Categories
ಸಿನಿ ಸುದ್ದಿ

ಹಾಸ್ಯದ ಚೇತೋಹಾರಿ… ಚೇತನ್ ಫ್ರಮ್ ದುರ್ಗ

ಸಿನಿಮಾನೇ ಹಾಗೆ. ಇಲ್ಲಿಗೆ ಒಂದು ಬಾರಿ ಬಂದು ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ನಿಂತರೆ ಸಾಕು, ಕಲೆ ಆವರಿಸಿಕೊಂಡುಬಿಡುತ್ತೆ. ಎಷ್ಟೇ ಕಷ್ಟ ಬಂದರೂ ಬಣ್ಣದ ಮೇಲಿನ ಪ್ರೀತಿ
ಹೋಗುವುದಿಲ್ಲ. ಹೀಗೆ ಕಲೆಯೇ ನನ್ನುಸಿರು ಅಂದುಕೊಂಡು ಇಲ್ಲಿಗೆ ಬಂದಿರುವ ಅದೆಷ್ಟೋ ಮನಸ್ಸುಗಳು ಇಂದು ಅಂದುಕೊಂಡಿದ್ದನ್ನು ಸಾಧಿಸಿ ನಿಟ್ಟುಸಿರು ಬಿಟ್ಟಿವೆ. ಆ ಸಾಲಿಗೆ ಈಗ ಕೋಟೆ ನಾಡಿನ ಪ್ರತಿಭೆ ಕೂಡ ಸೇರಿದೆ.
ಹೆಸರು ಚೇತನ್. ಸದಾ ಉತ್ಸಾಹಿ. ಸಿಕ್ಕಾಪಟ್ಟೆ ಮಾತುಗಾರ. ಯಾವಾಗಲೂ ಒಂದಿಲ್ಲೊಂದು ಸಿನಿಮಾ ಚಟುವಟಿಕೆಗಳಲ್ಲಿರುವ ಅಪ್ಪಟ ದೇಸಿ ಪ್ರತಿಭೆ. ಮೊದಲೇ ಹೇಳಿದಂತೆ ಚೇತನ್ ಚಿತ್ರದುರ್ಗದ ಹುಡುಗ. ಚಿತ್ರದುರ್ಗ ಅಂದಾಕ್ಷಣ ನೆನಪಾಗೋದೇ “ನಾಗರಹಾವು”. ಹೀಗಾಗಿ ಆ ನೆಲದ ಬಹುತೇಕ ಹುಡುಗರು ಸಹಜವಾಗಿಯೇ ನಟನೆಯತ್ತ ವಾಲಿದ್ದುಂಟು. ಆ ಕಲೆಯ ನಂಟು ಈ ಚೇತನ್ಗೂ ಇದೆ. ಹೀಗಾಗಿಯೇ ಚೇತನ್ ತಮ್ಮ ಹೆಸರ ಮುಂದೆ “ದುರ್ಗ”ಹೆಸರು ಸೇರಿಸಿಕೊಂಡಿದ್ದಾರೆ. ಈ ಹೆಸರಲ್ಲೇ ಅವರು ಗುರುತಿಸಿಕೊಂಡಿರುವುದೂ ಉಂಟು. ಚೇತನ್ ದುರ್ಗ ಇದೀಗ ಸೋಶಿಯಲ್ ಮೀಡಿಯಾದಲ್ಲೇ ಹೆಚ್ಚು ಸುದ್ದಿಯಾಗಿರುವ ಪ್ರತಿಭೆ. ಫೇಸ್ಬುಕ್ ಹಿಡಿದವರಿಗೆ ಈ ಹುಡುಗನ ಪರಿಚಯ ಇದ್ದೇ ಇರುತ್ತೆ. ಚೇತನ್ ಮಾತುಗಳಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ಹಾವ-ಭಾವದಲ್ಲೂ ನಗಿಸೋ ಗುಣ ಈ ಪ್ರತಿಭೆಯಲ್ಲಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಚೇತನ್ ದುರ್ಗ ಎಲ್ಲರ ಫೇವರೇಟ್.

 

ಚೇತನ್ ಸಿನಿ ಜರ್ನಿ

ಚೇತನ್ ದುರ್ಗ ಇಂಜಿನಿಯರಿಂಗ್ ಓದಿದ್ದಾರೆ. ಆದರೆ, ಎಲ್ಲರಂತೆ ಸಾಫ್ಟ್ವೇರ್ ಕಂಪೆನಿಯತ್ತ ಮುಖ ಮಾಡಬೇಕಿದ್ದ ಹುಡುಗ ಗಾಂಧಿನಗರದ ಕಡೆ ಮುಖ ಮಾಡಿದೆ. ಮೊದಲೇ ಹೇಳಿದಂತೆ ಕೋಟಿ ನಾಡಿನ ಹುಡುಗನಾಗಿದ್ದರಿಂದ ಅಲ್ಲಿ ರಾಮಾಚಾರಿಯ ಗಾಳಿ ತುಸು ಜೋರಾಗಿಯೇ ಬೀಸಿದೆ. ಆದ್ದರಿಂದಲೇ, ಅವರು ಕೆಲಸ ಪಕ್ಕಕ್ಕಿಟ್ಟು, ಧೈರ್ಯ ಮಾಡಿ ಸಿನಿರಂಗಕ್ಕೆ ಎಂಟ್ರಿಯಾದರು. ಮೊದಲು ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. ಮಾಸ್ಟರ್ ಆನಂದ್ ನಿದರ್ೇಶನದಲ್ಲಿ ಮೂಡಿಬಂದ “ರೋಬೋ ಫ್ಯಾಮಿಲಿ” ಧಾರಾವಾಹಿಯಲ್ಲಿ ಇವರದು ಹಾಸ್ಯ ಪಾತ್ರ. ಆ ಮೂಲಕ ಭರವಸೆ ಮೂಡಿಸಿದ ಚೇತನ್ ದುರ್ಗ ಮೆಲ್ಲನೆ ಅವಕಾಶ ಗಿಟ್ಟಿಸಿಕೊಳ್ಳುತ್ತಾ ಹೋದರು.
ಆ ನಂತರದಲ್ಲಿ ಸಿನಿಮಾ ರಂಗ ಕೂಡ ಕೈ ಬೀಸಿ ಕರೆದಿದ್ದರಿಂದ ಅತ್ತ ಮುಖ ಮಾಡಿದರು. ನಿದರ್ೇಶನ ತಂಡದಲ್ಲೂ ಇವರು ಕೆಲಸ ಶುರುಮಾಡಿದರು. “ಲೈಫು ಸೂಪರ್”, “ಕನ್ನಡಕ್ಕಾಗಿ ಒಂದನ್ನು ಒತ್ತಿ”, “ಗೌಡ್ರು ಹೋಟೆಲ್”, “ವ್ಹೀಲ್ ಚೇರ್ ರೋಮಿಯೊ” ಚಿತ್ರದಲ್ಲಿ ಬರಹ ಕೆಲಸ ಮಾಡಿದರು. ಇನ್ನು, ಇವುಗಳ ಜೊತೆ ಜೊತೆಯಲ್ಲೇ ಹಲವು ಜಾಹಿರಾತು ಕಂಪೆನಿಗಳಲ್ಲಿ ಒಂದು ವರ್ಷ ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯ ಹಲವು ಪ್ರೋಮೋಗಳಿಗೂ ಚೇತನ್ ದುರ್ಗ ಸಹ ನಿದರ್ೇಶಕರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಚಿತ್ರಗಳಲ್ಲೂ ನಟನೆ ಶುರು ಮಾಡಿದ ಚೇತನ್ ದುರ್ಗ ಅಲ್ಲೂ ಎಲ್ಲರ ಮನಗೆದ್ದಿದ್ದಾರೆ. “ರಾಗ”, “ತಿರುಪತಿ ಎಕ್ಸ್ಪ್ರೆಸ್”, “ಟೆರರಿಸ್ಟ್” , “ಕನ್ನಡಕ್ಕಾಗಿ ಒಂದನ್ನು ಒತ್ತಿ”, “ಮೃಗಶಿರ” ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಅಭಿನಯಿಸಿರುವ “ಕಿರಾತಕ-2”, “ಖಾಸಗಿ ಪ್ರೇಮ ಕಥೆ”, “ದಿ ರಿಟನ್ಸರ್್ ಆಫ್ ಕರ್ಮ”, “ಗಜಾನನ ಅಂಡ್ ಗ್ಯಾಂಗ್” ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. “ಗಜಾನನ ಅಂಡ್ ಗ್ಯಾಂಗ್” ಚಿತ್ರದಲ್ಲಿ ಚೇತನ್ ದುರ್ಗ ಐವರಲ್ಲಿ ಇವರೂ ಒಬ್ಬರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

 

ಟ್ರೋಲ್ ವಿಡಿಯೋ ಕಿಂಗ್!

