Categories
ಸಿನಿ ಸುದ್ದಿ

ಮೇಡ್ ಇನ್ ಚೈನಾ ಟೀಸರ್ ಬಂತು: ಇದು ಕನ್ನಡದ ಮೊದಲ ವರ್ಚುವಲ್ ಸಿನಿಮಾ !

ಇಕ್ಕಟ್ ಸಿನಿಮಾ ಮೂಲಕ ಮನರಂಜನೆಯ ರಸದೌತಣ ಉಣಬಡಿಸಿದ್ದ ನಾಗಭೂಷಣ್ ನಟನೆಯ ಮೇಡ್ ಇನ್ ಚೈನಾ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ ಪ್ರಾಮಿಸಿಂಗ್ ಆಗಿ ಮೂಡಿ‌ ಬಂದಿದೆ.

ಲಾಕ್ ಡೌನ್ ಟೈಮ್ ನಲ್ಲಿ ವಿದೇಶದಲ್ಲಿ ಲಾಕ್ ಆಗುವ ಪತಿ, ಸ್ವದೇಶಿ ನೆಲದಲ್ಲಿ ಪತ್ನಿ. ಈ ಗಂಡ ಹೆಂಡ್ತಿ‌ ನಡುವಿನ ಪ್ರೀತಿ-ಗೀತಿ-ಇತ್ಯಾದಿ ನಡುವೆ ಒಂದಷ್ಟು ಜಗಳ ಓವರ್ ಆಲ್ ಆಗಿ‌ ಮೇಡ್ ಇನ್ ಚೈನಾ ಫ್ಯಾಮಿಲಿ ಡ್ರಾಮಾ ಅನ್ನೋದು ಟೀಸರ್ ನಲ್ಲಿ ಗೊತ್ತಾಗುತ್ತಿದೆ. ನಾಗಭೂಷಣ್ ಇದ್ದಾರೆ ಅಂದರೆ ಅಲ್ಲಿ ಕಾಮಿಡಿಗೆ ಕೊರತೆ ಇರೋದಿಲ್ಲ. ಕಚಗುಳಿ ಇಡುವ ಕಾಮಿಡಿ ಡೈಲಾಗ್ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ಅದ್ಭುತ ನಟನೆ ಗಮನಸೆಳೆತಿದೆ. ಅದ್ರಲ್ಲೂ ಟೀಸರ್ ನಲ್ಲಿ ಮೂಡಿಬಂದಿರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಗಮನ ಸೆಳೆಯುತ್ತಿದೆ.

ಅಂದಹಾಗೆ, ಮೇಡ್ ಇನ್ ಚೈನಾ ಕನ್ನಡದ ಮೊದಲ ವರ್ಚುವಲ್ ಸಿನಿಮಾವಾಗಿದ್ದು, ಅಯೋಗ್ಯ, ರತ್ನಮಂಜರಿ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿದ್ದ ಪ್ರೀತಮ್ ತೆಗ್ಗಿನಮನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದ ಜೊತೆಗೆ ಗ್ರಾಫಿಕ್, ಎಡಿಟಿಂಗ್ ಹಾಗೂ ಸಿನಿಮಾಟೋಗ್ರಾಫಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ನಾಗಭೂಷಣ್ ಹೀರೋ ಆಗಿ ಬಣ್ಣ ಹಚ್ಚಿದ್ದು, ನಾಗಭೂಷಣ್ ಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಉಳಿದಂತೆ ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಮುಂತಾದವರು ನಟಿಸಿದ್ದಾರೆ.

ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಮೇಡ್ ಇನ್ ಚೈನಾ ಸಿನಿಮಾಗೆ ಕಥೆ ಬರೆದಿದ್ದು, ವೀವಾನ್ ರಾಧಾಕೃಷ್ಣ ಸಂಗೀತವಿದೆ. ಎನ್ ಕೆ ಸ್ಟುಡಿಯೋಸ್ ಬ್ಯಾನರ್ ನಡಿ ನಂದಕಿಶೋರ್ ಸಿನಿಮಾಗೆ ಬಂಡವಾಳ ಹೂಡಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಡಿ ಟಿಆರ್ ಚಂದ್ರಶೇಖರ್ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಟ್ರೇಲರ್ ರಿಲೀಸ್; ಹೊಸಬರಿಗೆ ವಸಿಷ್ಠ ಸಿಂಹ ಮತ್ತು ಭಾಸ್ಕರ್ ರಾವ್ ಸಾಥ್

‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದ ಟ್ರೇಲರ್‌ ಅನ್ನು ಭಾಸ್ಕರ್ ರಾವ್ ಹಾಗೂ ನಟ ವಸಿಷ್ಠ ಸಿಂಹ ಬಿಡುಗಡೆ ಮಾಡಿದ್ದಾರೆ. ಪ್ರೀತಿ, ಸಸ್ಪೆನ್ಸ್, ಆಕ್ಷನ್ ಒಳಗೊಂಡ ಟ್ರೇಲರ್ ಸಧ್ಯ ಯೂಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ.

ಮೈಸೂರು ಮೂಲದವರಾದ ಅಮೇರಿಕನ್‌ ಪ್ರಜೆ ಯಶಸ್ವಿ ಶಂಕರ್ ನಿರ್ಮಾಣ‌ ಮಾಡಿರುವ ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್ ಸಿನಿಮಾದ ಮೂಲಕ ರಾಘವ್ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಎಂ ಎನ್ ಶ್ರೀಕಾಂತ್ ನಿರ್ದೇಶಕ ಮಾಡಿರುವ ಈ ಚಿತ್ರದಲ್ಲಿ ಸಂಜನಾ ಬುರ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ.

ರಾಘವ್ ಕಾಲೇಜ್ ಹುಡುಗನ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಕ್ಟಿಂಗ್, ಡ್ಯಾನ್ಸ್ ಕಲಿತಿದ್ದಾರೆ.

ತಿಂಗಳುಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಗೆ ವಿಶ್ವಜಿತ್ ರಾವ್ ಛಾಯಾಗ್ರಾಹಕರಾಗಿದ್ದಾರೆ.

Categories
ಸಿನಿ ಸುದ್ದಿ

ಗರುಡಾಕ್ಷನ ದರ್ಶನ! ಹೊಸಬರ ಸೇಡಿನ ಕಥೆ…

ಗರುಡಾಕ್ಷ… ಇದು ಈ ವಾರ ತೆರೆಗೆ ಅಪ್ಪಳಿಸುತ್ತಿರುವ ಹೊಸಬರ ಸಿನಿಮಾ. ಮಧ್ಯಮ ವರ್ಗದ ಕುಟುಂಬದ ಯಜಮಾನ ತನ್ನ ಮಗನ ಕನಸನ್ನು ನನಸು ಮಾಡಲು ಹೋಗಿ ಕೆಟ್ಟವರಿಂದ ಮೋಸಕ್ಕೆ ಒಳಗಾಗಿ ಕೊಲೆಯಾಗುತ್ತಾನೆ. ಅದನ್ನು ಆತ್ಮಹತ್ಯೆ ಎಂದು ನಿರೂಪಿಸಲಾಗುತ್ತದೆ. ನನ್ನ ತಂದೆ ಆತ್ಮಹತ್ಯೆ ಮಾಡಿಕೊಳ್ಳುವಂಥವರಲ್ಲ ಎಂಬುದನ್ನು ಅರಿತ ಮಗ ತಂದೆಯನ್ನು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವ ಕಥೆಯೇ ಈ ಚಿತ್ರದ ಹೈಲೈಟ್.

ತಂದೆಯ ಹಂತಕರನ್ನು ಗರುಡನ ಕಣ್ಣಿನಂತೆ ಸೂಕ್ಷ್ಮವಾಗಿ ಹುಡುಕೋ ಥ್ರಿಲ್ಲಿಂಗ್ ಕಥೆಯೇ ಗರುಡಾಕ್ಷ. ಕಟ್ಟು ಕಥೆ ಖ್ಯಾತಿಯ ಚೇತನ್ ಯದು ಚಿತ್ರದ ಹೀರೋ. ರಕ್ಷಾ ನಾಯಕಿ. ಶ್ರೀಧರ್ ವೈಷ್ಣವ್ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ.


ಸತ್ಯರಾಜ್, ರಫಿಕ್, ವಸಂತ್ ಕುಮಾರ್, ಕೈಲಾಶ್ , ಕುಮುದಾ, ಪಲ್ಲವಿ, ಉಗ್ರಂ ರೆಡ್ಡಿ, ಕಲ್ಕಿ, ಆಲಿಷಾ ಅಭಿನಯಿಸಿದ್ದಾರೆ. ಶ್ರೀವತ್ಸ ಅವರ ಸಂಗೀತವಿದೆ. ವೈಲೆಂಟ್ ವೇಲು ಅವರ ಸಾಹಸವಿದೆ. ವೀರೇಶ್ ಛಾಯಾಗ್ರಹಣ ಮತ್ತು ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಶ್ರೀಕಿಗೆ ಹೊಸಬರ ಮೇಲೆ ಮನಸಾಗಿದೆ..!

ವಿಭಿನ್ನ ತ್ರಿಕೋನ ಪ್ರೇಮಕಥೆಯ ಮನಸಾಗಿದೆ ಸಿನಿಮಾ ಮೂಲಕ ಅಭಯ್ ಎಂಬ ಯುವ ಪ್ರತಿಭೆ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಫೆಬ್ರವರಿ 25 ರಂದು ರಾಜ್ಯಾದ್ಯಂತ ಬಿಡುಗಡೆಗೆಯಾಗಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ಗೆ ನಟ ಶ್ರೀಕಿ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಟ ಅಭಯ್ ನಿರ್ಮಾಪಕ ಚಂದ್ರಶೇಖರ್ ಅವರ ಪುತ್ರ. ಇನ್ನು ನಿರ್ಮಾಪಕರೇ ಚಿತ್ರದ ಕಥೆ ಬರೆದಿದ್ದಾರೆ. ಶ್ರೀನಿವಾಸ ಶಿಡ್ಲಘಟ್ಟ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ಮೇಘಶ್ರೀ ಹಾಗೂ ಅಥಿರಾ ಚಿತ್ರದ ನಾಯಕಿಯರು.


ಚಿತ್ರದಲ್ಲಿ ಪ್ರೀತಿ ಹುಡುಕಿಕೊಂಡು ಹೊರಟ ನಾಯಕನಿಗೆ ಇನ್ನೊಂದು ಪ್ರೀತಿ ಎದುರಾಗುತ್ತೆ. ಆಗ ನಾಯಕನಿಗೆ ತಾನು ಅರಸಿಕೊಂಡು ಹೋದ ಪ್ರೀತಿ ಸಿಗುತ್ತಾ, ಅಥವಾ ಎದುರಾದ ಪ್ರೀತಿ ಒಲಿಯುತ್ತಾ ಎನ್ನುವುದೇ ಮನಸಾಗಿದೆ ಚಿತ್ರದ ಕಥಾಹಂದರ.
ಟ್ರೇಲರ್ ರಿಲೀಸ್ ಮಾಡಿದ ನಟ ಶ್ರೀಕಿ, ಅಭಯ್ ಒಬ್ಬ ಪ್ರಾಮಿಸಿಂಗ್ ಹೀರೋ, ಬರ್ತ್ ಚಿತ್ರದಲ್ಲಿ ನನ್ನ ತಮ್ಮನಾಗಿ ಅಭಿನಯಿಸಿದ್ದ, ಆ್ಯಕ್ಷನ್, ಲವ್ ಎಲ್ಲದರಲ್ಲೂ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾನೆ. ನನ್ನ ಒಲವೇ ಮಂದಾರ ಚಿತ್ರಕ್ಕೆ ಡೈಲಾಗ್ ಬರೆದಿದ್ದ ರಘು, ಈ ಸಿನಿಮಾಗೂ ಸಂಭಾಷಣೆ ಬರೆದಿದ್ದಾರೆ, ಎಲ್ಲರಿಗೂ ಒಳ್ಳೇದಾಗಲಿ ಎಂದರು.


