ಫಿಲ್ಮಾಹಾಲಿಕ್ ಫೌಂಡೇಶನ್ ರವರು ಎರಡನೇ ವರ್ಷದ ಸಿನಿಮಾ ಅಂತರಂಗ (cff2021) ಚಲನಚಿತ್ರೋತ್ಸವವನ್ನು ಡಿಸೆಂಬರ್ 25 ನೇ ತಾ|| ಹಮ್ಮಿಕೊಂಡಿದ್ದಾರೆ. ಚಿತ್ರೋತ್ಸವಕ್ಕೆ ತಮ್ಮ ಚಿತ್ರಗಳನ್ನು ಸಲ್ಲಿಸಿದ ಚಲನಚಿತ್ರ ತಂಡಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ತೀರ್ಪುಗಾರರು ನಿಮ್ಮ ಸಿನಿಮಾವನ್ನು ಮೆಚ್ಚಿ ಪ್ರಶಂಸೆ ನೀಡಿದ್ದಾರೆ ಹಾಗೂ 16 ಚಲನಚಿತ್ರಗಳನ್ನು ಕೊನೆಯ ಹಂತಕ್ಕೆ ಆಯ್ಕೆ ಮಾಡಿದ್ದಾರೆ. ಸಿನಿಮಾ ಅಂತರಂಗ ಚಲನ ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾದ 16 ಚಲನಚಿತ್ರಗಳು ಈ ಕೆಳಕಂಡಂತಿವೆ.
ಈ ಚಿತ್ರೋತ್ಸವಕ್ಕೆ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್, ಭಾರತ ಸಾರಥಿ ಪತ್ರಿಕೆ ಹಾಗೂ ನ್ಯೂಸ್ ಚಾನೆಲ್, ಅಂಜನಾದ್ರಿ ಕೋಪರೇಟಿವ್ ಸೊಸೈಟಿ, ಮಾರುತಿ ಮೆಡಿಕಲ್ಸ್ ಪ್ರಾಯೋಜಕ ರಾಗಿದ್ದಾರೆ. ಮಾಧ್ಯಮ ಮಿತ್ರರಾಗಿ ಐಕಾಚ್ ಮೀಡಿಯಾ, ಚಿತ್ತಾರ, ಸಿನಿ ಲಹರಿ, ಬಿ ಸಿನಿಮಾಸ್, ನಮ್ಮ ಸೂಪರ್ ಸ್ಟಾರ್ಸ್, ಎಂಎಂಎಂ ಮೀಡಿಯಾ, ಸ್ಟಾರ್ ಕನ್ನಡ, ರಿಯಲ್ ಟೈಮ್ಸ್, ಸಿರಿ ಟಿವಿ, ಹೈಬ್ರಿಡ್ ನ್ಯೂಸ್, ಫಿಲ್ಮಗಪ್ಪ, ಮಯೂರಿ ಮೀಡಿಯಾ ಇವರುಗಳು ಇದ್ದಾರೆ.
ಸ್ಯಾಂಡಲ್‌ವುಡ್‌ನ ಮೋಸ್ಟ್ ಬ್ಯೂಟಿಫುಲ್ ಅಂಡ್ ಕ್ಯೂಟೆಸ್ಟ್ ಕಪಲ್ಸ್ ಅಂದ್ರೆ ರಾಕಿಭಾಯ್ ಅಂಡ್ ರಾಧಿಕಾ ಪಂಡಿತ್ ಅನ್ನೋದನ್ನ ಹೊಸದಾಗಿ ಹೇಳಬೇಕಿಲ್ಲ. ರೀಲ್‌ನಲ್ಲಿ ಜೋಡಿಯಾಗಿ ಚಿತ್ರಪ್ರೇಮಿಗಳಿಂದ ಬಹುಪರಾಕ್ ಹಾಕಿಸಿಕೊಂಡ ಯಶ್-ರಾಧಿಕಾ ರಿಯಲ್‌ನಲ್ಲಿ ಜೊತೆಯಾಗಿ ಆದರ್ಶ ದಂಪತಿಗಳಂತೆ ಬದುಕುತ್ತಿರುವುದನ್ನು ಇಡೀ ಕರುನಾಡು ನೋಡ್ತಿದೆ. ಇಂತಿಪ್ಪ ಮಾಧರಿ ಜೋಡಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಪ್ರೀತ್ಸಿ ಮದುವೆಯಾದ ರಾಕಿಂಗ್ ಜೋಡಿ ಇಂದು ಐದನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿನಾ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. ಮುದ್ದಿನ ಮಗಳು ಐರಾ ಹಾಗೂ ಮುದ್ದಿನ ಮಗ ಯಥರ್ವ್ ಜೊತೆ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸುತ್ತಿದ್ದಾರೆ.
‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ'ಯವ್ರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.ನಂದಗೋಕುಲ’ ಸೀರಿಯಲ್ ಅಂಗಳದಲ್ಲಿ ಶುರುವಾದ ಪ್ರೀತಿಯನ್ನು ಪೋಷಿಸಿ ಬೆಳೆಸಿದ ‘ರಾಕಿಂಗ್ ಕಪಲ್ಸ್',ಗೋವಾದ ಕಡಲ ತೀರದಲ್ಲಿ ರಿಂಗ್ ಎಕ್ಸ್‌ಚೇಂಜ್ ಮಾಡಿಕೊಂಡು ‘ಇನ್ಮೇಲೆ ನೀವು ನಮ್ಮವರು, ನಾವು ನಿಮ್ಮವರು’ ಎಂದು ಸಂಬಂಧ ಗಟ್ಟಿಮಾಡಿಕೊಂಡರು. ಡಿಸೆಂಬರ್- 09- 2016 ರಂದು ಬಾಂದವ್ಯದ ಮುದ್ರೆ ಹೊತ್ತಿದ್ದರು. ಕುಟುಂಬಸ್ಥರು-ಆಪ್ತರು-ಸಿನಿಮಾದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದರು. ಗ್ರ್ಯಾಂಡ್ ರಿಸೆಪ್ಷನ್ ಏರ್ಪಡಿಸಿ ಅಭಿಮಾನಿ ದೇವರುಗಳ ಆಶೀರ್ವಾದ ಪಡೆದರು. ಹೀಗೆ ಭರ್ಜರಿಯಾಗಿ ದಾಂಪತ್ಯದ ಬದುಕಿಗೆ ಕಾಲಿರಿಸಿದ ಯಶ್-ರಾಧಿಕಾ, ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಸುಂದರವಾಗಿಸಿ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಬ್ಯೂಟಿಫುಲ್ ಕಪಲ್ಸ್ಗೆ ಆರತಿಗೊಬ್ಬಳು ಮಗಳು.. ಕೀರ್ತಿಗೊಬ್ಬ ಮಗನಿದ್ದಾನೆ.