ಈಗಂತೂ ಎಲ್ಲೆಡೆ ಸೋಶಿಯಲ್ ಮೀಡಿಯಾದ್ದೇ ಹವಾ. ಅದರಲ್ಲೂ ಟ್ರೋಲ್ ವಿಡಿಯೊಗಳಿಂದ ಸಾಕಷ್ಟು ಸುದ್ದಿಯಾಗಿರುವ ಚೇತನ್ ದುರ್ಗ, ಮೆಚ್ಚುಗೆ ಪಡೆದುಕೊಂಡಿರುವುದೂ ಉಂಟು. ನೋಡದೇ ಇರೋರು, ಅವರ ಚೇತನ್ ದುರ್ಗ ಫೇಸ್ ಬುಕ್ ಪೇಜ್ಗೆ ಹೋಗಿ ನೋಡಿದರೆ, ಇವರೊಳಗಿರುವ ಹಾಸ್ಯ ಕಲಾವಿದನ ಬಗ್ಗೆ ತಿಳಿಯುತ್ತೆ. ಈಗಾಗಲೇ ಇವರ ಟ್ರೋಲ್ ವಿಡಿಯೋಗಳನ್ನು ನೋಡಿ, ನಟರಾದ ಧ್ರುವ ಸಜರ್ಾ, ಸಂಚಾರಿ ವಿಜಯ್, “ರಾಜಾಹುಲಿ” ಗಿರೀಶ್, ಸುಚೇಂದ್ರ ಪ್ರಸಾದ್, ನಿದರ್ೇಶಕರಾದ ಸಿಂಪಲ್ ಸನಿ, ಮಂಜು ಸ್ವರಾಜ್ ಮೆಚ್ಚಿದ್ದಾರೆ. ಸದ್ಯಕ್ಕೆ ನಟನಾಗಿ ಗುರುತಿಸಿಕೊಳ್ಳಬೇಕೆಂದಿರುವ ಚೇತನ್ ದುರ್ಗ, “ತಾರೆ” ಹೆಸರಿನ ವಿಡಿಯೊ ಆಲ್ಬಂನಲ್ಲೂ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಬಗೆಯ ಪಾತ್ರಗಳನ್ನು ಎದುರು ನೋಡುತ್ತಿರುವ ಚೇತನ್ ದುರ್ಗ ಅವರಿಗೆ ಇಲ್ಲಿ ಗಟ್ಟಿನೆಲೆ ಕಾಣುವ ಭವ್ಯಭರವಸೆಯಂತೂ ಇದೆ

Categories
ಸಿನಿ ಸುದ್ದಿ

ದಸರಾ ಹಬ್ಬಕ್ಕೆ ದಮಯಂತಿ‌ ಧಮಾಕ!


ಮತ್ತೆ ರಿಲೀಸ್ ಆಗಲಿದೆ ರಾಧಿಕಾ‌ ಚಿತ್ರ

ಕೊರೊನಾ‌ ಆತಂಕದ ನಡುವೆಯೇ ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳು ಇದೀಗ ತಮ್ಮ ಕಾರ್ಯ ಚಟುವಟಿಕೆಗಳಿಗೆ ಚಾಲನೆ‌ ನೀಡುತ್ತಿವೆ. ಇದಕ್ಕೆ ಚಿತ್ರರಂಗವೂ ಹೊರತಲ್ಲ. ಈಗಾಗಲೇ ಸಿನಿಮಾರಂಗ ತನ್ನ‌ ಕಾರ್ಯ ಚಟುವಟಿಕೆ ನಡೆಸುತ್ತಿದ್ದು, ಇದೀಗ ಸಿನಿಮಾ‌ ಬಿಡುಗಡೆಗೂ ಮುಂದಾಗಿದೆ. ಅ.16ರಂದು ಮದರಂಗಿ ಕೃಷ್ಣ ಅಭಿನಯದ”ಲವ್ ಮಾಕ್ಟೇಲ್”, ಚಿರಂಜೀವಿ ಸರ್ಜಾ ಅಭಿನಯದ ” ಶಿವಾರ್ಜುನ” ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಅವುಗಳ ಜೊತೆಗೆ ಈಗೆ ರಾಧಿಕಾ ಕುಮಾರಸ್ವಾಮಿ ನಟನೆಯ “ದಮಯಂತಿ” ಚಿತ್ರ ಕೂಡ ಬಿಡುಗಡೆಗೆ ರೆಡಿಯಾಗಿದೆ.

ನಿರ್ದೇಶಕ ನವರಸನ್

ಈಗಾಗಲೇ ಬಿಡುಗಡೆ ಕಂಡು ಮೆಚ್ಚುಗೆ ಪಡೆದಿದ್ದ “ದಮಯಂತಿ” ಚಿತ್ರವನ್ನು ಪುನಃ ಬಿಡುಗಡೆ ಮಾಡಲು ನಿರ್ದೇಶಕ ಕಮ್‌ ನಿರ್ಮಾಪಕ ನವರಸನ್‌ ತಯಾರಿ ನಡೆಸಿದ್ದಾರೆ.
ಅಕ್ಟೊಬರ್ 23ರಂದು ರಾಜ್ಯಾದ್ಯಂತ “ದಮಯಂತಿ” ಚಿತ್ರವನ್ನು ಬಿಡುಗಡೆ ಮಾಡಲು ಅವರು ಮುಂದಾಗಿದ್ದಾರೆ.
ಮತ್ತೆ ಅಬ್ಬರಿಸಲು ಬರುತ್ತಿರುವ ” ದಮಯಂತಿ” ದಸರಾ ಹಬ್ಬಕ್ಕೆ ಮನರಂಜನೆ‌ ನೀಡಲು ರೆಡಿಯಾಗಿದ್ದಾಳೆ.
ಕೊರೊನಾ ಹಿನ್ನೆಲೆಯಲ್ಲಿ ‌ಮನರಂಜನೆಯೂ ಇರಲಿಲ್ಲ.‌ಈಗ ಮನರಂಜನೆ ಬಯಸುವ ಸಿನಿ ಪ್ರೇಮಿಗಳಿಗೆ ಹಬ್ಬವಂತೂ ಹೌದು.‌ಚಿತ್ರರಂಗ ಕೂಡ ಸರ್ಕಾರದ ಸೂಚನೆಯಂತೆ ಎಲ್ಲಾ‌ ಮುಂಜಾಗ್ರತಾ ಕ್ರಮ‌ ಕೈಗೊಂಡು ಚಿತ್ರಮಂದಿರಗಳನ್ನು ಸಜ್ಜುಗೊಳಿಸಿದೆ. ಅದೇನೆ ಇರಲಿ ಚಿತ್ರರಂಗ ಈಗ ಗರಿಗೆದರಿದೆ. ಪ್ರೇಕ್ಷಕನ ಮನ ತಣಿಸಲು ಸಿನಿಮಾ‌ ಮಂದಿ ಕೂಡ ರೆಡಿಯಾಗಿದ್ದಾರೆ.

Categories
ಸಿನಿ ಸುದ್ದಿ

ಇವರು ಕತ್ತಲೆ ಗುಡ್ಡದ ಗೂಢಾಚಾರಿಗಳು!

 ಬರಲಿದ್ದಾರೆ ರಮೇಶ್ ಸುರೇಶ್…

ನ್ಮಡ‌ ಚಿತ್ರರಂಗ ಇದೀಗ ಗರಿಗೆದರಿದೆ. ಕೊರೊನಾ ಕಾಲಿಟ್ಟು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದು ಸುಳ್ಳಲ್ಲ. ಇದಕ್ಕೆ ಬಣ್ಣದ ಲೋಕವೂ ಹೊರತಲ್ಲ. ಈಗ ಮೆಲ್ಲನೆ‌ ಸಿನಿಮಾ‌ ಚಟುವಟಿಕೆಗಳು ಶುರುವಾಗಿವೆ. ಬಹುತೇಕ ಸ್ಟಾರ್ ಚಿತ್ರಗಳ ಚಿತ್ರೀಕರಣಕ್ಕೂ ಚಾಲನೆ‌ ಸಿಕ್ಕಿದೆ. ಹೊಸಬರು ಕೂಡ ಉತ್ಸಾಹದಲ್ಲೇ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಾಲಿಗೆ “ರಮೇಶ್ ಸುರೇಶ್” ಚಿತ್ರವೂ ಸೇರಿದೆ.
‌ಕಳೆದ ವಾರದಿಂದ ಈ ಚಿತ್ರದ ಚಿತ್ರೀಕರಣ ಬಿರುಸಾಗಿಯೇ ಸಾಗಿದೆ.

ಕೃಷ್ಣ , ನಿರ್ಮಾಪಕರು

ಬಹುತೇಕ ಹೊಸ ಪ್ರತಿಭೆಗಳೇ ತುಬಿರುವ‌ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಇಬ್ಬರು ನಿರ್ದೇಶಕರಿದ್ದಾರೆ. ಇಬ್ಬರು ನಿರ್ಮಾಪಕರಿದ್ದಾರೆ. ಹೀರೋಗಳಿಗೆ ಒಬ್ಬರೇ ನಾಯಕಿ ಅನ್ನೋದಷ್ಟೇ ವಿಶೇಷ.
ಅಂದಹಾಗೆ, ಈ ಚಿತ್ರಕ್ಕೆ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶ್ ರಾಜ್ ನಾಯಕರು. ಇವರಿಗೆ ಚಂದನಾ ಸೇಗು ನಾಯಕಿ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ನಿರ್ದೇಶಕರು. ಆರ್ ಕೆ ಟಾಕೀಸ್ ಬ್ಯಾನರ್ ಮೂಲಕ ಕೃಷ್ಣ ಹಾಗೂ ಶಂಕರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಅನುಭವ.ಬಹುತೇಕ‌ ಮಾತಿನ ಭಾಗದ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಸದ್ಯಕ್ಕೆ ಪುಟ್ಟಣ ಕಣಗಾಲ್ ಸ್ಟುಡಿಯೋದಲ್ಲಿ ಚಿತ್ತೀಕರಿಸುತ್ತಿದೆ. ಫೈಟ್ಸ್ ಮತ್ತು ಒಂದು‌ ಐಟಂ ಸಾಂಗ್ ಚಿತ್ರೀಕರಿಸಿದರೆ ಚಿತ್ರಕ್ಕೆ ಕುಂಬಳಕಾಯಿ ಬೀಳಲಿದೆ.ಚಿತ್ರದ ಮತ್ತೊಂದು ಹೈಲೈಟ್ ಅಂದರೆ ಸಾಧುಕೋಕಿಲ ಮತ್ತು ತೆಲುಗಿನ‌ ಖ್ಯಾತ ನಟ ಸತ್ಯ ಪ್ರಕಾಶ್. ಉಳಿದಂತೆ ಮೋಹನ್ ಜುನೇಜಾ ಹಾಗೂ ರಂಗಭೂಮಿ ಪ್ರತಿಭೆಗಳಿವೆ.

