Categories
ಸಿನಿ ಸುದ್ದಿ

ಹಾವೇರಿಯಲ್ಲಿ ದರ್ಶನ್‌, ಸಾಲುಗಟ್ಟಿ ನಿಂತರು ಅಭಿಮಾನಿ ಭಕ್ತರು- ಸಾವಿರ ಅಲಿಗೇಷನ್ಸ್‌ ಬರ್ಲಿ, ಹಿಂಗೈತಿ ನೋಡಿ ಚಕ್ರವರ್ತಿ ಹವಾ!

ಮೈಸೂರಿನ ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವು ಮೇಕಪ್ ಮಾಡಿಕೊಂಡು ಬಜಾರ್‌ಗೆ ಎಂಟ್ರಿಕೊಟ್ಟಿದ್ದೇ ತಡ ದಾಸನ ಕಥೆ ಮುಗೀತು ಗುರು ಅಂತ ನಾಲಿಗೆ ಅಲುಗಾಡಿಸಿದವರು ಒಬ್ಬಿಬ್ಬರಲ್ಲ. ದಾಸನಿಗೆ ಬುದ್ಧಿ ಬರಲ್ಲ ಬುಡು ಗುರು, ಒಂದ್ಸಲ್ಲ ಅಲ್ಲಾ ಎರಡು ಸಲ ಅಲ್ಲಾ ಪದೇ ಪದೇ ತಪ್ಪು ಮಾಡ್ತಾನೆ ಇದ್ದಾರೆ. ಇನ್ಮೇಲೆ ಅವರ ಫ್ಯಾನ್ಸು ಕೂಡ ಅವರನ್ನ ಸಪೋರ್ಟ್ ಮಾಡಲ್ಲ ಅಂತ ಕೆಲವುರ ಬೇಜಾನ್‌ ಮಾತನಾಡಿ ಕೊಂಡರಲ್ಲದೇ, ದರ್ಶನ್‌ ಇಮೇಜ್‌ ಹಾಳುಮಾಡಿ ಕೊಂಡರು ಅಂತಲೂ ಗುಸುಗುಟ್ಟಿದ್ದರು. ಅಷ್ಟು ಮಾತ್ರವಲ್ಲ, ಇನ್ಮೇಲೆ ಅಖಾಡದಲ್ಲಿ ದಾಸನ ಆಟ ನಡೆಯಕ್ಕಿಲ್ಲ ಅಂತ ಕೆಲವರು ಮಟಮಟ ಮಧ್ಯಾಹ್ನ ಗುಂಡಾಕಿ ಸಂಭ್ರಮಪಟ್ಟರು. ಆದ್ರೆ ಅದೆಲ್ಲವೂ ಸುಳ್ಳು ಅನ್ನೋತ್ತೆ ದರ್ಶನ್‌ ಹಾವೇರಿ ಎಂಟ್ರಿ. ಅದ್ಹೇಂಗೆ ಅಂತ ಗೊತ್ತಾಗಬೇಕಾದ್ರೆ, ನೀವು ಈ ಸ್ಟೋರಿನಾ ನೋಡ್ಲೆಬೇಕು..

ಸಪ್ಲೈಯರ್ ಮೇಲೆ ಸಾರಥಿ ಹಲ್ಲೆ ಮಾಡಿದ್ದಾರೆನ್ನುವ ಆರೋಪ ಚಕ್ರವರ್ತಿಯ ಇಮೇಜ್‌ನ ಡ್ಯಾಮೇಜ್ ಮಾಡೋದಿಕ್ಕೋ ಅಥವಾ ಸ್ಟಾರ್‌ಡಮ್‌ಗೆ ದಕ್ಕೆ ತರಬೇಕು ಅನ್ನೋದಕ್ಕೆ ಮಾಡಿದ ಕುತಂತ್ರವೋ ಅಥವಾ ನಿಜವಾಗಲೂ ಸಾರಥಿ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೋ ಗೊತ್ತಿಲ್ಲ. ಪ್ರಕರಣ ತನಿಖೆಯ ಹಂತದಲ್ಲಿರುವಾಗ್ಲೇ, ಡಿಬಾಸ್ ಬಜಾರ್‌ ನಲ್ಲಿ ಬೆಲೆತೂಕ ಕಳ್ಕೊಂಡು ಬಿಟ್ಟರು, ತಮ್ಮ ಇಮೇಜ್‌ನ ತಾವೇ ಹಾಳುಮಾಡಿಕೊಂಡರು, ತಮ್ಮ ಸ್ಟಾರ್‌ಡಮ್‌ಗೆ ತಾವೇ ದಕ್ಕೆ ತಂದು ಕೊಂಡರು ಅಂತ ಬಹುತೇಕರು ಮಾತನಾಡಿಕೊಂಡಿದ್ದರು. ಆದರೆ, ಡಿ ಬಾಸ್ ದರ್ಶನ್ ಆಟಕ್ಕೆ-ಓಟಕ್ಕೆ ಬ್ರೇಕ್ ಹಾಕುವ ತಾಕತ್ತೂ ಯಾರಿಗೂ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂ ಆಗಿದೆ. ವೈಯಕ್ತಿಕ ಜಿದ್ದಿನಿಂದಲೋ ಅಥವಾ ಮತ್ಯಾವುದೋ ಕಾರಣದಿಂದಲೋ ಸಾರಥಿಯನ್ನ ನಿಂದಿಸುವ, ತೇಜೋವಧೆ ಮಾಡುವ, ಹೆಸರಿಗೆ ಮಸಿಬಳಿಯುವ ಕೆಲಸಕ್ಕೆ ಕೈಹಾಕಿದ ಮಾತ್ರಕ್ಕೆ ಚಕ್ರವರ್ತಿಯ ಸದ್ದಡುಗುತ್ತೆ ಅಂತ ತಿಳಿದರೆ ನಿಜಕ್ಕೂ ಅದು ಸುಳ್ಳು ಅನ್ನೋದನ್ನು ಸಾರಥಿ ಸೈನಿಕ ಪಡೆ ಮತ್ತೊಮ್ಮೆ ಸಾಬೀತು ಮಾಡಿದೆ.

ಅಂತಹದೊಂದು ಘಟನೆಗೆ ಬುಧವಾರ ಹಾವೇರಿ ಜಿಲ್ಲೆ ಸಾಕ್ಷಿ ಆಯಿತು. ಅಕ್ಷರಶಃ ಅದು ಸಾಧ್ಯವಾಗಿದ್ದು ಹಾವೇರಿ ಜಿಲ್ಲೆಯ ದರ್ಶನ್‌ ಅಭಿಮಾನಿ ಬಳಗದಿಂದ. ಹೌದು, ಡಿಬಾಸ್ ಹಾವೇರಿಗೆ ಬಂದಿದ್ದಾರಂತೆ, ಶಾಸಕ ಸುರೇಶ್‌ಗೌಡರ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದಾರಂತೆ ಎನ್ನುವ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, ಹಾವೇರಿ ಸುತ್ತಮುತ್ತಲಿನ ಎಲ್ಲಾ ಅಭಿಮಾನಿಗಳು ಬ್ಯಾಡಗಿಗೆ ಬಂದು ಸೇರಿದ್ರು. ಶಾಸಕ ಸುರೇಶ್‌ಗೌಡರಿಗೆ ಸೇರಿದ ಅತಿಥಿಗೃಹ ಹಾಗೂ ಅವರ ಮನೆಮುಂದೆ ಜಮಾವಣೆಗೊಂಡರು. ಡಿಬಾಸ್‌ಗೆ ಜೈಕಾರ ಹಾಕುತ್ತಾ ಆರಾಧ್ಯದೈವನನ್ನು ಕಣ್ತುಂಬಿಕೊಡರು. ಅದಕ್ಕೆ ಸಾಕ್ಷಿ ಈ ಫೋಟೋಗಳು.

