Categories
ಸಿನಿ ಸುದ್ದಿ

ಲವ್ ಸ್ಟೋರಿ ಹಿಂದೆ ಬಿದ್ದ ಶಶಾಂಕ್! ಲವ್ 360 ಮೂಲಕ ಮತ್ತೆ ಬಂದ್ರು: ಡಾಕ್ಟರ್ ಈಗ ಆಕ್ಟರ್…

“ಮೊಗ್ಗಿನ ಮನಸ್ಸು”, ” ಕೃಷ್ಣನ್ ಲವ್ ಸ್ಟೋರಿ ” ಯಂತಹ ಅದ್ಭುತ ಲವ್ ಸ್ಟೋರಿ ಚಿತ್ರಗಳ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ “ಲವ್ 360”. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆಯಾಗಿದೆ

ಬಹಳ ದಿನಗಳ ನಂತರ ನಿಮ್ಮನೆಲ್ಲಾ ನೋಡುತ್ತಿರುವುದು ಖುಷಿಯಾಗಿದೆ. ಮೂರು ವರ್ಷಗಳ ನಂತರ “ತಾಯಿಗೆ ತಕ್ಕ ಮಗ” ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರವಿದು. ಲಾಕ್ ಡೌನ್ ಸಮಯದಲ್ಲಿ ಸಿದ್ದವಾದ ಕಥೆಯಿದು. ನಾನು ಉಪೇಂದ್ರ ಅವರ ಚಿತ್ರ ನಿರ್ದೇಶಿಸಬೇಕಿತ್ತು.‌ ಅದು ದೊಡ್ಡಮಟ್ಟದ ಚಿತ್ರ. ಚಿತ್ರೀಕರಣಕ್ಕೆ ಕೊರೋನ ನಿಯಮಾವಳಿಗಳು ಸಹಕಾರಿಯಾಗುವಂತೆ ಕಾಣಲಿಲ್ಲ. ಹಾಗಾಗಿ ಆ ಚಿತ್ರ ಮುಂದೂಡಿ, ಈ ಚಿತ್ರ ಆರಂಭ ಮಾಡಿದೆ. ಅದರಲ್ಲೂ ಹೊಸಬರೊಂದಿಗೆ ನಾನು ಕೆಲಸ ಮಾಡಿ ಸುಮಾರು ವರ್ಷಗಳೇ ಆಗಿತ್ತು. ಈ ಚಿತ್ರದ ಮೂಲಕ ಪ್ರವೀಣ್ ಎಂಬ ನೂತನ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಪ್ರವೀಣ್ ಸೇರಿದಂತೆ ಅವರ ಕುಟುಂಬದರೆಲ್ಲಾ ವೈದ್ಯರು. ಹೊಸಪೇಟೆ ಬಳಿಯ ಮಾರಮ್ಮನಹಳ್ಳಿಯಲ್ಲಿ ಇವರ ಆಸ್ಪತ್ರೆ ಇದೆ. ಸಾವಿರಾರು ಜನಕ್ಕೆ ಉಚಿತ ಚಿಕಿತ್ಸೆ ನೀಡಿ‌ ಪ್ರವೀಣ್ ತಂದೆ ಆ ಊರಿನ ಸುತ್ತ ಹೆಸರುವಾಸಿಯಾಗಿದ್ದರು. ಎಂ.ಬಿ.ಬಿ.ಎಸ್ ಓದಿರುವ ಪ್ರವೀಣ್ ಗೆ ನಟನೆಯಲ್ಲಿ ಆಸಕ್ತಿ. ಈ ಕುರಿತು ಅವರ ತಾಯಿ ನನ್ನ ಬಳಿ ಹೇಳಿದರು. ನಿರ್ಮಾಣವನ್ನೂ ಮಾಡುವುದಾಗಿ ಹೇಳಿದ್ದರು.

ಆದರೆ ಅವರ ಬಳಿ ಈ ಚಿತ್ರಕ್ಕೆ ಬೇಕಾದಷ್ಟು ಹಣವಿಲ್ಲದ ಕಾರಣ, ನಮ್ಮ ಶಶಾಂಕ್ ಸಿನಿಮಾಸ್ ಸಂಸ್ಥೆ ಸಹ ನಿರ್ಮಾಣಕ್ಕೆ ಕೈ ಜೋಡಿಸಿತ್ತು. ಪ್ರವೀಣ್ ಗೆ ನಟನೆಗೆ ಬೇಕಾದ ಎಲ್ಲಾ ತಯಾರಿ ನೀಡಿ, ಚಿತ್ರ ಆರಂಭಿಸಲಾಯಿತು. ರಚನಾ ಇಂದರ್ ಈ ಚಿತ್ರದ ನಾಯಕಿ. ಗೋಪಾಲ್ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಿದ್ ಶ್ರೀರಾಮ್ ಹಾಗೂ ಸಂಚಿತ್ ಹೆಗಡೆ ಹಾಡಿರುವ ಹಾಡುಗಳು ಕೇಳುಗರ ಮನ ಗೆದ್ದಿದೆ‌.
ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದ್ದು, ಸೆನ್ಸಾರ್ ಮಂಡಳಿ ವೀಕ್ಷಿಸಿದ ನಂತರ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ನಿರ್ದೇಶಕ ಶಶಾಂಕ್ ತಿಳಿಸಿದರು.

ನಾನು ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿದಾಗಿನಿಂದಲೂ ನಟನೆಯಲ್ಲಿ ಆಸಕ್ತಿ. ತಿಂಗಳಲ್ಲಿ ಮೂರು ದಿನ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಗೆ ಬಂದು ಅಭಿನಯ ಕಲಿಯುತ್ತಿದೆ. ಅಪ್ಪನಿಗೆ ವಿಷಯ ತಿಳಿದು ಬಯ್ಯುತ್ತಿದ್ದರು. ಈಗ ಅಪ್ಪ ಇಲ್ಲ. ಅಮ್ಮನ ಮುಂದೆ ನನ್ನ ಆಸೆ ಹೇಳಿಕೊಂಡೆ. ಅಮ್ಮ ನನ್ನ‌ ಆಸೆಗೆ ಆಸರೆಯಾದರು. ಆನಂತರ ಶಶಾಂಕ್ ಸರ್ ಪರಿಚಯವಾಯಿತು. ಶಶಾಂಕ್ ಅವರು ಸಾಕಷ್ಟು ವರ್ಕ್ ಶಾಪ್ ನಡೆಸಿ ನನಗೆ ಅಭಿನಯ ಕಲಿಸಿದರು. ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದೀನಿ. ಈ ಚಿತ್ರದಲ್ಲಿ ಬೋಟ್ ಮೆಕಾನಿಕ್ ಪಾತ್ರ ಮಾಡಿದ್ದೀನಿ. ಡಾಕ್ಟರ್ ಆಗಬೇಕಿತ್ತು. ಈಗ ಆಕ್ಟರ್ ಆಗಿದ್ದೀನಿ ಅಂದರು ಪ್ರವೀಣ್.

