ಫಸ್ಟ್‌ ಟೈಮ್‌ ಉಪ್ಪಿಗೆ ಜೋಡಿಯಾದ ಹರಿಪ್ರಿಯಾ-‌ ಈ ಜೋಡಿಯ ಹೊಸ ಸಿನಿಮಾ ಯಾವುದು ಗೊತ್ತಾ ?

ಕುಮುದಾ ಖ್ಯಾತಿಯ ನಟಿ ಹರಿಪ್ರಿಯಾ ಸದ್ಯಕ್ಕೆ ಕನ್ನಡದ ಮೋಸ್ಟ್‌ ಬ್ಯುಸಿಯೆಸ್ಟ್‌ ನಟಿ. ಸಾಲು ಸಾಲು ಸಿನಿಮಾಗಳ ಶೂಟಿಂಗ್ ನಲ್ಲೇ ಅವರೀಗ ಬ್ಯುಸಿ ಅನ್ನೋದು ನಿಮಗೂ ಗೋತ್ತು. ಇಷ್ಟಾಗಿಯೂ ಅವರೀಗ ಮತ್ತೊಂದು ಹೊಸ ಚಿತ್ರಕ್ಕೆ ಓಕೆ ಹೇಳಿದ್ದಾರೆ. ವಿಶೇಷ ಅಂದ್ರೆ, ಈ ಬಾರಿ ಅವರು ರಿಯಲ್‌ ಸ್ಟಾರ್‌ ಉಪೇಂದ್ರ ಅವರಿಗೆ ಜೋಡಿಯಾಗಿದ್ದಾರೆ. ಸಿನಿಮಾದ ಮಟ್ಟಿಗೆ ಉಪೇಂದ್ರ ಅವರಿಗೆ ಗ್ಲಾಮರಸ್‌ ನಟಿ ಹರಿಪ್ರಿಯಾ ಜೋಡಿ ಆಗಿರುವುದು ಇದೇ ಮೊದಲು. ಮೂರ್ನಾಲ್ಕು ವರ್ಷಗಳ ಹಿಂದೆ ಲೂನಾರ್ಸ್‌ ವಾಕ್‌ಮೇಟ್‌ ಚಪ್ಪಲಿಗಳ ಜಾಹೀರಾತಿನೊಂದಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಸಿನಿಮಾದಲ್ಲಿ ಇದುವರೆಗೂ ಈ ಜೋಡಿ ಒಂದಾಗಿರಲಿಲ್ಲ. ಪಾರ್‌ ದಿ ಫಸ್ಟ್‌ ಟೈಮ್‌ ಇಲ್ಲಿ ಒಂದಾಗಿದೆ. ಅದಕ್ಕೀಗ ಕಾರಣ ಆಗಿದ್ದಾರೆ” ಮೊಗ್ಗಿನ ಮನಸು ʼಖ್ಯಾತಿಯ ನಿರ್ದೇಶಕ ಶಶಾಂಕ್.

ಹಾಗಂತ ಇದೇನು ಹೊಸ ಪ್ರಾಜೆಕ್ಟೇನು ಅಲ್ಲ. ನಿರ್ದೇಶಕ ಶಶಾಂಕ್‌ ತಮ್ಮದೇ ನಿರ್ಮಾಣ ಹಾಗೂ ನಿರ್ದೇಶನದ ʼತಾಯಿಗೆ ತಕ್ಕ ಮಗʼ ಚಿತ್ರವನ್ನು ತೆರೆಗೆ ತಂದಿದ್ದ ದಿನಗಳಲ್ಲೇ ಉಪ್ಪಿ ಜತೆಗಿನ ಸಿನಿಮಾ ಪ್ರಾಜೆಕ್ಟ್‌ ಬಗ್ಗೆ ಮಾತನಾಡಿದ್ದರು. ಆದರೆ ಮುಂದೆ ಕೊರೋನಾ ಕಾರಣಕ್ಕೆ ಅಷ್ಟಕ್ಕೇ ಅದು ನಿಂತು ಹೋಗಿತ್ತು. ಈಗ ಮತ್ತೆ ಅದಕ್ಕೆ ಚಾಲನೆ ಸಿಕ್ಕಿದೆ. ಉಪೇಂದ್ರ ಅವರಿಗೆ ಜೋಡಿಯಾಗಿ ಕನ್ನಡದ ಗ್ಲಾಮರಸ್‌ ನಟಿ ಹರಿಪ್ರಿಯಾ ಅವರನ್ನು ಸೆಲೆಕ್ಟ್‌ ಮಾಡಿಕೊಂಡಿದ್ದಾರೆ. ಫಸ್ಟ್‌ ಟೈಮ್‌ ಉಪೇಂದ್ರ ಅವರೊಂದಿಗೆ ಸಿನಿಮಾ ಮಾಡುತ್ತಿರುವ ಭರ್ಜರಿ ಖುಷಿಯೊಂದಿಗೆ ಹರಿಪ್ರಿಯಾ ಕೂಡ ಈ ಸಿನಿಮಾಕ್ಕೆ ಓಕೆ ಹೇಳಿದ್ದಾರೆ. ಹಾಗೆಯೇ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡ ಅವರಲ್ಲಿದೆ. ಉಪೇಂದ್ರ ಅವರಲ್ಲದೆ, ಇದೇ ಮೊದಲು ನಿರ್ದೇಶಕ ಶಶಾಂಕ್‌ ಕಾಂಬಿನೇಷನಲ್ಲೂ ಸಿನಿಮಾ ಮಾಡುತ್ತಿರುವ ದೊಡ್ಡ ಖುಷಿ ಅವರಿಗಿದೆ.

