Categories
ಸಿನಿ ಸುದ್ದಿ

ಕನ್ನೇರಿ ಹಿಂದೆ ನಿಂತ ವಸಿಷ್ಠ ಸಿಂಹ; ಕಾಣದ ಊರಿಗೆ ಹಾಡು ಹೊರ‌ ಬಂತು…

ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಸಿನಿಮಾ ‘ಕನ್ನೇರಿ’. ಈಗಾಗಲೇ ಕನ್ನೇರಿ ಸಿನಿಮಾದ ಕೆಲ ಹಾಡುಗಳು ಕೇಳುಗರ ಮನ ಮುಟ್ಟಿದ್ದು, ಈಗ ‘ಕಾಣದ ಊರಿಗೆ..’ ಎಂಬ ಹಾಡನ್ನು ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದ್ದಾರೆ.

ಕೋಟಿಗಾನಹಳ್ಳಿ ರಾಮಯ್ಯ ಪೋಣಿಸಿರುವ ಚೆಂದದ ಸಾಲುಗಳಿಗೆ ಕದ್ರಿ ಮಣಿಕಾಂತ್ ಅಷ್ಟೇ ಇಂಪಾದ ಸಂಗೀತ ನೀಡಿದ್ದು, ಕೀರ್ತನಾ ಹೊಳ್ಳ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ.

ಕೋಟಿಗಾನಹಳ್ಳಿ ರಾಮಯ್ಯ ಬರೆದಿರುವ ಕಾದಂಬರಿ ಆಧಾರಿತ ಚಿತ್ರಕ್ಕೆ ನಿರ್ದೇಶಕ ನೀನಾಸಂ ಮಂಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಂಜು ಚಿತ್ರಕಥೆಯ ಜತೆಗೆ ಕಲಾ ನಿರ್ದೇಶನ ಕೂಡ ನಿಭಾಯಿಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ.

ಪ್ರಕೃತಿಯ ಮಡಿಲಿನಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನರನ್ನು, ಅರಣ್ಯ ಇಲಾಖೆ ಒಕ್ಕಲೆಬ್ಬಿಸಿತು. ಇದರಿಂದ ಅವರ ಬದುಕು ಸಂಕಷ್ಟಕ್ಕೆ ಸಿಲುಕಿತು. ಹೆಣ್ಣುಮಕ್ಕಳು ಪಟ್ಟಣದಲ್ಲಿ ಮನೆಗೆಲಸಕ್ಕೆ ಸೇರಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ರೀತಿ ಪಟ್ಟಣಕ್ಕೆ ಬಂದ ಬುಡಕಟ್ಟು ಜನಾಂಗದ ಬಾಲಕಿ ಮುತ್ತಮ್ಮ ಯಾನೆ ಕನ್ನೇರಿ ಮನೆಗೆಲಸ ಮಾಡುವಾಗ ಮನೆಯ ಮಾಲೀಕಳ ದೌರ್ಜನ್ಯಕ್ಕೆ ತುತ್ತಾಗಿ ಜೈಲು ಸೇರುತ್ತಾಳೆ. ಆಕೆ ಜೈಲಿನಿಂದ ಹೊರಬರಲು ನಡೆಸುವ ಹೋರಾಟದ ಕಥಾಹಂದರವೇ ಈ ‘ಕನ್ನೇರಿ’.

ಕನ್ನೇರಿ ಸಿನಿಮಾದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಒಂದೊಂದೆ ಹಾಡುಗಳನ್ನು‌ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ.

ಉಳಿದಂತೆ ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ , ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ‘ಕನ್ನೇರಿ’ ಚಿತ್ರಕ್ಕಿದೆ