ನಾನು “ಲವ್ ಮಾಕ್ಟೇಲ್” ಚಿತ್ರದಲ್ಲಿ ಅಭಿನಯಿಸಿದ್ದೆ. ಆದರೆ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯಿಸಿರುವ ಮೊದಲ ಚಿತ್ರವಿದು. ಈ ಚಿತ್ರದ ಆಡಿಷನ್ ಇದಾಗ ಅಮ್ಮ ಜಡೆ ಹಾಕಿ, ಜುಮಕಿ ಹಾಕಿಸಿಕೊಂಡು ಕರೆದುಕೊಂಡು ಹೋಗಿದ್ದರು. ನಾನು ಬೇಡ ಅಂದೆ. ಅಮ್ಮ ಇರಲಿ ಅಂದರು. ಶಶಾಂಕ್ ಅವರಿಗೆ ನಾನು ಹೋಗಿದ್ದ ರೀತಿ ಇಷ್ಟವಾಯಿತಂತೆ. ಆನಂತರ ನಾನು ಸೆಲೆಕ್ಟ್ ಆದೆ. ನಂತರ ನಿರ್ದೇಶಕರು
ವರ್ಕ್ ಶಾಪ್ ಮೂಲಕ ಅಭಿನಯ ಹೇಳಿಕೊಟ್ಟರು. ಪಾತ್ರ ತುಂಬಾ ಚೆನ್ನಾಗಿದೆ ಅಂದರು ರಚನಾ ಇಂದರ್.

ಗೋಪಾಲ್ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಹಾಗೂ ಕಾವ್ಯ ಶಾಸ್ತ್ರಿ
ತಮ್ಮ ಪಾತ್ರದ ಬಗ್ಗೆ, ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ ಹಾಗೂ ಸಾಹಸ ನಿರ್ದೇಶಕದ ಬಗ್ಗೆ ಮಾಸ್ ಮಾದ ಮಾತನಾಡಿದರು.

Categories
ಸಿನಿ ಸುದ್ದಿ

ಜೂನ್ 24ಕ್ಕೆ ತ್ರಿವಿಕ್ರಮನ ಪರಾಕ್ರಮ! ವಿಕ್ರಮ್ ಬರ್ತಾನೆ‌ ದಾರಿ ಬಿಡಿ…

ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ” ತ್ರಿವಿಕ್ರಮ ” ಚಿತ್ರ ಜೂನ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಿಡುಗಡೆ ಘೋಷಣೆಗೆ ತಾರಾ, ನಟರಾದ ಮನುರಂಜನ್, ಸಾಧುಕೋಕಿಲ, ಶರಣ್, ಆದಿ ಲೋಕೇಶ್, ನಿರ್ದೇಕರಾದ ಶಿವಮಣಿ, ಸಂತೋಷ್ ಆನಂದರಾಮ್, ಚೇತನ್ ಕುಮಾರ್ ಮುಂತಾದ ಗಣ್ಯರು ಸಾಕ್ಷಿಯಾದರು.

ನಮ್ಮ ಚಿತ್ರ ಪೂರ್ಣವಾಗಿ ಮೂರು ವರ್ಷವಾಯಿತು. ಕೋವಿಡ್ ಕಾರಣದಿಂದ ತಡವಾಯಿತು. ಈ ಸಮಯದಲ್ಲಿ ನಾನು ಪುನೀತ್ ಸರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಈ ಚಿತ್ರದ ಕಥೆ ಅವರಿಗೆ ಹೇಳಿದ್ದೆ. ಕೇಳಿ ಖುಷಿ ಪಟ್ಟಿದ್ದರು. ನಾನು ಒಂದು ಹಾಡು ಹಾಡುತ್ತೀನಿ ಅಂದಿದ್ದರು. ನೀನು ಚೆನ್ನಾಗಿ ಡ್ಯಾನ್ಸ್ ಮಾಡಬೇಕು. ಇಲ್ಲದಿದ್ದರೆ ಹೊಡೀತಿನಿ ಅಂದಿದ್ದರು ಪ್ರೀತಿಯಿಂದ. ಅವರು ಇಲ್ಲ ಅಂತ ಹೇಳಲ್ಲ. ಇಲ್ಲೇ ಇದ್ದಾರೆ. ಈ ಚಿತ್ರದ ಕಥೆ ನಾನು ನಮ್ಮ ತಂದೆಯವರಿಗೂ ಪೂರ್ತಿ ಹೇಳಿಲ್ಲ. ಕಥೆ ಗೊತ್ತಿರುವುದು ನನಗೆ, ಅಪ್ಪು ಸರ್ ಗೆ ಹಾಗೂ ಶಿವಣ್ಣ ಅವರಿಗೆ. ನಾನು ರವಿಚಂದ್ರನ್ ಅವರ ಮಗ ಹೌದು. ಆದರೆ ಚಿತ್ರರಂಗಕ್ಕೆ ನಾಯಕನಾಗಿ ಹೊಸಬ. ನಮ್ಮ ಚಿತ್ರ ನೋಡಿ ಹಾರೈಸಿ. ಅವಕಾಶ ನೀಡಿದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ನಾಯಕ ವಿಕ್ರಮ್ ರವಿಚಂದ್ರನ್.

ವಿಕ್ರಮ್ ಅವರ ನಟನೆಗೆ ನೂರಕ್ಕೆ ಸಾವಿರ ಅಂಕ ಕೊಡಬಹುದು. ಮಧ್ಯಮರ್ಗದ ಹುಡುಗನಾಗಿ ವಿಕ್ರಮ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗ, ಹೈ ಕ್ಲಾಸ್ ಫ್ಯಾಮಿಲಿ ಹುಡುಗಿಯನ್ನು ಏಕೆ ಲವ್ ಮಾಡಬಾರದು? ಎಂಬ ವಿಷಯವನ್ನು ಈ ಚಿತ್ರದಲ್ಲಿ ಹೇಳ ಹೊರಟಿದ್ದೇನೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಅಮ್ಮನ ಕುರಿತಾದ ಹಾಡು ಈಗಾಗಲೇ ಜನಮನ ಗೆದ್ದಿದೆ.
ಚಿತ್ರಕ್ಕೆ ನಿರ್ಮಾಪಕ ಸೋಮಣ್ಣನವರ ಸಹಕಾರ ಅಪಾರ. ಜೂನ್ 24 ಚಿತ್ರ ತೆರೆಗೆ ಬರಲಿದೆ. ಇದು ನನ್ನ ಮೂರನೇ ಚಿತ್ರ. ಹಿಂದಿನ ಚಿತ್ರಗಳಿಗೆ ತಾವು ನೀಡಿದ ಪ್ರೋತ್ಸಾಹವನ್ನು ಈ ಚಿತ್ರಕ್ಕೂ ಮುಂದುವರಿಸಿ ಎಂದರು ನಿರ್ದೇಶಕ ಸಹನಾಮೂರ್ತಿ.

