‘ರಾಕಿಂಗ್ ಜೋಡಿ’ಗೆ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ-ರಾಧಿಕಾ ಪಂಡಿತ್ ಹೇಳಿದ್ದಿಷ್ಟು !

ಸ್ಯಾಂಡಲ್‌ವುಡ್‌ನ ಮೋಸ್ಟ್ ಬ್ಯೂಟಿಫುಲ್ ಅಂಡ್ ಕ್ಯೂಟೆಸ್ಟ್ ಕಪಲ್ಸ್ ಅಂದ್ರೆ ರಾಕಿಭಾಯ್ ಅಂಡ್ ರಾಧಿಕಾ ಪಂಡಿತ್ ಅನ್ನೋದನ್ನ ಹೊಸದಾಗಿ ಹೇಳಬೇಕಿಲ್ಲ. ರೀಲ್‌ನಲ್ಲಿ ಜೋಡಿಯಾಗಿ ಚಿತ್ರಪ್ರೇಮಿಗಳಿಂದ ಬಹುಪರಾಕ್ ಹಾಕಿಸಿಕೊಂಡ ಯಶ್-ರಾಧಿಕಾ ರಿಯಲ್‌ನಲ್ಲಿ ಜೊತೆಯಾಗಿ ಆದರ್ಶ ದಂಪತಿಗಳಂತೆ ಬದುಕುತ್ತಿರುವುದನ್ನು ಇಡೀ ಕರುನಾಡು ನೋಡ್ತಿದೆ. ಇಂತಿಪ್ಪ ಮಾಧರಿ ಜೋಡಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಪ್ರೀತ್ಸಿ ಮದುವೆಯಾದ ರಾಕಿಂಗ್ ಜೋಡಿ ಇಂದು ಐದನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿನಾ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. ಮುದ್ದಿನ ಮಗಳು ಐರಾ ಹಾಗೂ ಮುದ್ದಿನ ಮಗ ಯಥರ್ವ್ ಜೊತೆ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸುತ್ತಿದ್ದಾರೆ.

ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ'ಯವ್ರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.ನಂದಗೋಕುಲ’ ಸೀರಿಯಲ್ ಅಂಗಳದಲ್ಲಿ ಶುರುವಾದ ಪ್ರೀತಿಯನ್ನು ಪೋಷಿಸಿ ಬೆಳೆಸಿದ ‘ರಾಕಿಂಗ್ ಕಪಲ್ಸ್',ಗೋವಾದ ಕಡಲ ತೀರದಲ್ಲಿ ರಿಂಗ್ ಎಕ್ಸ್‌ಚೇಂಜ್ ಮಾಡಿಕೊಂಡು ‘ಇನ್ಮೇಲೆ ನೀವು ನಮ್ಮವರು, ನಾವು ನಿಮ್ಮವರು’ ಎಂದು ಸಂಬಂಧ ಗಟ್ಟಿಮಾಡಿಕೊಂಡರು. ಡಿಸೆಂಬರ್- 09- 2016 ರಂದು ಬಾಂದವ್ಯದ ಮುದ್ರೆ ಹೊತ್ತಿದ್ದರು. ಕುಟುಂಬಸ್ಥರು-ಆಪ್ತರು-ಸಿನಿಮಾದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದರು. ಗ್ರ್ಯಾಂಡ್ ರಿಸೆಪ್ಷನ್ ಏರ್ಪಡಿಸಿ ಅಭಿಮಾನಿ ದೇವರುಗಳ ಆಶೀರ್ವಾದ ಪಡೆದರು. ಹೀಗೆ ಭರ್ಜರಿಯಾಗಿ ದಾಂಪತ್ಯದ ಬದುಕಿಗೆ ಕಾಲಿರಿಸಿದ ಯಶ್-ರಾಧಿಕಾ, ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಸುಂದರವಾಗಿಸಿ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಬ್ಯೂಟಿಫುಲ್ ಕಪಲ್ಸ್ಗೆ ಆರತಿಗೊಬ್ಬಳು ಮಗಳು.. ಕೀರ್ತಿಗೊಬ್ಬ ಮಗನಿದ್ದಾನೆ.

ಮೊಗ್ಗಿನ ಮನಸ್ಸಿನ ಹುಡುಗನನ್ನು ಕೈಹಿಡಿದ ರಾಧಿಕಾ ಇಬ್ಬರು ಮುದ್ದಿನ ಮಕ್ಕಳ ತಾಯಿಯಾಗಿ ‘ರಾಕಿಂಗ್'ಮನೆಯನ್ನು ಬೆಳಗುತ್ತಿದ್ದಾರೆ.ಸಕ್ಸಸ್‌ಫುಲ್ ಹೀರೋಯಿನ್ನಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದ ಸಿಂಡ್ರೆಲಾ ಈಗ ಸಿನಿಮಾರಂಗದಿಂದ ಕೊಂಚ ದೂರ ಉಳಿದು ಗಂಡ-ಮನೆ-ಮಕ್ಕಳು ಅಂತ ಬ್ಯುಸಿಯಾಗಿದ್ದಾರೆ.ಈ ಮಧ್ಯೆ ಐದನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿ ಆಸ್ಟೇಲಿಯನ್ ಮೂಲದ ಲೇಖಕ ಬ್ಯೂ ಟ್ಯಾಪ್ಲಿನ್ ಅವರ ಕೋಟ್‌ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಯಾರಾದರೂ ನಿಮ್ಮನ್ನು ನೀವು ಉತ್ತಮಗೊಳ್ಳುವಂತೆ ಮಾಡುವ, ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೋತ್ಸಾಹಿಸುವ ಮತ್ತು ಪ್ರೇರೇಪಿಸುವ, ನೀವು ನಿರ್ಲಕ್ಷ ಮಾಡುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ಹಿಡಿದು ನೂಕುವ, ಯಾವುದೇ ಫಲಾಪೇಕ್ಷೆಯಿಲ್ಲದೇ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿದ್ದರೆ, ನೀವು ಧೈರ್ಯಶಾಲಿಯಾಗಿರಲು ಮತ್ತು ಸಂತೋಷದಿಂದಿರಲು ಸಹಾಯವಾಗುತ್ತೆ. ಇಂತಹ ಸಂಬಂಧ ಪವಿತ್ರವಾದದ್ದು ಹೀಗಾಗಿ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ’ ಹೀಗೆ ಟ್ವೀಟ್ ಮಾಡಿರುವ ರಾಧಿಕಾ `ಹ್ಯಾಪಿ 5th ಆ್ಯನಿವರ್ಸರಿ ಸ್ವೀಟ್‌ಹಾರ್ಟ್’ ಎಂದಿದ್ದಾರೆ. ಪತ್ನಿಯ ಪ್ರೀತಿಯ ಶುಭಾಷಯಕ್ಕೆ ಯಶ್ ಒಲವಿನ ಉಡುಗೊರೆ ನೀಡರ‍್ತಾರೆ. ಒಟ್ನಲ್ಲಿ, ಮಾಡ್ರನ್ ಲೋಕದಲ್ಲಿ ಮಾಧರಿಯಾಗಿ ಬದುಕುತ್ತಿರುವ ಈ ಜೋಡಿಗೆ ಶುಭವಾಗಲಿ ಎಲ್ಲರ ಶುಭಹಾರೈಕೆ ಇರಲಿ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!