ಸೌತ್-ನಾರ್ತ್ ಮಾತ್ರವಲ್ಲ, ಇಡೀ ಜಗತ್ತಿಗೆ ಹೀರೋ ಇವ್ರು ; ಮುಂದಿನ ವರ್ಷ ಫೆಬ್ರವರಿ 24ಕ್ಕೆ ವರ್ಲ್ಡ್ ವೈಡ್ ಗೆ ಗೊತ್ತಾಗುತ್ತೆ ಗುರು !

ಸಿನಿಮಾ ಜಗತ್ತಿನಲ್ಲಿ ಸಾವಿರಾರು ಹೀರೋಗಳಿದ್ದಾರೆ. ಮೂವೀ ಎನ್ನುವ ಮಾಯ ಲೋಕದಲ್ಲಿ ಸ್ಟಾರ್ ಪಟ್ಟಕ್ಕೇರಿ ರಾರಾಜಿಸುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಸ್ವಂತ ಬ್ರ್ಯಾಂಡ್ ಕಟ್ಟಿ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿ ಸಿನಿಮಾ ಸಾಮ್ರಾಜ್ಯದಲ್ಲಿ ಅಧಿಪತಿಗಳಾಗಿ ಮೆರೆಯುತ್ತಿದ್ದಾರೆ. ಇವರುಗಳ ಪೈಕಿ ಕೆಲವರು ಬಾರ್ಡರ್ ಹಾಕಿಕೊಂಡಿದ್ದಾರೆ. ಇನ್ನೂ ಕೆಲವರು ಬಾರ್ಡರ್ ಕ್ರಾಸ್ ಮಾಡಿದ್ದಾರೆ. ಆದರೆ, ಈ ಎರಡು ಕ್ಯಾಟಗರಿಯ ಸ್ಟಾರ್ಸ್ ಗಳಿಗೆ ಬಾರ್ಡರ್ ಆಚೆ ಫ್ಯಾನ್ಸ್ ಇದ್ದಾರೆ ಅನ್ನೋದು ಮಾತ್ರ ಸತ್ಯ. ಅಷ್ಟಕ್ಕೂ, ನಾವ್ ಈಗ ನಿಮಗೆ ಹೇಳೋದಕ್ಕೆ ಹೊರಟಿರುವುದು ಹೊಸ ಹೀರೋ ಬಗ್ಗೆ. ಅಲ್ಲಾರೀ, ವಾರಕ್ಕೊಬ್ಬರು ಹೊಸ ಹೀರೋ ಮಾಯಲೋಕಕ್ಕೆ ಪರಿಚಯವಾಗ್ತಾರೆ. ಅಷ್ಟಕ್ಕೆ ಇಷ್ಟು ಬಿಲ್ಡಪ್ಪಾ ಅಂತ ಗೊಣಗಬೇಡಿ. ಯಾಕಂದ್ರೆ ಇಡೀ ಜಗತ್ತಿಗೆ ಸಿಗಲಿರುವ ಹೊಸ ಹೀರೋ ಬಗ್ಗೆ ನಿಮಗೆ ಹೇಳ ಬಯಸಿದ್ದೇವೆ…

ಹೌದು,24-02-2022 ರಂದು ಇಡೀ ವಿಶ್ವಕ್ಕೆ ಹೊಸ ಹೀರೋ ಸಿಗುತ್ತಿದ್ದಾರೆ. ಹಾಗಾದ್ರೆ ಯಾರವರು ? ಯಾವ ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ? ಇಡೀ ಜಗತ್ತಿಗೆ ಹೀರೋ ಆಗೋದು ಅಂದ್ರೆ ಆ ನಾಯಕ ಹೆಂಗಿರಬಹುದು? ಆ ನಟನ ಹಿನ್ನಲೆ ಏನು ? ಹೀಗೆ ಒಂದಿಷ್ಟು ಪ್ರಶ್ನೆಗಳು ಉದ್ಭವಿಸೋದು ಸಹಜ. ಈ ಎಲ್ಲಾ ಪ್ರಶ್ನೆಗೆ ಉತ್ತರ ಕೊಡಬೇಕು ಅಂದರೆ ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಸರನ್ನು ಹೇಳಲೆಬೇಕು. ಹಾಗೆಯೇ, ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಲೇಬೇಕು‌.

