Categories
ಸಿನಿ ಸುದ್ದಿ

ಹ್ಯಾಟ್ರಿಕ್ ಹೀರೋ ಪಕ್ಕ ನಿಂತಳು ಮಗಳು ಜಾನಕಿ – ಶಿವಣ್ಣನ 125ನೇ ಚಿತ್ರಕ್ಕೆ ಗಾನವಿ ನಾಯಕಿ !

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಪಕ್ಕದಲ್ಲಿ ನಿಲ್ಲುವ ಅವಕಾಶ ಮತ್ತು ಶಿವಣ್ಣನ ಜೊತೆಯಾಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವ ಅದೃಷ್ಟ ಸರಿಸುಮಾರು 124 ಜನ ನಾಯಕಿಯರಿಗೆ ಸಿಕ್ಕಿದೆ. ಇದೀಗ 125ನೇ ನಟಿಮಣಿಯ ಸರದಿ. ಕರುನಾಡ ಕಿಂಗ್ ಶಿವರಾಜ್‌ಕುಮಾರ್ ಅಭಿನಯದ `125’ನೇ ಚಿತ್ರಕ್ಕೆ ನಾಯಕಿಯಾಗಿ ಸೆಂಚುರಿಸ್ಟಾರ್ ಜೊತೆ ಬಿಗ್‌ಸ್ಕ್ರೀನ್‌ನಲ್ಲಿ ಮೆರವಣಿಗೆ ಹೊರಡುವ ಲಕ್ಕಿ ಚಾನ್ಸ್ ಈ ಸಲ ಮಗಳು ಜಾನಕಿಗೆ ಸಿಕ್ಕಿದೆ….

ಮಗಳು ಜಾನಕಿ' ಯಾರು ಅಂತ ನಮ್ಮ ಕರುನಾಡ ಮಂದಿಗೆ ಹೊಸದಾಗಿ ಹೇಳಬೇಕಿಲ್ಲ. ಅದರಲ್ಲೂ ಸೀರಿಯಲ್ ಪ್ರಿಯರಿಗೆ ಮಗಳು ಜಾನಕಿ’ಯನ್ನು ಇಂಟ್ರುಡ್ಯೂಸ್ ಮಾಡಿಕೊಡಬೇಕಾಗಿಲ್ಲ. ಯಾಕಂದ್ರೆ, ದಿನಪ್ರತಿ ಅವರವರ ಮನೆಯ ಟಿವಿ ಪರದೆಯ ಮೇಲೆ ಮಗಳು ಜಾನಕಿ'ಯನ್ನು ಕಣ್ತುಂಬಿಕೊಂಡಿರ‍್ತಾರೆ. ವಕೀಲೆಯಾಗಿ ವಾದ ಮಾಡೋದನ್ನು ನೋಡಿ ಭೇಷ್‌ಗಿರಿ ಕೊಟ್ಟರ‍್ತಾರೆ. ಆದರೆ, ಸಿನಿಮಾ ಪ್ರಿಯರಿಗೆ ಮಗಳು ಜಾನಕಿ’ ಪರಿಚಯ ಅಷ್ಟಾಗಿರಲ್ಲ ಹೀಗಾಗಿ, ಶಿವಣ್ಣನ ಸಿನಿಮಾಗೆ ಆಯ್ಕೆಯಾಗಿರುವ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಕಿರುತೆರೆ'ಯಲ್ಲಿ ಕಾಣಿಸಿಕೊಂಡು ಕರುನಾಡಿನ ಮನೆಮಾತಾಗಿರುವ ಮಗಳು ಜಾನಕಿ’ ಸೀರಿಯಲ್ ಪಾತ್ರಧಾರಿ ಗಾನವಿ ಲಕ್ಷ್ಮಣ್ ಗೆ ಬೆಳ್ಳಿತೆರೆಯಲ್ಲಿ ಮಿಂಚುವ ಅವಕಾಶಗಳು ಸಿಗುತ್ತಿವೆ.
ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ನಟನೆಯ ಹೀರೋ' ಚಿತ್ರಕ್ಕೆ ನಾಯಕಿಯಾಗಿರುವ ಗಾನವಿ, ಈಗ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾಗೆ ಹೀರೋಯಿನ್ನಾಗಿದ್ದಾರೆ. ಶಿವಣ್ಣನ ವೃತ್ತಿ ಬದುಕಿನ ಮೈಲ್‌ಸ್ಟೋನ್ ಸಿನಿಮಾ ಆಗಲಿರುವ 125ನೇ `ವೇದ’ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಗಾನವಿ ಅದೃಷ್ಟ ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.

ಅಂದ್ಹಾಗೇ, ‘ವೇದ ‘ ಹ್ಯಾಟ್ರಿಕ್ ಕಾಂಬಿನೇಷನ್‌ ನಲ್ಲಿ ಬರ್ತಿರೋ ನಾಲ್ಕನೇ ಸಿನಿಮಾ. ನಿರ್ದೇಶಕ. ಎ ಹರ್ಷ ಹಾಗೂ ಶಿವರಾಜ್ ಕುಮಾರ್ ನಾಲ್ಕನೇ ಸಲ ಒಂದಾಗಿದ್ದಾರೆ. ವಜ್ರಕಾಯ, ಭಜರಂಗಿ ಹಾಗೂ ಭಜರಂಗಿ 2 ಚಿತ್ರದ ನಂತರ ‘ ವೇದ’ ಸಿನಿಮಾದ ಮೂಲಕ ಹ್ಯಾಟ್ರಿಕ್ ಜೋಡಿ ಮತ್ತೆ ಜೊತೆಯಾಗಿದೆ. ಈ ಡೆಡ್ಲಿ ಕಾಂಬೋಗೆ ಶಿವರಾಜ್ ಕುಮಾರ್ ಪತ್ನಿ ಗೀತಕ್ಕ ಬಂಡವಾಳ ಹೂಡಿದ್ದಾರೆ.


ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸಿಷನ್ ಚಿತ್ರಕ್ಕಿದ್ದು, ಶೋ ಮಸ್ಟ್ ಗೋ ಆನ್ ಎನ್ನುವಂತೆ ಅಪ್ಪು ಅಗಲಿಕೆಯ ನೋವುನ್ನು ನುಂಗಿಕೊಂಡು ಸಿನಿಮಾಗೆ ಮರಳಬೇಕಿದೆ ಶಿವಣ್ಣ. ಸಹೋದರನ ಸಿನಿಮಾ ಪ್ರೀತಿಯನ್ನು ಕಣ್ಮುಂದೆ ತಂದುಕೊಂಡು ಶಿವಣ್ಣ ಕ್ಯಾಮರಾ ಎದುರಿಸಬೇಕಿದೆ. ಗೀತಾ ಪಿಕ್ಚರ್ ಬ್ಯಾನರ್ ಅಡಿಯ ಚೊಚ್ಚಲ ಚಿತ್ರ ಇದಾಗಿದ್ದು, ಅದ್ದೂರಿಯಾಗಿ ನಿರ್ಮಾಣ ಮಾಡುವ ಕನಸು ಗೀತಕ್ಕ ಅವ್ರದ್ದು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸೌತ್-ನಾರ್ತ್ ಮಾತ್ರವಲ್ಲ, ಇಡೀ ಜಗತ್ತಿಗೆ ಹೀರೋ ಇವ್ರು ; ಮುಂದಿನ ವರ್ಷ ಫೆಬ್ರವರಿ 24ಕ್ಕೆ ವರ್ಲ್ಡ್ ವೈಡ್ ಗೆ ಗೊತ್ತಾಗುತ್ತೆ ಗುರು !

ಸಿನಿಮಾ ಜಗತ್ತಿನಲ್ಲಿ ಸಾವಿರಾರು ಹೀರೋಗಳಿದ್ದಾರೆ. ಮೂವೀ ಎನ್ನುವ ಮಾಯ ಲೋಕದಲ್ಲಿ ಸ್ಟಾರ್ ಪಟ್ಟಕ್ಕೇರಿ ರಾರಾಜಿಸುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಸ್ವಂತ ಬ್ರ್ಯಾಂಡ್ ಕಟ್ಟಿ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿ ಸಿನಿಮಾ ಸಾಮ್ರಾಜ್ಯದಲ್ಲಿ ಅಧಿಪತಿಗಳಾಗಿ ಮೆರೆಯುತ್ತಿದ್ದಾರೆ. ಇವರುಗಳ ಪೈಕಿ ಕೆಲವರು ಬಾರ್ಡರ್ ಹಾಕಿಕೊಂಡಿದ್ದಾರೆ. ಇನ್ನೂ ಕೆಲವರು ಬಾರ್ಡರ್ ಕ್ರಾಸ್ ಮಾಡಿದ್ದಾರೆ. ಆದರೆ, ಈ ಎರಡು ಕ್ಯಾಟಗರಿಯ ಸ್ಟಾರ್ಸ್ ಗಳಿಗೆ ಬಾರ್ಡರ್ ಆಚೆ ಫ್ಯಾನ್ಸ್ ಇದ್ದಾರೆ ಅನ್ನೋದು ಮಾತ್ರ ಸತ್ಯ. ಅಷ್ಟಕ್ಕೂ, ನಾವ್ ಈಗ ನಿಮಗೆ ಹೇಳೋದಕ್ಕೆ ಹೊರಟಿರುವುದು ಹೊಸ ಹೀರೋ ಬಗ್ಗೆ. ಅಲ್ಲಾರೀ, ವಾರಕ್ಕೊಬ್ಬರು ಹೊಸ ಹೀರೋ ಮಾಯಲೋಕಕ್ಕೆ ಪರಿಚಯವಾಗ್ತಾರೆ. ಅಷ್ಟಕ್ಕೆ ಇಷ್ಟು ಬಿಲ್ಡಪ್ಪಾ ಅಂತ ಗೊಣಗಬೇಡಿ. ಯಾಕಂದ್ರೆ ಇಡೀ ಜಗತ್ತಿಗೆ ಸಿಗಲಿರುವ ಹೊಸ ಹೀರೋ ಬಗ್ಗೆ ನಿಮಗೆ ಹೇಳ ಬಯಸಿದ್ದೇವೆ…

ಹೌದು,24-02-2022 ರಂದು ಇಡೀ ವಿಶ್ವಕ್ಕೆ ಹೊಸ ಹೀರೋ ಸಿಗುತ್ತಿದ್ದಾರೆ. ಹಾಗಾದ್ರೆ ಯಾರವರು ? ಯಾವ ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ? ಇಡೀ ಜಗತ್ತಿಗೆ ಹೀರೋ ಆಗೋದು ಅಂದ್ರೆ ಆ ನಾಯಕ ಹೆಂಗಿರಬಹುದು? ಆ ನಟನ ಹಿನ್ನಲೆ ಏನು ? ಹೀಗೆ ಒಂದಿಷ್ಟು ಪ್ರಶ್ನೆಗಳು ಉದ್ಭವಿಸೋದು ಸಹಜ. ಈ ಎಲ್ಲಾ ಪ್ರಶ್ನೆಗೆ ಉತ್ತರ ಕೊಡಬೇಕು ಅಂದರೆ ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಸರನ್ನು ಹೇಳಲೆಬೇಕು. ಹಾಗೆಯೇ, ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಲೇಬೇಕು‌.