ನಿರ್ದೇಶಕ ಸಹನಾಮೂರ್ತಿ ನನ್ನ ಸ್ನೇಹಿತ. ಆತ ಈ ಚಿತ್ರದ ಕಥೆ ಸಿದ್ದಮಾಡಿಕೊಂಡು ಅನೇಕರ ಹತ್ತಿರ ಹೇಳುತ್ತಿದ್ದ. ಕೊನೆಗೆ‌ ನಾನು ಕೇಳಿದ್ದೆ. ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಹಾಗಾಗಿ ನಾನು ಸಿನಿಮಾ ಮಾಡಲು ಒಪ್ಪಿಕೊಂಡೆ. 2019ರಲ್ಲಿ ಚಿತ್ರ ಆರಂಭವಾಯಿತು. ಅಪ್ಪು ಸರ್ ಬಂದು ಕ್ಲಾಪ್ ಮಾಡಿದ್ದರು. ಚಿತ್ರದ ಎಲ್ಲಾ ಇವೆಂಟ್ ಗಳಗೂ ಬರುವ ಭರವಸೆ ನೀಡಿದ್ದರು. ಆದರೆ ವಿಧಿಲಿಖಿತವೇ ಬೇರೆಯಾಗಿತ್ತು. ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದರು ನಿರ್ಮಾಪಕ ಸೋಮಣ್ಣ.

ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಅಭಿನಯಿಸುವಾಗ ವಿಕ್ರಮ್ ಸರ್ ಸಾಕಷ್ಟು ಸಹಾಯ ಮಾಡಿದರು ಎಂದು ನಾಯಕಿ ಆಕಾಂಕ್ಷ ಶರ್ಮ ಹೇಳಿಕೊಂಡರು.

ಹಿಂದೆ “ಜನುಮದ ಜೋಡಿ” ಚಿತ್ರ ಬಂದಾಗ, ಜನ ಎಷ್ಟೋ ದಿನ ಅದೇ ಗುಂಗಿನಲಿದ್ದರು. ಈಗ ” ಕೆ.ಜಿ.ಎಫ್ 2″ ಚಿತ್ರವನ್ನು ಅದೇ ರೀತಿ ನೋಡುತ್ತಿದ್ದಾರೆ. ಜನರನ್ನು ಮತ್ತೆ ಚಿತ್ರಮಂದಿರದತ್ತ ಕರೆದುಕೊಂಡು ಬರುವ ಚಿತ್ರ ಬರಬೇಕು. ಅಂತಹ ಚಿತ್ರ “ತ್ರಿವಿಕ್ರಮ” ಆಗಲಿ. ವಿಕ್ಕಿ ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಸಾಧುಕೋಕಿಲ.

ಹಿರಿಯ ನಿರ್ದೇಶಕ ಶಿವಮಣಿ ಅವರು ಸಹ ಈ ಚಿತ್ರದ ತಮ್ಮ ಪಾತ್ರದ ಕುರಿತು ಹೇಳಿಕೊಂಡರು.

ಮನುರಂಜನ್ ರವಿಚಂದ್ರನ್, ತಾರಾ, ಸಂತೋಷ್ ಆನಂದರಾಮ್, ಚೇತನ್, ಶರಣ್, ಆದಿ ಲೋಕೇಶ್ ತಮ್ಮ ಪ್ರೋತ್ಸಾಹಭರಿತ ಮಾತುಗಳಿಂದ ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಬೆಲ್ ಬಟನ್ ಒತ್ತಿದ ಜಗ್ಗೇಶ್! ಹೊಸಬರ ಚಿತ್ರಕ್ಕೆ ನವರಸ ನಾಯಕ ಕ್ಲಾಪ್…

ಬೆಲ್ ಬಟನ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ನವರಸ ನಾಯಕ ಜಗ್ಗೇಶ್ ರವವರು ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ನಟ ಪ್ರತಾಪ್ ರೆಡ್ಡಿ ಅವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ತಾಯಿ ಬಂಡೆ ಮಹಾ ಕಾಳಿ ಅಮ್ಮನವರ ಸನ್ನಿಧಿಯಲ್ಲಿ ಬೆಲ್ ಬಟನ್ ಚಿತ್ರದ ಮಹೂರ್ತ ನಡೆದಿದೆ.

ಕನ್ನಡದ ಖ್ಯಾತ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ, ಹಾಗು ರಂಗಭೂಮಿ ನಟರಾಗಿ ಅನುಭವವಿರುವ ಲ‌ಕ್ಷ್ಮಿನರಸಿಂಹ. ಎಂ “ಬೆಲ್ ಬಟನ್” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಫ್ರೆಶ್ ಫಿಲಂಸ್ ಮೂಲಕ ಗಂಗರಾಜ್ ಗೌಡ ಆರ್, ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎ.ಆರ್ ರೆಹಮಾನ್ ಬಳಿ ಕೆಲಸ ಮಾಡಿರುವ ಎಸ್ ಎಂ ರಾಹಿತ್ಯ ಸಂಗೀತ ನೀಡುತ್ತಿದ್ದಾರೆ. ಲಕ್ಕಿ ಛಾಯಾಗ್ರಹಣ ಹಾಗೂ ಎಸ್ ಆಕಾಶ್ ಮಹೇಂದ್ರಕರ್ ಸಂಕಲನ ಈ ಚಿತ್ರಕ್ಕಿದೆ.

