ಕಿರುತೆರೆಯಲ್ಲಿ ಸುಮಾರು ವರ್ಷಗಳಿಂದ ಗುರುತಿಸಿಕೊಂಡಿರುವ ಶಶಿಕುಮಾರ್ ಹಾಗೂ ನಂದಿತಾ ಅವರ ಪುತ್ರ ಸುಮುಖ. ಇದೀಗ ಫಿಸಿಕ್ಸ್ ಟೀಚರ್ ಸಿನಿಮಾ ಮೂಲಕ ಹೀರೋ ಆಗಿಯೂ ನಿರ್ದೇಶಕರಾಗಿಯೂ ಎಂಟ್ರಿಯಾಗುತ್ತಿದ್ದಾರೆ…
ಸುಮುಖ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ” ಫಿಸಿಕ್ಸ್ ಟೀಚರ್” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದ್ದು ಅದು ಜನಮನಸೂರೆಗೊಂಡಿದೆ. ಇದೇ ಇಪ್ಪತ್ತೇಳರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.
ನಾನು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ನೋಡಿದೆ. ತುಂಬಾ ಚೆನ್ನಾಗಿದೆ. ಸಾಮಾನ್ಯ ಸಿನಿಮಾ ಸೂತ್ರಗಳನ್ನು ಹೊರತುಪಡಿಸಿದ ಸಿನಿಮಾ. ಸುಮುಖ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದೆ. ಮಾಮೂಲಿ ಚಿತ್ರಗಳಿಗಿಂತ ಭಿನ್ನವಾಗಿರುವ ಈ ಚಿತ್ರವನ್ನು ನೀವೆಲ್ಲಾ ನೋಡಿ ಹರಸಿ ಎಂದರು ಖ್ಯಾತ ವಿಮರ್ಶಕ ಮನು ಚಕ್ರವರ್ತಿ.
ಟ್ರೇಲರ್ ಗೆ ಸಿಕ್ಕ ಪ್ರಶಂಸೆ ಕಂಡು ಖುಷಿಯಾಗಿದೆ. ಬೇರೆಯದೇ ರೀತಿಯ ಸಿನಿಮಾ ಅಂದ ಕೂಡಲೇ ಆರ್ಟ್ ಸಿನಿಮಾ ತರಹವೂ ಅಲ್ಲ. ಸಾಕಷ್ಟು ಕಮರ್ಷಿಯಲ್ ಎಲಿಮೆಂಟ್ ಈ ಚಿತ್ರದಲ್ಲಿದೆ. ಎಲ್ಲಾ ನಟರ ಅಭಿನಯ ಚೆನ್ನಾಗಿದೆ . ಮೇ 27 ತೆರೆಗೆ ಬರುತ್ತಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ – ನಟ ಸುಮುಖ.
ಬಿಡುಗಡೆಗೂ ಮುನ್ನವೇ ನಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಸಂತೋಷವಾಗಿದೆ. ಈಗ ಟ್ರೇಲರ್ ಬಂದಿದೆ. ಸದ್ಯ ಹಾಡೊಂದು ಸಹ ಬಿಡುಗಡೆಯಾಗಲಿದೆ. 27ರಂದು ಚಿತ್ರ ತೆರೆ ಕಾಣಲಿದೆ. ನೋಡಿ ಬೆಂಬಲ ನೀಡಿ ಎಂದರು ನಾಯಕಿ ಪ್ರೇರಣ ಕಂಬಂ.
ಸುಮುಖನನ್ನು ಹುಟ್ಟಿದ ದಿನದಿಂದ ನೋಡಿದ್ದೀನಿ. ಅವನ ಜೊತೆ ಕೆಲಸ ಮಾಡಿದ್ದು ಖುಷಿ. ಆತ ಉತ್ತಮ ನಿರ್ದೇಶಜ. ಆದರೆ ಅದಕ್ಕಿಂತ ಆತ ಉತ್ತಮ ನಟ ಎನ್ನುತ್ತೇನೆ. ಈ ಸಿನಿಮಾ ಜನರ ಮೆಚ್ಚುಗೆ ಪಡೆಯಲಿ ಎಂದರು ನಟ ರಾಜೇಶ್ ನಟರಂಗ.
ನಿರ್ಮಾಪಕ ಶಶಿಕುಮಾರ್, ನಂದಿತಾ, ಪತ್ರಕರ್ತ, ಲೇಖಕ ಜೋಗಿ, ಕಥೆ ಬರೆದಿರುವ ಸ್ಕಂದ ಸುಬ್ರಹ್ಮಣ್ಯ ಹಾಗೂ ನಿರ್ಮಾಣ ನಿರ್ವಾಹಕ ಅಕ್ಷಯ್ “ಫಿಸಿಕ್ಸ್ ಟೀಚರ್” ಗೆ ಕೋರಿದರು.