Categories
ಸಿನಿ ಸುದ್ದಿ

ಕನ್ನಡಕ್ಕೆ ಹೊಸ ಅಂಬಾಸಡರ್! ನಿರ್ದೇಶಕ ಹೀರೋ ಆದ ರೋಚಕಥೆ!!

ಕನ್ನಡ ಹೀರೋಗಳು ಡೇಟ್ ಕೊಡದೆ ಆಟ ಆಡಿದ್ರು, ಕೊನೆಗೆ ಇವರೇ ಹೀರೋ ಆದ್ರು: ಇದು ಎಂಟೆಕ್ ಹುಡುಗನ ಸಿನಿಮಾ ಪ್ರೀತಿ ಕಣ್ರೀ…

ಸಿನಿಮಾ ಆಂದರೇನೆ ಹಾಗೆ. ಅದೊಂದು ಕ್ರೇಜ್. ನಿತ್ಯವೂ ನೂರಾರು ಪ್ರತಿಭೆಗಳು ಗಾಂಧಿ ನಗರದ ಅಂಗಳವನ್ನು ಸ್ಪರ್ಶಿಸುತ್ತಿವೆ. ಕಲರ್ ಫುಲ್‌ ಕಣ್ಣಲ್ಲಿ ಬೆಟ್ಟದ್ದಷ್ಟು ಕನಸು ಹೊತ್ತು ಬಂದವರಿಗೆ ಇಲ್ಲಿ ಲೆಕ್ಕವಿಲ್ಲ. ಹಾಗೆ ಬಂದು ಗಟ್ಟಿನೆಲೆ ಕಾಣಬೇಕು ಅಂದುಕೊಂಡವರಲ್ಲಿ ಅಶೋಕ್ ಸಾಮ್ರಾಟ್ ಕೂಡ ಒಬ್ಬರು. ಅಶೋಕ್ ಸಾಮ್ರಾಟ್ ‘ಅಂಬಾಸಡರ್’ ಸಿನಿಮಾ ನಿರ್ದೇಶಕರು. ಅಷ್ಟೇ ಅಲ್ಲ, ಹೀರೋ ಕೂಡ ಹೌದು, ಇದಷ್ಟೇ ಅಲ್ಲ, ನಿರ್ಮಾಪಕರೂ ಅವರೇ. ಅಷ್ಟಕ್ಕೂ ಅಶೋಕ್ ಸಾಮ್ರಾಟ್ ಹೀರೋ ಆಗಿದ್ದೇಕೆ? ಆ ಕುರಿತು ಸ್ವತಃ ಅವರೇ ಸಿನಿಲಹರಿ ಜೊತೆ ಮಾತಾಡಿದ್ದಾರೆ…

ಓವರ್ ಟು ಅಶೋಕ್ ಸಾಮ್ರಾಟ್

‘ನನಗೆ ಮೊದಲಿಂದಲೂ ಸಿನಿಮಾ ಮೇಲೆ ಪ್ರೀತಿ ಇತ್ತು. ಹಾಗಂತ ಏಕಾಏಕಿ ಬರೋದು ಕಷ್ಟ ಅಂತಾನೂ ಗೊತ್ತಿತ್ತು. ಮೊದಲು ಬದುಕು ಗಟ್ಟಿಯಾಗಿರಬೇಕು ಅಂತ ಸ್ಟಡಿ ಬಗ್ಗೆ ಗಮನಹರಿಸಿದೆ. ಎಂಟೆಕ್ ಕೂಡ ಮುಗಿಸಿದೆ. ನಂತರ ಸಿನಿಮಾ ಫೀಲ್ಡ್ ಗೆ ಕಡೆ ಎಂಟ್ರಿ ಕೊಟ್ಟೆ. ನಿರ್ದೇಶಕನ ಕನಸು ಹೊತ್ತು ಬಂದ ನಾನು ಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದೆ. ಕೊನೆಗೆ ನಿರ್ದೇಶನಕ್ಕೂ ಅಣಿಯಾದೆ.

ಹೀರೋ ಬೇಡ ಅಂತ ಡಿಸೈಡ್ ಆದೆ

ಶ್ರೀ ಮುರಳಿ ಅಭಿನಯದ ‘ಹರೇ ರಾಮ ಹರೇ ಕೃಷ್ಣ’ ಸಿನಿಮಾ ನಿರ್ದೇಶಿಸಿದೆ. ಆ ಸಿನಿಮಾಗೆ ಇಳೆಯರಾಜ ಸಂಗೀತ, ಹಂಸಲೇಖ ಸಾಹಿತ್ಯವಿತ್ತು. ಅದಾದ ನಂತರ ಮತ್ತೊಂದು ಒಳ್ಳೆಯ ಕಥೆ ರೆಡಿ ಮಾಡಿ ಹೀರೋ ಒಬ್ಬರಿಗೆ ಕಥೆ ಹೇಳಲು ಹೋದೆ. ನಾಳೆ, ನಾಡಿದ್ದು, ವಾರ, ತಿಂಗಳು ಹೀಗೆ ಹೇಳಿ ಹೇಳಿ ಆರೇಳು ತಿಂಗಳು ಅಲೆದಾಡಿದರೂ ಕಥೆ ಕೇಳಲೇ ಇಲ್ಲ. ಒಳ್ಳೆಯ ಕಥೆ ಒಳ್ಳೆಯ ಬಜೆಟ್ ಇದ್ದರೂ ಯಾರೊಬ್ಬರೂ ಕಥೆ ಕೇಳೋಕು ಮುಂದಾಗಲಿಲ್ಲ.

ಕೊನೆಗೆ, ನನ್ನ ಜೊತೆ ಇದ್ದ ಟೀಮ್, ಈ ಕಥೆಗೆ ನೀವೇ ಹೀರೋ ಆಗಿ, ಕಥೆ ಹೊಂದುತ್ತೆ ಅಂದಾಗ, ನನಗೂ ಹಾಗೆ ಅನಿಸ್ತು. ಹೀರೋಗಳಿಗೆ ಕಥೆ ಹಿಡಿದು ಅಲೆದಾಡೋದು ಸಾಕು, ಈ ಅವಕಾಶನ ನಾನೇ ಉಪಯೋಗಿಸಿಕೊಳ್ಳಲು ರೆಡಿಯಾದೆ.

ಆಗ ಶುರುವಾಗಿದ್ದೇ ‘ಅಂಬಾಸಡರ್’. ಅಂಬಾಸಡರ್ ಅಂದರೆ ರಾಯಭಾರಿ. ಇಲ್ಲಿ ಕೃಷ್ಣನ ಆದರ್ಶಗಳಿವೆ. ಕುರುಕ್ಷೇತ್ರದಲ್ಲಿನ ಕೆಲ ಅಂಶಗಳ ಕಥೆ ಇಲ್ಲಿದೆ. ಈಗಿನ ವ್ಯವಸ್ಥೆ, ವಿರುದ್ಧ ಹೋರಾಡುವ ಯುವಕನೊಬ್ಬನ ಕಥೆ ಇದೆ. ಅಲ್ಲಲ್ಲಿ ವೈಲೆನ್ಸ್ ಕೂಡ ಇದೆ. ವಿನಾಕಾರಣ ವೈಲೆನ್ಸ್ ಇಲ್ಲ. ಅದಕ್ಕೂ ರೀಸನ್ ಇದೆ.

ಕಾಂಪ್ರಮೈಸ್ ಇಲ್ಲವೇ ಇಲ್ಲ

ಇನ್ನು ಇದೊಂದು ಕಮರ್ಷಿಯಲ್ ಕಥೆ. ಮೊದಲೇ ಹೇಳಿದಂತೆ ನಾನು ಹೀರೋ ಆಗಲೇಬೇಕು ಅಂದುಕೊಂಡವನಲ್ಲ. ಅನಿರೀಕ್ಷಿತವಾಗಿ ಹೀರೋ ಆದೆ. ಅದ್ಧೂರಿಯಾಗಿ ಚಿತ್ರ ತಯಾರಾಗಿದೆ. ಇಲ್ಲಿ ನಿರ್ದೇಶಕ ಕಮ್ ಹೀರೋ ನಾನೇ ಆಗಿದ್ದರಿಂದ ಎಲ್ಲೂ ಕಾಂಪ್ರಮೈಸ್ ಇಲ್ಲ. ಕಥೆಗೆ ಏನು ಬೇಕೋ ಎಲ್ಲವನ್ನೂ ಒದಗಿಸಿದ್ದೇನೆ. ಅಶೋಕ್ ಸಾಮ್ರಾಟ್ ಎಂಟರ್ಪ್ರೈಸಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ.

