ರಭುದೇವ ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲು ಇಂತಹದೊಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದೇ ಕಾರಣಕ್ಕೆ ಆನ ಚಿತ್ರ ತೀವ್ರ ಕುತೂಹಲ ಹುಟ್ಟಿಸಿದ್ದು, ಇದೀಗ ಟೀಸರ್ ಲಾಂಚ್ ಮೂಲಕವೂ ಮತ್ತಷ್ಟು ಕ್ರೇಜ್ ಸೃಷ್ಟಿಸಲು ಮುಂದಾಗಿದೆ. ಮಾರ್ಚ್ 24 ರಂದು ಈ ಚಿತ್ರದ ಟೀಸರ್ ಲಾಂಚ್ ಆಗುತ್ತಿದೆ. ಹಾಗಂತ ಚಿತ್ರ ತಂಡ ಅನೌನ್ಸ್ ಮಾಡಿದೆ. ನಟಿ ಅದಿತಿ ಪ್ರಭುದೇವ ಕೂಡ ಸೋಷಲ್ ಮೀಡಿಯಾದ ತಮ್ಮ ಖಾತೆಗಳಲ್ಲಿ ರಿವೀಲ್ ಮಾಡಿದ್ದಾರೆ. ಇದೊಂದು ಹೊಸಬರ ಸಿನಿಮಾ. ಮನೋಜ್ ಪಿ. ನಡಲುಮನೆ ನಿರ್ದೇಶನ ಮಾಡಿದ್ದು, ಪೂಜಾ ವಸಂತ್ ಕುಮಾರ್ ಬಂಡವಾಳ ಹಾಕಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ, ಚಿತ್ರದ ಪೋಸ್ಟರ್ ಕೂಡ ಹೊರ ಬಂದಿವೆ. ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಡಿಫೆರೆಂಟ್ ಲುಕ್ ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಹಾರರ್ ಸಿನಿಮಾ ಆಗಿದ್ದರಿಂದ ಅದಿತಿ ಅವರ ಹಾರರ್ ಲುಕ್ ಕೂಡ ಭರ್ಜರಿ ಆಗಿ ಮೂಡಿ ಬಂದಿದೆ. ಈಗ ಟೀಸರ್ ಮೂಲಕ ಮತ್ತೆ ಬೆಚ್ಚಿ ಬೀಳಿಸಲು ಬರುತ್ತಿದ್ದಾರಂತೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ” ಯುವರತ್ನʼ ಚಿತ್ರದ ಟ್ರೇಲರ್ ಇಂದು ಲಾಂಚ್ ಆಗಿದೆ. ಲಾಂಚ್ ಆದ ಕೇವಲವೇ ಕ್ಷಣಗಳಲ್ಲಿ ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಪ್ಪು ಅಭಿನಯಗಳಂತೂ ಫುಲ್ ಖುಷ್ ಆಗಿದ್ದಾರೆ. ಪುನೀತ್ ರಾಜ್ ಕುಮಾರ್ ಟ್ರೇಲರ್‌ನಲ್ಲಿ ಭರ್ಜರಿ ಆಗಿ ಘರ್ಜಿಸಿದ್ದು, ನೋಡುವುದಕ್ಕೆ ಸಖತ್ ಥ್ರಿಲ್ ಆಗಿದೆ. ಸಿನಿಮಾದ ಬಗೆಗೆ ಇನ್ನಷ್ಟು- ಮೊಗದಷ್ಟು ಕ್ರೇಜ್ ಹುಟ್ಟುವಂತೆ ಮಾಡಿದೆ ಈ ಟ್ರೈಲರ್. ಚಿತ್ರದ ರಿಲೀಸ್ ಪೂರ್ವ ಪ್ರಚಾರಕ್ಕೆ ” ಯುವ ಸಂಭ್ರಮʼ ಪ್ರವಾಸದ ವೇಳಾಪಟ್ಟಿ ಪಟ್ಟಿ ಅನೌನ್ಸ್ ಮಾಡಿದ ಬೆನ್ನಲೇ ಇಂದು ಚಿತ್ರ ತಂಡವು ಚಿತ್ರದ ಟ್ರೈಲರ್ ಲಾಂಚ್ ಮಾಡಿತು. ಅದಕ್ಕಂತಲೇ ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ಗ್ರಾಂಡ್ ಕಾರ್ಯಕ್ರಮ ಆಯೋಜಿಸಿತ್ತು.