ಜೈ, ಈ ಚಿತ್ರದ ನಾಯಕ, ನಿಸರ್ಗ ಅಪ್ಪಣ್ಣ ಮತ್ತು ಚೈತ್ರಾ ಗೌಡ , ನಾಯಕಿಯರು, ಪ್ರಮೀಳಾ ಸುಬ್ರಮಣ್ಯ, ಭಾನುಪ್ರಕಾಶ್, ಶ್ರುತಿ, ರಮೇಶ್, ಪವನ್ ರಿಚ್ಚಿ, ವೇಣು, ಸುಜನಿತ್ ಶೆಟ್ಟಿ, ಗಿರೀಶ್, ಅರವಿಂದ್, ಹರೀಶ್, ಮುಂತಾದವರು ಅಭಿನಯಸುತ್ತಿದ್ದಾರೆ, ಮೇ 15 ರಿಂದ ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಲಕ್ಷ್ಮಿನರಸಿಂಹ ಅವರು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಫಿಸಿಕ್ಸ್ ಟೀಚರ್ ಹಿಂದೆ ಬಿದ್ದ ಸುಮುಖ- ಟ್ರೇಲರ್ ಜೋರು ಸದ್ದು : ಮೇ 27ಕ್ಕೆ ರಿಲೀಸ್…

ಕಿರುತೆರೆಯಲ್ಲಿ ಸುಮಾರು ವರ್ಷಗಳಿಂದ ಗುರುತಿಸಿಕೊಂಡಿರುವ ಶಶಿಕುಮಾರ್ ಹಾಗೂ ನಂದಿತಾ ಅವರ ಪುತ್ರ ಸುಮುಖ. ಇದೀಗ ಫಿಸಿಕ್ಸ್ ಟೀಚರ್ ಸಿನಿಮಾ ಮೂಲಕ ಹೀರೋ ಆಗಿಯೂ ನಿರ್ದೇಶಕರಾಗಿಯೂ ಎಂಟ್ರಿಯಾಗುತ್ತಿದ್ದಾರೆ…

ಸುಮುಖ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ” ಫಿಸಿಕ್ಸ್ ಟೀಚರ್” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದ್ದು ಅದು ಜನಮನಸೂರೆಗೊಂಡಿದೆ.‌ ಇದೇ ಇಪ್ಪತ್ತೇಳರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

ನಾನು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ನೋಡಿದೆ. ತುಂಬಾ ಚೆನ್ನಾಗಿದೆ. ಸಾಮಾನ್ಯ ಸಿನಿಮಾ ಸೂತ್ರಗಳನ್ನು ಹೊರತುಪಡಿಸಿದ ಸಿನಿಮಾ. ಸುಮುಖ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದೆ. ಮಾಮೂಲಿ ಚಿತ್ರಗಳಿಗಿಂತ ಭಿನ್ನವಾಗಿರುವ ಈ ಚಿತ್ರವನ್ನು ನೀವೆಲ್ಲಾ ನೋಡಿ ಹರಸಿ ಎಂದರು ಖ್ಯಾತ ವಿಮರ್ಶಕ ಮನು ಚಕ್ರವರ್ತಿ.

ಟ್ರೇಲರ್ ಗೆ ಸಿಕ್ಕ ಪ್ರಶಂಸೆ ಕಂಡು ಖುಷಿಯಾಗಿದೆ. ಬೇರೆಯದೇ ರೀತಿಯ ಸಿನಿಮಾ ಅಂದ ಕೂಡಲೇ ಆರ್ಟ್ ಸಿನಿಮಾ ತರಹವೂ ಅಲ್ಲ. ಸಾಕಷ್ಟು ಕಮರ್ಷಿಯಲ್ ಎಲಿಮೆಂಟ್ ಈ ಚಿತ್ರದಲ್ಲಿದೆ. ಎಲ್ಲಾ ನಟರ ಅಭಿನಯ ಚೆನ್ನಾಗಿದೆ . ಮೇ 27 ತೆರೆಗೆ ಬರುತ್ತಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ – ನಟ ಸುಮುಖ.

ಬಿಡುಗಡೆಗೂ ಮುನ್ನವೇ ನಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಸಂತೋಷವಾಗಿದೆ. ಈಗ ಟ್ರೇಲರ್ ಬಂದಿದೆ. ಸದ್ಯ ಹಾಡೊಂದು ಸಹ ಬಿಡುಗಡೆಯಾಗಲಿದೆ. 27ರಂದು ಚಿತ್ರ ತೆರೆ ಕಾಣಲಿದೆ. ನೋಡಿ ಬೆಂಬಲ ನೀಡಿ ಎಂದರು ನಾಯಕಿ ಪ್ರೇರಣ ಕಂಬಂ.

ಸುಮುಖನನ್ನು ಹುಟ್ಟಿದ ದಿನದಿಂದ ನೋಡಿದ್ದೀನಿ. ಅವನ ಜೊತೆ ಕೆಲಸ ಮಾಡಿದ್ದು ಖುಷಿ. ಆತ ಉತ್ತಮ ನಿರ್ದೇಶಜ. ಆದರೆ ಅದಕ್ಕಿಂತ ಆತ ಉತ್ತಮ ನಟ ಎನ್ನುತ್ತೇನೆ. ಈ ಸಿನಿಮಾ ಜನರ ಮೆಚ್ಚುಗೆ ಪಡೆಯಲಿ ಎಂದರು ನಟ ರಾಜೇಶ್ ನಟರಂಗ.

ನಿರ್ಮಾಪಕ ಶಶಿಕುಮಾರ್, ನಂದಿತಾ, ಪತ್ರಕರ್ತ, ಲೇಖಕ ಜೋಗಿ, ಕಥೆ ಬರೆದಿರುವ ಸ್ಕಂದ ಸುಬ್ರಹ್ಮಣ್ಯ ಹಾಗೂ ನಿರ್ಮಾಣ ನಿರ್ವಾಹಕ ಅಕ್ಷಯ್ “ಫಿಸಿಕ್ಸ್ ಟೀಚರ್” ಗೆ ಕೋರಿದರು.

Categories
ಸಿನಿ ಸುದ್ದಿ

ಸಿನಿಲೋಕಕ್ಕೆ ಸಚಿನ್ ಚೆಲುವರಾಯಸ್ವಾಮಿ ರೀ-ಎಂಟ್ರಿ : ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಅದ್ದೂರಿ ಕಂಬ್ಯಾಕ್…

ಹೋಗುಮೆ ಹೋಗುಮೆ ಎಲ್ಲರ ಒಂದಪ್ಪ ಕದ್ದು ಹೋಗುಮೆ….ಇದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿಂಗಿಂಗ್…ವಿ.ನಾಗೇಂದ್ರ ಪ್ರಸಾದ್ ಅಂದ ಚೆಂದದ ಪದಗಳನ್ನು ಪೊಣಿಸಿ ಬರೆದ ಅದ್ಭುತ ಸಾಹಿತ್ಯದ ಈ ಗಾನಲಹರಿಗೆ ಧ್ವನಿಯಾದವರು ನವೀನ್ ಸಜ್ಜು. ಇದೇ ಹಾಡಿನಲ್ಲಿ ಲವರ್ ಬಾಯ್ ಲುಕ್ ನಲ್ಲಿ, ಅದ್ಭುತ ನಟನೆ ಮೂಲಕ ಗಮನಸೆಳೆದವರು ಸಚಿನ್ ಚೆಲುವರಾಯಸ್ವಾಮಿ.