Categories
ಸಿನಿ ಸುದ್ದಿ

ಅನುಶ್ರೀ ಈಗ ಸೈತಾನ್! ಇದು ನಿರ್ದೇಶಕ ಲೋಹಿತ್ ನಿರ್ಮಾಣದ ಚಿತ್ರ

ಕನ್ನಡದಲ್ಲಿ”ಮಮ್ಮಿ”, “ದೇವಕಿ” ಯಂತಹ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್.ಹೆಚ್, “ಸೈತಾನ್” ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಪಾರ್ಥಿಬನ್ ಅವರು ನಿರ್ಮಾಣದಲ್ಲಿ ಲೋಹಿತ್ ಅವರಿಗೆ ಜೊತೆಯಾಗಿರುವುದು ವಿಶೇಷ. ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಈ ವೇಳೆ ಅದಿತಿ ಪ್ರಭುದೇವ, ಭಾವನಾರಾವ್, ಸಮಾಜ ಸೇವಕಿ ಮಮತಾ ದೇವರಾಜ್, ಯುವರಾಜ್, ಸಂಭಾಷಣೆಕಾರ ಮಾಸ್ತಿ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅನುಶ್ರೀ ಅಭಿನಯಿಸುತ್ತಿರುವ ಈ ಚಿತ್ರವನ್ನು ಪ್ರಭಾಕರ್ ನಿರ್ದೇಶಿಸುತ್ತಿದ್ದಾರೆ.
ಲೋಹಿತ್ ಬಳಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಪ್ರಭಾಕರ್ ಅವರಿಗೆ ಇದು ಚೊಚ್ಚಲ ಚಿತ್ರ.

ನಾನು ನಿರೂಪಕಿಯಾಗಿ ಚಿತ್ರರಂಗಕ್ಕೆ ಬಂದಿದ್ದು. ಅನುಶ್ರೀ ಕೂಡ ನಿರೂಪಕಿಯಾಗಿ ಹೆಸರು ಮಾಡಿರುವವರು. ಲೋಹಿತ್ ಅವರ “ಮಮ್ಮಿ” ಚಿತ್ರ ನೋಡಿದ್ದೇನೆ. ಚಿಕ್ಕ ವಯಸ್ಸಿಗೆ ಉತ್ತಮ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಶೀರ್ಷಿಕೆ ಕೂಡ ಕುತೂಹಲ ಹುಟ್ಟಿಸಿದೆ. ಚಿತ್ರತಂಡಕ್ಕೆ ಒಳಿತಾಗಲಿ ಎಂದರು ನಟಿ ಅದಿತಿ ಪ್ರಭುದೇವ.

ನನ್ನ “ಗಾಳಿಪಟ” ಸಿನಿಮಾ ವೇಳೆಗೆ ಅನುಶ್ರೀ ಕೂಡ ವೃತ್ತಿ ಜೀವನ ಆರಂಭಿಸಿದ್ದು. ಆನಂತರ ನಿರೂಪಕಿಯಾಗಿ ಅವರು ಎಷ್ಟು ಹೆಸರು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಭಾವನಾರಾವ್.

ಮಾಸ್ತಿ, ಮಮತಾ ದೇವರಾಜ್ ಹಾಗೂ ಯುವರಾಜ್ ಸಹ ತಮ್ಮ ಪ್ರೋತ್ಸಾಹದ ಮಾತುಗಳ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಎಸ್ ಎಂ ಪಿ ಪ್ರೊಡಕ್ಷನ್ಸ್ ಹಾಗೂ ಲೋಹಿತ್ ಹೆಚ್ ಪ್ರೊಡಕ್ಷನ್ಸ್ ಮೂಲಕ ಗೆಳೆಯ ಪಾರ್ಥಿಬನ್ ಹಾಗೂ ನನ್ನ ಸೋದರ ಪುನೀತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನನ್ನ ಜೊತೆ ಕೆಲಸ ಮಾಡಿರುವ ಪ್ರಭಾಕರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅನುಶ್ರೀ ಅವರು ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲರ ಅಭಿನಯ ಚೆನ್ನಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮಾಸಾಂತ್ಯಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆ ಎಂದರು ಲೋಹಿತ್.

ನಾನು ಈ ಚಿತ್ರದಲ್ಲಿ ಅಭಿನಯಿಸಲು ಕಾರಣ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅವರೆ ನನಗೆ ಲೋಹಿತ್ ಅವರ ಪರಿಚಯ‌ ಮಾಡಿಸಿದ್ದು. ಈ ಬಗ್ಗೆ ಇಮ್ರಾನ್ ನನಗೆ ಹೇಳಿದಾಗ ನಾನು ಬೇಡ ಅಂದೆ. ಕಿರುತೆರೆಯಲ್ಲಿ ಆರಾಮವಾಗಿದ್ದೀನಿ ಅಂತಲೂ ಹೇಳಿದ್ದೆ. ನಂತರ ಅವರು ಕಥೆ ಕೇಳಿ ಅಂದರು. ಲೋಹಿತ್ ಹೇಳಿದ ಕಥೆ ಕೇಳಿ ಅಭಿನಯಿಸಲು ಒಪ್ಪಿಕೊಂಡೆ. “ಉಪ್ಪು ಹುಳಿ ಖಾರ” ಚಿತ್ರದ ನಂತರ ಮತ್ತೊಮ್ಮೆ ನನ್ನ ರೀ ಎಂಟ್ರಿ ಅನ್ನಬಹುದು. ಇದರಲ್ಲಿ ಹೀರೋ, ಹೀರೋ ಇನ್ ಅಂತ ಏನು ಇಲ್ಲ. ಕಥೆಯೇ ನಿಜವಾದ ಹೀರೋ ಎನ್ನುತ್ತಾರೆ ಅನುಶ್ರೀ.

