Categories
ಸಿನಿ ಸುದ್ದಿ

ಭಾವುಕತೆ ಸಾರುವ ಡಿಎನ್‌ಎ-ಸಂಬಂಧಗಳ ಮೌಲ್ಯದ ಹಿಂದೆ ಪ್ರಕಾಶ್‌ ರಾಜ್‌ ಮೇಹು

 

ಸಂಬಂಜ ಅನ್ನೋದು ದೊಡ್ಡದು ಕನಾ…
ಈ ಪದಗಳೊಮ್ಮೆ ಕಿವಿಗಪ್ಪಳಿಸಿದರೆ, ನೆನಪಾಗೋದೇ ದೇವನೂರು ಮಹಾದೇವ ಅವರು. ಹೌದು ಅವರ ಜನಪ್ರಿಯಗೊಂಡ “ಕುಸುಮ ಬಾಲೆ” ಪುಸ್ತಕದೊಳಗಿರುವ ಮರೆಯದ ಸಾಲುಗಳಿದು. ಇಷ್ಟಕ್ಕೂ ಈ ದೇವನೂರು ಮಹಾದೇವ ಅವರ ಪುಸ್ತಕದೊಳಗಿರುವ “ಸಂಬಂಜ ಅನ್ನೋದು ದೊಡ್ಡದು ಕನಾ…ʼ ಚಿತ್ರವೊಂದರ ಟ್ಯಾಗ್‌ ಲೈನ್.‌ ಅ ಚಿತ್ರ ಬೇರಾವೂದೂ ಅಲ್ಲ, ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಸದ್ದಿಲ್ಲದೆಯೇ ಶೂಟಿಂಗ್‌ ಮುಗಿಸಿ, ಸೆನ್ಸಾರ್‌ ಮಂಡಳಿಯಿಂದ ಯು ಪ್ರಮಾಣ ಪತ್ರ ಪಡೆದಿರುವ “ಡಿ ಎನ್‌ ಎ” ಸಿನಿಮಾ.


ಹೌದು, ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಅವರು ಹೊಸ ರೀತಿಯ ನಿರೂಪಣೆಯೊಂದಿಗೆ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆ ಇದೊಂದು, ಭಾವನಾತ್ಮಕ ಸಂಬಂಧಗಳ ನಡುವಿನ ಕಥಾಹಂದರ ಹೊಂದಿದೆ. ಪ್ರಸ್ತುತ ದಿನಮಾನದಲ್ಲಿ ನಡೆಯುವ ವಿಷಯಗಳೇ ಚಿತ್ರದ ಹೈಲೈಟ್.‌ ಜಾತಿ,ಧರ್ಮಗಳ ಹೆಸರಿನಲ್ಲಿ ಮನಷ್ಯ-ಮನಷ್ಯರ ನಡುವಿನ ಗೋಡೆಗಳು ಭದ್ರಗೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ, ನಿಜವಾದ ಸಂಬಂಧ ಯಾವುದು? ರಕ್ತ ಸಂಬಂಧವೆ? ಭಾವನಾತ್ಮಕ ಸಂಬಂಧವೆ? ಅನ್ನುವ ವಿಷಯವನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಪ್ರಕಾಶ್‌ ರಾಜು ಮೇಹು. ಈಗಾಗಲೇ ಚಿತ್ರವನ್ನು ವೀಕ್ಷಿಸಿರುವ ಸಿನಿಮಾರಂಗದ ಕೆಲ ಗೆಳೆಯರು, ಅಪ್ತರು, ತಂತ್ರಜ್ಞರು, ಚಿತ್ರದೊಳಗಿರುವ ಅಂಶಗಳ ಬಗ್ಗೆ, ನಿರ್ದೇಶಕರ ಆಲೋಚನೆಗಳ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರ. ಸೆನ್ಸಾರ್ ಮಂಡಳಿ ಕೂಡ ಸಿನಿಮಾ ವೀಕ್ಷಿಸಿ, ಯಾವುದೇ ಕಟ್‌, ಮ್ಯೂಟ್‌ ಇಲ್ಲದೆ ಯು ಪ್ರಮಾಣ ಪತ್ರ ನೀಡುವುದರ ಜೊತೆಗೆ ಚಿತ್ರದೊಳಗಿರುವ ತಾಕತ್ತಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಬಂಧಗಳ ಮೌಲ್ಯಗಳಿರುವ ಕಥೆಯಲ್ಲಿ ಭಾವುಕತೆಯೇ ತುಂಬಿದೆ. ಹಾಗಾಗಿ, ಇದು ಎಲ್ಲಾ ವರ್ಗದವರಿಗೂ ಇಷ್ಟವಾಗುವ ಸಿನಿಮಾ ಇದಾಗಲಿದೆ ಎಂಬುದು ಅವರ ಮಾತು.

ಅದೇನೆ ಇರಲಿ, ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊರೊನಾ ಸಮಸ್ಯೆಯಿಂದ ಇಡೀ ಚಿತ್ರರಂಗವೇ ಸ್ಥಬ್ಧಗೊಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರರಂಗ ಚೇತರಿಸಿಕೊಂಡು, ಪುನಃ ಮೊದಲಿನಂತೆಯೇ ರಂಗೇರಲಿದೆ. “ಡಿಎನ್‌ಎ” ಕೂಡ ಬಿಡುಗಡೆಗೆ ಎದುರು ನೋಡುತ್ತಿದೆ. ಸದ್ಯ ಚಿತ್ರಮಂದಿರಕ್ಕೆ ದೊಡ್ಡ ಸಿನಿಮಾಗಳು ಅಪ್ಪಳಿಸಿದ ಬಳಿಕ ಈ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.

Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ನ ಕ್ಯೂಟ್ ಸಿಸ್ಟರ್ಸ್ ಗೆ ಬರ್ತ್ ಡೇ ಸಂಭ್ರಮ

ಸ್ಯಾಂಡಲ್ ವುಡ್ ನ ಅವಳಿ ಸುಂದರಿಯರು ಹಾಗೂ ಕರಾವಳಿಯ ಕ್ಯೂಟ್ ಸಿಸ್ಟರ್ಸ್ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಸಹೋದರಿಯರಿಬ್ಬರೂ ಈಗ ಬಣ್ಣದ ಲೋಕದಲ್ಲಿ ನಟಿಯರಾಗಿ ಮಿಂಚುತ್ತಿರುವ ಉದಯೋನ್ಮುಖ ತಾರೆಯರು. ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ‘ ಚಿತ್ರ ನೋಡಿದವರಿಗೆ ಈ ಅವಳಿ ಸಹೋದರಿಯರು ಚಿರ ಪರಿಚಿತ.‌ಅದೇ ಅವರಿಬ್ಬರ ಮೊದಲ‌ ಸಿನಿಮಾ. ಯಶ್ ಹಾಗೂ ರಾಧಿಕಾ ದಂಪತಿ ಅಭಿನಯಿಸಿದ್ದ ಈ ಸಿನಿಮಾದಲ್ಲಿ ಅವಳಿ ಸಹೋದರಿರು ವಿಶೇಷವಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದಲೇ ಶುರುವಾಗಿದ್ದು ಈ ಕ್ಯೂಟ್ ಟ್ವಿನ್ಸ್ ಸಿನಿ ಜರ್ನಿ.

‘ಸುಳಿ’ಚಿತ್ರದೊಂದಿಗೆ ಸಿನಿ ಪಯಣ ಆರಂಭಿಸಿದ ಅದ್ವಿತಿ ಶೆಟ್ಟಿ, ಚಂದನವನದಲ್ಲೀಗ ಬೇಡಿಕೆಯ ನಟಿ . ‘ಫ್ಯಾನ್‌’ ಚಿತ್ರದ ನಂತರವೀಗ ಅವರು ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಹೆಸರು ‘ಎಸ್‌’. ಇನ್ನು ಅಶ್ವಿತಿ‌ಶೆಟ್ಟಿ ಕೂಡ’ ಸುಳಿ ‘ನಂತರ ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‌ಈಗ ನಟನೆಯನ್ನೆ ವೃತ್ತಿಯಾಗಿಸಿಕೊಂಡಿರುವ ಅಶ್ವಿತಿ ಕಿರುತೆರೆ ಯಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈ ಅವಳಿ ಸಹೋದರಿಯರಿಗೆ ಹುಟ್ಟು ಹಬ್ಬದ ಶುಭಾಶಯ.

Categories
ಸಿನಿ ಸುದ್ದಿ

ಬೇಬಿ ಡಾಲ್ ಗೆ ಇಂದು ಬರ್ತ್ ಡೇ ಸಂಭ್ರಮ

ಬೇಬಿ ಡಾಲ್ ಆದ್ಯಾಗೆ ಇಂದು ಹುಟ್ಟು‌ಹಬ್ಬದ ಸಂಭ್ರಮ. ಸಾಮಾಜಿಕ ಜಾಲ ತಾಣದಲ್ಲಿ‌ ಅಪಾರ ಅಭಿಮಾನಿಗಳನ್ನು‌ ಹೊಂದಿರುವ ಆದ್ಯಾಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಜೀ‌ ಕನ್ನಡ ವಾಹಿನಿಯ ಬಹು ಜನಪ್ರಿಯ ಕಾರ್ಯಕ್ರಮ ‘ಸರಿಗಮಪ ಲಿಟ್ಲ್ ಚಾಂಪ್ ೧೨’ ನೇ ಸರಣಿಯ ಕಂಟೆಸ್ಟೆಂಡ್ ಆಗಿದ್ದ ಅದ್ಯಾ,ತನ್ನ ಮುದ್ದು ಮುಖ, ಆಕರ್ಷಣೆಯ ನಗು ಮತ್ತು ಮಧುರವಾದ ಕಂಠ ಸಿರಿಯೊಂದಿಗೆ ಸರಿಗಮಪ ಲಿಟಲ್ ಚಾಂಪ್ ರಿಯಾಲಿಟಿ ಶೋನ ಪ್ರಮುಖ ಆಕರ್ಷಣೆ ಆಗಿದ್ದಳು. ಅಪಾರ ಪ್ರತಿಭೆಯ ಮೂಲಕ ಬೇಬಿ ಡಾಲ್ ಅಂತಲೇ ಮನೆ ಮಾತಾಗಿದ್ದು ನಿಮಗೂ ಗೊತ್ತು.‌ಅದೇ ಜನಪ್ರಿಯತೆಯೊಂದಿಗೆ ಬೇಬಿಡಾಲ್ ಆದ್ಯಾ‌, ಬಾಲ‌ನಟಿಯಾಗಿ ಚಂದನವನ ಪ್ರವೇಶಿಸಿದಳು.‌‌‌

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್” ಚಿತ್ರದಲ್ಲಿ ಕಾಣಿಸಿಕೊಂಡಳು. ಹಾಗೆಯೇ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮಸೇನ ನಳ ಮಹಾರಾಜ’ ಚಿತ್ರದಲ್ಲೂ ಮುದ್ದಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾಳೆ. ಆ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.