ಮಾಜಿ ಸಚಿವ ಚೆಲುವರಾಯಸ್ವಾಮಿ ಸುಪುತ್ರ ಸಚಿನ್, ಕಳೆದ ಐದು ವರ್ಷದ ಹಿಂದೆ ಹ್ಯಾಪಿ ಬರ್ತ್​​ಡೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ಸಚಿನ್ ಒಂದಷ್ಟು ವರ್ಷಗಳ ಕಾಲ ಸಿನಿಮಾ ಲೋಕದಿಂದ ದೂರ ಸರಿದಿದ್ದರು. ಇದೀಗ ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಸಚಿನ್ ಮತ್ತೆ ಅದ್ಧೂರಿಯಾಗಿ ಕಂಬ್ಯಾಕ್ ಆಗಿದ್ದಾರೆ.

ಹೊಸ ಉತ್ಸಾಹ, ಹುಮ್ಮಸ್ಸಿನೊಂದಿಗೆ ಸಚಿನ್, ಫೀಲ್ಡ್​​​ಗೆ​​​​​​​​​​​​ ಇಳಿದಿದ್ದು, ಈ ಬಾರಿ ಭರ್ಜರಿ ತಯಾರಿ ಮಾಡಿಕೊಂಡು ಎಂಟ್ರಿ‌ ಕೊಟ್ಟಿದ್ದಾರೆ. ಮಾಸ್ ಎಲಿಮೆಂಟ್ಸ್​​​​​​ ಕಥೆ ಆಧರಿಸಿರುವ ‘ಬೆಂಗಳೂರು ಬಾಯ್ಸ್​​​​​​’ ಸಿನಿಮಾಗಾಗಿ, ಆ್ಯಕ್ಟಿಂಗ್, ಡ್ಯಾನ್ಸಿಂಗ್ ಜೊತೆ ಫಿಟ್ನೆಸ್ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರೆ.

ಮಲ್ಟಿಸ್ಟಾರ್ ಚಿತ್ರವಾಗಿರುವ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಸಚಿನ್, ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಮನರಂಜನೆಯ ಚಿತ್ರವಾಗಿದ್ದು, ಕಾಲೇಜು, ಎಮೋಷನ್‌, ಪ್ರೇಮ ಕತೆ ಹೀಗೆ ಎಲ್ಲ ಅಂಶಗಳೂ ಸಿನಿಮಾದಲ್ಲಿವೆ ಎನ್ನುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.

ವಿಕ್ರಮ್ ಕೆ ವೈ ಸಿನಿಮಾದ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ ಕ್ರಿಯೇಟಿವ್ ಡೈರೆಕ್ಟರ್ ಆಗಿ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಜೊತೆಯಲ್ಲಿ ಸಚಿನ್ ಬತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಗೊಂಡಿದ್ದು, ಸದ್ಯದಲ್ಲಿಯೇ ಆ ಹೊಸ ಪ್ರಾಜೆಕ್ಟ್ ಬಗ್ಗೆ ಅವರೇ‌ ಮಾಹಿತಿ ನೀಡಲಿದ್ದಾರೆ.

Categories
ಸಿನಿ ಸುದ್ದಿ

ಧರಣಿ ಮಂಡಲದೊಳಗೊಂದು‌ ಮೆಲೋಡಿ ಸಾಂಗು: ಮಾತು‌ ಮಾತಲ್ಲೇ ಹೊಸ ರಂಗು…

‘ಗುಳ್ಟು’ ಸಿನಿಮಾದ ನವೀನ್ ಹಾಗೂ ಚಂದನವನದ ಶಾಕುಂತಲೆ ಐಶಾನಿ ಶೆಟ್ಟಿ ಜೋಡಿಯಾಗಿ ನಟಿಸಿರುವ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಸಿನಿರಸಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗೌಸ್ ಪೀರ್ ಬರೆದಿರುವ ಮಾತು ಮಾತಲ್ಲೇ ಎಂಬ ಮೆಲೋಡಿ ಹಾಡಿಗೆ ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಅಷ್ಟೇ ಸೊಗಸಾದ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡಿದ್ದಾರೆ.

ಹೈಪರ್ ಶೈಲಿಯ ಸಿನಿಮಾವಾಗಿರುವ
ಧರಣಿ ಮಂಡಲ‌ ಮಧ್ಯದೊಳಗೆ ಚಿತ್ರಕ್ಕೆ ಈ ಹಿಂದಿ ಪೂರಿ ಜಗನ್ನಾಥ್ ಜೊತೆ ಕೆಲಸ‌ ಮಾಡಿದ್ದ ಶ್ರೀಧರ್ ಷಣ್ಮುಖ ಆಕ್ಷನ್ ಕಟ್ ಹೇಳಿದ್ದಾರೆ.

ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಬಂಡವಾಳ ಹೂಡಿದ್ದಾರೆ. ಕೀರ್ತನ್ ಪೂಜಾರಿ ಛಾಯಗ್ರಹಣ, ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Categories
ಸಿನಿ ಸುದ್ದಿ

ರಿಲೀಸ್ ಮೊದಲೇ ವಿಕ್ರಾಂತ್ ರೋಣ ದಾಖಲೆಗಳ‌ ಮೇಲೆ ದಾಖಲೆ; ಓವರ್ ಸೀಸ್ ಮಾರ್ಕೆಟ್ ರೆಕಾರ್ಡ್ ಬ್ರೇಕ್! ದಾಖಲೆ ಮೊತ್ತ ಕನ್ನಡದಲ್ಲೇ ಫಸ್ಟ್ …

