ಮಾ. 23 ರಿಂದ 30 ರವರೆಗೆ 14 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಚಿತ್ರಗಳ ಪ್ರದರ್ಶನ…

ಈ ಬಾರಿ ಮಾರ್ಚ್ 23 ರಿಂದ 30 ರವರೆಗೆ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಮಾರ್ಚ್ 23 ರ ಸಂಜೆ ವಿಧಾನಸೌಧ ಮುಂಭಾಗದಲ್ಲಿ ಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದು, ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

ಮಾರ್ಚ್ 30 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಚಿತ್ರೋತ್ಸವದಲ್ಲಿ 50 ದೇಶಗಳ 200 ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಉಕ್ರೇನ್, ಹಾಂಕಾಂಗ್, ಬೆಲ್ಜಿಯಂ, ನೆದರ್ ಲೆಂಡ್, ಪಿನ್ ಲೆಂಡ್, ಕ್ರೋಷಿಯ, ಇರಾನ್, ಚೀನಾ, ಸ್ವಿಟ್ಜರ್ ಲೆಂಡ್, ಪ್ಯಾಲೆಸ್ಟೆನ್, ಅರ್ಜಂಟೈನಾ, ಸಿಂಗಾಪೂರ್, ಡೆನ್ ಮಾರ್ಕ್, ಗ್ರೀಸ್, ರಷ್ಯಾ, ಫಿಲಿಫೈನ್ಸ್, ಲೆಬನಾನ್, ಪೋಲೆಂಡ್, ರೊಮಾನಿಯಾ, ಕಾಬೋಡೊಯಾ, ಕೆನಡಾ, ಜಪಾನ್, ಸೆನಗಲ್, ಸೇರಿದಂತೆ ಇತರೆ ದೇಶಗಳ ಅತ್ಯುತ್ತಮ ಚಿತ್ರಗಳು ಪ್ರದರ್ಶನವಾಗಲಿವೆ.

ಈ ಚಿತ್ರೋತ್ಸವದಲ್ಲಿ ಏಷಿಯನ್, ಇಂಡಿಯನ್, ಚಿತ್ರಗಳ ಸ್ಪರ್ಧಾ ವಿಭಾಗ ಇರಲಿದೆ ಈ ಮೂರು ವಿಭಾಗದಲ್ಲಿ ತಲಾ ಮೂರು ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ.

ಕನ್ನಡದ 108 ಸಿನಿಮಾಗಳು ಚಿತ್ರೋತ್ಸವಕ್ಕ ಬಂದಿವೆ. ಅವುಗಳ ಪೈಕಿ 12 ಅತ್ಯುತ್ತಮ ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯ್ಕೆ ಮಾಡಿದ 10 ಅತ್ಯುತ್ತಮ ಜನಪ್ರಿಯ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುವುದು.

ಚಿತ್ರೋತ್ಸವದಲ್ಲಿ ಪ್ರತಿ ವದಿನ ಉದ್ಯಮಕ್ಕೆ ಸಂಬಂಧಿಸಿದಂತೆ, ಸಂವಾದ, ಉಪನ್ಯಾಸ, ಮಾಸ್ಟರ್, ಕ್ಲಾಸ್ ಕಾರ್ಯಕ್ರಮ ಇರಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಹೇಳಿದರು.
ಈ ವೇಳೆ ಕಲಾತ್ಮಕ ನಿರ್ದೇಶಕ ನರಹರಿವರಾವ್, ಪ್ರದೀಪ್, ಪಿ.ಶೇಷಾದ್ರಿ, ರಿಜಿಸ್ಟ್ರಾರ್ ಹಿಮಂತ್ ರಾಜು ಇದ್ದರು.

Related Posts

error: Content is protected !!