ನಾಗರಾಜ್, ರಘುರಾಜ್

*ಹಾಸ್ಯದ‌ ಹೊನಲು

ಸಿನಿಮಾ‌ ಕುರಿತು ಹೇಳುವುದಾದರೆ ಚಿತ್ರದ ಟೈಟಲ್ ಇದೊಂದು ಹಾಸ್ಯಮಯ ಸಿನಿಮಾ ಎಂಬುದನ್ನು ಸಾರುತ್ತದೆ. ಕಥೆ ಕೂಡ‌ ಹಾಸ್ಯವಾಗಿಯೇ ಸಾಗಲಿದೆ.
ಚಿತ್ರದಲ್ಲಿ ಬೆನಕ ಹಾಗೂ ಯಶುರಾಜ್ ಸೋಮಾರಿ ಹುಡುಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸವಿಲ್ಲದ ಆಲೆಮಾರಿ ಹುಡುಗರಾಗಿ ಕಾಣಿಸಿಕೊಂಡಿರುವ ಅವರು, ‘ಇಲ್ಲಿ ಕಥೆಯೇ ಹೀರೋ’ ಎನ್ನುತ್ತಾರೆ. ಹಾಸ್ಯದ ಜೊತೆಗೆ ಎಮೋಶನ್ಸ್‌ ಕೂಡ ಚಿತ್ರದಲ್ಲಿದೆ. ಸಿನಿಮಾ‌ ಅಪ್ಟಟ‌ ಮನರಂಜನೆಯ ಜೊತೆಗೆ ಸಂದೇಶವನ್ನು ಕೊಡಲಿದೆ ಎಂಬುದು ಚಿತ್ರ ತಂಡದ ಮಾತು.
ಇನ್ನು ನಾಯಕರಿಬ್ಬರಿಗೂ ಇದು ಚೊಚ್ಚಲ ಚಿತ್ರ. ಹೊಸಬರನ್ನು ನಂಬಿ ಅವರಿಗೆ ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಕೃಷ್ಣ ಹಾಗೂ ಶಂಕರ್ ಅವರು ಅವಕಾಶ ಕೊಟ್ಟಿದ್ದಾರೆ. ಹೊಸ ಪ್ರತಿಭೆಗಳ‌ ಮೇಲೆ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್‌ ಮತ್ತು ರಘರಾಜ್‌ ಗೌಡ ಕೂಡ ಹಗಲಿರುಳು ಕೆಲಸ ಮಾಡಿಸುತ್ತಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿವೆ. ಪ್ರಮೋದ್‌ ಮರವಂತೆ ಸಾಹಿತ್ಯವಿದೆ. ವಿಶ್ವಜಿತ್ ಛಾಯಾಗ್ರಹಣವಿದೆ. ಮೂರು ಭರ್ಜರಿ ಫೈಟ್ ಗಳಿಗೆ ಥ್ರಿಲ್ಲರ್‌ ಮಂಜು ಸಾಹಸವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.

ಹೊಸಬರ ಉತ್ಸಾಹ

ಈ ಚಿತ್ರದ ಮೂಲಕ ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಬೆನಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ “ರಮೇಶ್ ಸುರೇಶ್” ಚಿತ್ರದ ಮೂಲಕ ಬಣ್ಣದ ಲೋಕಕ್ಕೆ‌ ಎಂಟ್ರಿಯಾಗಿದ್ದಾರೆ.
ಮತ್ತೊಬ್ಬ ಹೀರೋ ಯಶ್ ರಾಜ್ ಕೂಡ ರಂಗಭೂಮಿ‌ ಹಿನ್ನೆಲೆಯಿಂದ ಬಂದವರು. ಸದ್ಯ ತುಮಕೂರಿನಲ್ಲಿ‌ ವಿಜೆಯಾಗಿರುವ ಯಶ್ ರಾಜ್, ಕಾರ್ಯಕ್ರಮಗಳ‌ ಮೂಲಕ ಸಾಕಷ್ಟು ಮಾನವೀಯ ಕೆಲಸಗಳಿಗೂ ಕಾರಣರಾಗಿದ್ದಾರೆ. ಕಲೆಯನ್ನೇ ನಂಬಿರುವ ಯಶ್ ರಾಜ್ ಗಾಂಧಿನಗರದಲ್ಲಿ ಗಟ್ಟಿ‌ನೆಲೆ ಕಂಡುಕೊಳ್ಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಒಬ್ಬ ನಟನಿಗೆ ಏನೆಲ್ಲಾ ಅರ್ಹತೆ ಬಿರಬೇಕೋ ಎಲ್ಲವನ್ನೂ ಕರಗತ ಮಾಡಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ ಯಶ್‌ರಾಜ್.

*ಅವಕಾಶ ಕೊಟ್ಟ ಅನ್ನದಾತರು

ಸಾಮಾನ್ಯವಾಗಿ ಹೊಸಬರಿಗೆ ಸಿನಿಮಾ‌ ಇಂಡಸ್ಟ್ರಿಯಲ್ಲಿ ಅವಕಾಶ‌ ಸಿಗೋದು ತುಬಾನೇ ಕಷ್ಟ. “ರಮೇಶ್ ಸುರೇಶ್” ಚಿತ್ರದ ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಗೌಡ ಮತ್ತು ಹೀರೋಗಳಾದ ಬೆನಕ ಮತ್ತು ಯಶ್ ರಾಜ್ ಅವರಲ್ಲಿರುವ ಪ್ರತಿಭೆ ಹಾಗೂ ಶ್ರದ್ಧೆ ನೋಡಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಥಾಹಂದರದಲ್ಲಿರುವ ಗಟ್ಟಿತನ‌ ನೋಡಿ ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವಕಾಶ ನೀಡಿದ್ದಾರೆ. ಈಗಾಗಲೇ ಚಿತ್ರದ ಕೆಲ ದೃಶ್ಯ ನೋಡಿ ಹಾಡು ಕೇಳಿರುವ ನಿರ್ಮಾಪಕರಿಗೆ ಕನ್ನಡದಲ್ಲಿ ಹೊಸ ಬಗೆಯ ಕಥೆ ಇರುವ ಚಿತ್ರ ಮಾಡಿರುವ ಖುಷಿ ಇದೆ. ಈಗಾಗಲೇ ಗಾಂಧಿನಗರದಲ್ಲಿ ಕೊಂಚ ಸುದ್ದಿಯಾಗಿರುವ “ರಮೇಶ್ ಸುರೇಶ್” ಚಿತ್ರ ಆದಷ್ಟು ಬೇಗ ತನ್ನ ಕೆಲಸ ಮುಗಿಸಿ ಪ್ರೇಕ್ಷಕರ‌ ಮುಂದೆ‌ ಬರಲು ತಯಾರಾಗುತ್ತಿದೆ.

Categories
ಸಿನಿ ಸುದ್ದಿ

ಪಾವನಾ ಮತ್ತೆ ಸ್ಟ್ರಾಂಗ್ ಲೇಡಿ!

ರುದ್ರಿ ಚಿತ್ರತಂಡದ ಜೊತೆ ಇನ್ನೊಂದು ಇನ್ನಿಂಗ್ಸ್

 

ಕನ್ನಡದ ಅಪ್ಪಟ ನಟಿ ಪಾವನಾಗೌಡ ಅಭಿನಯದ “ರುದ್ರಿ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬಿಡುಗಡೆಗೆ ಸಜ್ಜಾಗಿರುವ ಆ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ.

ಹೌದು, “ರುದ್ರಿ” ಕನ್ನಡದ ಮಟ್ಟಿಗೆ ಹೊಸ ಪ್ರಯತ್ನವಂತೂ ಹೌದು.ಈ ಚಿತ್ರ ಬಿಡುಗಡೆ ಮುನ್ನವೇ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಕಾರಣ, ಅದೊಂದು ಮಹಿಳಾ ಪ್ರಧಾನ ಸಿನಿಮಾ. ಅದರಲ್ಲೂ ಸಮಾಜದಲ್ಲಿ ನೊಂದು-ಬೆಂದ ಮಹಿಳೆಯೊಬ್ಬಳ ಕಥಾಹಂದರ ಹೊಂದಿರುವ ಸಿನಿಮಾ. ದೇವೇಂದ್ರ ಬಡಿಗೇರ್ ನಿದರ್ೇಶನದ ಈ ಚಿತ್ರದಲ್ಲಿ ಪಾವನಾ ಗೌಡ ಅವರಿಗೊಂದು ಪವರ್ಫುಲ್ ಪಾತ್ರವಿದೆ. ಕನ್ನಡ ಚಿತ್ರರಂಗಕ್ಕೆ ಬಂದು ಐದಾರು ವರ್ಷಗಳನ್ನೇ ಕಳೆದಿರುವ ಪಾವನಾಗೌಡ ಅವರ ವೃತ್ತಿ ಬದುಕಿನಲ್ಲಿ “ರುದ್ರಿ’ ವಿಶೇಷ ಸಿನಿಮಾ.