ಅಂದ್ಹಾಗೇ, ದಚ್ಚುನಾ ನೋಡೋದಕ್ಕೆ ಇನ್ಮುಂದೆ ಜನ ಸೇರಲ್ಲ, ಹೋದಲ್ಲಿ ಬಂದಲ್ಲಿ ಮುತ್ತಿಗೆ ಹಾಕಲ್ಲ ಎನ್ನುವ ಭ್ರಮೆಯಲ್ಲಿ ಕೆಲವರು ಇದ್ದರು. ಇನ್ಮುಂದೆ ದರ್ಶನ್ ಹವಾ ಕಮ್ಮಿಯಾಯ್ತು ಬಿಡ್ರಿ ಎಂಬ ಸುದ್ದಿಯನ್ನು ಹಬ್ಬಿಸಿದ್ದರು. ಆದರೆ, ಆ ಸುದ್ದಿನಾ ಸಾರಥಿ ಸೈನಿಕರು ಸುಳ್ಳು ಮಾಡಿದ್ದಾರೆ. ಯಾರು ಎಷ್ಟೇ ಆರೋಪ ಮಾಡಿದರೂ, ನಿಮ್ಮ ಮೇಲೆ ನೂರಲ್ಲ ಸಾವಿರಾರು ಆಪಾದನೆಗಳು ಕೇಳಿಬಂದ್ರೂ ಕೂಡ ನಿಮ್ಮೊಟ್ಟಿಗೆ ಸದಾ ನಾವಿರುತ್ತೇನೆ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಅದಕ್ಕೆ ಹಾವೇರಿಯಲ್ಲಿ ಜಮಾವಣೆಗೊಂಡಿದ್ದ ಅಭಿಮಾನಿಗಳೇ ಸಾಕ್ಷಿ. ದರ್ಶನ್‌ ಅಂದ್ರೆನೆ ಹಾಗೆ, ಅವರು ಲೋಕಲೋ, ಹೈ ಕ್ಲಾಸೋ ಗೊತ್ತಿಲ್ಲ. ದರ್ಶನ್‌ ಅಂದ್ರೆ ಮುಗಿ ಬಿಳ್ತಾರೆ ಫ್ಯಾನ್ಸು.

ಜಗತ್ತೇ ನಿಮ್ಮ ವಿರುದ್ದ ನಿಂತರೂ ಆ ಜಗತ್ತಿನ ವಿರುದ್ದ ನಾವು ನಿಲ್ತೇವೆ' ಹೀಗಂತ ಡಿಬಾಸ್ ಫ್ಯಾನ್ಸ್ ಬರೀ ಮಾತಿಗೆ ಹೇಳಿಲ್ಲ.ವಿ ಸ್ಟ್ಯಾಂಡ್‌ ವಿತ್ ಡಿಬಾಸ್’ ಎನ್ನುವ ಕ್ಯಾಂಪೇನ್ ಬರೀ ಅಭಿಯಾನವಾಗಿ ಉಳಿದಿಲ್ಲ ಮಾತುಕೊ ಟ್ಟಂತೆ ಡಿಬಾಸ್ ಸೆಲೆಬ್ರಿಟಿಗಳು ನಡೆದುಕೊಳ್ತಿದ್ದಾರೆ. ನಮ್ಮ ಬಾಸ್ ಪರವಾಗಿ ಯಾರೂ ಮಾತನಾಡದೇ ಇದ್ದರೂ ಪರವಾಗಿಲ್ಲ ನಾವು ಯಾವತ್ತೂ ಬಾಸ್ ಪರವಾಗಿ ರ‍್ತೇವೆ ಎಂಬುದನ್ನು ಪ್ರೂ ಮಾಡಿ ತೋರಿಸುತ್ತಿದ್ದಾರೆ. ಇಷ್ಟೆಲ್ಲಾ ಓದಿದ ಮೇಲೂ ದಾಸ ದರ್ಶನ್‌ ಅವರ ಇಮೇಜ್‌ನ ಡ್ಯಾಮೇಜ್ ಮಾಡ್ಬೇಕು, ಸ್ಟಾರ್‌ಡಮ್‌ಗೆ ಪೆಟ್ಟುಕೊಡ್ಬೇಕು ಅಂತ ಯಾರಾದ್ರೂ ಸ್ಕೆಚ್ ಹಾಕ್ತಾ ಇದ್ದರೆ ಒಂದು ಅರ್ಥ ಮಾಡ್ಕೊಬೇಕು. ಚಕ್ರವರ್ತಿಯ ಇಮೇಜ್‌ನ ಡ್ಯಾಮೇಜ್ ಮಾಡೋದು ಅಷ್ಟು ಸುಲಭದ ಕೆಲಸ ಅಲ್ಲ. ಯಾಕಂದ್ರೆ, ಯಾರಿಗೋ ಬಕೆಟ್ ಹಿಡಿದು ಡಿಬಾಸ್ ಬ್ರಾಂಡ್‌ ಆಗಿಲ್ಲ, ದಾಸನಿಗೆ ಸ್ಟಾರ್‌ಡಮ್ ಏಕಾಏಕಿ ಬಂದಿಲ್ಲ, ಸಾಮಾನ್ಯ ಲೈಟ್‌ಬಾಯ್ ಆಗಿದ್ದ ದಚ್ಚು ಚಕ್ರವರ್ತಿಯಾಗೋದಕ್ಕೆ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ತಾಯಿ ಚಾಮುಂಡೇಶ್ವರಿಗೆ ಗೊತ್ತು. ಹೀಗಾಗಿ, ಸುಖಾಸುಮ್ಮನೇ ಆರೋಪ ಮಾಡಿ ಸಾರಥಿನಾ ಕಟ್ಟಿಹಾಕೋದಕ್ಕೆ ಟ್ರೈ ಮಾಡ್ಬೇಡಿ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಆನಂದ್ ಆಡಿಯೋ ಮೂಲಕ ಹೊರ ಬಂತು “ಲಂಕೆ” ಲಿರಿಕಲ್ ಸಾಂಗ್ !

ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ “ಲಂಕೆ” ಚಿತ್ರದ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ರಾಮಪ್ರಸಾದ್ ಎಂ.ಡಿ.ಬರೆದಿರುವ “ನೋಡು ನೋಡು ಯೋಗಿ ಬಾಸು ಮಾಸು ಎಂಟ್ರಿ ಕೊಟ್ಟೇಬಿಟ್ಟ. ಧೂಳಿನಿಂದ ಎದ್ದು ಬಂದು ಅಂಬಾರಿ ಏರೇ ಬಿಟ್ಟ” ಎಂಬ ಹಾಡನ್ನು ಖ್ಯಾತ ಗಾಯಕ ಆಂಥೋನಿ ದಾಸ್ ಹಾಡಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನೀಡಿದ್ದಾರೆ. ಬುಧುವಾರ ಬಿಡುಗಡೆಯಾಗಿರುವ ಈ ಲಿರಿಕಲ್ ಸಾಂಗ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.

ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಸ್ಟುಡಿಯೋ ಒಳಗಡೆ ಒಬ್ಬರೇ ನಿಂತು ಕ್ಯಾಮೆರಾ ಆಫ್ ಆಗ್ಬಾರ್ದು ಅಂತ ನಟರಾಜ್ ಹೇಳಿದ್ದೇಕೆ…?

‘ರಾಮಾ ರಾಮಾ ರೇ’ ಖ್ಯಾತಿಯ ನಟ ನಟರಾಜ್ ಹಾಗೇಕೆ ಹೇಳಿದ್ರೂ ಗೊತ್ತಿಲ್ಲ. ಆದ್ರೆ ಹೇಳುತ್ತಲೇ ಅವರೀಗ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ ಮುಗಿಸಿದ್ದರ ಕುರಿತು ಸೋಷಲ್ ಮೀಡಿಯಾದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅಂದ ಹಾಗೆ, ‘ಮ್ಯಾನ್ ಆಫ್ ದಿ ಮ್ಯಾಚ್’ ಸತ್ಯ ಪ್ರಕಾಶ್ ನಿರ್ದೇಶನ ಚಿತ್ರ. ಒಂದಲ್ಲ ಎರಡಲ್ಲ ಚಿತ್ರದ ಒಂದಷ್ಟು ಗ್ಯಾಪ್ ನಂತರ ಈ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ವಿಶೇಷ ಅಂದ್ರೆ ನಿರ್ದೇಶನದ ಜತೆಗೀಗ ನಿರ್ಮಾಣದ ಸಾಹಸಕ್ಕೂ ಇಳಿದಿದ್ದಾರೆ.

‘ ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ನಿರ್ಮಾಣದಲ್ಲಿ ಪಿಆರ್ ಕೆ ಪ್ರೋಡಕನ್ಸ್ ಜತೆಗೆ ಸತ್ಯ ಫಿಕ್ಚರ್ಸ್ ಹಾಗೂ ಮಯೂರ ಪಿಕ್ಚರ್ಸ್ ಕೂಡ ಸಾಥ್ ನೀಡಿವೆ. ಈ ಚಿತ್ರದ ಚಿತ್ರೀಕರಣ ಮುಗಿದು ಈಗ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ.ಈ ಚಿತ್ರದಲ್ಲಿ ನಟ ನಟರಾಜ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ಒಂದಷ್ಟು ಹೊಸ ಮುಖಗಳೇ ಚಿತ್ರದ ಪಾತ್ರವರ್ಗದಲ್ಲಿದ್ದು, ಅವರೆಲ್ಲರ ಮಾಹಿತಿ ಸದ್ಯಕ್ಕೆ ನಿಗೂಢವಾಗಿದೆ. ಮುಂದಕ್ಕೆ ಅವೆಲ್ಲವೂ ರಿವೀಲ್ ಆಗಲಿದೆ. ಈ ನಡುವೆ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದಲ್ಲಿನ ತಮ್ಮ ಪಾತ್ರದ ಡಬ್ಬಿಂಗ್ ಕೆಲಸ ಮುಗಿಸಿರುವ ಬಗ್ಗೆ ನಟರಾಜ್ ಸೋಷಲ್ ಮೀಡಿಯಾದಲ್ಲಿ ಒಂದಷ್ಟು ಪೋಟೋ ಹಾಗೂ ಸಣ್ಣದೊಂದು ವಿಡಿಯೋ ರಿವೀಲ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ನಟರಾಜ್, ಹೇಳಿದ್ದು ಅರ್ಥ ಆಯ್ತು ಅಂತ ಅನ್ಕೊಂಡಿದ್ದೀನಿ, ಯಾವುದೇ ಕ್ಯಾಮೆರಾಗಳು ಆಫ್ ಆಗರ್ಬಾದು… ಅಂತ ಹೇಳುವ ಸಂಭಾಷಣೆಯ ಹಿನ್ನೆಲೆ ಸದ್ಯಕ್ಕೆ ನಿಗೂಢ. ಅದು ಗೊತ್ತಾಗುವುದು ಚಿತ್ರ ನೋಡಿದಾಗಲೆ. ಆ ಮೂಲಕ ಡಬ್ಬಿಂಗ್ ಮುಗಿಸಿರುವ ನಟರಾಜ್, ಚಿತ್ರದ ಕುರಿತು ಸಿನಿ ಲಹರಿ ಜತೆಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.

‘ ನಿರ್ದೇಶಕರ ನಿರೀಕ್ಷೆಯಂತೆಯೇ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರೀಕರಣವನ್ನು ನಾವು ಲೆಕ್ಕಚಾರ ಹಾಕಿಕೊಂಡಂತೆಯೇ ಅಚ್ಚು ಕಟ್ಟಾಗಿ ಅಂದುಕೊಂಡಷ್ಟು ದಿನಗಳಲ್ಲೇ ಮುಗಿಸಿದ್ದೇವೆ. ಚಿತ್ರದಲ್ಲಿ ಬಹಳಷ್ಟು ಕಲಾವಿದರು ಹೊಸಬರೇ ಇದ್ದಾರೆ. ನಿರ್ದೇಶಕ ರಾದ ಸತ್ಯ ಪ್ರಕಾಶ್ ಸಾಕಷ್ಟು ಶ್ರಮ ಹಾಕಿ ಎಲ್ಲವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ಸಿನಿಮಾ ಬಗ್ಗೆ ನನಗೂ ಸಾಕಷ್ಟು ನಿರೀಕ್ಷೆ ಇದೆ’ ಎಂದರು. ಈ ಚಿತ್ರದ ಚಿತ್ರೀಕರಣದ ಅಂತಿಮ ಹಂತದ ಚಿತ್ರೀಕರಣದ ವೇಳೆ ಸೆಟ್ ಗೆ ನಟ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಚಿತ್ರೀಕರಣ ವೀಕ್ಷಣೆ ನಡೆಸಿದ್ದರು. ಅವರ ಆಗಮನದಿಂದ ಚಿತ್ರ ತಂಡ ಥ್ರಿಲ್ ಆಗಿತ್ತು. ಇದೀಗ ಚಿತ್ರೀಕರಣ ಮುಗಿಸಿ, ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿ ಆಗಿದೆ.

Categories
ಸಿನಿ ಸುದ್ದಿ

ಮಾತಿನ ಮನೆಯಿಂದ ಸಂಗೀತದ ಮನೆಗೆ ಶಿಫ್ಟ್‌ ಆದ ರಂಗಸಮುದ್ರ !