‘ವಿಕ್ರಾಂತ್ ರೋಣ ‘ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ.
ಅನುಪ್ ಭಂಡಾರಿ ನಿರ್ದೇಶನದ- ಜಾಕ್ ಮಂಜು ನಿರ್ಮಾಣದ ಈ‌ ಚಿತ್ರಕ್ಕಾಗಿ ಪ್ಯಾನ್ ಇಂಡಿಯಾನೇ ಎದುರು ನೋಡ್ತಿದೆ. 3ಡಿ ಟೆಕ್ನಾಲಜಿಯಲ್ಲಿ ಅದ್ದೂರಿಯಾಗಿ ತಯ್ಯಾರಾಗಿರೋ ವಿಕ್ರಾಂತ್ ರೋಣನಿಗಾಗಿ ಬಾದ್ ಷಾ ಫ್ಯಾನ್ಸ್ ಮಾತ್ರವಲ್ಲ ಬೆಳ್ಳಿತೆರೆಯೂ ಕೂತೂಹಲ ವ್ಯಕ್ತಪಡಿಸುತ್ತಿದೆ. ಹೀಗಾಗಿ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
2022 ಫೆಬ್ರವರಿ 24 ರಂದು ವಿಕ್ರಾಂತ್ ರೋಣ ಚಿತ್ರ ಬಹುಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗ್ತಿದೆ. ಈ ಬಡಾ ಖಬರ್ ನ ರಿವೀಲ್ ಮಾಡಿದ ಫಿಲ್ಮ್ ಟೀಮ್
ಇಡೀ ಜಗತ್ತಿಗೆ ಹೊಸ ಹೀರೋ ಸಿಗ್ತಾನೆ ಫೆಬ್ರವರಿ 24ಕ್ಕೆ ಎಂದು ಸಪ್ರೈಸ್ ಕೊಟ್ಟಿದೆ. ಆ ಹೊಸ ಹೀರೋ ಯಾರು ? ಈ ಕ್ಯೂರಿಯಾಸಿಟಿಗೆ ಉತ್ತರ ‘ವಿಕ್ರಾಂತ್ ರೋಣ’ ಪಾತ್ರಧಾರಿ ಕಿಚ್ಚ ಸುದೀಪ್.

ವಾಟ್?, ಕಿಚ್ಚ ಹೊಸ ಹೀರೋ ಹೆಂಗ್ ಆಗ್ತಾರ್ರೀ. ಅವರು ಪ್ಯಾನ್ ಇಂಡಿಯಾ ಸ್ಟಾರ್. ಸುದೀಪ್ ಅಂದ್ರೆ ಇಡೀ‌ ಜಗತ್ತಿಗೆ ಗೊತ್ತು. ಹೀಗಂತ ಕಿಚ್ಚನ ಫ್ಯಾನ್ಸ್ ಎದ್ದು ನಿಲ್ತಾರೆ. ಅಪ್ ಕೋರ್ಸ್ ಎದ್ದು ನಿಲ್ಲಬೇಕು.
ನಮಗೂ ಗೊತ್ತು ಕಿಚ್ಚ ಸುದೀಪ್ ಅಂದ್ರೆ ಇಡೀ ಜಗತ್ತಿಗೆ ಗೊತ್ತಿದೆ ಅಂತ.ಇನ್ನೂ,
ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್ ಅಂತ ಬೌಂಡರಿ ಹಾಕಿಕೊಳ್ಳದೇ ಎಲ್ಲಾ ಇಂಡಸ್ಟ್ರಿಗೂ ಲಗ್ಗೆ ಇಟ್ಟು ಬ್ಯಾಂಡ್ ಬಜಾಯಿಸಿರೋ ಕಿಚ್ಚ ಎಲ್ಲಾ ರಂಗದವರಿಗೂ ಮಾಣಿಕ್ಯನೇ ಆಗಿದ್ದಾರೆ.

ಈಗ ‘ವಿಕ್ರಾಂತ್ ರೋಣ’ ಸಿನಿಮಾದ ನಾಯಕನಾಗಿ ಫೆಬ್ರವರಿ 24 ರಂದು ಹೊಸ ಪಾತ್ರದ ಮೂಲಕ ಇಡೀ ಜಗತ್ತಿಗೆ ನಯಾ ರೂಪದಲ್ಲಿ ಪರಿಚಯವಾಗ್ತಿದ್ದಾರೆ.
ಫ್ಯಾಂಟಸಿ- ಆಕ್ಷನ್- ಅಡ್ವೆಂಚರ್‌- ಥ್ರಿಲ್ಲರ್ ಕಥಾಹಂದರವುಳ್ಳ ‘ ವಿಕ್ರಾಂತ್ ರೋಣ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಿಚ್ಚು ಹಚ್ಚಲಿ
ದ್ದಾರೆ. ಬಚ್ಚನ್ ಗೆ ಜಾಕ್ ಲೀನ್ ಜೋಡಿಯಾಗಿದ್ದು ಬಿಟೌನ್ ಗಲ್ಲಿಯಲ್ಲೂ ವಿಕ್ರಾಂತ್ ರೋಣ ಮೇಲೆ ಕೂತೂಹಲ ಮೂಡಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಡಾ.ವಿಷ್ಣುವರ್ಧನ ಕೋಚಿಂಗ್ ಅಕಾಡೆಮಿ ಸ್ಥಾಪನೆ; ಡಾ.ವಿಷ್ಣು ಸೇನಾ ಸಮಿತಿ ನಿರ್ಧಾರ

ವೀರಕಪುತ್ರ ಶ್ರೀನಿವಾಸ್ ಅಂದಾಕ್ಷಣ ಥಟ್ಟನೆ ನೆನಪಾಗೋದೆ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಹೌದು, ವಿಷ್ಣುವರ್ಧನ್ ಅವರ ಕುರಿತ ಅನೇಕ ಉಪಯುಕ್ತ ಕೆಲಸ ಮಾಡಿದವರು. ದಾದಾ ಅಭಿಮಾನಿಗಳನ್ನು ತಮ್ಮೊಟ್ಟಿಗೆ ಕಟ್ಟಿಕೊಂಡು ಹಲವು ವರ್ಷಗಳಿಂದಲೂ ಜನಪರ ಕೆಲಸ ಮಾಡಿದವರು. ಈಗಲೂ ಅದೇ ಕಾಯಕದಲ್ಲಿದ್ದಾರೆ. ಇನ್ನೂ ಒಂದಷ್ಟು ಹೊಸ ಹೆಜ್ಜೆ ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಹಲವು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ. ವಿಷ್ಣುವರ್ಧನ್ ಹೆಸರಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋ ಡೀಟೆಲ್ಸ್ ಇಲ್ಲಿದೆ…

ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದ ಡಾ.ವಿಷ್ಣು ಸೇನಾ ಸಮಿತಿಯ ಸಭೆ ಇತ್ತೀಚೆಗೆ ನಡೆಯಿತು. ಕಳೆದ ಐದು ವರ್ಷದಿಂದ ಪ್ರತಿವರ್ಷವೂ ಸಭೆ ಸೇರಿ ಹಿಂದಿನ ಸಾಲಿನ ಚಟುವಟಿಕೆಗಳ ಪರಾಮರ್ಶೆ ಮತ್ತು ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತವಾಗುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ಹಲವು ಯೋಜನೆಗಳನ್ನು ಮುಂದಿನ ವರ್ಷದಲ್ಲಿ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಸಮಿತಿ ಬಂದಿದೆ.

ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್/ಕೆಎಎಸ್ ತರಬೇತಿ ಒದಗಿಸುವ ಸಲುವಾಗಿ ಡಾ.ವಿಷ್ಣುವರ್ಧನ ಕೋಚಿಂಗ್ ಅಕಾಡೆಮಿ ಸ್ಥಾಪಿಸುವುದು. ಡಾ.ವಿಷ್ಣುವರ್ಧನ ಅವರ ಬದುಕು ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಡೆಗೆ ವಿಷ್ಣುವರ್ಧನ ಎಂಬ ಯೋಜನೆ ರೂಪಿಸುವುದು. ಆ ಯೋಜನೆಯಂತೆ ರಾಜ್ಯದ ಎಲ್ಲಾ ಪ್ರಾಥಮಿಕ , ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಾ.ವಿಷ್ಣುವರ್ಧನ ಬದುಕು ಸಾಧನೆಗಳ ಕುರಿತಾದ ಕಿರುಹೊತ್ತಿಗೆಯನ್ನು ವಿತರಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದಾದರೂ ಪ್ರಮುಖ ರಸ್ತೆಗೆ ಅಥವಾ ಕಲಾಭವನಕ್ಕೆ ಡಾ.ವಿಷ್ಣುವರ್ಧನ ಅವರ ಹೆಸರನ್ನು ಇಡಬೇಕೆಂದು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುವುದು.
ಡಾ.ವಿಷ್ಣು ಕುಟುಂಬದ ಜೊತೆಗಿನ ಬಿನ್ನಾಭಿಪ್ರಾಯ ಮರೆತು ಅವರ ಎಲ್ಲಾ ವಿಚಾರ ಮತ್ತು ಯೋಜನೆಗಳಿಗೆ ಜೊತೆಯಾಗಿ ನಿಲ್ಲುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.