ಈ ಚಿತ್ರದಲ್ಲಿ ಅಭಿನಯಿಸಿರುವ ಗೌತಮ್ ಬಿ.ಎನ್, ಕೃತಿ, ಐಶ್ವರ್ಯ ಶಿಂಧೋಗಿ, ಸಾರಿಕಾ ರಾವ್, ಭಾರ್ಗವ ವೆಂಕಟೇಶ್, ಗ್ರೀಷ್ಮ ಶ್ರೀಧರ್, ಹರ್ಷ್, ಸಾರಿಕಾ ರಾವ್ ಮೊದಲಾದವರು ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಉಪ್ಪಿ ಅಣ್ಣನ ಮಗ ಈಗ ಹಂಟರ್; ಹೊಸ ಸಿನಿಮಾಗೆ ಉಪೇಂದ್ರ ದಂಪತಿ ಚಾಲನೆ…

ನಿರಂಜನ್ ಸುಧೀಂದ್ರ ನಾಯಕರಾಗಿ ಅಭಿನಯಿಸುತ್ತಿರುವ “ಹಂಟರ್” ಚಿತ್ರ ಸೆಟ್ಟೇರಿದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಚಿತ್ರಕ್ಕೆ ಚಾಲನೆ ನೀಡಿದರು. ಈ ವೇಲೆ
ಫಸ್ಟ್‌ ಲುಕ್ ಟೀಸರ್ ಅನ್ನು ಉಪೇಂದ್ರ ಬಿಡುಗಡೆ ಮಾಡಿ ಶುಭ ಕೋರಿದರು.

ಉಪೇಂದ್ರ ಮಾತನಾಡಿ, ‘ನಿಜ ಹೇಳಬೇಕು ಅಂದರೆ, ಎಲ್ಲಾ ಗೊತ್ತು ಅನ್ನುವವರಿಗೆ ಏನೂ ಗೊತ್ತಿರಲ್ಲ. ಏನೂ ಗೊತ್ತಿಲ್ಲ ಅನ್ನುವವರಿಗೆ ಎಲ್ಲಾ ಗೊತ್ತಿರುತ್ತದೆ. ನಿರ್ಮಾಪಕರು ಸಂಕಷ್ಟ ಚತುರ್ಥಿ ದಿನ ಗಣ ಹೋಮ ಮಾಡಿ ಚಿತ್ರ ಆರಂಭಿಸಿದ್ದಾರೆ. ಚಿತ್ರಕ್ಕೆ ಒಳ್ಳೆಯದಾಗಲಿ. ನಿರ್ದೇಶಕರು ಸೇರಿದಂತೆ ತಂಡದಲ್ಲಿ ಉತ್ಸಾಹವಿದೆ. ನಿರಂಜನ್ ಬಗ್ಗೆ ಹೇಳುವುದಾದರೆ ಅವನು ಚಿಕ್ಕ ವಯಸ್ಸಿನಲ್ಲೇ ನಟ. ನನ್ನ A ಚಿತ್ರದಲ್ಲಿ ಒಂದು ಚಿಕ್ಕ ಮಗು ಮಲಗಿರುವ ದೃಶ್ಯವಿದೆ. ಆ ಮಗು ನಮ್ಮ ನಿರಂಜನ್. ಆನಂತರ ನಾಟಕ, ಸಿನಿಮಾ ಇದರ ಮೇಲೆ ಅವನ ಆಸಕ್ತಿ ಬೆಳೆಯಿತು. ಅಷ್ಟೇ ಶ್ರಮ ಪಡುತ್ತಾನೆ. ಅವನಿಗೂ ಒಳ್ಳೆಯದಾಗಲಿ ಎಂದರು ಉಪೇಂದ್ರ.

