Categories
ಸಿನಿ ಸುದ್ದಿ

ಮಧ್ಯಪ್ರದೇಶ ಕಡೆಗೆ ಮೈ ಹೀರೋ ಪಯಣ…

ಎ.ವಿ .ಸ್ಟುಡಿಯೋಸ್ ಬ್ಯಾನರ್ ನಲ್ನಿಲಿ ನಿರ್ಮಾಣವಾಗುತ್ತಿರುವ “ಮೈ ಹೀರೊ” ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಹತ್ತುದಿನಗಳ ಚಿತ್ರೀಕರಣ ನಡೆದಿದೆ. ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್, ಬಾಲನಟ ವೇದಿಕ್ ಕೌಶಿಕ್, ದತ್ತಣ್ಣ, ಪ್ರಕಾಶ್ ಬೆಳವಾಡಿ, ನಿರಂಜನ್ ದೇಶಪಾಂಡೆ ಹಾಗು


ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಈ ತಿಂಗಳ ಕೊನೆಗೆ ದ್ವಿತೀಯ ಹಂತದ ಚಿತ್ರೀಕರಣ ಮಧ್ಯಪ್ರದೇಶದಲ್ಲಿ ಆರಂಭವಾಗಲಿದೆ.

ವಿಶ್ವದಾದ್ಯಂತ ಇರುವ ಸಾಮಾಜಿಕ ಸಮಸ್ಯೆಯೊಂದನ್ನು ಕೇಂದ್ರವಾಗಿಟ್ಟುಕೊಂಡು ಅವಿನಾಶ್ ವಿಜಯಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ. ಎ.ವಿ.ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ಅವಿನಾಶ್ ವಿಜಯ ಕುಮಾರ್ ಅವರೆ ನಿರ್ಮಿಸುತ್ತಿದ್ದಾರೆ.

ಅಮೇರಿಕಾದಿಂದ ಬಂದ ಅಧಿಕಾರಿಯೊಬ್ಬರು ಭಾರತದ ಹುಡುಗನೊಬ್ಬನನ್ನು ಭೇಟಿಯಾಗುತ್ತಾರೆ‌‌. ಇವರಿಬ್ಬರ ನಡುವೆ ಹೆಚ್ಚಿನ ಕಥೆ ಸಾಗುತ್ತದೆ. ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಈ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ ಮೂರ್ತಿ ಅವರ ಛಾಯಾಗ್ರಹಣ “ಮೈ ಹೀರೊ” ಚತ್ರಕ್ಕಿದ್ದು, ಎ.ವಿ.ಸ್ಟುಡಿಯೋಸ್ ಮತ್ತು ಜಿಮ್ ಶಿವು ಸಂಭಾಷಣೆ ಬರೆಯುತ್ತಿದ್ದಾರೆ.

Categories
ಸಿನಿ ಸುದ್ದಿ

ಕನ್ನಡ ಸಿನಿರಂಗದ ಅಶ್ವಿನ್ ನಕ್ಷತ್ರ! ಅಶ್ವಿನ್ ಹಾಸನ್ ಎಂಬ ನಿರ್ದೇಶಕರ ಕಲಾವಿದ…

ಕಲಾವಿದನಾಗೋ ಹೆಬ್ಬಯಕೆಯಲ್ಲಿ ಸಂಬಳ ಕೊಡೋ ಕೆಲಸ ಬಿಟ್ಟು ಬಣ್ಣದ ಲೋಕಕ್ಕೆ ಹೆಜ್ಜೆ ಇಡುವ ಅದೆಷ್ಟೋ ಮಂದಿ ನಮ್ಮ ಮುಂದಿದ್ದಾರೆ. ಹಾಗೆ ಬಂದು ಬಣ್ಣದ ಲೋಕದಲ್ಲಿ ಕಳೆದು ಹೋಗುವವರಿಗೂ ಲೆಕ್ಕವಿಲ್ಲ. ಅಂತವರ ಪಟ್ಟಿಯಲ್ಲಿ ಬಹಳ ವಿಭಿನ್ನವಾಗಿ ನಿಲ್ಲುವವರು ರಂಗಭೂಮಿ ಕಲಾವಿದ, ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಅಶ್ವಿನ್ ಹಾಸನ್. ಬೆಳ್ಳಿತೆರೆ ಮೇಲೆ ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ರಾರಾಜಿಸುವ ಕನಸಿನಲ್ಲೇ ಅದಕ್ಕೆ ತಕ್ಕುದಾದ ಎಲ್ಲಾ ತಯಾರಿಯೊಂದಿಗೆ ಹೆಜ್ಜೆ ಇಡುತ್ತಾ ಭರವಸೆ ಮೂಡಿಸುತ್ತಿದ್ದಾರೆ.

