Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಗೆ ರಣಬೀರ್ ಕಪೂರ್ ಎಂಟ್ರಿ;ಸುಮುಖ ಥೇಟ್ ಚಾಕಲೇಟ್ ಹೀರೋನೇ ಕಣ್ರೀ !ಲುಕ್ಕಲೇ ಲಾಕ್ ಮಾಡ್ತಾರೆ ಫಿಸಿಕ್ಸ್ ಟೀಚರ್ ಸುಮುಖ !

ಗಂಧದಗುಡಿಗೆ ರಣಬೀರ್ ಕಪೂರ್ ಆಗಮನ ಎಂದಾಕ್ಷಣ ವಾವ್ ಅಂತೀರಿ? ಯಾವ್ ಸಿನಿಮಾ ? ಏನ್ ಕಥೆ? ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು ? ಹೀಗೆ ಬ್ಯಾಕ್ ಟು ಬ್ಯಾಕ್ ಕೊಶ್ಚನ್ಸ್ ನೀವೇ ಹಾಕಿಕೊಳ್ತೀರಿ. ಆದರೆ, ನಾವು ಹೇಳಲಿಕ್ಕೆ ಹೊರಟಿರುವುದು ಬಿಟೌನ್ ರಣಬೀರ್ ಬಗ್ಗೆ ಅಲ್ಲ ಸ್ಯಾಂಡಲ್ ವುಡ್ ರಣಬೀರ್ ಕಪೂರ್ ಕುರಿತಾಗಿ. ಬಾಲಿವುಡ್ ಹ್ಯಾಂಡ್ಸಮ್ ಹಂಕ್ ರಣಬೀರ್ ಕಪೂರ್ ನ ಹೋಲುವಂತಹ ಚಾರ್ಮಿಂಗ್ ಹೀರೋ ಚಂದನವನದಲ್ಲಿದ್ದಾರೆ. ಅವರು ನಮ್ಮ ಕನ್ನಡದವರೇ, ಬೆಂಗಳೂರಲ್ಲೇ ಹುಟ್ಟಿ ಬೆಳೆದಿದ್ದಾರೆ. ಆ ಸುರಸುಂದರಾಂಗ ಸುಮುಖರ ಪರಿಚಯ ಮತ್ತು ಸಿನಿಜರ್ನಿಯ ವರದಿ.

ಬಾಲಿವುಡ್ ಬಾದ್ ಷಾ ಅಮಿತಾಬ್ ಆದರೆ, ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್‌ ಅವರು. ಬಿಟೌನ್ ಕಿಂಗ್ ಖಾನ್ ಶಾರುಖ್, ಸ್ಯಾಂಡಲ್ ಕಿಂಗ್ ಶಿವರಾಜ್ ಕುಮಾರ್, ಬಿಟೌನ್ ಸುಲ್ತಾನ್ ಸಲ್ಮಾನ್, ಸ್ಯಾಂಡಲ್ ವುಡ್ ಸುಲ್ತಾನ್ ದರ್ಶನ್, ಬಾಲಿವುಡ್ ಮಿಸ್ಟರ್ ಪರ್ಫೆಕ್ಟನಿಸ್ಟ್ ಆಮೀರ್, ಸ್ಯಾಂಡಲ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಪವರ್ ಸ್ಟಾರ್, ಬಿಟೌನ್ ಖಿಲಾಡಿ ಅಕ್ಷಯ್, ಸ್ಯಾಂಡಲ್ ವುಡ್ ಟು ಪ್ಯಾನ್ ಇಂಡಿಯಾ ಕಿಲಾಡಿ ರಾಕಿಂಗ್ ಸ್ಟಾರ್, ಬಾಲಿವುಡ್ ಚಾಕೊಲೇಟ್ ಹೀರೋ ರಣಬೀರ್, ಸ್ಯಾಂಡಲ್ ವುಡ್ ಚಾಕೊಲೇಟ್ ಹೀರೋ ಒನ್ ಅಂಡ್ ಓನ್ಲೀ ಸುಮುಖ ಅಂದರೆ ಬಹುಷಃ ಅತಿಶಯೋಕ್ತಿಯಲ್ಲ.

ಸುಮುಖ ಹೆಸರೇ ಹೇಳುವಂತಹ ಸುಂದರವಾದ ಮುಖವುಳ್ಳ ಸುರಸುಂದರಾಂಗ. ಹೆಸರಿಗೆ ತಕ್ಕನಾಗಿರುವ ನಟ. ಥೇಟ್ ರಣಬೀರ್ ಕಪೂರ್ ಥರ ಕಾಣಿಸ್ತಾರೆ. ಬಿಟೌನ್ ಬರ್ಫಿಯಷ್ಟೇ ಹ್ಯಾಂಡ್ಸಮ್ ಆಗಿರುವ ಸುಮುಖ ಕಣ್ಣೋಟದಲ್ಲೇ ಲಾಕ್ ಮಾಡ್ತಾರೆ ಅದಂತೂ ಸತ್ಯ. ನಿಮಗೆ ಡೌಟ್ ಇದ್ರೆ ಒಂದು ಸಲ‌ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುವ ‘ ಫಿಸಿಕ್ಸ್ ಟೀಚರ್’ ಟೀಸರ್ ನ ನೋಡಿ ಆಗ ನೀವೇ ಅಚ್ಚರಿಪಡುತ್ತೀರಿ.

ಬಿಟೌನ್ ಚಾಕೊಲೇಟ್ ಹೀರೋ ರಣಬೀರ್ ನ ಹೋಲುವ ನಟ ಸುಮುಖ. ಶಶಿಕುಮಾರ್ ಹಾಗೂ ನಂದಿತ ಯಾದವ್ ಅವರ ಪುತ್ರ. ಅಪ್ಪ- ಅಮ್ಮನಂತೆ ಕಲೆಯ ಸೆಳೆತ. ಬಾಲ್ಯದಿಂದಲೂ ಬಣ್ಣದ ಲೋಕವನ್ನು ನೋಡುತ್ತಾ ‌ಬೆಳೆದ‌‌ ಸುಮುಖ ಈಗ ಹೊಸ ಸವಾಲೊಂ ದನ್ನು ಸ್ವೀಕರಿಸಿದ್ದಾರೆ. ನಾಯಕನಟ ಪ್ಲಸ್ ನಿರ್ದೇಶಕನಾಗಿ‌ ಗಂಧದಗುಡಿಯ ಅಖಾಡಕ್ಕೆ ಧುಮ್ಕಿದ್ದಾರೆ. ಫಿಸಿಕ್ಸ್ ಟೀಚರ್ ಸಿನಿಮಾದ ಮೂಲಕ ಗಾಂಧಿನಗರದ ಮಂದಿಗೆ ಇನ್ನಷ್ಟು ಚಿರಪರಿಚಿತಗೊಳ್ತಿದ್ದಾರೆ.

ಸುಮುಖರ ತಂದೆ ತಾಯಿ ಬಗ್ಗೆ ಬಹುಷಃ‌ ನಿಮ್ಮೆಲ್ಲರಿಗೂ ತಿಳಿದಿರುತ್ತೆ. ರಂಗಭೂಮಿ- ಕಿರುತೆರೆ- ಬೆಳ್ಳಿತೆರೆಗೆ ಸುಮುಖ ತಂದೆತಾಯಿಯ‌ ಕೊಡುಗೆ ಅಪಾರ. ಕಿರುತೆರೆ ಲೋಕದಲ್ಲಿ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ನಂದಿತ ಯಾದವ್ ಸಾಕಷ್ಟು ಹೆಸರು ಮಾಡಿದ್ದಾರೆ. ಶಶಿಕುಮಾರ್ ಸ್ಮಾಲ್‌ಸ್ಕ್ರೀನ್ ಹಾಗೂ ಬಿಗ್ ಸ್ಕ್ರೀನ್ ನಲ್ಲಿ ತರಹೇವಾರಿ ಪಾತ್ರಗಳಿಗೆ ಜೀವತುಂಬಿ‌ ನಟಿಸಿದ್ದಾರೆ. ಇದೀಗ ಮಗ‌ ಸುಮುಖ ಅವರ ಸರದಿ. ಯಾನ ಚಿತ್ರದಿಂದ ಸಿನಿಜರ್ನಿ ಶುರುಮಾಡಿ ಅಮ್ಮ ನಂದಿತಾ ನಿರ್ದೇಶಿಸಿರುವ ರಾಜಸ್ತಾನ್ ಡೈರೀಸ್ ನಲ್ಲಿ ಆಕ್ಟ್ ಮಾಡಿರುವ ಸುಮುಖ ಈಗ’ ಫಿಸಿಕ್ಸ್ ಟೀಚರ್’ ಹೆಸರಿನ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ ಜೊತೆಗೆ ಅಭಿನಯ ಕೂಡ ಮಾಡ್ತಿದ್ದಾರೆ.

ಫಿಸಿಕ್ಸ್ ಟೀಚರ್ ಅಂದಾಕ್ಷಣ ಓಹೋ ಭೌತಶಾಸ್ತ್ರದ ಭೋದನೆನಾ ಅನ್ಕೊಬೇಡಿ, ಸೈನ್ಸ್ ಫಿಕ್ಷನ್ ಸಿನಿಮಾ ಇರ್ಬೋದಾ‌ ಎಂದು ಅಂದಾಜಿಸಬೇಡಿ. ಸುಮುಖ ಆಕ್ಷನ್ ಕಟ್ ಹೇಳಿ ಆಕ್ಟ್ ಮಾಡ್ತಿರುವ ಈ ಫಿಸಿಕ್ಸ್ ಟೀಚರ್ ಸಿನಿಮಾ ಊಹೆಗೆ ಮೀರಿದ್ದಂತೆ. ಫಸ್ಟ್ ಲುಕ್ ನಲ್ಲಿ‌ ಬುಕ್ಸ್ ಹಿಡಿದು ಕುಳಿತಿದ್ದಾರೆ, ಚಿತ್ರದಲ್ಲಿ ಬ್ಯಾಚುಲರ್ ಫಿಸಿಕ್ಸ್ ಟೀಚರ್ ಆಗಿ ಕಾಣಿಸಿಕೊಳ್ತಿದ್ದಾರೆ. ಇವ್ರಿಗೆ ಜೊತೆಯಾಗಿ ಕಾಣಿಸಿಕೊಳ್ತಿರುವ ನಟಿ ಪ್ರೇರಣಾ ಕಂಬಂ ಸೈಕಲಾಜಿ ಟೀಚರ್ ಪಾತ್ರ ಪ್ಲೇ ಮಾಡ್ತಿದ್ದಾರೆ. ಮಂಡ್ಯ, ರಮೇಶ್, ರಾಜೇಶ್ ನಟರಂಗ್ ತಾರಾಬಳಗದಲ್ಲಿದ್ದಾರೆ. ಒಂದು ಹಂತದ ಚಿತ್ರೀಕರಣ ಮುಗಿದಿದೆ, ಇದೇ ಅಕ್ಟೋಬರ್ 07 ರಿಂದ ಮತ್ತೆ ಶೂಟಿಂಗ್ ಶುರುವಾಗಲಿದೆ.‌ ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಕ್ಯೂರಿಯಾಸಿಟಿ ಹುಟ್ಟಿಸಿದೆ.

ಅಂದ್ಹಾಗೇ, ಹೀರೋ ಸುಮುಖ ಅವರು ಸ್ಟೂಡೆಂಟ್ ಥರ ಇದ್ದಾರೆ. ಆದರೆ, ಸಿನಿಮಾದಲ್ಲಿ ಟೀಚರ್ ಪಾತ್ರ ನಿರ್ವಹಿಸ್ತಿದ್ದಾರೆ. ಕ್ಲೀನ್ ಶೇವ್ ನಲ್ಲಿ‌ ಸುದ್ದಿಗೋಷ್ಟಿಗೆ ಆಗಮಿಸಿದ್ದರು, ಅವರ ಲುಕ್-ಸ್ಟೈಲ್- ಸ್ಮೈಲ್ -ಫಿಸಿಕ್ -ಟಾಕು ಎಲ್ಲವೂ ರಣಬೀರ್ ಕಪೂರ್ ಅವರನ್ನು ಹೋಲುವಂತಿತ್ತು. ಕಣ್ಣೋಟದಲ್ಲಿ ರಣಬೀರ್ ಛಾಯೆ‌ ಎದ್ದು ಕಾಣ್ತಿತ್ತು. ಈ‌ ಬಗ್ಗೆ ಸಿನಿಲಹರಿ ಟೀಮ್ ಮಾತನಾಡಿಸಿದಾಗ ಸುಮುಖ ಹೇಳಿದ್ದಿಷ್ಟು ನೋಡಿ.

