Categories
ಸಿನಿ ಸುದ್ದಿ

ಸಂಚಾರಿ ವಿಜಯ್ ಆಶಯದಂತೆ ಬುಡಕಟ್ಟು ಜನರ ಮನೆ ಮೇಲ್ಛಾವಣಿ ಟಾರ್ಪಾಲಿನ್ ಹೊದಿಕೆ ಕಾರ್ಯಕ್ಕೆ ಉಸಿರು ಸಿದ್ಧತೆ

ಸಂಚಾರಿ ವಿಜಯ್‌ ಅವರ ಆಸೆ ಈಡೇರಿಸಲು ಕವಿರಾಜ್ ನೇತೃತ್ವದ ‘ಉಸಿರು’ ತಂಡ ಸಿದ್ದವಾಗಿದೆ.
ಹೌದು, ‘ಉಸಿರು’ ಬಳಗದ ವತಿಯಿಂದ ಆ ಬಳಗದಲ್ಲಿದ್ದ ಸಂಚಾರಿ ವಿಜಯ್ ಅವರ ಆಶಯದ ಅಪೂರ್ಣ ಕಾರ್ಯಗಳಲ್ಲೊಂದಾದ ನಾಗರಹೊಳೆ ವಲಯದ ಬುಡಕಟ್ಟು ಜನಾಂಗದ ಹಾಡಿ ಮನೆಗಳ ಶಿಥಿಲ ಮೇಲ್ಚಾವಣಿಗಳಿಗೆ ಟಾರ್ಪಾಲಿನ್ ಹೊದಿಕೆ ಹೊದಿಸುವ ಕಾರ್ಯಕ್ಕೆ ಸಕಲ ಸಿದ್ಧತೆಯನ್ನು ಉಸಿರು ಬಳಗ ಮಾಡಿಕೊಂಡಿದೆ.

ಈ ಕುರಿತಂತೆ ಕವಿರಾಜ್ ಸ್ಪಷ್ಟಪಡಿಸಿದ್ದಾರೆ. ಆ ಕುರಿತು ಹೇಳುವ ಕವಿರಾಜ್, ‘ಈಗಾಗಲೇ ಟಾರ್ಪಾಲಿನ್ ಕಂಪೆನಿಯವರನ್ನೇ ಕರೆದುಕೊಂಡು ಹೋಗಿ ಅಳತೆ ಪಡೆದು ಬಂದ 60 ಮನೆಗಳ ಪಟ್ಟಿಗೆ ತಕ್ಕಂತೆ ಟಾರ್ಪಾಲಿನ್ ಕಟ್ ಮಾಡಿಸಿ ಹುಕ್ಸ್ ಹಾಕಿಸಿ ಹೊಲಿಸಿ ಕಂಪೆನಿಯ ನುರಿತ ಕೆಲಸಗಾರರರನ್ನೇ ಕರೆದುಕೊಂಡು ಹೋಗಿ ಬಹಳ ವ್ಯವಸ್ಥಿತವಾಗಿ ಗಟ್ಟಿ ಮುಟ್ಟಾಗಿ ಅವನ್ನು ಅಳವಡಿಸಿ ಬರುವ ಕಾರ್ಯಕ್ರಮ ಈ ಶನಿವಾರ ಮತ್ತು ಭಾನುವಾರ ಹಮ್ಮಿಕೊಂಡಿದ್ದೇವೆ. ಅದೇ ಜಾಗದಲ್ಲೇ ವಿಜಯ್ ಅವರಿಗೆ ಗೌರವ ನಮನ ಸಲ್ಲಿಸುವ ಪುಟ್ಟ ಕಾರ್ಯಕ್ರಮವು ನಡೆಯಲಿದೆ.

ಬಹುತೇಕ ನಮ್ಮ ಉಸಿರು ಬಳಗ ಅಲ್ಲಿ ಭಾಗವಹಿಸಲಿದೆ‌ ಎಂದು ಹೇಳಿರುವ ಅವರು,
ಈ ಸಿದ್ದತೆಯ ಸಾರಥ್ಯ ವಹಿಸಿದ್ದ ನಮ್ಮ ‘ಪವನ್ ದರೆಗುಂಡಿ ಹಾಗೂ ಅವರೊಂದಿಗೆ ಸಹಕರಿಸಿದ ಮಾದೇಶ್ ಗೌಡ್ರು, ಶ್ರೀ ಹರ್ಷ , ಚಿನ್ಮಯ್ ಹಾಗೆಯೇ ಫಂಡಿಂಗ್ ವಿಚಾರದಲ್ಲಿ ಸಹಕರಿಸಿದ ಅರುಂಧತಿ ದೇವನಹಳ್ಳಿ ಅವರ ಕಾರ್ಯ ಶ್ಲಾಘನೀಯ ‌‌ಎಂದಿದ್ದಾರೆ ಕವಿರಾಜ್.

Categories
ಸಿನಿ ಸುದ್ದಿ

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಈಗ “ರಾಣ” ಜುಲೈ 7ಕ್ಕೆ ಚಿತ್ರದ ಮುಹೂರ್ತ