ಸಭೆಯಲ್ಲಿ ಆನಂದ್ ರಾಚ್, ಮಲ್ಲಿಕಾರ್ಜುನ್, ಯದುನಂದನ್, ರಘು ಎಸ್, ವಿಷ್ಣುಪ್ರಕಾಶ್, ರಾಧಾ ಗಂಗಾಧರ್, ಕೆ.ವಿನಯ್ ಸೇರಿದಂತೆ ವಿಷ್ಣು ಅಭಿಮಾನಿಗಳು ಇದ್ದರು.

Categories
ಸಿನಿ ಸುದ್ದಿ

ಆರು ಭಾಷೆಯಲ್ಲಿ ಮಡ್ಡಿ; ಡಿಸೆಂಬರ್ 10 ರಿಲೀಸ್

ಡಾ. ಪ್ರಗ್ಬಲ್ ನಿರ್ದೇಶನದ ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ…

ಭಾರತದಲ್ಲಿ ಇದೇ ಮೊದಲ ಬಾರಿಗೆ ಮಡ್ ರೇಸ್ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ.
ಮಲೆಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ ಡಿಸೆಂಬರ್ 10ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

ಮ್ಯಾನೇಜ್ಮೆಂಟ್ ನಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಡಾ. ಪ್ರಗ್ಬಲ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ನನ್ನದು ಇದು ಮೊದಲ ನಿರ್ದೇಶನದ ಚಿತ್ರ. ಮಡ್ ರೇಸ್ ಕಥೆಯಿಟ್ಟುಕೊಂಡು ಭಾರತದಲ್ಲಿ ತಯಾರಾಗಿರುವ ಚೊಚ್ಚಲ ಚಿತ್ರವಿದು. ಈ ಚಿತ್ರ‌ ನಿರ್ಮಾಣಕ್ಕೆ ಐದು ವರ್ಷಗಳ ಸಮಯ ಹಿಡಿದಿದೆ. ಒಂದು ವರ್ಷ ಲೊಕೇಶನ್ ಹುಡುಕಾಟ ಮಾಡಿ, ಕೊನೆಗೆ ತಮಿಳುನಾಡು ಹಾಗೂ ‌ಕೇರಳ ಗಡಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ನಿರ್ಮಾಣವಾಗಿರುವ ಸಿನಿಮಾ ಇದು. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ರವಿ ಅವರು ಬರೀ ಸಂಗೀತಕಷ್ಚೇ ಸೀಮಿತವಾಗದೆ, ನನ್ನ ಬೆನ್ನ ಹಿಂದೆ ನಿಂತು, ನನಗೆ ಮಾರ್ಗದರ್ಶನ ಮಾಡಿದ್ದಾರೆ. ನೂತನ ಕಲಾವಿದರ ಹಾಗೂ ನುರಿತ ತಂತ್ರಜ್ಞರ ಸಮಾಗಮದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ಚಿತ್ರ ನಿರ್ದೇಶಕ ಡಾ.ಪ್ರಗ್ಬಲ್.

ನನಗೆ ಛಾಯಾಗ್ರಹಕ ರತೀಶ್ ಅವರು ಫೋನ್ ಮಾಡಿ ಈ‌ ರೀತಿಯ ಚಿತ್ರವೊಂದು ತಯಾರಾಗುತ್ತಿದೆ. ನೀವೇ ಸಂಗೀತ ಮಾಡಬೇಕೆಂದು ಕೇಳಿದರು. ಸ್ವಲ್ಪ ಬ್ಯುಸಿ ಇದ್ದುದರಿಂದ ನಾನು ಏನು ಹೇಳಿರಲಿಲ್ಲ. ಕೆಲವು ದಿನಗಳ ನಂತರ ನಾನು ಚಿತ್ರೀಕರಣ ನಡೆಯುವ ಸ್ಥಳಕ್ಕೆ ತೆರಳಿದೆ. ಅಲ್ಲಿ ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕಾರ್ಯನಿರ್ವಹಿಸುತ್ತಿದ್ದ ಶೈಲಿ ನೋಡಿ ಬೆರಗಾದೆ. ಅಬ್ಬಾ ಲಕ್ಷಾಂತರ ಮೌಲ್ಯದ ವಾಹನಗಳು ನನ್ನ ಕಣ್ಣ ಮುಂದೆ ಪ್ರಪಾತಕ್ಕೆ ಬೀಳುತಿತ್ತು. ಚಿಕ್ಕ ಬಜೆಟ್ ನ ಸಿನಿಮಾ ಎಂದು ಆರಂಭವಾಗಿ, ಚಿತ್ರೀಕರಣ ಸಾಗುತಾ ಅಪಾರವೆಚ್ಚದ ಅದ್ದೂರಿ ಸಿನಿಮಾವಾಗಿ “ಮಡ್ಡಿ” ನಿರ್ಮಾಣವಾಗಿದೆ. ನಾನು ಈ ಚಿತ್ರಕ್ಕೆ ಸಂಗೀತ ನೀಡಲು ಸುಮಾರು ಎರಡುವರ್ಷಗಳ ಅವಧಿ ಹಿಡಿಸಿದೆ.


ಸಂಗೀತ ನಿರ್ದೇಶಕ ಹಾಗೂ ಸಂಕಲನಕಾರ ಗಂಡ – ಹೆಂಡತಿ ಇದ್ದ ಹಾಗೆ. ಅವರಿಬ್ಬರ ನಡುವಿನ ಹೊಂದಾಣಿಕೆ ಮುಖ್ಯ. ಇದು ಮೂರು ರಾಜ್ಯಗಳ ಸಿನಿಮಾ ಎನ್ನಬಹುದು ಏಕೆಂದರೆ ನಾನು ಕರ್ನಾಟಕದವನು, ನಿರ್ದೇಶಕರು ಕೇರಳದವರು ಹಾಗೂ ಸಂಕಲನಕಾರರು ತಮಿಳುನಾಡಿನವರು. ಒಟ್ಟಿನಲ್ಲಿ “ಮಡ್ಡಿ” ಉತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ಟ್ರೇಲರ್ ಇರುವ ಹಾಗೆ ಇಡೀ ಚಿತ್ರ ಕೂಡ ಹಾಗೆ ಇರುತ್ತದೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ‌ಎಂದರು ಸಂಗೀತ ನಿರ್ದೇಶಕ ರವಿ ಬಸ್ರೂರ್.

ಕೇರಳ ಹಾಗೂ ತಮಿಳುನಾಡು ಹೊರತುಪಡಿಸಿ ದೇಶಾದ್ಯಂತ. ಸುಮಾರು 400 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ನಿರ್ದೇಶಕರು ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾರೆ ಒಳ್ಳೆಯದಾಗಲಿ ಎಂದರು ವಿತರಕ ಭಾಷಾ.

ಪ್ರೇಮಕೃಷ್ಣ ದಾಸ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರಗ್ಬಲ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ರನ್ ರವಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಯವನ್ ಕೃಷ್ಣ, ರಿಧಾನ್ ಕೃಷ್ಣ, ಅಮಿತ್ ಶಿವದಾಸ್, ಅನುಶಾ ಸುರೇಶ್, ರೆಂಜಿ ಪಣಿಕರ್, ಹರೀಶ್ ಪೆರಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹೀರೋ ಆಗಿ ಬಂದರು ಡಾನ್ ಜೈರಾಜ್ ಪುತ್ರ ಅಜಿತ್ ಜೈರಾಜ್- ಡಿಸೆಂಬರ್ ೧೦ ಕ್ಕೆ ತೆರೆ ಮೇಲೆ ರೈಮ್ಸ್

ಆರು ವರ್ಷ ಹತ್ತಾರು ಸಿನಿಮಾ, ಆದರೆ ಇದೇ ಮೊದಲು ನಾನೀಗ ನಿಮ್ಮ‌ಮುಂದೆ ಹೀರೋ….ಪ್ರೇಕ್ಷಕರಲ್ಲಿ ಆಶೀರ್ವಾದ ಬಯಸಿ ಹೀಗೆ ಹೇಳುವಾಗ ಯುವ ನಟ ಅಜಿತ್ ಜೈರಾಜ್ ಕೊಂಚ ಭಾವುಕರಾದರು. ಅದು ಸಹಜವೂ ಹೌದು. ಆರು ವರ್ಷದ ಪಯಣದಲ್ಲಿ ಸಿಹಿಗಿಂತ ಕಹಿ ಅನುಭವವನ್ನೇ ಹೆಚ್ಚು ಹೊತ್ತುಕೊಂಡು ಕೊನೆಗೊ ಒಂದು ಸಾಹಸದೊಂದಿಗೆ ಹೀರೋ ಆದ ಕಷ್ಟ ಸಾಹಸವನ್ನು ನೆನಪಿಸಿಕೊಂಡಾಗ ಎಂತಹವರಿಗೂ ಭಾವುಕತೆ ತುಂಬಿಕೊಳ್ಳುವುದು ಅಷ್ಟೇ ಸಹಜ. ನಟ ಅಜಿತ್ ಜಯರಾಜ್ ಕೂಡ ಪ್ರೇಕ್ಷಕರಾದ ನಿಮ್ಮಗಳ ಆಶೀರ್ವಾದ ಬಯಸಿ, ಭಾವುಕರಾಗಿದ್ದೆಲ್ಲಿ ಅಂತಹದ್ದೇನು ಅಚ್ಚರಿಯೇ ಇಲ್ಲ. ಅಂದ ಹಾಗೆ ಅವರು ಈ ಭಾವುಕ ಮಾತುಗಳೊಂದಿಗೆ ತಮ್ಮ ಸಿನಿ ಪಯಣದ ಹೊಸ ಹಾದಿಯನ್ನು ಬಿಚ್ಚಿಟ್ಟಿದ್ದು ‘ ರೈಮ್ಸ್ ‘ ಚಿತ್ರದ ಕುರಿತು‌.