ಇಷ್ಟ ಪಟ್ಟರೆ ಯಾವುದೂ ಕಷ್ಟ ಅಲ್ಲ

ಇಲ್ಲಿ ನಿರ್ದೇಶನದ ಜೊತೆ ನಾಯಕನಾಗಿದ್ದರೂ, ನನಗೆ ಈ ಎರಡು ಕೆಲಸ ಕಷ್ಟ ಎನಿಸಲಿಲ್ಲ. ಯಾಕೆಂದರೆ, ಸಿನಿಮಾ ಅನ್ನೋದೇ ಎಂಜಾಯ್ ಮಾಡಿಕೊಂಡು ಮಾಡುವ ಕೆಲಸ. ಯಾವತ್ತೂ ಕಷ್ಟ ಆಗಲಿಲ್ಲ.

ಫೆಬ್ರವರಿ 10 ಅದ್ಧೂರಿ ಬಿಡುಗಡೆ

ಇನ್ನು ಚಿತ್ರದಲ್ಲಿ ದೀಪ್ತಿ, ಸಂಗೀತ, ಅಕ್ಷತಾ ನಾಯಕಿಯರು. ಇವರೊಂದಿಗೆ ದೊಡ್ಡ ತಾರಾಬಳಗವಿದೆ. ಪ್ರಕಾಶ್ ರೈ, ಸೋನುಸೂದ್, ಚಿತ್ರಾ ಶೆಣೈ ಇತರರು ಇದ್ದಾರೆ. ಗುರುಕಿರಣ್ ಅವರ ಸಂಗೀತವಿದೆ. ಇಳೆಯರಾಜ ಅವರ ಹಿನ್ನೆಲೆ ಸಂಗೀತವಿದೆ.

ಪಿಕೆಎಚ್ ದಾಸ್ ಕ್ಯಾಮೆರಾ ಹಿಡಿದಿದ್ದಾರೆ.
95 ದಿನಗಳ ಕಾಲ ಬೆಂಗಳೂರು, ಹೈದರಾಬಾದ್, ಮುಂಬೈನಲ್ಲಿ ಚಿತ್ರೀಕರಣವಾಗಿದೆ. ನಾಲ್ಕು ಹಾಡುಗಳಿರುವ ಈ ಚಿತ್ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಇದು ಸುಧೀರ್ ಅತ್ತಾವರ ಪೂಜ್ಯ ದೈವ! ಕರಿ ಹೈದ ಕರಿ ಅಜ್ಜ ಎಂಬ ದೈವದ ಸಿನಿಮಾಗೆ ಶೂಟಿಂಗ್ ಮುಕ್ತಾಯ…

ಕನ್ನಡದಲ್ಲಿ ಮತ್ತೊಂದು ದೈವದ ಸಿನಿಮಾ ಕರಿ ಹೈದ ಕರಿ ಅಜ್ಜ ಶುರುವಾಗಿದ್ದು ಗೊತ್ತೇ ಇದೆ. ಸುಧೀರ್ ಅತ್ತಾವರ ನಿರ್ದೇಶನದ ಈ ಸಿನಿಮಾಗೆ ತ್ರಿವಿಕ್ರಮ ಸಪಲ್ಯ ನಿರ್ಮಾಪಕರು. ಅಂದಹಾಗೆ, ಈ ಸಿನಿಮಾ ಹೈಲೆಟ್ ಅಂದರೆ, ಬಾಲಿವುಡ್, ಹಾಲಿವುಡ್ ನಟ ಕಬೀರ್ ಬೇಡಿ. ಅಷ್ಟೇ ಅಲ್ಲ, ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರ ಸ್ಪರ್ಶವಿದೆ. ಭವ್ಯ ತಾರಾಗಣವೂ ಇಲ್ಲಿದೆ. ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಒಂದಷ್ಟು ಅನುಭವ ಹಂಚಿಕೊಂಡಿದೆ

ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ ಸಿನಿಮಾ ಕರಿ ಹೈದ ಕರಿ ಅಜ್ಜ. ಈ ಚಿತ್ರಕ್ಕೆ ಸುಧೀರ್ ಅತ್ತಾವರ್ ನಿರ್ದೇಶನವಿದೆ. ತ್ರಿವಿಕ್ರಮ ಸಪಲ್ಯ ನಿರ್ಮಾಪಕರು. ಚಿತ್ರದಲ್ಲಿ ಬರುವ ಮುಖ್ಯ ಪಾತ್ರವೊಂದರಲ್ಲಿ ಹಾಲಿವುಡ್, ಬಾಲಿವುಡ್ ಹಾಗೂ ಫ್ರೆಂಚ್ ಸಿನಿಮಾಗಳ ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗನ್ ಪಾತ್ರ ನಿರ್ವಹಿಸಿರುವುದು ವಿಶೇಷ. ಅಂತರರಾಷ್ಟ್ರೀಯ ಈ ಕಲಾವಿದ ಇದೇ ಮೊದಲಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿರುವುದು ವಿಶೇಷತೆಗಳಲ್ಲೊಂದು.

ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿ, ಚಿತ್ರೀಕರಣ ಮುಕ್ತಾಯವಾದ ಮಾರನೆಯ ದಿನ ಕೊರಗಜ್ಜ ದೈವಕ್ಕೆ ಕೃತಜ್ಞತೆ ಹೇಳುವ ದ್ರಷ್ಟಿಯಲ್ಲಿ ಇತ್ತೀಚೆಗೆ “ಕೊರಗಜ್ಜ ದೈವದ ಕೋಲ ಸೇವೆ ನೀಡಲಾಯಿತು. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭವಕ್ಕೆ ಬಂದಿದೆ. ಇದು ಕೊರಗಜ್ಜ ಎಂದು ಕರೆಯುವ 22, 23 ವರ್ಷ ಬದುಕಿದ್ದ ತನಿಯ ಅಥವ ಕಾಂತಾರೆ ಎನ್ನುವ ಕರಾವಳಿ ಭಾಗದ ಆದಿವಾಸಿಗಳು ಎನ್ನಬಹುದಾದ ಕೊರಗ ಜನಾಂಗದ ಹುಡುಗ ದೈವತ್ವ ಪಡೆದುಕೊಂಡ ರೋಚಕ ಕಥೆವುಳ್ಳ ಚಿತ್ರ. ಇದರಲ್ಲಿ ಹಾಲಿವುಡ್ -ಬಾಲಿವುಡ್ ಕೋರಿಯೋಗ್ರಾಫರ್ ಹಾಗೂ ನಟ ಸಂದೀಪ್ ಸೋಪರ್ಕರ್ “ಗುಳಿಗ” ದೈವದ ಪಾತ್ರ ನಿಭಾಯಿಸಿದ್ದಾರೆ.

