ಕುತೂಹಲದ ಕಬ್ಜ ರಿಲೀಸ್ ಯಾವಾಗ? ಜನವರಿ 24ಕ್ಕೆ ಬಿಗ್ ಅನೌನ್ಸ್ ಮೆಂಟ್ ಮಾಡ್ತಾರೆ ಆರ್.ಚಂದ್ರು…


ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿರುವ, ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಪ್ರಪಂಚದಾದ್ಯಂತ ನಿರೀಕ್ಷೆ ಹುಟ್ಟು ಹಾಕಿದೆ. ಇದು ಕನ್ನಡ ಚಿತ್ರರಂಗದ ಹೆಮ್ಮೆ, ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದೆ.


ಭಾರತ ಮಾತ್ರವಲ್ಲದೆ ವಿವಿಧ ದೇಶಗಳಲ್ಲಿಯೂ ಕಬ್ಜ ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಅಲ್ಲದೇ ಮೊನ್ನೆ ನಡೆದ ಐಎಂಡಿಬಿ 2023ರ ನಿರೀಕ್ಷಿತ ಸಿನಿಮಾಗಳ ಸರ್ವೆ ಪಟ್ಟಿಯಲ್ಲಿ ಕನ್ನಡಿಗರ ಕಬ್ಜ ಸಿನಿಮಾ ಸ್ಥಾನ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಯಶಸ್ಸಿನ ಬಳಿಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಲು ಈ ವರ್ಷ ಕಬ್ಜ ಸಜ್ಜಾಗಿದೆ.

ಕಬ್ಜ ಚಿತ್ರ ಬಿಡುಗಡೆಯಾವಾಗ ಎಂಬುದು ಪ್ರತಿಯೊಬ್ಬರ ಮಾತಾಗಿತ್ತು. ಈ ನಿಟ್ಟಿನಲ್ಲಿ ಇದೇ ಜನವರಿ 24ರಂದು ದೊಡ್ದದೊಂದು ವಿಷಯವನ್ನು ಹಂಚಿಕೊಳ್ಳಲಿದೆ ಕಬ್ಜ ಟೀಮ್.
ಇದೇ ಮೊಟ್ಟ ಮೊದಲ ಬಾರಿಗೆ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ಕಬ್ಜ ಸಿನಿಮಾ ತೆರೆಕಾಣುತ್ತಿದೆ.

ಇಂಥದ್ದೊಂದು ಕನ್ನಡ ಸಿನಿಮಾ ಬೃಹತ್ ಮಟ್ಟದಲ್ಲಿ ಮೂಡಿ ಬರುತ್ತಿರೋದು ಸ್ಯಾಂಡಲ್ ವುಡ್ ಗೆ ಗೌರವ. ಇಂಥ ಪ್ರಯತ್ನಗಳಿಗೆ ಕನ್ನಡಿಗರು ಯಾವಾಗಲು ಪ್ರಶಂಶಿಸುತ್ತಾರೆ.

ಈಗ ಕಬ್ಜ ರಿಲೀಸ್ ಡೇಟ್ ಅನೌನ್ಸ್ ಮಾಡಿದರೆ ಕನ್ನಡಿಗರು ಮಾತ್ರವಲ್ಲದೆ. ಭಾರತೀಯ ಚಿತ್ರರಂಗವೇ ಸಂತೋಷ ಪಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಕಾತುರತೆಗೆ ಬೇಗ ಚಂದ್ರು ಮತ್ತು ಟೀಂ ಡೇಟ್ ತಿಳಿಸಲಿ ಹಾಗೂ ಕಬ್ಜ ಚಿತ್ರವು ಮತ್ತೊಮ್ಮೆ ಗೆದ್ದು ಕನ್ನಡ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಲಿ ಎಂಬುದು ಪ್ರತಿಯೊಬ್ಬ ಕನ್ನಡಿಗರ ಆಶಯ.

Related Posts

error: Content is protected !!