ಡಾನ್ ಜೈರಾಜ್ ಪುತ್ರ ಅಜಿತ್ ಜೈರಾಜ್ ಅವರು ನಾಯಕನಾಗಿ ಆಭಿನಯಿಸಿರೋ ಚೊಚ್ಚಲ ಚಿತ್ರ ‘ ರೈಮ್ಸ್ ‘ಡಿಸೆಂಬರ್ ೧೦ ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಸಿಂಗಲ್ ಸ್ಕ್ರೀನ್ ಗೆ ಆದ್ಯತೆ ನೀಡದೆ ಪರಿಸ್ಥಿತಿಗೆ ತಕ್ಕಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ ಈ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಎಲ್ಲವೂ ತಂದುಕೊಂಡಂತೆಯೇ ಆಗಿದ್ದರೆ, ಇಷ್ಟೊತ್ತಿಗೆ ಈ ಚಿತ್ರ ರಿಲೀಸ್ ಆಗಿ ಹಳೇ ಮಾತೇ ಆಗುತ್ತಿತ್ತೆನೋ, ಆದರೆ ಕೊರೋನಾ ಕಾರಣಕ್ಕೆ ಚಿತ್ರ ತಂಡ. ಎರಡು ವರ್ಷಗಳ ನಂತರ ತೆರೆ ಮೇಲೆ ರೈಮ್ಸ್ ಕೇಳಿಸಲು ಸಜ್ಜಾಗಿದೆ. ರಿಲೀಸ್ ಸಿದ್ದತೆ ಜತೆಗೆ ತಮ್ಮ ಸಿನಿಮಾವನ್ನು ಪ್ರೇಕ್ಷಕರು ಯಾಕೆ ನೋಡಬೇಕು ಅಂತ ಹೇಳಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದ ಸಂದರ್ಭ ದಲ್ಲಿ‌ ಜನಾಶಯ ಪ್ರಭಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ನಟ ಅಜಿತ್ ಜಯರಾಜ್ ತಮ್ಮ ಸಿನಿ‌ಬದುಕಿನ‌ ಕಥೆ ಬಿಚ್ಚಿಟ್ಟರು.

‘ ಸರ್ ನಾನೀಗ ಸಿನಿಮಾ ರಂಗಕ್ಕೆ ಬಂದು ಇಲ್ಲಿಗೆ ಆರು ವರ್ಷ. ಒಬ್ಬ ನಟನ ಪಾಲಿಗೆ ಇದು ದೊಡ್ಡ ಹಾದಿ. ಈ‌ಹಾದಿಯಲ್ಲೀಗ ಹತ್ತಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇನೆ. ಅದರೆ ಅವೆಲ್ಲವೂ ಸಣ್ಣ ಸಣ್ಣ ಪಾತ್ರಗಳು. ಅಲ್ಲಿಂದೀಗ ಹೀರೋ ಆಗಿ ಇದೇ ಮೊದಲು ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ‌. ಹೀರೊ ಆಗಿ ಮೊದಲ ಸಿನಿಮಾವಾದರೂ, ಆರು ವರ್ಷಗಳ ನಟನೆಯ ಅನುಭವದ ಮೂಲಕವೇ ರೈಮ್ಸ್ ನಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ನಟನೆ ಹೇಗಿದೆ ಎನ್ನುವುದಕದಕ್ಕಿಂತ ಸಿನಿಮಾದ ಕಥೆ ಇಲ್ಲಿ ಹೀರೋ. ನಾನು ನಾಯಕನಾಗಿ ನಟಿಸಲು ಮನಸು‌ಮಾಡಿದ್ದೇ ಇದೇ ಕಾರಣಕ್ಕೆ. ಕನ್ನಡಕ್ಕೆ ಈ‌ಕಥೆ ತೀರಾ ಹೊಸದು‌ . ನಾರ್ಮಲ್ ಪ್ಯಾಟ್ರನ್ ದಾಟಿ, ಹೊಸ ರೀತಿಯ ಅನುಭವವನ್ನು ಕಟ್ಟಿಕೊಡಲಿದೆ ಈ‌ ಸಿನಿಮಾ.‌ಅದೇ ಕಾರಣಕ್ಕೆ ಈ ಸಿನಿಮಾ ಗೆಲ್ಲುತ್ತೆ ಎನ್ನುವ ದೊಡ್ಡ ವಿಶ್ವಾಸವೂ ನನಗಿದೆ ಎಂದರು ಅಜಿತ್ ಜಯರಾಜ್.

ಅಲ್ಲಿಂದ ಅಜಿತ್ ಅವರ ಮಾತು ಚಿತ್ರದಲ್ಲಿನ ತಮ್ಮ ಪಾತ್ರದ ಕಡೆ ಹೊರಳಿತು.’ ನಾನಿಲ್ಲಿ ಒಬ್ಬ ಇನ್ವೇಸ್ಟಿಗೇಟಿವ್ ಪೊಲೀಸ್ ಆಫೀಸರ್. ಕೊಲೆ ಪ್ರಕರಣಗಳನ್ನು ಭೇದಿಸಲು ಆತ ಮುಂದಾಗುತ್ತಾನೆ. ಇಲ್ಲಿ ತನಿಖೆಯ ರೀತಿಯೇ ವಿಭಿನ್ನವಾಗಿದೆ‌. ನಾರ್ಮಲ್ ರೀತಿಯ ತನಿಖೆಯ ಶೈಲಿಯೇ ಇಲ್ಲಿ ಕಾಣದು. ಕೊಲೆಗಾರನಿಗೂ ಒಂದು ರೈಮ್ಸ್ ಗೂ ಇರುವ ನಂಟಿನ ಮೇಲೆ ಕೊಲೆ ಪ್ರಕರಣಗಳ ಹಿಂದಿನ ವ್ಯಕ್ತಿಯನ್ನು ಹಿಡಿಯಲಾಗುತ್ತದೆ‌ . ಈ ಪಾತ್ರಕ್ಕೆ ನಾನು‌ ಒಪ್ಪಿಕೊಂಡಾಗ ಪೊಲೀಸ್ ಕೆಲಸದಲ್ಲಿರುವ ನನ್ನದೇ ಕೆಲವು ಗೆಳೆಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.‌ಹಾಗೆಯೇ ತನಿಖೆಯ ವಿಧಾನಗಳ ಬಗ್ಗೆ‌ಸ್ಟಡಿಮಾಡಿದ್ದೇನೆ. ಹಾಗೆಯೇ ಒಂದಷ್ಟು ರಿಹರ್ಸಲ್ ಮೂಲಕವೇ ಈ‌ಪಾತ್ರ ನಿಭಾಯಿಸಿರುವೆ. ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ನಂಬಿಕೆ‌ನನಗಿದೆ ಎನ್ನುತ್ತಾರೆ ನಟ ಅಜಿತ್‌ ಜೈರಾಜ್.

ಜ್ಞಾನಶೇಖರ್, ರವಿಕುಮಾರ್ ಹಾಗೂ ರಮೇಶ್ ನಿರ್ಮಾಣದ ಈ ಚಿತ್ರಕ್ಕೆ ಯುವ ಪ್ರತಿಭೆ ಅಜಿತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಶುಂಭ ಪುಂಜಾ, ಸುಷ್ಮಾ ನಾಯರ್ ಇಲ್ಲಿ ನಾಯಕಿಯರು‌. ಹಾಗೆಯೇ ಹೊಸಬರ ದೊಡ್ಡ ತಂಡವೇ ಈ ಸಿನಿಮಾ ದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ‌. ಕ್ರೈಮ್ ಥ್ರಿಲ್ಲರ್ ಕಥಾ ಹಂದರದ ಈ ಚಿತ್ರವು ಈಗಾಗಲೇ ಟೀಸರ್, ಟ್ರೇಲರ್ ಹಾಗೂ ವಿಭಿನ್ನ ಶೈಲಿಯ ಪೋಸ್ಟರ್‌ಮೂಲಕವೂ ಕುತೂಹಲಮೂಡಿಸಿದೆ. ಇನ್ನೊಂದು ವಿಶೇಷ ಅಂದ್ರೆ ಕನ್ನಡದಲ್ಲಿ ಯೇ ಇದೇ ಮೊದಲು ಟ್ರೇಲರ್ ಅನ್ನು ತ್ರಿ ಡಿ ಮೂಲಕಲಾಂಚ್ ಮಾಡಿದೆ. ಹೊಸಬರ ಈ ಪ್ರಯತ್ನ ಫಲಿಸಬೇಕಾದರೆ ಪ್ರೇಕ್ಷಕರ ಬೆಂಬಲ ಅಗತ್ಯವೇ ಹೌದು.

Categories
ಸಿನಿ ಸುದ್ದಿ

ನಾಡಿನ ಹೆಸರಾಂತ ಪತ್ರಿಕೆಯೊಂದರಲ್ಲಿ ಕ್ರೈಮ್ ರಿಪೋರ್ಟರ್ ಅಗಿ ಕೆಲಸಕ್ಕೆ ಸೇರಿದ ನಟಿ ಶುಭ ಪುಂಜಾ !

ಕನ್ನಡದ ಗ್ಲಾಮರಸ್ ನಟಿ ಶುಭ ಪೂಂಜಾ ಬಿಗ್ ಬಾಸ್ ಗೆ ಹೋಗಿ ಬಂದ ನಂತರ ಹೆಚ್ಚು ಕಡಿಮೆ ಮದುವೆ ಬ್ಯುಸಿ ಯಲ್ಲಿರುವುದು ನಿಮಗೆ ತಿಳಿದಿದ್ದೇ. ಯಾಕಂದ್ರೆ ಅವರು ಈ ಮಾತನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಹೇಳಿಕೊಂಡಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಹೋದ ಮೇಲೆ ನಿಮಗಿರುವ ಮೊದಲ ಕೆಲಸ ಏನು ಅಂದಾಗ ಮದುವೆ ಅಂತ ಹೇಳಿದ್ದರು‌ ‌. ಹಾಗಾದ್ರೆ ಅವರು ಅಲ್ಲಿ ಹೇಳಿದಂತೆ ಮದುವೆ ಆದ್ರಾ?