ನಾನು ರಣಬೀರ್ ಕಪೂರ್ ಥರ ಕಾಣ್ತೀನಿ ಅಂತ ಹೇಳಿದ್ದಕ್ಕೆ ಥ್ಯಾಂಕ್ಸ್. ನಾನು ರಣಬೀರ್ ಕಪೂರ್‌ ನ ಫಾಲೋ ಮಾಡಲ್ಲ. ಆದರೆ, ಅವರ ಸಿನಿಮಾಗಳಿಗೆ ಬಿಗ್ ಫ್ಯಾನ್ ನಾನು. ಬರೀ ರೊಮ್ಯಾಂಟಿಕ್ ಹೀರೋ ಕ್ಯಾರೆಕ್ಟರ್ ಗೆ ಸ್ಟಿಕ್ ಆನ್ ಆಗಿಲ್ಲ.‌ ಬದಲಾಗಿ ಚಾಲೆಂಜಿಂಗ್ ಪಾತ್ರಗಳನ್ನೂ ಮಾಡಿದ್ದಾರೆ. ಅವರ ಒಂದೊಂದು ಸಿನಿಮಾದ ಪಾತ್ರ ಕೂಡ ಪ್ರೇಕ್ಷಕರ ಮನಮುಟ್ಟುತ್ತದೆ. ಹೀಗಾಗಿ ರಣಬೀರ್ ಕಪೂರ್ ನನಗೆ ಇಷ್ಟವಾಗ್ತಾರೆ. ಅಷ್ಟಕ್ಕೂ ಸ್ಯಾಂಡಲ್ ವುಡ್ ರಣಬೀರ್ ಕಪೂರ್ ಅಂತ ಟ್ಯಾಗ್ ಮಾಡಿಕೊಳ್ಳಲಿಕ್ಕೆ ಇಷ್ಟವಿಲ್ಲ ನಾನೇ ಸ್ವಂತ ಬ್ರ್ಯಾಂಡ್ ಆಗ್ತೀನಿ ಅಂತ ಹೆಮ್ಮೆಯಿಂದ‌ ಹೇಳಿಕೊಂಡರು ಸುಮುಖ.

ಫಿಸಿಕ್ಸ್ ಟೀಚರ್ ಸುಮುಖ ಅವರೇ ಹೇಳಿಕೊಂಡಂತೆ ಯಾರ ಐಡೆಂಟಿಟಿಗೂ‌ ನಾವು ಸ್ಟಿಕ್ ಆನ್ ಆಗದೇ ಇರೋದು‌ ಬೆಸ್ಟು. ಅಖಾಡಕ್ಕೆ ಇಳಿದಾಗ ಓನ್ ಬ್ರ್ಯಾಂಡ್ ಆಗಬೇಕು. ಅದೇ ದಾರಿಯಲ್ಲಿ ಯುವ ನಟ ಸುಮುಖ ನಡೆಯುತ್ತಿದ್ದಾರೆ. ಎನಿವೇ, ಕನ್ನಡ ಚಿತ್ರರಂಗಕ್ಕೆ ಚಾಕೊಲೇಟ್ ಹೀರೋ ಸಿಕ್ಕಂತಾಯ್ತು. ಜೊತೆಗೆ ಯೂನಿಕ್ ಟ್ಯಾಲೆಂಟ್ ಇರೋ ಮತ್ತೊಬ್ಬ ಪ್ರತಿಭೆ ಗಂಧದಗುಡಿಗೆ ಆಗಮನವಾಯ್ತು ಅದರಲ್ಲಿ ಎರಡು‌ ಮಾತಿಲ್ಲ‌ ಎನ್ನುವುದಕ್ಕಿಂತ ಸಿನಿಮಾ ಮೇಲಿರುವ ಪ್ರೀತಿ ಭಕ್ತಿ ಶ್ರದ್ಧೆ ಜೊತೆಗೆ ಕಲಾಲೋಕಕ್ಕೆ ವಿಶಿಷ್ಟವಾದ ಕೊಡುಗೆ ನೀಡಲು ಹಾತೊರೆಯುತ್ತಿರುವ ಸುಮುಖ ಅವರ ಮನವೇ ಸಾಕ್ಷಿ.

  • ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಗಾಂಧಿವಾದಿ ಆಗಿ ಕಾಣಿಸಿಕೊಂಡ ಪರಿಸರವಾದಿ : ಕುತೂಹಲ ಹುಟ್ಟಿಸುತ್ತಿದೆ ನಟ, ನಿರ್ದೇಶಕ ಸುರೇಶ್ ಹೆಬ್ಬೀಕರ್ ಲುಕ್ !

ಗಾಂಧಿ ಜಯಂತಿಗೆ’ ಗುರು ಶಿಷ್ಯರು’ ಚಿತ್ರ ತಂಡ ಸ್ಪೆಷಲ್ ಸಂಗತಿಯೊಂದನ್ನು ರಿವೀಲ್ ಮಾಡಿದೆ. ಕನ್ನಡದ ಹೆಸರಾಂತ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರು ‘ ಗುರು ಶಿಷ್ಯರು’ ಚಿತ್ರದಲ್ಲಿ ನಿರ್ವಹಿಸಿದ ಪಾತ್ರದ ಸ್ಪೆಷಲ್ ಲುಕ್ ಅನ್ನು ರಿವೀಲ್ ಮಾಡಿದೆ. ಗಾಂಧಿ ವೇಷದಲ್ಲಿ ಕಾಣಿಸಿಕೊಂಡಿರುವ ನಟ ಸುರೇಶ್ ಹೆಬ್ಬೀಕರ್ ಅವರದ್ದು ಇಲ್ಲಿ ವಿಶೇಷ ಪಾತ್ರ. ಚಿತ್ರ ತಂಡ ಹೇಳುವ ಪ್ರಕಾರ, ಅದು ಗಾಂಧಿ ತತ್ವ ಪರಿಪಾಲಿಸುವ ಪಾತ್ರ ಎನ್ನುವುದು ವಿಶೇಷ. ಗಾಂಧಿ ಜಯಂತಿ ಸಂದರ್ಭದಲ್ಲಿ ಆ ಪಾತ್ರದ ಕುರಿತು ಚಿತ್ರ ತಂಡ ತನ್ನ ಅನಿಸಿಕೆ ಹಂಚಿಕೊಂಡಿದೆ.

ಮಹಾತ್ಮ ಗಾಂಧಿಯ ಬದುಕಿಗೂ ಮತ್ತು ಸುರೇಶ್ ಹೆಬ್ಳೀಕರ್ ಅವರು ನಿರ್ವಹಿಸುತ್ತಿರುವ ಪಾತ್ರಕ್ಕೂ ಸಾಕಷ್ಟು ಹೋಲಿಕೆಗಳಿವೆ. ಅಲ್ಲದೇ, ಗಾಂಧಿ ಬದುಕನ್ನೇ ಆದರ್ಶವಾಗಿ ತಗೆದುಕೊಂಡು ಬದುಕುವ ಪಾತ್ರ ಕೂಡ ಅದಾಗಿದೆ. ಗಾಂದಿಯ ಮೌಲ್ಯ, ಜೀವನ, ಸಾಧನೆಯನ್ನು ಈ ಪಾತ್ರದ ಮೂಲಕ ಸಮೀಕರಿಸಬಹುದಾಗಿದೆ. ಈ ಪಾತ್ರದ ಕುರಿತು ಗುರು ಶಿಷ್ಯರು ಸಿನಿಮಾದ ಕ್ರಿಯೇಟಿವ್ ಹೆಡ್ ಮತ್ತು ಕೋ ಪ್ರೊಡ್ಯುಸರ್ ತರುಣ್ ಕಿಶೋರ್ ಹೇಳುವುದು ಹೀಗೆ ” ನಮ್ಮ ಈ ಸಿನಿಮಾದಲ್ಲಿ ಸುರೇಶ್ ಹೆಬ್ಳೀಕರ್ ಅವರು ಗಾಂಧಿ ತತ್ವವನ್ನು ಪಾಲಿಸುವ ವ್ಯಕ್ತಿಯಾಗಿ ಮತ್ತು ಹಳ್ಳಿಯೊಂದರಲ್ಲಿ ಶಾಲೆ ನಡೆಸುವ ಅಪ್ಪಟ ಗಾಂಧಿವಾದಿಯಾಗಿ ನಟಿಸುತ್ತಿದ್ದಾರೆ. ಪಾತ್ರ ಮತ್ತು ಸಿನಿಮಾದ ಬಗೆಗಿರುವ ಅವರ ಪ್ರೀತಿ ಎಂದಿಗೂ ಮಾದರಿ. ಪರಿಸರ ಹೋರಾಟಗಾರರಾಗಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿ ನಮ್ಮೊಂದಿಗೆ ಅವರು ಬೆರೆತ ರೀತಿ ಹೆಮ್ಮೆ ಮೂಡಿಸುವಂಥದ್ದು. ಸಾಮಾನ್ಯವಾಗಿ ವ್ಯಾಪಾರಿ ಗುಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಇವರು, ಇದೇ ಮೊದಲ ಬಾರಿಗೆ ನಮ್ಮ ಸಿನಿಮಾದಲ್ಲಿ ನಟಿಸಿದ್ದು ಖುಷಿ ತಂದಿದೆ”.

ಜಂಟಲ್ ಮನ್ ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ನಟ ಶರಣ್ ಅವರ ಲಡ್ಡು ಸಿನಿಮಾಸ್ ಮತ್ತು ತರುಣ್ ಕಿಶೋರ್ ಅವರ ಕ್ರಿಯೇಟಿವಿಸ್ ಬ್ಯಾನರ್ ನಲ್ಲಿ ಗುರು ಶಿಷ್ಯರು ಚಿತ್ರ ತಯಾರಾಗಿದೆ. ಈಗಾಗಲೇ ಶೇಕಡಾ ಎಂಬತ್ತರಷ್ಟು ಸಿನಿಮಾದ ಶೂಟಿಂಗ್ ಮುಗಿದಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ಸಿದ್ದತೆ ನಡೆದಿದೆ. ಎಂದಿನಂತೆ ಮಾಧ್ಯಮದ ಮಿತ್ರರ ಸಹಕಾರವನ್ನು ಕೋರುತ್ತೇವೆ. ಈ ಸಿನಿಮಾದಲ್ಲಿ ಶರಣ್ ನಾಯಕನಾಗಿ ನಟಿಸಿದ್ದು, ಇಲ್ಲಿ ಅವರು ಪಿಟಿ ಮಾಸ್ಟರ್ ಪಾತ್ರ ಮಾಡಿದ್ದಾರೆ. ನಿಶ್ವಿಕಾ ನಾಯಕಿ. ಹಿರಿಯ ನಟ ದತ್ತಣ್ಣ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕನ್ನಡತಿ ರಂಜಿನಿ ರಾಘವನ್ ಅವರ ಕತೆ ಡಬ್ಬಿ ಹೊರ ಬಂತು : ನಟಿ ಈಗ ಲೇಖಕಿ ಆಗಿ ಬಡ್ತಿ !