ಆರಂಭಿಕ ದಿನಗಳಲ್ಲಿ ಸಿಕ್ಕ ಚಿಕ್ಕ ಪುಟ್ಟ ಪಾತ್ರಗಳಿಗೆ ರಂಗಭೂಮಿ ಅನುಭವವನ್ನೆಲ್ಲ ಧಾರೆ ಎರೆದು ಪಾತ್ರದಿಂದ ಪಾತ್ರಕ್ಕೆ, ಸಿನಿಮಾದಿಂದ ಸಿನಿಮಾಗೆ ತಾವೊಬ್ಬ ಭರವಸೆಯ ನಟನಾಗಬಲ್ಲೇ ಎಂಬುದನ್ನು ನಿರೂಪಿಸುತ್ತಲೇ ಬರುತ್ತಿದ್ದಾರೆ. ಈಗಾಗಲೇ ‘ಜಗ್ಗುದಾದ’, ‘ಹೆಬ್ಬುಲಿ’, ‘ಅವನೇ ಶ್ರೀಮನ್ನಾರಾಯಣ’, ‘ರಾಜಕುಮಾರ’, ‘ಹೆಡ್ ಬುಶ್’, ‘ಥಗ್ಸ್ ಆಫ್ ರಾಮಘಡ’ ಸಿನಿಮಾಗಳಲ್ಲಿ ಇವರ ಅಭಿನಯದ ಸಾಮರ್ಥ್ಯ ಸಾಭೀತಾಗಿದೆ ಕೂಡ. ಸಹಜ, ನೈಜ ಅಭಿನಯದ ಸಾಮರ್ಥ್ಯದ ಫಲವೇ ಸುಮಾರು ಎಪ್ಪತ್ತಕ್ಕೂ ಹೆಚ್ಚಿನ ಸಿನಿಮಾಗಳು ಇವರನ್ನರಸಿ ಬಂದಿರೋದು.

ಕಳೆದ ವರ್ಷ ಅಶ್ವಿನ್ ಹಾಸನ್ ನಟನೆಯ ಹನ್ನೆರಡು ಸಿನಿಮಾಗಳು ಬಿಡುಗಡೆಯಾಗಿದ್ದು, 2023ರ ಆರಂಭದಲ್ಲೇ 6 ಸಿನಿಮಾಗಳು ಬಿಡುಗಡೆಯಾಗಿವೆ. ಬಿಡುಗಡೆಗೆ ಸಾಲಿನಲ್ಲಿರುವ ‘ಸಪ್ತ ಸಾಗರದಾಚೆ ಎಲ್ಲೋ’, ‘ದಸರಾ’, ‘ರಾಯಲ್’, ‘ಕೈವ’, ‘ಎಂಥಾ ಕಥೆ ಮಾರಾಯ’, ‘ನಾಟೌಟ್’, ‘ನೈಟ್ ಕರ್ಪ್ಯೂ’, ‘ಗ್ರೇ ಗೇಮ್ಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಶ್ವಿನ್ ಹಾಸನ್ ಅಭಿನಯಿಸಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ‘ಹೋಪ್’ ಹಾಗೂ ‘ಥಗ್ಸ್ ಆಫ್ ರಾಮಘಡ’ ಸಿನಿಮಾಗಳು ಇವರಿಗೆ ಅಪಾರ ಪ್ರಶಂಸೆ ತಂದುಕೊಟ್ಟಿದೆ. ಹನ್ನೊಂದು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದು, ‘ವರ್ಜಿನ್’ ಹಾಗೂ ‘ಸೆಲ್ಯೂಟ್’ ಕಿರುಚಿತ್ರಗಳ ಅಭಿನಯಕ್ಕೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.

ಒಂದೇ ತರನಾದ ಪಾತ್ರಕ್ಕೆ ಒಗ್ಗಿಕೊಳ್ಳದೇ, ಅಶ್ವಿನ್ ಎಂದರೇ ಎಲ್ಲಾ ಪಾತ್ರಕ್ಕೂ ಸೈ ಎನ್ನುವಂತೆ ಒಂದಿಷ್ಟು ಪ್ರಯೋಗಾತ್ಮಕ ಹಾಗೂ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರೇಮ್, ಧ್ರುವ ಸರ್ಜಾ ಜೋಡಿಯ ‘ಕೆಡಿ’ ಚಿತ್ರದಲ್ಲೂ ನಟಿಸುತ್ತಿರೋದು ಇವರ ಯಶಸ್ಸೇಂದೇ ಹೇಳಬಹುದು.

ನಾನೊಬ್ಬ ಅದ್ಭುತ ಅಭಿನಯಗಾರ ಆಗಬೇಕು. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ಅಭಿನಯಿಸುವ ಪರ್ಫಾಮರ್ ಆಗಬೇಕು. ಅದಕ್ಕೆಂದೇ ಒಂದೇ ರೀತಿಯ ಪಾತ್ರಕ್ಕೆ ಬ್ರ್ಯಾಂಡ್ ಆಗದೇ ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರ ಹುಡುಕುತ್ತಿರುತ್ತೇನೆ. ಆ ನಿಟ್ಟಿನಲ್ಲಿ ಪ್ರಕಾಶ್ ರೈ, ಫಹಾದ್ ಫಾಸಿಲ್, ವಿಜಯ್ ಸೇತುಪತಿ ಹೀಗೆ ಹಲವರು ನನಗೆ ಸ್ಪೂರ್ತಿ. ನಿರ್ದೇಶಕರ ನೆಚ್ಚಿನ ನಟನಾಗಬೇಕು,

ಅವರ ಕಥೆಗಳಲ್ಲಿ ನನಗೆಂದೇ ಒಂದು ಪಾತ್ರವಿರಬೇಕು ಹಾಗಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು ಅನ್ನೋದು ನನ್ನ ಕಲಾ ಜೀವನದ ಗುರಿ. ಕಲಾವಿದರಿಗೆ ಭಾಷೆಯ ಎಲ್ಲೆ ಇರೋದಿಲ್ಲ ಅನ್ನೋದು ನನ್ನ ಬಲವಾದ ನಂಬಿಕೆ ಆದ್ರಿಂದ ಬೇರೆ ಭಾಷೆಯ ಸಿನಿಮಾಗಳ ಅವಕಾಶ ಬಂದರೆ ನಟಿಸುವ ಹಂಬಲವಿದೆ ಎಂದು ತಮ್ಮ ಮನದಾಳದ ಅಭಿಪ್ರಾಯ ಹಂಚಿಕೊಳ್ಳುತ್ತಾರೆ ಅಶ್ವಿನ್ ಹಾಸನ್.

Categories
ಸಿನಿ ಸುದ್ದಿ

ದೇಸಾಯಿ ಸಿನಿಮಾಗೆ ಚಾಲನೆ: ಲವ್ 360 ಸಿನಿಮಾದ ಪ್ರವೀಣ್ ಹೀರೋ

ಹಿಂದಿನಿಂದಲೂ “ದೇಸಾಯಿ” ಮನೆತನಕ್ಕೆ ಅದರದೆ ಆದ ಪರಂಪರೆಯ ವೈಶಿಷ್ಟ್ಯವಿದೆ. ಇದನ್ನು ಚಲನಚಿತ್ರದ ಮೂಲಕ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಮಹಾಂತೇಶ್ ವಿ ಚೊಳಚಗುಡ್ಡ. “ಲವ್ 360” ಚಿತ್ರದ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದ ಪ್ರವೀಣ್ ಕುಮಾರ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ‌.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಾಗಲಕೋಟೆಯ ಮುಚಖಂಡಿಯ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.

ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕರಾದ ವೀರಣ್ಣ ಚರಂತಿಮಠ ಅವರು ಆರಂಭಫಲಕ ತೋರಿದರು. ವನಶ್ರೀಮಠ ವಿಜಯಪುರದ ಡಾ! ಜಯಬಸವಕುಮಾರ ಮಹಾಸ್ವಾಮಿಗಳು ಕ್ಯಾಮೆರಾ ಚಾಲನೆ ಮಾಡಿದರು.

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಈ ಚಿತ್ರ ಆರಂಭವಾಯಿತು. ಗಣ್ಯರು ಚಿತ್ರತಂಡದ ಸದಸ್ಯರು ಮೊದಲಿಗೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ‌

ಡಾ. ಜಯಬಸವಕುಮಾರ ಮಹಾಸ್ವಾಮಿಜಿಗಳು ಚಿತ್ರಕ್ಕೆ ಶುಭ ಕೋರಿದರು.

ಇದು ನನ್ನ ಮೊದಲ ಚಿತ್ರ ಅದ್ಧೂರಿಯಾಗಿ ತೆರೆಯ ಮೇಲೆ ತರುವ ಹಾಗೆ ನಿರ್ದೇಶನಕ್ಕೆ ಸಿದ್ದ ಮಾಡಿಕೊಂಡಿದ್ದೇನೆ ಎಂದು ನಿರ್ದೇಶಕ ನಾಗಿರೆಡ್ಡಿ ಬಡ ತಿಳಿಸಿದರು.

ಚಿತ್ರದ ನಿರ್ಮಾಪಕ ಮಹಾಂತೇಶ ವಿ ಚೊಳಚಗುಡ್ಡ ಮಾತನಾಡಿ, ವಿಶಿಷ್ಟ ಕಥಾಹಂದರ ಹೊಂದಿರುವ ಕಥೆಯನ್ನು ನಾನು ಹುಡುಕುತ್ತಿದ್ದಾಗ ನನ್ನ ಯೋಚನೆಗೆ ಬಂದದ್ದು ಈ ಗತಕಾಲದ, ತನ್ನದೇ ಆದ ವೈಶಿಷ್ಟ್ಯ ಪರಂಪರೆಯನ್ನು ಹೊಂದಿರುವ “ದೇಸಾಯಿ” ಮನೆತನದ ಕುರಿತು ಸಿನಿಮಾ ಮಾಡಬೇಕು ಎಂದು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು.

ಈ ಚಿತ್ರ ನನ್ನ ನಟನಾ ವೃತ್ತಿಯಲ್ಲಿ ಒಂದು ಹೊಸ ಅಧ್ಯಾಯ ಆಗಲಿದೆ ಅಂತಹ ಚಾಲೆಂಜಿಂಗ್ ಪಾತ್ರ ಇದಾಗಿದೆ. ಚಿತ್ರದ ಕಥೆ ತುಂಬಾ ಇಷ್ಟವಾಯಿತು‌‌ ಎಂದರು ನಾಯಕ ಪ್ರವೀಣ್ ಕುಮಾರ್.

ಮೈಸೂರು ಮೂಲದ ರಾದ್ಯಾ “ದೇಸಾಯಿ” ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ಕಲಾ ಬಿರಾದಾರ್, ಮಧುಸೂದನ್ ರಾವ್, ನಟನ ಪ್ರಶಾಂತ್, ವೀರೇಂದ್ರ, ಹರಿಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ.


ಜೈ ಆನಂದ್ ಛಾಯಾಗ್ರಹಣ, ಸಾಯಿಕಾರ್ತಿಕ್ ಸಂಗೀತ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಯಲ್ಲಪ್ಪ ವಿ ಚೊಳಚಗುಡ್ಡ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆಯಲಿದೆ.

Categories
ಸಿನಿ ಸುದ್ದಿ

ಕೆ ಜಿ ಎಫ್ ಕಾಂತಾರ ಬಳಿಕ ದೇಶಾದ್ಯಂತ ಕನ್ನಡದ ಪತಾಕೆ ಹಾರಿಸಿದ ಕಬ್ಜ: ಮೊದಲ ದಿನ ದಾಖಲೆ ಕಲೆಕ್ಷನ್…

ಬಹು ನಿರೀಕ್ಷಿತ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ” ಕಬ್ಜ ” ಮಾರ್ಚ್ 17 ರಂದು ಬಿಡುಗಡೆಯಾಗಿ, ಭಾರತದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
“ಕೆ.ಜಿ.ಎಫ್”, ” ಕಾಂತಾರ ” ಚಿತ್ರಗಳ ನಂತರ ದೇಶದಾದ್ಯಂತ “ಕಬ್ಜ” ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದೆ.


ಬಿಡುಗಡೆಯಾದ ಮೊದಲ ದಿನವೇ ಭಾರತಾದ್ಯಂತ 54ಕೋಟಿಗೂ ಹೆಚ್ಚು ‘ಬಾಕ್ಸ್ ಆಫೀಸ್” ಕಲೆಕ್ಷನ್ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ ಎರಡನೇ ದಿನವೇ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಆಗಬಹುದೆಂಬ ಮಾತು ಕೇಳಿ ಬರುತ್ತಿದೆ. ಭಾರತದಾಚೆಗೂ “ಕಬ್ಜ” ಸಿನಿಮಾ ಬಿಡುಗಡೆಯಾಗಿದ್ದು, ಅಲ್ಲೂ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.‌


ಆರ್ ಚಂದ್ರು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಕಬ್ಜ ಮೆಚ್ಚಿದ ಪವನ್ ಕಲ್ಯಾಣ್! ಆರ್. ಚಂದ್ರು ಕೆಲಸಕ್ಕೆ ಭೇಷ್ ಎಂದ ತೆಲುಗು ಪವರ್ ಸ್ಟಾರ್…

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಆರ್ ಚಂದ್ರೂ ರನ್ನು ತಬ್ಬಿ ಭೇಷ್ ಅಂದಿದ್ದೇಕೆ? ಮೊದಲಾರ್ಧ ಪಕ್ಕಾ ಇಂಡಿಯನ್ ಮತ್ತು ದ್ವಿತೀಯಾರ್ಧ ಹಾಲಿವುಡ್ ರೇಂಜ್ ಎಂದ ತೆಲುಗಿನ ಪವರ್ ಸ್ಟಾರ್ …ಇಂದು ಮದ್ಯ ರಾತ್ರಿ ಸಿನಿಮಾ ನೋಡಿದ್ದು ಹೇಗೆ?ಯಾಕಷ್ಟು ಕುತೂಹಲ ಸಿನಿಮಾ ಬಗ್ಗೆ ಯಾಕೆ ಮೆಚ್ಚಿ ಚಂದ್ರು ಅವರನ್ನು ತಬ್ಬಿಕೊಂಡು ಕೊಂಡಾಡಿದ್ದಾರೆ.


ಕಬ್ಜ ನೋಡಿದ ಪವನ್ ಕಲ್ಯಾಣ್ ಚಂದ್ರೂ ರನ್ನುಹಾಡಿ ಹೊಗಳಿದ್ದಲ್ಲದೇ ಮೇಕಿಂಗ್ ಕಥೆ ಚಿತ್ರಕಥೆ ಅದರಲ್ಲೂ ಕ್ಲೈಮಾಕ್ಸ್ ಕೊಂಡಾಡಿದ್ದಾರೆ.ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸುದ್ದಿಯಾಗುತ್ತಿರುವಂತೆ ಕಬ್ಜ ನಂತರ ಪವನ್ ಕಲ್ಯಾಣ್ ಗೆ ಚಂದ್ರೂ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆಂದು ಬಹಿರಂಗಗೊಂಡಿದೆ.

ಅದೇನೋ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಗಳೆಲ್ಲ ತೆಲುಗಿಗೆ ಹೋಗುತ್ತಿದ್ದಾರೆ. ಸಲಾರ್ ನಂತರ ಕನ್ನಡದ ಸ್ಟಾರ್ ನಿರ್ದೇಶಕ ಚಂದ್ರೂ ತೆಲುಗಿನ ಪವರ್ ಗೆ ಪವರ್ ಬ್ಯಾಂಕ್ ಆಗುತ್ತಿದ್ದಾರೆ.

Categories
ಸಿನಿ ಸುದ್ದಿ

ಮಾರ್ಚ್ 17 ರಂದು ಸ್ವಿಜರ್ಲ್ಯಾಂಡ್ ನ ಜಿನಿವಾದಲ್ಲಿ ಕಾಂತಾರ ಶೋ

“ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ”, “ಪರ್ಮನೆಂಟ್ ಮಿಷನ್ ಆಫ್ ಟು ದಿ ಯು ಎನ್” ಹಾಗೂ ಜಿನಿವಾದ ಕೆಲವು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಪ್ರದರ್ಶನದ ಆಯೋಜನೆ

ಹೊಂಬಾಳೆ ಫಿಲಂಸ್ ನಿರ್ಮಾಣದ ಹಾಗೂ ರಿಷಭ್ ಶೆಟ್ಟಿ ನಟಿಸಿ, ನಿರ್ದಶಿಸಿರುವ “ಕಾಂತಾರ” ಚಿತ್ರ ಈಗಾಗಲೇ ವಿಶ್ವದಾದ್ಯಂತ ಜನಮನ್ನಣೆ ಪಡೆದಿದೆ.


ಸ್ವಿಜರ್ಲ್ಯಾಂಡ್ ನ ಜಿನಿವಾ ನಗರದಲ್ಲಿ ಕಳೆದ ಕೆಲವು ದಿನಗಳಿಂದ ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಂಡಿರುವ ರಿಷಭ್ ಶೆಟ್ಟಿ ಅವರು ಈಗಾಗಲೇ ಕೆಲವು ಉಪಯುಕ್ತ ವಿಷಯಗಳ ಬಗ್ಗೆ ಅಲ್ಲಿ ಮಾತನಾಡಿದ್ದಾರೆ.


ಮಾರ್ಚ್ 17 ರ ಸಂಜೆ ಜಿನಿವಾದ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ “ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್” ನಲ್ಲಿ “ಕಾಂತಾರ” ಚಿತ್ರ ಪ್ರದರ್ಶನವಾಗಲಿದೆ. “ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ”
“ಪರ್ಮನೆಂಟ್ ಮಿಷನ್ ಆಫ್ ಟು ದಿ ಯು ಎನ್” ಹಾಗೂ ಕೆಲವು ಅಂತರಾಷ್ಟ್ರೀಯ ಸಂಸ್ಥೆಗಳು(ಜಿನಿವಾ) ಆಯೋಜಿಸಿರುವ ಈ ಪ್ರದರ್ಶನದಲ್ಲಿ ರಿಷಭ್ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.

ಪ್ರದರ್ಶನದ ನಂತರ ರಿಷಭ್ ಶೆಟ್ಟಿ, ಔತಣ ಕೂಟದಲ್ಲಿ ಭಾಗವಹಿಸಲಿದ್ದಾರೆ ಹಾಗೂ “ಕಾಂತಾರ” ಚಿತ್ರದ ಕುರಿತು ಮಾತನಾಡಲಿದ್ದಾರೆ.


ಕನ್ನಡದ ಚಿತ್ರವೊಂದು ವಿಶ್ವದಾದ್ಯಂತ ಈ ರೀತಿ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ನಿಜಕ್ಕೂ ಹೆಮ್ಮೆ.
ರಿಷಭ್ ಶೆಟ್ಟಿ ಮೊದಲಿನಿಂದಲೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಈ ಚಿತ್ರವನ್ನು ಅರ್ಪಿಸಿರುವುದಾಗಿ ಹೇಳುತ್ತಾ ಬರುತ್ತಿದ್ದಾರೆ.

ಮಾರ್ಚ್ 17 ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಅದೇ ದಿನ ಈ ಪ್ರದರ್ಶನ ಆಯೋಜನೆಯಾಗಿರುವುದು ವಿಶೇಷ. ಅವರ ಹುಟ್ಟುಹಬ್ಬದ ದಿನ ಪ್ರದರ್ಶನವಾಗಲಿರುವ ಈ ಪ್ರದರ್ಶನವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುವುದಾಗಿ ರಿಷಭ್ ಶೆಟ್ಟಿ ತಿಳಿಸಿದ್ದಾರೆ

Categories
ಸಿನಿ ಸುದ್ದಿ

ನಾನಿ ದಸರಾ ದರ್ಬಾರ್ ಶುರು: ಟ್ರೇಲರ್ ಹೊರಬಂತು – ಮಾರ್ಚ್ 30 ಕ್ಕೆ ವಿಶ್ವಾದ್ಯಂತ ಸಿನಿಮಾ ಬಿಡುಗಡೆ…

ನ್ಯಾಚುರಲ್ ಸ್ಟಾರ್ ನಾನಿ ಮೆಗಾ ಪ್ರಾಜೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾ ಈಗಾಗಲೇ ಸಿನಿ ಪ್ರಿಯರಲ್ಲಿ ದೊಡ್ಡ ಮಟ್ಟದ ಬಝ್ ಕ್ರಿಯೇಟ್ ಮಾಡಿದೆ. ಮಾಸ್ ಆಕ್ಷನ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಮಾರ್ಚ್ 30ರಂದು ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದೆ. ಟ್ರೇಲರ್ ಮೂಲಕ ನಾನಿ ‘ದಸರಾ’ ದರ್ಬಾರ್ ಶುರುವಾಗಿದೆ.

‘ದಸರಾ’ ರಗಡ್ ಹಾಗೂ ಮಾಸ್ ಟ್ರೇಲರ್ ಬಿಡುಗಡೆಯಾಗಿದೆ. ಧರಣಿಯಾಗಿ ನಾನಿ ಅವತಾರ ಸಖತ್ ಕಿಕ್ ನೀಡುತ್ತಿದೆ. ಟ್ರೇಲರ್ ತುಣುಕಿನಲ್ಲಿ ನಾನಿ ಮಾಸ್ ಅವತಾರ, ಸಿಂಗರೇಣಿ ಕಲ್ಲಿದ್ದಲಿನ ರಕ್ತಸಿಕ್ತ ಲೋಕ ಪ್ರೇಕ್ಷಕರ ಮನದಲ್ಲಿ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ನ್ಯಾಚುರಲ್ ಸ್ಟಾರ್ ಮೇಕೋವರ್, ರಗಡ್ ಲುಕ್, ಹಾವ ಭಾವ ಎಲ್ಲವೂ ಗಮನ ಸೆಳೆದಿದ್ದು, ನಾನಿ ಅಭಿಮಾನಿಗಳು ಕೂಡ ಸಿನಿಮಾ ಮೇಲೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ತೆಲಂಗಾಣದ ಗೋದಾವರಿಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಮಾಸ್ ಆಕ್ಷನ್ ಸಬ್ಜೆಕ್ಟ್ ಮೂಲಕ ತೆರೆ ಮೇಲೆ ತರ್ತಿದೆ ದಸರಾ ಸಿನಿಮಾ.

ಚಿತ್ರವನ್ನು ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಟೀಸರ್,ಹಾಡುಗಳ ಮೂಲಕ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ ಇದೀಗ ರಗಡ್ ಅಂಡ್ ಮಾಸ್ ಟ್ರೇಲರ್ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ.

ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ.

Categories
ಸಿನಿ ಸುದ್ದಿ

ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗು ಕುಟುಂಬದವರನ್ನು ಹಾರೈಸಿದ ಮೋದಿ…

ಮಾರ್ಚ್ 17 ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಜಗ್ಗೇಶ್ ಅವರು ರಾಷ್ಟ್ರದ ಪ್ರಧಾನ ಮಂತ್ರಿಗಳಾದ ಶ್ರೀನರೇಂದ್ರ ಮೋದಿ ಅವರನ್ನು ಕುಟುಂಬ ಸಮೇತ ಭೇಟಿಯಾಗಿ, ಆಶೀರ್ವಾದ ಪಡೆದುಕೊಂಡರು.

ಜಗ್ಗೇಶ್ ಅವರಿಗೆ ದೇವರು ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಧಾನ ಮಂತ್ರಿಗಳು ಮನತುಂಬಿ ಆಶೀರ್ವದಿಸಿದರು.
ಜಗ್ಗೇಶ್ ಅವರ ಜೊತೆಗೆ ಪತ್ನಿ ಪರಿಮಳಾ ಜಗ್ಗೇಶ್ ಹಾಗೂ ಪುತ್ರ ಯತಿರಾಜ್ ಕೂಡ ಇದ್ದರು.

ಪರಿಮಳಾ ಜಗ್ಗೇಶ್ ಅವರು ಸಿರಿಧಾನ್ಯಗಳನ್ನು ಬಳಸಿ ಮಧುಮೇಹವನ್ನು ಹತೋಟಿಗೆ ತರುವುದರ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ಇದರ ಉಪಯೋಗವನ್ನು ಸಾಕಷ್ಟು ಜನರು ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ತಿಳಿದ ಪ್ರಧಾನಿಗಳು ಬಹಳ ಖುಷಿಪಟ್ಟರು.

ಮಧುಮೇಹಕ್ಕೆ ಸಂಬಂಧಿಸಿದ ಹಾಗೆ ಸರ್ಕಾರದಿಂದ ನಡೆಯುತ್ತಿರುವ ಕಾರ್ಯಗಳಲ್ಲಿ ಪರಿಮಳಾ ಜಗ್ಗೇಶ್ ಅವರು ಪಾಲ್ಗೊಳ್ಳಲು ಸೂಚಿಸಿದರು. ಅಲ್ಲಿಂದಲೇ ಕೇಂದ್ರ ಸಚಿವರಿಗೂ ಈ ವಿಷಯವನ್ನು ತಿಳಿಸಿದರು. ಜಗ್ಗೇಶ್ ಅವರ ಕಿರಿಯ
ಪುತ್ರ ಯತಿರಾಜ್ ಅವರಿಗೂ ಪ್ರಧಾನ ಮಂತ್ರಿಗಳು ವಿಶೇಷವಾಗಿ ಆಶೀರ್ವದಿಸಿದರು.

ನನಗೆ ಮಾರ್ಚ್ 17ಕ್ಕೆ ಅರವತ್ತು ವರ್ಷ ತುಂಬುತ್ತಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರನಾಯಕ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಅವರ ಆಶೀರ್ವಾದ ಪಡೆದುಕೊಂಡಿದ್ದು ತುಂಬಾ ಸಂತೋಷವಾಗಿದೆ. ಇದು ನನ್ನ ಬಾಳಿನಲ್ಲೇ ಮರೆಯಲಾಗದ ದಿನ ಎಂದು ಜಗ್ಗೇಶ್ ತಿಳಿಸಿದ್ದಾರೆ.‌

Categories
ಸಿನಿ ಸುದ್ದಿ

ಮಾ. 23 ರಿಂದ 30 ರವರೆಗೆ 14 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಚಿತ್ರಗಳ ಪ್ರದರ್ಶನ…

ಈ ಬಾರಿ ಮಾರ್ಚ್ 23 ರಿಂದ 30 ರವರೆಗೆ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಮಾರ್ಚ್ 23 ರ ಸಂಜೆ ವಿಧಾನಸೌಧ ಮುಂಭಾಗದಲ್ಲಿ ಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದು, ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

ಮಾರ್ಚ್ 30 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಚಿತ್ರೋತ್ಸವದಲ್ಲಿ 50 ದೇಶಗಳ 200 ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಉಕ್ರೇನ್, ಹಾಂಕಾಂಗ್, ಬೆಲ್ಜಿಯಂ, ನೆದರ್ ಲೆಂಡ್, ಪಿನ್ ಲೆಂಡ್, ಕ್ರೋಷಿಯ, ಇರಾನ್, ಚೀನಾ, ಸ್ವಿಟ್ಜರ್ ಲೆಂಡ್, ಪ್ಯಾಲೆಸ್ಟೆನ್, ಅರ್ಜಂಟೈನಾ, ಸಿಂಗಾಪೂರ್, ಡೆನ್ ಮಾರ್ಕ್, ಗ್ರೀಸ್, ರಷ್ಯಾ, ಫಿಲಿಫೈನ್ಸ್, ಲೆಬನಾನ್, ಪೋಲೆಂಡ್, ರೊಮಾನಿಯಾ, ಕಾಬೋಡೊಯಾ, ಕೆನಡಾ, ಜಪಾನ್, ಸೆನಗಲ್, ಸೇರಿದಂತೆ ಇತರೆ ದೇಶಗಳ ಅತ್ಯುತ್ತಮ ಚಿತ್ರಗಳು ಪ್ರದರ್ಶನವಾಗಲಿವೆ.

ಈ ಚಿತ್ರೋತ್ಸವದಲ್ಲಿ ಏಷಿಯನ್, ಇಂಡಿಯನ್, ಚಿತ್ರಗಳ ಸ್ಪರ್ಧಾ ವಿಭಾಗ ಇರಲಿದೆ ಈ ಮೂರು ವಿಭಾಗದಲ್ಲಿ ತಲಾ ಮೂರು ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ.

ಕನ್ನಡದ 108 ಸಿನಿಮಾಗಳು ಚಿತ್ರೋತ್ಸವಕ್ಕ ಬಂದಿವೆ. ಅವುಗಳ ಪೈಕಿ 12 ಅತ್ಯುತ್ತಮ ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯ್ಕೆ ಮಾಡಿದ 10 ಅತ್ಯುತ್ತಮ ಜನಪ್ರಿಯ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುವುದು.

ಚಿತ್ರೋತ್ಸವದಲ್ಲಿ ಪ್ರತಿ ವದಿನ ಉದ್ಯಮಕ್ಕೆ ಸಂಬಂಧಿಸಿದಂತೆ, ಸಂವಾದ, ಉಪನ್ಯಾಸ, ಮಾಸ್ಟರ್, ಕ್ಲಾಸ್ ಕಾರ್ಯಕ್ರಮ ಇರಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಹೇಳಿದರು.
ಈ ವೇಳೆ ಕಲಾತ್ಮಕ ನಿರ್ದೇಶಕ ನರಹರಿವರಾವ್, ಪ್ರದೀಪ್, ಪಿ.ಶೇಷಾದ್ರಿ, ರಿಜಿಸ್ಟ್ರಾರ್ ಹಿಮಂತ್ ರಾಜು ಇದ್ದರು.

Categories
ಸಿನಿ ಸುದ್ದಿ

ಹೊಯ್ಸಳ ಎಂಬ ರಗಡ್ ಅಧಿಕಾರಿ! ಇದು ಧನಂಜಯ್ ನಟನೆಯ 25ನೇ ಚಿತ್ರ…

ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ನಿರ್ಮಿಸಿರುವ ‘ಹೊಯ್ಸಳ’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್, ಹಾಡುಗಳಿಂದ ಪ್ರೇಕ್ಷಕರ ಹೃದಯ ಗೆದ್ದಿರುವ ‘ಹೊಯ್ಸಳ’ ತಂಡದಿಂದ ಸದ್ಯದಲ್ಲಿಯೇ ಟ್ರೇಲರ್ ಕೂಡ ಬಿಡುಗಡೆ ಆಗಲಿದೆ. ಚಿತ್ರದ ಪ್ರಮೋಷನ್ ಜೋರಾಗಿದ್ದು, ನಾಯಕ ಡಾಲಿ ಧನಂಜಯ್ ಉತ್ತರ ಕರ್ನಾಟಕದಲ್ಲಿ ಸಂಚರಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಧನಂಜಯ್ “ರತ್ನನ ಪ್ರಪಂಚ’ ಆದಮೇಲೆ ಕೆ.ಆರ್.ಜಿ ಸ್ಟುಡಿಯೋ ಜೊತೆ ಕನೆಕ್ಟ್ ಆಗಿ ಒಂದಿಷ್ಟು ಸಿನಿಮಾ ಮಾಡುವ ಪ್ಲ್ಯಾನ್ ಮಾಡಿಕೊಂಡೆವು. ಆಗ ಈ ಚಿತ್ರದ ಕಥೆ ಬಂತು.

ಕಥೆ ಕೇಳಿದಾಗ ತುಂಬಾ ಇಷ್ಟವಾಯ್ತು. ನಂತರ ಗೊತ್ತಾಯ್ತು ಇದು ನನ್ನ ಅಭಿನಯದ 25ನೇ ಸಿನಿಮಾ ಅಂತ. ನನಗೂ ಸಮಾಜಕ್ಕೆ ಏನಾದರೂ ಸಂದೇಶ ಹೇಳುವ ಸಿನಿಮಾ ಮಾಡಬೇಕು ಎನಿಸಿತ್ತು. ಅದರಂತೆಯೇ ಫ್ಯಾಮಿಲಿ ಜೊತೆ ಕುಳಿತು ನೋಡುವ ಕಥೆ ನಂಗೆ ‘ಹೊಯ್ಸಳ’ದಲ್ಲಿ ಸಿಕ್ಕಿತು. ಇದರಲ್ಲಿ ಒಂದು ಸೀರಿಯಸ್ ಅಂಶವನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಒಳ್ಳೆ ಮೆಸೇಜ್ ಇರುವ ಕಮರ್ಷಿಯಲ್ ಸಿನಿಮಾ. ನಾವು ಚಿತ್ರದ ಶೀರ್ಷಿಕೆಯನ್ನು ರಾಮು ಫಿಲ್ಮ್ಸ್‌ ಜೊತೆ ಮಾತನಾಡಿ ಪಡೆದುಕೊಂಡೆವು. ಆದರೆ ಇದೇ ಹೆಸರಿನಲ್ಲಿ ಇನ್ನೊಂದು ಸಿನಿಮಾ ಸೆನ್ಸಾರ್ ಆಗಿದೆಯಂತೆ. ಹಾಗಾಗಿ ನಾನು ಚಿತ್ರದಲ್ಲಿ ಗುರುದತ್ ಹೊಯ್ಸಳ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ಇದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ದರಾಗಿದ್ದೇವೆ. ಈ ಸಿನಿಮಾಗಾಗಿ ನಾನು ಕಾಯತಾ ಇದ್ದು, ತುಂಬಾ ವಿಷಯಗಳ ಬಗ್ಗೆ ಚಿತ್ರ ಮಾತನಾಡುತ್ತದೆ’ ಎಂದು ಹೇಳಿದರು.

ನಟ ನವೀನ ಶಂಕರ್ ಮಾತನಾಡಿ ‘ಈ ಸಿನಿಮಾ ಸಿಕ್ಕಿದ್ದು ನಂಗೆ ಖುಷಿಯ ವಿಷಯ. ಇದೇ ಮೊದಲಬಾರಿ ನಾನು ಕಂಪರ್ಟ್ನಲ್ಲಿ ನಟನೆ ಮಾಡಿದ್ದೇನೆ. ಇಲ್ಲಿ ನಾನು ಬರಿ ಪಾತ್ರ ಮಾಡಿದ್ದು ರಗಡ್ ಲುಕ್‌ನಲ್ಲಿ ವಿಲನ್ ಆಗಿರುತ್ತೇನೆ. ಧನಂಜಯ್ ‘ಹೆಡ್ ಬುಷ್’ ಸಿನಿಮಾಗೆ ಕರೆದಿದ್ದರು ಆಗಿರಲಿಲ್ಲ. ಈಗ ಗೆಳೆಯನ ಜೊತೆ ನಟನೆ ಮಾಡಿದ್ದು ಖುಷಿ ಇದೆ. ನಿರ್ಮಾಪಕರು ಕರೆದು ಅವಕಾಶ ಕೊಟ್ಟರು. ಪಾತ್ರ ಅದ್ಭುತವಾಗಿ ಬಂದಿದ್ದು, ಒಳ್ಳೆ ಜರ್ನಿ ನೀಡುವ ಸಿನಿಮಾ ಇದು ನಂಗೆ. ಅಪ್ಪಟ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಎಲ್ಲಾ ಪಾತ್ರಗಳಿಗೂ ಗಟ್ಟಿತನ ಇದೆ’ ಎಂದರು.

ಚಿತ್ರದ ನಾಯಕಿ ಅಮೃತ ಅಯ್ಯಂಗಾರ್ ‘ಧನಂಜಯ ಜೊತೆ ನಂಗೆ ಇದು 3ನೇ ಸಿನಿಮಾ. ಇದರಲ್ಲಿ ನಾನು ಗಂಗಾ ಆಗಿ ಪೊಲೀಸ್ ಆಫೀಸರ್ ಹೆಂಡತಿ ಪಾತ್ರ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಟೀಚರ್ ಆಗಿರುತ್ತೇನೆ. ಈ ಪಾತ್ರ ಮಾಡುವುದು ನಂಗೆ ಚಾಲೆಂಜಿಂಗ್ ಆಗಿತ್ತು. ಈ ಚಿತ್ರ ಒಳ್ಳೆ ಪೊಲೀಸ್ ಸ್ಟೋರಿ ಫೀಲ್ ಕೊಡುತ್ತದೆ’ ಎಂದು ಹೇಳಿದರು. ನಟ ಅವಿನಾಶ್ ಮಾತನಾಡಿ ‘ಇದರಲ್ಲಿ ನಾನು ವಿಲನ್ ಪಾತ್ರ ಮಾಡಿದ್ದು, ಅದ್ಭುತವಾಗಿ ಬಂದಿದೆ. ನಿರ್ದೇಶಕರು ನಂಗೆ ಕಥೆ ಹೇಳುವಾಗ ನಾನಾ ಪಾಟೇಕರ್ ತರಾ ಪಾತ್ರ ಇರುತ್ತದೆ ಎಂದು ಹೇಳಿದ್ದರು. ಈ ಪೊಲೀಸ್ ಸ್ಟೋರಿ ಸಿನಿಮಾ ಅದ್ಭುತವಾಗಿ ಬಂದಿದ್ದು, ನಾನಿಲ್ಲಿ ದಾದಾ ಪಾತ್ರ ಮಾಡಿದ್ದೇನೆ’ ಎಂದರು.

ಇದೇ ಸಂದರ್ಭದಲ್ಲಿ ನಿರ್ಮಾಪಕ ಯೋಗಿ ಜಿ. ರಾಜ್ ಮಾತನಾಡಿ ‘ಧನು ಜೊತೆ ಸಿನಿಮಾ ಮಾಡಲು ಸಿದ್ದರಾದಾಗ ನಿರ್ದೇಶಕರು ಕಥೆ ಹೇಳಿದ್ರು. ಕಥೆ ತುಂಬಾ ಚನ್ನಾಗಿದೆ ಅನಿಸಿ ನಿರ್ಮಾಣಕ್ಕೆ ಮುಂದಾದೆವು. ಚಿತ್ರ ಇದೇ ಮಾರ್ಚ್ 30 ರಂದು ವಿಶ್ವಾದ್ಯಂತ ಕನ್ನಡ ಭಾಷೆಯಲ್ಲಿಯೇ ರಿಲೀಸ್ ಆಗಲಿದೆ. ಇದರಲ್ಲಿ ನಾಯಕನ ಹೆಸರು ಗುರುದೇವ ಹೊಯ್ಸಳ ಅಂತ ಇರುತ್ತದೆ. ಕಥೆ ಬೆಳಗಾವಿ ಭಾಗದಲ್ಲಿ ನಡೆಯುತ್ತದೆ’ ಎಂದರು. ನಿರ್ದೇಶಕ ವಿಜಯ್ ಎನ್ ‘ಈ ಚಿತ್ರವನ್ನು ಪೊಲೀಸ್ ಡಿಪಾರ್ಟ್ಮೆಂಟ್‌ಗೆ ಅರ್ಪಣೆ ಮಾಡಲಾಗುತ್ತಿದೆ’ ಎಂದಷ್ಟೇ ಹೇಳಿದರು.

error: Content is protected !!