” ನಾನು ನಟಿಯಾಗಿ ಇಂಡಸ್ಟ್ರಿಗೆ ಕಾಲಿಟ್ಟು ಸಾಕಷ್ಟು ವರ್ಷಗಳೇ ಆಗಿ ಹೋದವು. ಇಷ್ಟಾಗಿಯೂ ಉಪೇಂದ್ರ ಸರ್‌ ಜತೆಗೆ ಫಸ್ಟ್‌ ಟೈಮ್‌ ತೆರೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಹಾಗೆಯೇ ಫಸ್ಟ್‌ ಟೈಮ್‌ ಡೈರೆಕ್ಟರ್‌ ಶಶಾಂಕ್‌ ಅವರ ಜತೆಗೆ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದೆ. ಅನೇಕ ಸಲ ಇವರ ಜತೆಗೆ ಸಿನಿಮಾ ಮಾಡುವ ಅವಕಾಶ ಸಿಗಬಹುದಾ ಅಂತ ಕಾದಿದ್ದೆ. ಅದರೂ ಅದ್ಯಾಕೋ ಕೈ ಗೂಡಿ ಬಂದಿರಲಿಲ್ಲ. ಅದೀಗ ಸಿಕ್ಕಿದೆ. ತುಂಬಾ ಖುಷಿ ಆಗ್ತಿದೆ. ವಿಶೇಷ ವಾಗಿ ಉಪ್ಪಿ ಸರ್‌ ಜತೆಗೆ ಕಾಣಿಸಿಕೊಳ್ಳುತ್ತಿರುವುದಕ್ಕಾಗಿ ಒಂಥರ ಎಕ್ಸೈಟ್‌ ಆಗಿದ್ದೇನೆ. ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಒಂದು ಜಾಹೀರಾತಿಗಾಗಿ ಅವರೊಂದಿಗೆ ಕ್ಯಾಮೆರಾ ಎದುರಿಸಿದ್ದೆ. ಅದು ಬಿಟ್ಟರೆ ಸಿನಿಮಾಕ್ಕೆ ಇದೇ ಮೊದಲು. ಖುಷಿ ಆಗ್ತಿದೆʼ ಎನ್ನುತ್ತಾರೆ ನಟಿ ಹರಿಪ್ರಿಯಾ.

ಉಪ್ಪಿ ಜತೆಗೆ ಅಭಿನಯಸುವ ಅವಕಾಶದ ಜತೆಗೆ ಈ ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕ ಖುಷಿಯೂ ಹರಿಪ್ರಿಯಾ ಅವರಲ್ಲಿದೆ.” ಇಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಶಶಾಂಕ್‌ ಸಿನಿಮಾಗಳಲ್ಲಿ ನಾಯಕಿ ಪಾತ್ರಗಳಿಗೆ ಎಷ್ಟೇಲ್ಲ ಪ್ರಾಮುಖ್ಯತೆ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಅಂತಹದೇ ಒಂದುಪಾತ್ರವನ್ನು ಅವರಿಲ್ಲಿ ಕ್ರಿಯೇಟ್‌ ಮಾಡಿದ್ದಾರೆ. ವಿಭಿನ್ನ ಬಗೆಯ ಹತ್ತಾರು ಪಾತ್ರಗಳನ್ನು ನಾನಿಲ್ಲಿತನಕ ನೋಡಿದ್ದೇನೆ. ಅಂತಹದ್ದೇ ಒಂದು ಕೂಡ ವಿಭಿನ್ನ ಬಗೆಯ ಪಾತ್ರ ಎನ್ನುವಂತಿದ್ದರೂ, ಇಲ್ಲಿ, ನಟಿಯಾಗಿ ನನ್ನನ್ನು ನಾನು ಇನ್ನಷ್ಟು ಗುರುತಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಹಾಗಾಗಿಯೇ ನಾನಿ ಅವಕಾಶ ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ ಗ್ಲಾಮರಸ್‌ ನಟಿ ಪರಿಪ್ರಿಯಾ. ಮುಂದಿನ ವಾರದಿಂದಲೇ ಈ ಚಿತ್ರ ಶುರುವಾಗಲಿದೆಯಂತೆ.

Related Posts

error: Content is protected !!