ಪುಟ್ಟಗೌರಿ ಮದುವೆ ಸೀರಿಯಲ್ ಖ್ಯಾತಿಯ ಜನಪ್ರಿಯ ನಟಿ, ನಿರ್ದೇಶಕಿ ರಂಜನಿ ರಾಘವನ್ ಈಗ ಕತೆಗಾರ್ತಿ ಆಗಿ ಬಡ್ತಿ ಪಡೆದಿದ್ದಾರೆ. ಆ ಮೂಲಕ ಲೇಖಕಿ ಆಗಿ ಬಣ್ಣದ ಜಗತ್ತಿನಿಂದ ಸಾಹಿತ್ಯಕ್ಕೆ ಕ್ಷೇತ್ರಕ್ಕೂ ಪ್ರವೇಶ ಮಾಡಿದ್ದಾರೆ. ಹೆಸರಾಂತ ಪತ್ರಕರ್ತ ಜಿ.ಎನ್. ಮೋಹನ್ ಅವರ “ಅವದಿ’ ವೆಬ್ ಪತ್ರಿಕೆಯಲ್ಲಿ ನಟಿ ರಂಜನಿ ರಾಘವನ್ ಇದುವರೆಗೂ ಬರೆದ ಅವರ ಕಥೆಗಳ ಸಂಗ್ರಹ ಈಗ ‘ಕತೆ ಡಬ್ಬಿ’ರೂಪದಲ್ಲಿ ಹೊರ ಬಂದಿದೆ. ಬಹುರೂಪಿ ಪ್ರಕಾಶನ ಈ ಕೃತಿಯನ್ನು ಹೊರ ತಂದಿದೆ. ಇತ್ತೀಚೆಗಷ್ಟೇ ‘ಕತೆ ಡಬ್ಬಿ’ ಕೃತಿ ಬಿಡುಗಡೆ ಆಗಿದೆ.

ನಟನೆಯಲ್ಲಿಯೇ ಬ್ಯುಸಿ ಆಗಿದ್ದ ನಟಿ ರಂಜಿನಿ ರಾಘವನ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ‘ಇಷ್ಟದೇವತೆ’ ಧಾರಾವಾಹಿಗೆ ಕಥೆ, ಚಿತ್ರಕಥೆ ಬರೆಯುವ ಮೂಲಕ ಬರಹಗಾರ್ತಿಯೂ ಆಗಿದ್ದರು. ಅಲ್ಲಿಂದ ಬರವಣಿಗೆಯ ಪಯಣದಲ್ಲೀಗ ಕಥಾ ಸಂಕಲನ ಹೊರ ತಂದು ಲೇಖಕಿಯೂ ಆಗಿದ್ದಾರೆ. ಇಷ್ಟಕ್ಕೂ ಕುತೂಹಲ ಇರೋದು ಅವರಲ್ಲಿ ಬರವಣಿಗೆಯ ಕಲೆ ಸಿದ್ದಿಸಿದ್ದು ಹೇಗೆ ಅಂತ.’ನಂಗೆ ಮೊದಲಿನಿಂದಲೂ ಓದುವುದರಲ್ಲಿ ಹೆಚ್ಚು ಆಸಕ್ತಿ. ಓದಿನ ದಿನಗಳಲ್ಲಿಯೇ ಸಾಹಿತ್ಯದ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಾ ಬರುತ್ತಿದೆ. ಹಾಗಾಗಿಯೇ ಬರವಣಿಗೆಯ ಬಗ್ಗೆಯೂ ಆಸಕ್ತಿ ಮೂಡಿತ್ತು. ಆದರೆ ಮುಂದೆ ನಟನೆಯಲ್ಲಿ ಬ್ಯುಸಿ ಆದೆ. ಅಲ್ಲಿಯೇ ಹೆಚ್ಚು ಗಮನ ಹರಿಸಿದೆ. ಆದರೆ ಇಷ್ಟ ದೇವತೆ ಧಾರಾವಾಹಿಗೆ ನಾನೇ ಕಥೆ, ಚಿತ್ರಕಥೆ ಬರೆಯೋ ಅವಕಾಶ ಸಿಕ್ಕಿತು. ಅಲ್ಲಿಂದ ಬರವಣಿಗೆ ಶುರು ಮಾಡಿದೆ. ನಾನು ಬರೆದಿದ್ದಕ್ಕೆ ದೊಡ್ಡ ವೇದಿಕೆ ಆಗಿದ್ದ ಅವದಿ ವೆಬ್ ಪತ್ರಿಕೆ. ʻಅವಧಿʼ ವೆಬ್‌ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತುಂಬಿತು ಅದೇ ಕಾರಣವಾಗಿ ‘ಕತೆ ಡಬ್ಬಿ’ ಪುಸ್ತಕವಾಗಿ ರೂಪುಗೊಂಡಿತು. ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಅದೀಗ ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ.ಮುಂದೆ ಕಾದಂಬರಿಯನ್ನು ಬರೆಯುವ ಹಸಿವು ಇದೆ ಎನ್ನುವ ಮಾತುಗಳನ್ನು ನಟಿ ರಂಜಿನಿ ರಾಘವನ್ ಕಥಾ ಸಂಕಲನ ʻಕತೆ ಡಬ್ಬಿʼ ಬಿಡುಗಡೆ ಸಮಾರಂಭದಲ್ಲಿ ಹಂಚಿಕೊಂಡರು.

ಹಿರಿಯ ಪತ್ರಕರ್ತ, ಲೇಖಕ ಜೋಗಿ ಕೃತಿ ಬಿಡುಗಡೆ ಮಾಡಿದರು. ಆನಂತರ ಅವರು ಮಾತನಾಡುತ್ತಾ, ಕತೆ ಹೇಳುವ ಶೈಲಿ ಮತ್ತು ವಯಸ್ಸನ್ನು ಮೀರಿ ಆಲೋಚನೆ, ಸೊಗಸಾದ ತಂತ್ರಗಾರಿಕೆಯ ಬಳಕೆ ಮತ್ತು ಇಂದಿನ ಕಾಲದ ಭಾಷೆಯನ್ನು ಹಿಡಿದಿಡುವ ನೈಜತೆ ʻಕನ್ನಡತಿʼ ರಂಜನಿ ರಾಘವನ್‌ ಅವರ ಕಥೆಗಳ ಹೆಚ್ಚುಗಾರಿಕೆ ಎಂದರು.ಮನುಷ್ಯನ ಪಿಪಾಸುತನ ಮತ್ತು ದಾಹವನ್ನು ಹಿಡಿದಿಟ್ಟಿದ್ದಾರೆ. ಗಾಢವಾಗಿರುವ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬದುಕನ್ನು ಸುಂದರಗೊಳಿಸುವ ಮತ್ತು ಕತೆಯಲ್ಲಿ ಬರುವ ಸೂಕ್ಷ್ಮಗಳನ್ನು ಬಹುವಾಗಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.

ಚಿತ್ರ ನಿರ್ದೇಶಕ ಜಯತೀರ್ಥ ಕೃತಿ ಬಿಡುಗಡೆಗೆ ಅತಿಥಿಯಾಗಿದ್ದರು. ‘ ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನಪಟ್ಟಿದ್ದಾರೆ’ ಎಂದರು. ಹಾಗೆಯೇ ಚಿತ್ರ ನಟ ಋಷಿ ಅತಿಥಿಯಾಗಿ ಬಂದಿದ್ದರು.’ಬಹುರೂಪಿ’ ಯ ಜಿ ಎನ್‌ ಮೋಹನ್‌, ಬಹುರೂಪಿ ಬುಕ್‌ ಹಬ್‌ ನಿರ್ದೇಶಕರಾದ ಶ್ರೀಜಾ ವಿ ಎನ್, ಧೀರಜ್‌ ಹನುಮೇಶ್ ಉಪಸ್ಥಿತರಿದ್ದರು.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ವಿಜಯಾನಂದ ಆಡಿಷನ್ಸ್ ಗೆ‌ ಕಲಾವಿದರ‌ ನೂಕು‌ನುಗ್ಗಲು : ಬಂದವರ ಸಂಖ್ಯೆ ಕಂಡು ಚಿತ್ರ ತಂಡವೇ ಕಂಗಾಲು !

ವಿಆರ್‌ ಎಲ್‌ ಸಂಸ್ಥೆಯ ಮಾಲೀಕ ವಿಜಯ ಸಂಕೇಶ್ವರ ಅವರ ಬಯೋಫಿಕ್‌ ವಿಜಯಾನಂದ ಚಿತ್ರ ಸೆಟ್ಟೇರಲು ರೆಡಿ ಆಗಿದೆ. ಅಕ್ಟೋಬರ್‌ ೨೪ಕ್ಕೆ ಗ್ರಾಂಡ್‌ ಮುಹೂರ್ತಕ್ಕೆ ದಿನ ಫಿಕ್ಸ್‌ ಆಗಿದೆ. ಅಲ್ಲಿಂದ ಶೂಟಿಂಗ್‌ ಸ್ಟಾರ್ಟ್‌ ಆಗ್ತಿದೆ.

ಯುವ ನಿರ್ದೇಶಕಿ ರಿಷಿಕಾ ಶರ್ಮಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼವಿಜಯಾನಂದʼ ಸೆಟ್ಟೇರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂ ಡಂತೆಯೇ ಆಗಿದ್ದರೆ ಚಿತ್ರಕ್ಕೆ ಸೆಪ್ಟೆಂಬರ್‌ ಕೊನೆ ವಾರದಲ್ಲಿಯೇ ಮುಹೂರ್ತ ಮುಗಿದು ಹಳೇ ಮಾತೇ ಆಗುತ್ತಿತ್ತೇನೋ, ಆದರೆ ತಾಂತ್ರಿಕ ಕಾರಣದಿಂದ ಮುಹೂರ್ತದ ದಿನಾಂಕ ಪೋಸ್ಟ್‌ ಪೋನ್ಡ್‌ ಆಯಿತು. ಈಗ ಅಕ್ಟೋಬರ್‌ ೨೪ಕ್ಕೆ ಗ್ರಾಂಡ್‌ ಮುಹೂರ್ತಕ್ಕೆ ದಿನ ಫಿಕ್ಸ್‌ ಆಗಿದೆ. ಸದ್ಯಕ್ಕೆ ಚಿತ್ರ ತಂಡ ಅದೇ ಕೆಲಸದಲ್ಲಿ ಬ್ಯುಸಿ ಆಗಿದೆ. ಈ ನಡುವೆ ಪ್ರೀ ಪ್ರೊಡಕ್ಷನ್‌ ಕೆಲಸಗಳಲ್ಲಿಯೇ ತೊಡಗಿಸಿಕೊಂಡಿರುವ ಚಿತ್ರ ತಂಡ, ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ದೊಡ್ಡದೊಂದು ಆಡಿಷನ್ಸ್‌ ಶೋ ಮುಗಿಸಿಕೊಂಡು ಬಂದಿದೆ. ಚಿತ್ರತಂಡ ಹೇಳುವ ಮಟ್ಟಿಗೆ ಅದೊಂದು ದಾಖಲೆಯ ಆಡಿಷನ್ಸ್‌ ಶೋ. ಆಡಿಷನ್ಸ್‌ ಗೆ ಬಂದ ಕಲಾವಿದರ ಸಂಖ್ಯೆಯೇ ಅದಕ್ಕೆ ಸಾಕ್ಷಿಯಂತೆ.