ನಿರ್ಮಾಪಕ ಚಂದ್ರಶೇಖರ್ ಮಾತನಾಡಿ, ನಾನಿವತ್ತು ತುಂಬಾ ಖುಷಿಯಲ್ಲಿದ್ದೇನೆ. ಅದಕ್ಕೆ ಕಾರಣ ಅಭಯ್, ಸಿನಿಮಾದಲ್ಲಿ ಆತ ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾನೆ. ಆತ ಗೆದ್ದೇ ಗೆಲ್ಲುತ್ತಾನೆ ಎಂಬ ಭರವಸೆ ಮೂಡಿದೆ. ಚಿತ್ರದಲ್ಲಿ ಬರೀ ಲವ್ ಮಾತ್ರ ಇಲ್ಲ, ಸಸ್ಪೆನ್ಸ್, ಆ್ಯಕ್ಷನ್, ಕಾಮಿಡಿ ಎಲ್ಲದರ ಮಿಳಿತವಾಗಿದೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತೆ, ಮಾನಸಹೊಳ್ಳ ಅದ್ಭುತ ಮೆಲೋಡಿ ಟ್ರ್ಯಾಕ್ ಮಾಡಿದ್ದಾರೆ, ಚಿತ್ರದಲ್ಲಿ ನಟಿಸಿರುವ ಇಬ್ಬರೂ ನಾಯಕಿಯರು ಅಭಯ್‌ಗೆ ಸಾಥ್ ನೀಡಿದ್ದಾರೆ. ಹಿಂದೆ ಜನವರಿ 18 ಕ್ಕೆ ಚಿತ್ರ ರಿಲೀಸ್ ಮಾಡಬೇಕೆಂಬ ಪ್ಲಾನಿತ್ತು, ಕೋವಿಡ್‌ನಿಂದ ಸಾಧ್ಯವಾಗಲಿಲ್ಲ, ಈಗ ಫೆ.25 ರಂದು ರಿಲೀಸ್‌ ಆಗಲಿದೆ ಎಂದರು.


ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟ, “ಎಲ್ಲರೂ ಒಳ್ಳೇ ಮನಸಿಟ್ಟು ಈ ಸಿನಿಮಾ ಮಾಡಿದ್ದೇವೆ, ಗೆಲ್ತೀವಿ ಎನ್ನುವ ಭರವಸೆಯಿದೆ. ಹೆಸರೇ ಹೇಳುವ ಹಾಗೆ ಇದೊಂದು ಲವ್ ಸಬ್ಜೆಕ್ಟ್ ಆದರೂ ಬೇರೆ ಥರದಲ್ಲಿ ಕಥೆ ನಿರೂಪಿಸುವ ಪ್ರಯತ್ನ ಮಾಡಿದ್ದೇವೆ, ಈವರೆಗೆ ಬಂದ ಎಲ್ಲ ಲವ್ ಸ್ಟೋರಿಗಳನ್ನು ಬಿಟ್ಟು ಹೊಸ ಕಂಟೆಂಟ್ ಈ ಚಿತ್ರದಲ್ಲಿದೆ ತಣ್ಣನೆಯ ಕ್ರೌರ್ಯ, ಮಿಸ್ ಅಂಡರ್‌ಸ್ಟಾಂಡಿಂಗ್ ಕಥೆಯೂ ಇದೆ. ಇಲ್ಲಿ ಯಾವುದೇ ವಿಲನ್ ಇಲ್ಲ, ಕ್ಲೈಮ್ಯಾಕ್ಸ್ ನಲ್ಲಿ ನಾಯಕ ತೆಗೆದುಕೊಳ್ಳುವ ದೃಢ ನಿರ್ಧಾರ ಎಲ್ಲಾ ರೀತಿಯ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ.

ಥ್ರಿಲ್ಲರ್ ಮಂಜು ಅವರು ನೀವು ಟೈಟಲ್‌ನಲ್ಲೇ ಗೆದ್ದಿದ್ದೀರಿ ಎಂದು ಆರಂಭದಿಂದಲೂ ನಮ್ಮ ಬೆನ್ನುತಟ್ಟುತ್ತಲೇ ಬಂದರು, ನಮ್ಮ ಬಜೆಟ್‌ಗೆ ತಕ್ಕಂತೆ ವಿಶೇಷವಾದ ಆಕ್ಷನ್ ಸೀನ್‌ಗಳನ್ನು ಮಾಡಿಕೊಟ್ಟರು ಎಂದು ಚಿತ್ರದಲ್ಲಿ ಕೆಲಸಮಾಡಿದ ತಂತ್ರಜ್ಞರೆಲ್ಲರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ನಾಯಕ ಅಭಯ್, ಆರಂಭದಿಂದ ನನಗ ತಂದೆಯೇ ಬ್ಯಾಕ್‌ಬೋನ್ ಆಗಿ ನಿಂತರು, ಈಗ ಜನರ ಅಭಿಪ್ರಾಯಕ್ಕಾಗಿ ಕಾದಿದ್ದೇನೆ ಎಂದು ಹೇಳಿದರು. ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಮಾತನಾಡಿ ನನ್ನ ಟ್ಯಾಲೆಂಟ್ ತೋರಿಸಲು ಒಳ್ಳೇ ಅವಕಾಶವಿತ್ತು. ಚಿತ್ರದ ಎಲ್ಲಾ ಹಾಡುಗಳನ್ನು ಯುವಪ್ರತಿಭೆಗಳ ಕೈಲೇ ಹಾಡಿಸಿದ್ದೇನೆ ಎಂದರು

Categories
ಸಿನಿ ಸುದ್ದಿ

ರಾಜವರ್ಧನ್ ಈಗ ಹಿರಣ್ಯ! ರಗಡ್‌ ಲುಕಲ್ಲಿ ಬಿಚ್ಚುಗತ್ತಿ ಹೀರೋ!