 

ಸದ್ಯ ನಟನೆ, ವಿದ್ಯಾಭ್ಯಾಸದ ಜತೆಗೆ ಆಲ್ಬಂ ಸಾಂಗ್ ನಿರ್ಮಾಣದಲ್ಲೂ ಬ್ಯುಸಿ‌ ಆಗಿದ್ದಾಳೆ.ಸಂಗೀತದ ಮೇಲೆ ಇನ್ನಷ್ಟುಹಿಡಿತ ಸಾಧಿಸಲು ಕಲಿಕೆಗೆ ಒತ್ತು ನೀಡಿದ್ದಾಳೆ. ಆದ್ಯಾಳ ಆಸಕ್ತಿಗೆ ತಕ್ಕಂತೆ ತರಬೇತಿ ನೀಡುತ್ತಿದ್ದೇವೆ ಎನ್ನುತ್ತಾರೆ ತಾಯಿ ಅಶ್ವಿನಿ ಉಡುಪಿ.ಸಿನಿಲಹರಿ‌ ಕಡೆಯಿಂದ ಬೇಬಿಡಾಲ್ ಆದ್ಯಾಗೆ ಹುಟ್ಟು ಹಬ್ಬದ ಶುಭಾಶಯ.

Categories
ಸಿನಿ ಸುದ್ದಿ

ಸರೋಜಮ್ಮನ ಮೊಮ್ಮಗಳು ಜಯಶ್ರೀಗೆ ಒಲಿದ ಅದೃಷ್ಟ!

ಹಾಟ್ ಫೋಟೋಶೂಟ್  ಮೂಲಕವೇ ಉದಯೋನ್ಮುಖ ನಟಿಗೆ ಸಿಕ್ಕಿತಾ ಅಂತಹದೊಂದು ಅವಕಾಶ ? 

ಮಾರಿ‌ಮುತ್ತು ಪಾತ್ರದ ಖ್ಯಾತಿಯ ಹಿರಿಯ ನಟಿ‌ ಸರೋಜಮ್ಮ ಅವರ ಮೊಮ್ಮಗಳು‌ ಹಾಗೂ‌ ಕನ್ನಡದ‌ ಉದಯೋನ್ಮುಖ ನಟಿ ಜಯಶ್ರೀ ಆರಾಧ್ಯ ಗೆ ಅದೃಷ್ಟ ಖುಲಾಯಿಸಿದೆ. ಕೊರೋನಾ ಸಂಕಷ್ಟದ ನಡುವೆಯೂ ಅವರಿಗೆ ‌ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗೆ ಹಾಟ್ ಫೋಟೋ ಶೂಟ್ ನಲ್ಲಿ ಪಡ್ಡೆ ಹುಡುಗರ ಎದೆಯೊಳಗೆ ಕಿಚ್ಚು ಹೊತ್ತುವ ಹಾಗೆ ಮಿರ ಮಿರ ಮಿಂಚಿದ ಕಾರಣವೋ, ಪ್ರತಿಭೆಗೆ ಒಲಿದು ಪ್ರತಿಫಲವೋ ಗೊತ್ತಿಲ್ಲ, ಬಹುಬೇಗ ಜಯಶ್ರೀ ಆರಾಧ್ಯ ಕನ್ನಡದಾಚೆ ಈಗ ಕಾಲಿವುಡ್ ಗೂ ಕಾಲಿಡುತ್ತಿರುವುದು ವಿಶೇಷ.

‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಹಾಗೂ ಅಧಿಕ ಪ್ರಸಂಗಿ ಚಿತ್ರಗಳ‌ ನಂತರವೀಗ ಜಯಶ್ರೀ, ಮೂರನೇ ಚಿತ್ರವೊಂದಕ್ಕೆ ನಾಯಕಿ ಆಗಿದ್ದಾರೆ.‌’ ಎ ವಿಲನ್ ಇನ್ ವಿಲ್ಲಾ ‘ ಎನ್ನುವುದು ಆ ಚಿತ್ರದ ಹೆಸರು.‌ಶುಕ್ರವಾರವಷ್ಟೆ ಆ ಚಿತ್ರದ ಮೊದಲ ಪೋಸ್ಟರ್ ರಿವೀಲ್ ಆಗಿದೆ. ನವ ಪ್ರತಿಭೆ ಅಭಿನವ್ ವಿಖ್ಯಾತ್ ಇದರ‌ ನಾಯಕ‌‌ ನಟ. ಕನ್ನಡದ ಜತೆಗೆ ಈ ಚಿತ್ರ ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ. ವೃಂದ ಮಾಸ್ಟರ್ ನಿರ್ದೇಶನದ ಈ ಚಿತ್ರಕ್ಕೆ ದೀಪಾ ಪ್ರಶಾಂತ್ ಬಂಡವಾಳ ಹಾಕುತ್ತಿದ್ದಾರೆ. ‌ಉಳಿದಂತೆ‌ ನಟಿ ಜಯಶ್ರೀ ಪಾಲಿಗೆ ಇದು ಅದೃಷ್ಟದ ಅವಕಾಶ.