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಅವರ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌ ಆಗಿದೆ. ಈ ಚಿತ್ರಕ್ಕೆ “ರಾಣ” ಎಂದು ನಾಮಕರಣ ಮಾಡಲಾಗಿದೆ. ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದು, ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಮೋದಿ‌ ಆಸ್ಪತ್ರೆ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಚಿತ್ರಕ್ಕೆ “ರಾಣ” ಎಂದು ಹೆಸರಿಡಲಾಗಿದೆ. ಶೀರ್ಷಿಕೆ ಅನಾವರಣ ಸಮಾರಂಭದಲ್ಲಿ ಕೆ.ಮಂಜು, ನಿರ್ಮಾಪಕ ಪುರುಷೋತ್ತಮ ಗುಜ್ಜಾಲ್, ನಿರ್ದೇಶಕ ನಂದಕಿಶೋರ್, ನಾಯಕ ಶ್ರೇಯಸ್‌ ಹಾಗೂ ನಾಯಕಿ ರೇಶ್ಮಾ ನಾಣಯ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ಜುಲೈ 7 ರಂದು “ರಾಣ” ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಈ ಚಿತ್ರದ ಶೀರ್ಷಿಕೆ ಮೊದಲು ನಿರ್ಮಾಪಕ ರಮೇಶ್ ಕಶ್ಯಪ್ ಅವರ ಬಳಿಯಿತ್ತು. ರಾಕಿಂಗ್ ಯಶ್ ಅವರು “ರಾಣ” ಚಿತ್ರದಲ್ಲಿ ಅಭಿನಯಿಸಬೇಕಿತ್ತು. ರಮೇಶ್ ಕಶ್ಯಪ್ ಅವರು ನಮಗಾಗಿ ಈ ಶೀರ್ಷಿಕೆ ಬಿಟ್ಟುಕೊಟ್ಟಿದ್ದಾರೆ.


ಶೀರ್ಷಿಕೆ ನೀಡಿದ್ದ ರಮೇಶ್ ಕಶ್ಯಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಿರ್ಮಾಪಕ ಪುರುಷೋತ್ತಮ ಗುಜ್ಜಾಲ್, ಕೆ.ಮಂಜು ಹಾಗೂ ಶ್ರೇಯಸ್ಸ್ ಧನ್ಯವಾದ ತಿಳಿಸಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌.

Categories
ಸಿನಿ ಸುದ್ದಿ

ಲಹರಿ ಮಡಿಲಿಗೆ ಕೆಜಿಎಫ್-2 ಚಿತ್ರದ ಆಡಿಯೋ ಹಕ್ಕು; ಭಾರೀ ಮೊತ್ತಕ್ಕೆ ಖರೀದಿ

ರಾಕಿಂಗ್ ಸ್ಟಾರ್‌ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ವಿಜಯ್ ಕಿರಂಗದೂರು ಅವರು ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದ “ಕೆ.ಜಿ.ಎಫ್-2” ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

ಖ್ಯಾತ ಮ್ಯೂಸಿಕ್ ಸಂಸ್ಥೆ ಲಹರಿ ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ.
ಹಲವು ಭಾಷೆಗಳಲ್ಲಿ ಕೆ.ಜಿ.ಎಫ್- 2 ಚಿತ್ರ ನಿರ್ಮಾಣವಾಗಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಎಲ್ಲಾ ಭಾಷೆಯ ಆಡಿಯೋ ಹಕ್ಕನ್ನು ಲಹರಿ‌ ಸಂಸ್ಥೆಯೇ ಖರೀದಿಸಿದೆ ಎಂಬುದು ವಿಶೇಷ.

ಕೆ.ಜಿ.ಎಫ್ 1 ಚಿತ್ರದ ಹಾಡುಗಳು ಸಹ ಲಹರಿ ಸಂಸ್ಥೆ ಮೂಲಕ ಹೊರಬಂದಿತ್ತು. ಗುರುವಾರ ಬೆಳಗ್ಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಹಾಗೂ ಲಹರಿ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಆಡಿಯೋ ಹಕ್ಕು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಅವರು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಪುನೀತ್ ರಾಜಕುಮಾರ್‌ ಹೊಸ ಚಿತ್ರ ದ್ವಿತ್ವ; ಪೋಸ್ಟರ್‌ ರಿಲೀಸ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌ -ಇದು ಲೂಸಿಯಾ ಪವನ್‌ ಕುಮಾರ್‌ ಸಿನಿಮಾ

ಪುನೀತ್‌ ರಾಜಕುಮಾರ್‌ ಅಭಿನಯದ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಪುನೀತ್‌ ಅವರೀಗ “ಜೇಮ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಬಳಿಕ ಯಾವ ಸಿನಿಮಾದಲ್ಲಿ ನಟಿಸುತ್ತಾರೆ, ಯಾರು ನಿರ್ದೇಶಕರು ಎಂಬಿತ್ಯಾದಿ ಪ್ರಶ್ನೆಗಳಿದ್ದವು. ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ಪುನೀತ್‌ ರಾಜಕುಮಾರ್‌ ಅಭಿನಯದ ಹೊಸ ಚಿತ್ರದ ಪೋಸ್ಟರ್‌ ಮತ್ತು ಶೀರ್ಷಿಕೆ ಬಿಡುಗಡೆಯಾಗಿದೆ. ಆ ಚಿತ್ರ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ “ಲೂಸಿಯಾ” ಖ್ಯಾತಿಯ ಪವನ್‌ಕುಮಾರ್‌ ಅವರು, ಪುನೀತ್‌ರಾಜಕುಮಾರ್‌ ಅವರನ್ನು ನಿರ್ದೇಶಿಸುತ್ತಿದ್ದಾರೆ.

ಆ ಚಿತ್ರಕ್ಕೆ “ದ್ವಿತ್ವ” ಎಂದು ನಾಮಕರಣ ಮಾಡಲಾಗಿದೆ. ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿಯನ್ನು ನಿರ್ದೇಶಕ ಪವನ್‌ ಕುಮಾರ್‌ ಅವರೇ ಹೊತ್ತಿದ್ದಾರೆ. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್‌ ಪೋಸ್ಟರ್‌ ರಿಲೀಸ್‌ ಮಾಡಿದೆ. ನಿರ್ದೇಶಕ ಪವನ್‌ ಕುಮಾರ್‌ ಅವರು, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದಾರೆ.