ಮೊಗ್ಗಿನ ಮನಸ್ಸಿನ ಹುಡುಗನನ್ನು ಕೈಹಿಡಿದ ರಾಧಿಕಾ ಇಬ್ಬರು ಮುದ್ದಿನ ಮಕ್ಕಳ ತಾಯಿಯಾಗಿ ‘ರಾಕಿಂಗ್'ಮನೆಯನ್ನು ಬೆಳಗುತ್ತಿದ್ದಾರೆ.ಸಕ್ಸಸ್‌ಫುಲ್ ಹೀರೋಯಿನ್ನಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದ ಸಿಂಡ್ರೆಲಾ ಈಗ ಸಿನಿಮಾರಂಗದಿಂದ ಕೊಂಚ ದೂರ ಉಳಿದು ಗಂಡ-ಮನೆ-ಮಕ್ಕಳು ಅಂತ ಬ್ಯುಸಿಯಾಗಿದ್ದಾರೆ.ಈ ಮಧ್ಯೆ ಐದನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿ ಆಸ್ಟೇಲಿಯನ್ ಮೂಲದ ಲೇಖಕ ಬ್ಯೂ ಟ್ಯಾಪ್ಲಿನ್ ಅವರ ಕೋಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಯಾರಾದರೂ ನಿಮ್ಮನ್ನು ನೀವು ಉತ್ತಮಗೊಳ್ಳುವಂತೆ ಮಾಡುವ, ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೋತ್ಸಾಹಿಸುವ ಮತ್ತು ಪ್ರೇರೇಪಿಸುವ, ನೀವು ನಿರ್ಲಕ್ಷ ಮಾಡುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ಹಿಡಿದು ನೂಕುವ, ಯಾವುದೇ ಫಲಾಪೇಕ್ಷೆಯಿಲ್ಲದೇ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿದ್ದರೆ, ನೀವು ಧೈರ್ಯಶಾಲಿಯಾಗಿರಲು ಮತ್ತು ಸಂತೋಷದಿಂದಿರಲು ಸಹಾಯವಾಗುತ್ತೆ. ಇಂತಹ ಸಂಬಂಧ ಪವಿತ್ರವಾದದ್ದು ಹೀಗಾಗಿ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ’ ಹೀಗೆ ಟ್ವೀಟ್ ಮಾಡಿರುವ ರಾಧಿಕಾ `ಹ್ಯಾಪಿ 5th ಆ್ಯನಿವರ್ಸರಿ ಸ್ವೀಟ್‌ಹಾರ್ಟ್’ ಎಂದಿದ್ದಾರೆ. ಪತ್ನಿಯ ಪ್ರೀತಿಯ ಶುಭಾಷಯಕ್ಕೆ ಯಶ್ ಒಲವಿನ ಉಡುಗೊರೆ ನೀಡರ‍್ತಾರೆ. ಒಟ್ನಲ್ಲಿ, ಮಾಡ್ರನ್ ಲೋಕದಲ್ಲಿ ಮಾಧರಿಯಾಗಿ ಬದುಕುತ್ತಿರುವ ಈ ಜೋಡಿಗೆ ಶುಭವಾಗಲಿ ಎಲ್ಲರ ಶುಭಹಾರೈಕೆ ಇರಲಿ.
ಅಭಿಮಾನಿ ದೇವರುಗಳನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿಐಪಿ ಗಳು ಎಂದು ಕರೆಯೋದು ನಿಮ್ಮೆಲ್ಲರಿಗೂ ಗೊತ್ತಿದೆ. ಇಂತಿಪ್ಪ ವಿಐಪಿಗಳಿಗೆ ಬಹದ್ದೂರ್ ಗಂಡು ‘ ಮಾರ್ಟಿನ್’ ಚಿತ್ರದ ಮೂಲಕ ಡಬ್ಬಲ್ ಟ್ರೀಟ್ ಕೊಡುವುದಕ್ಕೆ ಹೊರಟಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಜಗತ್ತಿನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅಷ್ಟಕ್ಕೂ, ಈ ಸುದ್ದಿ ನಿಜಾನೋ ಅಥವಾ ಸುಳ್ಳೋ ಗೊತ್ತಿಲ್ಲ ? ಆದರೆ, ಮಾರ್ಟಿನ್ ಮೂವೀಯಲ್ಲಿ ಆಕ್ಷನ್ ಪ್ರಿನ್ಸ್ ದ್ವಿಪಾತ್ರದಲ್ಲಿ ಧಗಧಗಿಸ್ತಾರೆ ಎನ್ನುವ ಸುದ್ದಿ ಮಾತ್ರ ಜೋರಾಗಿದೆ. ಬಜಾರ್ ನಲ್ಲಿ ಈ ಬಡಾಬ್ರೇಕಿಂಗ್ ನ್ಯೂಸ್ ಸೆನ್ಸೇಷನ್ ಸೃಷ್ಟಿ ಮಾಡ್ತಿರುವಾಗಲೇ ಸ್ವತಃ ಧ್ರುವ ಸರ್ಜಾ ಜಿಮ್ ನಲ್ಲಿ ಮೈ ಬೆವರಿಳಿಸ್ತಿರೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಆಕ್ಷನ್ ಪ್ರಿನ್ಸ್ ಹಂಚಿಕೊಂಡಿರುವ ವಿಡಿಯೋ ನೋಡುಗರನ್ನು ದಂಗಾಗಿಸುತ್ತಿದೆ. ದೇಹ ದಂಡಿಸುವ ವಿಚಾರದಲ್ಲಿ ಮೇಲುಗೈ ಸಾಧಿಸುವ ಧ್ರುವ ಒನ್ಸ್ ಅಗೇನ್ ‘ ಮಾರ್ಟಿನ್’ ಚಿತ್ರಕ್ಕಾಗಿ ಭಾರೀ ವರ್ಕೌಟ್ ಮಾಡಿ ವಿಐಪಿಗಳನ್ನು ಮಾತ್ರವಲ್ಲ ಸಕಲರನ್ನೂ ದಿಗ್ ದಿಗ್ಭ್ರಾಂತರನ್ನಾಗಿ ಮಾಡುತ್ತಿದ್ದಾರೆ. ಅದ್ದೂರಿ ಹುಡುಗನ ಈ ಭರ್ಜರಿ ವರ್ಕೌಟ್ ನ ನೋಡಿದರೆ ಡಬ್ಬಲ್ ಟ್ರೀಟ್ ಕೊಡಲಿಕ್ಕೋಸ್ಕರವೇ ಈ ರೀತಿಯಾಗಿ ದೇಹ ದಂಡಿಸುತ್ತಿದ್ದಾರೆ ಎನಿಸುತ್ತೆ.
ನಿಜಕ್ಕೂ ಡ್ಯುಯೆಲ್ ರೋಲ್ ನಲ್ಲಿ ಧ್ರುವ ಕಿಚ್ಚು ಹಚ್ಚುತ್ತಾರಾ!? ಈ ಕೂತೂಹಲದ ಪ್ರಶ್ನೆಗೆ ಚಿತ್ರತಂಡ ಉತ್ತರ ಕೊಡಬೇಕು. ಸದ್ಯಕ್ಕೆ, ಗೌಪ್ಯತೆ ಕಾಯ್ದುಕೊಂಡಿರುವ ಈ ನ್ಯೂಸ್ ಗೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ. ಚಿತ್ರಕ್ಕೆ ಎ.ಪಿ ಅರ್ಜುನ್ ನಿರ್ದೇಶನವಿದ್ದು, ಉದಯ್. ಕೆ.ಮೆಹ್ತಾ ಬಂಡವಾಳ ಹೂಡಿದ್ದಾರೆ. ಆಕ್ಷನ್ ಪ್ರಿನ್ಸ್ ಗೆ ವೈಭವಿ ಶಾಂಡಿಲ್ಯ ಜೋಡಿಯಾಗಿದ್ದಾರೆ. ಅತೀ ದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಾರ್ಟಿನ್ ಮೂಡಿಬರುತ್ತಿದೆ.