ಸದ್ಯಕ್ಕೆ ಇಲ್ಲ, ಆದರೆ ಇಷ್ಟರಲ್ಲಿಯೇ ಅವರು ಗೆಳೆಯ ಸುಮಂತ್ ಕೈ ಹಿಡಿಯುವುದು ಗ್ಯಾರಂಟಿ‌ ಆಗಿದೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣವೇ ಈ ಜೋಡಿ ಗೋವಾ ಟ್ರಿಪ್ ಮುಗಿಸಿಕೊಂಡು‌ಬಂದಿದೆ. ಈಗ ಮದುವೆ ಸಿದ್ದತೆ ನಡೆದಿದೆ. ಹೊಸ ವರ್ಷದಲ್ಲಿಯೇ ಮದುವೆ ಎನ್ನುವ ಸುದ್ದಿಯೂ ಇದೆ.ಈ ನಡುವೆಯೇ ಅವರೀಗ ಮೂರ್ನಾಲ್ಕು‌ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ‌. ಶ್ರೀನಿ ನಿರ್ದೇಶನದ’ ಅಂಬುಜ’ ಚಿತ್ರದ ಚಿತ್ರೀಕರಣ ಶುರುವಾಗಿದೆ. ಅದರ ಜತೆಗೆಯೇ ‘ಬೀರ’ ಸೇರಿದಂತೆ ಇನ್ನೆರೆಡು ಪ್ರಾಜೆಕ್ಟ್ ಗು ಸಹಿ ಹಾಕಿದ್ದಾರಂತೆ. ಅದರ ಜತೆಗೆಯೇ ಈಗ ನಾಡಿನ ಹೆಸರಾಂತ ಪತ್ರಿಕೆಯೊಂದರಲ್ಲಿ ಕ್ರೈಮ್ ರಿಪೊರ್ಟರ್ ಆಗಿ ಕೆಲಸಕ್ಕೂ ಸೇರಿಕೊಂಡಿದ್ದಾರೆ.

ಅರೆ, ಎಲ್ಲಾ ಬಿಟ್ಟು ಇದ್ಯಾಕೆ ರಿಪೊರ್ಟರ್ ಕೆಲಸಕ್ಕೆ ಸೇರಿದರು ಅಂತ ನಿಮಗು ಅಚ್ಚರಿ ಆಗಬಹುದು. ಆದರೆ ಇದು ರಿಯಲ್ ಅಲ್ಲ, ರೀಲ್ ಕಥೆ‌. ಅಂದ ಹಾಗೆ, ನಟಿ ಶುಭಾ ಪೂಂಜಾ ಕ್ರೈಮ್ ರಿಪೊರ್ಟರ್ ಆಗಿರೋದು ರೈಮ್ಸ್ ಹೆಸರಿನ ಚಿತ್ರದಲ್ಲಿ‌ . ಇದು ಯುವ ಪ್ರತಿಭೆ ಅಜಿತ್ ಕುಮಾರ್ ನಿರ್ದೇಶನದ ಚಿತ್ರ. ಡಾನ್ ಜೈರಾಜ್ ಪುತ್ರ ಅಜಿತ್ ಜೈರಾಜ್ ಇದರ ಹೀರೋ. ಡಿಸೆಂಬರ್.10ರಂದು ಸಿನಿಮಾ ತೆರೆಗೆ ಬರಲಿದೆ. ಪ್ರಚಾರದ ಭಾಗವಾಗಿ ಮೊನ್ನೆಯಷ್ಟೇ ಈ ಚಿತ್ರದ ಟ್ರೇಲರ್ ಲಾಂಚ್ ಆಯಿತು. ಅಲ್ಲಿ ಮಾತಿಗೆ ಸಿಕ್ಕ ನಟಿ ಶುಭಾ ಪೂಂಜಾ ತಾವು ಕ್ರೈಮ್ ರಿಪೊರ್ಟರ್ ಆದ ಕಥೆ ಬಿಚ್ಚಿಟ್ಟರು‌.

‘ಈ ಸಿನಿಮಾದಲ್ಲಿ ನನ್ನದು ಜರ್ನಲಿಸ್ಟ್ ಪಾತ್ರ. ಅದನ್ನು ನೀವು ಮಾಡಬೇಕು, ಅದಕ್ಕಾಗಿ ತಯಾರಿ ಮಾಡಿಕೊಳ್ಳಿ ಎಂದು ನಿರ್ದೇಶಕರು ಹೇಳಿದರು. ಆದರೆ, ನನಗೆ ತುಂಬ ಜನ ಜರ್ನಲಿಸ್ಟ್ ಫ್ರೆಂಡ್ಸ್ ಇದ್ದಾರೆ. ಹಾಗಾಗಿ, ಪತ್ರಕರ್ತೆ ಪಾತ್ರಕ್ಕೆ ಬೇಕಾದ ಬೇಸಿಕ್ ತಯಾರಿಗಳು ನನಗೆ ಗೊತ್ತಿದೆ. ಆದರೆ ಶೂಟಿಂಗ್ ಮಾಡುವಾಗ ಸ್ವಲ್ಪ ಕಷ್ಟ ಆಯ್ತು. ಕೀಬೊರ್ಡ್‌ ಮೇಲೆ ಟೈಪ್ ಮಾಡಲು ಗೊತ್ತಾಗುತ್ತಿರಲಿಲ್ಲ. ಅಲ್ಲದೇ ಪತ್ರಕರ್ತೆಯಾಗಿ ಸೀರಿಯಸ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಅದು ಸ್ವಲ್ಪ ಕಷ್ಟ ಎನಿಸಿತು. ನನಗೆ ಎಲ್ಲಿಯೂ ನಗುವುದಕ್ಕೆ ಬಿಟ್ಟಿಲ್ಲ ‘ ಎನ್ನುತ್ತಾ ಅಲ್ಲಿ ನಗದೆ ಇದಿದ್ದನ್ನು ಪತ್ರಕರ್ತರ ಮುಂದೆ ಮನಸು ಬಿಚ್ಚಿ ನಕ್ಕರು.

ಇನ್ನು ನಟಿ ಶುಭಾ ಅವರಿಗೆ ‘ರೈಮ್ಸ್’ ಚಿತ್ರದ ಅವಕಾಶ ಸಿಕ್ಕಿದ್ದು ಚಿತ್ರದ ನಾಯಕ ನಟ ಅಜಿತ್ ಜೈರಾಜ್ ಮೂಲಕವಂತೆ. ‘ ರೈಮ್ಸ್ ಒಂದು ವಿಶಿಷ್ಟವಾದ ಚಿತ್ರ‌‌ . ನನ್ನ ಕೆರಿಯರ್ ನಲ್ಲಿ ಕ್ರೈಮ್ ರಿಪೊರ್ಟರ್ ಪಾತ್ರವನ್ನೇ ಮಾಡಿರಲಿಲ್ಲ‌. ಫಸ್ಟ್ ಇಂತಹ ಪಾತ್ರಕ್ಕೆ ಬಣ್ಣ ಹಚ್ವಿದ್ದೇನೆ.ಹಾಗೆ ಯೇ‌ ಇದೊಂದು ವಿಭಿನ್ನವಾದ ಕಥಾ ಹಂದರದ ಚಿತ್ರ‌. ಕ್ರೈಮ್ ಥ್ರಿಲ್ಲರ್ ಕಥೆ. ನಿರ್ದೇಶಕರು ತುಂಬಾ ಅದ್ಬುತವಾಗಿಯೇ ತೆರೆಗೆ ತಂದಿದ್ದಾರೆ.ನಂಗೂ ಈ ಸಿನಿಮಾ ದೊಡ್ಡ ಕುತೂಹಲಹುಟ್ಟಿಸಿದೆ. ಜನರಿಗೆ ಇದು ಖಂಡಿತಾ ಇಷ್ಟವಾಗುತ್ತೆ’ ಎನ್ನುವ ವಿಶ್ವಾಸದ ಮಾತು ಶುಭಾ ಪೂಂಜಾ‌ ಅವರದು.

ರಿಯಲ್ ಐ ಆಮ್ ಎಂಜಾಯ್ಡ್. ಹಾಗೆಯೇ ಅಲ್ಲಿ ಅನೇಕ ಕಾರಣಕ್ಕೆ ಭಾವುಕಳಾಗಿದ್ದೇನೆ. ಹಾಗೆಯೇ ಆ ಮನೆ ಅನೇಕ ಬಗೆಯ ಪಾಠ ಕಲಿಸಿದೆ‌. ನಾನು ಹೊರಗಡೆ ಇದ್ದಾಗ ಬಿಗ್ ಬಾಸ್ ಬಗ್ಗೆ ಅಂದುಕೊಂಡಿದ್ದಕ್ಕೂ, ಅಲ್ಲಿಗೆ ನಾನು ಕಂಟೆಸ್ಟೆಡ್ ಆಗಿ ಹೋದ ಮೇಲೆ ಆದ ಅನುಭಕ್ಕೂ ಅಜಗಜಾಂತರ ವ್ಯತ್ಯಾಸ. ಹೀಗೆಲ್ಲ ಇರುತ್ತಾ ಅನಿಸಿತು. ಒಳ್ಳೆಯ ಸ್ನೇಹಿತರು ಸಿಕ್ಕರು. ಕೆಲವರ ಅವಗುಣಗಳು ಅನಾವರಣವಾದವು. ಎಲ್ಲಕ್ಕಿಂತ ಮುಖ್ಯವಾಗಿ ನಾನೇನು ಅಂತ ರಾಜ್ಯದ ಜನತೆಗೆ ತೋರಿಸಿಕೊಳ್ಳುವುದಕ್ಕೂ ಸಾಧ್ಯವಾಯಿತು. ಇದೆಲ್ಲ ನಾನು ಅಲ್ಲಿಗೆ ಹೊಗಿಲ್ಲದಿದ್ದರೆ ಆಗುತ್ತಿರಲಿಲ್ಲ. ಅದರ ಜತೆಗೆ ನಾನೊಬ್ಬ ನಟಿಯಾಗಿ ಪಡೆದುಕೊಂಡಿದ್ದ ಪ್ಯಾನ್ಸ್ ಫಾಲೋವರ್ಸ್ ಸಂಖ್ಯೆ ಕೂಡ ಅಧಿಕವಾಗಿದೆ. ಅದು‌ಮೂರು ಪಟ್ಟು ಜಾಸ್ತಿ ಅಂದ್ರೆ ನೀವು ನಂಬಲೇಬೇಕು. ಇದೆಲ್ಲ ಅಲ್ಲಿಗೆ ಹೋಗಿದ್ದರಿಂದಲೆ ಅಲ್ಲವೇ?