ಇದು ಕೊರಗಜ್ಜನ ಜೊತೆಗೆ ಇರುವ ಗುಳಿಗ . ಮಂಗಳೂರಿನ ಬಳಿ ಇರುವ ನೇತ್ರಾವತಿ ನದಿ ತಟದಲ್ಲಿರುವ “ಕಲ್ಲಾಪು ಬೂರ್ದಗೋಳಿ” ಬಳಿ ಕೊರಗಜ್ಜನ ಜೊತೆ ಗುಳಿಗ ದೈವವೂ ಇದೆ. ಈ ಸನ್ನಿವೇಷಕ್ಕಾಗಿ ಗುಳಿಗನ ಪಾತ್ರವನ್ನು ಗುಳಿಗ ನರ್ತನದ ರೀತಿ ತೋರಿಸಲಾಗಿದ್ದು; ಆ ಪಾತ್ರಕ್ಕೆ ಅಂತರಾಷ್ಟ್ರೀಯ ಮಟ್ಟದ ನ್ರತ್ಯ ಕಲಾವಿದ ಸಂದೀಪ್ ಸೋಪರ್ಕರ್ ಅವರು ಸೂಕ್ತ ಎನಿಸಿತ್ತು. ಅಂದುಕೊಂಡಂತೆ ಅವರ ಅದ್ಭುತ ನರ್ತನ ಚಿತ್ರಕ್ಕೆ ಇನ್ನಿಲ್ಲದ ಕಳೆ ತಂದಿದೆ.


ಈ ಮೊದಲು ಕೊರಗಜ್ಜನ ಬಗ್ಗೆ ಸುಮಾರು 20 ಕ್ಕೂ ಹೆಚ್ಚು ನಿರ್ಮಾಪಕರು ಸಿನಿಮಾ ಮಾಡಲು ಕಳೆದ 7-8 ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ನಾವು ಸಿನಿಮಾ ಕೆಲಸ ಶುರು ಮಾಡುವ ಮೊದಲು ಕೊರಗಜ್ಜ ದೈವದ ಕೋಲ ನಡೆಸಿ ದೈವದ ಅಪ್ಪಣೆ ಕೇಳಿದೆವು. ನಮಗೆ ದೇವರ ಅಪ್ಪಣೆ ಸಿಕ್ಕಮೇಲೆ ಈ ಸಿನಿಮಾ ಮಾಡಲು ಮುಂದಾದೆವು. 12ನೇ ಶತಮಾನದ ಕಥೆ ಇದಾಗಿದ್ದು, ಚಿತ್ರದಲ್ಲಿ ಬುರ್ದಗೋಳಿ ಉತ್ಪತ್ತಿ ಕಲ್ಲು ಎಂಬ ಪ್ರದೇಶದಲ್ಲಿ ಉದ್ಯಾವರ ಅರಸುಗಳ ಕೈಯಿಂದ ಪಂಜಂದಾಯಿಗೆ ಕೊರಗಜ್ಜನು ಅವಳ ರಾಜ್ಯವನ್ನು ಮರಳಿ ದೊರಕಿಸಿಕೊಡಲು ಇತ್ಯರ್ಥ ಮಾಡುತ್ತಾನೆ. ಅಂತಹ ಕಲ್ಲಾಪು ಬೂರ್ದಗೋಳಿ ಯಲ್ಲಿ ಕೊರಗಜ್ಜ ಮತ್ತು ಗುಳಿಗ ದೈವದ ವಾರ್ಷಿಕ ಕೋಲ ಸೇವೆಯ ದಿನದಂದೇ ಗುಳಿಗ- ಕೊರಗಜ್ಜನ ಪ್ರಥಮ ಭೇಟಿಯ ದ್ರಶ್ಯವನ್ನು ಮೂಲ ಕಥೆಯಲ್ಲಿ ದಾಖಲಾಗಿರುವಂತೆ ಸೋಮೇಶ್ವರದಲ್ಲಿ ಶೂಟ್ ಮಾಡಿದ್ದು ಕಾಕತಾಳಿಯವೋ ಪವಾಡವೋ ತಿಳಿದಿಲ್ಲ..! ಎಂದರು.

ನಮಗೆಲ್ಲ ಶೂಟಿಂಗ್ ಸಂದರ್ಭದಲ್ಲಿ ಒಂದಿಷ್ಟು ಅನುಭವ ಆಗಿವೆ. ಈ ಸಿನಿಮಾವನ್ನು ನಾನು ಮಾಡಲಿಲ್ಲ. ಆ ದೈವ ನನ್ನ ಕೈಲಿ ಮಾಡಿಸಿದ್ದಾರೆ. ನಮ್ಮ ಚಿತ್ರದಲ್ಲಿ ಕಳ್ಳು ಮಾರುವ ಮೈರಕ್ಕೆ ಬೈದ್ಯೆದಿ ಪಾತ್ರ ಮುಖ್ಯವಾಗಿದ್ದು, ಈಕೆ ಕೊರಗಜ್ಜನ ಸಾಕು ತಾಯಿ. ಈ ಪಾತ್ರವನ್ನು ನಟಿ ಶ್ರುತಿ ನಿರ್ವಹಿಸಿದ್ದಾರೆ. ಇಂದು ಮಂಗಳೂರು ಕಡೆ ಮನೆ ಮನೆಯಲ್ಲಿ ಕೊರಗಜ್ಜನನ್ನು ಜನ ಆರಾಧಿಸುತ್ತಾರೆ ಎಂದರು.

ಹಾಲಿವುಡ್ ನಟ ಸಂದೀಪ್ ಸೋಪರ್ಕರ್ ಮಾತನಾಡಿ, ‘ಈ ಚಿತ್ರ ನಂಗೆ ಒಳ್ಳೆ ಅನುಭವ ನೀಡಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಒಳ್ಳೆಯ ತಂಡ ಇದಾಗಿದ್ದು ಅದ್ಭುತ ಕೆಲಸ ಮಾಡಿದೆ. ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು. ಈ ಪಾತ್ರ ಮಾಡಿದ್ದು ಖುಷಿ ಇದ್ಲ್ಲೆ. ನಾನು ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದೇನೆ ಎಂದರು.

ನಟಿ ಶ್ರುತಿ ಮಾತನಾಡಿ, ‘ಈ ಸಿನಿಮಾ ನನ್ನ ಮನಸ್ಸಿನಲ್ಲಿ ವಿಷೇಶವಾದ ಸ್ಥಾನ ಪಡೆಯುತ್ತದೆ. ನಾನಿಲ್ಲಿ ಮೈರಕ್ಕೆ ಬೈದ್ಯೆದಿ ಪಾತ್ರ ಮಾಡಿದ್ದೇನೆ. ದೈವದ ಕಥೆ ಅದ್ಭುತವಾಗಿ ಇದ್ದು ಈ ಕಥೆಯನ್ನು ಹೆಕ್ಕಿ ತೆಗೆದ ನಿರ್ದೇಶಕರ ಧೈರ್ಯ ಮೆಚ್ಚಬೇಕು. ಚಿತ್ರಕ್ಕಾಗಿ ನಿರ್ಮಾಪಕರು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಯಾರಿಗೂ ಸಿಗದೆ ಇರುವ ಅವಕಾಶ ಈ ತಂಡಕ್ಕೆ ಸಿಕ್ಕಿದೆ. ಇದರಲ್ಲಿ ಬರುವ ಪ್ರತಿಯೊಬ್ಬರ ಪಾತ್ರ ಸೊಗಸಾಗಿದೆ ನಿರ್ದೇಶಕರು ಅಷ್ಟು ತಯಾರಿ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ.

ಮೈರಕ್ಕೆ ಬೈದ್ಯೆದಿ ಪಾತ್ರ ಕೊರಗಜ್ಜ ಸಾಕು ತಾಯಿ. ಇದರಲ್ಲಿ ಕೊರಗಜ್ಜಗೆ ತನಿಯಾ/ ಕಾಂತಾರೆ ಎಂಬ ಹೆಸರಿದೆ. ನಾನು ಕಳ್ಳು ಮಾರುವವಳ ಪಾತ್ರ ಮಾಡುತ್ತಿರುತ್ತೇನೆ. ಇದರಲ್ಲಿ ತಾಯಿ ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ. ನಮ್ಮ ಜೊತೆ ಸಾಕಷ್ಟು ರಂಗಭೂಮಿ ಕಲಾವಿದರು ಇದರಲ್ಲಿ ನಟನೆ ಮಾಡಿದ್ದಾರೆ ಎಂದರು.