ಬಹು ನಿರೀಕ್ಷಿತ ಸ್ಯಾಂಡ್ ವುಡ್ ನ ರೆಟ್ರೋ ಚಿತ್ರ ರಂಗಸಮುದ್ರ ಮಾತಿನ ಮನೆಯಿಂದ ಸಂಗೀತದ ಮನೆಗೆ ಶಿಫ್ಟ್ ಆಗಿದೆ. ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ನಿರ್ಮಿಸುತ್ತಿರುವ ರಂಗಸಮುದ್ರ ಚಲನಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ.
ಚಿತ್ರದ ಪ್ರಮುಖ ಭೂಮಿಕೆಯಲ್ಲಿರುವ ರಂಗಾಯಣ ರಘು ಅವರು ಡಬ್ಬಿಂಗ್ ಕಾರ್ಯದಲ್ಲಿ ಭಾಗಿಯಾಗಿದ್ದರು. ಚಿತ್ರದ ಕಲಾವಿದರಾದ ಸಂಪತ್ ರಾಜ್, ಕಾರ್ತಿಕ್, ಉಗ್ರಂ ಮಂಜು ಮತ್ತು ನಾಯಕಿ ದಿವ್ಯ ಹಾಗೂ ಸಹ ಕಲಾವಿದರ ಭಾಗದ ಡಬ್ಬಿಂಗ್ ಈಗಾಗಲೇ ಪೂರ್ಣಗೊಂಡಿದೆ. ಎರಡ್ಮೂರು ದಶಕಗಳ ಹಿಂದಿನ ಮಾನವೀಯ ಸೆಲೆಯ ಗ್ರಾಮೀಣ ಕಥಾ ವಸ್ತುವನ್ನು ರಂಗಸಮುದ್ರ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಚಿತ್ರದ ನಿರ್ದೇಶಕರಾಗಿರುವ ರಾಜ್ ಕುಮಾರ್ ಅಸ್ಕಿ ಅವರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.

ಕಲ್ಯಾಣ ಕರ್ನಾಟಕದ ಜವಾರಿ ಭಾಷೆ, ಕರಾವಳಿ, ಮೈಸೂರು ಕರ್ನಾಟಕ ಭಾಗದ ಸಂಭಾಷಣೆಯ ಸೊಗಸು ಚಿತ್ರದಲ್ಲಿದೆ. ಭಾಷಾ ವೈವಿದ್ಯತೆಯ ಜುಗಲ್ ಬಂಧಿ ಜೊತೆಗೆ ಭಾಂಧವ್ಯದ ಬೆಸುಗೆಯ ಕಥಾ ಹಂದರ ಚಿತ್ರದ ಹೈಲೈಟ್ ಆಗಿದೆ. ಚಿತ್ರದ ಚಿತ್ರೀಕರಣ ಕೂಡ ಮೈಸೂರ, ಬೆಂಗಳೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವಿವಿಧ ಪ್ರದೇಶಗಳು ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಂಗಸಮುದ್ರ ಚಿತ್ರಕ್ಕೆ ಗೀತ ಸಾಹಿತ್ಯ ವಾಗೀಶ್ ಚನ್ನಗಿರಿ, ಸಂಗೀತ ದೇಸೀ ಮೋಹನ್, ಸಂಕಲನ ಶ್ರೀಕಾಂತ್ ಹಾಗೂ ಹಿರಿಯ ತಂತ್ರಜ್ಞ ಗಿರಿ ಛಾಯಾಗ್ರಹಣ ಇದೆ.

Categories
ಸಿನಿ ಸುದ್ದಿ

ನಟ ದರ್ಶನ್‌ ವಿರುದ್ಧ ದೂರು – ಚಿತ್ರರಂಗದಿಂದ ಐದು ವರ್ಷ ಬ್ಯಾನ್‌ ಮಾಡ್ಬೇಕಂತೆ,ಆದರೆ ಕೆಲವರ ವಿರೋಧಕ್ಕೆ ತಿರುಗೇಟು ಕೊಟ್ಟ ಹಾಗಿದೆ ದರ್ಶನ್‌ ಪರವಾದ ಅಭಿಯಾನ !

ನಟ ದರ್ಶನ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೋಮವಾರವಷ್ಟೇ ದರ್ಶನ್‌ ಹಿಂಬಾಲಿಕರಿಂದ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಅಂತ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ಸೈಬರ್‌ ಕ್ರೈಂಗೆ ದೂರು ನೀಡಿದ್ದರ ಬೆನ್ನಲೇ ಮಾನವ ಹಕ್ಕುಗಳು ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ, ನಟ ದರ್ಶನ್‌ ವಿರುದ್ಧ ಕರ್ನಾಟಕ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ದರ್ಶನ್‌ ಅವರು ಬಳಸುತ್ತಿರುವ ಪದ ಬಳಕೆ ಸರಿಯಿಲ್ಲ. ಮಾಧ್ಯಮಗಳಿಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಬೇಕು. ಒಬ್ಬ ನಟನಾಗಿ ಸಾರ್ವಜನಿಕ ಕ್ಷೇತ್ರದಲ್ಲಿದ್ದಾಗ ತುಂಬಾ ಎಚ್ಚರಿಕೆಯಿಂದ ಮಾತನಾಡಬೇಕು. ಆದರೆ ದರ್ಶನ್‌ ತುಂಬಾನೆ ಅಶ್ಲೀಲ ಪದ ಬಳಕೆ ಮಾಡಿ ಕೆಲವರನ್ನು ನಿಂದಿಸಿದ್ದಾರೆ. ಇದು ಚಿತ್ರರಂಗ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಚಿತ್ರರಂಗದಿಂದ ಐದು ವರ್ಷ ಬ್ಯಾನ್‌ ಮಾಡಬೇಕು ಎಂದು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಒತ್ತಾಯಿಸಿದೆ. ಪದ ಬಳಕೆ ಮಾಡುವಾಗ ಎಚ್ಚರ ಇರಲಿ ಎಂದು ದರ್ಶನ್‌ ಅವರಿಗೆ ಕರ್ನಾಟಕ ವಾಣಿಜ್ಯ ಮಂಡಳಿ ವಾರ್ನಿಂಗ್‌ ಮಾಡಬೇಕು. ಈ ಕೆಲಸವನ್ನು ಮಂಡಳಿ ಮುಂದಿನ ನಾಲ್ಕುದಿನಗಳಲ್ಲಿ ಮಾಡಬೇಕು. ಹಾಗೆ ಮಾಡದಿದ್ದರೆ ಹೋರಾಟ ನಡೆಸುವುದಾಗಿ ಮಾನವ ಹಕ್ಕುಗಳು ರಕ್ಷಣೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಅಧ್ಯಕ್ಷ ಮೋಹನ್‌ ಎಚ್ಚರಿಕೆ ನೀಡಿದ್ದಾರೆ.