ಕನ್ನಡದಲ್ಲಿ ಈಗಾಗಲೇ ಬಿಚ್ಚುಗತ್ತಿ ಎಂಬ ಸಿನಿಮಾ ಬಂದಿದ್ದು ಎಲ್ಲರಿಗೂ ಗೊತ್ತಿದೆ. ಆ ಚಿತ್ರದ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಜವರ್ಧನ್ ಸದ್ಯ ‘ಪ್ರಣಯಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜವರ್ಧನ್ ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ರಾಜವರ್ಧನ್ ಮೂರನೇ ಸಿನಿಮಾ ಹಿಂದಿನ ಎರಡು ಸಿನಿಮಾಗಳಿಗಿಂತಲೂ ವಿಭಿನ್ನವಾಗಿರಲಿದೆ ಎಂಬುದು ವಿಶೇಷ. ಹೌದು, ಇದು ರಾ ಪ್ಯಾಟರ್ನ್ ಸಿನಿಮಾ. ಚಿತ್ರದಲ್ಲಿ ಖಡಕ್ ಲುಕ್‌ನಲ್ಲಿ ರಾಜವರ್ಧನ್ ಮಿಂಚಲಿದ್ದು, ಈ ಚಿತ್ರಕ್ಕೆ ಹಿರಣ್ಯ ಎಂಬ ಟೈಟಲ್ ಇಡಲಾಗಿದೆ. ಟೈಟಲ್‌ನಲ್ಲೇ ಹೊಸ ಫೋರ್ಸ್‌ ಇದೆ. ಹಾಗಾಗಿ ಈ ಚಿತ್ರದ ಮೇಲೆ ಸಹಜವಾಗಿಯೇ ರಾಜವರ್ಧನ್‌ ಅವರಿಗೂ ನಿರೀಕ್ಷೆ ಹೆಚ್ಚಿದೆ.

ಅಂದಹಾಗೆ, ಈ ಹಿರಣ್ಯ ಶೀರ್ಷಿಕೆ‌ ಮೊದಲು ನಟ ಧನಂಜಯ್ ಅವರ ಬಳಿ ಇತ್ತು. ತನ್ನ ಗೆಳೆಯನಿಗೆ ಒಳ್ಳೆಯದಾಗಲಿ ಎನ್ನುವ ಒಂದೇ ಕಾರಣಕ್ಕೆ ಧನಂಜಯ್‌ ಅವರು ಈ ಟೈಟಲನ್ನು ಬಿಟ್ಟುಕೊಟ್ಟಿದ್ದಾರೆ.

ಇನ್ನು, ಈಗಾಗಲೇ ಹಲವು ಕಿರುಚಿತ್ರಗಳನ್ನು ಮಾಡಿದ ಅನುಭವ ಇರುವ ಪ್ರವೀಣ್ ಅವ್ಯೂಕ್ತ್ ಹಿರಣ್ಯ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗುತ್ತಿದ್ದಾರೆ. ವೇದಾಸ್ ಇನ್ಪಿನಿಟಿ ಪಿಚ್ಚರ್ ನಡಿ ವಿಘ್ನೇಶ್ವರ. ಯು ಹಾಗೂ ವಿಜಯ್ ಕುಮಾರ್ ಬಿ.ವಿ ಸಿನಿಮಾದ ನಿರ್ಮಾಪಕರು. ಯೋಗೇಶ್ವರನ್ ಆರ್ ಕ್ಯಾಮೆರಾ ಕೈಚಳಕವಿದ್ದರೆ, ಜೂಡಾ ಸ್ಯಾಂಡಿ‌ ಸಂಗೀತ ನೀಡುತ್ತಿದ್ದಾರೆ.

Categories
ಸಿನಿ ಸುದ್ದಿ

ಭಾವ ಬೆಸುಗೆಯ ಭಾವಚಿತ್ರ; ಚೌಕಟ್ಟಿನೊಳಗಿನ ವಿಭಿನ್ನ ಕಥೆ…

ಕನ್ನಡದಲ್ಲಿ ಸಾಕಷ್ಟು ವಿಭಿನ್ನ ಕಥೆ ಇರುವ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಭಾವಚಿತ್ರ” ಸಿನಿಮಾ ಕೂಡ ಸೇರಿದೆ. ಹೌದು, ಇದೊಂದು ವಿಶೇಷತೆಯ ಚಿತ್ರ. ಅದರಲ್ಲೂ ವಿಭಿನ್ನ ಕಥಾಹಂದರ ಇರುವ ಈ ಚಿತ್ರ ಈ ವಾರ ಅಂದರೆ, ಫೆಬ್ರವರಿ 18ರಂದು ಬರುತ್ತಿದೆ. ತಮ್ಮ ವಿಭಿನ್ನ ಸಿನಿಮಾ ಕುರಿತು ನಿರ್ದೇಶಕ ಗಿರೀಶ್‌ ಕುಮಾರ್‌ ಹೇಳುವುದಿಷ್ಟು…