ನಟಿ ಭವ್ಯ ‘ಈ ಚಿತ್ರದಲ್ಲಿ ನಾನು ವಿಷೇಶವಾದ ಪಾತ್ರ ಮಾಡಿದ್ದು, ಶೂಟಿಂಗ್ ಮಾಡುವಾಗ ಹಲವಾರು ಮಿರಾಕಲ್ ನಡೆಯುತ್ತಿತ್ತು. ನದಿ ಹತ್ತಿರ ಶೂಟಿಂಗ್ ನಡೆಯುವಾಗ, ನಿರ್ದೇಶರು ಅಂದುಕೊಂಡಿದ್ದು ನೆರವೇರಿತು. ಅದು ದೈವದ ಆಶೀರ್ವಾದ ಎಂದರು ಭವ್ಯ.

ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮಾತನಾಡಿ, ‘ತುಳು ನಾಡ ಜನರ ಸಂಸ್ಕೃತಿ ತೋರಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಸೋಮೇಶ್ವರ, ಉಲ್ಲಾಳ, ಮಡಂತ್ಯಾರ್, ಪೇರೂರು, ಅಡ್ಯಾರ್, ಎರ್ಮಾಯ್ ,ಸಾರಪಲ್ಲ, ಅರ್ಕುಳ, ಮಂಗಳೂರು ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರವನ್ನು ಮೇ ನಲ್ಲಿ ರಿಲೀಸ್ ಮಾಡುವ ಯೋಚನೆ ಇದೆ’ ಭರತ್ ಸೂರ್ಯ ನಾಯಕರಾಗಿ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಮುಗಿಯುವರೆಗೂ ಅವರು ಕಾಲಿಗೆ ಚಪ್ಪಲಿ ಹಾಕಿರಲಿಲ್ಲ. ಇನ್ನು ನಾಯಕಿಯಾಗಿ ವೃತಿಕಾ ಅಭಿನಯಿಸಿದ್ದಾರೆ. ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಿಸಲಾಗುತ್ತಿದೆ. ಧ್ರತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗಿದೆ.

Categories
ಸಿನಿ ಸುದ್ದಿ

ಕುತೂಹಲದ ಕಬ್ಜ ರಿಲೀಸ್ ಯಾವಾಗ? ಜನವರಿ 24ಕ್ಕೆ ಬಿಗ್ ಅನೌನ್ಸ್ ಮೆಂಟ್ ಮಾಡ್ತಾರೆ ಆರ್.ಚಂದ್ರು…


ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿರುವ, ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಪ್ರಪಂಚದಾದ್ಯಂತ ನಿರೀಕ್ಷೆ ಹುಟ್ಟು ಹಾಕಿದೆ. ಇದು ಕನ್ನಡ ಚಿತ್ರರಂಗದ ಹೆಮ್ಮೆ, ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದೆ.


ಭಾರತ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿಯೂ ಕಬ್ಜ ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಅಲ್ಲದೇ ಮೊನ್ನೆ ನಡೆದ ಐಎಂಡಿಬಿ 2023ರ ನಿರೀಕ್ಷಿತ ಸಿನಿಮಾಗಳ ಸರ್ವೆ ಪಟ್ಟಿಯಲ್ಲಿ ಕನ್ನಡಿಗರ ಕಬ್ಜ ಸಿನಿಮಾ ಸ್ಥಾನ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಯಶಸ್ಸಿನ ಬಳಿಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಲು ಈ ವರ್ಷ ಕಬ್ಜ ಸಜ್ಜಾಗಿದೆ.

ಕಬ್ಜ ಚಿತ್ರ ಬಿಡುಗಡೆಯಾವಾಗ ಎಂಬುದು ಪ್ರತಿಯೊಬ್ಬರ ಮಾತಾಗಿತ್ತು. ಈ ನಿಟ್ಟಿನಲ್ಲಿ ಇದೇ ಜನವರಿ 24ರಂದು ದೊಡ್ದದೊಂದು ವಿಷಯವನ್ನು ಹಂಚಿಕೊಳ್ಳಲಿದೆ ಕಬ್ಜ ಟೀಮ್.
ಇದೇ ಮೊಟ್ಟ ಮೊದಲ ಬಾರಿಗೆ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ಕಬ್ಜ ಸಿನಿಮಾ ತೆರೆಕಾಣುತ್ತಿದೆ.

ಇಂಥದ್ದೊಂದು ಕನ್ನಡ ಸಿನಿಮಾ ಬೃಹತ್ ಮಟ್ಟದಲ್ಲಿ ಮೂಡಿ ಬರುತ್ತಿರೋದು ಸ್ಯಾಂಡಲ್ ವುಡ್ ಗೆ ಗೌರವ. ಇಂಥ ಪ್ರಯತ್ನಗಳಿಗೆ ಕನ್ನಡಿಗರು ಯಾವಾಗಲು ಪ್ರಶಂಶಿಸುತ್ತಾರೆ.

ಈಗ ಕಬ್ಜ ರಿಲೀಸ್ ಡೇಟ್ ಅನೌನ್ಸ್ ಮಾಡಿದರೆ ಕನ್ನಡಿಗರು ಮಾತ್ರವಲ್ಲದೆ. ಭಾರತೀಯ ಚಿತ್ರರಂಗವೇ ಸಂತೋಷ ಪಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಕಾತುರತೆಗೆ ಬೇಗ ಚಂದ್ರು ಮತ್ತು ಟೀಂ ಡೇಟ್ ತಿಳಿಸಲಿ ಹಾಗೂ ಕಬ್ಜ ಚಿತ್ರವು ಮತ್ತೊಮ್ಮೆ ಗೆದ್ದು ಕನ್ನಡ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಲಿ ಎಂಬುದು ಪ್ರತಿಯೊಬ್ಬ ಕನ್ನಡಿಗರ ಆಶಯ.

Categories
ಸಿನಿ ಸುದ್ದಿ

ಲವ್ ಬರ್ಡ್ಸ್ ಪರ ವಾದಿಸಲು ಬಂದ ಸಂಯುಕ್ತ ಹೊರನಾಡು…

ತಾರಾ ಜೋಡಿ ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸಿರುವ “ಲವ್ ಬರ್ಡ್ಸ್” ಚಿತ್ರದಲ್ಲಿ ನಟಿ ಸಂಯುಕ್ತ ಹೊರನಾಡು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯಾರಿಗೂ ಅಂಜದ ದಿಟ್ಟ ಹುಡುಗಿಯಾಗಿ, ತೆಗೆದುಕೊಂಡ ಎಲ್ಲಾ ಕೇಸ್ ಗಳಲ್ಲೂ ಯಶಸ್ಸು ಗಳಿಸುವ ಯಶಸ್ವಿ ಲಾಯರ್ ಆಗಿ ಅಭಿನಯಿಸಿರುವ ಸಂಯುಕ್ತ ಹೊರನಾಡು ಪಾತ್ರದ ಹೆಸರು ಮಾಯಾ. ಈಕೆ ನಾಯಕ ಹಾಗೂ ನಾಯಕಿ ದೀಪಕ್ – ಪೂಜಾ ಇಬ್ಬರಿಗೂ ಗೆಳತಿ ಕೂಡ.

ಯಂಗ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತ ಹೊರನಾಡು ಅವರ ಪಾತ್ರಕ್ಕೆ ಸರಿಹೊಂದುವ ಕಾಸ್ಟ್ಯೂಮ್ಸ್ ಗಳನ್ನು ಬಳಸಿಕೊಳ್ಳಲಾಗಿದೆ ಹಾಗೂ ಮೊದಲ ಬಾರಿಗೆ ಸಂಯುಕ್ತ ಹೊರನಾಡು ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.

ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಮೊದಲ ಹಾಡು ಜನವರಿ 22 ರಂದು ಬಿಡುಗಡೆಯಾಗಲಿದೆ.

.