ವಿದೇಶಿ ಮಾರುಕಟ್ಟೆಯ ‘ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನು ‘ಒನ್ ಟ್ವೆಂಟಿ 8 ಮೀಡಿಯಾ’ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ವಿದೇಶಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ನಿರ್ಮಾಪಕ ಜಾಕ್ ಮಂಜುನಾಥ್ ಹೇಳುವಂತೆ, ‘ಸಿನಿಮಾದ ಕಂಟೆಂಟ್ ಯೂನಿವರ್ಸಲ್ ಆಗಿರುತ್ತದೆ ಎಂಬುದನ್ನು ನಾನು ಯಾವಾಗಲೂ ಕಾಪಾಡಿಕೊಂಡು ಬಂದಿದ್ದೇನೆ. ಭಾವನೆಗಳು ಪ್ರಪಂಚದಾದ್ಯಂತ ಒಂದೇ ಸ್ವರ ಮತ್ತು ತಾಳದಲ್ಲಿ ಕೂರುತ್ತದೆ ಮತ್ತು ಈ ಒಪ್ಪಂದವು ಅದಕ್ಕೆ ಸಾಕ್ಷಿಯಾಗಿದೆ. ಖರೀದಿಯ ಬಗ್ಗೆ ಅತ್ಯಂತ ಸಂತೋಷವಿದೆ ಮತ್ತು ಉಳಿದ ವಿವರಗಳನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ.’ ‘ಇದು ಕನ್ನಡ ಚಿತ್ರಕ್ಕೆ ಅತ್ಯಧಿಕ ಮತ್ತು ಇತರ ದಕ್ಷಿಣ ಭಾರತದ ಭಾಷೆಗಳಿಗೆ ಸಮಾನವಾಗಿದೆ’ ಎಂದು ಮಂಜುನಾಥ್ ಅವರು ಹೇಳುತ್ತಾರೆ.

ಜುಲೈ 28 ರಂದು ವಿಶ್ವದಾದ್ಯಂತ 3D ರಿಲೀಸ್

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದೆ, ಇದರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನು ಝೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದ್ದು, ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಮತ್ತೊಂದು ಆಡಿಯೋ ಕಂಪನಿ ಶುರು; ಸಾಟರ್ಡೆ ನೈಟ್ಸ್ ಇದು ಪ್ರಣವ್ ಆಡಿಯೋದ ಫಸ್ಟ್ ಆಲ್ಬಂ ಸಾಂಗ್…

ಕನ್ನಡ ಚಿತ್ರರಂಗದಲ್ಲಿ ಹಾಡುಗಳಿಗೆ ಅದರದೇ ಆದ ಮಹತ್ವವಿದೆ. ಎಷ್ಟೋ ವರುಷ ಕಳೆದರೂ ಇಂಪಾದ ಹಾಡುಗಳು ಇನ್ನೂ ಗುನುಗುವಂತಿದೆ. ಅಷ್ಟೇ ಪ್ರತಿಷ್ಠಿತ ಆಡಿಯೋ ಕಂಪನಿಗಳೂ ಕರ್ನಾಟಕದಲ್ಲಿದೆ. ಜನಮನ ಗಿದ್ದಿದೆ.
ಸಂತೃಪ್ತಿ ಕಂಬೈನ್ಸ್ ಅವರ ಪ್ರಣವ್ ಆಡಿಯೋ ಕಂಪನಿ ಸಹ ಇತ್ತೀಚೆಗೆ ಆರಂಭವಾಗಿದೆ. ಕಂಪನಿಯ ಮೊದಲ ಹೆಜ್ಜೆಯಾಗಿ “ಸಾಟರ್ಡೆ ನೈಟಲಿ” ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಸಮರ್ಥನಂ ಸಂಸ್ಥೆಯ ಮಹಂತೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನನಗೆ ಹಣ ಮಾಡುವ ಉದ್ದೇಶವಿಲ್ಲ.‌ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಷ್ಟೇ ಉದ್ದೇಶ. ನಮ್ಮ ಪ್ರಣವ್ ಆಡಿಯೋ ಕಂಪನಿಯ ಮೊದಲ ಪ್ರಯತ್ನವಾಗಿ ಈ ಆಲ್ಬಂ ಸಾಂಗ್ ಹೊರತಂದಿದ್ದೀವಿ. ಮುಂದೆ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವಿದೆ.‌ ಸದ್ಯದಲ್ಲೇ ಈ ಕುರಿತು ಮಾಹಿತಿ ನೀಡುತ್ತೇನೆ ಎಂದರು ಪ್ರಣವ್ ಆಡಿಯೋ ಮಾಲೀಕರಾದ ವಿರೂಪಾಕ್ಷಿ.

“ಸಾಟರ್ಡೆ ನೈಟಲಿ” ಬೆಂಗಳೂರಿನ ಎಂ.ಜಿ.ರಸ್ತೆ ಹಾಗೂ ಚರ್ಚ್ ರಸ್ತೆಯಲ್ಲಿ ಚಿತ್ರೀಕರಣವಾದ ಹಾಡು. ಮುಂದೆ ಚಿತ್ರ ಮಾಡುವ ಉದ್ದೇಶವಿದೆ. ಅದಕ್ಕೂ ಮುಂಚೆ ಈ‌ ಆಲ್ಬಂ ಸಾಂಗ್ ನಿರ್ದೇಶನ ಮಾಡಿದ್ದೀನಿ. “ಇರುವುದೆಲ್ಲವ ಬಿಟ್ಟು” ಸಿನಿಮಾ ಖ್ಯಾತಿಯ ಶ್ರೀ ಹಾಗೂ ಪೂಜಾ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಹಾಡು ಬರೆದು ನಿರ್ಮಾಣ ಮಾಡಿದ್ದಾರೆ. ಪ್ರೇಮ್ ಭರತ್ ಸಂಗೀತ ನೀಡಿದ್ದಾರೆ. ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ. ಶ್ರೇಯಸ್ಸ್ ಭೈರವ್ ನೃತ್ಯ ನಿರ್ದೇಶನವಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ ಎಂದು ಆಲ್ಬಂ ಸಾಂಗ್ ನಿರ್ದೇಶಕ ರವಿಕುಮಾರ್ ಮಾಹಿತಿ ನೀಡಿದರು.

ನಾನು “ಇರುವುದೆಲ್ಲವ ಬಿಟ್ಟು” ಹಾಗೂ “ಗಜಾನನ ಗ್ಯಾಂಗ್” ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನಾನು ನಟಿಸಿರುವ ಮೊದಲ ಆಲ್ಬಂ ಸಾಂಗ್. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ ಎಂದರು ನಾಯಕ ಶ್ರೀ.

ನಾನು ಮೂಲತಃ ಸಿವಿಲ್ ಎಂಜಿನಿಯರ್. ಹಾಡು ಬರೆಯುವುದು ನನ್ನ ಹವ್ಯಾಸ.‌ ಅನೇಕ ಹಾಡುಗಳನ್ನು ಬರೆದಿದ್ದೇನೆ.‌ ಆದರೆ‌ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಆಲ್ಬಂ ಸಾಂಗನ್ನು ನಾನೇ ನಿರ್ಮಾಣ ಕೂಡ ಮಾಡಿದ್ದೀನಿ ಎನ್ನುತ್ತಾರೆ ಸಿದ್ದಾರ್ಥ್.