ಮೊಬೈಲ್ ಬಂದ ಮೇಲಂತೂ ಎಲ್ಲರ ಬಳಿ ಕ್ಯಾಮರಾ ಕಾಮನ್.‌ ಆ ಕ್ಯಾಮೆರಾ ಮೂಲಕ ಸಾಗುವ ಕಥೆಯೇ ನಮ್ಮ ” ಭಾವಚಿತ್ರ “. ಇದೇ ಹದಿನೆಂಟನೇ ತಾರೀಖು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಥೆ ಹೊಂದಿರುವ ಚಿತ್ರ ” ಭಾವಚಿತ್ರ” ಹಲವು ವಿಶೇಷತೆಗಳನ್ನು ಹೊಂದಿದೆ. ಈಗ ಎಲ್ಲರ ಬಳಿ ಮೊಬೈಲ್ ಇದೆ. ಅದರೊಳಗೆ ಕ್ಯಾಮೆರಾ ಇದ್ದೇ ಇರುತ್ತೆ. ಆ ಕ್ಯಾಮೆರಾ ಮೂಲಕ ವಿಭಿನ್ನ ಕಥೆ ಹೇಳಿದ್ದೇನೆ. ಅದೇ ಈ ಚಿತ್ರದ ವಿಶೇಷ. ಕಥೆ ಬಗ್ಗೆ ಹೆಚ್ಚು ಹೇಳುವುದಿಲ್ಲ. ಅದನ್ನು ತೆರೆಯ ಮೇಲೆಯೇ ನೋಡಬೇಕು. ಇನ್ನು, ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರೆ ಚಿತ್ರತಂಡದ ಸಹಕಾರ ಮುಖ್ಯ. ಎಲ್ಲರಿಗೂ ಇಷ್ಟವಾಗುವಂತಹ ಸಿನಿಮಾ ಮಾಡಿ ತೆರೆಗೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ನಿರ್ದೇಶಕ ಗಿರೀಶ್ ಕುಮಾರ್ ಮಾತು.

ಚಿತ್ರಕ್ಕೆ ಚಕ್ರವರ್ತಿ ಹೀರೋ. ಅವರು ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಮತ್ತು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ಹೇಳುವುದು ಹೀಗೆ. “ವಿಭಿನ್ನ ಕಥೆಯ ಮೂಲಕ ಉತ್ತಮ ಚಿತ್ರವೊಂದನ್ನು ನಿರ್ದೇಶಕರು ತೆರೆಗೆ ತರುತ್ತಿದ್ದಾರೆ ನನ್ನ ಪಾತ್ರ‌ ಕೂಡ ಜನರ ಮನಸ್ಸಿಗೆ ಹತ್ತಿರವಾಗಿರಲಿದೆ. ಅದು ಎಂತಹ ಪಾತ್ರರ, ಕಥೆಯ ತಿರುಳು ಏನೆಂಬುದನ್ನು ಸಿನಿಮಾದಲ್ಲೇ ನೋಡಬೇಕು ಅನ್ನುತ್ತಾರೆ ನಾಯಕ ಚಕ್ರವರ್ತಿ.
ಇನ್ನು, ನಾಯಕಿ ಗಾನವಿ ಲಕ್ಷ್ಮಣ್‌ ಅವರಿಗೆ ಇದು ಅವರ ಮೊದಲ ಸಿನಿಮಾ. ಅವರು ಈ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆರ್ಕಲಾಜಿಸ್ಟ್ ಪಾತ್ರ ನಿರ್ವಹಿಸಿರುವ ಅವರು ಆ ಪಾತ್ರ ಹಾಗೂ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ವಿಶ್ವಾಸದಿಂದ ಹೇಳುತ್ತಾರೆ.

ನಿರ್ಮಾಪಕ ವಿನಾಯಕ ನಾಡಕರ್ಣಿ ಅವರಿಗೂ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಕಾರಣ, ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾವನ್ನು‌ ಮಾಡಿದ್ದಾರಂತೆ. ಚಿತ್ರ ನೋಡಿ ನನಗಂತೂ ಖುಷಿಯಾಗಿದೆ. ಪ್ರೇಕ್ಷಕರು ಮೆಚ್ಚುತ್ತಾರೆ‌ ಎಂದು ಖುಷಿಯಿಂದಲೇ ನಿರ್ಮಾಪಕ ನಾಯಕ ನಾಡಕರ್ಣಿ ಹೇಳುತ್ತಾರೆ.

ಗೌತಮ್ ಶ್ರೀವತ್ಸ ಸಂಗೀತ ಕುರಿತು ಹೇಳಿಕೊಂಡರು. ಛಾಯಾಗ್ರಹಣದ ಕುರಿತು ಅಜಯ್ ಕುಮಾರ್ ಮಾತನಾಡಿದರು. ಗಿರೀಶ್ ಬಿಜ್ಜಳ್ ಕೂಡ “ಭಾವಚಿತ್ರ” ದ ಪಾತ್ರ ಕುರಿತು ಮಾತನಾಡಿದರು. ಅವಿನಾಶ್, ಗಿರೀಶ್ ಕುಮಾರ್, ಕಾರ್ತಿ, ವಿನಾಯಕ ನಾಡಕರ್ಣಿ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಪದ್ಮಿನಿ ಎಂಬ ಹೊಸ ಪ್ರತಿಭೆ ಕಂಗಳಲ್ಲಿ ನೂರಾರು ಕನಸು; ಕನ್ನಡದಲ್ಲಿ ಗಟ್ಟಿ ನೆಲೆ ಕಾಣುವಾಸೆ…

ಕನ್ನಡದಲ್ಲಿ ಸಾಕಷ್ಟು ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಚಂದನವನದಲ್ಲಿ ತಾರೆಯಾಗಿ ಮಿನುಗಬೇಕೆಂಬ ಆಸೆ ಯಾರಿಗಿಲ್ಲ ಹೇಳಿ? ಗಾಂಧಿನಗರಕ್ಕೆ ಬರುವ ಬಹುತೇಕರು ತಾನು ಗಟ್ಟಿನೆಲೆ ಕಾಣಬೇಕು ಅಂತ ನೂರಾರು ಆಸೆ- ಆಕಾಂಕ್ಷೆಯಿಂದಲೇ ನಂಬಿಕೆಯ ಹೆಜ್ಜೆ ಇಡುತ್ತಾರೆ. ಹಾಗೆ ಬಂದು ಮೆಲ್ಲನೆ ತನ್ನ ಪ್ರತಿಭೆ ಮೂಲಕ ಗುರುತಿಸಿಕೊಂಡಿರುವ ನಟಿ ಪದ್ಮಿನಿ.

