ಭಾವ ಬೆಸುಗೆಯ ಭಾವಚಿತ್ರ; ಚೌಕಟ್ಟಿನೊಳಗಿನ ವಿಭಿನ್ನ ಕಥೆ…

ಕನ್ನಡದಲ್ಲಿ ಸಾಕಷ್ಟು ವಿಭಿನ್ನ ಕಥೆ ಇರುವ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಭಾವಚಿತ್ರ” ಸಿನಿಮಾ ಕೂಡ ಸೇರಿದೆ. ಹೌದು, ಇದೊಂದು ವಿಶೇಷತೆಯ ಚಿತ್ರ. ಅದರಲ್ಲೂ ವಿಭಿನ್ನ ಕಥಾಹಂದರ ಇರುವ ಈ ಚಿತ್ರ ಈ ವಾರ ಅಂದರೆ, ಫೆಬ್ರವರಿ 18ರಂದು ಬರುತ್ತಿದೆ. ತಮ್ಮ ವಿಭಿನ್ನ ಸಿನಿಮಾ ಕುರಿತು ನಿರ್ದೇಶಕ ಗಿರೀಶ್‌ ಕುಮಾರ್‌ ಹೇಳುವುದಿಷ್ಟು…

ಮೊಬೈಲ್ ಬಂದ ಮೇಲಂತೂ ಎಲ್ಲರ ಬಳಿ ಕ್ಯಾಮರಾ ಕಾಮನ್.‌ ಆ ಕ್ಯಾಮೆರಾ ಮೂಲಕ ಸಾಗುವ ಕಥೆಯೇ ನಮ್ಮ ” ಭಾವಚಿತ್ರ “. ಇದೇ ಹದಿನೆಂಟನೇ ತಾರೀಖು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಥೆ ಹೊಂದಿರುವ ಚಿತ್ರ ” ಭಾವಚಿತ್ರ” ಹಲವು ವಿಶೇಷತೆಗಳನ್ನು ಹೊಂದಿದೆ. ಈಗ ಎಲ್ಲರ ಬಳಿ ಮೊಬೈಲ್ ಇದೆ. ಅದರೊಳಗೆ ಕ್ಯಾಮೆರಾ ಇದ್ದೇ ಇರುತ್ತೆ. ಆ ಕ್ಯಾಮೆರಾ ಮೂಲಕ ವಿಭಿನ್ನ ಕಥೆ ಹೇಳಿದ್ದೇನೆ. ಅದೇ ಈ ಚಿತ್ರದ ವಿಶೇಷ. ಕಥೆ ಬಗ್ಗೆ ಹೆಚ್ಚು ಹೇಳುವುದಿಲ್ಲ. ಅದನ್ನು ತೆರೆಯ ಮೇಲೆಯೇ ನೋಡಬೇಕು. ಇನ್ನು, ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರೆ ಚಿತ್ರತಂಡದ ಸಹಕಾರ ಮುಖ್ಯ. ಎಲ್ಲರಿಗೂ ಇಷ್ಟವಾಗುವಂತಹ ಸಿನಿಮಾ ಮಾಡಿ ತೆರೆಗೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ನಿರ್ದೇಶಕ ಗಿರೀಶ್ ಕುಮಾರ್ ಮಾತು.

ಚಿತ್ರಕ್ಕೆ ಚಕ್ರವರ್ತಿ ಹೀರೋ. ಅವರು ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಮತ್ತು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ಹೇಳುವುದು ಹೀಗೆ. “ವಿಭಿನ್ನ ಕಥೆಯ ಮೂಲಕ ಉತ್ತಮ ಚಿತ್ರವೊಂದನ್ನು ನಿರ್ದೇಶಕರು ತೆರೆಗೆ ತರುತ್ತಿದ್ದಾರೆ ನನ್ನ ಪಾತ್ರ‌ ಕೂಡ ಜನರ ಮನಸ್ಸಿಗೆ ಹತ್ತಿರವಾಗಿರಲಿದೆ. ಅದು ಎಂತಹ ಪಾತ್ರರ, ಕಥೆಯ ತಿರುಳು ಏನೆಂಬುದನ್ನು ಸಿನಿಮಾದಲ್ಲೇ ನೋಡಬೇಕು ಅನ್ನುತ್ತಾರೆ ನಾಯಕ ಚಕ್ರವರ್ತಿ.
ಇನ್ನು, ನಾಯಕಿ ಗಾನವಿ ಲಕ್ಷ್ಮಣ್‌ ಅವರಿಗೆ ಇದು ಅವರ ಮೊದಲ ಸಿನಿಮಾ. ಅವರು ಈ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆರ್ಕಲಾಜಿಸ್ಟ್ ಪಾತ್ರ ನಿರ್ವಹಿಸಿರುವ ಅವರು ಆ ಪಾತ್ರ ಹಾಗೂ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ವಿಶ್ವಾಸದಿಂದ ಹೇಳುತ್ತಾರೆ.

ನಿರ್ಮಾಪಕ ವಿನಾಯಕ ನಾಡಕರ್ಣಿ ಅವರಿಗೂ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಕಾರಣ, ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾವನ್ನು‌ ಮಾಡಿದ್ದಾರಂತೆ. ಚಿತ್ರ ನೋಡಿ ನನಗಂತೂ ಖುಷಿಯಾಗಿದೆ. ಪ್ರೇಕ್ಷಕರು ಮೆಚ್ಚುತ್ತಾರೆ‌ ಎಂದು ಖುಷಿಯಿಂದಲೇ ನಿರ್ಮಾಪಕ ನಾಯಕ ನಾಡಕರ್ಣಿ ಹೇಳುತ್ತಾರೆ.

ಗೌತಮ್ ಶ್ರೀವತ್ಸ ಸಂಗೀತ ಕುರಿತು ಹೇಳಿಕೊಂಡರು. ಛಾಯಾಗ್ರಹಣದ ಕುರಿತು ಅಜಯ್ ಕುಮಾರ್ ಮಾತನಾಡಿದರು. ಗಿರೀಶ್ ಬಿಜ್ಜಳ್ ಕೂಡ “ಭಾವಚಿತ್ರ” ದ ಪಾತ್ರ ಕುರಿತು ಮಾತನಾಡಿದರು. ಅವಿನಾಶ್, ಗಿರೀಶ್ ಕುಮಾರ್, ಕಾರ್ತಿ, ವಿನಾಯಕ ನಾಡಕರ್ಣಿ ಚಿತ್ರದಲ್ಲಿದ್ದಾರೆ.

Related Posts

error: Content is protected !!