ಈ ಆಡಿಯೋ ಕಂಪನಿ ಮಾಲೀಕರಾದ ವಿರೂಪಾಕ್ಷಿ ನನ್ನ ಸ್ನೇಹಿತರು. ಒಳ್ಳೆಯ ಉದ್ದೇಶವಿಟ್ಟುಕೊಂಡು ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಇನ್ನೂ ಆಲ್ಬಂ ಸಾಂಗ್ ನ ನಿರ್ಮಾಪಕ ಸಿದ್ದಾರ್ಥ್ ಅವರ ಮಾತು ಕೇಳಿ ಸಂತೋಷವಾಯಿತು. ನಾಯಕ ಶ್ರೀ ಸೇರಿದಂತೆ ಇಡೀ ತಂಡಕ್ಕೆ ಶುಭವಾಗಲಿ ಉಮೇಶ್ ಬಣಕಾರ್.

ನಾಯಕಿ ಪೂಜಾ, ಸಂಗೀತ ನಿರ್ದೇಶಕ ಪ್ರೇಮ್ ಭರತ್, ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಪ್ರೇಮ್ ಹೊಸ್ಮನಿ, ಪ್ರಣವ್ ಆಡಿಯೋ ಕಂಪನಿ ಬ್ಯುಸಿನೆಸ್ ಹೆಡ್ ರಶ್ಮಿತಾ ಹಾಗೂ ನೃತ್ಯ ನಿರ್ದೇಶಕ ಶ್ರೇಯಸ್ಸ್ ಭೈರವ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಇವಳು ಕಲ್ಲಿನ ಕೋಟೆ ಹುಡುಗನ ಕನಸಿನ ಹುಡುಗಿ ! ಮೀರಾ ಎಂಬ ವೆಬ್ ಸೀರೀಸ್ ಗೆ ಚಿತ್ರದುರ್ಗ ಪ್ರತಿಭೆಯ ಆ್ಯಕ್ಷನ್ ಕಟ್…

ಕನ್ನಡ ಚಿತ್ರರಂಗ ಈಗ ಎಲ್ಲೆಡೆ ಜೋರು ಸದ್ದು ಮಾಡುತ್ತಿದೆ. ಅದರಲ್ಲೂ ಹೊಸಬರದ್ದೇ ಈಗ ಹವಾ. ಹೌದು, ಇಲ್ಲಿ ಹೊಸ ಪ್ರತಿಭೆಗಳ ಆಗಮನ ನಿರಂತರವಾಗಿದೆ. ಸಿನಿಮಾ ಜೊತೆ ಜೊತೆಯಲ್ಲಿ ಈಗ ಕನ್ನಡ ವೆಬ್ ಸೀರೀಸ್ ಜಮಾನ. ಹಾಗಾಗಿ ಅದು ಕೂಡ ಚಾಲ್ತಿಯಲ್ಲಿದೆ. ಈಗಾಗಲೇ ಹಲವು ಹೊಸ ಪ್ರತಿಭಾವಂತರು ವೆಬ್ ಸೀರೀಸ್ ಮೊರೆ ಹೋಗಿದ್ದಾರೆ. ಆ ಮೂಲಕ ಸದ್ದು ಮಾಡಿದ ಉದಾಹರಣೆಯೇ ಹೆಚ್ಚು. ಈಗ ಅಂತಹ ವೆಬ್ ಸೀರೀಸ್ ಹಿಂದೆ ನರಸಿಂಹಮೂರ್ತಿ (ಮೂರ್ತಿ ದುರ್ಗ) ಎಂಬ ಹೊಸ ಪ್ರತಿಭೆಯೂ ಸೇರಿದೆ

ಅಂದಹಾಗೆ, ನರಸಿಂಹಮೂರ್ತಿ ಮೂಲತಃ ಚಿತ್ರದುರ್ಗದ ಹುಡುಗ. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಆ ಅನುಭವ ಈಗ ಇದೇ‌ ಮೊದಲ‌ ಸಲ ವೆಬ್ ಸೀರೀಸ್ ಮೂಲಕ ನಿರ್ದೇಶಕನಾಗಲು ಹೊರಟಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಇವರದೇ. ಈ ನಿಟ್ಟಿನಲ್ಲಿ ಈಗಾಗಲೇ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ ಕೂಡ. ಅವರ ಕನಸಿನ‌ ವೆಬ್ ಸೀರೀಸ್ ಗೆ ಅವರಿಟ್ಟ ಹೆಸರು ಮೀರಾ. ಇದು ಕನ್ನಡ, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ತಯಾರಾಗುತ್ತಿರುವ ಸೀರೀಸ್.
ಮೀರಾ ಈ ಹೆಸರೇ ಹೇಳುವಂತೆ ಇದೊಂದು‌ ಮಹಿಳಾ ಕಥಾಹಂದರ ಹೊಂದಿರುವ ಸ್ಟೋರಿ. ಸದ್ದಿಲ್ಲದೆಯೇ ಒಂದು ಎಪಿಸೋಡ್ ಚಿತ್ರೀಕರಿಸಿರುವ ನಿರ್ದೇಶಕ ನರಸಿಂಹಮೂರ್ತಿ, ತಮ್ಮದೇ ಉತ್ಸಾಹಿ ತಂಡ ಕಟ್ಟಿಕೊಂಡು ವೆಬ್ ಸೀರೀಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಮೀರಾ ಅಂದಾಕ್ಷಣ, ನೆನಪಾಗೊದೇ ಒಂದು ಮಹಿಳಾ ಪ್ರಧಾನವಾಗಿರುವ ಕಥೆ. ಅದು ನಿಜ ಕೂಡ. ಈಗಿನ ವಾಸ್ತವ ಅಂಶಗಳೇ ಈ ವೆಬ್ ಸೀರೀಸ್ ಜೀವಾಳ. ಒಂದು ಹೆಣ್ ದನಿಯ ಆರ್ತನಾದ, ಅವಳ ನೋವು, ದುಗುಡ-ದುಮ್ಮಾನ, ದೌರ್ಜನ್ಯ ಅವಳನ್ನು ಸಮಾಜ ನೋಡುವ ಪರಿ, ಆಕೆಯ ಸಮಸ್ಯೆಗೆ ಸ್ಪಂದಿಸದ ಸಮಾಜ ಇನ್ನು ಇತ್ಯಾದಿ ಸಮಸ್ಯೆಗಳ ಕುರಿತು ಸಾಗುವ ಕಥೆಯಲ್ಲಿ ಹಲವು ಮಜಲುಗಳಿವೆ. ಇಡೀ ಕಥೆ ಹೆಣ್ಣಿನ ಸುತ್ತವೇ ಸುತ್ತಲಿದ್ದು, ನೈಜ ಘಟನೆಗಳಿಗೆ ಸಾಕ್ಷಿ ಎಂಬಂತೆಯೇ ನಿರೂಪಣೆ ಇರಲಿದೆ ಅನ್ನೋದು ನಿರ್ದೇಶಕ ನರಸಿಂಹಮೂರ್ತಿ ಅವರ ಮಾತು.