ಹೌದು, ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರಕ್ಕೆ ಆ ದಿನ ಕಲಾವಿದರ ದಂಡೇ ಆಗಮಿಸಿತ್ತು. ನೋಡಿದವರಿಗೆಲ್ಲ ಅಲ್ಲೆನೋ ರಾಜಕೀಯ ಸಮಾವೇಶವೇ ಜರುಗಿದೆ ಅಂತಲೇ ಅನಿಸುವಂತಿತ್ತು ಆಡಿಷನ್ಸ್‌ ಶೋ. ನೂರಿನ್ನೂರು ಅಲ್ಲ, ಅಲ್ಲಿಗೆ ಬಂದವರ ಸಂಖ್ಯೆ ಕನಿಷ್ಠ ೫ ಸಾವಿರಕ್ಕೂ ಹೆಚ್ಚಿತ್ತು. ಅಷ್ಟು ಕಲಾವಿದರಿಗೂ ಆಡಿಷನ್ಸ್‌ ಅವಕಾಶ ಕೊಟ್ಟ ಚಿತ್ರ ತಂಡ, ಚಿತ್ರದ ಪಾತ್ರಗಳಿಗೆ ಸೂಕ್ತವಾಗುವ ೪೦ ಕ್ಕೂ ಹೆಚ್ಚು ಕಲಾವಿದರನ್ನು ಆಯ್ಕೆ ಮಾಡಿಕೊಂಡು ಬಂದಿದೆ. ಅಂದ ಹಾಗೆ ʼವಿಜಯಾನಂದʼ ಚಿತ್ರವು ವಿಆರ್‌ ಎಲ್‌ ಸಂಸ್ಥೆಯ ಮಾಲೀಕ, ನಾಡಿನ ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಫಿಕ್.‌ ಅದೇ ಕಾರಣಕ್ಕೆ ಹುಬ್ಬಳ್ಳಿಯ ಆಡಿಷನ್ಸ್‌ ಜಾತ್ರೆಯಂತೆ ನಡೆಯಿತು ಅನ್ನೋದು ಚಿತ್ರ ತಂಡದ ಮಾತು ಕೂಡ.

ʼಚಿತ್ರದ ಮುಖ್ಯ ಪಾತ್ರಗಳನ್ನು ಹೊರತು ಪಡಿಸಿ, ಒಂದಷ್ಟು ಸಹ ಕಲಾವಿದರು ಚಿತ್ರಕ್ಕೆ ಬೇಕಿದೆ. ಅವರೆಲ್ಲ ಉತ್ತರ ಕರ್ನಾಟಕದ ಭಾಷೆ ಬಲ್ಲವರೇ ಆಗಬೇಕಿದೆ. ಅದೇ ಕಾರಣಕ್ಕೆ ನಾವು ಒಂದು ದಿನ ಕಾಲ ಹುಬ್ಬಳ್ಳಿಯಲ್ಲಿ ಆಡಿಷನ್ಸ್‌ ಆಯೋಜಿಸಿದ್ದೇವು. ಇದನ್ನು ಮೊದಲೇ ಅನೌನ್ಸ್‌ ಮಾಡಿದ್ದೆವು. ಅದೇ ಕಾರಣಕ್ಕೆ ಇರಬೇಕು, ಆಡಿಷನ್ಸ್‌ ಗೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಮೂರು ಪಟ್ಟು ಕಲಾವಿದರು ಆಗಮಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಗೋವಾ, ಮುಂಬೈನಿಂದಲೂ ಒಂದಷ್ಟು ಕಲಾವಿದರು ಬಂದಿದ್ದರು. ಬಂದವರ ಸಂಖ್ಯೆ ಹೆಚ್ಚಿದೆ ಅಂತ ಯಾವರನ್ನು ಯಾರನ್ನು ವಾಪಸ್‌ ಕಳುಹಿಸಿಲ್ಲ. ಆಡಿಷನ್ಸ್‌ ಗೆ ನಾವು ನಾಲ್ಕು ತಂಡಗಳಲ್ಲಿ ಸಿದ್ದತೆ ಮಾಡಿಕೊಂಡಿದ್ದೆವು. ಅಂದು ಅಲ್ಲಿಗೆ ಬಂದವರೆನ್ನೆಲ್ಲ ಆಡಿಷನ್ಸ್‌ ಅವಕಾಶ ಕೊಟ್ಟು, ನಮ್ಮ ಚಿತ್ರದ ಪಾತ್ರಗಳಿಗೆ ಬೇಕಿದ್ದ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದೇವೆʼ ಎನ್ನುತ್ತಾರೆ ನಿರ್ದೇಶಕಿ ರಿಷಿಕಾ ಶರ್ಮಾ.

ಅಂದ ಹಾಗೆ, ‘ವಿಜಯಾನಂದ’ ಚಿತ್ರ ಕನ್ನಡದ ಮಟ್ಟಿಗೆ ಒಂದು ವಿಶೇಷ ಚಿತ್ರವಾಗುವುದಂತೂ ಹೌದು. ಒಂದು ಲಾರಿಯಿಂದ ಇವತ್ತು ಸಾವಿರಾರು ಬಸ್ಸು ಹಾಗೂ ಲಾರಿಗಳನ್ನು ಹೊಂದಿದ್ದು ಮಾತ್ರವಲ್ಲ ದೊಡ್ಡ ಉದ್ಯಮಿಯಾಗಿ ಹೊರ ಹೊಮ್ಮಿರುವ ವಿಜಯ ಸಂಕೇಶ್ವರ ಅವರ ಬಯೋಪಿಕ್‌ ಎನ್ನುವುದು ಅದಕ್ಕೆ ಕಾರಣ. ದೊಡ್ಡ ಸಾಧನೆಯ ಮೂಲಕವೇ ಕನ್ನಡಿಗರ ಮನೆ ಮಾತನಾದ ವಿಜಯ ಸಂಕೇಶ್ವರ ಅವರ ಸಾಹಸದ ಬದುಕು ಈಗ ತೆರೆ ಮೇರೆ ಬರುತ್ತಿದೆಅಂದರೆ ಕೂತೂಹಲ ಇಲ್ಲದೆ ಇರುತ್ತಾ? ಹುಬ್ಬಳ್ಳಿ ಸೇರಿ ಈಗ ಉತ್ತರ ಕರ್ನಾಟಕದಲ್ಲಿ ದೊಡ್ಡ ಹವಾ ಶುರುವಾಗಿದೆ.

ಅಂದ ಹಾಗೆ, ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಭರವಸೆಯ ಯುವ ನಟ ನಿಹಾಲ್‌ ರಜಪೂತ್‌ ಕಾರಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ಅನಂತನಾಗ್‌ ಕೂಡ ಚಿತ್ರದಲ್ಲಿದ್ದಾರೆ. ಉಳಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಅದೆಲ್ಲವೂ ಇಷ್ಟರಲ್ಲಿಯೇ ರಿವೀಲ್‌ ಆಗಲಿದೆಯಂತೆ. ಆಡಿಷನ್ಸ್‌ ನಲ್ಲಿ ವಿಆರ್‌ಎಲ್‌ ಸಂಸ್ಥೆಯ ಎಂಡಿ ಆನಂದ್‌ ಸಂಕೇಶ್ವರ್‌ ಕೂಡ ಭಾಗವಹಿಸಿದ್ದರು.

  • ಎಂಟರ್‌ಟೈನ್‌ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಪೊಲೀಸ್‌ ಕಮೀಷನರ್‌ ಭೇಟಿ ಮಾಡಿದ ಸ್ಯಾಂಡಲ್‌ವುಡ್‌ ! ಪೈರಸಿ ತಡೆಗೆ ಸೈಬರ್‌ ಕ್ರೈಮ್‌ ಮೊರೆ ಹೋದ ನಿರ್ಮಾಪಕರು

ಸರ್ಕಾರ ಚಿತ್ರಮಂದಿರಗಳಲ್ಲಿ ನೂರರಷ್ಟು ಭರ್ತಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 14 ರಿಂದ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆ.


ಕರ್ನಾಟಕದಲ್ಲಿ ಪೈರಸಿ ಹೆಚ್ಚಾಗುವ ಸೂಚನೆಯಿದ್ದು, ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಡಿ.ಕೆ.ರಾಮಕೃಷ್ಣ ಅವರ ನೇತೃತ್ವದಲ್ಲಿ ಪೊಲೀಸ್‌ ಮುಖ್ಯಸ್ಥರನ್ನು ಭೇಟಿ ಮಾಡಲಾಗಿದೆ.

ಈ ವೇಳೆ ನಿರ್ಮಾಪಕರಾದ ಕೆ.ಮಂಜು, ಜಯಣ್ಣ, ಗಣೇಶ್, ರಮೇಶ್ ಯಾದವ್, ಕೆ.ಪಿ.ಶ್ರೀಕಾಂತ್ ಮುಂತಾದ ನಿರ್ಮಾಪಕರು ಪೊಲೀಸ್ ಕಮೀಷನರ್ ಕಮಲ್ ಪಂತ್ ಹಾಗೂ ಸೈಬರ್ ಕ್ರೈಮ್ ಮುಖ್ಯಸ್ಥರಾದ ಸಂದೀಪ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಸುಪ್ರೀಂ ಹೀರೋ; ಭಜರಂಗಿ ಲೋಕಿಯ ಲುಕ್ ಬೆಂಕಿ ಗುರು : ತೆರೆ ಮೇಲೆ ಸರ್ಪ್ರೈಸ್​ ನೀಡಲಿದೆ ಈ ಪಾತ್ರ !!

ಸೌರವ್ ಲೋಕಿ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಮೂಲಕವೇ. ಭಜರಂಗಿ ಚಿತ್ರ ಕೊಟ್ಟ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಮತ್ತೆ ‘ ಭಜರಂಗಿ 2 ‘ ಮೂಲಕ ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಇದು

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ ಭಜರಂಗಿ 2 ‘ ಅಭಿಮಾನಿಗಳಲ್ಲಿ ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಈಗಾಗಲೇ ಚಿತ್ರ ತಂಡ ಚಿತ್ರದ ರಿಲೀಸ್ ಡೇಟ್ ಅನೌನ್ಸ್‌ ಮಾಡಿದೆ. ಚಿತ್ರದ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ದೊಡ್ಡ ಕ್ರೇಜ್ ಹುಟ್ಟು ಹಾಕಲು ಮುಂದಾಗಿರುವ ಚಿತ್ರ ತಂಡ, ಈಗ ಒಂದು ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡಿದೆ. ಈಗಾಗಲೇ ಟೀಸರ್ ನಲ್ಲಿ ಆ ಪಾತ್ರದ ಲುಕ್ ಕಾಣಿಸಿಕೊಂಡರೂ, ಆ ಪಾತ್ರದ ಪರಿಚಯಕ್ಕೆ ಅಂತಲೇ ಈಗ ವಿಶೇಷವಾದ ಪೋಸ್ಟರ್ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದೆ.‌ ಈಗಾಗಲೇ ಅದು ವೈರಲ್‌ ಕೂಡ ಆಗಿದೆ.‌ ನಿರೀಕ್ಷೆಯಂತೆ ಸಿನಿಮಾದ ಬಗ್ಗೆ ದೊಡ್ಡ ಕ್ರೇಜ್ ಶುರುವಾಗಲು ಅದು ನಾಂದಿ‌ ಹಾಡಿದೆ. ಅಂದ‌ಹಾಗೆ, ಆ ಪಾತ್ರ ಮತ್ತು ಪಾತ್ರದ ಕಲಾವಿದ ಬೇರಾರು ಅಲ್ಲ, ಅವರೇ ಭಜರಂಗಿ‌ ಲೋಕಿ.

ಸೌರವ್ ಲೋಕಿ ಹೆಸರಲ್ಲಿ ಬೆಳ್ಳಿತೆರೆಗೆ ಬಂದು ಭಜರಂಗಿ ಚಿತ್ರದ ಮೂಲಕವೇ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದ ನಟ ಇವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಚಿತ್ರದ ಮೂಲಕವೇ. ಅಲ್ಲಿಂದ ಶುರುವಾದ ಅವರ ರಿಯಲ್ ಸಿನಿ ಜರ್ನಿಯಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೆ, ಭಜರಂಗಿ ಚಿತ್ರ ಕೊಟ್ಟಂತಹ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಈಗ ಮತ್ತೆ ‘ ಭಜರಂಗಿ 2 ‘ ಚಿತ್ರದ ಮೂಲಕ ಮತ್ತೊಂದು‌ ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆಯ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಈ ಪೋಸ್ಟರ್.

ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದರಲ್ಲಿ ಲೋಕಿ ಅವರು ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ಗುರುತಿಸಿದ್ದರು. ಆದರೆ ಪಾತ್ರದ ಹೆಸರು ಸೇರಿದಂತೆ ಇತರ ಅಂಶ ರಿವೀಲ್ ಆಗಿರಲಿಲ್ಲ. ಇದೀಗ ಚಿತ್ರತಂಡ ಅಧಿಕೃತವಾಗಿ ಲೋಕಿ ಅವರ ಪಾತ್ರದ ಪರಿಚಯವನ್ನು ಮಾಡಿದ್ದು, ಅಚ್ಚರಿಯ ಮಾಹಿತಿಯನ್ನು ನೀಡಿದೆ. ಚಿತ್ರದಲ್ಲಿ ಸೌರವ್ ಲೋಕೇಶ್ ಅವರದ್ದು ಭಿನ್ನ ಮಾದರಿಯ ಪಾತ್ರವಾಗಿದ್ದು, ಚಿತ್ರತಂಡ ದೊಡ್ಡತೆರೆಯ ಮೇಲೆ ಈ ಪಾತ್ರ ನೀಡುವ ಸರ್ಪ್ರೈಸ್​ ಅನ್ನು ಕಣ್ತುಂಬಿಕೊಳ್ಳಿ ಎಂದು ಬರೆದಿದೆ. ಇದರಿಂದಾಗಿ ಲೋಕಿ ಅವರ ಪಾತ್ರ ಹಾಗೂ ಚಿತ್ರದ ಕುರಿತಂತೆ ನಿರೀಕ್ಷೆಗಳು ಗರಿಗೆದರಿವೆ.

ಸದ್ಯಕ್ಕೆ ‘ ಭಜರಂಗಿ 2 ‘ ಚಿತ್ರದಲ್ಲಿನ ಪಾತ್ರಗಳ ಬಗ್ಗೆ ಇರುವ ದೊಡ್ಡ ನಿರೀಕ್ಷೆಗಳ ಪೈಕಿ, ಭಜರಂಗಿ ಲೋಕಿ ಯವರ ಪಾತ್ರದ ಬಗ್ಗೆಯೂ ಇದೆ. ಅವರ ಪಾತ್ರದ ವಿಶೇಷ ಗೆಟಪ್ ನೋಡಿದಾಗ ಲೋಕಿ ಅವರ ಕೆರಿಯರ್ ನಲ್ಲಿ ಇದು ಕೂಡ ಒಂದು ಮೈಲುಗಲ್ಲು ಆಗುವುದು ಕೂಡ ಗ್ಯಾರಂಟಿ‌ ಅಂತೆ.‌ ‘ ಭಜರಂಗಿ 2 ‘ ಚಿತ್ರದಲ್ಲಿನ ತಮ್ಮ ಪಾತ್ರದ‌ ಕುರಿತು‌ ಮಾತನಾಡುವ ಸೌರವ್ ಲೋಕಿ ಅಲಿಯಾದ್ ಭಜರಂಗಿ‌ಲೋಕಿ, ಈ ಚಿತ್ರ ತೆರೆ ಕಂಡರೆ ತಮ್ಮನ್ನು ಇದು ಇನ್ನೊಂದು ಲೆವೆಲ್ ಗೆ ತೆಗೆದುಕೊಂ ಡು‌ ಹೋಗುವುದು ಖಚಿತ ಎನ್ನುವ ವಿಶ್ವಾಸ ಅವರದು. ಅಂತೆಯೇ ಅವರಿಗೆ ದೊಡ್ಡ ಯಶಸ್ಸು ಸಿಗಲಿ ಎನ್ನುವುದು ಸಿನಿ ಲಹರಿ ಆಶಯ ಕೂಡ.

Categories
ಸಿನಿ ಸುದ್ದಿ

ಸಲಗನಿಗೆ ಸಂತೋಷದಲ್ಲಿ ಸಂಭ್ರಮ; ಕೋಟಿಗೊಬ್ಬನಿಗೆ ನರ್ತಕಿಯ ಸ್ವಾಗತ!

ಹೆಂಗೆ ನಾವು, ಹೆಂಗೆ ಹೆಂಗೆ ನಾವು ಅಂತ ಸ್ಟಾರ್‌ಗಳಿಬ್ಬರು ಹೇಳ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ಯಾಂಡಲ್‌ವುಡ್‌ನ ಈ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ತಲೆಮೇಲೆ ಹೊತ್ತು ಮೆರೆಸೋಕೆ ಸಜ್ಜಾಗುತ್ತಿರುವ ಹಾಗೂ ಒಂದೇ ಅಖಾಡದಲ್ಲಿರುವ ಸಂತೋಷ್ ಮತ್ತು ನರ್ತಕಿ ಚಿತ್ರಮಂದಿರಗಳು ಮಾತ್ರ `ಹೆಂಗೆ ನಾವು ಹೆಂಗೆ ಹೆಂಗೆ ನಾವು’ ಅಂತ ಡೈಲಾಗ್ ಹೊಡೆದುಕೊಂಡು ಖುಷಿಪಡುತ್ತಿವೆ. ಅದಕ್ಕೆ ಕಾರಣ ಭರ್ತಿ ಒಂದೂವರೆ ವರ್ಷಗಳ ನಂತರ ಒಟ್ಟೊಟ್ಟಿಗೆ ಇಬ್ಬರು ಸ್ಟಾರ್‌ನಟರುಗಳನ್ನು ಚಿತ್ರಮಂದಿರಕ್ಕೆ ವೆಲ್‌ಕಮ್ ಮಾಡಿಕೊಳ್ಳುವಂತಹ ಅವಕಾಶ ಸಿಕ್ಕಿದೆ. ಅಟ್ ದಿ ಸೇಮ್ ಟೈಮ್ ಥಿಯೇಟರ್ ಮುಂದೆ ಹಬ್ಬದ ಸಂಭ್ರಮ ಹಾಗೂ ಹೌಸ್‌ಫುಲ್ ಆಗುವಂತಹ ಗಳಿಗೆಯನ್ನು ನೋಡಲಿಕ್ಕೆ ಎರಡು ಥಿಯೇಟರ್‌ಗಳು ಕಾತುರದಿಂದ ಕಾಯ್ತಿವೆ.

ಇಬ್ಬರು ಸೂಪರ್‌ಸ್ಟಾರ್‌ಗಳು ಒಟ್ಟಿಗೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅಂದ್ರೆ, ಇಬ್ಬರು ಸ್ಟಾರ್‌ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಅಂದ್ರೆ, ಅದನ್ನು ಬಣ್ಣದ ಲೋಕದ ಭಾಷೆಯಲ್ಲಿ ಸ್ಟಾರ್‌ವಾರ್ ಅಂತಾನೇ ಹೇಳ್ತಾರೆ. ಸದ್ಯ ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್‌ನಟರ ಸಿನಿಮಾಗಳು ಏಕಕಾಲಕ್ಕೆ ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿಕೊಡಲಿಕ್ಕೆ ಭರ್ಜರಿ ತಯ್ಯಾರಿ ನಡೆದಿದೆ. ಆ ಸಿನಿಮಾಗಳ ಬಗ್ಗೆ ನಿಮಗೀಗಾಗಲೇ ತಿಳಿದಿದೆ. ಅಭಿನಯ ಚಕ್ರವರ್ತಿಯ ಮೋಸ್ಟ್ ಎಕ್ಸ್ಪೆಕ್ಟೆಡ್ ಕೋಟಿಗೊಬ್ಬ-೩ ಹಾಗೂ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಹೈವೋಲ್ಟೇಜ್ `ಸಲಗ’ ಚಿತ್ರಗಳ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಆಯುಧ ಪೂಜೆಯ ದಿನದಂದೇ ಗಂಧದಗುಡಿಯ ನಾಯಕರಿಬ್ಬರು ಅಖಾಡಕ್ಕೆ ಧುಮ್ಕುತ್ತಿರುವುದರಿಂದ ಸ್ಟಾರ್‌ವಾರ್ ಜೋರಾಗಲಿದೆ, ಬಾಕ್ಸ್ಆಫೀಸ್ ಅಂಗಳದಲ್ಲಿ ಕಾದಾಟ ನಡೆಯಲಿದೆ ಎನ್ನುವುದು ಗಾಂಧಿನಗರದ ಪಿಎಚ್‌ಡಿ ಪಂಡಿತರ ಮಾತು.

ಒಂದು ವಾರ ಅಂತರದಲ್ಲಿ ಸ್ಟಾರ್‌ನಟರಿಬ್ಬರ ಚಿತ್ರಗಳು ಬಿಡುಗಡೆಯಾದ್ರೇನೇ ಬಿಗ್‌ ಸ್ಕ್ರೀನ್ ನಲ್ಲಿ ಪೈಪೋಟಿ ಶುರುವಾಗುತ್ತೆ, ಬಾಕ್ಸ್ಆಫೀಸ್ ಡಬ್ಬದಲ್ಲಿ ತಿಕ್ಕಾಟ ಆರಂಭವಾಗುತ್ತೆ. ಅಂತ್ರದಲ್ಲಿ ಒಂದೇ ದಿನ ಮಾಸ್‌ಗೂ ಕ್ಲಾಸ್‌ಗೂ ಬಾಸ್‌ಗಳಾಗಿರುವ ಮಾಣಿಕ್ಯ ಹಾಗೂ ಜಯ್ಯಮ್ಮನ ಮಗ ಅಖಾಡಕ್ಕೆ ಇಳಿಯುತ್ತಾರೆ ಅಂದ್ರೆ ಸಹಜವಾಗಿ ನೆಕ್ ಟು ನೆಕ್ ಫೈಟ್‌. ಸ್ಟಾರ್ಟ್ ಆಗುತ್ತೆ. ಚಿತ್ರಮಂದಿರಗಳು ಹಂಚಿಕೆಯಾಗುತ್ತವೆ, ಬಾಕ್ಸ್ಆಫೀಸ್ ಮಂಕಾಗುತ್ತದೆ. ಇದರೊಟ್ಟಿಗೆ ಫ್ಯಾನ್ಸ್ ಫ್ಯಾನ್ಸ್ ನಡುವೆ ಸಣ್ಣಗೆ ಕಿಡಿ ಹೊತ್ತಿಕೊಳ್ಳುತ್ತದೆ. ನಮ್ಮ ಬಾಸ್ ಫಸ್ಟ್, ನಿಮ್ಮ ಬಾಸ್ ನೆಕ್ಸ್ಟ್, ನಮ್ಮ ಬಾಸ್ ಸಿನಿಮಾ ಇಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ, ನಿಮ್ಮ ಬಾಸ್ ಸಿನಿಮಾ ಅಷ್ಟೇ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಹೀಗೆ ಏನೇನೋ ಮಾತನಾಡಿಕೊಳ್ಳುತ್ತಾ ಸುಖಾಸುಮ್ಮನೇ ಕಾದಾಟಕ್ಕೆ ರೆಡಿಯಾಗ್ತಾರೆ. ಸ್ಟಾರ್‌ಗಳ ಮಧ್ಯೆ ವಾರ್ ಶುರುವಾಗದೇ ಹೋದ್ರೂ ಕೂಡ ಫ್ಯಾನ್ಸ್ ವಾರ್ ಜೋರಾಗುತ್ತೆ.