ಹೌದು, ಪದ್ಮಿನಿ ಅಪ್ಪಟ ಕನ್ನಡದ ಬೆಡಗಿ. ಈ ನಟಿಗೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರಬೇಕೆಂಬ ಬಯಕೆ. ಆ ನಿಟ್ಟಿನಲ್ಲಿ ಪದ್ಮಿನಿ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಅಂದಹಾಗೆ ಈಗಾಗಲೇ ಅವರು ಕನ್ನಡದ ಚಿತ್ರಗಳಲ್ಲಿ ನಟಿಸಿದ್ದಾರೆ. ರೂಮ್ ಬಾಯ್ ಹಾಗು ಡಿಎಸ್ ಎಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿವೆ.

ಉಳಿದಂತೆ ಪದ್ಮಿನಿ ಅವರು ಕಿರುತೆರೆಯಲ್ಲೂ ಒಂದು ಹೆಜ್ಜೆ ಇಡುವ ಉತ್ಸಾಹದಲ್ಲಿದ್ದಾರೆ. ಸಿನಿಮಾದ ಜೊತೆ ಜೊತೆಯಲ್ಲೇ ಪದ್ಮಿನಿ ಕಿರುತೆರೆಗೂ ಲಗ್ಗೆ ಇಡುವ ಸೂಚನೆ ನೀಡುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಸೀರಿಯಲ್ಸ್ ಜೊತೆ ಮಾತುಕತೆಯೂ ನಡೆಯುತ್ತಿದೆ ಎಂಬುದು ಅವರ ಮಾತು.

ಪದ್ಮಿನಿ ಅವರು, ಸಿನಿಮಾ ಬರುವ ಮುನ್ನ, ಮಾಡೆಲಿಂಗ್ ಕ್ಷೇತ್ರದಲ್ಲಿದ್ದರು. 2019 ರಲ್ಲಿ ನಡೆದ ಮಿಸ್ ಕರ್ನಾಟಕ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ನಂತರ ಒಂದಷ್ಟು ರಿಯಾಲಿಟಿ ಶೋಗಳು ಹಾಗು ಯುನಿರ್ವಸಿಟಿ ಕಾಲೇಜ್ ವೊಂದರ ಜಾಹಿರಾತು ಸೇರಿದಂತೆ ಹಲವು ಜಾಹಿರಾತಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲ, ಬೇರೆ ಭಾಷೆಗಳಿಂದಲೂ ಇವರಿಗೆ ಅವಕಾಶಗಳಿವೆ. ಸದ್ಯ ಕನ್ನಡದಲ್ಲೇ ಕೆಲಸ ಮಾಡಿ, ಇಲ್ಲಿ ಒಪ್ಪಿಕೊಂಡ ಪ್ರಾಜೆಕ್ಟ್ ಮುಗಿಸಿ ನಂತರ ಪರಭಾಷೆ ಕಡೆಗೂ ಗಮನಹರಿಸುತ್ತೇನೆ ಎನ್ನುತ್ತಾರೆ.


ಈಗ ಒಂದೆರೆಡು ಸಿರಿಯಲ್ಸ್ ಮಾತುಕತೆಯೂ ಸೀರಿಯಸ್ ಆಗಿ ನಡೆಯುತ್ತಿದೆ. ಹಾಗೊಂದು ವೇಳೆ ಅವಕಾಶ ಸಿಕ್ಕರೆ ಅಲ್ಲೇ ವಾಲುತ್ತೆನೆ ಎನ್ನುವ ಪದ್ಮಿನಿ ಅವರಿಗೆ ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸುವಾಸೆ. ಅಷ್ಟೇ ಅಲ್ಲ, ಕನ್ನಡದಲ್ಲಿ ಪ್ರತಿಭೆ ಗುರುತಿಸುವ ಕೆಲಸ ಆಗುತ್ತಿಲ್ಲ. ಮೊದಲು ಪ್ರತಿಭಾವಂತರಿಗೆ ಒಳ್ಳೆಯ ವೇದಿಕೆ ಸಿಗಬೇಕು. ಇಲ್ಲಿನವರೇ ನಮ್ಮನ್ನು ಗುರುತಿಸದಿದ್ದರೆ ಹೇಗೆ? ಎಂದು ಪ್ರಶ್ನಿಸುವ ಪದ್ಮಿನಿ, ಒಂದೊಳ್ಳೆಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಪದ್ಮಿನಿ ಕೇವಲ ಮಾಡಲಿಂಗ್ ಮತ್ತು ನಟನೆಯಷ್ಟೇ ಅಲ್ಲ, ಅವರು ಮೇಕಪ್ ಬಗ್ಗೆಯೂ ಸಾಕಷ್ಟು ತಿಳಿದುಕೊಂಡಿದ್ದಾರೆ. ಬ್ಯೂಟಿಷಿಯನ್ ಕುರಿತಂತೆ ಇಂಟರ್ ನ್ಯಾಷನಲ್ ಕೋರ್ಸ್ ಕೂಡ ಮಾಡಿದ್ದಾರೆ.

ಹಾಗೆಯೇ ಕಾಸ್ಟ್ಯೂಮ್ ಸೆನ್ಸ್ ಕೂಡ ಅವರಿಗಿದೆ. ಅದೇನೆ ಇರಲಿ, ಕನ್ನಡ ಸಿನಿಮಾಗಳನ್ನು ನೋಡಿಕೊಂಡು ಬಂದಿರುವ ಈ ನಟಿಗೆ ಒಳ್ಳೆಯ ಅವಕಾಶ ಬೇಕಿದೆ. ತಾನೊಬ್ಬ ನಟಿ ಅನ್ನುವುದಕ್ಕಿಂತಲೂ ಕಲಾವಿದೆ ಎನಿಸಿಕೊಳ್ಳುವ ಆಸೆ ಇದೆ.