ಈ ಮಧ್ಯೆಯೇ ಸೋಷಲ್‌ ಮೀಡಿಯಾದಲ್ಲಿ ನಟ ದರ್ಶನ್‌ ಪರವಾಗಿ ಅಭಿಯಾನ ಶುರುವಾಗಿದೆ. ʼಜಗತ್ತೇ ನಿಮ್ಮ ವಿರುದ್ಧ ನಿಂತರು ಆ ಜಗತ್ತಿನ ವಿರುದ್ಧ ನಾವು ನಿಲ್ಲುತ್ತೇವೆ. ‘we stand with d boss’ʼ ಎನ್ನುವ ಅಭಿಯಾನ ಈಗ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗುತ್ತಿದೆ.ಸಂದೇಶ್‌ ಪ್ರಿನ್ಸ್‌ ಹೋಟೆಲ್‌ ಸಿಬ್ಬಂದಿ ಮೇಲೆ ದರ್ಶನ್‌ ಹಲ್ಲೆ ಮಾಡಿದ್ದಾರೆ, ಅವರ ಹಿಂಬಾಲಿಕರಿಂದ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಅಂತ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಆರೋಪ ಮಾಡಿದ್ದಲ್ಲದೆ, ದರ್ಶನ್‌ ಹಿಂಬಾಲಕರ ವಿರುದ್ಧ ಈಗ ಸೈಬರ್‌ ಕ್ರೈಂಗೆ ದೂರು ನೀಡಿದ್ದರ ನಡುವೆಯೂ ದರ್ಶನ್‌ ಪರ ಅಭಿಯಾನಕ್ಕೆ ಸಾವಿರಾರು ಮಂದಿ ಪೋಸ್ಟ್‌ ಮಾಡಿದ್ದಾರೆ. ಸೆಲಿಬ್ರಿಟಿಗಳು ಜತೆಗೆ ರಾಜಕಾರಣಿಗಳು ಕೂಡ ದರ್ಶನ್‌ ಅವರಿಗೆ ಬೆಂಬಲ ಸೂಚಿಸಿ ಟ್ವಿಟ್‌ ಮಾಡಿದ್ದಾರೆ.ʼನಿಮ್ಮ ಸಂಕಷ್ಟದಲ್ಲಿ ನಾವಿದ್ದೇವೆ.ಯಾರು ನಿಮ್ಮ ಜೊತೆಗಿರುತ್ತಾರೋ ಇಲ್ಲವೋ ಗೊತ್ತಿಲ್ಲ.ನಾನಂತೂ ನಿಮ್ಮ ಜತೆಗಿರುತ್ತೇನೆ.ನಿಮ್ಮನ್ನು ನಾವು ಪ್ರತಿಸುತ್ತೇವೆ.ನಿಮಗೆ ನಮ್ಮ ಬೆಂಬಲ ಸದಾ ಇದೆʼ ಎಂದು ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಟ್ವಿಟ್‌ ಮಾಡಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಸಂಸದ ಪಿ.ಸಿ. ಮೋಹನ್‌ ಕೂಡ ದರ್ಶನ್‌ ಪರವಾಗಿ ಟ್ವೀಟ್‌ ಮಾಡಿದ್ದು, ‘ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಸಲ್ಲಿಸುತ್ತಿರುವ ದರ್ಶನ್ ತೂಗುದೀಪರವರು ನನಗೆ ಆತ್ಮೀಯರು. ಚಾಲೆಂಜಿಂಗ್ ಸ್ಟಾರ್ ಯಾರೇ ಕಷ್ಟ ಎಂದರೂ ಸಹಾಯಕ್ಕೆ ನಿಲ್ಲುತ್ತಾರೆ. ರೈತರ ಹೋರಾಟ, ರೈತರ-ಕಲಾವಿದರ ಕಷ್ಟ, ಪ್ರಾಣಿಗಳ ಸಂಕಷ್ಟ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಬರುವುದು ದರ್ಶನ್ ಎಂದು ಕರ್ನಾಟಕಕ್ಕೇ ತಿಳಿದಿದೆ. ಯಾವುದೇ ಆಧಾರವಿಲ್ಲದೆ ದರ್ಶನ್ ಅವರ ಮೇಲೆ ಅನಗತ್ಯ ಆರೋಪ ಮಾಡಿ, ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಚಿತ್ರರಂಗದ ಹಿರಿಯರು ಹಾಗೂ ವಾಣಿಜ್ಯಮಂಡಳಿ ಮಧ್ಯಪ್ರವೇಶಿಸಿ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕಾಗಿ ನನ್ನ ವಿನಂತಿ’ ಎಂದು ಉಲ್ಲೇಖಿಸಿದ್ದಾರೆ. ಕೆಲವರ ವಿರೋಧದ ನಡುವೆಯೂ ದರ್ಶನ್‌ ಹಲವರಿಗೆ ಬೇಕಾಗಿರೋದಕ್ಕೆ ಇದು ಸಾಕ್ಷಿ.

Categories
ಸಿನಿ ಸುದ್ದಿ

ಮಾಧ್ಯಮ ಅಕಾಡೆಮಿಗೆ ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ?

ಬಹುದಿನಗಳಿಂದ ಖಾಲಿ ಇದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಈಗ ಅಧ್ಯಕ್ಷರನ್ನು ನೇಮಕ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಹಿರಿಯ ಸಿನಿಮಾ ಪತ್ರಕರ್ತ ಹಾಗೂ ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ ಅವರನ್ನು ನೇಮಕ ಮಾಡಿದ್ದು, ಮಂಗಳವಾರ ಸಂಜೆ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ʼಲಂಕೇಶ್‌ ಪತ್ರಿಕೆʼಯಲ್ಲಿ ಸಿನಿಮಾ ಬರಹಗಾರರಾಗಿದ್ದ ಸದಾಶಿವ ಶೆಣೈ ಅಲ್ಲಿಯೇ ಬಹುಕಾಲ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ರಂಗದ ಜತೆಗೆ ತುಂಬಾ ಆತ್ಮೀಯ ಒಡನಾಟ ಹೊಂದಿದ್ದು ನಟರಾದ ಶಿವರಾಜ್‌ ಕುಮಾರ್‌ ಹಾಗೂ ಉಪೇಂದ್ರ ಅವರ ಕುರಿತು ಪುಸ್ತಕ ಹೊರ ತಂದಿದ್ದಾರೆ. ಲಂಕೇಶ್‌ ಪತ್ರಿಕೆಯ ನಂತರ ಇತ್ತೀಚೆಗೆ ಅವರು ಬಿ ಟಿವಿಯಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಹವ್ಯಾಸಿ ಬರಹಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ಪ್ರೆಸ್‌ ಕ್ಲಬ್‌ ಗೆ ಎರಡು ಅವದಿಗೆ ಅಧ್ಯಕ್ಷರಾದ ಹೆಗ್ಗಳಿಕೆ ಅವರದು. ಹಾಗೆಯೇ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಲಿ ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷರಾಗಿದ್ದಾರೆ. ಇದೀಗ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಅವರು ನೇಮಕ ಆಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.

Categories
ಸಿನಿ ಸುದ್ದಿ

ಕನಸೆಂಬ ಕುದುರೆಯನ್ನೇರಿದ ನಟ ವೈಜನಾಥ್‌ ಬಿರಾದರ್‌ಗೆ ಪದ್ಮಶ್ರೀ ಪ್ರಶಸ್ತಿ ಸಿಗಬಾರದೇಕೆ ?