ಅಭಿಮಾನಿ ದೇವರುಗಳನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿಐಪಿ ಗಳು ಎಂದು ಕರೆಯೋದು ನಿಮ್ಮೆಲ್ಲರಿಗೂ ಗೊತ್ತಿದೆ. ಇಂತಿಪ್ಪ ವಿಐಪಿಗಳಿಗೆ ಬಹದ್ದೂರ್ ಗಂಡು ‘ ಮಾರ್ಟಿನ್’ ಚಿತ್ರದ ಮೂಲಕ ಡಬ್ಬಲ್ ಟ್ರೀಟ್ ಕೊಡುವುದಕ್ಕೆ ಹೊರಟಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಜಗತ್ತಿನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅಷ್ಟಕ್ಕೂ, ಈ ಸುದ್ದಿ ನಿಜಾನೋ ಅಥವಾ ಸುಳ್ಳೋ ಗೊತ್ತಿಲ್ಲ ? ಆದರೆ, ಮಾರ್ಟಿನ್ ಮೂವೀಯಲ್ಲಿ ಆಕ್ಷನ್ ಪ್ರಿನ್ಸ್ ದ್ವಿಪಾತ್ರದಲ್ಲಿ ಧಗಧಗಿಸ್ತಾರೆ ಎನ್ನುವ ಸುದ್ದಿ ಮಾತ್ರ ಜೋರಾಗಿದೆ. ಬಜಾರ್ ನಲ್ಲಿ ಈ ಬಡಾಬ್ರೇಕಿಂಗ್ ನ್ಯೂಸ್ ಸೆನ್ಸೇಷನ್ ಸೃಷ್ಟಿ ಮಾಡ್ತಿರುವಾಗಲೇ ಸ್ವತಃ ಧ್ರುವ ಸರ್ಜಾ ಜಿಮ್ ನಲ್ಲಿ ಮೈ ಬೆವರಿಳಿಸ್ತಿರೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಆಕ್ಷನ್ ಪ್ರಿನ್ಸ್ ಹಂಚಿಕೊಂಡಿರುವ ವಿಡಿಯೋ ನೋಡುಗರನ್ನು ದಂಗಾಗಿಸುತ್ತಿದೆ. ದೇಹ ದಂಡಿಸುವ ವಿಚಾರದಲ್ಲಿ ಮೇಲುಗೈ ಸಾಧಿಸುವ ಧ್ರುವ ಒನ್ಸ್ ಅಗೇನ್ ‘ ಮಾರ್ಟಿನ್’ ಚಿತ್ರಕ್ಕಾಗಿ ಭಾರೀ ವರ್ಕೌಟ್ ಮಾಡಿ ವಿಐಪಿಗಳನ್ನು ಮಾತ್ರವಲ್ಲ ಸಕಲರನ್ನೂ ದಿಗ್ ದಿಗ್ಭ್ರಾಂತರನ್ನಾಗಿ ಮಾಡುತ್ತಿದ್ದಾರೆ. ಅದ್ದೂರಿ ಹುಡುಗನ ಈ ಭರ್ಜರಿ ವರ್ಕೌಟ್ ನ ನೋಡಿದರೆ ಡಬ್ಬಲ್ ಟ್ರೀಟ್ ಕೊಡಲಿಕ್ಕೋಸ್ಕರವೇ ಈ ರೀತಿಯಾಗಿ ದೇಹ ದಂಡಿಸುತ್ತಿದ್ದಾರೆ ಎನಿಸುತ್ತೆ.
ನಿಜಕ್ಕೂ ಡ್ಯುಯೆಲ್ ರೋಲ್ ನಲ್ಲಿ ಧ್ರುವ ಕಿಚ್ಚು ಹಚ್ಚುತ್ತಾರಾ!? ಈ ಕೂತೂಹಲದ ಪ್ರಶ್ನೆಗೆ ಚಿತ್ರತಂಡ ಉತ್ತರ ಕೊಡಬೇಕು. ಸದ್ಯಕ್ಕೆ, ಗೌಪ್ಯತೆ ಕಾಯ್ದುಕೊಂಡಿರುವ ಈ ನ್ಯೂಸ್ ಗೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ. ಚಿತ್ರಕ್ಕೆ ಎ.ಪಿ ಅರ್ಜುನ್ ನಿರ್ದೇಶನವಿದ್ದು, ಉದಯ್. ಕೆ.ಮೆಹ್ತಾ ಬಂಡವಾಳ ಹೂಡಿದ್ದಾರೆ. ಆಕ್ಷನ್ ಪ್ರಿನ್ಸ್ ಗೆ ವೈಭವಿ ಶಾಂಡಿಲ್ಯ ಜೋಡಿಯಾಗಿದ್ದಾರೆ. ಅತೀ ದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಾರ್ಟಿನ್ ಮೂಡಿಬರುತ್ತಿದೆ.
ಎಸ್. ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ʼಆರ್ ಅರ್ ಆರ್ʼ ಟ್ರೇಲರ್ ಲಾಂಚ್‌ಗೆ ಕೊನೆಗೂ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ ಡಿಸೆಂಬರ್ 9 ಕ್ಕೆ ಕರ್ನಾಟಕದಲ್ಲೂ ಆರ್ ಆರ್ ಆರ್ ಚಿತ್ರದ ಟ್ರೇಲರ್ ದಾಖಲೆಯ ಹಾಗೆ ಲಾಂಚ್ ಆಗಲಿದೆ. ಕನ್ನಡ ಚಿತ್ರ ರಂಗದ ಇತಿಹಾಸದಲ್ಲೇ ಇದೇ ಮೊದಲು ಎನ್ನುವ ಹಾಗೆ, ಆರ್ ಆರ್ ಆರ್ ಟ್ರೇಲರ್ ಒಟ್ಟು 30 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿಯೇ ಲಾಂಚ್ ಆಗುತ್ತಿದೆ. ಸಿನಿಮಾ ರಿಲೀಸ್ ಮಾದರಿಯಲ್ಲಿಯೇ ಚಿತ್ರ ತಂಡ ಟ್ರೇಲರ್ ಲಾಂಚ್ ಮಾಡುತ್ತಿದೆ.
ಬೆಂಗಳೂರಿನ ಲಾಲ್ ಬಾಗ್ ರಸ್ತೆಯ ಊರ್ವಶಿ ಚಿತ್ರ ಮಂದಿರ ಮೊದಲ್ಗೊಂಡು ಮಾಗಡಿ ರಸ್ತೆಯ ಅಂಜನ್, ಆಗರದ ತಿರುಮಲ, ಜೆ.ಪಿ. ನಗರದ ಸಿದ್ದೇಶ್ವರ, ಎಂಜಿ ರಸ್ತೆಯ ಶಂಕರ್ ನಾಗ್, ಸ್ಯಾಂಕಿ ರಸ್ತೆಯ ಕಾವೇರಿ, ಆರ್.ಟಿ. ನಗರದ ರಾಧಾಕೃಷ್ಣ ಸೇರಿದಂತೆ ಬೆಂಗಳೂರಿನ ಆಚೆಯೂ ಅಂದರೆ ಕೋಲಾರ, ಚಿಕ್ಕಬಳ್ಳಾಪುರ, ಮುಳುಬಾಗಿಲು, ದೊಡ್ಡ ಬಳ್ಳಾಪುರ, ಮೈಸೂರು, ವಿಜಿಪುರ, ದಾವಣಗೆರೆ, ಬಳ್ಳಾರಿ, ಹೊಸಪೇಟೆ, ಸಿರಗುಪ್ಪ ಸೇರಿದಂತೆ ತೆಲುಗು ಪ್ರಭಾವ ಇರುವ ರಾಜ್ಯದ ೩೦ ಚಿತ್ರಮಂದಿರಗಳಲ್ಲಿ ಟ್ರೇಲರ್ ಲಾಂಚ್‌ಗೆ ಚಿತ್ರದ ವಿತರಣೆಯ ಹಕ್ಕು ಪಡೆದಿರುವ ಕೆವಿಎನ್ ಸಂಸ್ಥೆ ಪ್ಲಾನ್ ಹಾಕಿಕೊಂಡಿದೆ.
ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನೇ ಒಂದು ಹಬ್ಬದ ರೀತಿಯಲ್ಲಿ ಗ್ರಾಂಡ್ ಆಗಿ ಲಾಂಚ್ ಮಾಡಲು ಮುಂದಾಗಿರುವ ಚಿತ್ರ ತಂಡ ಚಿತ್ರ ರಿಲೀಸ್ ಅನ್ನು ಇನ್ನೇಗೆ ಸಂಭ್ರಮಿಸಬಹುದು ಅನ್ನೋದು ಸಹಜವಾಗಿಯೇ ಭಾರೀ ಕುತೂಹಲ ಹುಟ್ಟಿಸಿದೆ. ಇನ್ನು ಆರ್ ಆರ್ ಆರ್ ಟ್ರೇಲರ್ ಲಾಂಚ್‌ಗೆ ಈ ಮುಂಚೆಯೇ ಅಂದರೆ ಡಿಸೆಂಬರ್ 4ಕ್ಕೆ ದಿನ ನಿಗದಿ ಆಗಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಅಂದೇ ಈ ಟ್ರೇಲರ್ ರಿವೀಲ್ ಆಗಲಿತ್ತು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಅದು ಪೋಸ್ಟ್ ಪೋನ್ಡ್ ಆಗಿತ್ತು.
ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಪಕ್ಕದಲ್ಲಿ ನಿಲ್ಲುವ ಅವಕಾಶ ಮತ್ತು ಶಿವಣ್ಣನ ಜೊತೆಯಾಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವ ಅದೃಷ್ಟ ಸರಿಸುಮಾರು 124 ಜನ ನಾಯಕಿಯರಿಗೆ ಸಿಕ್ಕಿದೆ. ಇದೀಗ 125ನೇ ನಟಿಮಣಿಯ ಸರದಿ. ಕರುನಾಡ ಕಿಂಗ್ ಶಿವರಾಜ್‌ಕುಮಾರ್ ಅಭಿನಯದ `125’ನೇ ಚಿತ್ರಕ್ಕೆ ನಾಯಕಿಯಾಗಿ ಸೆಂಚುರಿಸ್ಟಾರ್ ಜೊತೆ ಬಿಗ್‌ಸ್ಕ್ರೀನ್‌ನಲ್ಲಿ ಮೆರವಣಿಗೆ ಹೊರಡುವ ಲಕ್ಕಿ ಚಾನ್ಸ್ ಈ ಸಲ ಮಗಳು ಜಾನಕಿಗೆ ಸಿಕ್ಕಿದೆ….
ಮಗಳು ಜಾನಕಿ' ಯಾರು ಅಂತ ನಮ್ಮ ಕರುನಾಡ ಮಂದಿಗೆ ಹೊಸದಾಗಿ ಹೇಳಬೇಕಿಲ್ಲ. ಅದರಲ್ಲೂ ಸೀರಿಯಲ್ ಪ್ರಿಯರಿಗೆ ಮಗಳು ಜಾನಕಿ’ಯನ್ನು ಇಂಟ್ರುಡ್ಯೂಸ್ ಮಾಡಿಕೊಡಬೇಕಾಗಿಲ್ಲ. ಯಾಕಂದ್ರೆ, ದಿನಪ್ರತಿ ಅವರವರ ಮನೆಯ ಟಿವಿ ಪರದೆಯ ಮೇಲೆ ಮಗಳು ಜಾನಕಿ'ಯನ್ನು ಕಣ್ತುಂಬಿಕೊಂಡಿರ‍್ತಾರೆ. ವಕೀಲೆಯಾಗಿ ವಾದ ಮಾಡೋದನ್ನು ನೋಡಿ ಭೇಷ್‌ಗಿರಿ ಕೊಟ್ಟರ‍್ತಾರೆ. ಆದರೆ, ಸಿನಿಮಾ ಪ್ರಿಯರಿಗೆ ಮಗಳು ಜಾನಕಿ’ ಪರಿಚಯ ಅಷ್ಟಾಗಿರಲ್ಲ ಹೀಗಾಗಿ, ಶಿವಣ್ಣನ ಸಿನಿಮಾಗೆ ಆಯ್ಕೆಯಾಗಿರುವ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಕಿರುತೆರೆ'ಯಲ್ಲಿ ಕಾಣಿಸಿಕೊಂಡು ಕರುನಾಡಿನ ಮನೆಮಾತಾಗಿರುವ ಮಗಳು ಜಾನಕಿ’ ಸೀರಿಯಲ್ ಪಾತ್ರಧಾರಿ ಗಾನವಿ ಲಕ್ಷ್ಮಣ್ ಗೆ ಬೆಳ್ಳಿತೆರೆಯಲ್ಲಿ ಮಿಂಚುವ ಅವಕಾಶಗಳು ಸಿಗುತ್ತಿವೆ. ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ನಟನೆಯ ಹೀರೋ' ಚಿತ್ರಕ್ಕೆ ನಾಯಕಿಯಾಗಿರುವ ಗಾನವಿ, ಈಗ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾಗೆ ಹೀರೋಯಿನ್ನಾಗಿದ್ದಾರೆ. ಶಿವಣ್ಣನ ವೃತ್ತಿ ಬದುಕಿನ ಮೈಲ್‌ಸ್ಟೋನ್ ಸಿನಿಮಾ ಆಗಲಿರುವ 125ನೇ `ವೇದ’ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಗಾನವಿ ಅದೃಷ್ಟ ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.
ಅಂದ್ಹಾಗೇ, ‘ವೇದ ‘ ಹ್ಯಾಟ್ರಿಕ್ ಕಾಂಬಿನೇಷನ್ ನಲ್ಲಿ ಬರ್ತಿರೋ ನಾಲ್ಕನೇ ಸಿನಿಮಾ. ನಿರ್ದೇಶಕ. ಎ ಹರ್ಷ ಹಾಗೂ ಶಿವರಾಜ್ ಕುಮಾರ್ ನಾಲ್ಕನೇ ಸಲ ಒಂದಾಗಿದ್ದಾರೆ. ವಜ್ರಕಾಯ, ಭಜರಂಗಿ ಹಾಗೂ ಭಜರಂಗಿ 2 ಚಿತ್ರದ ನಂತರ ‘ ವೇದ’ ಸಿನಿಮಾದ ಮೂಲಕ ಹ್ಯಾಟ್ರಿಕ್ ಜೋಡಿ ಮತ್ತೆ ಜೊತೆಯಾಗಿದೆ. ಈ ಡೆಡ್ಲಿ ಕಾಂಬೋಗೆ ಶಿವರಾಜ್ ಕುಮಾರ್ ಪತ್ನಿ ಗೀತಕ್ಕ ಬಂಡವಾಳ ಹೂಡಿದ್ದಾರೆ.
ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸಿಷನ್ ಚಿತ್ರಕ್ಕಿದ್ದು, ಶೋ ಮಸ್ಟ್ ಗೋ ಆನ್ ಎನ್ನುವಂತೆ ಅಪ್ಪು ಅಗಲಿಕೆಯ ನೋವುನ್ನು ನುಂಗಿಕೊಂಡು ಸಿನಿಮಾಗೆ ಮರಳಬೇಕಿದೆ ಶಿವಣ್ಣ. ಸಹೋದರನ ಸಿನಿಮಾ ಪ್ರೀತಿಯನ್ನು ಕಣ್ಮುಂದೆ ತಂದುಕೊಂಡು ಶಿವಣ್ಣ ಕ್ಯಾಮರಾ ಎದುರಿಸಬೇಕಿದೆ. ಗೀತಾ ಪಿಕ್ಚರ್ ಬ್ಯಾನರ್ ಅಡಿಯ ಚೊಚ್ಚಲ ಚಿತ್ರ ಇದಾಗಿದ್ದು, ಅದ್ದೂರಿಯಾಗಿ ನಿರ್ಮಾಣ ಮಾಡುವ ಕನಸು ಗೀತಕ್ಕ ಅವ್ರದ್ದು.