LPP
ಈಗಾಗಲೇ “ರುದ್ರಿ” ಹಲವು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿದೆ. ದೇಶ-ವಿದೇಶಗಳಲ್ಲಿ ನಡೆದ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದೆ. ಕೊಲ್ಕತ್ತಾದಲ್ಲಿ ನಡೆದ ಚಿತ್ರೋತ್ಸವ ಹಾಗು ಇಟಲಿ ಸೇರಿದಂತೆ ಹಲವು ದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ “ರುದ್ರಿ’ಗೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಇದೇ ಖುಷಿಯಲ್ಲಿರುವ “ರುದ್ರಿ’ ಚಿತ್ರತಂಡ, ಸಿನಿಮಾ ಬಿಡುಗಡೆ ಮುನ್ನವೇ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದೆ.

ಸದ್ಯಕ್ಕೆ ಆ ಚಿತ್ರಕ್ಕಿನ್ನೂ ಶೀಷರ್ಿಕೆ ಪಕ್ಕಾ ಮಾಡಿಲ್ಲ. ಆ ಚಿತ್ರದಲ್ಲೂ ಪಾವನಾಗೌಡ ಅವರೇ ನಟಿಸಲಿದ್ದಾರೆ. ಅಂದಹಾಗೆ, “ರುದ್ರಿ” ಚಿತ್ರದಲ್ಲಿ ಪಾವನಾಗೌಡ ಅವರದು ಸ್ಟ್ರಾಂಗ್ ವುಮೆನ್ ರೋಲ್. ಮತ್ತೆ, ಹೊಸ ಚಿತ್ರದಲ್ಲೂ ಮಹಿಳಾ ಪ್ರಧಾನ ಕಥೆ ಇರುವುದರಿಂದ, ಅಲ್ಲೂ ಪಾವನಾ ಗೌಡ ಅವರಿಗೆ ವಿಶೇಷ ರೀರಿಯ ಪಾತ್ರ ಸಿಕ್ಕಿದೆ. ಅದೊಂದು ಸ್ಟ್ರಾಂಗ್ ಲೇಡಿ ಪಾತ್ರ. ಸದ್ಯಕ್ಕೆ ಅಕ್ಟೋಬರ್ ಅಂತ್ಯದಲ್ಲಿ ಚಿತ್ರದ ಶೀಷರ್ಿಕೆ ಬಿಡುಗಡೆ ಮಾಡಿ, ಚಿತ್ರೀಕರಣಕ್ಕೆ ಅಣಿಯಾಗಲಿದೆ. ಚಿತ್ರತಂಡ.


ಈ ಮಧ್ಯೆ ಪಾವನಾಗೌಡ ಅವರು, ಚಂದದ ಫೋಟೋ ಶೂಟ್ ಮಾಡಿಸಿದ್ದಾರೆ. ಕೆಲ ಆಯ್ದ ಫೋಟೋಗಳನ್ನು “ಸಿನಿಲಹರಿ” ಓದುಗರ ಮುಂದಿಟ್ಟಿದೆ

Categories
ಸಿನಿ ಸುದ್ದಿ

ಹಿರಿಯ ನಿರ್ದೇಶಕ ನಾಗೇಶ್ ಬಾಬ ನಿಧನ

ಹಿರಿಯ ಚಿತ್ರ ನಿರ್ದೇಶಕ ನಾಗೇಶ್ ಬಾಬ (82) ನಿಧನರಾದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ನಾಗೇಶ್ ಬಾಬ ಅವರು ಪತ್ನಿ ಶ್ಯಾಮಲಾ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

* ಸಿನಿ ಪಯಣ

ಮಂಡ್ಯ ಜಿಲ್ಲೆ ಬೆಳಕವಾಡಿಯವರಾದ ಅವರು, ಬೆಂಗಳೂರಿನಲ್ಲಿ ಬಿಎಸ್ಸಿ ಪದವಿ ಮುಗಿಸಿ ಚಿತ್ರರಂಗದಲತ್ತ ಆಸಕ್ತಿ ಬೆಳೆಸಿ 1956ರಲ್ಲಿ ಮದರಾಸಿನತ್ತ ಪಯಣ ಬೆಳೆಸಿದರು.
ಆರ್.ನಾಗೇಂದ್ರರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957) ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಅವರ ಚಿತ್ರರಂಗದ ನಂಟು ಆರಂಭವಾಯ್ತು.
‘ಬೆಟ್ಟದ ಕಳ್ಳ’, ‘ಪ್ರತಿಮಾ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಾಗೇಶ್ ಬಾಬ ಅವರು ‘ಕೋಟಿ ಚೆನ್ನಯ’ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ದುಡಿದಿದ್ದಾರೆ. ‘ತೂಗುದೀಪ’, ‘ನನ್ನ ಕರ್ತವ್ಯ’ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ. ‘ಅನಿರೀಕ್ಷಿತ’ (1970) ಅವರು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ. ಕೃಷ್ಣಮೂರ್ತಿ ಪುರಾಣಿಕರ ‘ವಸುಂಧರೆ’ ಕೃತಿಯನ್ನು ಆಧರಿಸಿದ ಪ್ರಯೋಗವಿದು. ಚಿತ್ರಕ್ಕೆ ವಿಜಯಭಾಸ್ಕರ್ ಸಂಯೋಜಿಸಿದ ಎರಡು ಟ್ಯೂನ್‌ಗಳಿಗೆ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಮದರಾಸಿಗೆ ತೆರಳಿ ಗೀತೆ ರಚಿಸಿಕೊಟ್ಟಿದ್ದು ವಿಶೇಷ. ಈ ಸಿನಿಮಾ ತೆರೆಕಂಡು ಈ ಹೊತ್ತಿಗೆ ಐವತ್ತು ವರ್ಷ.
ಕನ್ನಡ ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣ ವಿಭಾಗದಲ್ಲಿ ನಾಗೇಶ್ ಬಾಬ ಅವರ ಕೊಡುಗೆ ಸ್ಮರಣೀಯ. ಮದರಾಸಿನಲ್ಲಿ ವೆಂಕಟೇಶ್ವರನ್ ಅವರೊಡಗೂಡಿ ‘ತ್ರೀ ಸ್ಟಾರ್ಸ್’ ಸ್ಥಿರಚಿತ್ರ ಛಾಯಾಗ್ರಹಣ ಸಂಸ್ಥೆ ಆರಂಭಿಸಿದರು (1964). ಮುಂದೆ ಬೆಂಗಳೂರಿಗೆ ಮರಳಿದ ನಂತರ ಗಾಂಧಿನಗರದ 6ನೇ ಕ್ರಾಸ್‌ನಲ್ಲಿ ‘ಪ್ರಗತಿ’ ಸ್ಟುಡಿಯೋ ಆರಂಭಿಸಿದರು (1972). ಸಹೋದರ (ಚಿಕ್ಕಪ್ಪನ ಮಗ) ಅಶ್ವತ್ಥ ನಾರಾಯಣ ಅವರು ನಾಗೇಶ್ ಬಾಬರಿಗೆ ಇಲ್ಲಿ ಜೊತೆಯಾದರು. ಮುಂದೆ ‘ಪ್ರಗತಿ’ ಸ್ಟುಡಿಯೋ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸ್ಥಾನ ಪಡೆಯಿತು. ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಿಗೆ ‘ಪ್ರಗತಿ’ಯ ಸ್ಥಿರಚಿತ್ರ ಛಾಯಾಗ್ರಾಹಣವಿದೆ. ಚಿತ್ರನಿರ್ದೇಶಕರು, ನಟ-ನಟಿಯರಿಗೆ ‘ಪ್ರಗತಿ’ ಆಗ ಮೀಟಿಂಗ್ ಪಾಯಿಂಟ್ ಆಗಿತ್ತು.
ಚಿತ್ರರಂಗದಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಲ್ಲದೆ ತೆರೆಮರೆಯಲ್ಲಿ ಕನ್ನಡ ಸಿನಿಮಾಗೆ ನಾಗೇಶ್ ಬಾಬ ಅವರ ಕೊಡುಗೆ ದೊಡ್ಡದಿದೆ. ಹಲವು ವರ್ಷಗಳ ಕಾಲ ಅವರು ಮದರಾಸಿನಲ್ಲಿದ್ದ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೂಪರಿಂಟೆಂಡ್ ಆಗಿ ಕಾರ್ಯನಿರ್ವಹಿದ್ದರು. ಆಗೆಲ್ಲಾ ಕನ್ನಡ ನಿರ್ಮಾಪಕರು, ನಿರ್ದೇಶಕರಿಗೆ ತಮ್ಮ ಶಿಫಾರಸು ಬಳಸಿ ಕಚ್ಛಾ ಫಿಲ್ಮ್ ದೊರಕಿಸಿಕೊಡುವಲ್ಲಿ ನೆರವಾಗುತ್ತಿದ್ದರು. 2005ರಲ್ಲಿ ‘ಪ್ರಗತಿ’ ಸ್ಟುಡಿಯೋ ಕಾರ್ಯ ಸ್ಥಗಿತಗೊಳಿಸಿದ ನಂತರ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದರು.
ಅದ್ವೈತವನ್ನು ಪ್ರತಿಪಾದಿಸಿದ ನಿಸರ್ಗದತ್ತ ಮಹಾರಾಜ್ ಅವರ ಕುರಿತು ನಾಗೇಶ್ ಬಾಬ ಅವರು ತಯಾರಿಸಿದ (2009) ‘ತತ್ವಮಸಿ – ಯು ಆರ್ ದಟ್’ 87 ನಿಮಿಷಗಳ ಇಂಗ್ಲಿಷ್ ಸಾಕ್ಷ್ಯಚಿತ್ರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನಗೊಂಡಿದೆ. ಮರಾಠಿಯಲ್ಲೂ (ನಿರ್ಗುಣಚೆ ಭೇದಿ) ಈ ಸಾಕ್ಷ್ಯಚಿತ್ರ ತಯಾರಾಗಿದೆ. ಜೆಮಿನಿ ಸ್ಟುಡಿಯೋ ಮಾಲೀಕರಾದ ಎಸ್.ಎಸ್.ವಾಸನ್ ಅವರ ಬಗ್ಗೆ ನಾಗೇಶ್ ಬಾಬ ಪುಸ್ತಕ ರಚಿಸಿದ್ದಾರೆ.
ಕನ್ನಡ ಸಿನಿಮಾರಂಗಕ್ಕೆ ನೇರವಾಗಿ, ಪರೋಕ್ಷವಾಗಿ ನಾಗೇಶ್ ಬಾಬ ಅವರ ಕೊಡುಗೆ ಸ್ಮರಣೀಯ.