ಇದ್ಯಾವುದು ಆಗ್ಬಾರ್ದು, ನಮ್ಮನಮ್ಮವರ ಮಧ್ಯೆ ಯಾವ ಯುದ್ದವೂ ನಡಿಯಬಾರ್ದು ಎನ್ನುವುದೇ ಎಲ್ಲರ ಆಶಯ. ಈ ಹಿನ್ನಲೆಯಲ್ಲಿ ಸಿನಿಲಹರಿ ತಂಡ `ಸಲಗ’ ಚಿತ್ರದ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಅವರನ್ನು ಸಂಪರ್ಕ ಮಾಡಿದಾಗ ಅವರು ಹೇಳಿದ್ದಿಷ್ಟು. ನಿಜಕ್ಕೂ ಇದು ಸ್ಟಾರ್‌ವಾರ್ ಅಂತ ಪರಿಗಣಿಸಬೇಡಿ. ನಮ್ಮ ನಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ, ಒಂದೇ ದಿನ ರಿಲೀಸ್ ಮಾಡ್ಲೆಬೇಕು ಎನ್ನುವ ಹಠಕ್ಕೂ ನಾವು ಬಿದ್ದಿಲ್ಲ. ಅಷ್ಟಕ್ಕೂ ಗಂಧದಗುಡಿಯಲ್ಲಿ ಹೆಲ್ದಿ ಕಾಂಪಿಟೇಷನ್ ಇದೆ ಬಿಟ್ರೆ ಈ ವಾರ್ ಗೀರ್ ಎಂತಹದ್ದು ಇಲ್ಲ ಎಂದರು. ಜೊತೆಗೆ ಹಬ್ಬದ ಸೀಸನ್‌ಗಳು ಬಂದಾಗ ಸ್ಟಾರ್‌ಗಳು ಅಖಾಡಕ್ಕೆ ಇಳಿಯೋದು ಸಹಜ. ನಮ್ಮ ಸ್ಟಾರ್‌ಗಳ ನಡುವೆ ಪರಭಾಷಾ ಸ್ಟಾರ್‌ಗಳು ಕೂಡ ಫೀಲ್ಡಿಗಿಳಿಯುತ್ತಾರೆ. ಆದರೆ, ಈ ಭಾರಿ ದಸರಾ ಹಬ್ಬಕ್ಕೆ ಪರಭಾಷಾ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಪ್ರತಿವರ್ಷ ಬೇರೆ ಭಾಷೆಯ ಚಿತ್ರಗಳೊಟ್ಟಿಗೆ ನಮ್ಮ ಭಾಷೆಯ ಚಿತ್ರಗಳು ಬಾಕ್ಸ್ಆಫೀಸ್ ಅಂಗಳದಲ್ಲಿ ಸೆಣಸಾಡಬೇಕಿತ್ತು. ಆದರೆ, ಈ ಭಾರಿ ಅಂತದ್ದೇನಿಲ್ಲ ನಮ್ಮ ಭಾಷೆಯ ಸಿನಿಮಾಗಳದ್ದೇ ಬೆಳ್ಳಿತೆರೆ ಹಾಗೂ ಬಾಕ್ಸ್ಆಫೀಸ್ ಅಖಾಡದಲ್ಲಿ ಅಬ್ಬರ ಅಂದರು.‌

`ಸಲಗ’ ನಿರ್ಮಾಪಕರ ಮಾತು ಹಂಡ್ರೆAಡ್ ಪರ್ಸೆಂಟ್ ನಿಜ. ಪರಭಾಷೆಯ ಸಿನಿಮಾಗಳು ಈ ಭಾರಿಯ ದಸರಾ ಹಬ್ಬಕ್ಕೆ ರಿಲೀಸ್ ಆಗದೇ ಇರೋದ್ರಿಂದ ಕನ್ನಡ ಸಿನಿಮಾಗಳಿಗೆ ಪ್ಲಸ್ ಆಗುತ್ತೆ. ಬಯಸಿದಷ್ಟು ಚಿತ್ರಮಂದಿರಗಳು ಸಿಗುತ್ತವೆ. ರಾಜ್ಯಾದ್ಯಂತ ಅವರಿಷ್ಟದ ಥಿಯೇಟರ್‌ಗಳಲ್ಲೇ ಸಿನಿಮಾನ ರಿಲೀಸ್ ಮಾಡ್ಬೋದು. ಹೀಗಾಗಿಯೇ ಸಲಗ ಚಿತ್ರತಂಡ ಆಯುಧ ಪೂಜೆಗೆ ಬಿಡುಗಡೆ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಸಂತೋಷ್ ಚಿತ್ರಮಂದಿರದಲ್ಲಿ ಸಲಗ ಆರ್ಭಟ ಶುರುವಾಗಲಿದೆ. ಅದೇ ದಿನ ನರ್ತಕಿಯಲ್ಲಿ ಕೋಟಿಗೊಬ್ಬ-೩ ಚಿತ್ರ ಭರ್ಜರಿಯಾಗಿ ಬಿಡುಗಡೆಯಾಗ್ತಿದೆ. ಒಂದೇ ಅಖಾಡದಲ್ಲಿ ಎರಡು ಚಿತ್ರಮಂದಿರಗಳು ಇರೋದ್ರಿಂದ ಪೈಪೋಟಿ ಏಳಬಹುದು. ಆದರೆ, ಇಬ್ಬರು ಸ್ಟಾರ್‌ನಟರುಗಳಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಇರೋದ್ರಿಂದ ಥಿಯೇಟರ್ ಅಂತೂ ಹೌಸ್‌ಫುಲ್ ಆಗುತ್ತೆ ಅದರಲ್ಲಿ ನೋಡೌಟ್.

ಒಂದ್ವೇಳೆ ಯಾರಾದ್ರೂ ಒಬ್ಬರು ಹಿಂದೆಸರಿದಿದ್ದರೆ, ಒಂದು ಚಿತ್ರತಂಡ ದೊಡ್ಡ ಮನಸ್ಸು ಮಾಡಿ ಮುಂದಿನ ವಾರ ಬರೋಣ ಬಿಡು ಎಂದು ತೀರ್ಮಾನಿಸಿದ್ದರೆ, ಥಿಯೇಟರ್ ಹೌಸ್‌ಫುಲ್ ಆಗೋದ್ರ ಜೊತೆಗೆ ಮತ್ತೊಂದು ಶೋಗೆ ಆಗುವಷ್ಟು ಜನ ಹೊರಗಡೆ ನಿಂತಿರುತ್ತಿದ್ದರು. ಕನ್ನಡ ಸಿನಿಮಾ ಪ್ರೇಕ್ಷಕರೆಲ್ಲರೂ ಕೂಡ ಚಿತ್ರಮಂದಿರದತ್ತ ದೌಡಾಯಿಸಿ ಬಾಕ್ಸ್ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿಕೊಡುತ್ತಿದ್ದರು. ಆದರೆ, ಸಲಗ ಹಾಗೂ ಕೋಟಿಗೊಬ್ಬ-3 ಎರಡು ಕೂಡ ಬಹುನಿರೀಕ್ಷೆಯ ಸಿನಿಮಾಗಳಾಗಿರೋದ್ರಿಂದ, ಎರಡು ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋನೇ ನೋಡಬೇಕಾಗಿರೋದ್ರಿಂದ ಕನ್ನಡ ಪ್ರೇಕ್ಷಕರು ಡಿವೈಡ್ ಆಗ್ತಾರೆ. ಇದ್ರಿಂದ ಒಂದು ಚಿತ್ರತಂಡಕ್ಕೆ ಅಲ್ಲ ಬದಲಾಗಿ ಎರಡು ಚಿತ್ರತಂಡಕ್ಕೂ ಕೊಂಚ ನಷ್ಟವೇ. ಅದನ್ನು ಯಾರು ತುಂಬಿಕೊಡುವುದಕ್ಕೆ ಆಗಲ್ಲ ಯಾಕಂದ್ರೆ ಅದು ಅವರಿಬ್ಬರೇ ತೆಗೆದುಕೊಂಡಿರುವ ಡಿಸೈಡ್ ಅಲ್ಲವೇ.

ವಿಶಾಲಾಕ್ಷಿ ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅವಕಾಶ ಸಿಗಲಿಲ್ಲ ಅಂದ್ರೆ ಆ ನಟಿಗೆ ಆತ್ಮಹತ್ಯೆಯೇ ಪರಿಹಾರ ಆಗಬೇಕಿತ್ತಾ?

ಬೆಳೆದ ಬೆಳೆ ಬರಲಿಲ್ಲ ಅಂತನೋ, ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗಲಿಲ್ಲ ಅಂತಲೋ ಇಲ್ಲಿ ರೈತರ ಅತ್ಮಹತ್ಯೆ ನಡೆದಿವೆ. ಕಾರ್ಮಿಕರು ಕಾರ್ಖಾನೆ ಮುಚ್ಚಿ ತಮಗೆ ಕೆಲಸ ಇಲ್ಲದಂತಾಗಿದೆ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಡೆದ ಸಾಲ ತೀರಿಸಲಾಗದೆ ಅದೆಷ್ಟೋ ಬಡ ಕುಟುಂಬಗಳು ಕೂಡ ಅತ್ಮಹತ್ಯೆ ಮಾಡಿಕೊಂಡಿವೆ.ಹಾಗೆಯೇ ಪರೀಕ್ಷೆಯಲ್ಲಿ ಫೇಲಾದೆ ಅಂತಲೋ, ಒಳ್ಳೆಯ ಅಂಕಬಂದಿಲ್ಲೋ ಅಂತಲೋ ಬೆಳೆಯಬೇಕಿದ್ದ ವಿದ್ಯಾರ್ಥಿಗಳು ಕೂಡ ನೇಣಿಗೆ ಶರಣಾಗಿದ್ದಾರೆ. ವರದಕ್ಷಿಣೆ ಕಿರುಕುಳ ತಾಳಲಾರದೆ ಅದೆಷ್ಟೋ ವಿವಾಹಿತ ಹೆಣ್ಣು ಮಕ್ಕಳು ತವರಿಗೆ ಬಾರಲಾರದೆ ಸ್ಮಶಾನದ ಪಾಲಾಗಿದ್ದಾರೆ. ಆದರೂ ಸಮಾಜ ಯಾವುದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಬದಲಿಗೆ ಅವೆಲ್ಲ ಪ್ರಕರಣಗಳಿಗೆ ಇನ್ನಾವುದೋ ಕಾರಣ ಸೇರಿಸಿ, ಅರ್ಥಕ್ಕೆ ಅಪಾರ್ಥ ಬರುವಂತೆಯೇ ಮಾಡಿದೆ. ಹಾಗಾಗಿ ಆತ್ಮಹತ್ಯೆಗಳ ಹಿಂದಿನ ನಿಜ ಕಾರಣಗಳು ಇಲ್ಲಿಮಣ್ಣು ಪಾಲಾಗಿ, ಯಾರಿಗೂ ನ್ಯಾಯ ಸಿಕ್ಕಿಲ್ಲ ಎನ್ನುವ ಕಟು ಸತ್ಯದ ನಡುವೆಯೇ ಕನ್ನಡದ ನಟಿಯೊಬ್ಬಳು ನಟಿಸಲು ಅವಕಾಶ ಸಿಗದೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವರದಿ ಆಗಿದೆ.

ಆಕೆಯ ಹೆಸರು ಸೌಜನ್ಯ ಅಲಿಯಾಸ್ ಸವಿ ಮಾದಪ್ಪ. ಕೊಡಗು ಮೂಲದ ನಟಿ. ಒಂದೆರೆಡು ಸಿನಿಮಾಗಳಲ್ಲೂ ಅಭಿನಯಿಸಿದ್ದಳಂತೆ. ಈಗೀಗ ನಟಿಸಲು ಅವಕಾಶ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಇದು ಬಿಟ್ಟರೆ ಇನ್ನೇನೋ ಕಾರಣವೂ ಇರಬಹುದು. ಅಥವಾ ಅದೇನಿಜವಾದ ಕಾರಣವೇ ಇರಬಹುದು. ಇರಲಿ, ಆಕೆ ಅವಕಾಶ ಸಿಗದ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆನ್ನುವುದೇ ನಿಜವಾಗಿದ್ದರೂ, ಚಿತ್ರರಂಗ ಅದನ್ನು ಗಂಭೀರವಾಗಿ ಪರಿಗಣಿಸುತ್ತೆ ಅಂತ ನಮಗೇನು ಅನಿಸೋದಿಲ್ಲ. ಯಾಕಂದ್ರೆ ಈ ಚಿತ್ರರಂಗವೂ ಸೇರಿ ಈ ಕಟ್ಟ ಸಮಾಜದ ಆಲೋಚನೆಗಳೇ ಬೇರೆ. ವಿವಾಹಿತವೋ ಅಥವಾ ಅವಿವಾಹಿತವೋ ವಯಸ್ಸಿನ ಒಂದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು ಅಂದ್ರೆ ಸಮಾಜದಲ್ಲಿ ಮೊದಲು ಕೇಳಿ ಬರುವ ಮಾತೇ ಆಕೆಯ ಇತರೆ ರಿಲೇಷನ್ ಶಿಫ್ ಗಳ ಬಗ್ಗೆ. ಇದೇ ಮಾತು ಚಿತ್ರರಂಗಕ್ಕೂಅನ್ವಯವೇ ಹೌದು.