ಸಿನಿಮಾ ಜಗತ್ತಿನಲ್ಲಿ ಸಾವಿರಾರು ಹೀರೋಗಳಿದ್ದಾರೆ. ಮೂವೀ ಎನ್ನುವ ಮಾಯ ಲೋಕದಲ್ಲಿ ಸ್ಟಾರ್ ಪಟ್ಟಕ್ಕೇರಿ ರಾರಾಜಿಸುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಸ್ವಂತ ಬ್ರ್ಯಾಂಡ್ ಕಟ್ಟಿ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿ ಸಿನಿಮಾ ಸಾಮ್ರಾಜ್ಯದಲ್ಲಿ ಅಧಿಪತಿಗಳಾಗಿ ಮೆರೆಯುತ್ತಿದ್ದಾರೆ. ಇವರುಗಳ ಪೈಕಿ ಕೆಲವರು ಬಾರ್ಡರ್ ಹಾಕಿಕೊಂಡಿದ್ದಾರೆ. ಇನ್ನೂ ಕೆಲವರು ಬಾರ್ಡರ್ ಕ್ರಾಸ್ ಮಾಡಿದ್ದಾರೆ. ಆದರೆ, ಈ ಎರಡು ಕ್ಯಾಟಗರಿಯ ಸ್ಟಾರ್ಸ್ ಗಳಿಗೆ ಬಾರ್ಡರ್ ಆಚೆ ಫ್ಯಾನ್ಸ್ ಇದ್ದಾರೆ ಅನ್ನೋದು ಮಾತ್ರ ಸತ್ಯ. ಅಷ್ಟಕ್ಕೂ, ನಾವ್ ಈಗ ನಿಮಗೆ ಹೇಳೋದಕ್ಕೆ ಹೊರಟಿರುವುದು ಹೊಸ ಹೀರೋ ಬಗ್ಗೆ. ಅಲ್ಲಾರೀ, ವಾರಕ್ಕೊಬ್ಬರು ಹೊಸ ಹೀರೋ ಮಾಯಲೋಕಕ್ಕೆ ಪರಿಚಯವಾಗ್ತಾರೆ. ಅಷ್ಟಕ್ಕೆ ಇಷ್ಟು ಬಿಲ್ಡಪ್ಪಾ ಅಂತ ಗೊಣಗಬೇಡಿ. ಯಾಕಂದ್ರೆ ಇಡೀ ಜಗತ್ತಿಗೆ ಸಿಗಲಿರುವ ಹೊಸ ಹೀರೋ ಬಗ್ಗೆ ನಿಮಗೆ ಹೇಳ ಬಯಸಿದ್ದೇವೆ…
ಹೌದು,24-02-2022 ರಂದು ಇಡೀ ವಿಶ್ವಕ್ಕೆ ಹೊಸ ಹೀರೋ ಸಿಗುತ್ತಿದ್ದಾರೆ. ಹಾಗಾದ್ರೆ ಯಾರವರು ? ಯಾವ ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ? ಇಡೀ ಜಗತ್ತಿಗೆ ಹೀರೋ ಆಗೋದು ಅಂದ್ರೆ ಆ ನಾಯಕ ಹೆಂಗಿರಬಹುದು? ಆ ನಟನ ಹಿನ್ನಲೆ ಏನು ? ಹೀಗೆ ಒಂದಿಷ್ಟು ಪ್ರಶ್ನೆಗಳು ಉದ್ಭವಿಸೋದು ಸಹಜ. ಈ ಎಲ್ಲಾ ಪ್ರಶ್ನೆಗೆ ಉತ್ತರ ಕೊಡಬೇಕು ಅಂದರೆ ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಸರನ್ನು ಹೇಳಲೆಬೇಕು. ಹಾಗೆಯೇ, ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಲೇಬೇಕು.
‘ವಿಕ್ರಾಂತ್ ರೋಣ ‘ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ. ಅನುಪ್ ಭಂಡಾರಿ ನಿರ್ದೇಶನದ- ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕಾಗಿ ಪ್ಯಾನ್ ಇಂಡಿಯಾನೇ ಎದುರು ನೋಡ್ತಿದೆ. 3ಡಿ ಟೆಕ್ನಾಲಜಿಯಲ್ಲಿ ಅದ್ದೂರಿಯಾಗಿ ತಯ್ಯಾರಾಗಿರೋ ವಿಕ್ರಾಂತ್ ರೋಣನಿಗಾಗಿ ಬಾದ್ ಷಾ ಫ್ಯಾನ್ಸ್ ಮಾತ್ರವಲ್ಲ ಬೆಳ್ಳಿತೆರೆಯೂ ಕೂತೂಹಲ ವ್ಯಕ್ತಪಡಿಸುತ್ತಿದೆ. ಹೀಗಾಗಿ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. 2022 ಫೆಬ್ರವರಿ 24 ರಂದು ವಿಕ್ರಾಂತ್ ರೋಣ ಚಿತ್ರ ಬಹುಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗ್ತಿದೆ. ಈ ಬಡಾ ಖಬರ್ ನ ರಿವೀಲ್ ಮಾಡಿದ ಫಿಲ್ಮ್ ಟೀಮ್ ಇಡೀ ಜಗತ್ತಿಗೆ ಹೊಸ ಹೀರೋ ಸಿಗ್ತಾನೆ ಫೆಬ್ರವರಿ 24ಕ್ಕೆ ಎಂದು ಸಪ್ರೈಸ್ ಕೊಟ್ಟಿದೆ. ಆ ಹೊಸ ಹೀರೋ ಯಾರು ? ಈ ಕ್ಯೂರಿಯಾಸಿಟಿಗೆ ಉತ್ತರ ‘ವಿಕ್ರಾಂತ್ ರೋಣ’ ಪಾತ್ರಧಾರಿ ಕಿಚ್ಚ ಸುದೀಪ್.
ವಾಟ್?, ಕಿಚ್ಚ ಹೊಸ ಹೀರೋ ಹೆಂಗ್ ಆಗ್ತಾರ್ರೀ. ಅವರು ಪ್ಯಾನ್ ಇಂಡಿಯಾ ಸ್ಟಾರ್. ಸುದೀಪ್ ಅಂದ್ರೆ ಇಡೀ ಜಗತ್ತಿಗೆ ಗೊತ್ತು. ಹೀಗಂತ ಕಿಚ್ಚನ ಫ್ಯಾನ್ಸ್ ಎದ್ದು ನಿಲ್ತಾರೆ. ಅಪ್ ಕೋರ್ಸ್ ಎದ್ದು ನಿಲ್ಲಬೇಕು. ನಮಗೂ ಗೊತ್ತು ಕಿಚ್ಚ ಸುದೀಪ್ ಅಂದ್ರೆ ಇಡೀ ಜಗತ್ತಿಗೆ ಗೊತ್ತಿದೆ ಅಂತ.ಇನ್ನೂ, ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್ ಅಂತ ಬೌಂಡರಿ ಹಾಕಿಕೊಳ್ಳದೇ ಎಲ್ಲಾ ಇಂಡಸ್ಟ್ರಿಗೂ ಲಗ್ಗೆ ಇಟ್ಟು ಬ್ಯಾಂಡ್ ಬಜಾಯಿಸಿರೋ ಕಿಚ್ಚ ಎಲ್ಲಾ ರಂಗದವರಿಗೂ ಮಾಣಿಕ್ಯನೇ ಆಗಿದ್ದಾರೆ.