Categories
ಸಿನಿ ಸುದ್ದಿ

ಕೋಳಿ ಎಸ್ರು ಸಿನಿಮಾಗೆ ಪ್ರಶಸ್ತಿ ಸುರಿಮಳೆ: ‘ಅಮ್ಮಚ್ಚಿಯೆಂಬ ನೆನಪು’ ತಂಡದ ಮತ್ತೊಂದು ಚಿತ್ರ

ನಾಲ್ಕು ವರ್ಷಗಳ ಹಿಂದೆ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ರಾಷ್ಟೀಯ, ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದಿತ್ತು. ಅಲ್ಲದೆ ಥಿಯೇಟರ್‌ನಲ್ಲಿ ರಿಲೀಸ್ ಕೂಡ ಆಗಿ ಯಶಸ್ವಿ 31 ದಿನಗಳ ಕಾಲ ಪ್ರದರ್ಶನವಾಗಿತ್ತು. ಇದೀಗ ಅದೇ ತಂಡದಿಂದ ‘ಕೋಳಿ ಎಸ್ರು’ ಎಂಬ ವಿಭಿನ್ನ ಸಿನಿಮಾ ಸಿದ್ಧವಾಗಿದೆ. ಈಗಾಗಲೇ ರಾಷ್ಟ್ರೀಯ, ಅಂತರಾಷ್ಟ್ರೀಯ ಫಿಲ್ಮ್ ಪೆಸ್ಟಿವೆಲ್‌ಗಳಲ್ಲಿ ಪ್ರದರ್ಶನಗೊಂಡ ‘ಕೋಳಿ ಎಸ್ರು’ ಪ್ರಶಂಸೆಯ ಜೋತೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ನಿರ್ದೇಶಕಿ ಚಂಪಾ ಶೆಟ್ಟಿ ‘ನಮ್ಮ ಮೊದಲ ಪ್ರಯತ್ನದ ‘ಅಮ್ಮಚ್ಚಿಯಂಬ ನೆನಪು’ ಚಿತ್ರಕ್ಕೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ನಂತರ ಮತ್ತೊಂದು ಸಿನಿಮಾ ಮಾಡಲು ಯೋಚನೆ ಮಾಡಿ ಸಾಕಷ್ಟು ಕಥೆಗಳನ್ನು ಹುಡುಕುತಿದ್ದೆ. ಆಗ ನಾನು ನಟಿಸಿದ್ದ ನಾಟಕದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಲು ಮುಂದಾದೆ. ಈ ಚಿತ್ರವನ್ನು ಕಾ.ತಾ ಚಿಕ್ಕಣ್ಣ ಅವರು ಬರೆದ ‘ಹುಚ್ಚೇರಿಯ ಎಸರಿನ ಪ್ರಸಂಗ’ ಕಥೆಯನ್ನು ಆಧರಿಸಿ ಮಾಡಲಾಗಿದೆ. ಇದು ನಾಟಕವಾಗಿಯೋ ಪ್ರದರ್ಶನ ಕಂಡು ಯಶಸ್ವಿಯಾಗಿತ್ತು. 80ರ ದಶಕದ ಈ ಕಥೆ ತೆಗೆದುಕೊಂಡು ಇಂದಿನ ಸಮಾಜಕ್ಕೆ ಒಗ್ಗುವಂತೆ ಮೂಲ ಕತೆಗೆ ದಕ್ಕೆ ಆಗದಂತೆ ಸಿನಿಮಾ ಮಾಡಲಾಗಿದೆ.

ಇದರಲ್ಲಿ ಒಂದು ಹೆಣ್ಣು ಎನೆಲ್ಲಾ ಕಷ್ಟ ಅನುಭವಿಸಿ ಗೆಲ್ಲುತ್ತಾಳೆ ಎಂಬುದನ್ನು ತೋರಿಸಲಾಗಿದೆ. ಹಳ್ಳಿ ಬ್ಯಾಗರೌಂಡ್‌ನಲ್ಲಿ ಚಿತ್ರವಿದ್ದು, ಕಲಾತ್ಮಕವಾಗಿ ಮಾಡಲಾಗಿದೆ. ಇದೀಗ ಈ ಸಿನಿಮಾ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಖುಷಿ ಇದೆ. ಈ ಚಿತ್ರ ನಿರ್ಮಾಣಕ್ಕೆ ಮುನಿವೆಕಟಪ್ಪನವರು ಸೇರಿದಂತೆ ಸಾಕಷ್ಟು ಜನ ಕೈ ಜೋಡಿಸಿದ್ದಾರೆ’ ಎಂದು ಹೇಳಿದರು.

ವೇದಿಕೆಯಲ್ಲಿ ಕಥೆಗಾರ ಕಾ.ತಾ ಚಿಕ್ಕಣ್ಣ ‘ಕಥೆಯಲ್ಲಿ ಹಳ್ಳಿಯ ಹೆಣ್ಣು ಮಗಳೋಬ್ಬಳು ಬಡತನದಿಂದ ಊರಲ್ಲಿ ಯಾರ ಮನೆಯಲ್ಲಿ ಕೋಳಿ ಸಾರ್ ಮಾಡಿದರೂ, ಎಸರಿಗಾಗಿ ಕಾಯ್ದು ತೆಗೆದುಕೊಂಡು ಬರುತಿರುತ್ತಾಳೆ. ತನ್ನ ಧಾರಿಯಲ್ಲಿಯೇ ಮಗಳು ಕೂಡ ಸಾಗುತ್ತಿರುವುದನ್ನು ಕಂಡು ಹೇಗೆ ಬದಲಾದಳು ಎಂಬ ಕತೆ ಇದೆ. ಮೂಲ ಕತೆಗೆ ದಕ್ಕೆ ಆಗದಂತೆ ಚಂಪಾ ಸುಂದರವಾಗಿ ಸಿನಿಮಾ ಮಾಡಿದ್ದು, ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅದರಲ್ಲೂ ಈ ಕತೆ ನಾಟಕವಾಗಿ ಪ್ರದರ್ಶನ ಕಂಡಾಗ ಹುಚ್ಚೇರಿ ಪಾತ್ರಕ್ಕೆ ಪ್ರಶಸ್ತಿ ಬಂದಿತ್ತು. ಈಗ ಚಿತ್ರದಲ್ಲೂ ಆ ಪಾತ್ರಕ್ಕೆ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ’ ಎಂದರು. ಅಂದಂಗೆ ‘ಕೋಳಿ ಎಸ್ರು’ ಸಿನಿಮಾ ಈಗಾಗಲೇ ‘ನ್ಯೂಯಾರ್ಕ್ ಇಂಡಿಯನ್ ಫಿಲ್ಮ ಫೆಸ್ಟಿವಲ್’ಗೆ ಆಯ್ಕೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಇತ್ತೀಚೆಗೆ ಔರಂಗಾಬಾದ್‌ನಲ್ಲಿ ನಡೆದ ಪ್ರತಿಷ್ಠಿತ ‘ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಅಲ್ಲದೆ ಇಂಡಿಯನ್ ಕಾಂಪಿಟೆಷನ್ ಸ್ಪರ್ದೆಯಲ್ಲಿ ಇನ್ನೋಳಿದ ಎಂಟು ಚಿತ್ರಗಳೊಂದಿಗೆ ಸ್ಪರ್ದಿಸಿ ಎರಡು ಪ್ರಶಸ್ತಿಗಳನ್ನು ‘ಕೋಳಿ ಎಸ್ರು’ ಬಾಚಿಕೊಂಡಿದೆ.