ಈ ವಾಸ್ತವ ಸಿನಿಮಾ ರಂಗಕ್ಕೆ ಹೊಸದಾಗಿ ಬರುವ ಪ್ರತಿಭೆಗಳಿಗೆ ಗೊತ್ತಿರಲಿ. ಹೋದವರು ಹೋದರಷ್ಟೇ ಅಂತಲೇ ನೋಡುತ್ತೆ ಈ ವ್ಯವಸ್ಥೆ. ಇನ್ನು ಹೊಸಪ್ರತಿಭೆಗಳನ್ನು ಚಿತ್ರೋದ್ಯಮ ನೋಡುವ ರೀತಿಯೇ ಇಲ್ಲಿ ವಿಚಿತ್ರ. ಹೊಸಪ್ರತಿಭೆಗಳು ಇಲ್ಲಿ ಒಂದು ಅವಕಾಶ ಪಡೆಯಬೇಕಾದರೆ ಸಿಕ್ಕಾಪಟ್ಟೆ ಸರ್ಕಸ್ ಮಾಡ್ಬೇಕು. ನಿರ್ಮಾಪಕರು, ನಿರ್ದೇಶಕರ ಮನೆ ಬಾಗಿಲಿಗೆ ತಿರುಗಬೇಕು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅವರ ಆಸೆ- ಆಕಾಂಕ್ಷೆಗಳನ್ನು ಈಡೇರಿಸಬೇಕು. ಅಂತಹದರಲ್ಲಿ ಒಂದು ಅವಕಾಶ ಸಿಕ್ಕರೂ, ಅದರಲ್ಲಿಯೇ ಇಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟೇನು ಸುಲಭ ಇಲ್ಲ. ಅದೊಂಥರ ಅದೃಷ್ಟದಾಟ. ಅಂತಹದರಲ್ಲಿ ಅವಕಾಶಕ್ಕಾಗಿ ಅದೆಷ್ಟು ಹೊಸ ಪ್ರತಿಭೆಗಳು, ಇಲ್ಲಿಗೆ ಬಂದು ವಾಪಾಸ್ ಹೋಗಿವೆಯೋ ಗೊತ್ತಿಲ್ಲ. ಆದರೆ ಅವರೆಲ್ಲ ಮನನೊಂದು ಆತ್ಮಹತ್ಯೆ ಮಾಡಿಕೊಂಡಿಲ್ಲ.ಈ ಹುಡುಗಿ ಮಾತ್ರ, ಬದುಕೋದಿಕ್ಕೆಆಗುತ್ತಿಲ್ಲ ಅಂತ ಮತ್ತೆ ಬಾರದ ಲೋಕಕ್ಕೆಪಯಣ ಬೆಳೆಸಿಬಿಟ್ಟಿದ್ದಾಳೆ. ಪಾಪಾ, ಆಕೆಯ ಅಪ್ಪ- ಅಮ್ಮ ಕುಟುಂಬ ಅದೆಷ್ಟು ನೊಂದಿದೆಯೋ, ಇಂತಹ ಸ್ಥಿತಿ ಇನ್ನಾರಿಗೂ ಇಲ್ಲಿ ಬರುವುದು ಬೇಡ . ಯಾಕಂದ್ರೆ, ಅವಕಾಶ ಸಿಕ್ಕಿಲ್ಲ ಮನನೊಂದರೆ ಅದಕ್ಕೆ ಆತ್ಮಹತ್ಯೆಯೇ ಪರಿಹಾರ ಅಲ್ಲ. ಹೊಸ ದಾರಿ, ಅವಕಾಶಗಳ ಕಡೆಗೆ ಆಲೋಚಿಸಬೇಕು, ಸಿಕ್ಕರೆ ಅಲ್ಲಿಗೆ ಜಂಪ್ ಆಗಬೇಕು.

ನಿಜ, ಚಿತ್ರೋದ್ಯಮ ಇವತ್ತು ಅನೇಕ ಬಿಕ್ಕಟ್ಟು ಗಳ ನಡುವಿದೆ. ಅನೇಕ ಲೋಪದೋಷಗಳನ್ನು ತುಂಬಿಕೊಂಡಿದೆ. ಹೊಸಬರು ಅವಕಾಶಕ್ಕೆ ಪರದಾಡುವ ಪರಿಸ್ಥಿತಿಯೂ ಇಲ್ಲಿದೆ. ಬಿದ್ದವರಿಗೆ ಇಲ್ಲಿ ಅವಮಾನ, ಅಪಮಾನ, ನಿಂದನೆ ಇದ್ದೆ ಇದೆ. ಅವೆಲ್ಲವನ್ನು ಸಹಿಸೋದಿಕ್ಕೆ ಆಗುತ್ತಿಲ್ಲ ಅಂದ್ರೆ ಹೊಸ ಪ್ರತಿಭೆಗಳಿಗೆ ಇನ್ನೇನೋ ಹೊಸ ಕೆಲಸ ಹುಡುಕುವತ್ತ ಬೇರೆಯವರು ಪ್ರೇರಣೆ ಆಗಲಿ. ಅದು ಬಿಟ್ಟು ಆತ್ಮಹತ್ಯೆ ಯೇ ಪರಿಹಾರ ಅಂತಂದುಕೊಂಡರೆ, ರೈತರ ಆತ್ಮಹತ್ಯೆಗಳ ಹಾಗೆ ಇಲ್ಲೂ ಸರಣಿ ಆತ್ಮಹತ್ಯೆ ಗಳು ನಡೆದು ಹೋದವಾ? ಸಮಾಜ ಕೂಡ ತನ್ನ ಮನಸ್ಥಿತಿ ಬದಲಾಯಿಸಿಕೊಳ್ಳಲಿ, ನಡೆಯಬಾರದ ಆತ್ಮಹತ್ಯೆಗಳು ನಡೆದು ಹೋದಾಗ, ಅವುಗಳಿಗೆ ಇನ್ನಾವುದೋ ಕಾರಣದ ಗಾಳಿ ಸುದ್ದಿ ಹರಿಬಿಟ್ಟು, ಅವರ ಕುಟುಂಬದವರನ್ನು ನೋಯಿಸುವುದು ಕೈ ಬಿಡಬೇಕು. ಹಾಗೆಯೇ ಯಾವಾವುದೋ ಕನಸು ಹೊತ್ತು ಸಿನಿಮಾರಂಗಕ್ಕೆ ಬರುವ ಯುವ ಮನಸ್ಸು ಗಳು ಬಂದು ಹತಾಸೆ ಸಿಲುಕದಂತೆನೋಡಿಕೊಳ್ಳಬೇಕಿದೆ. ಹಾಗೆಯೇ ಎಲ್ಲೋ ಒಂದು ಅವಕಾಶ ಸಿಕ್ಕಿತು ಅಂತ ಬಣ್ಣದ ಜಗತ್ತಿಗೆ ಬರುವ ಯುವ ಜನರು ಕೂಡ, ಭ್ರಮೆಯಿಂದ ಹೊರ ಬಂದು ಇಲ್ಲಿ ವಾಸ್ತವ ಲೋಕ ಏನೆಂದು ಅರ್ಥ ಮಾಡಿಕೊಳ್ಳಲಿ.
ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡೋಂಟ್ ಅಂಡರೆಸ್ಟಿಮೇಟ್ ಪ್ಲೀಸ್; ಆತ್ಮಹತ್ಯೆಗೆ ಮುನ್ನ ಸವಿ ಮಾದಪ್ಪ ಹೀಗಂದಿದ್ಯಾರಿಗೆ?

ಈ ನಟಿಮಣಿಯ ಮನಸನ್ನು ಹಿಂಸಿಸುತ್ತಿದ್ದ ಆ ನೋವೇನು? ಆ ಸಂಕಟವೇನು? ಅದ್ಯಾವ ಘಟನೆ ಈ ನಟಿಮಣಿಯನ್ನು ಘಾಸಿಗೊಳಿಸ್ತು? ಅದ್ಯಾವ ಘಟನೆ ಈಕೆಯನ್ನು ಆಘಾತಕ್ಕೆ ದೂಡ್ತು? ಈ ಜೀವನಾನೇ ಬೇಡ ಅಂತ ಈ ನಟಿ ಅದ್ಯಾಕೆ ನಿರ್ಧರಿಸಿದರು? ಸಾಯೋದಕ್ಕೆ ಇಷ್ಟವಿಲ್ಲ ಆದರೂ ಸತ್ತೆ ಸಾಯ್ತೀನಿ ಅಂತ ಅದ್ಯಾಕೆ ಕೊರಳಿಗೆ ನೇಣು ಕುಣಿಕೆಯನ್ನು ಸರಿದುಕೊಂಡ್ರು? ಡೆತ್‌ನೋಟ್ ಬರೆಯೋದಕ್ಕೂ ಆಗ್ತಿಲ್ಲ, ಆಗ್ತಿಲ್ಲ ಎನ್ನುತ್ತಲೇ, ಮೆಂಟಲಿ ಕೊರಗುತ್ತಲೇ ಅದ್ಯಾಕೆ ನಾಲ್ಕು ಪುಟಗುಳುಳ್ಳ ಡೆತ್‌ನೋಟ್‌ನ ಬರೆದು ಮುಗಿಸಿದರು? ಸಾಯೋದಕ್ಕೆ ದೊಡ್ಡ ಮನಸ್ಸು ಮಾಡಿದ ಈ ನಟಿ ಅದ್ಯಾಕೆ ಬದುಕೋದಕ್ಕೆ ಬಂಡ ಧೈರ್ಯ ಮಾಡಲಿಲ್ಲ?

ಚೌಕಟ್ಟು ಹಾಗೂ ಫನ್ ಸಿನಿಮಾದ ನಾಯಕಿ ಸೌಜನ್ಯ ಅಲಿಯಾಸ್ ಸವಿಮಾದಪ್ಪ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ದಕ್ಷಿಣ ಭಾಗದ ದೊಡ್ಡಬೆಲೆಯಲ್ಲಿ ಘಟನೆ ನಡೆದಿದ್ದು, ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾದ ಸೌಜನ್ಯ ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್‌ವೊಂದರಲ್ಲಿ ನೆಲೆಸಿದ್ದರು. ಇಂದು ಬೆಳಗ್ಗೆ ಅಪಾರ್ಟ್ಮೆಂಟ್‌ನಲ್ಲಿ ಸೂಸೈಡ್ ಮಾಡಿಕೊಂಡು ಉಸಿರು ಚೆಲ್ಲಿದ್ದಾರೆ. ನಟಿಯ ಮೃತದೇಹದ ಬಳಿ ಡೆತ್‌ನೋಟ್ ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸೌಜನ್ಯ ಅಲಿಯಾಸ್ ಸವಿಮಾದಪ್ಪ ಗೀಚಿಟ್ಟಿರುವ ಡೆತ್‌ನೋಟ್ ಎನ್ನಲಾದ ನಾಲ್ಕು ಪುಟಗಳುಳ್ಳ ಡೆತ್‌ನೋಟ್‌ನಿಂದ ಹಲವು ಅಂಶಗಳು ಬೆಳಕಿಗೆ ಬಂದಿವೆ. ಆತ್ಮಹತ್ಯೆ ಮಾಡಿಕೊಳ್ಳುವದಕ್ಕೆ ಮೂರು ದಿನದ ಮುಂಚಿತವಾಗಿಯೇ ಡೆತ್‌ನೋಟ್ ಬರೆಯಲು ಆರಂಭಿಸಿದ್ದರಂತೆ. ಮೊದಲ ಪುಟ ೨೭ರಂದು ಬರೆದಿದ್ದು, ಕೊನೆಯ ಪುಟವನ್ನು ಇಂದು ಬೆಳಗ್ಗೆ ಅಂದ್ರೆ ೩೦ನೇ ತಾರೀಖ್‌ನಂದು ಬರೆದಿದ್ದಾರಂತೆ.ನನ್ನ ಸಾವಿಗೆ ನಾನೇ ಕಾರಣ ಅಪ್ಪ-ಅಮ್ಮ ದಯವಿಟ್ಟು ಕ್ಷಮಿಸಿ ಬಿಡಿ ಎಂದಿರುವ ನಟಿ ಸವಿಮಾದಪ್ಪ, ಸಾಯೋದಕ್ಕೆ ಇಷ್ಟವಿಲ್ಲ ಹಾಗಂತ ಬದುಕೋದಕ್ಕೆ ಆಗ್ತಿಲ್ಲ. ಆರೋಗ್ಯ ಚೆನ್ನಾಗಿಲ್ಲ ಎನ್ನುವುದಕ್ಕಿಂತ ಜೀವನದಲ್ಲಿ ತೀರಾ ನೊಂದುಬಿಟ್ಟಿದ್ದೇನೆ. ಹೀಗಾಗಿ, ಬದುಕೋದಕ್ಕೆ ಕಷ್ಟವಾಗ್ತಿದೆ ಎಂದು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗ್ತಿದೆ.