ಒಳ್ಳೇಯ ಕಥೆ ಹೇಳಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. “ದ್ವಿತ್ವ” ಇದು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಪುನೀತ್‌ ರಾಜಕುಮಾರ್‌ಗೆ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾ. ಈ ಹಿಂದೆ “ನಿನ್ನಿಂದಲೇ”, “ರಾಜಕುಮಾರ”, “ಯುವರತ್ನʼ ಚಿತ್ರವನ್ನು ನಿರ್ಮಾಣ ಮಾಡಿತ್ತು. ಈಗ “ದ್ವಿತ್ವ” ಮೂಲಕ ಮತ್ತೊಂದು ಹೊಸ ಬಗೆಯ ಕಥೆ ಇಟ್ಟುಕೊಂಡು ಜನರ ಮುಂದೆ ಬರಲು ಸಜ್ಜಾಗುತ್ತಿದೆ.


ಅಂದಹಾಗೆ, ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. ಪ್ರೀತಾ ಜಯರಾಮನ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನುಳಿದಂತೆ ಬೇರೆ ಕಲಾವಿದರು, ತಾಂತ್ರಿಕ ವರ್ಗದವರ ಆಯ್ಕೆ ಪ್ರಕ್ರಿಯ ನಡೆಯಬೇಕಿದೆ. ಸೆಪ್ಟೆಂಬರ್‌ನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದು ಪವನ್‌ ಕುಮಾರ್‌ ಹೇಳಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಪ್ರಜ್ವಲ್‌ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ; ಜುಲೈ4ರಂದು ಪಿಡಿ 35 ತಂಡದ ಸ್ಪೆಷಲ್‌ ಪೋಸ್ಟರ್ ರೆಡಿ

ಜುಲೈ 4 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಈ‌‌ ಸಂಭ್ರಮದ ಸವಿನೆನಪಿಗಾಗಿ “PD 35” ಚಿತ್ರತಂಡ ಪ್ರಜ್ವಲ್ ಅವರಿಗೆ ಸರ್ಪ್ರೈಸ್ ಗಿಫ್ಟ್ ನೀಡಲಿದೆ. “PD 35” ಅಂದರೆ, ಪ್ರಜ್ವಲ್ ದೇವರಾಜ್ 35 ಎಂಬ ಅರ್ಥ. ಇದು ಅವರ ಅಭಿನಯದ 35ನೇ ಚಿತ್ರ.
ಅದೇ ದಿನ ಈ ನೂತನ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣಗೊಳ್ಳಲಿದೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ಅವರು ನಿರ್ಮಿಸುತ್ತಿರುವ ಈ‌ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ‌. ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ‌ ಪ್ರಭುದೇವ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

“ಹೆದರದಿರು ಓ ಮನಸೇ…ಕೊರೊನಾ ಮೆಟ್ಟಿ ನಿಲ್ಲೋಣ, ಕೊರೊನಾ ಸುಟ್ಟು ಸಾಗೋಣ- ಆಲ್ಬಂ ಸಾಂಗ್‌ ರಿಲೀಸ್

ಕೊರೊನಾದಿಂದ ಲಾಕ್ ಡೌನ್ ಆಗಿ ಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡು ಹೆಚ್ಚು ಕಮ್ಮಿ ಎರಡುವರೆ ತಿಂಗಳೇ ಕಳೆದಿತ್ತು. ಈಗ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಂಡು ಒಂದೊಂದೇ ಉದ್ಯಮಗಳು ಬಾಗಿಲು ತೆಗೆದು ಧೂಳು ಕೊಡವಿಕೊಂಡು ನಿತ್ಯ ಜೀವನಕ್ಕೆ ಸಿದ್ಧವಾಗುತ್ತಿವೆ. ಇದಕ್ಕೆ ಸಿನಿಮಾ ಮಾಧ್ಯಮ ಕೂಡ ಹೊರತಲ್ಲ. ನಟ, ನಿರ್ಮಾಪಕ, ಗೋವು ಪ್ರೇಮಿ ಉದ್ಯಮಿ ಮಹೇಂದ್ರ ಮುನ್ನೋತ್ ರವರು ಎರಡು ಹಾಡುಗಳನ್ನು ಬಿಡುಗಡೆ ಮಾಡಿದ ಸಂದರ್ಭ ವಿಶೇಷವಾಗಿತ್ತು. ಮಹೇಂದ್ರ ಮುನ್ನೋತ್ ಬಹಳ ಹಿಂದಿನಿಂದಲೂ ಸಮಾಜ ಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.‌


ಬಡವರಿಗೆ ಔಷಧಿ, ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಆಟೋ ಚಾಲಕರಿಗೆ ಸಮವಸ್ತ್ರ ಹಾಗೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷದಿಂದ ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗಿದ ಸಾವಿರಾರು ಕುಟುಂಬಗಳಿಗೆ ನಿತ್ಯ ಅನ್ನ ದಾಸೋಹ ಮಾಡುವುದರ ಜೊತೆಗೆ ಗೋಶಾಲೆ ಗಳಿಗೆ ಲಕ್ಷಾಂತರ ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಹಾಗೆಯೇ ಕೊರೊನಾದಿಂದಾಗಿ ಸೃಷ್ಟಿಯಾಗಿರುವ ಸಂಕಷ್ಟಕ್ಕೆ ಸಿಲುಕಿದ ಮಾನವ ಸಂಕುಲಕ್ಕೆ ಧೈರ್ಯ ಹೇಳಿ ಸಾಂತ್ವಾನ ಹೇಳುವಂತ ಗೀತೆಯೊಂದನ್ನು ಲೋಕಾರ್ಪಣೆ ಮಾಡಿದ್ದಾರೆ. “ಹೆದರದಿರು ಓ ಮನಸೇ” ಎನ್ನುವ ಈ ಹಾಡಿಗೆ
ನಿರ್ದೇಶಕ ಹರಿಹರನ್ ಆಕ್ಷನ್ ಕಟ್ ಹೇಳಿದರೆ, ಎ.ಟಿ. ರವೀಶ್ ಅವರ ಸಂಗೀತಕ್ಕೆ ರೇವಣ್ಣ ನಾಯಕ್ ಸಾಹಿತ್ಯ ಬರೆದಿದ್ದಾರೆ. ವಿನಾಯಕ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಸಚಿನ್ ಎಸ್.ನಗರ್ತ ಧ್ವನಿಯಲ್ಲಿ ಹಾಡು ಮೂಡಿಬಂದಿದೆ.