ಬಿಗ್ ಬಾಸ್ ಮನೆ ಪಕ್ಕಾ ಸುಸಜ್ಜಿತ ಎನ್ನುವುದರ ಜತೆಗೆ ಶುದ್ದತೆಗೆ ಇನ್ನೊಂದು ಮಾದರಿ. ಪ್ರತಿದಿನವೂ ಅಲ್ಲಿ ಸ್ಯಾನಿಟೈಸ್ಡ್ ಮಾಡಲಾಗುತ್ತಿತ್ತು. ಹಾಗೆಯೇ‌ ನಮ್ಮಗಳ ಆರೋಗ್ಯಕ್ಕಾಗಿಯೇ ಅಲ್ಲಿ ಡಾಕ್ಟರ್‌ ಇದ್ದರು. ಆದರೆ‌, ನಾವೆಲ್ಲ ಮಂಗನಿಂದ ಮಾನವರಾದವರಲ್ವಾ? ಸುಮ್ಮನೆ ಕೂರುವ ಅಭ್ಯಾಸವೇ ಇರುತ್ತಿರಲಿಲ್ಲ‌ . ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದು ಒಂದಷ್ಟು ಬೇಸರ ತರಿಸಿತ್ತು. ಹಾಗಾಗಿ‌ಒಂದಿ‌ ನ ಕುತೂಹಲಕ್ಕೆ, ಕಾತರಕ್ಕೆ ಹೊರಗಡೆ ನೋಡ್ಬೇಕು ಅಂತ ಕಾಂಪೌಂಡ್ ಗೋಡೆ ಹತ್ತಿ ನೋಡಿದ್ದೆವು. ಅಲ್ಲಿ ಒಂದು ಅಂಬೂಲೆನ್ಸ್ ಇತ್ತು. ಜತೆಗೆ ಡಾಕ್ಟರ್‌ ಕೂಡ ಇದ್ದರು.

Categories
ಸಿನಿ ಸುದ್ದಿ

ಸೀತಮ್ಮನ ಮಗನಿಗೆ ಕಲಾವಿದ;ಯತಿರಾಜ್ ಆಕ್ಷನ್ ಕಟ್ !

ಕಲಾವಿದ ,ಪತ್ರಕರ್ತ ಯತಿರಾಜ್ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ. ‘ಪೂರ್ಣ ಸತ್ಯ’ ಚಿತ್ರದ ನಂತರ ಅವರೀಗ ಸೀತಮ್ಮನ ಮಗ ಹೆಸರಿ‌ನ ಮತ್ತೊಂದು ಚಿತ್ರಕ್ಕೆ ಡೈರೆಕ್ಟರ್ ಹ್ಯಾಟ್ ತೊಟ್ಟು ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಸೋನು ಫಿಲಂಸ್ ಲಾಂಚನದಲ್ಲಿ ಮಂಜುನಾಥ್ ನಾಯಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಚರಣ್, ಕಸಾಲ, ಸೋನು ಸಾಗರ್, ಬುಲೆಟ್ ರಾಜು ಕಲಾವಿದರಾಗಿ ಆಯ್ಕೆ ಆಗಿದ್ದಾರೆ. ಚಿತ್ರ ದ ಕುರಿತು ಮಾಹಿತಿಯನ್ನು ಚಿತ್ರ ತಂಡ ಬುಧವಾರ ರಿವೀಲ್ ಮಾಡಲಿದೆ. ಹಾಗೆಯೇ ಅದರ ಚಿತ್ರೀಕರಣ, ಸಂಗೀತ ಇತ್ಯಾದಿ ಮಾಹಿತಿಯೂ ನಾಳೆ ಹೊರ ಬೀಳಲಿದೆ‌ . ಉಳಿದಂತೆ ಇಲ್ಲಿ ಕಲಾವಿದ ಯತಿರಾಜ್ ಅವರ ಮತ್ತೊಂದು ಪ್ರಯತ್ನವೇ ವಿಶೇಷ‌.

ಇದು ಅವಕಾಶ ಗಿಟ್ಟಿಸಿಕೊಂಡರು ಅಥವಾ ಸಿಕ್ಕಿದೆ ಎನ್ನುವುದಕ್ಕಿಂತ ಅವರ ಕಲಾಸೇವೆಯ ಪ್ರತಿಫಲವೇ ಹೌದು. ಯಾಕಂದ್ರೆ ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಯತಿರಾಜ್, ನಟನೆಯ ಮೇಲಿನ ಆಸಕ್ತಿಯಿಂದಲೇ ಕಲಾವಿದನಾಗಿ‌ ಗುರುತಿಸಿಕೊಂಡವರು. ಅದಕ್ಕಾಗಿಯೇ ನಟ ಕಿಚ್ವ ಸುದೀಪ್ ಬಳಗವನ್ನು ಸೇರಿ, ಅವರೊಂದಿಗೆ ತೆರೆ‌ಮೇಲೆ ಕಾಣಿಸಿಕೊಂಡರು. ಮುಂದೆ ಅವರಿಗೆ ಅವಕಾಶಗಳೂ ಬಂದವು. ಅದೇ ಕಾರಣಕ್ಕೆ ಪತ್ರಕರ್ತ ವೃತ್ತಿಯ ಜತೆಗೆ ನಟನೆಗೂ ಹೆಚ್ಚು ಆದ್ಯತೆ ನೀಡಿದವರು ಈಗ ಪೂರ್ಣವದಿಯ ನಟ, ನಿರ್ದೇಶಕ ಹಾಗೂ ಬರಹಗಾರ.

ಇದುವರೆಗಿನ ಅವರ ಸಿನ ಪಯಣದಲ್ಲಿ ೧೬೫ಕ್ಕೂ ಹೆಚ್ಚು ಚಿತ್ರಗಳಿಗೆ ನಟನಾಗಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಜತೆಗೆ ತಮಿಳಿ ಚಿತ್ರ ರಂಗದಲ್ಲೂ ನಟನಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಸ್ಟಾರ್ ಸಿನಿಮಾಗಳಲ್ಲಿ ಸಹ ನಟನಾಗಿ ಅಭಿನಯಸಿ, ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ಫೇರ್ ಅಂಡ್ ಲವ್ಲಿ , ಪೂರ್ಣ ಸತ್ಯ ಹಾಗೂ ಈಗ ಸೀತಮ್ಮನ ಮಗ ಚಿತ್ರವೂ ಸೇರಿ‌ಮೂರು ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ಈ ಪೈಕಿ ಈಗ ಅವರದ್ದೇ ನಿರ್ದೇಶನ ಎರಡನೇ‌ಸಿನಿಮಾ ‘ಸೀತಮ್ಮನ ಮಗ’

‘ ವೃತ್ತಿಯಲ್ಲಿ ಪತ್ರಕರ್ತನಾಗಿದ್ದ ನನಗೆ ಕಥೆಗಳ ಬರವಣಿಗೆ ಅನ್ನೋದು ಒಂದು ಹುಚ್ಚು. ಸದಾ ಒಂದಲ್ಲೊಂದು ಬಗೆಯ ಸಿನಿಮಾ ಕಥೆ ತಲೆಗೆ ಹೊಳೆದಾಗ ಅದನ್ನು ಬರೆಯುವುದು ತೀಡುವುದು ಸಹಜವೇ ಆಗಿತ್ತು. ಅದೇ ಹಾದಿಯಲ್ಲಿ ನಾನು ಸಿದ್ದ ಪಡಿಸಿದ ಕಥೆಗಳ ಪೈಕಿ ಮೊದಲು ಫೇರ್ ಅಂಡ್ ಲವ್ಲಿ ಸಿನಿಮಾವಾಯಿತು. ಅದಕ್ಕೆ ಬೇರೆಯವರು ನಿರ್ದೇಶನ‌ಮಾಡಿದರು‌ .‌

ಕೊನೆಗೆ ನನಗೆ ತೀವ್ರವಾಗಿ ಅನಿಸಿದ್ದು ನನ್ನದೇ ಕಥೆಗೆ ನಾನೇ ನಿರ್ದೆಶನ ಮಾಡಿದರೆ ಹೇಗಿರುತ್ತೆ ಅಂತ‌ . ಅದೇ ಹಾದಿಯಲ್ಲಿ’ ಪೂರ್ಣ ಸತ್ಯ’ ಸಿನಿಮಾ ಮಾಡಿದೆ‌. ಈಗ ಸೀತಮ್ಮನ ಮಗ. ಇದೆಲ್ಲ ಕಷವೃತ್ತಿಯಲ್ಲಿಆದರೆ,ಒಬ್ಬ ಸಹ ನಟನಾದವನಿಗೆ ಹೀರೋ ಆಗುವ ಕನಸು, ಹೀರೋ ಸಿನಿಮಾ ನಿರ್ಮಾಣ ಮಾಡುವ ಕನಸು ಎಷ್ಟು ಸಹಜವೋ ಹಾಗೆಯೇ ಸಿನಿಮಾ ಕಥೆ ಬರೆಯುವವನಿಗೆ ನಿರ್ದೇಶಕನಾಗುವ ಹಂಬಲವೂ ಸಹಜ. ಅದೇ ಹಾದಿಯಲ್ಲೀಗ ಸೀತಮ್ಮನ ಮಗ’ ಎನ್ನುತ್ತಾರೆ ಯತಿರಾಜ್.

Categories
ಸಿನಿ ಸುದ್ದಿ

ಕೆಜಿಎಫ್ ಸಾಮ್ರಾಜ್ಯಕ್ಕೆ `ಅಧೀರ’ ಕಮ್ ಬ್ಯಾಕ್ – ಬೆಂಕಿ ಖಬರ್ ! ಇನ್ಮೇಲೆ ಶುರು ಇಂಟರ್ ನ್ಯಾಷನಲ್ ಫೀವರ್!