ಪ್ರಿಯಾಂಕ ಉಪೇಂದ್ರ ಅವರು ‌ಸಹ ಚಿತ್ರತಂಡಕ್ಕೆ ತಮ್ಮ ಮಾತುಗಳ ಮೂಲಕ ಶುಭ ಕೋರಿದರು.

ನಿರ್ಮಾಪಕ ತ್ರಿವಿಕ್ರಮ ಮಾತನಾಡಿ, ಇದು ನಮ್ಮ ಸಂಸ್ಥೆಯ ಮೂರನೇ ಚಿತ್ರ. “ಪರಿ” ಹಾಗೂ “ಸೀಜರ್” ಹಿಂದಿನ ಚಿತ್ರಗಳು. ನಮ್ಮ “ಸೀಜರ್” ಚಿತ್ರ ನಿರ್ದೇಶನ ಮಾಡಿದ್ದ ವಿನಯ್ ಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರು ಕಥೆ ಹೇಳಿ, ನಿರಂಜನ್ ನಾಯಕ ಅಂದ ತಕ್ಷಣ ಒಪ್ಪಿಕೊಂಡೆ. ನಿರಂಜನ್ ಅವರಿಗೆ ನಾಯಕನಿಗಿರಬೇಕಾದ ಎಲ್ಲಾ ಗುಣಗಳಿವೆ. ಮುಂದೊಂದು ದಿನ ಅವರು ಬಾಲಿವುಡ್ ನಲ್ಲೂ ಮಿಂಚಲಿದ್ದಾರೆ ಎಂದು ನಿರ್ಮಾಪಕ ತ್ರಿವಿಕ್ರಮ ಹಾರೈಸಿದರು.

ಇದು ನನ್ನ ಎರಡನೇ ಚಿತ್ರ. “ಹಂಟರ್” ಚಿತ್ರ ಎಲ್ಲರಿಗೂ ಹಿಡಿಸಲಿದೆ. ನನಗೆ ಕೇಳಿದನ್ನೆಲ್ಲಾ ಕೊಡುವ ನಿರ್ಮಾಪಕರು ಸಿಕ್ಕಿರುವುದು ಪುಣ್ಯ. ಕಳೆದ ಆರು ತಿಂಗಳಿಂದ ಈ ಚಿತ್ರಕ್ಕಾಗಿ ನಿರಂಜನ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಕೇರಳದ ಸೌಮ್ಯ ಮೆನನ್ ಈ ಚಿತ್ರದ ನಾಯಕಿ. ಆಕೆಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಪ್ರಕಾಶ್ ರಾಜ್, ನಾಜರ್, ಸುಮನ್, ಸಾಧುಲೋಕಿಲ ಮುಂತಾದ ಹೆಸರಾಂತ ಕಲಾವಿದರು ಅಭಿನಯಿಸುತ್ತಿದ್ದಾರೆ . ಹಾಡುಗಳಿಗೆ ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. ಮಹೇಶ್ ಛಾಯಾಗ್ರಹಣ, ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ವಿನಯ್ ಕೃಷ್ಣ ಹೇಳಿದರು.

ಮೊದಲು ನನ್ನ ತಂದೆ, ತಾಯಿ, ಅಜ್ಜಿ, ತಾತ ಹಾಗೂ ಚಿಕ್ಕಪ್ಪ- ಚಿಕ್ಕಮ್ಮನಿಗೆ ಧನ್ಯವಾದ ಹೇಳುತ್ತೇನೆ. ಅದರಲ್ಲೂ ಚಿಕ್ಕಪ್ಪ- ಚಿಕ್ಕಮ್ಮ ನನ್ನ ಎಲ್ಲಾ ಚಿತ್ರಗಳಿಗೂ ನೀಡುತ್ತಿರುವ ಪ್ರೋತ್ಸಾಹ ಮರೆಯುವಂತಿಲ್ಲ. ನಾನು ನಾಯಕನಾಗಿ ನಟಿಸಿರುವ ಯಾವುದೇ ಚಿತ್ರ ತೆರೆಕಂಡಿಲ್ಲ. ಆದರೂ ನನ್ನ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡಿರುವ‌ ನಿರ್ಮಾಪಕ ತ್ರಿವಿಕ್ರಮ ಅವರಿಗೆ ನಾನು ಆಭಾರಿ. ನಿರ್ದೇಶಕ ವಿನಯ್ ಕೃಷ್ಣ ಅವರ ಕೆಲಸದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಚಂದನ್ ಶೆಟ್ಟಿ ಅವರು ಸಂಗೀತ ನೀಡುತ್ತಿರುವುದರಿಂದ ಎಲ್ಲಾ ಹಾಡುಗಳು ಚಂದವಾಗಿಯೇ ಇರುತ್ತದೆ. ನಾಯಕಿ ಸೌಮ್ಯ ಅವರಿಗೆ ಸಿನಿಮಾ ಮುಗಿಯುವಷ್ಟರಲ್ಲಿ ಕನ್ನಡ ಕಲಿಸುತ್ತೇನೆ. ಈ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ನಿಮ್ಮ ಮುಂದೆ ಬರುತ್ತೇವೆ ಎಂದರು ನಿರಂಜನ್ ಸುಧೀಂದ್ರ.