.  ಕಳೆದ ‌ವರ್ಷವಷ್ಟೇ ಪುಟ್ಟರಾಜು ಲವರ್ ಆಫ್ ಶಶಿಕಲಾ‌’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು.ಅ‌ ಚಿತ್ರ ತೆರೆ ಕಾಣುವ ಹೊತ್ತಿಗೆ ‘ ಅಧಿಕ ಪ್ರಸಂಗಿ’. ಹೆಸರಿನ ಹೊಸಬರ ಚಿತ್ರಕ್ಕೆನಾಯಕಿ‌ಆಗಿದ್ದರು.‌ ಕೊರೋನಾ ಕಾರಣ ಅದಿನ್ನೂ ಬಿಡುಗಡೆ ಆಗುವುದಕ್ಕೆ‌ ಸಿದ್ದತೆ ನಡೆಸಿರುವಾಗಲೇ, ದ್ವಿಭಾಷಾ ಚಿತ್ರವೊಂದಕ್ಕೆ ನಾಯಕಿ‌ಆಗಿದ್ದಾರೆ. ಅವರೇ ಹೇಳುವ ಹಾಗೆ ಇದೊಂದು‌ಅದೃಷ್ಟದ ಅವಕಾಶ‌.

‘ ನಿಜವಾಗಿಯೂ‌ ನನಗಿದು ‌ಅದೃಷ್ಟದ ಅವಕಾಶ. ಯಾಕಂದ್ರೆ ನಾನು ಇಷ್ಟು ಬೇಗ ಕಾಲಿವುಡ್ ಗೂ ಪರಿಚಯವಾಗಬಹುದು ಅಂತ ಯೋಚಿಸಿರಲಿಲ್ಲ.‌ಆದರೆ‌ ನಿರ್ದೇಶಕ ವೃಂದಾ ಮಾಸ್ಟರ್‌ ಕಡೆಯಿಂದಲೇ ಈ ಅವಕಾಶ ಬಂತು.‌ ಸಿನಿಮಾದ ಬಗ್ಗೆ ಹೇಳಿದರು.‌ ನಿರ್ಮಾಪಕರ‌ ಜತೆಗೂ ಮಾತುಕತೆ ನಡೆಯಿತು.‌ ಕತೆ‌ ಜತೆಗೆ ಪಾತ್ರದ ಬಗ್ಗೆ ಚರ್ಚೆ ಆಯಿತು. ಕತೆ‌ಜತೆಗೆ ಪಾತ್ರವೂ ಇಷ್ಟವಾಯಿತು. ಹಾಗಾಗಿ‌ಒಪ್ಪಿಕೊಂಡೆ’ ಎನ್ನುವ ‌ಜಯಶ್ರೀ ಅವರಿಗೆ ಪಾತ್ರ ಅಥವಾ ಕತೆ ಚೆನ್ನಾಗಿದೆ ಎನ್ನುವುದಕ್ಕಿಂದ  ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಎನ್ನುವುದೇ ಫುಲ್ ಎಕ್ಸೈಟ್ ಮೆಂಟ್ ತಂದಿದೆ.

Categories
ಸಿನಿ ಸುದ್ದಿ

ಎವಿಡೆನ್ಸ್‌ ಹಿಂದೆ ಬಂದ ಮಾನಸ ಜೋಶಿ

ವಿಭಿನ್ನ ಕ್ರೈಂ ಥ್ರಿಲ್ಲರ್ ನಲ್ಲಿ ರೋಬೋ ಗಣೇಶ್

ಮಾನಸ ಜೋಶಿ ಈ ಹೆಸರು ಕೇಳಿದಾಕ್ಷಣ , ಹಾಗೊಮ್ಮೆ ‘ಕಿರಗೂರಿನ ಗಯ್ಯಾಳಿಗಳು’ ಸಿನ್ಮಾ ನೆನಪಾಗುತ್ತೆ. ಪಕ್ಕಾ ಜಗಳಗಂಟಿ ಹೆಣ್ಣಾಗಿ ಗಮನ ಸೆಳೆದಿದ್ದ ಮಾನಸ ಜೋಶಿ ಆ ಬಳಿಕ ಹೊಸ ಬಗೆಯ ಕಥೆ, ಪಾತ್ರಗಳತ್ತ ಗಮನಹರಿಸಿದರು. ಈಗ ತಮಗೆ ಸರಿಹೊಂದುವ ಕಥೆ ,ಪಾತ್ರ ಹಾಗೂ ಒಳ್ಳೆಯ ತಂಡ ಸಿಕ್ಕ ಖುಷಿಯಲ್ಲಿ ಹೊಸದೊಂದು ಚಿತ್ರಕ್ಕೆ ಜೈ ಎಂದಿದ್ದಾರೆ.
ಹೌದು, ಮಾನಸ ಜೋಶಿ ಈ ಬಾರಿ ವಿಭಿನ್ನ ಕಥೆ, ಪಾತ್ರವಿರುವ ಚಿತ್ರ ಒಪ್ಪಿಕೊಂಡಿದ್ದು, ಹೊಸ ಗೆಟಪ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ ‘ಎವಿಡೆನ್ಸ್’ ಎಂದು ನಾಮಕರಣ ಮಾಡಲಾಗಿದೆ.

ಈ ಚಿತ್ರವನ್ನು ಪ್ರವೀಣ್ (ಪಿ ಆರ್) ನಿರ್ದೇಶನ ಮಾಡುತ್ತಿದ್ದಾರೆ. ಅವರದೇ ಶ್ರೀ ಧೃತಿ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ‘ಎವಿಡೆನ್ಸ್’ ಚಿತ್ರಕ್ಕೆ ಅರವಿಂದ್ ಕುಮಾರ್, ಸುರೇಂದ್ರ ಶೆಟ್ಟಿ, ನರಸಿಂಹಮೂರ್ತಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಕೇವಲ ಎರಡು ಮುಖ್ಯ ಪಾತ್ರಗಳಿವೆ. ಮಾನಸ ಜೋಶಿ ಜೊತೆ ರೋಬೊ ಗಣೇಶ್ ನಟಿಸುತ್ತಿದ್ದಾರೆ. ಅವರಿಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದರೆ, ಮಾನಸ ಜೋಶಿ‌ ಮೊದಲ ಸಲ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ಒಂದೇ ರೂಮ್ ನಲ್ಲಿ ಕಥೆ ನಡಯಲಿದೆ. ಎರಡು ತಾಸು ಇಡೀ ಚಿತ್ರ ಒಂದೇ ರೂಮ್ ನಲ್ಲಿ ಸಾಗಲಿದೆ ಎಂಬುದು ವಿಶೇಷ.


ಚಿತ್ರಕ್ಕೆ ರವಿಸುವರ್ಣ ಛಾಯಾಗ್ರಹಣವಿದೆ. ಇದು ಅವರ 25ನೇ ಚಿತ್ರ ಎಂಬುದು ಮತ್ತೊಂದು ವಿಶೇಷ.
ಚಿತ್ರಕ್ಕೆ ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ, ಸಾಹಿತ್ಯವಿದೆ.
ಸೆಪ್ಟೆಂಬರ್ 9ರಂದು ‘ಎವಿಡೆನ್ಸ್’ ಗೆ ಪೂಜೆ ನಡೆಯಲಿದೆ. ಇಡೀ ಸಿನಿಮಾ ಕೇವಲ 7 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ

Categories
ಸಿನಿ ಸುದ್ದಿ

ಶುಗರ್ ಲೆಸ್ ಗೆ ಚಾಲನೆ-ಶಶಿಧರ್ ಚೊಚ್ಚಲ ನಿರ್ದೇಶನ

‘ಡಾಟರ್‌ ಆಫ್ ಪಾರ್ವತಮ್ಮ’ ಮೂಲಕ ನಿರ್ಮಾಪಕರಾದ ಶಶಿಧರ್‌ ಕೆ.ಎಂ.ಅವರು ಹೊಸದೊಂದು ಕಥೆ ಬರೆದು, ನಿರ್ದೇಶನ ಮಾಡಲು ಹೊರಟ ಸುದ್ದಿ ಹೊಸದೇನಲ್ಲ. ಮೊದಲ ಸಲ ಅವರು ‘ಶುಗರ್‌ಲೆಸ್‌ ‘ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ.
ಗುರುವಾರ
ಅವರ ಚೊಚ್ಚಲ ಚಿತ್ರಕ್ಕೆ ಮುಹೂರ್ತ ನೆರವೇರಿದೆ.
ಗುರುವಾರ ರಾಯರ ಅನುಗ್ರಹದಲ್ಲಿ ಇಂದು ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ‘ಶುಗರ್ ಲೆಸ್’ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಚಿತ್ರದ ಕಥೆ ತಕ್ಕಂತೆ ಶೀರ್ಷಿಕೆ ಇಟ್ಟಿರುವ ನಿರ್ದೇಶಕ ಶಶಿಧರ್, ಡಯಾಬಿಟಿಸ್‌ ಕುರಿತ ಕಥೆ ಹೇಳಲು ಹೊರಟಿದ್ದಾರೆ. ಈ ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಹೊರಟಿದ್ದಾರೆ.
ಅವರು ಹೇಳುವಂತೆ, ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ. ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನು ಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಅವರು. ಯಾವ ಭಾಷೆಯಲ್ಲೂ ಈ ಕಂಟೆಂಟ್‌ ಇರದ ಕಾರಣ, ಅವರು ಇದನ್ನೇ ಇಟ್ಟು ಕೊಂಡು ಹೊದ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ.
ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ಶಶಿಧರ್‌ ಗೆ ನಿರ್ಮಾಪಕ ಪುಷ್ಕರ್‌ ಕೈ ಜೋಡಿಸಿದ್ದಾರೆ.

