ಸ್ಯಾಂಡಲ್ ವುಡ್ ಸುಪ್ರೀಂ ಹೀರೋ; ಭಜರಂಗಿ ಲೋಕಿಯ ಲುಕ್ ಬೆಂಕಿ ಗುರು : ತೆರೆ ಮೇಲೆ ಸರ್ಪ್ರೈಸ್​ ನೀಡಲಿದೆ ಈ ಪಾತ್ರ !!

ಸೌರವ್ ಲೋಕಿ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಮೂಲಕವೇ. ಭಜರಂಗಿ ಚಿತ್ರ ಕೊಟ್ಟ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಮತ್ತೆ ‘ ಭಜರಂಗಿ 2 ‘ ಮೂಲಕ ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಇದು

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ ಭಜರಂಗಿ 2 ‘ ಅಭಿಮಾನಿಗಳಲ್ಲಿ ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಈಗಾಗಲೇ ಚಿತ್ರ ತಂಡ ಚಿತ್ರದ ರಿಲೀಸ್ ಡೇಟ್ ಅನೌನ್ಸ್‌ ಮಾಡಿದೆ. ಚಿತ್ರದ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ದೊಡ್ಡ ಕ್ರೇಜ್ ಹುಟ್ಟು ಹಾಕಲು ಮುಂದಾಗಿರುವ ಚಿತ್ರ ತಂಡ, ಈಗ ಒಂದು ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡಿದೆ. ಈಗಾಗಲೇ ಟೀಸರ್ ನಲ್ಲಿ ಆ ಪಾತ್ರದ ಲುಕ್ ಕಾಣಿಸಿಕೊಂಡರೂ, ಆ ಪಾತ್ರದ ಪರಿಚಯಕ್ಕೆ ಅಂತಲೇ ಈಗ ವಿಶೇಷವಾದ ಪೋಸ್ಟರ್ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದೆ.‌ ಈಗಾಗಲೇ ಅದು ವೈರಲ್‌ ಕೂಡ ಆಗಿದೆ.‌ ನಿರೀಕ್ಷೆಯಂತೆ ಸಿನಿಮಾದ ಬಗ್ಗೆ ದೊಡ್ಡ ಕ್ರೇಜ್ ಶುರುವಾಗಲು ಅದು ನಾಂದಿ‌ ಹಾಡಿದೆ. ಅಂದ‌ಹಾಗೆ, ಆ ಪಾತ್ರ ಮತ್ತು ಪಾತ್ರದ ಕಲಾವಿದ ಬೇರಾರು ಅಲ್ಲ, ಅವರೇ ಭಜರಂಗಿ‌ ಲೋಕಿ.

ಸೌರವ್ ಲೋಕಿ ಹೆಸರಲ್ಲಿ ಬೆಳ್ಳಿತೆರೆಗೆ ಬಂದು ಭಜರಂಗಿ ಚಿತ್ರದ ಮೂಲಕವೇ ‘ಭಜರಂಗಿ ಲೋಕಿ’ ಅಂತಲೇ ಬ್ರಾಂಡ್ ಆದ ನಟ ಇವರು. ಅಷ್ಟು ಮಾತ್ರವಲ್ಲ, ಕನ್ನಡಕ್ಕೊಬ್ಬ ಖಡಕ್ ಖಳನಟ ಸಿಕ್ಕಿದ್ದು ಕೂಡ ಭಜರಂಗಿ ಚಿತ್ರದ ಮೂಲಕವೇ. ಅಲ್ಲಿಂದ ಶುರುವಾದ ಅವರ ರಿಯಲ್ ಸಿನಿ ಜರ್ನಿಯಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೆ, ಭಜರಂಗಿ ಚಿತ್ರ ಕೊಟ್ಟಂತಹ ತಾರಾ ವರ್ಚಸ್ಸು ಅವರಿಗೆ ಮತ್ತಾವುದೇ ಚಿತ್ರ ತಂದು ಕೊಟ್ಟಿಲ್ಲ. ಈಗ ಮತ್ತೆ ‘ ಭಜರಂಗಿ 2 ‘ ಚಿತ್ರದ ಮೂಲಕ ಮತ್ತೊಂದು‌ ವಿಶಿಷ್ಟವಾದ ಲುಕ್ಕು, ಖಡಕ್ ಪಾತ್ರದೊಂದಿಗೆ ಬೆಳ್ಳಿತೆರೆಯ ಮೇಲೆ ಬರಲು ರೆಡಿಯಾಗಿದ್ದಾರೆ. ಆ ಪಾತ್ರದ ಒಂದು ಲುಕ್ಕು ಈ ಪೋಸ್ಟರ್.

ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದರಲ್ಲಿ ಲೋಕಿ ಅವರು ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ಗುರುತಿಸಿದ್ದರು. ಆದರೆ ಪಾತ್ರದ ಹೆಸರು ಸೇರಿದಂತೆ ಇತರ ಅಂಶ ರಿವೀಲ್ ಆಗಿರಲಿಲ್ಲ. ಇದೀಗ ಚಿತ್ರತಂಡ ಅಧಿಕೃತವಾಗಿ ಲೋಕಿ ಅವರ ಪಾತ್ರದ ಪರಿಚಯವನ್ನು ಮಾಡಿದ್ದು, ಅಚ್ಚರಿಯ ಮಾಹಿತಿಯನ್ನು ನೀಡಿದೆ. ಚಿತ್ರದಲ್ಲಿ ಸೌರವ್ ಲೋಕೇಶ್ ಅವರದ್ದು ಭಿನ್ನ ಮಾದರಿಯ ಪಾತ್ರವಾಗಿದ್ದು, ಚಿತ್ರತಂಡ ದೊಡ್ಡತೆರೆಯ ಮೇಲೆ ಈ ಪಾತ್ರ ನೀಡುವ ಸರ್ಪ್ರೈಸ್​ ಅನ್ನು ಕಣ್ತುಂಬಿಕೊಳ್ಳಿ ಎಂದು ಬರೆದಿದೆ. ಇದರಿಂದಾಗಿ ಲೋಕಿ ಅವರ ಪಾತ್ರ ಹಾಗೂ ಚಿತ್ರದ ಕುರಿತಂತೆ ನಿರೀಕ್ಷೆಗಳು ಗರಿಗೆದರಿವೆ.

ಸದ್ಯಕ್ಕೆ ‘ ಭಜರಂಗಿ 2 ‘ ಚಿತ್ರದಲ್ಲಿನ ಪಾತ್ರಗಳ ಬಗ್ಗೆ ಇರುವ ದೊಡ್ಡ ನಿರೀಕ್ಷೆಗಳ ಪೈಕಿ, ಭಜರಂಗಿ ಲೋಕಿ ಯವರ ಪಾತ್ರದ ಬಗ್ಗೆಯೂ ಇದೆ. ಅವರ ಪಾತ್ರದ ವಿಶೇಷ ಗೆಟಪ್ ನೋಡಿದಾಗ ಲೋಕಿ ಅವರ ಕೆರಿಯರ್ ನಲ್ಲಿ ಇದು ಕೂಡ ಒಂದು ಮೈಲುಗಲ್ಲು ಆಗುವುದು ಕೂಡ ಗ್ಯಾರಂಟಿ‌ ಅಂತೆ.‌ ‘ ಭಜರಂಗಿ 2 ‘ ಚಿತ್ರದಲ್ಲಿನ ತಮ್ಮ ಪಾತ್ರದ‌ ಕುರಿತು‌ ಮಾತನಾಡುವ ಸೌರವ್ ಲೋಕಿ ಅಲಿಯಾದ್ ಭಜರಂಗಿ‌ಲೋಕಿ, ಈ ಚಿತ್ರ ತೆರೆ ಕಂಡರೆ ತಮ್ಮನ್ನು ಇದು ಇನ್ನೊಂದು ಲೆವೆಲ್ ಗೆ ತೆಗೆದುಕೊಂ ಡು‌ ಹೋಗುವುದು ಖಚಿತ ಎನ್ನುವ ವಿಶ್ವಾಸ ಅವರದು. ಅಂತೆಯೇ ಅವರಿಗೆ ದೊಡ್ಡ ಯಶಸ್ಸು ಸಿಗಲಿ ಎನ್ನುವುದು ಸಿನಿ ಲಹರಿ ಆಶಯ ಕೂಡ.

Related Posts

error: Content is protected !!