ಹಿಂದೆ ಮಲೆಯಾಳಂ ಚಿತ್ರದಲ್ಲಿ ಅಭಿನಯಿಸಿದ್ದೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ಚೆನ್ನಾಗಿದೆ. ನನ್ನ ಪಾತ್ರ ಕೂಡ ತುಂಬಾ ಚೆನ್ನಾಗಿದೆ ಎಂದರು ಸೌಮ್ಯ ಮೆನನ್.

“ಸೀಜರ್” ಚಿತ್ರದಲ್ಲಿ ನನಗೆ ಮೊದಲ ಅವಕಾಶ ಕೊಟ್ಟವರು ನಿರ್ಮಾಪಕ ತ್ರಿವಿಕ್ರಮ್. ಈಗ ಈ ಚಿತ್ರಕ್ಕೂ ನನ್ನನ್ನೇ ಸಂಗೀತ ನಿರ್ದೇಶಕನಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ಧನ್ಯವಾದ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಜಯಂತ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ನಾನು ಒಂದೊಂದು ಹಾಡನ್ನು ಬರೆದಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ.

Categories
ಸಿನಿ ಸುದ್ದಿ

ಬ್ಲಡ್ ಶೇಡ್… ಲಾಂಗು! ಇದು ಪೆಪೆ ಟೀಸರ್ ಗುಟ್ಟು!! ಮಾಸ್ ಲುಕ್ ನಲ್ಲಿ ವಿನಯ್ ರಾಜ್ ಕುಮಾರ್ ಹೊಸ ಅವತಾರ…

ನಟ ವಿನಯ್ ರಾಜ್ ಕುಮಾರ್ ಸಿದ್ಧಾರ್ಥ, ರನ್ ಆಂಟನಿ ಸಿನಿಮಾಗಳ ಮೂಲಕ ಭರವಸೆ ನಾಯಕನಾಗಿ ಮಿಂಚಿದ್ದು, ಈಗ ಪೆಪೆ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಸದ್ಯ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್ ಶೇಕ್ ಮಾಡ್ತಿದೆ.

ವಿನಯ್ ಲವರ್ ಬಾಯ್ ಇಮೇಜ್ ನಿಂದ ಹೊರ ಬಂದು ಮಾಸ್ ಅಂಡ್ ರಗಡ್ ಲುಕ್ ನಲ್ಲಿ ಮಿಂಚಿದ್ದು, ಗ್ಯಾಂಗ್​ ಸ್ಟಾರ್​ ​​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ತೊರೆಗೊಂದು ಶಾಪ ಇದೆಯಂತೆ, ಅಲ್ಲಿ ಹರಿಯೋ ನೀರಿನ ಕೆಳಗೆ ರಾಕ್ಷಸನ ಕೈಯಿಂದ ಜಾರಿಬಿದ್ದ ಒಂದು ವಸ್ತು ಅದೇ ಅಂತೆ ಜೀವ. ಹೀಗೆ ಪಂಚಿಂಗ್ ಡೈಲಾಗ್​​​​ಗಳಿಂದ ಕೂಡಿರುವ ಪೆಪೆ ಟೀಸರ್ ಸಸ್ಪೆನ್ಸ್ ನಿಂದ ಕೂಡಿದೆ.