Categories
ಸಿನಿ ಸುದ್ದಿ

ಗುಬ್ಬಿ ಮರಿ ಹಾರಲು ರೆಡಿ

ಈ ಹಿಂದೆ ಎ.ಪಿ.ಪ್ರೊಡಕ್ಷನ್ಸ್ ಬ್ಯಾನರ್ ತನ್ನ ಸ್ನೇಹಿತರ ಜೊತೆಗೂಡಿ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಹಾರರ್ ಚಿತ್ರವನ್ನು ನಿರ್ಮಾಣ ಮಾಡಿ ಯಶಸ್ವಿಯಾಗಿದ್ದ ಆನಂದ ಬಾಬು ಈಗ ಇನ್ನೊಂದು ಸಿನಿಮಾಗೆ ಕೈ ಹಾಕಿದ್ದಾರೆ.
ಆನಂದ ಬಾಬು ಅವರು ಡಾ|| ನಿಶ್ಚಿತ ಬಿ. ಅವರ ಜೊತೆ ಸೇರಿ “ಗುಬ್ಬಿ ಮರಿ” ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಮಧು ಡಕಣಾಚಾರ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎ.ಟಿ.ರವೀಶ್ ಸಂಗೀತವಿದೆ. ಸಿದ್ದು ಕೆ.ಗೌಡಗೆರೆ ಛಾಯಾಗ್ರಹಣ ಮಾಡಿದ್ದಾರೆ. ಎನ್.ಆದಿತ್ಯ ಕುಣಿಗಲ್ ಸಂಕಲನವಿದೆ. ಗೆಳೆಯ ಆನಂದ ಬಾಬು ಅವರಿಗೆ ಸಾಥ್ ನೀಡಿದ್ದಾರೆ. ಇಷ್ಟರಲ್ಲೇ ಅವರ ಕನಸಿನ ಕೂಸು “ಗುಬ್ಬಿಮರಿ” ಹಾರಲಿದೆ.

Categories
ಸಿನಿ ಸುದ್ದಿ

ನಿರ್ದೇಶಕ ಮನು ಕಲ್ಯಾಡಿ ಈಗ ಹೀರೋ‌ !

ಅವರದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಹೊಸ‌ ಸಿನಿಮಾ

ಪ್ರಾರಂಭ‌‌ ಚಿತ್ರದ ನಿರ್ದೇಶಕ ಮನು‌ಕಲ್ಯಾಡಿ‌ ಅವರಿಗೆ ಇಂದು ಹುಟ್ಟು ಸಂಭ್ರಮ.‌‌ಪ್ರಾರಂಭ ಚಿತ್ರ ತಂಡವು ರಾತ್ರಿಯೇ ಕೇಕ್ ಕತ್ತರಿಸಿ, ಸಿಹಿ‌ಹಂಚುವ ಮೂಲಕ ಮನು‌ ಕಲ್ಯಾಡಿ ಅವರ ಹುಟ್ಟು ‌ಹಬ್ಬವನ್ನು‌ಅಚರಿಸಿತು.‌ಇದೇ‌ವೇಳೆ ನಿರ್ದೇಶಕ ಮನು ಕಲ್ಯಾಡಿ‌ ಅವರಿಗೆ ಸಹೋದರ ಜಗದೀಶ್ ಕಲ್ಯಾಡಿ ವಿಶೇಷವಾದ ಗಿಫ್ಟ್ ಕೊಟ್ಟರು. ಮನು‌ಕಲ್ಯಾಡಿ‌ ಅವರನ್ನೆ ಹೀರೋ ಆಗಿಸಿಕೊಂಡು ಹೊಸ ದೊಂದು‌ಸಿನಿಮಾ‌ ಮಾಡುವುದಾಗಿ‌ ಘೋಷಿಸಿದರು.

ಮನು ಕಲ್ಯಾಡಿ‌ ನಿರ್ದೇಶನದ’  ಪ್ರಾರಂಭ‌ ‘ಚಿತ್ರವು ಹೊರಬರುತ್ತಿದ್ದಂತೆ‌ ಮನುಕಲ್ಯಾಡಿ‌ ಆ‌ವರನ್ನು‌ ಹೀರೋ ಆಗಿ‌ಬೆಳ್ಳಿತೆರೆಗೆ ಪರಿಚಯಿಸುವುದಾಗಿ‌ಜಗದೀಶ್ ಕಲ್ಯಾಡಿ‌  ಭರವಸೆ ನೀಡಿದರು.‌ ಅಂದ‌ಹಾಗೆ‌ ಈ‌ಚಿತ್ರಕ್ಕೆ‌ಈಗಾಗಲೇ‌‌ನಿರ್ದೇಶಕರು‌ಫಿಕ್ಸ್ ಆಗಿದ್ದಾರೆ. ಸಾಯಿ‌ಕಿಶೋರ್ ತಲ್ಲ ಆ್ಯಕ್ಚನ್ ಹೇಳಲು‌ ರೆಡಿ ಆಗಿದ್ದಾರೆ. ಸ್ಕ್ರಿಪ್ಟ್ ‌ವರ್ಕ್ ಕೂಡ‌ಮುಗಿದಿದೆ.‌ ನಾಯಕಿ‌ಸೇರಿದಂತೆ‌ಉಳಿದ‌ಕಲಾವಿದರ‌ಆಯ್ಕೆ ಬಾಕಿಯಿದೆ.ಅಕ್ಟೋಬರ್ ‌ತಿಂಗಳಲ್ಲಿ‌ಈ‌ಚಿತ್ರ‌ಸೆಟ್ಟೇರುವುದು‌‌ ಗ್ಯಾರಂಟಿ ಯಂತೆ.‌