ಹೌದು ಔರಂಗಾಬಾದ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ ಮತ್ತು ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಬಾಲ ನಟಿ ಅಪೇಕ್ಷಾ ಚೋರನಹಳ್ಳಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ಸಾಕಷ್ಟು ಚಿತ್ರೋತ್ಸಗಳಿಗೆ ಸಿನಿಮಾವನ್ನು ಕಳಿಸುವ ಜೊತೆಗೆ ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ತಂಡ ತಯಾರಿ ನಡೆಸಿದೆ. ಪತ್ರಿಕಾಗೋಷ್ಠಿಯಲ್ಲಿ ನಟಿ ಅಕ್ಷತಾ ಪಾಂಡವಪುರ ಹಾಗೂ ಚಿತ್ರದ ಸಂಕಲನಕಾರ ಹರೀಶ್ ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಮೂವರು ವಿಶೇಷ ವ್ಯಕ್ತಿಗಳಿಗೆ ಈ ಬಾರಿ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ವಿಶೇಷ ಪ್ರಶಸ್ತಿ:

ಈ ಬಾರಿ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಈ ಬಾರಿ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ತಾರಾ ಅನುರಾಧಾ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸುತ್ತಿದೆ…

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿ. ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಕಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಕಳೆದ 20 ವರ್ಷಗಳಿಂದ ಚಲನಚಿತ್ರ ಪತ್ರಕರ್ತರಿಗೆ ಮತ್ತು ಚಿತ್ರರಂಗದ ಗಣ್ಯರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಸುಧೀಂದ್ರ ಅವರ ನಂತರ ಸುಧೀಂದ್ರ ವೆಂಕಟೇಶ್ ಈ ಸಂಪ್ರದಾಯವನ್ನು ಮುಂದುವರೆಸಿದ್ದು, 2022ನೇ ಸಾಲಿನ ವಾರ್ಷಿಕ 11 ಪ್ರಶಸ್ತಿಗಳನ್ನು ನೀಡುವುದರ ಜೊತೆಗೆ ಈ ಬಾರಿ ಇನ್ನೂ ಮೂರು ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ.
2022ರಲ್ಲಿ ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರಗಳೆಂದರೆ ಅದು ‘ಕೆಜಿಎಫ್ 2’ ಮತ್ತು ‘ಕಾಂತಾರ’. ಈ ಎರಡೂ ಚಿತ್ರಗಳನ್ನು ನಿರ್ಮಿಸಿ, ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಹಾರಿಸಿದ ಹೊಂಬಾಳೆ ಫಿಲಂಸ್ನ ಶ್ರೀ ವಿಜಯ್ ಕಿರಗಂದೂರು ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.


ಕಳೆದ ವರ್ಷ ಬಿಡುಗಡೆಯಾದ ‘ಗಂಧದ ಗುಡಿ’ಯನ್ನು ಒಂದು ಚಿತ್ರ ಎನ್ನುವುದಕ್ಕಿಂತ ಅದ್ಭುತವಾದ ಅನುಭವ ಎಂದರೆ ತಪ್ಪಿಲ್ಲ. ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತನ್ನು ತಮ್ಮ ಕಣ್ಣುಗಳ ಮೂಲಕ ಕನ್ನಡಿಗರಿಗೆ ತೋರಿಸಿದವರು ದಿವಂಗತ ಪುನೀತ್ ರಾಜಕುಮಾರ್. ಇಂಥದ್ದೊಂದು ಅಪೂರ್ವವಾದ ಅನುಭವವನ್ನು ಕಟ್ಟಿಕೊಟ್ಟ ಪುನೀತ್ ಮತ್ತು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ಪ್ರಶಸ್ತಿ ಸಂದಾಯವಾಗಲಿದೆ.


ಇನ್ನು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ ಅನೂರಾಧ ಅವರ ಅಭಿನಯ, ಪಾತ್ರಗಳು ಮತ್ತು ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಸ್ಮರಿಸಿ, ಅವರಿಗೂ ಈ ಬಾರಿ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.


ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಸ್ಥೆಯ ಸ್ಥಾಪಕರಾದ ಡಿ.ವಿ. ಸುಧೀಂದ್ರ ಅವರ ಜನ್ಮದಿನದಂದು (ಜನವರಿ 25) ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಂಜೆ 5ಕ್ಕೆ ಆಯೋಜಿಸಲಾಗಿದೆ.

Categories
ಸಿನಿ ಸುದ್ದಿ

ನಟ್ವರ್ ಲಾಲ್ ಹೊಸ ಆಟ ಶುರು: ನಿರೀಕ್ಷೆ ಹೆಚ್ಚಿಸಿದ ಟೀಸರ್- ಇದು ಲವ ನಿರ್ದೇಶನದ, ತನುಷ್ ಚಿತ್ರ…

ಈ ಹಿಂದೆ “ನಂಜುಂಡಿ ಕಲ್ಯಾಣ”, “ಮಡಮಕ್ಕಿ” ಚಿತ್ರಗಳಲ್ಲಿ ಅಭಿನಯಿಸಿದ್ದ ನಟ, ನಿರ್ಮಾಪಕ ತನುಷ್ ಶಿವಣ್ಣ ಈಗ “ನಟ್ವರ್ ಲಾಲ್” ಚಿತ್ರದಲ್ಲಿ ನಟಿಸಿದ್ದಾರೆ.

“ಅಯೋಧ್ಯಾಪುರ” ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ವಿ.ಲವ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ “ನಟ್ವರ್ ಲಾಲ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ.. ಕುಣಿಗಲ್ ಶಾಸಕರಾದ ರಂಗನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ ಮ ಹರೀಶ್, ಮಾಸ್ತಿ ಸೇರಿದಂತೆ ಅನೇಕರು ಈ ವೇಳೆ ಇದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಲವ, “ನಟ್ವರ್ ಲಾಲ್” ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ಹಾಗೂ ಆಕ್ಷನ್ ಜಾನರ್ ಚಿತ್ರವಾಗಿದ್ದು, ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆ ಇಟ್ಟುಕೊಂಡೆ ಕಥೆ ಮಾಡಿದ್ದೀನಿ. ಉದಾಹರಣೆಗೆ ಮೆಡಿಕಲ್ ಮಾಫಿಯಾ, ಪೊಲಿಟಿಕಲ್ ಮಾಫಿಯಾ ಎಲ್ಲಾ ಇದೆ. ಬೆಂಗಳೂರು, ಮೈಸೂರು ಸಕಲೇಶಪುರ, ಮಂಗಳೂರು, ಸುತ್ತಮುತ್ತ 65 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಮ್ಮ ಜನರನ್ನು ಹ್ಯಾಕರ್ಸ್ ಹೇಗೆಲ್ಲಾ ವಂಚಿಸುತ್ತಾರೆ, ಎಂಬುದು ಸಹ ಚಿತ್ರದಲ್ಲಿದೆ. 2019ರಲ್ಲೇ ಚಿತ್ರ ಪ್ರಾರಂಭವಾಗಿದ್ದರೂ ಕೋವಿಡ್ ನಿಂದಾಗಿ ತಡವಾಯಿತು ಎಂದು ಹೇಳಿದರು.

ಕ್ರಿಮಿನಲ್ ಮಿಥಿಲೇಶ್ ಕುಮಾರ್ ಶ್ರೀವಾತ್ಸವ. ಈತ ಭಾರತದ ಸಾಲವನ್ನೆಲ್ಲ ತೀರಿಸುತ್ತೇನೆಂದು ಹೇಳಿದ್ದನಂತೆ. ಈ ವಿಷಯ ಸೇರಿದಂತೆ ಅನೇಕ ಕುತೂಹಲಕಾರಿ ಅಂಶಗಳು ನಮ್ಮ ಚಿತ್ರದ ಕಥೆಯಲ್ಲಿ ಇರುತ್ತದೆ ಎಂದು ನಿರ್ದೇಶಕ ಲವ ಚಿತ್ರದ ಕಥೆ ಬಗ್ಗೆ ಹೇಳಿದಾಗ, ನನಗೆ ತುಂಬಾ ಇಂಪ್ರೆಸ್ ಆಯ್ತು. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಧರ್ಮವಿಶ್ ಅವರ ಸಾರಥ್ಯದಲ್ಲಿ ರೀರೆಕಾರ್ಡಿಂಗ್ ಅದ್ಭುತವಾಗಿ ಬಂದಿದೆ. ಛಾಯಾಗ್ರಾಹಕ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಸುಂದರವಾಗಿದೆ. ನಿರ್ದೇಶಕ ಲವ ಅವರಂತು ಬ್ಯೂಟಿಫುಲ್‌ ಫಿಲಂ ಮೇಕರ್. ತಾನು ಅಂದುಕೊಂಡದ್ದು ಸಿಗುವವರೆಗೂ ಬಿಡುವವರಲ್ಲ ಎಂದು ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ಹೇಳಿದರು.