ಇವ್ರಿಗೆ ಕೊಟ್ಟಿರೋ ಸ್ಟಾರ್ ಇವ್ರು ಡ್ಯೂಟಿನಲ್ಲಿರೋ ತನಕ, ನಂಗೆ ಕೊಟ್ಟಿರೋ ಸ್ಟಾರ್ ನಾವ್ ಬದುಕಿರೋ ತನಕ…, ಎನ್ನುವ ಖಡಕ್ ಡೈಲಾಗ್ ಮೂಲಕ ಟ್ರೈಲರ್ ಲಾಂಚ್ ಆದ ಸರಿ ಸುಮಾರು 3 ಗಂಟೆಯ ಹೊತ್ತಿಗೆ ಸುಮಾರು 5ಲಕ್ಷ ವೀಕ್ಷಣೆಯೊಂದಿಗೆ ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕನ್ನಡದ ಮಟ್ಟಿಗೆ ಯುವರತ್ನ ಚಿತ್ರ ತೀವ್ರ ಕುತೂಹಲ ಹುಟ್ಟಿಸಿದ ಚಿತ್ರ. ಅದಕ್ಕೆ ಕಾರಣ ನಟ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್. ಹಾಗೆಯೇ ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣದ ಚಿತ್ರ ಎನ್ನುವುದು ಕೂಡ ಅದಕ್ಕೆ ಕಾರಣ. ವಿಶೇಷವಾಗಿ ಪುನೀತ್ ರಾಜ್ ಕುಮಾರ್ ಇಲ್ಲಿ ಸಾಸರ್ ಆಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದು, ಇದುವರೆಗಿನ ಅವರ ಲುಕ್ ಗಿಂತ ಇಲ್ಲಿ ಭಿನ್ನವಾದ ನೋಟವೇ ಇದೆ. ಹಾಗೆಯೇ ಅವರಿಗಿಲ್ಲಿ ಸೌತ್ ಇಂಡಸ್ಟ್ರಿಯ ಬಹು ಜನಪ್ರಿಯ ನಟಿ ಶಯೇಶಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಲಿರಿಕಲ್ ವಿಡಿಯೋಗಳಲ್ಲಿ ಈ ಜೋಡಿ ಸಾಕಷ್ಟು ಕ್ರೇಜ್ ಹುಟ್ಟಿಸಿದೆ.
ಇನ್ನು ಪ್ರಕಾಶ್ ರೈ, ಡಾಲಿ ಧನಂಜಯ್, ಅಚ್ಯುತ್ ಕುಮಾರ್, ಅವಿನಾಶ್, ಸಾಯಿಕುಮಾರ್, ರಂಗಾಯಣ ರಘು ಮತ್ತಿತರರು ಚಿತ್ರದಲ್ಲಿದ್ದಾರೆ. ಏಪ್ರಿಲ್ 1 ಕ್ಕೆ ಈ ಚಿತ್ರ ತೆರೆಗೆ ಬರುತ್ತಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ಏಕಕಾಲದಲ್ಲೇ ಬಿಡುಗಡೆ ಆಗುತ್ತಿದೆ. ಫಸ್ಟ್ ಟೈಮ್ ಈ ಚಿತ್ರದೊಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡದಾಚೆಗೂ ಅಬ್ಬರಿಸಲಿದ್ದಾರೆ. ಚಿತ್ರದ ಪ್ರಚಾರಕ್ಕೆ ಈಗಾಗಲೇ ಹಲವು ತಂತ್ರಗಳನ್ನು ಪಳಗಿಸಿರುವ ಚಿತ್ರ ತಂಡ, ಈ ಯುವ ಸಂಭ್ರಮ ಕಾರ್ಯಕ್ರಮದೊಂದಿಗೆ ನಾಳೆ( ಮಾ.21 ) ಯಿಂದ ಪ್ರವಾಸ ಫಿಕ್ಸ್ ಮಾಡಿಕೊಂಡಿದೆ. ಮೈಸೂರಿನಲ್ಲಿ ಫಿಕ್ಸ್ ಯುವ ಸಂಭ್ರಮ ರದ್ದಾದ ಬೆನ್ನಲೇ ಚಿತ್ರ ತಂಡ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಿದೆ. ಗುಲ್ಬರ್ಗಾ, ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ ಹಾಗೂ ಮೈಸೂರಿನಲ್ಲಿ ಮೊದಲ ಹಂತದ ಯುವ ಸಂಭ್ರಮ ಫಿಕ್ಸ್ ಆಗಿದೆ. ಎರಡನೇ ಹಂತದಲ್ಲಿ ಶಿವಮೊಗ್ಗ , ಚಿಕ್ಕಮಗಳೂರು, ಕಾರವಾರ, ಮಂಗಳೂರು, ಹಾವೇರಿ , ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಮುಂದಾಗಿದೆ ಅಂತ ಚಿತ್ರ ತಂಡ ಹೇಳಿದೆ.
