ಬೆಣ್ಣೆನಗರಿ ದಾವಣಗೆರೆಯ ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಸದ್ಯಕ್ಕೆ ಕನ್ನಡದ ಬಹುಬೇಡಿಕೆಯ ನಟಿ. ಅವರೀಗ ಸಾಲು ಸಾಲು ಸಿನಿಮಾಗಳಿಗೆ ನಾಯಕಿ. ಅದರಲ್ಲೂ ಅವರೀಗ ಸೂಪರ್ ಹೀರೋ ಆಗಿಯೂ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಅದೇ ಕಾರಣಕ್ಕೆ ಅವರ ಸಿನಿ ಜರ್ನಿಯಲ್ಲೀಗ ತೀವ್ರ ಕುತೂಹಲ ಮೂಡಿಸಿದ ಚಿತ್ರ “ಆನʼ.
ಶೀರ್ಷೀಕೆಯೇ ತೀರಾ ಡಿಫೆರೆಂಟ್ ಎನಿಸುವ ಈ ಚಿತ್ರ ಹಾರರ್ ಕಥಾ ಹಂದರದ್ದು. ಅಷ್ಟು ಮಾತ್ರವೇ ಅಲ್ಲ, ಭಾರತದಲ್ಲೇ ಇದೇ ಮೊದಲು ನಟಿ ಅದಿತಿ ಪ್ರಭುದೇವ ಸೂಪರ್ ಹೀರೋ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ” ಜಾಗ್ವಾರ್ ‘ಚಿತ್ರದಲ್ಲಿ ನಟ ನಿಖಿಲ್ ಕುಮಾರ್ ಕೂಡ ಇಂತಹದೊಂದು ಲುಕ್ ನಲ್ಲಿ ಕಾಣಸಿಕೊಂಡಿದ್ದರು. ಅದೇ ತರಹ ನಟಿಯಾಗಿ ಅದಿತಿ ಪ್ರಭುದೇವ ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲು ಇಂತಹದೊಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದೇ ಕಾರಣಕ್ಕೆ ಆನ ಚಿತ್ರ ತೀವ್ರ ಕುತೂಹಲ ಹುಟ್ಟಿಸಿದ್ದು, ಇದೀಗ ಟೀಸರ್ ಲಾಂಚ್ ಮೂಲಕವೂ ಮತ್ತಷ್ಟು ಕ್ರೇಜ್ ಸೃಷ್ಟಿಸಲು ಮುಂದಾಗಿದೆ. ಮಾರ್ಚ್ 24 ರಂದು ಈ ಚಿತ್ರದ ಟೀಸರ್ ಲಾಂಚ್ ಆಗುತ್ತಿದೆ. ಹಾಗಂತ ಚಿತ್ರ ತಂಡ ಅನೌನ್ಸ್ ಮಾಡಿದೆ. ನಟಿ ಅದಿತಿ ಪ್ರಭುದೇವ ಕೂಡ ಸೋಷಲ್ ಮೀಡಿಯಾದ ತಮ್ಮ ಖಾತೆಗಳಲ್ಲಿ ರಿವೀಲ್ ಮಾಡಿದ್ದಾರೆ. ಇದೊಂದು ಹೊಸಬರ ಸಿನಿಮಾ. ಮನೋಜ್ ಪಿ. ನಡಲುಮನೆ ನಿರ್ದೇಶನ ಮಾಡಿದ್ದು, ಪೂಜಾ ವಸಂತ್ ಕುಮಾರ್ ಬಂಡವಾಳ ಹಾಕಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ, ಚಿತ್ರದ ಪೋಸ್ಟರ್ ಕೂಡ ಹೊರ ಬಂದಿವೆ. ಮಿಲ್ಕಿ ಬ್ಯೂಟಿ ಅದಿತಿ ಪ್ರಭುದೇವ ಡಿಫೆರೆಂಟ್ ಲುಕ್ ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಹಾರರ್ ಸಿನಿಮಾ ಆಗಿದ್ದರಿಂದ ಅದಿತಿ ಅವರ ಹಾರರ್ ಲುಕ್ ಕೂಡ ಭರ್ಜರಿ ಆಗಿ ಮೂಡಿ ಬಂದಿದೆ. ಈಗ ಟೀಸರ್ ಮೂಲಕ ಮತ್ತೆ ಬೆಚ್ಚಿ ಬೀಳಿಸಲು ಬರುತ್ತಿದ್ದಾರಂತೆ.