Categories
ಸಿನಿ ಸುದ್ದಿ

ಅಶ್ವಿನ್ ಹಾಸನ್ ಗೆ ಸಿಕ್ಕ ಸ್ಯಾಂಡಲ್ವುಡ್ ಆಸನ

ಸಾಫ್ಟ್ ವೇರ್ ಹುಡುಗನ ಬಣ್ಣದ ಹೆಜ್ಜೆ…

ಕಳೆದ ಒಂದುವರೆ ದಶಕದ ಹಿಂದಿನ ಮಾತಿದು. ಆ ಸ್ಪುರದ್ರೂಪಿ ಹುಡುಗ ಆಗಷ್ಟೇ ಎಂಜಿನಿಯರಿಂಗ್ ಮುಗಿಸಿದ್ದ. ಕೆಲಸ ಅರಸಿ ಬೆಂಗಳೂರಿಗೆ ಬಂದಿಳಿದಿದ್ದ. ಮಧ್ಯಮ ವರ್ಗದವರ ಮನೆಯ ಹುಡುಗನಾಗಿದ್ದರಿಂದ ಅವರ ಮನೆಯಲ್ಲೂ ಒಂದಷ್ಟು ಸಮಸ್ಯೆ ಕಾಮನ್ ಆಗಿತ್ತು. ಹೀಗಾಗಿ ಕೆಲಸ ಮಾಡಿ ಬದುಕು ನಡೆಸಲೇಬೇಕಾದ ಅನಿವಾರ್ಯತೆ ಇತ್ತು. ಸಾಫ್ಟ್ವೇರ್ ಕಂಪೆನಿ ಸೇರಿದ್ದ ಆ ಹುಡುಗನ ಮನದಲ್ಲಿ ತಾನೊಬ್ಬ ನಟ ಆಗಬೇಕೆಂಬ ಬಯಕೆ ಇತ್ತು. ಆದರೆ, ಮನೆಯಲ್ಲಿ ವಿರೋಧ. ಆ ವಿರೋಧದ ನಡುವೆಯೂ, ಕೆಲಸ ಮಾಡಿಕೊಂಡೇ, ಈ ಬಣ್ಣದ ಲೋಕದಲ್ಲಿ ಮಿಂದೆದ್ದು, ಇಂದು ಮನೆಯವರ ಪಾಲಿಗೆ ವಿಶ್ವಾಸ ಗಳಿಸಿದ್ದಷ್ಟೇ ಅಲ್ಲ, ಸಿನಿಮಂದಿಯ ನಂಬಿಕೆಗೂ ಪಾತ್ರರಾಗಿ, ಈಗಲೂ ಬಿಝಿ ನಟನಾಗಿ ಬೆಳೆಯುವ ಮೂಲಕ ತನ್ನ ಬಣ್ಣದ ಆಸೆ ಈಡೇರಿಸಿಕೊಂಡಿದ್ದಾರೆ.
ಅಂದಹಾಗೆ, ಅವರು ಬೇರಾರೂ ಅಲ್ಲ, ಅಶ್ವಿನ್ ಹಾಸನ್. ಹೌದು. ಅಶ್ವಿನ್ 2005ರಲ್ಲಿ ಹಾಸನದಲ್ಲಿ ಎಂಜಿನಿಯರಿಂಗ್ ಮುಗಿಸಿ, ನೇರ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ತನ್ನೊಳಗೆ ನಟನೆಯ ಆಸೆ ಬೇರೂರಿತ್ತು. ಹಾಗಾಗಿ ಕೆಲಸ ಮಾಡುತ್ತಲೇ ಅಲ್ಲಲ್ಲಿ ಆಡಿಷನ್ಗೆ ಹೋಗಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದರು. ಆರಂಭದ ದಿನಗಳಲ್ಲಿ ಅಶ್ವಿನ್ ಹಾಸನ್ ಅವರಿಗೆ ಯಶ್ ಹಾಗೂ ಗಿರಿ ಗೆಳೆಯರಾಗಿದ್ದರು. ನಂತರ ನಿದರ್ೇಶಕ ವಿನು ಬಳಂಜ ಪರಿಚಯವಾಗಿ ರಂಗಭೂಮಿ ಕಡೆ ವಾಲುವಂತೆ ಮಾಡಿದರು. ಹಾಗಾಗಿ ಇಂದಿಗೂ ಅವರಿಗೆ ವಿನು ಬಳಂಜ ಗುರು ಸಮಾನ. ಕಲಾಗಂಗೋತ್ರಿಗೆ ಕಾಲಿಡುತ್ತಿದ್ದಂತೆಯೇ, ಅಶ್ವಿನ್ ಹಾಸನ್ ಅವರ ಲೈಫ್ ಕೊಂಚ ಟನರ್್ ಆಯ್ತು. ಕಲಾಗಂಗೋತ್ರಿಯಲ್ಲಿ ಇಂದಿಗೂ ಗುರುತಿಸಿಕೊಂಡಿರುವ ಅಶ್ವಿನ್, ಹಲವ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಆ ಬಳಗದಲ್ಲಿ ಡಾ.ಬಿ.ವಿ.ರಾಜರಾಮ್ ದತ್ತಣ್ಣ, ಗಂಗೋತ್ರಿ ಮಂಜುನಾಥ್, ಬಿ.ಸುರೇಶ, ರಾಜೇಂದ್ರ ಕಾರಂತ್, ಮುಖ್ಯಮಂತ್ರಿ ಚಂದ್ರು, ಶ್ರೀವತ್ಸ, ವಿದ್ಯಾ,ಕಿಟ್ಟಿ ಹೀಗೆ ದೊಡ್ಡವರಿದ್ದರು. ಅವರೆಲ್ಲರ ಜೊತೆ ಕೆಲಸ ಮಾಡಿದ ಖುಷಿ ಅಶ್ವಿನ್ ಅವರದು.