ಇನ್ನು‌ಎಲ್ಲವೂ‌ಅಂದುಕೊಂಡಂತೆಯೇ ಆಗಿದ್ದರೆ‌ಜಗದೀಶ್ ಕಲ್ಯಾಡಿ‌ನಿರ್ಮಾಣ‌ಹಾಗೂ‌ ಮನು‌ಕಲ್ಯಾಡಿ‌‌ ನಿರ್ದೇಶನದ ಪ್ರಾರಂಭ‌ಚಿತ್ರ ರಿಲೀಸ್‌ಆಗಬೇಕಿತ್ತು.‌ ಆದರೆ‌ಕೊರೋನಾ‌ ಕಾರಣ‌ಎಲ್ಲವೂ‌‌ ಏರುಪೇರಾಯಿತು.‌ಈಗ‌ ಕೊರೋನಾ‌‌ ಭೀತಿ‌ ಒಂದಷ್ಟು ತಿಳಿಯಾಗುತ್ತಿದೆ.‌ ನಿರ್ಮಾಪಕ‌ ಜಗದೀಶ್  ಕಲ್ಯಾಡಿ  ಪ್ರಾರಂಭ ರಿಲೀಸ್ ಗೆ‌ಸಿದ್ದತೆ‌‌ನಡೆಸಿದ್ದಾರೆ.‌ಅದು ತೆರೆಗೆ‌ ಬರುತ್ತಿದ್ದಂತೆ ಮನು‌ಕಲ್ಯಾಡಿ‌ ಅಭಿನಯದ ಚೊಚ್ಚಲ ಚಿತ್ರ ಸೆಟ್ಟೇರಲಿದೆ‌‌  ಎನ್ನುವುದು  ತಂಡದ ಅಧಿಕೃತ ಮಾಹಿತಿ.

Categories
ಸಿನಿ ಸುದ್ದಿ

ನಿರ್ದೇಶಕ ಮನು ಕಲ್ಯಾಡಿ ಈಗ ಹೀರೋ!

ಅವರದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಹೊಸ‌ ಸಿನಿಮಾ

‘ಪ್ರಾರಂಭ‌‌’ ಚಿತ್ರದ ನಿರ್ದೇಶಕ ಮನು‌ಕಲ್ಯಾಡಿ‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.‌‌ಪ್ರಾರಂಭ ಚಿತ್ರ ತಂಡವು ರಾತ್ರಿಯೇ ಕೇಕ್ ಕತ್ತರಿಸಿ, ಸಿಹಿ‌ಹಂಚುವ ಮೂಲಕ ಮನು‌ ಕಲ್ಯಾಡಿ ಅವರ ಹುಟ್ಟು ‌ಹಬ್ಬವನ್ನು‌ಅಚರಿಸಿತು.‌ಇದೇ‌ವೇಳೆ ನಿರ್ದೇಶಕ ಮನು ಕಲ್ಯಾಡಿ‌ ಅವರಿಗೆ ಸಹೋದರ ಜಗದೀಶ್ ಕಲ್ಯಾಡಿ ವಿಶೇಷವಾದ ಗಿಫ್ಟ್ ಕೊಟ್ಟರು. ಮನು‌ಕಲ್ಯಾಡಿ‌ ಅವರನ್ನೆ ಹೀರೋ ಆಗಿಸಿಕೊಂಡು ಹೊಸ ದೊಂದು‌ಸಿನಿಮಾ‌ ಮಾಡುವುದಾಗಿ‌ ಘೋಷಿಸಿದರು.
ಮನು ಕಲ್ಯಾಡಿ‌ ನಿರ್ದೇಶನದ’ ‘ಪ್ರಾರಂಭ‌ ‘ಚಿತ್ರವು ಹೊರಬರುತ್ತಿದ್ದಂತೆ‌ ಮನುಕಲ್ಯಾಡಿ‌ ಆ‌ವರನ್ನು‌ ಹೀರೋ ಆಗಿ‌ಬೆಳ್ಳಿತೆರೆಗೆ ಪರಿಚಯಿಸುವುದಾಗಿ‌
ಜಗದೀಶ್ ಕಲ್ಯಾಡಿ‌ ಭರವಸೆ ನೀಡಿದರು.‌ಅಂದ‌ಹಾಗೆ‌ಈ‌ಚಿತ್ರಕ್ಕೆ‌ಈಗಾಗಲೇ‌‌ನಿರ್ದೇಶಕರು‌ಫಿಕ್ಸ್ ಆಗಿದ್ದಾರೆ. ಸಾಯಿ‌ಕಿಶೋರ್ ತಲ್ಲ ಆ್ಯಕ್ಚನ್ ಹೇಳಲು‌ ರೆಡಿ ಆಗಿದ್ದಾರೆ. ಸ್ಕ್ರಿಪ್ಟ್ ‌ವರ್ಕ್