ಇದೊಂದು ಉತ್ತಮ ಕಥೆಯುಳ್ಳ ಚಿತ್ರ. ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು ಛಾಯಾಗ್ರಾಹಕ ವಿಲಿಯಂ ಡೇವಿಡ್‌.

ಸಂಗೀತ ನಿರ್ದೇಶಕ ಧರ್ಮ ವಿಶ್ ಮಾತನಾಡಿ, ಚಿತ್ರದಲ್ಲಿ ೨ ಹಾಡುಗಳಿವೆ. ಎರಡು ಹಾಡುಗಳು ಅದ್ಭುತವಾಗಿದೆ‌‌‌ ಎಂದರು.

ಮೊದಲ ಬಾರಿಗೆ ಸೋಷಿಯಲ್ ವರ್ಕರ್ ಪಾತ್ರ ಮಾಡಿದ್ದೇನೆ. ಇಲ್ಲಿ ನನ್ನ ಪಾತ್ರದ ಹೆಸರು ನಂದಿನಿ. ತನುಷ್ ಸಿನಿಮಾ ಬಿಟ್ಟು ಬೇರೇನೂ ಯೋಚಿಸುವವರಲ್ಲ. ಅವರಿಗೆ ಶುಭವಾಗಲಿ. ಇದು ನನ್ನ ಎರಡನೇ ಪ್ಯಾನ್ ಇಂಡಿಯಾ ಚಿತ್ರ ಎಂದರು ನಾಯಕಿ ಸೋನಾಲ್ ಮೊಂತೆರೊ.

ತನುಷ್ ಒಬ್ಬ ಅತ್ಯುತ್ತಮ ಸ್ನೇಹಿತ. ಈ ಸಲ ಯಶಸ್ಸು ಕಾಣಲೇಬೇಕೆಂದು ನಿರ್ಧರಿಸಿ ತುಂಬಾ ಪ್ರಯತ್ನ ಹಾಕಿದ್ದಾರೆ. ಇದು ಎಲ್ಲಾ ವರ್ಗದವರೂ ಇಷ್ಟಪಡುವಂಥ ಚಿತ್ರ ಎಂದು ನಟ ರಾಜೇಂದ್ರ ಕಾರಂತ್ ಹೇಳಿದರು. ಉಳಿದಂತೆ ಹರಿಣಿ, ವಿಜಯ್ ಚೆಂಡೂರ್, ಕಾಕ್ರೋಚ್ ಸುಧಿ, ಕಾಂತರಾಜ್ ಕಡ್ಡಿಪುಡಿ ಚಿತ್ರದ ಬಗ್ಗೆ ಮಾತನಾಡಿದರು. ಅಲ್ಲದೆ ಯಶ್ ಶೆಟ್ಟಿ, ರಾಜೇಶ್ ನಟರಂಗ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಧೀರ ಭಗತ್ ರಾಯ್ ಎಂಬ ರಾಜಕೀಯ ಚಿತ್ರ: ಗಟ್ಟಿ ಕಥೆ ಗುಣದ ಸಿನಿಮಾ

ಕರ್ಣನ್.ಎಸ್ ನಿರ್ದೇಶನದಲ್ಲಿ ಮೂಡಿರುವ ಪೊಲಿಟಿಕಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರ ‘ಧೀರ ಭಗತ್ ರಾಯ್’. ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟ ಕಥೆ ಒಳಗೊಂಡ ಈ ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ರಾಕೇಶ್ ದಳವಾಯಿ ಮತ್ತು ನಾಯಕಿಯಾಗಿ ಸುಚರಿತಾ ಸಹಾಯರಾಜ್ ನಟಿಸುತ್ತಿದ್ದಾರೆ. ಟೀಸರ್ ಮೂಲಕ ಗಮನ ಸೆಳೆದ ಚಿತ್ರತಂಡ ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಕೋರ್ಟ್ ಸೀನ್ ಸೆರೆ ಹಿಡಿಯಲಾಗುತ್ತಿದ್ದು, ಇದೇ ವೇಳೆ ಚಿತ್ರತಂಡ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.

ನಿರ್ದೇಶಕ ಕರ್ಣನ್. ಎಸ್ ಮಾತನಾಡಿ, ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಜೀವಾಳ ಆಗಿರುವ ಕೋರ್ಟ್ ಸೀನ್ ಸೆರೆ ಹಿಡಿಯಲಾಗುತ್ತಿದೆ. ಆರು ದಿನಗಳಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಇದೊಂದು ಪೊಲಿಟಿಕಲ್ ಸಿನಿಮಾ. ನಮ್ಮ ನೆಲಮೂಲದ ಕಥೆ ಇದು. ಯಾರೂ ಕೂಡ ಇವತ್ತಿನವರೆಗೆ ಟಚ್ ಮಾಡದ ಸ್ಟೋರಿ ಚಿತ್ರದಲ್ಲಿದೆ. ಇದರಲ್ಲಿ ಭೂ ಸುಧಾರಣೆ ಕಾಯ್ದೆ ಜೊತೆಗೆ ಪ್ರಿವೆಂಶನ್ ಆಫ್ ಎಸ್ ಸಿ ಎಸ್ ಟಿ ಅಲ್ಟ್ರಾಸಿಟಿ ಆ್ಯಕ್ಟ್ 1989 ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೇನೆ.

ಈ ಸಿನಿಮಾ ಸಮಾಜದಲ್ಲಿ ತುಂಬಾ ಇಂಪ್ಯಾಕ್ಟ್ ಕ್ರಿಯೇಟ್ ಮಾಡಲಿದೆ. ಕಂಟೆಂಟ್ ಗೋಸ್ಕರ ಎರಡು ವರ್ಷ ಎಫರ್ಟ್ ಹಾಕಿದ್ದೇನೆ. ಸಿನಿಮಾ ಕಂಟೆಂಟ್ ನೋಡಿ ಬೇರೆ ಭಾಷೆಯ ವಿತರಕರು ಕೂಡ ಆಫರ್ ನೀಡಿದ್ದಾರೆ. ಹಿಂದಿಯ ಪ್ರತಿಷ್ಠಿತ ಕಂಪನಿ ಕೂಡ ಈ ಸಿನಿಮಾ ಕಂಟೆಂಟ್ ನೋಡಿ ಇಂಪ್ರೆಸ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರುವ ಸಾಧ್ಯತೆ ಇದೆ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ನಾಯಕ ನಟ ರಾಕೇಶ್ ದಳವಾಯಿ ಮಾತನಾಡಿ 2014ರಿಂದ ರಂಗಭೂಮಿಯಲ್ಲಿ ಸಕ್ರಿಯನಾಗಿದ್ದೇನೆ. ಚಿತ್ರದಲ್ಲಿ ಲಾಯರ್ ಪಾತ್ರವನ್ನು ಮಾಡುತ್ತಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದೇನೆ. ಕೋರ್ಟ್ ಸೀನ್ ಗಾಗಿ ಸಾಕಷ್ಟು ರಿಹರ್ಸಲ್ ಮಾಡಿದ್ದೇನೆ. ಲಾಯರ್ ಗಳು ಹೇಗೆ ವಾದ ಮಾಡುತ್ತಾರೆ, ಮ್ಯಾನರಿಸಂ ಎಲ್ಲವನ್ನು ನೋಡಿ, ಪ್ರೊಫೆಶನಲ್ ಲಾಯರ್ ಗಳಿಂದ ಒಂದಿಷ್ಟು ತಿಳಿದುಕೊಂಡು ಈ ಪಾತ್ರ ಮಾಡುತ್ತಿದ್ದೇನೆ. ಪ್ರಿ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಆರು ದಿನದ ಚಿತ್ರೀಕರಣ ಬಾಕಿ ಇದೆ. ಮುಂದಿನ ತಿಂಗಳು ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಮಾರ್ಚ್ ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯೆತೆ ಇದೆ ಎಂದರು.