ಮೊದಲ ಆಪರೇಷನ್…!
ಅಶ್ವಿನ್ ಅವರಿಗೆ ಕಲಾಗಂಗೋತ್ರಿ ಸಾಕಷ್ಟು ಕಲಿಸಿತು. ಅದೇ ಕಲಿಕೆ ಅವರನ್ನು ಕಿರುತೆರೆ ಪ್ರವೇಶಿಸುವಂತೆ ಮಾಡಿತು. ವಾಹಿನಿಯೊಂದರಲ್ಲಿ ಮೂಡಿಬರುತ್ತಿದ್ದ “ಅಪ್ಪ” ಎಂಬ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಟಿ.ಎಸ್. ನಾಗಾಭರಣ ನಿದರ್ೇಶಕರು. ಆ ಧಾರಾವಾಹಿಗೆ ಎಂ.ಕೆ.ಮಠ ಅವರು ಸಂಚಿಕೆ ನಿದರ್ೇಶಕರಾಗಿದ್ದರು. ಅವರ ಸಹಕಾರ ಸಾಕಷ್ಟು ಇದ್ದುರಿಂದಲೇ ಅವರು, ಅಲ್ಲಿ ಕೆಲಸ ಮಾಡಿದರು. ಇನ್ನು, ಒಂದು ವರ್ಷ ಸೀರಿಯಲ್ ಮಾಡಿಕೊಂಡೇ, ಸತ್ಯಂ ಕಂಪ್ಯೂಟರ್ಸ್ನಲ್ಲೂ ಕೆಲಸ ಮಾಡುತ್ತಿದ್ದರು. ನಂತರ “ಮಳೆಬಿಲ್ಲು” ಎಂಬ ಮತ್ತೊಂದು ಸೀರಿಯಲ್ನಲ್ಲೂ ನಟಿಸುವ ಅವಕಾಶ ಬಂತು. 2006ರಲ್ಲಿ ಅವರು ನಟಿಸಿದ ಮೊದಲ ಚಿತ್ರ “ಆಪರೇಷನ್ ಅಂಕುಶ” ನಂತರ ರವಿಚೇತನ್ ರೆಫರ್ ಮಾಡಿದ “ಮಂದಾಕಿನಿ” ಸಿನಿಮಾದಲ್ಲಿ ಸೆಕೆಂಡ್ ಲೀಡ್ ಮಾಡಿ ಸೈ ಎನಿಸಿಕೊಂಡರು.
ಮನೆಯಲ್ಲಿ ಕಷ್ಟ ಇದ್ದುದರಿಂದ ಅವರು ಕೆಲಸ ಬಿಡುವ ಪರಿಸ್ಥಿತಿಯಲ್ಲಿರಲಿಲ್ಲ. ಅತ್ತ ಎಜುಕೇಷನ್ ಲೋನ್ ತೀರಿಸಬೇಕಿತ್ತು. ಮನೆಯಲ್ಲೂ ನೋಡಿಕೊಳ್ಳಬೇಕಿತ್ತು. ಹಾಗಾಗಿ ಜಾಬ್ ಬಿಡದೆ, ಎರಡನ್ನೂ ನಿಭಾಯಿಸುತ್ತ ಹೋದರು. ಹೀಗಿರುವಾಗಲೇ ಅವರು ಕೆಲಸ ಮಾಡುತ್ತಿದ್ದ ಕಂಪೆನಿ 2007 ಡಿಸೆಂಬರ್ನಲ್ಲಿ ಫ್ರಾನ್ಸ್ ಹೋಗಬೇಕೆಂದು ಆದೇಶಿಸಿತು. ಮರು ಮಾತನಾಡದೆ, ಅಶ್ವಿನ್ ಹಾಸನ್ ಫ್ರಾನ್ಸ್ಗೆ ಹೋಗಿ, ಸುಮಾರು 10 ತಿಂಗಳು ಕೆಲಸ ಮಾಡಿ, ನಂತರ ನಟನೆಯ ಸೆಳೆತ ಇತ್ತ ಎಳೆದಿದ್ದರಿಂದ ಆರೋಗ್ಯ ಸಮಸ್ಯೆಯ ನೆಪ ಹೇಳಿ ಪುನಃ ಇತ್ತ ಬಂದುಬಿಟ್ಟರು. ಫ್ರಾನ್ಸ್ಗೂ ಹೋಗುವ ಮುನ್ನ ಅವರು ಡಾ. ವಿಷ್ಣುವರ್ಧನ್ ಜೊತೆ “ವಿಷ್ಣು ಸೇನೆ” ಚಿತ್ರದಲ್ಲಿ ನಟಿಸಿದ್ದರು. ಫಾರಿನ್ನಿಂದ ಬಂದ ಬಳಿಕ ಅಶ್ವಿನ್ ಸುಮ್ಮನೆ ಕೂರಲಿಲ್ಲ. ನಟಿಸುವ ಆಸೆ ಇತ್ತು. ಪುನಃ ಹುಡುಕಾಟ ಶುರು ಮಾಡಿದರು. ಆಗ ರವೀಂದ್ರ ವಂಶಿ ಮಾಡಿದ ಕಿರುಚಿತ್ರದಲ್ಲಿ ನಟಿಸಿದರು. ಕೆಲಸ ಮಾಡುತ್ತಲೇ ಸಿನಿಮಾ ಅವಕಾಶಕ್ಕಾಗಿ ಹುಡುಕಾಡುತ್ತಲೇ ಇದ್ದರು. ಈ ಮಧ್ಯೆ 2010ರಲ್ಲಿ ಲವ್ ಮ್ಯಾರೇಜ್ ಆಯ್ತು. ಅತ್ತ ಸಿನಿಮಾ ಸೆಳೆತ ಇದ್ದುದರಿಂದ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದ ಅಶ್ವಿನ್ಗೆ ಪತ್ನಿಯ ಸಹಕಾರವಿತ್ತು. ಜಾಬ್ ಮಾಡಿಕೊಂಡೇ ಸಿನಿಮಾ ಮಾಡಿದರಾಯ್ತು ಅಂತ ರಂಗಭೂಮಿ ನಂಟು ಬಿಡದೆ ದಿನಗಳನ್ನು ಕಳೆಯುತ್ತಾ ಹೋದರು.

ಹುಡುಕಿ ಬಂದ ಅವಕಾಶ
2011ರಲ್ಲಿ ನಿದರ್ೇಶಕ ಮಧುಸೂದನ್ ಪರಿಚಯ ಆಯ್ತು. “ಪಲ್ಲವಿ ಅನುಪಲ್ಲವಿ” ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುವ ಅವಕಾಶ ಸಿಕ್ಕಿತು. ಆದರೆ, 15 ದಿನಗಳ ಡೇಟ್ ಬೇಕಿತ್ತು. ಕಂಪೆನಿಯಲ್ಲಿ ಅಷ್ಟೊಂದು ದಿನ ರಜೆ ಕೊಡುವಂತಿರಲಿಲ್ಲ. ಪುನಃ ಪೇಚಿಗೆ ಸಿಲುಕಿದ ಅಶ್ವಿನ್, ಒಮ್ಮೆ ಹಿರಿಯ ಕಲಾವಿದ ದತ್ತಣ್ಣ ಬಳಿ ಇರುವ ವಿಷಯ ಹೇಳಿಕೊಂಡರು. ಆಗ ದತ್ತಣ್ಣ, ನಿನಗೆ ನಟಿಸೋ ಆಸೆ ಇದೆ. ಇಲ್ಲೇ ಏನಾದರೂ ಮಾಡುವ ಛಲ ಇದೆ. ಧೈರ್ಯವಾಗಿ ನುಗ್ಗು ಅಂದಿದ್ದೇ ತಡ, ಅಶ್ವಿನ್ ಕೂಡ ಧೈರ್ಯ ಮಾಡಿದರು. ಅಷ್ಟೊತ್ತಿಗೆ, ಕಂಪೆನಿಯಲ್ಲಿ ಒಂದು ಬದಲಾವಣೆಯಾಯ್ತು. ಅದು ರಾತ್ರಿ ಶಿಫ್ಟ್ ಕೆಲಸ ಮಾಡಬೇಕೆಂಬ ಬದಲಾವಣೆ. ಜೀವನಕ್ಕಾಗಿ ರಾತ್ರಿ ಪಾಳಿ ಕೆಲಸ ಮಾಡುತ್ತಲೇ ಅಶ್ವಿನ್ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವ ಕೆಲಸಕ್ಕೆ ಮುಂದಾದರು. ಸುಮಾರು ತಿಂಗಳ ಕಾಲ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಮೆಲ್ಲಗೆ ಅಶ್ವಿನ್ ಬಿಝಿಯಾಗುತ್ತಾ ಹೋದರು. 2014ರಲ್ಲಿ ಕೆಲಸವನ್ನೂ ಬಿಟ್ಟು, ನಟನೆಗೆ ನಿಂತರು. ಅಲ್ಲಿಂದ ಅವಕಾಶಗಳು ಒಂದರ ಹಿಂದೆ ಹುಡುಕಿಕೊಂಡು ಬರತೊಡಗಿದವು.

 

ಹಾಸನ್ ಸಿನಿ ಪಯಣ…
ಮೆಲ್ಲನೆ ಸಿನಿಮಾಗೂ ಕಾಲಿಟ್ಟ ಅಶ್ವಿನ್ ಈವರೆಗೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಬಗ್ಗೆ “ಸಿನಿ ಲಹರಿ’ ಜೊತೆ ತಮ್ಮ ಖುಷಿ ಹಂಚಿಕೊಳ್ಳುವ ಅಶ್ವಿನ್ ಹಾಸನ್, “ಜಗ್ಗುದಾದ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ನನ್ನ ಅದೃಷ್ಟವೇ ಬದಲಾಯಿತು. ನಂತರ ಕೃಷ್ಣ ಸರ್ ನನಗೆ “ಹೆಬ್ಬುಲಿ’ ಚಿತ್ರದಲ್ಲಿ ಒಳ್ಳೆಯ ಪಾತ್ರ ಕೊಟ್ಟರು. ನಂತರದ ದಿನಗಳಲ್ಲಿ ಕಮಷರ್ಿಯಲ್ ಚಿತ್ರಗಳೇ ಹೆಚ್ಚು ಹುಡುಕಿ ಬರತೊಡಗಿದವು. “ಜಗ್ಗುದಾದ’ ನನ್ನ ಕೆರಿಯರ್ನಲ್ಲಿ ಸರ್ ಪ್ರೈಸ್. ಆ ಬಳಿಕ “ರಾಜಕುಮಾರ”, “ದಯವಿಟ್ಟು ಗಮನಿಸಿ” ಸಿನಿಮಾಗಳು ತುಂಬಾ ಹೆಸರು ತಂದುಕೊಟ್ಟವು. ನಂತರದ ದಿನಗಳಲ್ಲಿ ನಾನು “ಗೀತಾ”, “ರಂಗ್ ಬಿರಂಗಿ”, “ಕನ್ನಡಕ್ಕಾಗಿ ಒಂದನ್ನು ಒತ್ತಿ”, “ಅನಂತ್ ವರ್ಸಸ್ ನುಸ್ರತ್”, “ಚಕ್ರವ್ಯೂಹ” ಸೇರಿದಂತೆ ಹಲವು ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದೇನೆ. ರಂಗಭೂಮಿಯಲ್ಲಿ ನಾನು ಕಲಿತದ್ದು ಸಾರ್ಥಕವಾಗಿದೆ. ಅಲ್ಲಿ ಕಲಿತದ್ದು ಇನ್ನೊಂದು ಅಂದರೆ, ಎಲ್ಲರೂ ನಟರೇ, ಕೆಲವರು ಹೀರೋಗಳಾಗುತ್ತಾರೆ, ಕೆಲವರು ವಿಲನ್ ಆಗ್ತಾರೆ, ನಾವು ನಮ್ಮ ಕೆಲಸ ಮಾಡ್ತಾ ಹೋಗಬೇಕು ಅನ್ನೋದು. ನನಗೂ ಹೀರೋ ಆಗಬೇಕು ಎಂಬ ಆಸೆ ಇತ್ತು. ಆದರೆ ಆಗಲಿಲ್ಲ. ಈಗ ಆ ಟೈಮ್ ಮುಗಿದಿದೆ. ಹಾಗಾಗಿ ಕಂಟೆಂಟ್ ಸಿನಿಮಾಗಳತ್ತ ಹೆಚ್ಚು ಗಮನಹರಿಸುತ್ತಿದ್ದೇನೆ. ಆ ನಿಟ್ಟಿನಲ್ಲಿ ಸಿಕ್ಕ ಚಿತ್ರ “ಪಯಣಿಗರು”. ಅದೊಂದು ಕಂಟೆಂಟ್ ಚಿತ್ರ. ಅದರಲ್ಲಿನಾಲ್ವರ ಹೀರೋಗಳು. ಆ ಪೈಕಿ ನಾನೂ ಒಬ್ಬ ಎಂಬುದು ಅಶ್ವಿನ್ ಮಾತು.