Categories
ಸಿನಿ ಸುದ್ದಿ

ಇಂದಿರಾಳ ಸ್ಟೆಪ್ಸ್ ಟು ಡೆಸ್ಟಿನಿ; ಇದು ಭಟ್ಟರ ವಿಭಿನ್ನ ಹಾಡು…

ಚಂದನವನದ ಚೆಂದದ ಬ್ಯೂಟಿ ಅನಿತಾ ಭಟ್ ನಟನೆಗೂ ಸೈ.. ನಿರ್ಮಾಣಕ್ಕೂ ಜೈ… ಈಗಾಗಲೇ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮುದ್ರಂ ಸಿನಿಮಾ ನಿರ್ಮಾಣ ಮಾಡಿರುವ ಅನಿತಾ ಭಟ್, ಈಗ ಇಂದಿರಾ ಸಿನಿಮಾ ತೆರೆಗೆ ತರಲು ಸಜ್ಜಾಗಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇಂದಿರಾ ಸಿನಿಮಾದ ಫಸ್ಟ್ ಲುಕ್ ಕ್ಯೂರಿಯಾಸಿಟಿ ಹೆಚ್ಚಿಸಿದ್ದು, ಈಗ ಇಂದಿರಾಳ ಮೊದಲ ಹಾಡು ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಕ್ಯೂರಿಯಸ್ ಆಗಿದೆ ಸ್ಟೆಪ್ಸ್ ಟು ಡೆಸ್ಟಿನಿ ಹಾಡು

ಇಂದಿರಾ ಸಿನಿಮಾದ ಮೊದಲ ಹಾಡು ಕುತೂಹಲ ಮೂಡಿಸುತ್ತಿದೆ. A2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ‘ಸ್ಟೆಪ್ಸ್ ಟು ಡೆಸ್ಟಿನಿ’ ಹಾಡು ಕೇಳುಗರ ಗಮನ ಸೆಳೆಯುತ್ತಿದೆ. ನಿರ್ದೇಶಕ ರಿಷಿಕೇಶ್ ಬರೆದಿರುವ ಲಿರಿಕ್ಸ್ ಗೆ, ಲೋಹಿತ್ ನಾಯ್ಕ್ ಸಂಯೋಜಿಸಿದ್ದಾರೆ., ಸುಪ್ರಿಯ ರಾಮ್ ಕಂಠದಲ್ಲಿ ಹಾಡಿಗೆ ಧನ್ವಿಯಾಗಿದ್ದಾರೆ. ಸಸ್ಪೆನ್ಸ್ ಅಂಶಗಳಿಂದ ಈ ಹಾಡು ಅಟ್ರ್ಯಾಕ್ಟ್ ಮಾಡ್ತಿದೆ.

ಇಂದಿರಾ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ನಿರ್ಮಾಣವಾಗಿದೆ. ಮುಖ್ಯಭೂಮಿಕೆಯಲ್ಲಿ ಅನಿತಾ ಭಟ್ ನಟಿಸಿದ್ದು, ಉಳಿದಂತೆ ಬಿಗ್‌ ಬಾಸ್‌ ಖ್ಯಾತಿಯ ರೆಹಮಾನ್‌ ಹಾಸನ್‌, ಚಕ್ರವರ್ತಿ ಚಂದ್ರಚೂಡ್‌, ನೀತು ಹಾಗೂ ಶಫಿ ಬಣ್ಣ ಹಚ್ಚಿದ್ದಾರೆ.

ಇಂದಿರಾ ಸಿನಿಮಾಕ್ಕೆ ರಿಷಿಕೇಶ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಲೋಹಿತ್‌ ಎಲ್.ನಾಯಕ್‌ ಮ್ಯೂಸಿಕ್, ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಅನಿತಾ ಭಟ್ ಹಾಗೂ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ ಸೊರಬ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Categories
ಸಿನಿ ಸುದ್ದಿ

ಖಾತೆಯಲ್ಲಿ ಹಣವಿಲ್ಲ! ಆದರೂ ವಿಭಿನ್ನ ಪ್ರಚಾರ; ಅಡಿಕೆ ಸುಲೀತಾರಂತೆ ದಿಗಂತ್!!

ದಿಗಂತ್‌ ಅಭಿನಯದ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಸಿನಿಮಾ ಈಗ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರ ತನ್ನ ಶೀರ್ಷಿಕೆಯಿಂದಲೇ ಜೋರು ಸುದ್ದಿ ಮಾಡಿತ್ತು. ಈಗ ತನ್ನೆಲ್ಲಾ ಕೆಲಸಗಳನ್ನು ಪೂರೈಸಿಕೊಂಡು ರಿಲೀಸ್‌ ಆಗೋಕೆ ಸಜ್ಜಾಗುತ್ತಿದೆ. ಹೌದು, ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ ವಿನಾಯಕ ಕೋಡ್ಸರ ತಮ್ಮ ಚೊಚ್ಚಲ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಬಗ್ಗೆ ಅವರು ಹೇಳುವುದಿಷ್ಟು…

ಚಿತ್ರ ನಿರ್ಮಾಣ ಮಾಡುವುದು ಎಷ್ಟು ಕಷ್ಟವೋ, ಜನರಿಗೆ ತಲುಪಿಸೋದು ಅದಕ್ಕಿಂತಲೂ ಕಷ್ಟ. ಈ ಚಿತ್ರಕ್ಕೆ ಬಿ.ಜಿ. ಮಂಜುನಾಥ್ ನಿರ್ಮಾಪಕರು. “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ. ದಿಗಂತ್ ಚಿತ್ರದ ಹೈಲೈಟ್. ಐಂದ್ರಿತಾ ರೇ ಮತ್ತು ರಜನಿ ರಾಘವನ್ ಅವರ ಜೊತೆಯಲ್ಲಿದ್ದಾರೆ. ಇನ್ನು, ಚಿತ್ರಕ್ಕೆ ರವೀಂದ್ರ ಜೋಶಿ ಕಾರ್ಯಕಾರಿ ನಿರ್ಮಾಪಕರು.