ಸಂಯುಕ್ತ ಸ್ಟುಡಿಯೋ ಮುತ್ತುರಾಜ್ ಸಂಕಲನ ಮಾಡಿದರೆ, ದೇವು ವಿನ್ಯಾಸ ಮಾಡಿದ್ದಾರೆ. ಚೇತನ್‌ ಲಗ್ಗೆರೆ ವರ್ಣಾಲಂಕಾರವಿದೆ. ಎಲ್ಲರ ಶ್ರಮದಿಂದಾಗಿ ಆನಂದ್ ಸಿನೆಮಾಸ್‌ ಅವರ ಪೂರಿಕಾಮೃತ ಕ್ರಿಯೇಷನ್ಸ್ ಮೂಲಕ ಹೊರಬಂದ “ಹೆದರದಿರು ಓ ಮನಸೆ..” ಆಲ್ಬಂ ಸಾಂಗ್ ಅನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಹಾಗೂ ಮಾಜೀ ಕಾರ್ಯದರ್ಶಿಗಳಾದ ಭಾ.ಮ.ಹರೀಶ್ ಜೊತೆಗೂಡಿ ಬಿಡುಗಡೆ ಮಾಡಿದ್ದಾರೆ. ಇದು ನಟ, ನಿರ್ಮಾಪಕ ಮಹೇಂದ್ರ ಮುನ್ನೋತ್ ರವರ ನಿತ್ಯ ಜೀವನದ ಸಮಾಜ ಮುಖಿ ಕಾರ್ಯವನ್ನು ಬಿಂಬಿಸಿದೆ ಹಾಗೂ ಮುನ್ನೋತ್ ರವರು ನೈಜವಾಗಿ ಅಭಿನಯಿಸಿದ್ದಾರೆ.

ಇದೇ ವೇಳೆ ಕಳೆದ ವರ್ಷ ನಿರ್ಮಿಸಿದ ಆತ್ಮ‌ನಿರ್ಭರ ಭಾರತ ಎನ್ನುವ ಗೀತೆಯನ್ನು ಸಿದ್ದಪಡಿಸಿದ್ದು ಅದನ್ನೂ ಕೂಡ ಈ ಸಂಧರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಗಜೇಂದ್ರ ನಿರ್ದೇಶನದಲ್ಲಿ ಹಾಗೂ ವಿಜಯಕೃಷ್ಣ ರವರ ಸಂಗೀತದಲ್ಲಿ ಮೂರು ರಾಯರ ಗಂಡ ಅವರ ಸಾಹಿತ್ಯದಲ್ಲಿ ಈ ಗೀತೆ ಮೂಡಿ ಬಂದಿದೆ. ತೇಜಸ್ವಿ ಹರಿ ಪ್ರಸಾದ್ ಹಾಡಿದ್ದಾರೆ. ಶ್ರೀ ಜವಳಿ ಸಂಕಲನವಿದೆ. ಕೊರೊನಾ ಸಮಯದಲ್ಲಿ ಜನರಿಗಾಗಿ ಜೀವ ಪಣವಿಟ್ಟು ದುಡಿದವರ ಬಗ್ಗೆ ಹಾಗೂ ಅವರಿಗೆ ಗೌರವ ಸಲ್ಲಿಸುವಂತ ಈ ಗೀತೆಯನ್ನು ಕೊರೊನಾ ವಾರಿಯರ್ಸ್‌ಗಳಿಗೆ ಅರ್ಪಿಸಲಾಗಿದೆ. ಈ ಹಾಡಿನಲ್ಲಿ ಮಹೇಂದ್ರ ಮುನ್ನೋತ್ ಹಲವು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಎರಡು ಪಾತ್ರ- ಎರಡು ಭಾಷೆಯಲ್ಲಿ ಅನಿರೀಕ್ಷಿತ ರೆಡಿ! ಚಿತ್ರದ ಟ್ರೇಲರ್‌ಗೆ ಸ್ಯಾಂಡಲ್‌ವುಡ್‌ ಮೆಚ್ಚುಗೆ

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಸಿನಿ ರಸಿಕರು ಮೆಚ್ಚುಗೆ ಸೂಚಿಸುವುದು ಹೊಸದೇನಲ್ಲ. ಈಗ ವಿಭಿನ್ನ ಕಥಾಹಂದರ ಹೊಂದಿರುವ “ಅನಿರೀಕ್ಷಿತ” ಸಿನಿಮಾಗೂ ಅಂಥದ್ದೊಂದು ಮೆಚ್ಚುಗೆ ಸಿಕ್ಕಿದೆ. ಹೌದು, ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಈಗ ತೆರೆಗೆ ಬರಲು ಚಿತ್ರ ಸಿದ್ದವಾಗಿದೆ. ಕೇವಲ ಎರಡೇ ಪಾತ್ರಗಳು ಈ ಚಿತ್ರದಲ್ಲಿದ್ದು, ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ ಎಂಬುದು ವಿಶೇಷ.