ಈಗ ‘ವಿಕ್ರಾಂತ್ ರೋಣ’ ಸಿನಿಮಾದ ನಾಯಕನಾಗಿ ಫೆಬ್ರವರಿ 24 ರಂದು ಹೊಸ ಪಾತ್ರದ ಮೂಲಕ ಇಡೀ ಜಗತ್ತಿಗೆ ನಯಾ ರೂಪದಲ್ಲಿ ಪರಿಚಯವಾಗ್ತಿದ್ದಾರೆ. ಫ್ಯಾಂಟಸಿ- ಆಕ್ಷನ್- ಅಡ್ವೆಂಚರ್- ಥ್ರಿಲ್ಲರ್ ಕಥಾಹಂದರವುಳ್ಳ ‘ ವಿಕ್ರಾಂತ್ ರೋಣ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಿಚ್ಚು ಹಚ್ಚಲಿ ದ್ದಾರೆ. ಬಚ್ಚನ್ ಗೆ ಜಾಕ್ ಲೀನ್ ಜೋಡಿಯಾಗಿದ್ದು ಬಿಟೌನ್ ಗಲ್ಲಿಯಲ್ಲೂ ವಿಕ್ರಾಂತ್ ರೋಣ ಮೇಲೆ ಕೂತೂಹಲ ಮೂಡಿದೆ.
ವೀರಕಪುತ್ರ ಶ್ರೀನಿವಾಸ್ ಅಂದಾಕ್ಷಣ ಥಟ್ಟನೆ ನೆನಪಾಗೋದೆ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಹೌದು, ವಿಷ್ಣುವರ್ಧನ್ ಅವರ ಕುರಿತ ಅನೇಕ ಉಪಯುಕ್ತ ಕೆಲಸ ಮಾಡಿದವರು. ದಾದಾ ಅಭಿಮಾನಿಗಳನ್ನು ತಮ್ಮೊಟ್ಟಿಗೆ ಕಟ್ಟಿಕೊಂಡು ಹಲವು ವರ್ಷಗಳಿಂದಲೂ ಜನಪರ ಕೆಲಸ ಮಾಡಿದವರು. ಈಗಲೂ ಅದೇ ಕಾಯಕದಲ್ಲಿದ್ದಾರೆ. ಇನ್ನೂ ಒಂದಷ್ಟು ಹೊಸ ಹೆಜ್ಜೆ ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಹಲವು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ. ವಿಷ್ಣುವರ್ಧನ್ ಹೆಸರಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋ ಡೀಟೆಲ್ಸ್ ಇಲ್ಲಿದೆ…
ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದ ಡಾ.ವಿಷ್ಣು ಸೇನಾ ಸಮಿತಿಯ ಸಭೆ ಇತ್ತೀಚೆಗೆ ನಡೆಯಿತು. ಕಳೆದ ಐದು ವರ್ಷದಿಂದ ಪ್ರತಿವರ್ಷವೂ ಸಭೆ ಸೇರಿ ಹಿಂದಿನ ಸಾಲಿನ ಚಟುವಟಿಕೆಗಳ ಪರಾಮರ್ಶೆ ಮತ್ತು ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತವಾಗುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ಹಲವು ಯೋಜನೆಗಳನ್ನು ಮುಂದಿನ ವರ್ಷದಲ್ಲಿ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಸಮಿತಿ ಬಂದಿದೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್/ಕೆಎಎಸ್ ತರಬೇತಿ ಒದಗಿಸುವ ಸಲುವಾಗಿ ಡಾ.ವಿಷ್ಣುವರ್ಧನ ಕೋಚಿಂಗ್ ಅಕಾಡೆಮಿ ಸ್ಥಾಪಿಸುವುದು. ಡಾ.ವಿಷ್ಣುವರ್ಧನ ಅವರ ಬದುಕು ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಡೆಗೆ ವಿಷ್ಣುವರ್ಧನ ಎಂಬ ಯೋಜನೆ ರೂಪಿಸುವುದು. ಆ ಯೋಜನೆಯಂತೆ ರಾಜ್ಯದ ಎಲ್ಲಾ ಪ್ರಾಥಮಿಕ , ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಾ.ವಿಷ್ಣುವರ್ಧನ ಬದುಕು ಸಾಧನೆಗಳ ಕುರಿತಾದ ಕಿರುಹೊತ್ತಿಗೆಯನ್ನು ವಿತರಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದಾದರೂ ಪ್ರಮುಖ ರಸ್ತೆಗೆ ಅಥವಾ ಕಲಾಭವನಕ್ಕೆ ಡಾ.ವಿಷ್ಣುವರ್ಧನ ಅವರ ಹೆಸರನ್ನು ಇಡಬೇಕೆಂದು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುವುದು. ಡಾ.ವಿಷ್ಣು ಕುಟುಂಬದ ಜೊತೆಗಿನ ಬಿನ್ನಾಭಿಪ್ರಾಯ ಮರೆತು ಅವರ ಎಲ್ಲಾ ವಿಚಾರ ಮತ್ತು ಯೋಜನೆಗಳಿಗೆ ಜೊತೆಯಾಗಿ ನಿಲ್ಲುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಆನಂದ್ ರಾಚ್, ಮಲ್ಲಿಕಾರ್ಜುನ್, ಯದುನಂದನ್, ರಘು ಎಸ್, ವಿಷ್ಣುಪ್ರಕಾಶ್, ರಾಧಾ ಗಂಗಾಧರ್, ಕೆ.ವಿನಯ್ ಸೇರಿದಂತೆ ವಿಷ್ಣು ಅಭಿಮಾನಿಗಳು ಇದ್ದರು.
ಡಾ. ಪ್ರಗ್ಬಲ್ ನಿರ್ದೇಶನದ ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ…
ಭಾರತದಲ್ಲಿ ಇದೇ ಮೊದಲ ಬಾರಿಗೆ ಮಡ್ ರೇಸ್ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ. ಮಲೆಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ ಡಿಸೆಂಬರ್ 10ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.
ಮ್ಯಾನೇಜ್ಮೆಂಟ್ ನಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಡಾ. ಪ್ರಗ್ಬಲ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ನನ್ನದು ಇದು ಮೊದಲ ನಿರ್ದೇಶನದ ಚಿತ್ರ. ಮಡ್ ರೇಸ್ ಕಥೆಯಿಟ್ಟುಕೊಂಡು ಭಾರತದಲ್ಲಿ ತಯಾರಾಗಿರುವ ಚೊಚ್ಚಲ ಚಿತ್ರವಿದು. ಈ ಚಿತ್ರ ನಿರ್ಮಾಣಕ್ಕೆ ಐದು ವರ್ಷಗಳ ಸಮಯ ಹಿಡಿದಿದೆ. ಒಂದು ವರ್ಷ ಲೊಕೇಶನ್ ಹುಡುಕಾಟ ಮಾಡಿ, ಕೊನೆಗೆ ತಮಿಳುನಾಡು ಹಾಗೂ ಕೇರಳ ಗಡಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ನಿರ್ಮಾಣವಾಗಿರುವ ಸಿನಿಮಾ ಇದು. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ರವಿ ಅವರು ಬರೀ ಸಂಗೀತಕಷ್ಚೇ ಸೀಮಿತವಾಗದೆ, ನನ್ನ ಬೆನ್ನ ಹಿಂದೆ ನಿಂತು, ನನಗೆ ಮಾರ್ಗದರ್ಶನ ಮಾಡಿದ್ದಾರೆ. ನೂತನ ಕಲಾವಿದರ ಹಾಗೂ ನುರಿತ ತಂತ್ರಜ್ಞರ ಸಮಾಗಮದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ಚಿತ್ರ ನಿರ್ದೇಶಕ ಡಾ.ಪ್ರಗ್ಬಲ್.