ಬಿಡುಗಡೆಗೂ ಮುನ್ನ, ಚಿತ್ರತಂಡ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಟಿ.ಎಸ್.ಎಸ್ ಅಡಿಕೆ ವ್ಯಾಪಾರಿ ಅಂಗಳ ಅಂದರೆ ಬಹು ಖ್ಯಾತಿ. ಇದರ ಸಹಯೋಗದೊಂದಿಗೆ ಫೆ. 20ರಂದು ಮಧ್ಯಾಹ್ನ ಮೂರರಿಂದ ಸಂಜೆ ಐದು ಮುವತ್ತರವರೆಗೂ ಅಡಿಕೆ ಸುಲಿಯುವ ಸ್ಪರ್ಧೆ ಏರ್ಪಡಿಸಲಾಗಿದೆ.

ಶಿರಸಿಯ ಟಿ.ಎಸ್.ಎಸ್ ಪ್ರಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸುಮಾರು 200 ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ವಿಜೇತರಿಗೆ ಬಹುಮಾನವೂ ಇದೆ. ದಿಗಂತ್, ಐಂದ್ರಿತ ರೆ , ರಂಜನಿ ರಾಘವನ್ ಹಾಗೂ ಚಿತ್ರತಂಡದ ಬಹುತೇಕ ಸದಸ್ಯರು ಅಂದು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಅಂದಹಾಗೆ ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿದ್ದು, ಅಡಿಕೆ ಜೊತೆ ಪಾತ್ರದ ನಂಟಿದೆ. ಹೀಗಾಗಿ‌ ಮಲೆನಾಡಿನ ಜೀವನಾಡಿಯಾದ ಅಡಿಕೆ ಸುಲಿಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂಬುದು ನಿರ್ದೇಶಕ ವಿನಾಯಕ ಕೋಡ್ಸರ ಮಾತು.

Categories
ಸಿನಿ ಸುದ್ದಿ

ಉತ್ತರಹಳ್ಳಿಯ ವೈಷ್ಣವಿ-ವೈಭವಿಗೆ ಜೋಗಿ ಪ್ರೇಮ್‌ ಶುಭ ಹಾರೈಕೆ!

ಕನ್ನಡ ಚಿತ್ರರಂಗದಲ್ಲಿ ಪ್ರದರ್ಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ನರಸಿಂಹಲು ಅವರ ಮಾಲೀಕತ್ವದ ” ವೈಷ್ಣವಿ – ವೈಭವಿ” ಚಿತ್ರಮಂದಿರ ಇದೀಗ ಉತ್ತರಹಳ್ಳಿಯಲ್ಲಿ ಶುರುವಾಗಿದೆ. ಇದು ಈಗ ನವೀನ ತಂತ್ರಜ್ಞಾನದೊಂದಿಗೆ ನವೀಕರಣಗೊಂಡಿದೆ. ಇತ್ತೀಚೆಗೆ ಜೋಗಿ ಪ್ರೇಮ್ ಈ ಚಿತ್ರಮಂದಿರವನ್ನು ಉದ್ಘಾಟಿಸುವ ಮೂಲಕ ಶುಭ ಹಾರೈಸಿದ್ದಾರೆ.

ಈ ವೇಳೆ ಪ್ರೇಮ್‌ ಹೇಳಿದ್ದಿಷ್ಟು. “ನಾನು ಈ ಚಿತ್ರಮಂದಿರದಲ್ಲಿ ನಮ್ಮ ಚಿತ್ರದ ಹಾಡುಗಳನ್ನು ನೋಡಿದೆ. ಸೌಂಡ್ ಸಿಸ್ಟಮ್ ಉತ್ತಮ ಗುಣಮಟ್ಟದಿಂದ ಕೂಡಿದೆ. ಯಾವ ಮಲ್ಟಿಪ್ಲೆಕ್ಸ್ ಗೂ ಕಡಿಮೆ ಇಲ್ಲ. ನರಸಿಂಹಲು ಅವರ ಈ ಪ್ರಯತ್ನಕ್ಕೆ ಒಳಿತಾಗಲಿ ಎಂದರು.

ನಾವು ಕೆಲವು ಸಂಸ್ಥೆಗಳ ಜೊತೆ ಕೈ ಜೋಡಿಸಿ ಉತ್ತಮ ರೀತಿಯಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಈ ಚಿತ್ರಮಂದಿರವನ್ನು ನವೀಕರಣ ಮಾಡಿದ್ದೇವೆ. ಆದರೆ ಬೆಲೆ ಮಾತ್ರ ಏರಿಕೆ ಮಾಡಿಲ್ಲ. ಮೊದಲಿನಷ್ಟೇ ಇರುತ್ತದೆ. 465 ಸಾಮರ್ಥ್ಯವುಳ್ಳ ಉತ್ತಮ ಆಸನ, ಸೌಂಡ್ ವ್ಯವಸ್ಥೆ ಹಾಗೂ ತಿಂಡಿ, ತಿನಿಸುಗಳು ಎಲ್ಲಾ ಉತ್ತಮವಾಗಿದೆ. ಟಿಕೇಟ್ ಹಾಗೂ ಆಹಾರದ ಬೆಲೆ ಜನಸಾಮಾನ್ಯರಿಗೆ ಹೊರೆಯಾಗುವುದಿಲ್ಲ.‌ ಸಿಂಗಲ್ ಥಿಯೇಟರ್ ಗಳನ್ನು ಉಳಿಸಿಕೊಳ್ಳುವುದೇ ನಮ್ಮ ಉದ್ದೇಶ ಎಂದರು ನರಸಿಂಹಲು ಅವರ ಪುತ್ರ ಕಿಶೋರ್.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎನ್.ಎಂ.ಸುರೇಶ್, ವಿತರಕ ಭಾಷಾ, ನಾಗಣ್ಣ “ಏಕ್ ಲವ್ ಯಾ” ಚಿತ್ರದ ನಾಯಕ ರಾಣಾ ಈ ಸಮಾರಂಭಕ್ಕೆ ಆಗಮಿಸಿ ನರಸಿಂಹಲು ಅವರಿಗೆ ಶುಭ ಕೋರಿದರು.

error: Content is protected !!