ಕೇಳೋರೇ ಇರಲಿಲ್ಲ… ಈಗ ಸಾಲು ಸಾಲು ಸಿನ್ಮಾ

ಆರಂಭದಲ್ಲಿ ನಾನು ಯಾರೂ ಅಂತಾನೇ ಸಿನಿಮಾದವರಿಗೆ ಗೊತ್ತಿರಲಿಲ್ಲ. ಆಡಿಷನ್ ಹೋದಾಗ ಯಾರು ಅನ್ನೋರು, ಫೋಟೋ ಕೇಳೋರು. ಈಗ ಹೆಸರೇಳಿದರೆ ಸಾಕು, ಗೊತ್ತು ಬಿಡಿ ಅಂತಾರೆ. ಗೂಗಲ್ ಸಚರ್್ ಮಾಡಿದರೆ ಫೋಟೋ ಸಮೇತ ಡೀಟೇಲ್ಸ್ ಬರುತ್ತೆ. ಅಷ್ಟು ಸಾಕು. ಅದಕ್ಕೆಲ್ಲಾ ಕಾರಣ, ನಾನು ಈವರೆಗೆ ನಟಿಸಿದ ಚಿತ್ರಗಳು ಮತ್ತು ಪಾತ್ರಗಳು. “ಕವಲುದಾರಿ’, “ಅವನೇ ಶ್ರೀಮನ್ನಾರಾಯಣ” ಪಾತ್ರ ಹೆಸರು ತಂದುಕೊಟ್ಟಿವೆ. ಸದ್ಯಕ್ಕೆ ಸಾಕಷ್ಟು ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ. “ಆ ಒಂದು ನೋಟು” ಸಿನಿಮಾದಲ್ಲಿ ನಾನು ಲಾರಿ ಡ್ರೈವರ್ ಪಾತ್ರ ಮಾಡಿದ್ದೇನೆ. “ಯುವರತ್ನ”ದಲ್ಲೊಂದು ಒಳ್ಳೆಯ ಪಾತ್ರವಿದೆ. ಇದೆ. ಇನ್ನು, “ಗಿಲ್ಕಿ”, “ರಾಮಾಜರ್ುನ”, “ನೀಲಿ ಹಕ್ಕಿ”, “ಠಕ್ಕರ್”, “ಆಕ್ಟ್ ಆಫ್ 1978”, “ಯಲ್ಲೋಬೋಡರ್್”, “ಕಡಲ ತೀರದ ಭಾರ್ಗವ”, “ನೀಲಿನಕ್ಷೆ” ಸೇರಿದಂತೆ ಹೊಸಬರ ಚಿತ್ರಗಳಿವೆ. ಇವುಗಳ ಜೊತೆಯಲ್ಲಿ ದೇವರಾಜ್ ಪೂಜಾರಿ ನಿದರ್ೇಶನದ “ಚಾಕರ್ೋಲ್” ಮತ್ತು “ಮಂಗಳ’ ಎಂಬ ವೆಬ್ಸೀರೀಸ್ನಲ್ಲಿ ನಟಿಸಿದ್ದೇನೆ. ನಾನು ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ನಾಗ್ ಅವರನ್ನು ನೋಡಿ ಬೆಳೆದವನು. ಅನಂತ್ನಾಗ್ ಮತ್ತು ಪ್ರಕಾಶ್ ರೈ ಅವರನ್ನು ಮೆಚ್ಚಿಕೊಂಡವನು. ಹಾಗಾಗಿ ಚಾಲೆಂಜ್ ಪಾತ್ರ ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ಅಶ್ವಿನ್.

ಹೀರೋನೇ ಆಗಬೇಕಿಲ್ಲ
ನಾನು ಇಲ್ಲಿ ಕಲಾವಿದ ಎನಿಸಿಕೊಳ್ಳಬೇಕು ಎಂದು ಬಂದಿದ್ದೇನೆ ಹೊರತು ನಾನು ಹೀರೋನೇ ಆಗಬೇಕಿಲ್ಲ. ಸಿಕ್ಕ ಪಾತ್ರಗಳನ್ನು ಕಣ್ಣಿಗೊತ್ತಿಕೊಂಡು ಮಾಡ್ತೀನಿ. ಸದ್ಯ ಕನ್ನಡದಲ್ಲಿ ಒಂದಷ್ಟು ಸ್ಪೇಸ್ ಇದೆ. ಎಂಥಾ ಪಾತ್ರವಿದ್ದರೂ ಮಾಡ್ತೀನಿ. ಪ್ರತಿಭೆ ಇದೆ. ಅದರೊಂದಿಗೆ ಅದೃಷ್ಟವೂ ಇರಬೇಕು. ನಾನೀಗ ನಟನೆ ಇರೋ ಪಾತ್ರ ಟಾಗರ್ೆಟ್ ಮಾಡ್ತಾ ಇದೀನಿ. ಕಳೆದ ಮೂರು ವರ್ಷ ಯಾವ ಸೀರಿಯಲ್ ಮಾಡಿಲ್ಲ. ಸಿನಿಮಾದಲ್ಲೇ ಬಿಝಿ ಇದ್ದೇನೆ. ಮೊದಲು ಮನೆಯಲ್ಲಿ ಸಿನಿಮಾ ಬೇಡ ಅಂತ ಹೇಳುತ್ತಿದ್ದವರಿಗೆ ಈಗ ನಂಬಿಕೆ ಬಂದಿದೆ. ಬೇರೆ ಭಾಷೆಯಲ್ಲೂ ನಟಿಸುವ ಆಸೆ ಇದೆ. ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಮಾಡ್ತೀನಿ ಎನ್ನುವ ಅಶ್ವಿನ್, ಫ್ಯಾಮಿಲಿ ಕಮಿಟ್ಮೆಂಟ್ ಇರುವುದರಿಂದ ಇಂಥದ್ದೇ ಪಾತ್ರ ಬೇಕು ಅಂತ ಜೋತು ಬೀಳಲ್ಲ. ಬದುಕಿಗಾಗಿ ಒಂದಷ್ಟು ಪಾತ್ರ ಮಾಡಿದ್ದಂಟು. ಆದರೂ, ಈಗ ಹೊಸಬಗೆಯ ಪಾತ್ರ ಎದುರು ನೋಡುತ್ತಿದ್ದೇನೆ ಎನ್ನುವುದು ಅಶ್ವಿನ್ ಮಾತು

Categories
ಸಿನಿ ಸುದ್ದಿ

ಶಂಕರ್ ನಾಗ್ ಇಲ್ಲದ ಆ ಮೂರು ದಶಕ ಇಂದು ಆಟೋರಾಜನ ಪುಣ್ಯಸ್ಮರಣೆ

ಶಂಕರ್ ನಾಗ್…

ಕನ್ನಡ‌ ಚಿತ್ರರಂಗ ಕಂಡ ಅದ್ಬುತ ನಟ,‌ ನಿರ್ದೇಶಕ ಮತ್ತು ತಂತ್ರಜ್ಞ. ಇದ್ದ ಅಲ್ಪ ಸಮಯದಲ್ಲೇ ಸಾಕಷ್ಟು ಸಂದೇಶವುಳ್ಳ ಸಿನಿಮಾ ಕಟ್ಟಿಕೊಡುವ ಮೂಲಕ ಕನ್ಮಡಿಗರ ಪಾಲಿಗೆ ಪ್ರೀತಿಯ ಶಂಕ್ರಣ್ಣ ಆಗಿ ಉಳಿದವರು. ಅವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳ ಮೂಲಕ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ಅವರು ಇಲ್ಲದ 30 ವರ್ಷಗಳು ಕಳೆದಿವೆ. ಸೆ.30, 1990 ಅವರು ಇಹಲೋಕ ತ್ಯಜಿಸಿದರು. ಮೂರು ದಶಕ ಕಳೆದರೂ ಅವರ ನೆನಪು ಮಾತ್ರ ಜೀವಂತ. ಸೆ.30 ಆಟೋರಾಜನ ಪುಣ್ಯಸ್ಮರಣೆ. ಶಂಕರ್ ನಾಗ್ ಅವರಿಗೆ ಎಲ್ಲಾ ವರ್ಗದ ಅಭಿಮಾನಿಗಳೂ ಇದ್ದಾರೆ. ಅವರ ಎದೆಯಲ್ಲಿ ಸದಾ ಹಸಿರಾಗಿರುವ ಶಂಕರ್ ನಾಗ್ ಎಂದೂ ಮರೆಯದ ಧ್ರುವತಾರೆ.
ಇಂದಿಗೂ ಅವರು ಗೀತಾ, ಸಾಂಗ್ಲಿಯಾನ, ಮಿಂಚಿನ ಓಟ, ಒಂದು ಮುತ್ತಿನ ಕಥೆ, ಮಾಲ್ಗುಡಿ ಡೇಸ್… ಮೂಲಕ ನೆನಪಾಗುತ್ತಲೇ ಇದ್ದಾರೆ.