ನನಗೆ ಛಾಯಾಗ್ರಹಕ ರತೀಶ್ ಅವರು ಫೋನ್ ಮಾಡಿ ಈ ರೀತಿಯ ಚಿತ್ರವೊಂದು ತಯಾರಾಗುತ್ತಿದೆ. ನೀವೇ ಸಂಗೀತ ಮಾಡಬೇಕೆಂದು ಕೇಳಿದರು. ಸ್ವಲ್ಪ ಬ್ಯುಸಿ ಇದ್ದುದರಿಂದ ನಾನು ಏನು ಹೇಳಿರಲಿಲ್ಲ. ಕೆಲವು ದಿನಗಳ ನಂತರ ನಾನು ಚಿತ್ರೀಕರಣ ನಡೆಯುವ ಸ್ಥಳಕ್ಕೆ ತೆರಳಿದೆ. ಅಲ್ಲಿ ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕಾರ್ಯನಿರ್ವಹಿಸುತ್ತಿದ್ದ ಶೈಲಿ ನೋಡಿ ಬೆರಗಾದೆ. ಅಬ್ಬಾ ಲಕ್ಷಾಂತರ ಮೌಲ್ಯದ ವಾಹನಗಳು ನನ್ನ ಕಣ್ಣ ಮುಂದೆ ಪ್ರಪಾತಕ್ಕೆ ಬೀಳುತಿತ್ತು. ಚಿಕ್ಕ ಬಜೆಟ್ ನ ಸಿನಿಮಾ ಎಂದು ಆರಂಭವಾಗಿ, ಚಿತ್ರೀಕರಣ ಸಾಗುತಾ ಅಪಾರವೆಚ್ಚದ ಅದ್ದೂರಿ ಸಿನಿಮಾವಾಗಿ “ಮಡ್ಡಿ” ನಿರ್ಮಾಣವಾಗಿದೆ. ನಾನು ಈ ಚಿತ್ರಕ್ಕೆ ಸಂಗೀತ ನೀಡಲು ಸುಮಾರು ಎರಡುವರ್ಷಗಳ ಅವಧಿ ಹಿಡಿಸಿದೆ.
ಸಂಗೀತ ನಿರ್ದೇಶಕ ಹಾಗೂ ಸಂಕಲನಕಾರ ಗಂಡ – ಹೆಂಡತಿ ಇದ್ದ ಹಾಗೆ. ಅವರಿಬ್ಬರ ನಡುವಿನ ಹೊಂದಾಣಿಕೆ ಮುಖ್ಯ. ಇದು ಮೂರು ರಾಜ್ಯಗಳ ಸಿನಿಮಾ ಎನ್ನಬಹುದು ಏಕೆಂದರೆ ನಾನು ಕರ್ನಾಟಕದವನು, ನಿರ್ದೇಶಕರು ಕೇರಳದವರು ಹಾಗೂ ಸಂಕಲನಕಾರರು ತಮಿಳುನಾಡಿನವರು. ಒಟ್ಟಿನಲ್ಲಿ “ಮಡ್ಡಿ” ಉತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ಟ್ರೇಲರ್ ಇರುವ ಹಾಗೆ ಇಡೀ ಚಿತ್ರ ಕೂಡ ಹಾಗೆ ಇರುತ್ತದೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಸಂಗೀತ ನಿರ್ದೇಶಕ ರವಿ ಬಸ್ರೂರ್.
ಕೇರಳ ಹಾಗೂ ತಮಿಳುನಾಡು ಹೊರತುಪಡಿಸಿ ದೇಶಾದ್ಯಂತ. ಸುಮಾರು 400 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ನಿರ್ದೇಶಕರು ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾರೆ ಒಳ್ಳೆಯದಾಗಲಿ ಎಂದರು ವಿತರಕ ಭಾಷಾ.
ಪ್ರೇಮಕೃಷ್ಣ ದಾಸ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರಗ್ಬಲ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ, ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ರನ್ ರವಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಯವನ್ ಕೃಷ್ಣ, ರಿಧಾನ್ ಕೃಷ್ಣ, ಅಮಿತ್ ಶಿವದಾಸ್, ಅನುಶಾ ಸುರೇಶ್, ರೆಂಜಿ ಪಣಿಕರ್, ಹರೀಶ್ ಪೆರಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಆರು ವರ್ಷ ಹತ್ತಾರು ಸಿನಿಮಾ, ಆದರೆ ಇದೇ ಮೊದಲು ನಾನೀಗ ನಿಮ್ಮಮುಂದೆ ಹೀರೋ….ಪ್ರೇಕ್ಷಕರಲ್ಲಿ ಆಶೀರ್ವಾದ ಬಯಸಿ ಹೀಗೆ ಹೇಳುವಾಗ ಯುವ ನಟ ಅಜಿತ್ ಜೈರಾಜ್ ಕೊಂಚ ಭಾವುಕರಾದರು. ಅದು ಸಹಜವೂ ಹೌದು. ಆರು ವರ್ಷದ ಪಯಣದಲ್ಲಿ ಸಿಹಿಗಿಂತ ಕಹಿ ಅನುಭವವನ್ನೇ ಹೆಚ್ಚು ಹೊತ್ತುಕೊಂಡು ಕೊನೆಗೊ ಒಂದು ಸಾಹಸದೊಂದಿಗೆ ಹೀರೋ ಆದ ಕಷ್ಟ ಸಾಹಸವನ್ನು ನೆನಪಿಸಿಕೊಂಡಾಗ ಎಂತಹವರಿಗೂ ಭಾವುಕತೆ ತುಂಬಿಕೊಳ್ಳುವುದು ಅಷ್ಟೇ ಸಹಜ. ನಟ ಅಜಿತ್ ಜಯರಾಜ್ ಕೂಡ ಪ್ರೇಕ್ಷಕರಾದ ನಿಮ್ಮಗಳ ಆಶೀರ್ವಾದ ಬಯಸಿ, ಭಾವುಕರಾಗಿದ್ದೆಲ್ಲಿ ಅಂತಹದ್ದೇನು ಅಚ್ಚರಿಯೇ ಇಲ್ಲ. ಅಂದ ಹಾಗೆ ಅವರು ಈ ಭಾವುಕ ಮಾತುಗಳೊಂದಿಗೆ ತಮ್ಮ ಸಿನಿ ಪಯಣದ ಹೊಸ ಹಾದಿಯನ್ನು ಬಿಚ್ಚಿಟ್ಟಿದ್ದು ‘ ರೈಮ್ಸ್ ‘ ಚಿತ್ರದ ಕುರಿತು.