ಹಿರಿಯ ಪತ್ರಕರ್ತ ಟೆಲೆಕ್ಸ್ ರವಿಕುಮಾರ್‌ ಪತ್ರಕರ್ತರು ಮಾತ್ರವಲ್ಲ, ಸೂಕ್ಷ್ಮ ಸಂವೇದನೆಯ ಲೇಖಕರು ಹೌದು. ಅವರು ಬರೆದ ʼ ನಂಜಿಲ್ಲದ ಪದಗಳುʼ ಕವನ ಸಂಕಲನದ ಕೃತಿಗೆ ಸಾಕಷ್ಟು ಪ್ರಶಸ್ತಿ ಬಂದಿವೆ. ಸಾಹಿತ್ಯದ ಜತೆಗೆ ಸಧಬಿರುಚಿಯ ಸಿನಿಮಾಗಳಂದ್ರೆ ಅವರಿಗೆ ಅತೀವ ಆಸಕ್ತಿ. ಕನ್ನಡದ ಜತೆಗೆ ಅನ್ಯ ಭಾಷೆಗಳಲ್ಲೂ ಬರುವ ಕಲಾತ್ಮಕ ಹಾಗೂ ಸಾಮಾಜಿಕ ಕಾಳಜಿಯ ಕಮರ್ಷಿಯಲ್‌ ಸಿನಿಮಾಗಳನ್ನು ನಿರಂತರವಾಗಿ ನೋಡುತ್ತಾ, ವಿಮರ್ಶಿಸುತ್ತಾ ಬರುತ್ತಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಅಭಿಯಾನ ಶುರುವಾಗಿರುವ ಈ ಹೊತ್ತಲ್ಲಿ ಅವರು, ಹಿರಿಯ ನಟ ವೈಜನಾಥ್‌ ಬಿರಾದರ್‌ ಅವರನ್ನು ಶಿಫಾರಸ್ಸು ಮಾಡಿ ಬರೆದ ಬರಹ ಇಲ್ಲಿದೆ. ಪದ್ಮಶ್ರೀ ಪ್ರಶಸ್ತಿಗೆ ಬಿರಾದರ್‌ ಯಾಕೆ, ಹೇಗೆ ಅರ್ಹರು ಅನ್ನೋದಕ್ಕೆ ಅವರು ಕೊಟ್ಟ ಕಾರಣಗಳು ಇಲ್ಲಿವೆ . ಓವರ್‌ ಟು ರವಿಕುಮಾರ್..

ಕನ್ನಡದ ಉತ್ತರಕರ್ನಾಟಕದ ಜವ್ಹಾರಿ ನಟ ವೈಜನಾಥ್ ಬಿರಾದರ್ ಕನ್ನಡ ಚಿತ್ರರಂಗದಲ್ಲಿ ನಟನೆಯ ಗೀಳಿಗೆ ಬಿದ್ದು ಬೀದರ್‌ನಿಂದ ಬೆಂಗಳೂರಿಗೆ ಬಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಡ ಕೃಷಿಕುಟುಂಬ ಬಿರಾದಾರ್ ತಾಯಿಯಿಂದ‌ ಪಡೆದ ಹಾಡು,ನಟನೆಯೆ ಚಿತ್ರರಂಗದ ಗೀಳು ಹಚ್ಚಿತು ಎನ್ನಬಹುದು. ಕೇವಲ ಮೂರನೆ ಕ್ಲಾಸ್ ಓದಿದ ಬಿರಾದಾರ್ ಗೆ ನಾಲ್ಕನೆ ಕ್ಲಾಸ್ ಓದಿ ಮೇರು ನಟರಾದ ಡಾ.ರಾಜಕುಮಾರ ಅವರು ಆದರ್ಶವಾಗಿ ಕಂಡರು.ಬೆಂಗಳೂರೆಂಬ ಮಾಯಾನಗರಿಯಲ್ಲಿ ವರ್ಷಾನುಗಟ್ಟಲೆ ಅನ್ನ ನೀರು ನೆರಳಿಲ್ಲದೆ ಪಡಬಾರದ ಕಷ್ಟ ಪಟ್ಟ ಬಿರಾದರ್ ನ್ನು ಗುರುತಿಸಿ ಚಿತ್ರದಲ್ಲಿ ಅವಕಾಶ ಕೊಟ್ಟವರು ಅನುಭವ ಕಾಶಿನಾಥ್.ಬಿರಾದಾರ್ ಕನ್ನಡ ಸಿನಿಮಾಗಳಲ್ಲಿ ಭಿಕ್ಷುಕನ ಪಾತ್ರಕ್ಕೆ ಬ್ರಾಂಡ್ ಆಗಿಬಿಟ್ಟರು. ಭಿಕ್ಷುಕ,ಕುಡುಕ ಪಾತ್ರಗಳೆ ಅವರಿಗೆ ಖಾಯಂ ಆಗಿ ಚಿತ್ರರಂಗದಲ್ಲಿ ನೆಲೆಯೂರಿದರು.ಭಿಕ್ಷುಕ ಪಾತ್ರಗಳಿಗೆ ಸೀಮಿತರಾದ ಬಿರಾದಾರ್ ಎಂದಿಗೂ ನೊಂದುಕೊಳ್ಳಲಿಲ್ಲ. ‘ ಭಿಕ್ಷುಕ ಪಾತ್ರವೆ ನನ್ನ ಜೀವನದ ಅಕ್ಷಯ ಪಾತ್ರೆ’ ಎಂದು ಸಂತೃಪ್ತರಾಗಿದ್ದರು. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನೈಜ ಅಭಿನಯದಿಂದ ತಮ್ಮದೆ ಅಭಿಮಾನ ವಲಯ ವನ್ನು ಹೊಂದಿರುವ ಬಿರಾದಾರ್ ಅವರ ಅಪ್ರತಿಮ ಪ್ರತಿಭೆಗೆ ಕನ್ನಡಿ ಯಂತೆ ” ಕನಸೆಂಬ ಕುದುರೆಯನ್ನೇರಿ” ಚಿತ್ರವನ್ನು ನೋಡಬೇಕು.

2010 ರಲ್ಲಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಈ ಚಿತ್ರ ಸ್ಪೇನ್ ನಲ್ಲಿ ನಡೆದ ಅಂತರರಾಷ್ಟ್ರೀಯ India image ಸ್ಪರ್ಧೆಯಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗದ ಹಿರಿಮೆಗೆ ಗರಿ ಮೂಡಿಸಿದರು.
ಬಿರಾದಾರ್ ಕನ್ನಡದ ಮತ್ತೋರ್ವ ಖ್ಯಾತ ನಟ ಅನಂತನಾಗ್ ರಷ್ಟು ಸ್ಫುರದ್ರೂಪಿಯಲ್ಲ. ಅನಂತನಾಗ್ ಅವರಿಗಿರಬಹುದಾದ ಸಾಮಾಜಿಕ‌ ಹಿನ್ನಲೆಯಾಗಲಿ, ಸಾಂಸ್ಕೃತಿಕ ಪ್ರಭಾವಳಿಯಾಗಲಿ , ರಾಜಕೀಯ ಸಿದ್ಧಾಂತದ ಬಲವಾಗಲಿ ಬಿರಾದರ್ ಗೆ ಇಲ್ಲ. ಆದರೆ ಬಿರಾದಾರ್ ತನಗೊಹಿಸುವ ಪಾತ್ರದಲ್ಲಿ ಯಾರಿಗೂ ಕಮ್ಮಿಯಿಲ್ಲದಂತೆ ಪ್ರತಿಭೆ ಯನ್ನು ಮೆರೆಯುತ್ತಾರೆ. ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ಒಬ್ಬ ಸಾಮಾನ್ಯ ನಟ ಕಾಮಿಡಿಯನ್ ಆಗಿ, ಪೋಷಕ ಪಾತ್ರಗಳಲ್ಲಿ ಐದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವುದು ,ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆವುದು ಸಾಧನೆಯಲ್ಲವೆ?