ಅಷ್ಟಕ್ಕೂ, ಪೊಲೀಸರ ಕೈಗೆ ಲಭ್ಯವಾಗಿರುವ ಈ ಡೆತ್‌ನೋಟ್ ನಿಜಕ್ಕೂ ನಟಿ ಸವಿಮಾದಪ್ಪ ಅವರೇ ಬರೆದಿದ್ದಾ ಅಥವಾ ಈ ನಟಿಯ ಆತ್ಮಹತ್ಯೆಯ ಹಿಂದೆ ಯಾರದ್ದಾದರೂ ಕೈವಾಡವಿದೆಯಾ ಗೊತ್ತಿಲ್ಲ? ಈಗಷ್ಟೇ ಪೊಲೀಸರ ತನಿಖೆ ಆರಂಭಗೊಂಡಿದೆ. ನಟಿಯ ಪೋಷಕರು ಈಕೆಯ ಬರವಣಿಗೆಯ ಅಕ್ಷರಗಳನ್ನು ಐಡೆಂಟಿಫೈ ಮಾಡಿದರೆ, ಅಥವಾ ನಟಿ ಈ ಹಿಂದೆ ಯಾವುದಾದರೂ ಪುಸ್ತಕದಲ್ಲಿ ಅಕ್ಷರಗಳನ್ನು ಗೀಚಿಟ್ಟಿದ್ದರೆ ಫೈಂಡ್‌ಔಟ್ ಮಾಡೋದಕ್ಕೆ ಈಸಿಯಾಗುತ್ತದೆ ಅದೇ ಹಾದಿಯಲ್ಲಿ ಖಾಕಿ ಪಡೆಯ ತನಿಖೆ ಸಾಗುತ್ತಿದೆ.

ಅಚ್ಚರಿ ಅಂದ್ರೆ ಕಳೆದ ಎರಡು ದಿನಗಳ ಹಿಂದೆ ನಟಿ ಸವಿಮಾದಪ್ಪ ಅವರು ಇನ್ಸ್ ಟಾಗ್ರಾಮ್‌ನಲ್ಲಿ ಕೆಲವೊಂದು ಪೋಸ್ಟ್ಗಳನ್ನು ಹಾಕಿದ್ದಾರೆ. ಅದರಲ್ಲಿ, ಇದೊಂದು ಪೋಸ್ಟ್ ನೋಡುಗರನ್ನು ಬಹುವಾಗಿ ಕಾಡುತ್ತೆ. ಹೌದು, `ನೆವರ್ ಅಂಡರೆಸ್ಟಿಮೇಟ್ ಎನಿವನ್’ ಯಾಕಂದ್ರೆ, ಫನ್ನಿ ಎನಿಸುವ ವ್ಯಕ್ತಿಗಳ ಜೀವನದಲ್ಲೂ ನೋವಿನ ಕಥೆ ಇರುತ್ತೆ ಅದು ಯಾರಿಗೂ ಗೊತ್ತಿರುವುದಿಲ್ಲ ಅಷ್ಟೇ. ಹೀಗಂತ ಬರೆದು ಕೆಫೆ ಕಾಫಿ ಡೇ ಮುಂದೆ ನಿಂತು ಕ್ಲಿಕಿಸಿಕೊಂಡಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ಸವಿಯವರ ಈ ಟ್ವೀಟ್ ಗಮನಿಸಿದರೆ ಇವರ ಜೀವನದಲ್ಲೂ ಯಾರಿಗೂ ಹೇಳಿಕೊಳ್ಳದಂತಹ, ಯಾರಿಗೂ ತಿಳಿಯದಂತಹ ನೋವು ಮನಸ್ಸನ್ನು ಹಿಂಡಿ ಹಿಂಸೆ ಮಾಡುತ್ತಿತ್ತು ಎನಿಸುತ್ತೆ.

ಅಷ್ಟಕ್ಕೂ, ಈ ನಟಿಮಣಿಯ ಮನಸನ್ನು ಹಿಂಸಿಸುತ್ತಿದ್ದ ಆ ನೋವೇನು? ಆ ಸಂಕಟವೇನು? ಅದ್ಯಾವ ಘಟನೆ ಈ ನಟಿಮಣಿಯನ್ನು ಘಾಸಿಗೊಳಿಸ್ತು? ಅದ್ಯಾವ ಘಟನೆ ಈಕೆಯನ್ನು ಆಘಾತಕ್ಕೆ ದೂಡ್ತು? ಈ ಜೀವನಾನೇ ಬೇಡ ಅಂತ ಈ ನಟಿ ಅದ್ಯಾಕೆ ನಿರ್ಧರಿಸಿದರು? ಸಾಯೋದಕ್ಕೆ ಇಷ್ಟವಿಲ್ಲ ಆದರೂ ಸತ್ತೆ ಸಾಯ್ತೀನಿ ಅಂತ ಅದ್ಯಾಕೆ ಕೊರಳಿನೆ ನೇಣು ಕುಣಿಕೆಯನ್ನು ಸರಿದುಕೊಂಡ್ರು? ಡೆತ್‌ನೋಟ್ ಬರೆಯೋದಕ್ಕೂ ಆಗ್ತಿಲ್ಲ, ಆಗ್ತಿಲ್ಲ ಎನ್ನುತ್ತಲೇ, ಮೆಂಟಲಿ ಕೊರಗುತ್ತಲೇ ಅದ್ಯಾಕೆ ನಾಲ್ಕು ಪುಟಗುಳುಳ್ಳ ಡೆತ್‌ನೋಟ್‌ನ ಬರೆದು ಮುಗಿಸಿದರು? ಸಾಯೋದಕ್ಕೆ ದೊಡ್ಡ ಮನಸ್ಸು ಮಾಡಿದ ಈ ನಟಿ ಅದ್ಯಾಕೆ ಬದುಕೋದಕ್ಕೆ ಬಂಡ ಧೈರ್ಯ ಮಾಡಲಿಲ್ಲ? ಈ ಯಾವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ. ಪೊಲೀಸ್ ತನಿಖೆ ಆಗ್ಬಹುದು? ಕಾರಣ ಇದೇ ಅಂತ ಷರಾ ಬರೆದು ಪತ್ರದ ಮೂಲಕ ತಿಳಿಸಬಹುದು. ಆದರೆ, ಉಸಿರು ಚೆಲ್ಲಿದ ನಟಿ ಮತ್ತೆ ಬರುವುದಿಲ್ಲ, ಹೆತ್ತವರ ಕ್ಷಣಕ್ಷಣಕ್ಕೂ ಹೊಟ್ಟಗೆ ಬೆಂಕಿ ಹಾಕಿಕೊಂಡು ಮರುಗುವುದು ನಿಲ್ಲಲ್ಲ. ಆದರೂ, ಪೊಲೀಸ್ ತನಿಖೆಯಿಂದ ಯಾವ ಮಾಹಿತಿ ಹೊರಬೀಳುತ್ತೋ ಕಾದುನೋಡಬೇಕು.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಸ್ಯಾಂಡಲ್‌ವುಡ್‌ ನಟಿ-ಅವಕಾಶಗಳಿಲ್ಲದೇ ಮನನೊಂದಿದ್ದರಂತೆ ಸವಿ ಮಾದಪ್ಪ !?

ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಸವಾಲಿನ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂದಿದ್ದ ಸವಿಮಾದಪ್ಪ ಅವರು, ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಾಯುವ ನಿರ್ಧಾರ ಮಾಡಿದ್ರಾ? ನಿಜಕ್ಕೂ ನಟಿ ಸವಿಮಾದಪ್ಪ ಸಾವಿನ ಹಿಂದೆ ಚಾನ್ಸ್ ಸಿಕ್ಕಿಲ್ಲ ಎನ್ನುವ ಕಾರಣ ಇದೆಯಾ ಅಥವಾ ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ

ಕೂರ್ಗ್ ಚೆಲುವೆ, ಸ್ಯಾಂಡಲ್‌ವುಡ್‌ನ ಸುಂದರಿ ಸವಿಮಾದಪ್ಪ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ಲಭ್ಯವಾಗಿದೆ. ಅವಕಾಶಗಳಿಲ್ಲದೇ ಮನನೊಂದು ನೇಣಿಗೆ ಕೊರಳೊಡ್ಡಿದ್ದಾರೆನ್ನಲಾಗ್ತಿದೆ. ಚೌಕಟ್ಟು ಚಿತ್ರದ ಮೂಲಕ ನಟಿ ಸವಿಮಾದಪ್ಪ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು.

ಈ ಚಿತ್ರದ ನಿರ್ಮಾಪಕ ಮಂಜುನಾಥ್ ಅವ್ರನ್ನ ಸಿನಿಲಹರಿ ತಂಡ ಸಂಪರ್ಕ ಮಾಡಿದಾಗ, ಬಣ್ಣದ ಲೋಕದಲ್ಲಿ ಅವಕಾಶಗಳು ಕಡಿಮೆ ಆಯ್ತು ಎನ್ನುವ ಕಾರಣದಿಂದ ಸಾವಿಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ನಮಗೆ ತಿಳಿದುಬಂದಿದೆ ಎಂದರು. ಸವಿಮಾದಪ್ಪ ಅವ್ರಿಗೆ ಚಿತ್ರರಂಗಕ್ಕೆ ಬರಲು ಅವರ ತಂದೆಯೇ ಪ್ರೇರಣೆಯಂತೆ. ಈ ಹಿಂದೆ ಸುದ್ದಿಗೋಷ್ಟಿಯಲ್ಲಿ ಖುದ್ದಾಗಿ ಹೇಳಿಕೊಂಡಿದ್ದರು. ದರ್ಶನ್ ಅಂದ್ರೆ ತುಂಬಾ ಇಷ್ಟ, ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿರುವುದಾಗಿ ತಿಳಿಸಿದ್ದರು.

ಚಿಕ್ಕಂದಿನಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿಯಿದ್ದು, ಅಭಿನಯದ ಜೊತೆಗೆ ಸಿನಿಮಾಟೋಗ್ರಫಿ ಮಾಡುವ ಆಸಕ್ತಿಯಿದೆ ಎಂದಿದ್ದರು. ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಸವಾಲಿನ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂದಿದ್ದ ಸವಿಮಾದಪ್ಪ ಅವರು, ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಸಾಯುವ ನಿರ್ಧಾರ ಮಾಡಿದ್ರಾ?

ನಿಜಕ್ಕೂ ನಟಿ ಸವಿಮಾದಪ್ಪ ಸಾವಿನ ಹಿಂದೆ ಚಾನ್ಸ್ ಸಿಕ್ಕಿಲ್ಲ ಎನ್ನುವ ಕಾರಣ ಇದೆಯಾ ಅಥವಾ ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

error: Content is protected !!