ಕುಮುದಾ ಖ್ಯಾತಿಯ ನಟಿ ಹರಿಪ್ರಿಯಾ ಸದ್ಯಕ್ಕೆ ಕನ್ನಡದ ಮೋಸ್ಟ್ ಬ್ಯುಸಿಯೆಸ್ಟ್ ನಟಿ. ಸಾಲು ಸಾಲು ಸಿನಿಮಾಗಳ ಶೂಟಿಂಗ್ ನಲ್ಲೇ ಅವರೀಗ ಬ್ಯುಸಿ ಅನ್ನೋದು ನಿಮಗೂ ಗೋತ್ತು. ಇಷ್ಟಾಗಿಯೂ ಅವರೀಗ ಮತ್ತೊಂದು ಹೊಸ ಚಿತ್ರಕ್ಕೆ ಓಕೆ ಹೇಳಿದ್ದಾರೆ. ವಿಶೇಷ ಅಂದ್ರೆ, ಈ ಬಾರಿ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜೋಡಿಯಾಗಿದ್ದಾರೆ. ಸಿನಿಮಾದ ಮಟ್ಟಿಗೆ ಉಪೇಂದ್ರ ಅವರಿಗೆ ಗ್ಲಾಮರಸ್ ನಟಿ ಹರಿಪ್ರಿಯಾ ಜೋಡಿ ಆಗಿರುವುದು ಇದೇ ಮೊದಲು. ಮೂರ್ನಾಲ್ಕು ವರ್ಷಗಳ ಹಿಂದೆ ಲೂನಾರ್ಸ್ ವಾಕ್‌ಮೇಟ್ ಚಪ್ಪಲಿಗಳ ಜಾಹೀರಾತಿನೊಂದಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಸಿನಿಮಾದಲ್ಲಿ ಇದುವರೆಗೂ ಈ ಜೋಡಿ ಒಂದಾಗಿರಲಿಲ್ಲ. ಪಾರ್ ದಿ ಫಸ್ಟ್ ಟೈಮ್ ಇಲ್ಲಿ ಒಂದಾಗಿದೆ. ಅದಕ್ಕೀಗ ಕಾರಣ ಆಗಿದ್ದಾರೆ” ಮೊಗ್ಗಿನ ಮನಸು ʼಖ್ಯಾತಿಯ ನಿರ್ದೇಶಕ ಶಶಾಂಕ್.
ಹಾಗಂತ ಇದೇನು ಹೊಸ ಪ್ರಾಜೆಕ್ಟೇನು ಅಲ್ಲ. ನಿರ್ದೇಶಕ ಶಶಾಂಕ್ ತಮ್ಮದೇ ನಿರ್ಮಾಣ ಹಾಗೂ ನಿರ್ದೇಶನದ ʼತಾಯಿಗೆ ತಕ್ಕ ಮಗʼ ಚಿತ್ರವನ್ನು ತೆರೆಗೆ ತಂದಿದ್ದ ದಿನಗಳಲ್ಲೇ ಉಪ್ಪಿ ಜತೆಗಿನ ಸಿನಿಮಾ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ್ದರು. ಆದರೆ ಮುಂದೆ ಕೊರೋನಾ ಕಾರಣಕ್ಕೆ ಅಷ್ಟಕ್ಕೇ ಅದು ನಿಂತು ಹೋಗಿತ್ತು. ಈಗ ಮತ್ತೆ ಅದಕ್ಕೆ ಚಾಲನೆ ಸಿಕ್ಕಿದೆ. ಉಪೇಂದ್ರ ಅವರಿಗೆ ಜೋಡಿಯಾಗಿ ಕನ್ನಡದ ಗ್ಲಾಮರಸ್ ನಟಿ ಹರಿಪ್ರಿಯಾ ಅವರನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಫಸ್ಟ್ ಟೈಮ್ ಉಪೇಂದ್ರ ಅವರೊಂದಿಗೆ ಸಿನಿಮಾ ಮಾಡುತ್ತಿರುವ ಭರ್ಜರಿ ಖುಷಿಯೊಂದಿಗೆ ಹರಿಪ್ರಿಯಾ ಕೂಡ ಈ ಸಿನಿಮಾಕ್ಕೆ ಓಕೆ ಹೇಳಿದ್ದಾರೆ. ಹಾಗೆಯೇ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡ ಅವರಲ್ಲಿದೆ. ಉಪೇಂದ್ರ ಅವರಲ್ಲದೆ, ಇದೇ ಮೊದಲು ನಿರ್ದೇಶಕ ಶಶಾಂಕ್ ಕಾಂಬಿನೇಷನಲ್ಲೂ ಸಿನಿಮಾ ಮಾಡುತ್ತಿರುವ ದೊಡ್ಡ ಖುಷಿ ಅವರಿಗಿದೆ.