ನಿಮಗೆ ಗೊತ್ತಿರಲಿ, ಬಿರಾದಾರ್ ಅವರಿಗೆ ಚಲನಚಿತ್ರವೊಂದರಲ್ಲಿ ಮೊಟ್ಟಮೊದಲಿಗೆ ಚಿಕ್ಕದೊಂದು ಪಾತ್ರ ಕೊಡಿಸಿದವರು ಅನಂತನಾಗ್ . ಖ್ಯಾತ ನಿರ್ದೇಶಕ ಎಂ.ಎಸ್ ಸತ್ಯು ಅವರ ನಿರ್ದೇಶನದ ‘ಬರ’ ಚಿತ್ರದ ಚಿತ್ರೀಕರಣ ಬೀದರ್ ನಲ್ಲಿ ಆಸಕ್ತಿಯಿಂದ ಚಿತ್ರೀಕರಣ ನೋಡಲು ಹೋದ ಬಿರಾದಾರ್ ನಟ ಅನಂತನಾಗ್ ಅವರಿಗೆ ಊಟಕ್ಕೆ ಮೊಸರು ಅಗತ್ಯವಿದೆ ಎಂದು ತಿಳಿದು ತಮ್ಮ ಮನೆಯಿಂದ ಅನಂತ್ ನಾಗ್ ಅವರಿಗೆ ಮೊಸರು ತಂದುಕೊಡುತ್ತಾರೆ. ಈ ಸಂದರ್ಭದಲ್ಲಿ ಬಿರಾದಾರ್ ರಂಗಭೂಮಿ ನಟನೆಂಬ ಸುದ್ದಿ ತಿಳಿದ ಅನಂತ್ ನಾಗ್ ನಿರ್ದೇಶಕರಿಗೇಳಿ ಬಿರಾದಾರ್ ಅವರಿಗೆ ‘ಬರ’ ಚಿತ್ರದಲ್ಲಿ ಸಣ್ಣಪಾತ್ರವೊಂದನ್ನು ಕೊಡಿಸು ತ್ತಾರೆ. ಅನಂತ್ ನಾಗ್ ಮತ್ತು ಬಿರಾದಾರ್ ಅವರನ್ನು ಪರಸ್ಪರ ಹೋಲಿಕೆ ಮಾಡಲಾಗದು ನಿಜ, ಆದರೆ ನೈಜ ಪ್ರತಿಭೆ ಬಿರಾದಾರ್ ಒಕ್ಕೂಟ ಸರ್ಕಾರದ ‘ ಪದ್ಮಶ್ರೀ’ ಪ್ರಶಸ್ತಿಗೆ ಎಲ್ಲಾ ಬಗೆಯಲ್ಲೂ ಅರ್ಹರಿ ದ್ದಾರೆ ಎಂಬುದನ್ನು ಅಲ್ಲೆಗೆಳೆಯುವಂತಿಲ್ಲ. ಬಿರಾದಾರ್ ಅವರಿಗೆ ಪದ್ಮಶ್ರೀ ಸಿಗಲಿ.

Categories
ಸಿನಿ ಸುದ್ದಿ

ಚಿತ್ರೀಕರಣ ಮುಗಿಸಿದ ಶ್ರೀಕೃಷ್ಣ @ಜಿಮೇಲ್‌. ಕಾಮ್‌ , ನಸು ನಕ್ಕ ಡಾರ್ಲಿಂಗ್‌ ಕೃಷ್ಣ

ಸಿನಿ ದುನಿಯಾದಲ್ಲೀಗ ಟೈಟಲ್ಗೊಂದು ಅರ್ಥ ಇರಬೇಕು ಅಂತೇನು ಇಲ್ಲ. ಜನಪ್ರಿಯತೆ ಪಡೆದ ಪದ ಹೇಗಿದ್ದರೂ ಸರಿ, ಆ ಹೆಸರಲ್ಲೊಂದು ಸಿನಿಮಾ ಮಾಡುವ, ಅದಕ್ಕೂ ಒಂದು ಕಾರಣ ನೀಡುವ ಅಭ್ಯಾಸ ಮಾಮೂಲು. ಹೆಸರಾಂತ ನಿರ್ಮಾಪಕ, ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಅವರ ಸಂದೇಶ್‌ ಪ್ರೊಡಕ್ಷನ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ʼ ಶ್ರೀಕೃಷ್ಣ @ಜಿಮೇಲ್‌. ಕಾಮ್‌ʼ ಚಿತ್ರಕ್ಕೀಗ ಚಿತ್ರೀಕರಣ ಮುಗಿದಿದೆ.

ಕಳೆದ ಎಂಟು ದಿನಗಳಿಂದ ಮೇಲುಕೋಟೆ ಸೇರಿದಂತೆ ಮೈಸೂರು ಸುತ್ತಮುತ್ತ ಹಾಡಿನ ಚಿತ್ರೀಕರಣ ‌ನಡೆದಿದೆ. ಹಾಗೆಯೇ ಮೈಸೂರಿನ ಸಂದೇಶ್ ಹೋಟೆಲ್‌ ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿದೆ. ಒಟ್ಟು 90 ದಿನಗಳ ಕಾಲ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.ನಾಗಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ ಚಿತ್ರ ಇದು. ಲವ್‌ ಮಾಕ್ಟೆಲ್‌ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಇದರ ನಾಯಕ ನಟ.

ಭಾವನಾ ಈ ಚಿತ್ರದ ನಾಯಕಿ. ಅವರೊಂದಿಗೆ ಚಂದನ್‌ ಗೌಡ ಚಿತ್ರದ ಎರಡನೇಯ ನಾಯಕ. ವಿಶೇಷ ಅಂದ್ರೆ ನಟ , ನಿರ್ದೇಶಕ ರಿಷಭ್‌ ಶೆಟ್ಟಿ ಈ ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅವರೊಂದಿಗೆ ದತ್ತಣ್ಣ, ಸಾಧುಕೋಕಿಲ, ಚಿಕ್ಕಣ್ಣ, ಸಾತ್ವಿಕ್(ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂತಾದ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ.

ಸಂದೇಶ್ ಪ್ರೊಡಕ್ಷನ್ಸ್ ಮೂಲಕ ಈ ಹಿಂದೆ “ಅಮರ್” ಚಿತ್ರವನ್ನೂ ನಿರ್ದೇಶಿಸಿ ತೆರೆಗೆ ತಂದಿದ್ದ ನಾಗಶೇಖರ್‌, ಈಗ ʼಶ್ರೀಕೃಷ್ಣ @ಜಿಮೇಲ್‌. ಕಾಮ್‌ʼ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಟೈಟಲ್‌ ನಲ್ಲಿಯೇ ಡಿಫೆರೆಂಟ್‌ ಎನಿಸುವ ಸಿನಿಮಾ ಇದು. ಹಾಗೆಯೇ ತುಂಬಾ ಸೊಗಸಾದ ಕಥೆ ಈ ಚಿತ್ರದಲ್ಲಿದೆ ಎನ್ನುವ ಭರವಸೆಯ ಮಾತು ನಾಗಶೇಖರ್‌ ಅವರದ್ದು.