ಕೂಡ‌ಮುಗಿದಿದೆ.‌ನಾಯಕಿ‌ಸೇರಿದಂತೆ‌ಉಳಿದ‌ಕಲಾವಿದರ‌ಆಯ್ಕೆ‌ಬಾಕಿಯಿದೆ.‌‌ಅಕ್ಟೋಬರ್ ‌ತಿಂಗಳಲ್ಲಿ‌ಈ‌ಚಿತ್ರ‌ಸೆಟ್ಟೇರುವುದು‌‌ ಗ್ಯಾರಂಟಿ ಯಂತೆ.‌ಇನ್ನು‌ಎಲ್ಲವೂ‌ಅಂದುಕೊಂಡಂತೆಯೇ ಆಗಿದ್ದರೆ‌ಜಗದೀಶ್ ಕಲ್ಯಾಡಿ‌ನಿರ್ಮಾಣ‌ಹಾಗೂ‌ ಮನು‌ಕಲ್ಯಾಡಿ‌‌ ನಿರ್ದೇಶನದ ಪ್ರಾರಂಭ‌ಚಿತ್ರ ರಿಲೀಸ್‌ಆಗಬೇಕಿತ್ತು.‌ಆದರೆ‌ಕೊರೋನಾ‌ ಕಾರಣ‌ಎಲ್ಲವೂ‌‌ ಏರುಪೇರಾಯಿತು.‌ಈಗ‌ ಕೊರೋನಾ‌‌ ಭೀತಿ‌ ಒಂದಷ್ಟು ತಿಳಿಯಾಗುತ್ತಿದೆ.‌ ನಿರ್ಮಾಪಕ‌ ಜಗದೀಶ್ ಕಲ್ಯಾಡಿ ಪ್ರಾರಂಭ ರಿಲೀಸ್ ಗೆ‌ಸಿದ್ದತೆ‌‌ನಡೆಸಿದ್ದಾರೆ.‌ಅದು ತೆರೆಗೆ‌ ಬರುತ್ತಿದ್ದಂತೆ ಮನು‌ಕಲ್ಯಾಡಿ‌ ಅಭಿನಯದ ಚೊಚ್ಚಲ ಚಿತ್ರ ಸೆಟ್ಟೇರಲಿದೆ‌‌ ಎನ್ನುವುದು ತಂಡದ ಅಧಿಕೃತ ಮಾಹಿತಿ.

Categories
ಸಿನಿ ಸುದ್ದಿ

ಒಳ್ಳೇ ಹುಡುಗನ ಕುರಿ, ಹಸು ಮೇಯಿಸೋ ಕೆಲಸ

ಹಸು ಹಾಲು ಹಿಂಡುತ್ತಿರುವ ಪ್ರಥಮ್

ನಟ ಭಯಂಕರ ಅಲಿಯಾಸ್ ಒಳ್ಳೇ ಹುಡುಗ ಅಂದುಕೊಳ್ಳುವ ಪ್ರಥಮ್ ಬಗ್ಗೆ ಎಲ್ಲರಿಗೂ ಗೊತ್ತು. ಮಾತಲ್ಲೇ ಮೋಡಿ‌ ಮಾಡುವ ಪ್ರಥಮ್, ಸದ್ಯ ತನ್ನೂರಲ್ಲಿದ್ದಾರೆ. ಅಲ್ಲಿ ಕೃಷಿಯತ್ತ ಗಮನಹರಿಸಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಹಸು , ಕುರಿ ಮರಿಗಳನ್ನು ಮೇಯಿಸುವುದರ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ಹಸುವಿನ‌ ಹಾಲು ಕರೆದು ತಾನೊಬ್ಬ ಪಕ್ಕಾ ರೈತ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ತಾವು ಮಾಡುತ್ತಿರುವ ಕೆಲಸಗಳ ಫೋಟೋ ತೆಗೆದು ತಮ್ಮ ಮುಖಪುಟದಲ್ಲಿ ಹಾಕಿಕೊಂಡಿದ್ದಾರೆ.
‘ಈಗಷ್ಟೇ ನಾನು ಕುರಿ ಮೇಯಿಸುವಾಗ ನಮ್ ಚಿಕ್ಕಪ್ಪನ ಕುರಿ,ಮರಿ ಹಾಕ್ತು!ಗಂಡುಮರಿ ಆದ್ರಿಂದ ಮುಂದಿನ ತಿಂಗಳು ಸ್ವಲ್ಪ ಬಲಿತ ಮೇಲೆ ಮಾರಿಬಿಡ್ತಾರೆ!
ಹೆಣ್ಣು ಮರಿ ಆಗಿದ್ರೆ ಸಾಕೋದು ವಾಡಿಕೆ. ಹಾಗಾಗಿ ನಾನೇ
ಅದನ್ನು ಖರೀದಿಸಿದ್ದೇನೆ.
ಖುಷಿ ಅಂದ್ರೆ ಶೀಘ್ರದಲ್ಲೇ ನನ್ನ ಕುರಿಗಳ ಸಂಖ್ಯೆ ಜಾಸ್ತಿಆಗ್ತಿದೆ! ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.
ಇನ್ನೊಂದು ಸ್ಟೇಟಸ್ ನಲ್ಲಿ
ಪ್ರತಿದಿನ ಕುರಿ ಮೇಯಿಸೋದು, ಹಾಲು ಕರೆಯೋದನ್ನು ಕಲೀತಾ ಇದೀನಿ ಎಂಬ ಸಾಲು ಬರೆದುಕೊಂಡಿದ್ದಾರೆ.
ಸದ್ಯ ನಟಭಯಂಕರ ಸಿನಿಮಾದ ಕೆಲಸ‌ ಪೆಂಡಿಂಗ್ ಇರುವುದರಿಂದ ಊರಲ್ಲೇ ಕುರಿ, ಹಸು‌ ಮೇಯಿಸಿಕೊಂಡು ಹಾಲು ಕರೆಯುವುದನ್ನು ಕಲೀತಾ ಇದಾರೆ.
ಸಿನಿಮಾ ಚಟುವಟಿಕೆಗಳು ಶುರುವಾದರೆ ಪ್ರಥಮ್ ಮತ್ತೆ ಗಾಂಧಿನಗರದಲ್ಲಿ ಸದ್ದು ಮಾಡುವ ಉತ್ಸಾಹದಲ್ಲಿದ್ದಾರೆ.

error: Content is protected !!