ರಾಜವರ್ಧನ್ ಈಗ ಹಿರಣ್ಯ! ರಗಡ್‌ ಲುಕಲ್ಲಿ ಬಿಚ್ಚುಗತ್ತಿ ಹೀರೋ!

ಕನ್ನಡದಲ್ಲಿ ಈಗಾಗಲೇ ಬಿಚ್ಚುಗತ್ತಿ ಎಂಬ ಸಿನಿಮಾ ಬಂದಿದ್ದು ಎಲ್ಲರಿಗೂ ಗೊತ್ತಿದೆ. ಆ ಚಿತ್ರದ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಜವರ್ಧನ್ ಸದ್ಯ ‘ಪ್ರಣಯಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜವರ್ಧನ್ ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ರಾಜವರ್ಧನ್ ಮೂರನೇ ಸಿನಿಮಾ ಹಿಂದಿನ ಎರಡು ಸಿನಿಮಾಗಳಿಗಿಂತಲೂ ವಿಭಿನ್ನವಾಗಿರಲಿದೆ ಎಂಬುದು ವಿಶೇಷ. ಹೌದು, ಇದು ರಾ ಪ್ಯಾಟರ್ನ್ ಸಿನಿಮಾ. ಚಿತ್ರದಲ್ಲಿ ಖಡಕ್ ಲುಕ್‌ನಲ್ಲಿ ರಾಜವರ್ಧನ್ ಮಿಂಚಲಿದ್ದು, ಈ ಚಿತ್ರಕ್ಕೆ ಹಿರಣ್ಯ ಎಂಬ ಟೈಟಲ್ ಇಡಲಾಗಿದೆ. ಟೈಟಲ್‌ನಲ್ಲೇ ಹೊಸ ಫೋರ್ಸ್‌ ಇದೆ. ಹಾಗಾಗಿ ಈ ಚಿತ್ರದ ಮೇಲೆ ಸಹಜವಾಗಿಯೇ ರಾಜವರ್ಧನ್‌ ಅವರಿಗೂ ನಿರೀಕ್ಷೆ ಹೆಚ್ಚಿದೆ.

ಅಂದಹಾಗೆ, ಈ ಹಿರಣ್ಯ ಶೀರ್ಷಿಕೆ‌ ಮೊದಲು ನಟ ಧನಂಜಯ್ ಅವರ ಬಳಿ ಇತ್ತು. ತನ್ನ ಗೆಳೆಯನಿಗೆ ಒಳ್ಳೆಯದಾಗಲಿ ಎನ್ನುವ ಒಂದೇ ಕಾರಣಕ್ಕೆ ಧನಂಜಯ್‌ ಅವರು ಈ ಟೈಟಲನ್ನು ಬಿಟ್ಟುಕೊಟ್ಟಿದ್ದಾರೆ.

ಇನ್ನು, ಈಗಾಗಲೇ ಹಲವು ಕಿರುಚಿತ್ರಗಳನ್ನು ಮಾಡಿದ ಅನುಭವ ಇರುವ ಪ್ರವೀಣ್ ಅವ್ಯೂಕ್ತ್ ಹಿರಣ್ಯ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗುತ್ತಿದ್ದಾರೆ. ವೇದಾಸ್ ಇನ್ಪಿನಿಟಿ ಪಿಚ್ಚರ್ ನಡಿ ವಿಘ್ನೇಶ್ವರ. ಯು ಹಾಗೂ ವಿಜಯ್ ಕುಮಾರ್ ಬಿ.ವಿ ಸಿನಿಮಾದ ನಿರ್ಮಾಪಕರು. ಯೋಗೇಶ್ವರನ್ ಆರ್ ಕ್ಯಾಮೆರಾ ಕೈಚಳಕವಿದ್ದರೆ, ಜೂಡಾ ಸ್ಯಾಂಡಿ‌ ಸಂಗೀತ ನೀಡುತ್ತಿದ್ದಾರೆ.

Related Posts

error: Content is protected !!