ನಾಯಕಿ ಸುಚರಿತಾ ಸಹಾಯರಾಜ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಚಿತ್ರದಲ್ಲಿ ಸಾವಿತ್ರಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಾವಿತ್ರಿ ತುಂಬಾ ಗಟ್ಟಿಗಿತ್ತಿ ಮಹಿಳೆ. ಒಬ್ಬ ಮಹಿಳೆ ಮನಸ್ಸು ಮಾಡಿದ್ರೆ ಸಮಾಜದಲ್ಲಿ ಏನು ಬೇಕಿದ್ರು ಸಾಧಿಸಬಹುದು ಎಂಬ ಸ್ಪೂರ್ತಿ ತುಂಬುವ ಮಹಿಳೆ ಪಾತ್ರ. ಇಂತಹ ಪಾತ್ರವನ್ನು ನೀಡಿದಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಹೇಳುತ್ತೇನೆ. ಪಾತ್ರಕ್ಕೆ ನನ್ನ ಸಂಪೂರ್ಣ ಎಫರ್ಟ್ ಹಾಕುತ್ತಿದ್ದೇನೆ, ಚಿತ್ರದ ಹಿರಿಯ ಕಲಾವಿದರು ಕೂಡ ನನಗೆ ನಟನೆ ವಿಚಾರದಲ್ಲಿ ತುಂಬಾ ಕಲಿಸಿಕೊಡುತ್ತಿದ್ದಾರೆ ಎಂದು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಶರತ್ ಲೋಹಿತಾಶ್ವ ಖಳನಟನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಪ್ರವೀಣ್ ಹಗಡೂರು, ಮಠ ಕೊಪ್ಪಳ, ಸುಧೀರ್ ಕುಮಾರ್ ಮುರೊಳ್ಳಿ, ಶಶಿಕುಮಾರ್, ಫಾರೂಕ್ ಅಹ್ಮದ್, ಚಂದ್ರಿಕಾ ಗೌಡ, ನಯನ, ಸಿದ್ದಾರ್ಥ್ ಗೋವಿಂದ್, ಅನಿಲ್ ಹೊಸಕೊಪ್ಪ, ಪ್ರೊಫೇಸರ್ ಹರಿರಾಮ್, ಪಿ ಮೂರ್ತಿ, ಹೆಮಾನುಷ್ ಗೌಡ, ರಮೇಶ್ ಕುಮಾರ್, ಸಂದೇಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಶ್ರೀ ಓಂ ಸಿನಿ ಎಂಟಟೈನರ್ಸ್ ಹಾಗೂ ವೈಟ್ ಲೋಟಸ್ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರ್ತಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಎಂ.ಸೆಲ್ವಂ ಜಾನ್ ಛಾಯಾಗ್ರಹಣ, ವಿಶ್ವ ಎನ್.ಎಂ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕಡಲ ತೀರದಲ್ಲಿ ಮಧುರ ಗೀತೆ: ರಿಲೀಸ್ ಗೆ ಸಿನಿಮಾ ರೆಡಿ..

ಕನ್ನಡದಲ್ಲೀಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳೇ ಹೆಚ್ಚಾಗಿ ಜನಪ್ರಿಯಾಗುತ್ತಿದೆ. ಅಂತಹ ಉತ್ತಮ ಕಂಟೆಂಟ್ ಇರುವ ಮತ್ತೊಂದು ಕನ್ನಡ ಚಿತ್ರ “ಕಡಲ ತೀರದ ಭಾರ್ಗವ”. ವಿಭಿನ್ನ ಕಥೆಯುಳ್ಳ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ದವಾಗಿದೆ.

ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ನಿರ್ಮಿಸಿರುವ, ಪನ್ನಗ ಸೋಮಶೇಖರ್ ನಿರ್ದೇಶಿಸಿರುವ ಈ ಚಿತ್ರದ ” ಮಧುರ ಮಧುರ” ಹಾಡು ಇತ್ತೀಚೆಗೆ ಎ ಆರ್ ಸಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

ಅನಿಲ್ ಸಿ ಜೆ ಸಂಗೀತ ನೀಡಿರುವ ಈ ಹಾಡನ್ನು ವಾರಿಜಾಶ್ರೀ ಹಾಗೂ ಅನಿಲ್ ಸಿ ಜೆ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಈ ಹಾಡು ಜನಪ್ರಿಯವಾಗಿದ್ದು, ಈಗಾಗಲೇ ಐದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.


ಆರ್ಯನ್ ರೋಷನ್ ನೃತ್ಯ ನಿರ್ದೇಶಿಸಿರುವ “ಮಧುರ ಮಧುರ” ಹಾಡಿಗೆ‌ ನಾಯಕ ಭರತ್ ಗೌಡ ಹಾಗೂ ನಾಯಕಿ ಶೃತಿ ಪ್ರಕಾಶ್ ಹೆಜ್ಜೆ ಹಾಕಿದ್ದಾರೆ. ಅನಿಲ್ ಸಿ ಜೆ ಸಂಗೀತಕ್ಕೆ ಹಾಗೂ ಕೀರ್ತನ ಪೂಜಾರಿ ಅವರ ಛಾಯಾಗ್ರಹಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸದ್ಯದಲ್ಲೇ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಲಿದೆ. ಆನಂತರ ಟ್ರೇಲರ್ ಬರಲಿದ್ದು, ಟ್ರೇಲರ್ ನಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗುವುದೆಂದು ನಿರ್ಮಾಪಕರು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಜೂಮ್ ಕಾಲ್ ನಲ್ಲಿ ರೇಣುಕಾ! ಹೊಸ ಆನ್ಲೈನ್ ಟೀಚರ್…

ಹೊಸಬರು ಮಾಡುತ್ತಿರುವ “ಜೂಮ್ ಕಾಲ್” ಚಿತ್ರದಲ್ಲಿ ಆನ್ ಲೈನ್ ಶಿಕ್ಷಕಿಯಾಗಿ ರೇಣುಕಾ ಅಭಿನಯಿಸಿದ್ದಾರೆ.
ವಿಷ್ಣುವರ್ಧನ್, ಗಣೇಶ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ನಟರ ಚಿತ್ರಗಳಲ್ಲಿ ನಟಿಸಿರುವ ರೇಣುಕಾ ಈಗ ಹೊಸಬರ ಈ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರತಿ ಸಿನಿಮಾದಲ್ಲಿ ಸಹನಟರ ಜೊತೆ ನಟಿಸುತ್ತಿದೆ. ಆದರೆ ಈ ಚಿತ್ರದಲ್ಲಿ ಒಬ್ಬಳೆ ನಟಿಸಿದ್ದೇನೆ. ಈ ಅನುಭವ ಹೊಸದಾಗಿತ್ತು ಮತ್ತು ವಿಶೇಷವಾಗಿತ್ತು. “ಜೂಮ್ ಕಾಲ್” ಪ್ರಯೋಗಾತ್ಮಕ ಚಿತ್ರವಾಗಿದ್ದು, ಮೇಕಿಂಗ್ ವಿಭಿನ್ನವಾಗಿದೆ. ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ಖುಷಿಯಾಗಿದೆ ಎಂದು ರೇಣುಕಾ ತಿಳಿಸಿದ್ದಾರೆ.

ಮಹೇಶ್ ಹೆಚ್ ಎಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಚಿತ್ರೀಕರಣ ಮುಕ್ತಾಯವಾಗಿದೆ.

ಶ್ರೀವಾರಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನ, ವಿಜಯ್ ರಾಜ್ ಅವರ ಸಂಗೀತ ನಿರ್ದೇಶನವಿದೆ.

ರೇಣುಕಾ, ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು “ಜೂಮ್ ಕಾಲ್” ನಲ್ಲಿ ಅಭಿನಯಿಸಿದ್ದಾರೆ.

error: Content is protected !!