” ನಾನು ನಟಿಯಾಗಿ ಇಂಡಸ್ಟ್ರಿಗೆ ಕಾಲಿಟ್ಟು ಸಾಕಷ್ಟು ವರ್ಷಗಳೇ ಆಗಿ ಹೋದವು. ಇಷ್ಟಾಗಿಯೂ ಉಪೇಂದ್ರ ಸರ್ ಜತೆಗೆ ಫಸ್ಟ್ ಟೈಮ್ ತೆರೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಹಾಗೆಯೇ ಫಸ್ಟ್ ಟೈಮ್ ಡೈರೆಕ್ಟರ್ ಶಶಾಂಕ್ ಅವರ ಜತೆಗೆ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದೆ. ಅನೇಕ ಸಲ ಇವರ ಜತೆಗೆ ಸಿನಿಮಾ ಮಾಡುವ ಅವಕಾಶ ಸಿಗಬಹುದಾ ಅಂತ ಕಾದಿದ್ದೆ. ಅದರೂ ಅದ್ಯಾಕೋ ಕೈ ಗೂಡಿ ಬಂದಿರಲಿಲ್ಲ. ಅದೀಗ ಸಿಕ್ಕಿದೆ. ತುಂಬಾ ಖುಷಿ ಆಗ್ತಿದೆ. ವಿಶೇಷ ವಾಗಿ ಉಪ್ಪಿ ಸರ್ ಜತೆಗೆ ಕಾಣಿಸಿಕೊಳ್ಳುತ್ತಿರುವುದಕ್ಕಾಗಿ ಒಂಥರ ಎಕ್ಸೈಟ್ ಆಗಿದ್ದೇನೆ. ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಒಂದು ಜಾಹೀರಾತಿಗಾಗಿ ಅವರೊಂದಿಗೆ ಕ್ಯಾಮೆರಾ ಎದುರಿಸಿದ್ದೆ. ಅದು ಬಿಟ್ಟರೆ ಸಿನಿಮಾಕ್ಕೆ ಇದೇ ಮೊದಲು. ಖುಷಿ ಆಗ್ತಿದೆʼ ಎನ್ನುತ್ತಾರೆ ನಟಿ ಹರಿಪ್ರಿಯಾ.
ಉಪ್ಪಿ ಜತೆಗೆ ಅಭಿನಯಸುವ ಅವಕಾಶದ ಜತೆಗೆ ಈ ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕ ಖುಷಿಯೂ ಹರಿಪ್ರಿಯಾ ಅವರಲ್ಲಿದೆ.” ಇಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಶಶಾಂಕ್ ಸಿನಿಮಾಗಳಲ್ಲಿ ನಾಯಕಿ ಪಾತ್ರಗಳಿಗೆ ಎಷ್ಟೇಲ್ಲ ಪ್ರಾಮುಖ್ಯತೆ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಅಂತಹದೇ ಒಂದುಪಾತ್ರವನ್ನು ಅವರಿಲ್ಲಿ ಕ್ರಿಯೇಟ್ ಮಾಡಿದ್ದಾರೆ. ವಿಭಿನ್ನ ಬಗೆಯ ಹತ್ತಾರು ಪಾತ್ರಗಳನ್ನು ನಾನಿಲ್ಲಿತನಕ ನೋಡಿದ್ದೇನೆ. ಅಂತಹದ್ದೇ ಒಂದು ಕೂಡ ವಿಭಿನ್ನ ಬಗೆಯ ಪಾತ್ರ ಎನ್ನುವಂತಿದ್ದರೂ, ಇಲ್ಲಿ, ನಟಿಯಾಗಿ ನನ್ನನ್ನು ನಾನು ಇನ್ನಷ್ಟು ಗುರುತಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಹಾಗಾಗಿಯೇ ನಾನಿ ಅವಕಾಶ ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ ಗ್ಲಾಮರಸ್ ನಟಿ ಪರಿಪ್ರಿಯಾ. ಮುಂದಿನ ವಾರದಿಂದಲೇ ಈ ಚಿತ್ರ ಶುರುವಾಗಲಿದೆಯಂತೆ.