ನರಾಚಿ ಲೋಕದಲ್ಲಿ ಸ್ಯಾಂಡಲ್ ವುಡ್ ಷೆಹಜಾದ್ ರಾಕಿಭಾಯ್ ಜೊತೆ ಸೆಣಸಾಡಿ ಮುಂಬೈಗೆ ವಾಪಾಸ್ ಆಗಿದ್ದ ಬಿಟೌನ್ ಮುನ್ನಭಾಯ್ ಮತ್ತೆ ರಾಕಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಧೀರನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಎಲ್ಲರನ್ನೂ ದಂಗು ಬಡಿಸಿ ಹೋಗಿದ್ದ ಬಿಟೌನ್ ಬಾಬ ಈಗ ಅಧೀರನ ಪಾತ್ರಕ್ಕೆ ಜೀವತುಂಬಲಿಕ್ಕೆ ಕೆಜಿಎಫ್ ಅಖಾಡಕ್ಕೆ ಭೇಟಿಕೊಟ್ಟಿದ್ದಾರೆ. ಹೌದು, ಅಧೀರ ಇಡೀ ಜಗತ್ತು ಕಣ್ಣರಳಿಸಿ ಕಾಯ್ತಿರುವ ಖಳನಾಯಕ ಪಾತ್ರ. ಕೆಜಿಎಫ್ ಮೇಲೆ ಕಣ್ಣಿಟ್ಟಿದ್ದ ಗರುಡನನ್ನು ಹೊಡೆದುರುಳಿಸಿದ ರಾಕಿಭಾಯ್, ಅಧೀರನನ್ನು ಯಾವ್ ರೀತಿಯಾಗಿ ಮಟ್ಟಹಾಕಿ ಚಿನ್ನದ ಲೋಕಕ್ಕೆ ಅಧಿಪತಿಯಾಗಬಹುದು ಅಂತ ವಲ್ಡ್ ವೈಡ್ ಸಿನಿಮಾ ಪ್ರೇಕ್ಷಕರು ಕೂತೂಹಲದಿಂದ ಎದುರು ನೋಡ್ತಿದ್ದಾರೆ. ಇಂತಹ ಹೈವೋಲ್ಟೇಜ್ ಕ್ಯಾರೆಕ್ಟರ್ ಗೆ ಬಿಟೌನ್ ಬಾಬ ಜೀವ ತುಂಬಿ‌ ಅಭಿನಯಿಸಿದ್ದಾರೆ.ಇತ್ತೀಚಿಗೆ ಕೆಜಿಎಫ್ ತಂಡ ಸೇರಿಕೊಂಡಿರುವ ನಟ ಸಂಜಯ್ ದತ್ತ್ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ.

ಈ ಬೆಂಕಿ ಸಮಾಚಾರವನ್ನು ಚಿತ್ರತಂಡ ಸೋಷಿಯಲ್ ಸಮುದ್ರದಲ್ಲಿ ಹಂಚಿಕೊಂಡಿದೆ. ಸುದ್ದಿ ಕೇಳಿ ರಾಕಿಂಗ್ ಫ್ಯಾನ್ಸ್ ಮಾತ್ರವಲ್ಲ ಇಡೀ ಚಿತ್ರಪ್ರೇಮಿಗಳು ದಿಲ್ ಖುಷ್ ಆಗಿದ್ದಾರೆ. ಆದಷ್ಟು ಬೇಗ ಟ್ರೈಲರ್ ಮತ್ತು ಸಾಂಗ್ಸ್ ಝಲಕ್ ತೋರ್ಸಿ ಅಂತ ಹೊಂಬಾಳೆಗೆ ಬೇಡಿಕೆ ಇಡ್ತಿದ್ದಾರೆ. ಬೆಳ್ಳಿತೆರೆ ಅಖಾಡದಲ್ಲಿ ಚಂಡಮಾರುತದ ಅಲೆ ಎಬ್ಬಿಸೋ ಮುನ್ನ ಸೋಷಿಯಲ್ ಸಮುದ್ರದಲ್ಲಿ ಸುನಾಮಿ ಎಬ್ಬಿಸೋದಕ್ಕೆ ಚಿತ್ರತಂಡ‌ ಕೂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈಗಾಗಲೇ ಪ್ರಮೋಷನ್ ಕೆಲಸಗಳನ್ನು ಶುರುವಿಟ್ಟುಕೊಂಡಿದೆ. ಅದರ ಭಾಗವಾಗಿ ಮೊದಲು ಕೆಜಿಎಫ್ ಚಾಪ್ಟರ್ 1 ದೃಶ್ಯಗಳನ್ನು ಪ್ರೇಕ್ಷಕರಿಗೆ ರೀಕಾಲ್ ಮಾಡಿಸುವಂತಹ ಕೆಲಸವನ್ನು ಮಾಡ್ತಿದೆ. ಶೀಘ್ರದಲ್ಲೇ ಕೆಜಿಎಫ್ ಚಾಪ್ಟರ್ 2 ಪೋಸ್ಟರ್ ಗಳ ದರ್ಬಾರ್ ಸೋಷಿಯಲ್ ಜಗತ್ತಿನಲ್ಲಿ ಆರಂಭಗೊಳ್ಳಲಿದೆ. ಅಲ್ಲಿಂದ ಶುರುವಾಗಲಿದೆ ಕೆಜಿಎಫ್ ಅಸಲಿ ಇಂಟರ್ ನ್ಯಾಶನಲ್ ಫೀವರ್

ಅಂದ್ಹಾಗೇ, ‘ ಅಧೀರ’ನ ಪಾತ್ರ ಹೊರತು ಪಡಿಸಿ ಬಹುತೇಕ ಎಲ್ಲಾ ಪಾತ್ರಗಳ ಡಬ್ಬಿಂಗ್ ಪೂರ್ಣಗೊಂಡಿತ್ತು. ಬಾಬ ಕಾಲ್ ಶೀಟ್ ಗಾಗಿ ಚಿತ್ರತಂಡ ಎದುರು ನೋಡ್ತಿತ್ತು. ಫೈನಲೀ, ಸಂಜು ಬಾಬು ಕೆಜಿಎಫ್ ಅಂಗಳಕ್ಕೆ ಭೇಟಿಕೊಟ್ಟು ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಅಲ್ಲಿಗೆ ಕೆಜಿಎಫ್ ಚಾಪ್ಟರ್ 2 ಮಾತಿನ ಮನೆಯ ಸಂಪೂರ್ಣ ಕೆಲಸ ಮುಕ್ತಾಯಗೊಂಡಿದೆ. ಈ ಖುಷಿ ಸಮಾಚಾರವನ್ನು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ತಿಳಿಸಿದೆ. ಇಡೀ ಜಗತ್ತು ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಸಿನಿಮಾ ಪ್ರೇಕ್ಷಕರಿಗೆ ಚಿನ್ನದ ಸಾಮ್ರಾಜ್ಯ ತೋರಿಸೋಕೆ ಕೆಜಿಎಫ್ ಚಾಪ್ಟರ್ 2 ತಂಡ ಸಕಲ ಸಿದ್ದತೆ ನಡೆಸಿದೆ.ಏಪ್ರಿಲ್ 14 ರಂದು ವಲ್ಡ್ ವೈಡ್ ಕೆಜಿಎಫ್ ಚಾಪ್ಟರ್ 2 ತೆರೆಗೆ ಬರಲಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅಪ್ಪು ಕನಸಿನ ಗಂಧದ ಗುಡಿ ನೋಡೋಕೆ ನಾನೂ ಕಾತುರ; ಶಿವಣ್ಣ

ಪುನೀತ್‌ ರಾಜಕುಮಾರ್‌ ಅವರು ಪ್ರೀತಿಯಿಂದಲೇ ನಿರ್ಮಾಣ ಮಾಡಿದ “ಗಂಧದ ಗುಡಿ” ಎಂಬ ವಿಶೇಷ ಡಾಕ್ಯುಮೆಂಟರಿ ಪಾರ್ವತಮ್ಮ ರಾಜಕುಮಾರ್‌ ಅವರ ಹುಟ್ಟುಹಬ್ಬದಂದು ರಿಲೀಸ್‌ ಆಗಿದ್ದು, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಟೈಟಲ್‌ ಟೀಸರ್ ವೀಕ್ಷಿಸಿರುವ ಕನ್ನಡ ಚಿತ್ರರಂಗದ ಹಲವು ನಟ,ನಟಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಕೂಡ ಟೀಸರ್‌ ನೋಡಿ ಪ್ರತಿಕ್ರಿಯಿಸಿದ್ದು ಹೀಗೆ.

“ಅಪ್ಪು ಮಾಡಿರುವ ಗಂಧದ ಗುಡಿ ಟೀಸರ್‌ ತುಂಬಾನೇ ಚೆನ್ನಾಗಿದೆ. ಒಂದು ಡಿಫರೆಂಟ್‌ ಫಾರ್ಮೆಟ್‌ನಲ್ಲಿದೆ. ಕಾಡಿನ ಅಮೂಲ್ಯತೆ ಬಗ್ಗೆ ಡಾಕ್ಯುಮೆಂಟರಿ ಇದೆ. ಈಗಿನ ಕಾಲಕ್ಕೆ ತುಂಬ ಸೂಕ್ತ ಎನಿಸುತ್ತೆ. ಕಾಡು ಸೇವ್‌ ಮಾಡಬೇಕೆಂಬ ವಿಷಯ ಅದರದ್ದು. ಅಪ್ಪು ಸಿಂಪಲ್‌ ಆಗಿ ಕಾಣಿಸಿಕೊಂಡಿದ್ದಾರೆ ಅಲ್ಲಿ. ಸ್ಟಾರ್‌ಡಮ್‌ ಬಿಟ್ಟು ಬೇರೆ ರೀತಿ ತೊಡಗಿಸಿಕೊಳ್ಳುವುದಿದೆಯಲ್ಲ ಅದೊಂದು ವಿಶೇಷ. ಈ ಕುರಿತಂತೆ ಹಿಂದೆಯೇ, ಗಂಧದ ಗುಡಿ ಕುರಿತು ನನ್ನ ಬಳಿ ಅಪ್ಪು ಹೇಳಿದ್ದರು. ನಾನೂ ಕೂಡ ಅದನ್ನ ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ.

