ಗರುಡಾಕ್ಷ… ಇದು ಈ ವಾರ ತೆರೆಗೆ ಅಪ್ಪಳಿಸುತ್ತಿರುವ ಹೊಸಬರ ಸಿನಿಮಾ. ಮಧ್ಯಮ ವರ್ಗದ ಕುಟುಂಬದ ಯಜಮಾನ ತನ್ನ ಮಗನ ಕನಸನ್ನು ನನಸು ಮಾಡಲು ಹೋಗಿ ಕೆಟ್ಟವರಿಂದ ಮೋಸಕ್ಕೆ ಒಳಗಾಗಿ ಕೊಲೆಯಾಗುತ್ತಾನೆ. ಅದನ್ನು ಆತ್ಮಹತ್ಯೆ ಎಂದು ನಿರೂಪಿಸಲಾಗುತ್ತದೆ. ನನ್ನ ತಂದೆ ಆತ್ಮಹತ್ಯೆ ಮಾಡಿಕೊಳ್ಳುವಂಥವರಲ್ಲ ಎಂಬುದನ್ನು ಅರಿತ ಮಗ ತಂದೆಯನ್ನು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವ ಕಥೆಯೇ ಈ ಚಿತ್ರದ ಹೈಲೈಟ್.
ತಂದೆಯ ಹಂತಕರನ್ನು ಗರುಡನ ಕಣ್ಣಿನಂತೆ ಸೂಕ್ಷ್ಮವಾಗಿ ಹುಡುಕೋ ಥ್ರಿಲ್ಲಿಂಗ್ ಕಥೆಯೇ ಗರುಡಾಕ್ಷ. ಕಟ್ಟು ಕಥೆ ಖ್ಯಾತಿಯ ಚೇತನ್ ಯದು ಚಿತ್ರದ ಹೀರೋ. ರಕ್ಷಾ ನಾಯಕಿ. ಶ್ರೀಧರ್ ವೈಷ್ಣವ್ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ.
ಸತ್ಯರಾಜ್, ರಫಿಕ್, ವಸಂತ್ ಕುಮಾರ್, ಕೈಲಾಶ್ , ಕುಮುದಾ, ಪಲ್ಲವಿ, ಉಗ್ರಂ ರೆಡ್ಡಿ, ಕಲ್ಕಿ, ಆಲಿಷಾ ಅಭಿನಯಿಸಿದ್ದಾರೆ. ಶ್ರೀವತ್ಸ ಅವರ ಸಂಗೀತವಿದೆ. ವೈಲೆಂಟ್ ವೇಲು ಅವರ ಸಾಹಸವಿದೆ. ವೀರೇಶ್ ಛಾಯಾಗ್ರಹಣ ಮತ್ತು ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ.