ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗು ಕುಟುಂಬದವರನ್ನು ಹಾರೈಸಿದ ಮೋದಿ…

ಮಾರ್ಚ್ 17 ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಜಗ್ಗೇಶ್ ಅವರು ರಾಷ್ಟ್ರದ ಪ್ರಧಾನ ಮಂತ್ರಿಗಳಾದ ಶ್ರೀನರೇಂದ್ರ ಮೋದಿ ಅವರನ್ನು ಕುಟುಂಬ ಸಮೇತ ಭೇಟಿಯಾಗಿ, ಆಶೀರ್ವಾದ ಪಡೆದುಕೊಂಡರು.

ಜಗ್ಗೇಶ್ ಅವರಿಗೆ ದೇವರು ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಧಾನ ಮಂತ್ರಿಗಳು ಮನತುಂಬಿ ಆಶೀರ್ವದಿಸಿದರು.
ಜಗ್ಗೇಶ್ ಅವರ ಜೊತೆಗೆ ಪತ್ನಿ ಪರಿಮಳಾ ಜಗ್ಗೇಶ್ ಹಾಗೂ ಪುತ್ರ ಯತಿರಾಜ್ ಕೂಡ ಇದ್ದರು.

ಪರಿಮಳಾ ಜಗ್ಗೇಶ್ ಅವರು ಸಿರಿಧಾನ್ಯಗಳನ್ನು ಬಳಸಿ ಮಧುಮೇಹವನ್ನು ಹತೋಟಿಗೆ ತರುವುದರ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ಇದರ ಉಪಯೋಗವನ್ನು ಸಾಕಷ್ಟು ಜನರು ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ತಿಳಿದ ಪ್ರಧಾನಿಗಳು ಬಹಳ ಖುಷಿಪಟ್ಟರು.

ಮಧುಮೇಹಕ್ಕೆ ಸಂಬಂಧಿಸಿದ ಹಾಗೆ ಸರ್ಕಾರದಿಂದ ನಡೆಯುತ್ತಿರುವ ಕಾರ್ಯಗಳಲ್ಲಿ ಪರಿಮಳಾ ಜಗ್ಗೇಶ್ ಅವರು ಪಾಲ್ಗೊಳ್ಳಲು ಸೂಚಿಸಿದರು. ಅಲ್ಲಿಂದಲೇ ಕೇಂದ್ರ ಸಚಿವರಿಗೂ ಈ ವಿಷಯವನ್ನು ತಿಳಿಸಿದರು. ಜಗ್ಗೇಶ್ ಅವರ ಕಿರಿಯ
ಪುತ್ರ ಯತಿರಾಜ್ ಅವರಿಗೂ ಪ್ರಧಾನ ಮಂತ್ರಿಗಳು ವಿಶೇಷವಾಗಿ ಆಶೀರ್ವದಿಸಿದರು.

ನನಗೆ ಮಾರ್ಚ್ 17ಕ್ಕೆ ಅರವತ್ತು ವರ್ಷ ತುಂಬುತ್ತಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರನಾಯಕ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಅವರ ಆಶೀರ್ವಾದ ಪಡೆದುಕೊಂಡಿದ್ದು ತುಂಬಾ ಸಂತೋಷವಾಗಿದೆ. ಇದು ನನ್ನ ಬಾಳಿನಲ್ಲೇ ಮರೆಯಲಾಗದ ದಿನ ಎಂದು ಜಗ್ಗೇಶ್ ತಿಳಿಸಿದ್ದಾರೆ.‌

Related Posts

error: Content is protected !!