ಅಲ್ಲಿ ಕಾಡಿನ ರಕ್ಷಣೆ ಬಗ್ಗೆ ಹೇಳಲಾಗಿದೆ. ಒಂದೊಳ್ಳೆಯ ಜಾಗೃತಿ ಮೂಡಿಸುವ ಸಿನಿಮಾ ಅದು. ಕರ್ನಾಟಕ ಅರಣ್ಯ ಕುರಿತಂತೆ ಅಪ್ಪು ಮಾಡಿರುವುದು ಹೆಮ್ಮೆ ಎನಿಸುತ್ತದೆ. ಈ ಹಿಂದೆ ಕೂಡ ಎಂ.ಪಿ.ಶಂಕರ್‌, ಕೂಡ ಕಾಡಿನ ಕುರಿತಂತೆ ಸಿನಿಮಾ ಮಾಡಿದ್ದರು. ಪ್ರಭಾಕರ್‌ ಅವರು ಸಹ ಕಾಡಿನರಾಜ ಸಿನಿಮಾ ಮಾಡಿದ್ದರು. ನಾನು ಸಿನಿಮಾ ನೋಡೋಕೆ ಕಾಯುತ್ತಿದ್ದೇನೆʼ ಎಂದಿದ್ದಾರೆ. ಪಿಆರ್‌ಕೆ ಮೂಲಕ ೨೦೨೨ರಲ್ಲಿ ಥಿಯೇಟರ್‌ನಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Categories
ಸಿನಿ ಸುದ್ದಿ

ಮತ್ತೆ ಸುದ್ದಿಯಲ್ಲಿ ಲಹರಿ ಸಂಸ್ಥೆ! ರಿಕಿ ಕೇಜ್‌ ಆಲ್ಬಂ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನ…

ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹೌದು, ಈಗಾಗಲೇ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಈ ಸಂಸ್ಥೆ, ಇದೀಗ ಮತ್ತೊಂದು ಸಂತೋಷದ ವಿಷಯಕ್ಕೆ ಕಾರಣವಾಗಿದೆ.

ಇದೇ ಮೊದಲ ಬಾರಿಗೆ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಬಿಡುಗಡೆಯಾದ ಆಲ್ಬಂವೊಂದು ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದೆ. ಸಹಜವಾಗಿಯೇ ಲಹರಿ ಮ್ಯೂಸಿಕ್‌ ಸಂಸ್ಥೆಯ ಲಹರಿ ವೇಲು ಅವರಿಗೆ ಇದು ಖುಷಿಯಾಗಿದೆ. ಅಂದಹಾಗೆ, ಭಾರತೀಯ ಚಿತ್ರತಂಗದಲ್ಲೇ ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿರುವ ಈ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ಮುಖ್ಯ ಕಾರಣ, ಅದು ಸಂಗೀತ ನಿರ್ದೇಶಕ, ಗಾಯಕ ರಿಕಿ ಕೇಜ್.‌


ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್‌” ಹೆಸರಿನ ಆಲ್ಬಂ ಇದೀಗ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಹಾಗೆ ನೋಡಿದರೆ, ರಿಕ್ಕಿ ಕೇಜ್‌ ಅವರಿಗೆ ಇದೇನು ಹೊಸದಲ್ಲ. ಕಳೆದ ಐದು ವರ್ಷಗಳ ಹಿಂದೆಯೇ ರಿಕಿ ಕೇಜ್‌ ಅವರು ಗ್ರ್ಯಾಮಿ ಅವಾರ್ಡ್‌ ಪಡೆದುಕೊಂಡಿದ್ದರು. ಈಗ ಎರಡನೇ ಬಾರಿಗೆ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶೇಷವೆಂದರೆ, ರಿಕಿ ಕೇಜ್‌ ಅವರ “ಡಿವೈನ್‌ ಟೈಡ್ಸ್”‌ ಆಲ್ಬಂ ಪ್ರಪಂಚದ ಅದ್ಭುತ ಆಲ್ಬಂಗಳ ಸಾಲಿಗೆ ಸೇರಿದ್ದು, ಪ್ರಪಂಚಾದ್ಯಂತ ಬಂದ ಆಲ್ಬಂಗಳನ್ನು ಹಿಂದಕ್ಕೆ ತಳ್ಳಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಸಹಜವಾಗಿಯೇ ಇದು ಕನ್ನಡಕ್ಕೆ ಹೆಮ್ಮೆಯ ವಿಷಯವೇ ಸರಿ. ಯಾಕೆಂದರೆ, ರಿಕಿ ಕೇಜ್‌ ಕೂಡ ಮೂಲತಃ ಕರ್ನಾಟಕದವರು. ಅದರಲ್ಲೂ ದಕ್ಷಿಣ ಭಾರತದಲ್ಲೇ ಪ್ರಖ್ಯಾತಿ ಪಡೆದಿರುವ ಲಹರಿ ಮ್ಯೂಸಿಕ್‌ ಸಂಸ್ಥೆಯಡಿ ಈಗಾಗಲೆ 1.26 ಲಕ್ಷ ಆಲ್ಬಂ ಹಾಡುಗಳಿವೆ. ಸೂಪರ್‌ ಹಿಟ್‌ ಹಾಡುಗಳನ್ನು ಕೊಟ್ಟಿರುವ ಲಹರಿ ಮ್ಯೂಸಿಕ್‌ ಸಂಸ್ಥೆ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಈಗ ಇದೇ ಮೊದಲ ಸಲ “ಡಿವೈನ್‌ ಟೈಡ್ಸ್‌” ಆಲ್ಬಂ ಲಹರಿ ಸಂಸ್ಥೆಯಡಿ ಬಂದಿದ್ದು, ಆ ಆಲ್ಬಂ ಗ್ರ್ಯಾಮಿ ಅವಾರ್ಡ್‌ಗೆ ಹೋಗಿರೋದು ಸಂತಸದ ವಿಷಯ. ಭಾರತದಲ್ಲೇ ಮೊದಲ ಬಾರಿಗೆ ಲಹರಿ ಸಂಸ್ಥೆ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿರುವ ಬಗ್ಗೆ ಸ್ವತಃ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು ಅವರೇ ಸಂತೋಷಗೊಂಡಿದ್ದಾರೆ.

ಅಂದಹಾಗೆ, 64 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್‌ಗೆ “ಡಿವೈನ್ ಟೈಡ್ಸ್” ಎಂಬ ಅದ್ಭುತ ಆಲ್ಬಂ ನಾಮನಿರ್ದೇಶನಗೊಂಡಿದೆ. ಸ್ಟೀವರ್ಟ್ ಕೋಪ್ಲ್ಯಾಂಡ್ (ಪೊಲೀಸ್) ಮತ್ತು ರಿಕಿ ಕೇಜ್ ‘ಡಿವೈನ್ ಟೈಡ್ಸ್’ ಗಾಗಿ ಗ್ರ್ಯಾಮಿ ನಾಮನಿರ್ದೇಶನವನ್ನು ಪಡೆದುಕೊಂಡಿದ್ದಾರೆ. ಈ ನಾಮನಿರ್ದೇಶನದ ಕುರಿತಂತೆ ರೆಕಾರ್ಡಿಂಗ್ ಅಕಾಡೆಮಿಯ ಸಿಇಒ ಹಾರ್ವೆ ಮೇಸನ್ ಜೂನಿಯರ್ ಅವರು ಘೋಷಣೆ ಮಾಡಿದ್ದಾರೆ. ಕಳೆದ 2015ರಲ್ಲಿ ರಿಕಿ ಕೇಜ್ ಅವರ “ವಿಂಡ್ಸ್ ಆಫ್ ಸಂಸಾರ” ಎಂಬ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಆದರ್ಶಗಳನ್ನು ಆಧರಿಸಿ, ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂ ಬಂದು ಅದು ಯಶಸ್ವಿಯಾಗಿತ್ತು. ಇದರೊಂದಿಗೆ ಯುಎಸ್‌ನ ಬಿಲ್‌ಬೋರ್ಡ್ ನ್ಯೂ ಏಜ್ ಆಲ್ಬಮ್‌ಗಳ ಚಾರ್ಟ್‌ನಲ್ಲಿ ಮೊದಲ ಸ್ಥಾನದಲ್ಲಿತ್ತು. ಇದು ಭಾರತೀಯ ಮೂಲದ ವ್ಯಕ್ತಿಗೆ ಮೊದಲನೆ ಪ್ರಶಸ್ತಿ ಎಂಬುದು ವಿಶೇಷವಾಗಿತ್ತು. ರಿಕಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಮತ್ತು 4 ನೇ ಭಾರತೀಯ. 5-ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರು ಪೌರಾಣಿಕ ಬ್ರಿಟಿಷ್ ರಾಕ್ ಗ್ರೂಪ್‌ನ ‘ದಿ ಪೋಲಿಸ್’ ಸ್ಥಾಪಕ ಮತ್ತು ಡ್ರಮ್ಮರ್ ಆಗಿದ್ದಾರೆ.

ಪ್ರಪಂಚದಾದ್ಯಂತದ ಕಲಾವಿದರನ್ನು ಒಳಗೊಂಡಿರುವ ಪ್ರಸ್ತುತ ಗ್ರ್ಯಾಮಿ ನಾಮನಿರ್ದೇಶಿತ ಸಂಗೀತ ಆಲ್ಬಂ ‘ಡಿವೈನ್ ಟೈಡ್ಸ್’ ನಮ್ಮ ನೈಸರ್ಗಿಕ ಪ್ರಪಂಚದ ವೈಭವ ಮತ್ತು ಜಾತಿಗಳ ಸ್ಥಿತಿ ಸ್ಥಾಪಕತ್ವಕ್ಕೆ ಗೌರವವಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಈ ಆಲ್ಬಂ 9 ಹಾಡುಗಳು ಮತ್ತು 8 ಸಂಗೀತ ವೀಡಿಯೊಗಳನ್ನು ಒಳಗೊಂಡಿದೆ, ಇದನ್ನು ಭಾರತೀಯ ಹಿಮಾಲಯದ ಸೊಗಸಾದ ಸೌಂದರ್ಯದಿಂದ ಸ್ಪೇನ್‌ನ ಹಿಮಾವೃತ ಕಾಡುಗಳವರೆಗೆ ವಿಶ್ವದಾದ್ಯಂತ ಚಿತ್ರೀಕರಿಸಲಾಗಿದೆ. ‘ಡಿವೈನ್ ಟೈಡ್ಸ್’ ಈಗಾಗಲೇ ಪ್ರಪಂಚದಾದ್ಯಂತದ ವಿವಿಧ ಉತ್ಸವಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ದಕ್ಷಿಣ ಭಾರತದ ಪ್ರಮುಖ ರೆಕಾರ್ಡ್ ಲೇಬಲ್ ಆದ ಲಹರಿ ಮ್ಯೂಸಿಕ್‌ನಿಂದ ಸಂಗೀತ ವೀಡಿಯೊಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. 64 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನವರಿ 31, 2022 ರಂದು ನಡೆಯಲಿದೆ. ಈ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುವುದು.

error: Content is protected !!