‘ವಿಕ್ರಾಂತ್ ರೋಣ ‘ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ.
ಅನುಪ್ ಭಂಡಾರಿ ನಿರ್ದೇಶನದ- ಜಾಕ್ ಮಂಜು ನಿರ್ಮಾಣದ ಈ‌ ಚಿತ್ರಕ್ಕಾಗಿ ಪ್ಯಾನ್ ಇಂಡಿಯಾನೇ ಎದುರು ನೋಡ್ತಿದೆ. 3ಡಿ ಟೆಕ್ನಾಲಜಿಯಲ್ಲಿ ಅದ್ದೂರಿಯಾಗಿ ತಯ್ಯಾರಾಗಿರೋ ವಿಕ್ರಾಂತ್ ರೋಣನಿಗಾಗಿ ಬಾದ್ ಷಾ ಫ್ಯಾನ್ಸ್ ಮಾತ್ರವಲ್ಲ ಬೆಳ್ಳಿತೆರೆಯೂ ಕೂತೂಹಲ ವ್ಯಕ್ತಪಡಿಸುತ್ತಿದೆ. ಹೀಗಾಗಿ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
2022 ಫೆಬ್ರವರಿ 24 ರಂದು ವಿಕ್ರಾಂತ್ ರೋಣ ಚಿತ್ರ ಬಹುಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗ್ತಿದೆ. ಈ ಬಡಾ ಖಬರ್ ನ ರಿವೀಲ್ ಮಾಡಿದ ಫಿಲ್ಮ್ ಟೀಮ್
ಇಡೀ ಜಗತ್ತಿಗೆ ಹೊಸ ಹೀರೋ ಸಿಗ್ತಾನೆ ಫೆಬ್ರವರಿ 24ಕ್ಕೆ ಎಂದು ಸಪ್ರೈಸ್ ಕೊಟ್ಟಿದೆ. ಆ ಹೊಸ ಹೀರೋ ಯಾರು ? ಈ ಕ್ಯೂರಿಯಾಸಿಟಿಗೆ ಉತ್ತರ ‘ವಿಕ್ರಾಂತ್ ರೋಣ’ ಪಾತ್ರಧಾರಿ ಕಿಚ್ಚ ಸುದೀಪ್.

ವಾಟ್?, ಕಿಚ್ಚ ಹೊಸ ಹೀರೋ ಹೆಂಗ್ ಆಗ್ತಾರ್ರೀ. ಅವರು ಪ್ಯಾನ್ ಇಂಡಿಯಾ ಸ್ಟಾರ್. ಸುದೀಪ್ ಅಂದ್ರೆ ಇಡೀ‌ ಜಗತ್ತಿಗೆ ಗೊತ್ತು. ಹೀಗಂತ ಕಿಚ್ಚನ ಫ್ಯಾನ್ಸ್ ಎದ್ದು ನಿಲ್ತಾರೆ. ಅಪ್ ಕೋರ್ಸ್ ಎದ್ದು ನಿಲ್ಲಬೇಕು.
ನಮಗೂ ಗೊತ್ತು ಕಿಚ್ಚ ಸುದೀಪ್ ಅಂದ್ರೆ ಇಡೀ ಜಗತ್ತಿಗೆ ಗೊತ್ತಿದೆ ಅಂತ.ಇನ್ನೂ,
ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್ ಅಂತ ಬೌಂಡರಿ ಹಾಕಿಕೊಳ್ಳದೇ ಎಲ್ಲಾ ಇಂಡಸ್ಟ್ರಿಗೂ ಲಗ್ಗೆ ಇಟ್ಟು ಬ್ಯಾಂಡ್ ಬಜಾಯಿಸಿರೋ ಕಿಚ್ಚ ಎಲ್ಲಾ ರಂಗದವರಿಗೂ ಮಾಣಿಕ್ಯನೇ ಆಗಿದ್ದಾರೆ.

ಈಗ ‘ವಿಕ್ರಾಂತ್ ರೋಣ’ ಸಿನಿಮಾದ ನಾಯಕನಾಗಿ ಫೆಬ್ರವರಿ 24 ರಂದು ಹೊಸ ಪಾತ್ರದ ಮೂಲಕ ಇಡೀ ಜಗತ್ತಿಗೆ ನಯಾ ರೂಪದಲ್ಲಿ ಪರಿಚಯವಾಗ್ತಿದ್ದಾರೆ.
ಫ್ಯಾಂಟಸಿ- ಆಕ್ಷನ್- ಅಡ್ವೆಂಚರ್‌- ಥ್ರಿಲ್ಲರ್ ಕಥಾಹಂದರವುಳ್ಳ ‘ ವಿಕ್ರಾಂತ್ ರೋಣ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಿಚ್ಚು ಹಚ್ಚಲಿ
ದ್ದಾರೆ. ಬಚ್ಚನ್ ಗೆ ಜಾಕ್ ಲೀನ್ ಜೋಡಿಯಾಗಿದ್ದು ಬಿಟೌನ್ ಗಲ್ಲಿಯಲ್ಲೂ ವಿಕ್ರಾಂತ್ ರೋಣ ಮೇಲೆ ಕೂತೂಹಲ ಮೂಡಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!