ಇನ್ನು ಈ ವೆಬ್ ಸೀರೀಸ್ ಗೆ ಹಂಸ ನಿರ್ಮಾಪಕರು. ಬೆಂಕಿ ಮುರಳಿ ಮತ್ತು ವಿನಯ್ ಕುಮಾರ್ ಸಹ ನಿರ್ಮಾಪಕರಾಗಿದ್ದಾರೆ. ಈ ದಿನಮಾನದಲ್ಲಿ ಸಿನಿಮಾ ಮಾಡಲು ಹಿಂದೇಟು ಹಾಕುವ ನಿರ್ಮಾಪಕರೇ ಇರುವಾಗ, ಹಂಸ, ಬೆಂಕಿ ಮುರುಳಿ ಮತ್ತು ವಿನಯ್ ಕುಮಾರ್ ನಿರ್ದೇಶಕ ನರಸಿಂಹಮೂರ್ತಿ ಅವರ ಚಂದದ ಮತಗತು ಮನಮುಟ್ಟುವ ಕಥೆ ಕೇಳಿ‌ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹೆಸರಘಟ್ಟ ಸುತ್ತಮುತ್ತ, ಅವರು ಚಿತ್ರೀಕರಣ ಮಾಡಿದ್ದಾರೆ. ಈ ವೆಬ್ ಸೀರೀಸ್ ಗೆ ಕುಮಾರ್ ಗೌಡ ಕ್ಯಾಮೆರಾ ಹಿಡಿದರೆ, ಆರ್.ಬಿ. ಉಮೇಶ್ ಅವರ ಸಂಕಲನವಿದೆ.

ಇನ್ನು ಈ ವೆಬ್ ಸೀರೀಸ್ ಗೆ ಸಿಂಹ ರಂಗ ಮತ್ತು ನಿಧಿ ಹೈಲೈಟ್. ಮಿಕ್ಕಂತೆ ಒಂದಷ್ಟು ಪ್ರತಿಭಾವಂತರು ಈ‌ವೆಬ್ ಸೀರೀಸ್ ಭಾಗವಾಗಿದ್ದಾರೆ. ಅದೇನೆ ಇರಲಿ ನಿರ್ದೇಶಕ ಮೂರ್ತಿ ದುರ್ಗ ಅವರ ಕನಸಿನ ಈ ಮೀರಾ ವೆಬ್ ಸೀರೀಸ್ ಮಹಿಳೆಯರ ದನಿಯಾಗಲಿ ಅನ್ನೋದು ಆಶಯ.

Categories
ಸಿನಿ ಸುದ್ದಿ

ಶ್ರೀನಿ ಮತ್ತೊಂದು ಹೊಸ ಸಿನಿಮಾ: ಓಲ್ಡ್ ಮಾಂಕ್ ಬಳಿಕ ಸ್ಪೆಷಲ್ ಚಿತ್ರಕ್ಕೆ ತಯಾರಿ…

ಕನ್ನಡ ಚಿತ್ರಪ್ರೇಮಿಗಳಿಗೆ ಓಲ್ಡ್‌ಮಂಕ್ ಕಿಕ್ ಕೊಟ್ಟಿದ್ದ ಶ್ರೀನಿ ಶಿವಣ್ಣನಿಗೆ ಆಕ್ಷನ್ ಕಟ್ ಹೇಳುವ ಮೂಲಕ ಸರ್ ಪ್ರೈಸ್ ಕೊಟ್ಟಿದ್ದು ಗೊತ್ತೇ ಇದೆ. ಈಗ ಆರ್ ಜೆ ಆಗುವ ಮೂಲಕ Onair ಆಗ್ತಿದ್ದಾರೆ. ಅಂದ್ರೆ ನಿರ್ದೇಶನದ ಜೊತೆ ನಟನೆಯಲ್ಲಿ ಬ್ಯುಸಿ ಇರುವ ಶ್ರೀನಿ ಸದ್ದಿಲ್ಲದೇ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Onair ಫಸ್ಟ್ ಲುಕ್ ರಿಲೀಸ್

ಶ್ರೀನಿ ನಾಯಕನಾಗಿ ನಟಿಸ್ತಿರುವ ಹೊಸ ಸಿನಿಮಾದ ಹೆಸರು Onair. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಇಂಪ್ರೆಸಿಂಗ್ ಆಗಿ ಮೂಡಿಬಂದಿದೆ.

ಡಿಫರೆಂಟ್ ಟೈಟಲ್ ನ Onair ಸಿನಿಮಾದಲ್ಲಿ ಶ್ರೀನಿ ಆರ್ ಜೆ ಪಾತ್ರದಲ್ಲಿ ನಟಿಸ್ತಿದ್ದು, ಇದೊಂದು ಥ್ರಿಲ್ಲರ್ ಕಥಾನಕ ಕಂಟೆಂಟ್ ಹೊಂದಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಜುಲೈನಲ್ಲಿ ನೇರವಾಗಿ OTTಯಲ್ಲಿ ಬಿಡುಗಡೆಯಾಗ್ತಿದೆ.

ಈ ಸಿನಿಮಾದ ಸ್ಪೆಷಾಲಿಟಿ ಅಂದ್ರೆ ರಾಜಮೌಳಿ ತಂದೆ, ಬಾಹುಬಲಿ ಸಿನಿಮಾದ ಲೇಖಕ ವಿಜಯೇಂದ್ರ ಪ್ರಸಾದ್ ಅಸೋಸಿಯೇಟ್ ಆಗಿದ್ದ ಪ್ರಶಾಂತ್ ಸಾಗರ್ Onair ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಘುವೀರ್ ಗೋರಿಪತಿ ಮತ್ತು ಸೃಜನ್ ಯರಬೋಲು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

error: Content is protected !!