Categories
ಸಿನಿ ಸುದ್ದಿ

ರಾಕ್ ಲೈನ್ ಸುಧಾಕರ್ ನಿಧನ ಶೂಟಿಂಗ್ ವೇಳೆ ಹೃದಯಾಘಾತ

ಕನ್ನಡ ಚಿತ್ರರಂಗದ ಹಾಸ್ಯ ನಟ ರಾಕ್ ಲೈನ್ ಸುಧಾಕರ್ (65) ಗುರುವಾರ (ಸೆ.24) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ವಿಶಿಷ್ಠ ಧ್ವನಿ ಮತ್ತು ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ಸುಧಾಕರ್‌ ಅವರು, ‘ಶುಗರ್ ಲೆಸ್’ ಸಿನಿಮಾದ ಚಿತ್ರೀಕರಣದಲ್ಲಿರುವಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ.
‘ಪಂಚರಂಗಿ’, ‘ಪರಮಾತ್ಮ’, ‘ಡ್ರಾಮಾ’, ‘ಟೋಪಿವಾಲಾ’, ‘ಝೂಮ್‌’, ‘ವಾಸ್ತು ಪ್ರಕಾರ’, ‘ಲವ್ ಇನ್‌ ಮಂಡ್ಯ’, ‘ಮಿಸ್ಟರ್ ಅಂಡ್ ಮಿಸೆಸ್‌ ರಾಮಾಚಾರಿ’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’,’ಶೋಕಿವಾಲ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ಚಿತ್ರಗಳಲ್ಲಿ ಖಾಯಂ ಕಲಾವಿದರಾಗಿದ್ದರು.
ಸುಧಾಕರ್ ಅವರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಾಗಾಗಿ ಅವರಿಗೆ ರಾಕ್ ಲೈನ್ ಸುಧಾಕರ್ ಎಂದೇ ಕರೆಯಲಾಗುತ್ತಿತ್ತು.
ಕೆ.ಎಂ.ಶಶಿಧರ್ ನಿರ್ದೇಶಿಸಿ, ನಿರ್ಮಿಸುತ್ತಿರುವ ‘ಶುಗರ್ ಲೆಸ್’ ಚಿತ್ರದಲ್ಲಿ ಅವರು, ಮೂರು ದಿನಗಳ ಕಾಲ ನಟಿಸಿದ್ದರು. ಗುರುವಾರ ಬೆಳಗ್ಗೆ ಬನ್ನೇರುಘಟ್ಟ ಸಮೀಪ ಚಿತ್ರೀಕರಣ ನಡೆಯುತ್ತಿತ್ತು. ತಮ್ಮ ಪಾತ್ರಕ್ಕೆ ಮೇಕಪ್ ಮಾಡಿಕೊಂಡು ಶಾಟ್ ಗೆ ರೆಡಿಯಾಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿದ್ದಾರೆ.ಮೃತರ ಅಂತ್ಯಕ್ರಿಯೆ ಶುಕ್ರವಾರ (ಸೆ.25)ರಂದು ನಡೆಯಲಿದೆ.
ಸಂತಾಪ: ಕನ್ನಡ ಚಿತ್ರರಂಗದ ಗಣ್ಯರು, ನಟ, ನಿರ್ಮಾಪಕ, ನಿರ್ದೇಶಕರು
ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.

Categories
ಸಿನಿ ಸುದ್ದಿ

ಎವಿಡೆನ್ಸ್ ಕಂಪ್ಲೀಟ್

  • ಒಂದೇ ಲೊಕೇಷನ್,  ಐದು ದಿನ ಚಿತ್ರೀಕರಣ – –ಕನ್ನಡದಲ್ಲೊಂದು ಇದು ವಿಭಿನ್ನ ಪ್ರಯೋಗ

5 ದಿನ ರಾತ್ರಿ ಹಗಲು ಚಿತ್ರೀಕರಣ

‘ಕಿರಗೂರಿನ ಗಯ್ಯಾಳಿಗಳು’ ಖ್ಯಾತಿಯ ಮಾನಸ ಜೋಶಿ ವಿಭಿನ್ನ ಕಥೆ, ಪಾತ್ರವಿರುವ ‘ಎವಿಡೆನ್ಸ್’ ಚಿತ್ರ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಮೊನ್ನೆಯಷ್ಟೇ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಈಗ ಆ ಚಿತ್ರ ಪೂರ್ಣಗೊಂಡಿದೆ.
ಹೌದು ಹೊಸ ಗೆಟಪ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಮಾನಸ ಜೋಶಿ ಅವರ ‘ಎವಿಡೆನ್ಸ್’ ಚಿತ್ರಕ್ಕೆ ಪ್ರವೀಣ್ (ಪಿ ಆರ್) ನಿರ್ದೇಶಕರು. ಅವರದೇ ಶ್ರೀ ಧೃತಿ ಪ್ರೊಡಕ್ಷನ್ ಮೂಲಕ ತಯಾರಾಗುತ್ತಿರುವ ‘ಎವಿಡೆನ್ಸ್’ ಚಿತ್ರಕ್ಕೆ ಅರವಿಂದ್ ಕುಮಾರ್, ಸುರೇಂದ್ರ ಶೆಟ್ಟಿ, ನರಸಿಂಹಮೂರ್ತಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಕೇವಲ ಎರಡು ಮುಖ್ಯ ಪಾತ್ರಗಳಿವೆ.

ಮಾನಸ ಜೋಶಿ ಜೊತೆ ರೋಬೊ ಗಣೇಶ್ ನಟಿಸುತ್ತಿದ್ದಾರೆ. ಅವರಿಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದರೆ, ಮಾನಸ ಜೋಶಿ‌ ಮೊದಲ ಸಲ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ಒಂದೇ ರೂಮ್ ನಲ್ಲಿ ಕಥೆ ನಡಯಲಿದೆ. ಎರಡು ತಾಸು ಇಡೀ ಚಿತ್ರ ಒಂದೇ ರೂಮ್ ನಲ್ಲಿ ಸಾಗಲಿದೆ ಎಂಬುದು ವಿಶೇಷ. ಆ ರೂಮ್ ನಲ್ಲೇ ಚಿತ್ರೀಕರಣ ಮಾಡಿ ಮುಗಿಸಿರುವ ನಿರ್ದೇಶಕರು, ಸದ್ಯ ಎಡಿಟಿಂಗ್, ಡಬ್ಬಿಂಗ್ ಕಡೆ ಗಮನ ಹರಿಸಿದ್ದಾರೆ.

ಕನ್ನಡಕ್ಕೊಂದು ವಿಭಿನ್ನ ಪ್ರಯತ್ನದ ಸಿನಿಮಾ‌ ಆಗಿರುವುದರಿಂದ ಚಿತ್ರಮಂದಿರ ಶುರುವಾಗುತ್ತಿದ್ದಂತೆಯೇ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ.ಇನ್ನು ಈ ಚಿತ್ರಕ್ಕೆ ರವಿಸುವರ್ಣ ಛಾಯಾಗ್ರಹಣವಿದೆ. ಇದು ಅವರ 25ನೇ ಚಿತ್ರ ಎಂಬುದು ಮತ್ತೊಂದು ವಿಶೇಷ.ಚಿತ್ರಕ್ಕೆ ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ, ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಶುಗರ್ ಲೆಸ್ ಶುರು… ಆ್ಯಕ್ಷನ್ ಕಟ್ ಹೇಳಿದ ಶಶಿಧರ್

‘ಡಾಟರ್‌ ಆಫ್ ಪಾರ್ವತಮ್ಮ’ ಮೂಲಕ ನಿರ್ಮಾಪಕರಾದ ಶಶಿಧರ್‌ ಕೆ.ಎಂ.ಅವರು ಹೊಸದೊಂದು ಕಥೆ ಬರೆದು, ನಿರ್ದೇಶನ ಮಾಡಲು ಹೊರಟ ಸುದ್ದಿ ಎಲ್ಲರಿಗೂ ಗೊತ್ತು. ಇತ್ತೀಚೆಗೆ ಅವರು ‘ಶುಗರ್‌ಲೆಸ್‌ ‘ ಚಿತ್ರದ ಮುಹೂರ್ತ ನೆರವೇರಿಸಿದ್ದರು. ಸೋಮವಾರ ಅವರ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನದ ಜರ್ನಿ ಶುರು ಮಾಡಿದ್ದಾರೆ.ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ‘ಶುಗರ್ ಲೆಸ್’ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಶಿಧರ್,ಚಿತ್ರದ ಕಥೆಗೆ ತಕ್ಕಂತೆ ಶೀರ್ಷಿಕೆ ಇಟ್ಟಿದ್ದು, ಡಯಾಬಿಟಿಸ್‌ ಕುರಿತ ಕಥೆ ಹೇಳಲು ಹೊರಟಿದ್ದಾರೆ. ಈ ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಹೊರಟಿದ್ದಾರೆ ಅವರು.ಶಶಿಧರ್ ಹೇಳುವಂತೆ, ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ. ಸಮಾಜದಲ್ಲಿ ಆ ವಿಷಯವನ್ನು ಹೇಳಿಕೊಳ್ಳಲೂ ಆಗದ ವ್ಯಕ್ತಿಗಳು ಎಷ್ಟೆಲ್ಲಾ ಯಾತನೆ ಅನುಭವಿಸುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಅವರು. ಯಾವ ಭಾಷೆಯಲ್ಲೂ ಈ ಕಂಟೆಂಟ್‌ ಇರದ ಕಾರಣ, ಅವರು ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ.ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ಶಶಿಧರ್‌ ಗೆ ನಿರ್ಮಾಪಕ ಪುಷ್ಕರ್‌ ಕೈ ಜೋಡಿಸಿದ್ದಾರೆ.

error: Content is protected !!