Categories
ಸಿನಿ ಸುದ್ದಿ

ʼಫ್ಯಾಮಿಲಿ ಪ್ಯಾಕ್” ಗೆ ಶೂಟಿಂಗ್‌ ಕಂಪ್ಲೀಟ್‌- ಸೆಟ್‌ ಗೆ ಹೋಗಿ ಚಿತ್ರ ತಂಡಕ್ಕೆ ಶುಭ ಕೋರಿದ ಪವರ್‌ ಸ್ಟಾರ್‌

ನಟ ಪುನೀತ್‌ ರಾಜ್‌ ಕುಮಾರ್‌ ಅವರ ಹೋಮ್‌ ಬ್ಯಾನರ್‌ ಪಿಆರ್‌ ಕೆ ಪ್ರೊಡಕ್ಷನ್‌ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಫ್ಯಾಮಿಲಿ ಫ್ಯಾಕ್‌ ಶೂಟಿಂಗ್‌ ಮುಗಿದಿದೆ. ಒಟ್ಟು ಮೂವತ್ತಕ್ಕೂ ಹೆಚ್ಚು ದಿನಗಳ ಕಾಲ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರ ತಂಡ ಚಿತ್ರೀಕರಣ ನಡೆಸಿದೆ. ಚಿತ್ರೀಕರಣದ ಕೊನೆಯ ದಿನ ಚಿತ್ರದ ನಿರ್ಮಾಪಕರು ಆದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ದಂಪತಿ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ, ಚಿತ್ರೀಕರಣ ವೀಕ್ಷಿಸಿದರು. ಹಾಗೆಯೇ ಚಿತ್ರ ತಂಡದ ಪ್ರತಿಯೊಬ್ಬರ ಕೆಲಸವನ್ನು ಮೆಚ್ಚಿಕೊಂತು ತಂಡಕ್ಕೆ ಶುಭ ಕೋರಿದ್ದಾಗಿ ನಿರ್ದೇಶಕ ಅರ್ಜುನ್‌ ಕುಮಾರ್‌ ಹೇಳುತ್ತಾರೆ.

ಕನ್ನಡ ಚಿತ್ರರಂಗರದಲ್ಲಿನ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದೇ ಶುರುವಾಗಿರುವ ಪುನೀತ್‌ ರಾಜ್‌ ಕುಮಾರ್‌ ಹಾಗೂ ಅಶ್ವಿನಿದಂಪತಿಗಳ ಪಿಆರ್‌ ಕೆ ಪ್ರೋಡಕ್ಷನ್‌ ಸಂಸ್ಥೆ ಈಗಾಗಲೇ ಮೂರ್ನಾಲ್ಕು ಚಿತ್ರಗಳನ್ನು ನಿರ್ಮಿಸಿ ತೆರೆಗೆ ತಂದಿದೆ. ಅಷ್ಟು ಚಿತ್ರಗಳೂ ಸದಭಿರುಚಿಯೇ ಚಿತ್ರಗಳೆ. ಆ ಸಾಲಿಗೆ ಸೇರುವ ಮತ್ತೊಂದು ಚಿತ್ರವೇ ಫ್ಯಾಮಿಲಿ ಪ್ಯಾಕ್.‌

ಆದಿನ ಚಿತ್ರೀಕರಣದ ಸೆಟ್‌ ನಲ್ಲಿ ಚಿತ್ರದ ನಾಯಕ ಲಿಖಿತ್‌ ಶೆಟ್ಟಿ, ನಾಯಕಿ ಅಮೃತ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತಕುಮಾರ್, ಪದ್ಮಜಾರಾವ್, ಶರ್ಮಿತಾ ಗೌಡ, ಸಿಹಿಕಹಿ ಚಂದ್ರು ಮುಂದಿನ ಕಲಾವಿದರು ಅಂದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಮನೋರಂಜನೆ ಪ್ರಧಾನವಾಗಿರುವ ಈ ಚಿತ್ರದ ನಿರ್ಮಾಪಕರು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ . ಈ ಹಿಂದೆ ಸಂಕಷ್ಟ ಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ‌ ಅರ್ಜುನ್ ಕುಮಾರ್ “ಫ್ಯಾಮಿಲಿ ಪ್ಯಾಕ್” ನ ನಿರ್ದೇಶಕ.ನಿರ್ಮಾಪಕ ಲಿಖಿತ್ ಶೆಟ್ಟಿ ಅವರು ಈ ಚಿತ್ರದ ನಾಯಕ ಕೂಡ. ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲ ಹಾಗೂ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿದೆ.ಮಾಸ್ತಿ ಫ್ಯಾಮಿಲಿ ಪ್ಯಾಕ್ ಗೆ ಸಂಭಾಷಣೆ ಬರೆದಿದ್ದಾರೆ.

Categories
ಸಿನಿ ಸುದ್ದಿ

ನಟಿ ಶ್ರುತಿಗೆ‌‌ ಕೋಕ್ ಕೊಟ್ಟಾಗ ಕಿಸಿಕಿಸಿ ನಕ್ಕವರು ಒಮ್ಮೆ ಇಲ್ನೋಡಿ‌!?

ಯಾವುದೇ ಕ್ಷೇತ್ರವಿರಲಿ ಕುರ್ಚಿಯಿಂದ ಕೆಳಗಿಳಿದಾಗ ಹಾಗೂ ಕೆಳಗಿಳಿಸಿದಾಗ ಕೇಕೆ ಹಾಕುವವರು ಜೊತೆಗೆ ಕಿಸಿಕಿಸಿ ಅಂತ ಮರೆಯಲ್ಲಿ ನಗುವವರು ಅವಿತುಕೊಂಡಿರ್ತಾರೆ. ಹಾಗೆಯೇ, ನಟಿ ಶ್ರುತಿ ಅವರನ್ನ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷೆ ಸ್ಥಾನದಿಂದ ರಾಜ್ಯ ಸರ್ಕಾರ ಏಕಾಏಕಿ ಕೆಳಗಿಳಿಸಿದಾಗ ಕೆಲವರು ಕಿಸಿಕಿಸಿ ಅಂತ ನಕ್ಕರು. ಅಧಿಕಾರ ಸ್ವೀಕರಿಸಿ ಆರು ತಿಂಗಳು ಆಗಿಲ್ಲ ಆಗಲೇ ಗೇಟ್ ಪಾಸ್ ತಗೊಂಡ್ರಲ್ಲ ಗುರು ಅಂತ ಆಡಿಕೊಂಡರು. ಇದಾಗಿ ಕೇವಲ ಎರಡು ದಿನ ಕಳೆದಿದೆ ಅಷ್ಟೇ ನಟಿ ಶ್ರುತಿಗೆ
ಮತ್ತೊಂದು ಅಧಿಕಾರ ಸಿಕ್ಕಿದೆ. ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ಶ್ರುತಿ ನೇಮಕಗೊಂಡಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ‌ಆದೇಶ ಹೊರಡಿಸಿದ್ದು, ನಟಿ ಶ್ರುತಿ ಹೊಸ ಜವಬ್ದಾರಿ ಸಿಕ್ಕ ಸಂಭ್ರಮದಲ್ಲಿದ್ದಾರೆ. ರಾಜ್ಯ ಸರ್ಕಾರ ಕೋಕ್ ಕೊಟ್ಟಾಗ ನಕ್ಕವರಿಗೆ ಹೊಸ ಹುದ್ದೆಯನ್ನ ಗಿಟ್ಟಿಸಿಕೊಳ್ಳುವ ಮೂಲಕ ಉತ್ತರ ಕೊಟ್ಟಿದ್ದಾರೆ.

error: Content is protected !!