ಲಾಕ್ ಡೌನ್ ನಂತರ ಸುಮಾರು ಎರಡುವರೆ ತಿಂಗಳ ಬಳಿಕ ಆಯೋಜಿಸಿದ್ದ ಮೊದಲ ಪತ್ರಿಕಾಗೋಷ್ಠಿ ನಡೆಸಿದ್ದು ಈ ಚಿತ್ರತಂಡದ ಹೆಮ್ಮೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿ, ನಿರ್ದೇಶನವನ್ನು ಮಾಡಿರುವ ಮಿಮಿಕ್ರಿ ದಯಾನಂದ್, ತಮ್ಮ ಸಿನಿಮಾ ಅನುಭವ ಹಂಚಿಕೊಂಡಿದ್ದು ಹೀಗೆ. “ಮಿಮಿಕ್ರಿ ಕಲಾವಿದನಾದ ನಾನು ನಿರ್ದೇಶನಕ್ಕೆ ಬಂದದ್ದು “ಅನಿರೀಕ್ಷಿತ”. ಲಾಕ್ ಡೌನ್ ಸಮಯದಲ್ಲಿ ನಾವೊಂದಿಷ್ಟು ಜನ‌ ಸಿನಿಮಾ ಮಾಡಬೇಕೆಂದು ಅಂದುಕೊಂಡೆವು. ಹದಿಮೂರು ಜನ ಪ್ರತಿಭಾವಂತರ ಪರಿಶ್ರಮದ ಫಲದಿಂದ ಈ ಚಿತ್ರ ನಿರ್ಮಾಣವಾಗಿದೆ. ಮಂಗಳೂರು ಹಾಗೂ ಕೇರಳದ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಸಮುದ್ರ ತೀರದ ಮನೆಯೊಂದರಲ್ಲಿ ಹೆಚ್ಚು ದಿನದ ಚಿತ್ರೀಕರಣ ನಡೆದಿದ್ದು, ಲಾಕ್ ಡೌನ್ ಸಮಯ ಆಗಿದ್ದರಿಂದ ಯಾರು ಆಚೆ ಹೋಗುವಂತರಲಿಲ್ಲ. ಅಡುಗೆ ಕೆಲಸದಿಂದ ಹಿಡಿದು ಎಲ್ಲವನ್ನೂ ನಾವೇ ಮಾಡಿಕೊಂಡೆವು. ಎಲ್ಲಾ ಕಾರ್ಯಗಳು ಸುಲಲಿತವಾಗಿ ನಡೆಯಲು ಸಹಕರಿಸಿದ ಇಡೀ ತಂಡಕ್ಕೆ ಧನ್ಯವಾದ ಎಂದರು ದಯಾನಂದ್.‌


ನನ್ನನ್ನು ಬಿಟ್ಟು ಕೇರಳದವರೇ ಆದ ಭಾಮ ಅರುಣ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಸರ್ಕಾರ ಬಿಡುಗಡೆಗೆ ಸೂಚಿಸಿದ ಮೇಲೆ ಚಿತ್ರವನ್ನು ತೆರೆಗೆ ತರುತ್ತೇವೆ. ನಮ್ಮ ಚಿತ್ರದ ಟ್ರೇಲರ್ ನೋಡಿ ಕ್ರೇಜಿಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ಸೃಜನ್ ಲೋಕೇಶ್ ಹಾಗೂ ನಟಿ ತಾರಾ ಅವರು ಮೆಚ್ಚುಗೆ ಸೂಚಿಸಿ ಶುಭ ಕೋರಿದ್ದಾರೆ ಎಂಬುದು ಮಿಮಿಕ್ರಿ ದಯಾನಂದ್ ಮಾತು. ನಿರ್ಮಾಣ ಕೆಲಸದಲ್ಲಿ ಕೈ ಜೋಡಿಸಿರುವ ಸಂತೋಷ್ ಕೊಡಂಕೇರಿ, ಚಿತ್ರಕಥೆ ಬರೆದಿರುವ ರಾಜಶೇಖರನ್ ಸೇರಿದಂತೆ ಚಿತ್ರತಂಡದ ಹಲವರು ಚಿತ್ರದ ಅನುಭವ ಹಂಚಿಕೊಂಡರು. ಎಸ್.ಕೆ.ಟಾಕೀಸ್ ಬ್ಯಾನರ್‌ನಲ್ಲಿ ‌ಶಾಂತಕುಮಾರ್‌ ನಿರ್ಮಿಸಿರುವ ಈ‌ ಚಿತ್ರದ ಸಹ ನಿರ್ಮಾಪಕರು ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್.‌


ಅಂದಹಾಗೆ, ದಯಾನಂದ್ ಅವರೆ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ನೆಳ್ಳುಳ್ಳಿ ರಾಜಶೇಖರನ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಅವರ ಸಂಕಲನ ಈ ಚಿತ್ರಕ್ಕಿದೆ.‌ ಚಿತ್ರದಲ್ಲಿ ಕೇವಲ ಎರಡು ಪಾತ್ರಗಳಿದ್ದು,‌ ಮಿಮಿಕ್ರಿ ದಯಾನಂದ್ ಹಾಗೂ ಭಾಮ ಅಭಿನಯಿಸಿದ್ದಾರೆ. ಸಹ ನಿರ್ಮಾಪಕ ಸಂತೋಷ್ ಕೊಡೆಂಕೇರಿ ಈ ಚಿತ್ರದ ತಾಂತ್ರಿಕ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್‌ ಅಭಿನಯದ ಮೇಲೊಬ್ಬ ಮಾಯಾವಿ ಚಿತ್ರದ ʻರಾಣಿಜೇನುʼ ವಿಡಿಯೋ ಸಾಂಗ್ ರಿಲೀಸ್


ಸಂಚಾರಿ ವಿಜಯ್‌ ಅಭಿನಯದ ʻಮೇಲೊಬ್ಬ ಮಾಯಾವಿʼ ಚಿತ್ರದ ಮೊದಲ ವಿಡಿಯೋ ಸಾಂಗ್ ʻನಿಂತು ಹೋಯಿತೇ ಜೀವಗಾನ..ʼ ರಿಲೀಸ್‌ ಆಗಿದ್ದು‌, ಈಗಾಗಲೇ ಅದಕ್ಕೆ ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಈಗ ಚಿತ್ರತಂಡ ಎರಡನೇ ವಿಡಿಯೋ ಸಾಂಗ್‌ ಬಿಡುಗೊಡೆಗೊಳಿಸಿದೆ.

