ಹ್ಯಾಟ್ರಿಕ್ ಹೀರೋ ಪಕ್ಕ ನಿಂತಳು ಮಗಳು ಜಾನಕಿ – ಶಿವಣ್ಣನ 125ನೇ ಚಿತ್ರಕ್ಕೆ ಗಾನವಿ ನಾಯಕಿ !

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಪಕ್ಕದಲ್ಲಿ ನಿಲ್ಲುವ ಅವಕಾಶ ಮತ್ತು ಶಿವಣ್ಣನ ಜೊತೆಯಾಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವ ಅದೃಷ್ಟ ಸರಿಸುಮಾರು 124 ಜನ ನಾಯಕಿಯರಿಗೆ ಸಿಕ್ಕಿದೆ. ಇದೀಗ 125ನೇ ನಟಿಮಣಿಯ ಸರದಿ. ಕರುನಾಡ ಕಿಂಗ್ ಶಿವರಾಜ್‌ಕುಮಾರ್ ಅಭಿನಯದ `125’ನೇ ಚಿತ್ರಕ್ಕೆ ನಾಯಕಿಯಾಗಿ ಸೆಂಚುರಿಸ್ಟಾರ್ ಜೊತೆ ಬಿಗ್‌ಸ್ಕ್ರೀನ್‌ನಲ್ಲಿ ಮೆರವಣಿಗೆ ಹೊರಡುವ ಲಕ್ಕಿ ಚಾನ್ಸ್ ಈ ಸಲ ಮಗಳು ಜಾನಕಿಗೆ ಸಿಕ್ಕಿದೆ….

ಮಗಳು ಜಾನಕಿ' ಯಾರು ಅಂತ ನಮ್ಮ ಕರುನಾಡ ಮಂದಿಗೆ ಹೊಸದಾಗಿ ಹೇಳಬೇಕಿಲ್ಲ. ಅದರಲ್ಲೂ ಸೀರಿಯಲ್ ಪ್ರಿಯರಿಗೆ ಮಗಳು ಜಾನಕಿ’ಯನ್ನು ಇಂಟ್ರುಡ್ಯೂಸ್ ಮಾಡಿಕೊಡಬೇಕಾಗಿಲ್ಲ. ಯಾಕಂದ್ರೆ, ದಿನಪ್ರತಿ ಅವರವರ ಮನೆಯ ಟಿವಿ ಪರದೆಯ ಮೇಲೆ ಮಗಳು ಜಾನಕಿ'ಯನ್ನು ಕಣ್ತುಂಬಿಕೊಂಡಿರ‍್ತಾರೆ. ವಕೀಲೆಯಾಗಿ ವಾದ ಮಾಡೋದನ್ನು ನೋಡಿ ಭೇಷ್‌ಗಿರಿ ಕೊಟ್ಟರ‍್ತಾರೆ. ಆದರೆ, ಸಿನಿಮಾ ಪ್ರಿಯರಿಗೆ ಮಗಳು ಜಾನಕಿ’ ಪರಿಚಯ ಅಷ್ಟಾಗಿರಲ್ಲ ಹೀಗಾಗಿ, ಶಿವಣ್ಣನ ಸಿನಿಮಾಗೆ ಆಯ್ಕೆಯಾಗಿರುವ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಕಿರುತೆರೆ'ಯಲ್ಲಿ ಕಾಣಿಸಿಕೊಂಡು ಕರುನಾಡಿನ ಮನೆಮಾತಾಗಿರುವ ಮಗಳು ಜಾನಕಿ’ ಸೀರಿಯಲ್ ಪಾತ್ರಧಾರಿ ಗಾನವಿ ಲಕ್ಷ್ಮಣ್ ಗೆ ಬೆಳ್ಳಿತೆರೆಯಲ್ಲಿ ಮಿಂಚುವ ಅವಕಾಶಗಳು ಸಿಗುತ್ತಿವೆ.
ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ನಟನೆಯ ಹೀರೋ' ಚಿತ್ರಕ್ಕೆ ನಾಯಕಿಯಾಗಿರುವ ಗಾನವಿ, ಈಗ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾಗೆ ಹೀರೋಯಿನ್ನಾಗಿದ್ದಾರೆ. ಶಿವಣ್ಣನ ವೃತ್ತಿ ಬದುಕಿನ ಮೈಲ್‌ಸ್ಟೋನ್ ಸಿನಿಮಾ ಆಗಲಿರುವ 125ನೇ `ವೇದ’ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಗಾನವಿ ಅದೃಷ್ಟ ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.

ಅಂದ್ಹಾಗೇ, ‘ವೇದ ‘ ಹ್ಯಾಟ್ರಿಕ್ ಕಾಂಬಿನೇಷನ್‌ ನಲ್ಲಿ ಬರ್ತಿರೋ ನಾಲ್ಕನೇ ಸಿನಿಮಾ. ನಿರ್ದೇಶಕ. ಎ ಹರ್ಷ ಹಾಗೂ ಶಿವರಾಜ್ ಕುಮಾರ್ ನಾಲ್ಕನೇ ಸಲ ಒಂದಾಗಿದ್ದಾರೆ. ವಜ್ರಕಾಯ, ಭಜರಂಗಿ ಹಾಗೂ ಭಜರಂಗಿ 2 ಚಿತ್ರದ ನಂತರ ‘ ವೇದ’ ಸಿನಿಮಾದ ಮೂಲಕ ಹ್ಯಾಟ್ರಿಕ್ ಜೋಡಿ ಮತ್ತೆ ಜೊತೆಯಾಗಿದೆ. ಈ ಡೆಡ್ಲಿ ಕಾಂಬೋಗೆ ಶಿವರಾಜ್ ಕುಮಾರ್ ಪತ್ನಿ ಗೀತಕ್ಕ ಬಂಡವಾಳ ಹೂಡಿದ್ದಾರೆ.


ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸಿಷನ್ ಚಿತ್ರಕ್ಕಿದ್ದು, ಶೋ ಮಸ್ಟ್ ಗೋ ಆನ್ ಎನ್ನುವಂತೆ ಅಪ್ಪು ಅಗಲಿಕೆಯ ನೋವುನ್ನು ನುಂಗಿಕೊಂಡು ಸಿನಿಮಾಗೆ ಮರಳಬೇಕಿದೆ ಶಿವಣ್ಣ. ಸಹೋದರನ ಸಿನಿಮಾ ಪ್ರೀತಿಯನ್ನು ಕಣ್ಮುಂದೆ ತಂದುಕೊಂಡು ಶಿವಣ್ಣ ಕ್ಯಾಮರಾ ಎದುರಿಸಬೇಕಿದೆ. ಗೀತಾ ಪಿಕ್ಚರ್ ಬ್ಯಾನರ್ ಅಡಿಯ ಚೊಚ್ಚಲ ಚಿತ್ರ ಇದಾಗಿದ್ದು, ಅದ್ದೂರಿಯಾಗಿ ನಿರ್ಮಾಣ ಮಾಡುವ ಕನಸು ಗೀತಕ್ಕ ಅವ್ರದ್ದು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!