ಡಾನ್ ಜೈರಾಜ್ ಪುತ್ರ ಅಜಿತ್ ಜೈರಾಜ್ ಅವರು ನಾಯಕನಾಗಿ ಆಭಿನಯಿಸಿರೋ ಚೊಚ್ಚಲ ಚಿತ್ರ ‘ ರೈಮ್ಸ್ ‘ಡಿಸೆಂಬರ್ ೧೦ ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಸಿಂಗಲ್ ಸ್ಕ್ರೀನ್ ಗೆ ಆದ್ಯತೆ ನೀಡದೆ ಪರಿಸ್ಥಿತಿಗೆ ತಕ್ಕಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ ಈ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಎಲ್ಲವೂ ತಂದುಕೊಂಡಂತೆಯೇ ಆಗಿದ್ದರೆ, ಇಷ್ಟೊತ್ತಿಗೆ ಈ ಚಿತ್ರ ರಿಲೀಸ್ ಆಗಿ ಹಳೇ ಮಾತೇ ಆಗುತ್ತಿತ್ತೆನೋ, ಆದರೆ ಕೊರೋನಾ ಕಾರಣಕ್ಕೆ ಚಿತ್ರ ತಂಡ. ಎರಡು ವರ್ಷಗಳ ನಂತರ ತೆರೆ ಮೇಲೆ ರೈಮ್ಸ್ ಕೇಳಿಸಲು ಸಜ್ಜಾಗಿದೆ. ರಿಲೀಸ್ ಸಿದ್ದತೆ ಜತೆಗೆ ತಮ್ಮ ಸಿನಿಮಾವನ್ನು ಪ್ರೇಕ್ಷಕರು ಯಾಕೆ ನೋಡಬೇಕು ಅಂತ ಹೇಳಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದ ಸಂದರ್ಭ ದಲ್ಲಿ ಜನಾಶಯ ಪ್ರಭಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ನಟ ಅಜಿತ್ ಜಯರಾಜ್ ತಮ್ಮ ಸಿನಿಬದುಕಿನ ಕಥೆ ಬಿಚ್ಚಿಟ್ಟರು.
‘ ಸರ್ ನಾನೀಗ ಸಿನಿಮಾ ರಂಗಕ್ಕೆ ಬಂದು ಇಲ್ಲಿಗೆ ಆರು ವರ್ಷ. ಒಬ್ಬ ನಟನ ಪಾಲಿಗೆ ಇದು ದೊಡ್ಡ ಹಾದಿ. ಈಹಾದಿಯಲ್ಲೀಗ ಹತ್ತಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇನೆ. ಅದರೆ ಅವೆಲ್ಲವೂ ಸಣ್ಣ ಸಣ್ಣ ಪಾತ್ರಗಳು. ಅಲ್ಲಿಂದೀಗ ಹೀರೋ ಆಗಿ ಇದೇ ಮೊದಲು ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ಹೀರೊ ಆಗಿ ಮೊದಲ ಸಿನಿಮಾವಾದರೂ, ಆರು ವರ್ಷಗಳ ನಟನೆಯ ಅನುಭವದ ಮೂಲಕವೇ ರೈಮ್ಸ್ ನಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ನಟನೆ ಹೇಗಿದೆ ಎನ್ನುವುದಕದಕ್ಕಿಂತ ಸಿನಿಮಾದ ಕಥೆ ಇಲ್ಲಿ ಹೀರೋ. ನಾನು ನಾಯಕನಾಗಿ ನಟಿಸಲು ಮನಸುಮಾಡಿದ್ದೇ ಇದೇ ಕಾರಣಕ್ಕೆ. ಕನ್ನಡಕ್ಕೆ ಈಕಥೆ ತೀರಾ ಹೊಸದು . ನಾರ್ಮಲ್ ಪ್ಯಾಟ್ರನ್ ದಾಟಿ, ಹೊಸ ರೀತಿಯ ಅನುಭವವನ್ನು ಕಟ್ಟಿಕೊಡಲಿದೆ ಈ ಸಿನಿಮಾ.ಅದೇ ಕಾರಣಕ್ಕೆ ಈ ಸಿನಿಮಾ ಗೆಲ್ಲುತ್ತೆ ಎನ್ನುವ ದೊಡ್ಡ ವಿಶ್ವಾಸವೂ ನನಗಿದೆ ಎಂದರು ಅಜಿತ್ ಜಯರಾಜ್.
ಅಲ್ಲಿಂದ ಅಜಿತ್ ಅವರ ಮಾತು ಚಿತ್ರದಲ್ಲಿನ ತಮ್ಮ ಪಾತ್ರದ ಕಡೆ ಹೊರಳಿತು.’ ನಾನಿಲ್ಲಿ ಒಬ್ಬ ಇನ್ವೇಸ್ಟಿಗೇಟಿವ್ ಪೊಲೀಸ್ ಆಫೀಸರ್. ಕೊಲೆ ಪ್ರಕರಣಗಳನ್ನು ಭೇದಿಸಲು ಆತ ಮುಂದಾಗುತ್ತಾನೆ. ಇಲ್ಲಿ ತನಿಖೆಯ ರೀತಿಯೇ ವಿಭಿನ್ನವಾಗಿದೆ. ನಾರ್ಮಲ್ ರೀತಿಯ ತನಿಖೆಯ ಶೈಲಿಯೇ ಇಲ್ಲಿ ಕಾಣದು. ಕೊಲೆಗಾರನಿಗೂ ಒಂದು ರೈಮ್ಸ್ ಗೂ ಇರುವ ನಂಟಿನ ಮೇಲೆ ಕೊಲೆ ಪ್ರಕರಣಗಳ ಹಿಂದಿನ ವ್ಯಕ್ತಿಯನ್ನು ಹಿಡಿಯಲಾಗುತ್ತದೆ . ಈ ಪಾತ್ರಕ್ಕೆ ನಾನು ಒಪ್ಪಿಕೊಂಡಾಗ ಪೊಲೀಸ್ ಕೆಲಸದಲ್ಲಿರುವ ನನ್ನದೇ ಕೆಲವು ಗೆಳೆಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.ಹಾಗೆಯೇ ತನಿಖೆಯ ವಿಧಾನಗಳ ಬಗ್ಗೆಸ್ಟಡಿಮಾಡಿದ್ದೇನೆ. ಹಾಗೆಯೇ ಒಂದಷ್ಟು ರಿಹರ್ಸಲ್ ಮೂಲಕವೇ ಈಪಾತ್ರ ನಿಭಾಯಿಸಿರುವೆ. ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ನಂಬಿಕೆನನಗಿದೆ ಎನ್ನುತ್ತಾರೆ ನಟ ಅಜಿತ್ ಜೈರಾಜ್.
ಜ್ಞಾನಶೇಖರ್, ರವಿಕುಮಾರ್ ಹಾಗೂ ರಮೇಶ್ ನಿರ್ಮಾಣದ ಈ ಚಿತ್ರಕ್ಕೆ ಯುವ ಪ್ರತಿಭೆ ಅಜಿತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಶುಂಭ ಪುಂಜಾ, ಸುಷ್ಮಾ ನಾಯರ್ ಇಲ್ಲಿ ನಾಯಕಿಯರು. ಹಾಗೆಯೇ ಹೊಸಬರ ದೊಡ್ಡ ತಂಡವೇ ಈ ಸಿನಿಮಾ ದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾ ಹಂದರದ ಈ ಚಿತ್ರವು ಈಗಾಗಲೇ ಟೀಸರ್, ಟ್ರೇಲರ್ ಹಾಗೂ ವಿಭಿನ್ನ ಶೈಲಿಯ ಪೋಸ್ಟರ್‌ಮೂಲಕವೂ ಕುತೂಹಲಮೂಡಿಸಿದೆ. ಇನ್ನೊಂದು ವಿಶೇಷ ಅಂದ್ರೆ ಕನ್ನಡದಲ್ಲಿ ಯೇ ಇದೇ ಮೊದಲು ಟ್ರೇಲರ್ ಅನ್ನು ತ್ರಿ ಡಿ ಮೂಲಕಲಾಂಚ್ ಮಾಡಿದೆ. ಹೊಸಬರ ಈ ಪ್ರಯತ್ನ ಫಲಿಸಬೇಕಾದರೆ ಪ್ರೇಕ್ಷಕರ ಬೆಂಬಲ ಅಗತ್ಯವೇ ಹೌದು.