ಚಿತ್ರಕ್ಕೆ ಎಲ್‌.ಎನ್. ಶಾಸ್ತ್ರಿ ಸಂಗೀತ ನೀಡಿದ್ದು, ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ರಚಿಸಿದ್ದಾರೆ. ರಾಜೇಶ್‌ ಕೃಷ್ಣನ್ ಮತ್ತು ಅನುರಾಧಾ ಭಟ್ ಹಾಡಿರುವ ಈ ಲವ್‌ ಸಾಂಗ್‌ ಗೆ ರಾಮು ನೃತ್ಯ ಸಂಯೋಜಿಸಿದ್ದಾರೆ. ಇನ್ನುಳಿದಂತೆ ಬಿ.ನವೀನ್‌ಕೃಷ್ಣ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪುತ್ತೂರು ಭರತ್ ಮತ್ತು ತನ್ವಿ ಅಮಿನ್‌ ಕೊಲ್ಯ ನಿರ್ಮಿಸಿದ್ದಾರೆ.

ಕೆ.ಗಿರೀಶ್‌ ಕುಮಾರ್‌ ಸಂಕಲನಕಾರರಾಗಿರುವ ʻಮೇಲೊಬ್ಬ ಮಾಯಾವಿʼಗೆ, ದೀಪಿತ್‌ ಬಿಜೈ ರತ್ನಾಕರ್‌ ಛಾಯಾಗ್ರಹಣ ಮಾಡಿದ್ದಾರೆ. ಮಣಿಕಾಂತ್‌ ಕದ್ರಿ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ಶ್ವೆತಾ ಕುಮ್ಟ ಅವರ ವಸ್ತ್ರವಿನ್ಯಾಸವಿದೆ.

ಸಂಚಾರಿ ವಿಜಯ್‌, ಅನನ್ಯಾ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್‌, ಕೃಷ್ಣಮೂರ್ತಿ ಕವತ್ತಾರ್‌, ಎಮ್‌.ಕೆ.ಮಠ, ಬೆನಕ ನಂಜಪ್ಪ, ಮಾಸ್ಟರ್‌ ಲಕ್ಷ್ಮೀ ಅರ್ಪಣ್‌, ನವೀನ್‌ಕುಮಾರ್‌, ಪವಿತ್ರಾ ಜಯರಾಮ್‌, ಮುಖೇಶ್‌, ಡಾ. ಮನೋನ್ಮಣಿ, ಸೇರಿದಂತೆ ಸಾಕಷ್ಟು ರಂಗಭೂಮಿ ನಟರು ಚಿತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಬಿಗ್ ಬಾಸ್ ಮನೆ‌ ಕೆಡಿಸಿದ್ರಾ ಚಂದ್ರಚೂಡ್ ? ಅವರು ನುಗ್ಗೆಕಾಯಿ, ಮಾವಿನಕಾಯಿ ಕಥೆ ಹೇಳಿದ್ದು ಯಾರ ಕುರಿತು ಗೊತ್ತಾ?


ಬಿಗ್ ಬಾಸ್ ಸೆಂಕೆಂಡ್‌ ಇನ್ನಿಂಗ್ಸ್ ಹಳ್ಳಿ ಪಂಚಾಯಿತಿ ಕಟ್ಟೆಯಂತಾಗಿದೆ. ಅಲ್ಲೀಗ ‘ಮೂರನೇ ದರ್ಜೆ’ ಯ ಕಥಾ ಲೋಕ‌ ತೆರೆದುಕೊಂಡಿದೆ. ಕಳೆದ ಏಳು ಸೀಸನ್ ಗಳಲ್ಲಿ ಸಿಗದ ಮನರಂಜನೆ‌ ಈಗ ಇಲ್ಲಿ ವೀಕ್ಷಕರಿಗೆ ಸಿಗುತ್ತಿದೆ. ಸದ್ಯಕ್ಕೀಗ ಬಿಗ್ ಬಾಸ್ ಮನೆಯಲ್ಲಿನ ಅಷ್ಟು ಕಂಟೆಸ್ಟೆಡ್ ಗಳಿಗೆ ಚಕ್ರವರ್ತಿ ಚಂದ್ರಚೂಡ್ ಟಾರ್ಗೆಟ್ ಆಗಿದ್ದಾರೆ. ಅದರಿಂದ ಹೊರ ಬರಲು ಚಂದ್ರಚೂಡ್ ತಮ್ಮ ಮಾತಿನ ಪಾಂಡಿತ್ಯ ಪರಾಕಾಷ್ಟೆ ಮೆರೆಯುತ್ತಿದ್ದು, ಅವರ ಮೂಲಕ ಬಿಗ್ ಬಾಸ್ ಮನೆಯಲ್ಲಿ ನುಗ್ಗೆಕಾಯಿ, ಮಾವಿನಕಾಯಿ, ಮಲುಗೊಬದ ಮಾರ್ಮಿಕ ಕಥೆಗಳು ಚರ್ಚೆ ಆಗುತ್ತಿರುವುದು ವೀಕ್ಷಕರಲ್ಲೂ ಹೇಸಿಗೆ ತರಿಸಿದೆ.

ಚಂದ್ರಚೂಡ್ ತಪ್ಪುಮಾಡಿ ಬಿಟ್ರಾ? ಬಿಗ್ ಬಾಸ್ ವೀಕ್ಷಕರಿಗೆ ಈಗ ಹೀಗೆನಿಸುತ್ತದೆ. ಅದಕ್ಕೆ ಕಾರಣವೂ ಇದೆ. ಕೊರೋನಾ ಕಾರಣದಿಂದ ಬಿಗ್ ಬಾಸ್ ಸೀಸನ್ 8 ಅರ್ಧದಲ್ಲಿಯೇ ನಿಂತು ಹೋದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಬಿಗ್ ಬಾಸ್ ಇತಿಹಾಸದಲ್ಲಿ ಎಂದೂ ‌ಹೀಗಾಗದ ಕಾರಣಕ್ಕೆ ಟ್ರೋಪಿ ಗೆಲ್ಲುವ ಅದೃಷ್ಟ ಯಾರಿಗೂ ಇರಲಿಲ್ಲವೇ ಅಂತಂದುಕೊಂಡಿದ್ದು ಹೌದು. ಆದರೆ, ಸೆಕೆಂಡ್ ಇನ್ನಿಂಗ್ಸ್ ಮತ್ತೆ ಶುರುವಾಗುತ್ತೆ ಅಂದಾಗ ಜ‌ನ ಖುಷಿಯಾದರು. ಅತ್ತ ಚಕ್ರವರ್ತಿ ಚಂದ್ರಚೂಡ್ ಶಾಕ್ ಆದರು‌. ಅಷ್ಟೇ ಅಲ್ಲ, ಬಿಗ್ ಬಾಸ್ ಮನೆಗೆ ಮತ್ತೆ ಹೇಗೆ ಹೋಗುವುದು ಅಂತಲೂ ತಲೆ ಕೆಡಿಸಿಕೊಂಡಿದ್ದು ಹೌದು.

ಅದಕ್ಕೆ ಕಾರಣವೂ ಇತ್ತು‌. ಬಿಗ್ ಬಾಸ್ ಅರ್ಧಕ್ಕೆ ನಿಂತು ಹೋಗಿ, ಅಲ್ಲಿದ್ದ ಸ್ಪರ್ಧಿಗಳು ವಾಪಾಸ್ ಮನೆಗೆ ಬಂದಾಗ, ಕುಂತಲ್ಲಿ ಕೂರಲಾರೆ, ನಿಂತಲ್ಲಿ ನಿಲ್ಲಲಾರೆ ಎನ್ನುವ ಹಾಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್ ಗಳಿಗೆ ಹೋಗಿ ಹೋಗಿ ಇಂಟರ್ವ್ಯೂ ಕೊಟ್ಟು ಬಂದಿದ್ದರು ಚಕ್ರವರ್ತಿ ಚಂದ್ರಚೂಡ್. ಮಾತಿನಲ್ಲಿ ಚಂದ್ರಚೂಡ್ ಅವರನ್ನು ಮೀರಿಸುವವರೇ ಇಲ್ಲ‌. ವಿಷಯ ಯಾವುದೇ ಆದರೂ‌ ಸರಿ, ಗಂಟೆ ಗಟ್ಟಲೆ ಭಾಷಣ ಬಿಗಿಯುವ ಕಾಯಿಲೆ ಅವರಿಗಿದೆ. ಎಷ್ಟೋ‌ ಸಲ ಟಿವಿ ಡಿಬೆಟ್ ಗಳಿಗೆ ತಾವೇ ಒತ್ತಾಯ ಮಾಡಿ ಹೋಗಿದ್ದರ ಬಗ್ಗೆ ಟಿವಿ ಚಾನೆಲ್ ನವರೇ ಹೇಳಿದ್ದು ಇತ್ತು. ಅಂತಹದರಲ್ಲಿ ಬಿಗ್ ಬಾಸ್ ಎನ್ನುವ ಕಿರಾತಕ ಮನೆಯ ಕಂತೆ ಪುರಾಣ ಚಂದ್ರಚೂಡ್ ಬಳಿ ಇದ್ದಾಗ ಸುಮ್ಮನೆ ಕೂರುತಾರಾ? ಟಿ ವಿ ಚಾನೆಲ್ ಗಳಲ್ಲಿ, ಯೂಟ್ಯೂಬ್ ಚಾನೆಲ್ ಗಳಲ್ಲಿ ದಿನ ಗಟ್ಟಲೆ ಕುಳಿತು ಸುರುಳಿ ಸುರುಳಿ ಪುಂಗಿ ಊದಿ ಬಂದಿದ್ದು ಎಲ್ಲರಿಗೂ ಗೊತ್ತು.

ಇಂಟರ್ ವಿವ್ಯೂಗಳಲ್ಲಿ ಇಷ್ಟಕ್ಕೂ ಚಂದ್ರಚೂಡ್ ಹೇಳಿದ್ದೇನು ಗೊತ್ತಾ ? ಎಲ್ಲವೂ ವಿವಾದಿತ ಹೇಳಿಕೆಗಳೇ. ಬಿಗ್ಬಾಸ್ ಮನೆಯಲ್ಲಿ ಆಗ ವೀಕ್ಷಕರ ನಡುವೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಪಾವಗಡ ಮಂಜು, ದಿವ್ಯಾ ಸುರೇಶ್ ಜೋಡಿಯ ಬಗ್ಗೆ ಚಂದ್ರಚೂಡ್ ಹೊರಗಡೆ ಸಂದರ್ಶನಗ ಳಲ್ಲಿ ಕೊಟ್ಟ ಹೇಳಿಕೆಗಳೆಲ್ಲವೂ ಆಕ್ಷೇಪಾರ್ಹ. ಇಷ್ಟಕ್ಕೂ ಪಾವಗಡ ಮಂಜು ಹಾಗೂ ದಿವ್ಯಾ ಸುರೇಶ್ ನಿಜಕ್ಕೂ ಗಂಡ- ಹೆಂಡತಿ ಆಗಿರಲಿಲ್ಲ‌ . ಟಾಸ್ಕ್ ಗಳಲ್ಲಿ ಒಂದಾಗಿದ್ದ, ಈ ಜೋಡಿ ಮುಂದೆ ಒಳ್ಳೆಯ ಗೆಳೆಯರಾದರು. ಸಹಜವಾಗಿ ವೀಕ್ಷಕರ ಕಣ್ಣು ಅವರ ಮೇಲೆ ಬಿತ್ತು. ಅವರಿಬ್ಬರ ನಡುವೆ ಲವ್ ಇದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.

ಹೊರ ಗಡೆ ಬಂದಾಗ ಚಂದ್ರಚೂಡ್ ಕೇಳಿಸಿಕೊಂಡ ಆ ಮಾತುಗಳನ್ನೇ ನಿಜ ಅಂದುಕೊಂಡರು. ಹಾಗಾಗಿಯೇ ಅವರಿಬ್ಬರು‌ ಮದುವೆ ಆಗುವುದಾದರೆ ಅವರಿಬ್ಬರಿಗೂ ತಾಳಿ ಕೊಡಿಸ್ತೀನಿ ಅಂತ ಹೇಳಿ ಬಿಡೋದಾ? ಇದೇ ಮಾತನ್ನು ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರ ಬಗ್ಗೆಯೂ ಇದೇ ಮಾತು ಹೇಳಿದ್ದರೂ ಚಂದ್ರಚೂಡ್ . ಅಷ್ಟೇ ಅಲ್ಲ ಬಿಗ್ ಬಾಸ್ ಕಬ್ಬನ್ ಪಾರ್ಕ್ ಆಗಿತ್ತು ಅಂದಿದ್ದರು, ಅದೆಲ್ಲವಲ್ಲಕ್ಕೂ ಈಗ ಉತ್ತರ ಸಿಗುತ್ತಿದೆ.

ಚಂದ್ರಚೂಡ್ ಬಡಬಡಿಸುತ್ರಿರುವುದು ವಿಚಿತ್ರವಾಗಿದೆ‌. ವೀಕ್ಷಕರು ಎಲ್ಲಿಂದ ನಗಬೇಕೋ ಅರ್ಥ ವಾಗದೆ ಒದ್ದಾಡುತ್ತಿದ್ದಾರೆ. ಇದು ಕೂಡ ಗಿಮಿಕ್ ಅಂತಲೇ ಅಂದುಕೊಳ್ಳೋಣ. ಯಾಕಂದ್ರೆ ಈಗ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ವರಸೆ ಬದಲಾಗಬೇಕಿದೆ. ಹಾಗಾಗಿ ಚಂದ್ರಚೂಡ್ ಎಂಬ ಮಾತಿನ ಮಲ್ಲನನ್ನು ಹೀಗೆಲ್ಲ ಇಕ್ಕಟ್ಟಿಗೆ ಸಿಲುಕಿಸಿ, ಆಟ ಆಡಿಸುತ್ತಲೂ ಇರಬಹುದು‌. ಆದರೆ, ಚಂದ್ರಚೂಡ್ ಒಳಗೂ- ಹೊರಗೂ ಭಾರೀ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಭಾನುವಾರದ ಎಪಿಸೋಡ್ ನೋಡಿದವರು ಸೋಷಲ್ ಮೀಡಿಯಾದಲ್ಲಿ ಚಂದ್ರಚೂಡ್ ವಿರುದ್ಧ ಕೆಂಡಮಂಡಲ ಆಗಿದ್ದಾರೆ. ಇದೆಲ್ಲ ನೋಡಿದರೆ ಮುಂದಿನ ವಾರಕ್ಕೆ ಚಂದ್ರಚೂಡ್ ಎಲಿಮಿನೇಟ್ ಆದರೂ ಕೂಡ ಅಚ್ಚರಿ ಇಲ್ಲ.

Categories
ಸಿನಿ ಸುದ್ದಿ

ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಶೂಟಿಂಗ್ ವಿಸಿಟ್‌ ಮಾಡಿದ ಅಪ್ಪು

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರವೊಂದನ್ನು ಸತ್ಯಪ್ರಕಾಶ್ ನಿರ್ದೇಶನ ಮಾಡಬೇಕಿತ್ತು. ಕೋವಿಡ್ ಮತ್ತು ಲಾಕ್ ಡೌನ್ ನಿರ್ಬಂಧಗಳಿಂದಾಗಿ ಆ ಚಿತ್ರ ಸ್ವಲ್ಪ ತಡವಾಯ್ತು. ಆ ಚಿತ್ರದ ಚರ್ಚೆಯ ಸಂದರ್ಭದಲ್ಲೇ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರದ ಎಳೆಯನ್ನು ಸತ್ಯಪ್ರಕಾಶ್ ಪುನೀತ್ ಅವರ ಬಳಿ ಹೇಳಿದ್ದರು. ಹೊಸ ಕಲಾವಿದರಿಗಾಗಿಯೇ ತಯಾರಿಸಿದ್ದ ಆ ಕಥೆಯ ವಸ್ತು ಹಾಗೂ ಚಿತ್ರಕಥೆಯಲ್ಲಿದ್ದ ಹೊಸತನ, ಪುನೀತ್ ಅವರಿಗೂ ಸಹ ಮೆಚ್ಚುಗೆಯಾಗಿ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

ಆಗ “ಮ್ಯಾನ್ ಆಫ್ ದಿ ಮ್ಯಾಚ್” ಚಿತ್ರಕ್ಕೆ ಚಾಲನೆ ಸಿಕ್ಕಿತು. ಪಿಆರ್‌ಕೆ ಮತ್ತು ಸತ್ಯ & ಮಯೂರ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಏಪ್ರಿಲ್ ನಲ್ಲಿ ಶುರುವಾಗಿ, ಬಹುತೇಕ ಚಿತ್ರೀಕರಣ ಮುಗಿಸಿದೆ. ಈಗ ಬಿಡುಗಡೆಯ ಕೆಲಸಗಳು ಜೋರಾಗಿ ನಡೆಯುತ್ತಿವೆ. ಇತ್ತೀಚೆಗೆ ನಡೆದ ಅಂತಿಮ ಹಂತದ ಚಿತ್ರೀಕರಣ ಸ್ಥಳಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

error: Content is protected !!