ಕೈಯಲ್ಲಿ ಲಾಂಗ್ ಹಿಡಿದು ಎಂಟ್ರಿ ಕೊಡುವ ನಾಯಕ ರಕ್ತದ ಕೊಡಿಯನ್ನು ಹರಿಸಿದ್ದಾರೆ. ಉಳಿದಂತೆ ಅರುಣಾ ಬಾಲರಾಜ್, ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ಹೀಗೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.

ಪೆಪೆ ಸಿನಿಮಾಗೆ ಶ್ರೀಲೇಶ್ ಎಸ್ ನಾಯರ್ ಆಕ್ಷನ್ ಕಟ್ ಹೇಳಿದ್ದು, ಉದಯಶಂಕರ ಎಸ್ ನಿರ್ಮಾಣ ಮಾಡಿದ್ದಾರೆ. ಸಮರ್ಥ ಉಪಾದ್ಯ ಕ್ಯಾಮೆರಾ, ಮನು ಶೇಡ್ಗಾರ್ ಸಂಕಲನವಿದೆ.

Categories
ಸಿನಿ ಸುದ್ದಿ

ಭಾವುಕ ಪಯಣದ ಭಾವಚಿತ್ರ! ಇಲ್ಲಿ ಆತ್ಮಕಥೆಯೇ ಸುಚಿತ್ರಾ!!

ಚಿತ್ರ ವಿಮರ್ಶೆ

ಚಿತ್ರ: ಭಾವಚಿತ್ರ
ನಿರ್ದೇಶಕ: ಗಿರೀಶ್ ಕುಮಾರ್
ನಿರ್ಮಾಣ: ವಿನಾಯಕ ನಾಡಕರ್ಣಿ
ತಾರಾಗಣ: ಚಕ್ರವರ್ತಿ, ಗಾನವಿ, ಗಿರೀಶ್ ಬಿಜ್ಜಳ್, ಅವಿನಾಶ್, ಗಿರೀಶ್ ಕುಮಾರ್, ಕಾರ್ತಿ, ವಿನಾಯಕ ನಾಡಕರ್ಣಿ ಇತರರು.

ಕನ್ನಡದಲ್ಲಿ ಈಗಾಗಲೇ ಮರುಜನ್ಮದ ಕಥೆ ಇರುವ ಅನೇಕ ಚಿತ್ರಗಳು ಬಂದಿವೆ. ಅಷ್ಟೇ ಅಲ್ಲ, ಆತ್ಮ ಕಥೆಗಳೂ ಬಂದಿವೆ. ಅಂಥದ್ದೇ ಸಾರವಿರುವ ಭಾವಚಿತ್ರ ಸಿನಿಮಾ ಈ ವಾರ ತರೆ ಕಂಡಿದೆ.

ಮೊದಲಿಗೆ ಒಂದು ಸ್ಪಷ್ಟನೆ: ಇದು ಹೊಸಬರ ವಿನೂತನ ಪ್ರಯತ್ನ. ಹೊಸಬರ ಕೆಲವು ಸಿನಿಮಾಗಳ ಕಥೆಗಳಲ್ಲಿ ಆತ್ಮವೇ ಇರಲ್ಲ. ಅಂದರೆ, ಅಲ್ಲಿ ವಿಷಯೇ ಗೌಣ. ಆದರೆ, ಈ ಹೊಸಬರ ಕಥೆಯಲ್ಲಿ ‘ಆತ್ಮ’ ಬಲವಾಗಿದೆ. ಹಾಗಾಗಿ ನೋಡುಗರಿಗೂ ಒಂದಷ್ಟು ಆತ್ಮಾಭಿಮಾನ ಹೆಚ್ಚಿಸಿದರೆ ಅಚ್ಚರಿ ಇಲ್ಲ. ಇಲ್ಲಿ ಕಥೆ ಸರಳ. ಅದನ್ನು ತಕ್ಕಮಟ್ಟಿಗೆ ಸಾವಧಾನದಿಂದ ನೋಡುವಂತೆ ನಿರ್ದೇಶಕರ ನಿರೂಪಣೆ ಒಂದಷ್ಟು ಕೆಲಸ ಮಾಡಿದೆ. ಆರಂಭದಲ್ಲಿಯೇ ಸಿನಿಮಾ ಹಳಿ ತಪ್ಪಿ ಹೋಗುತ್ತಿದೆಯಾ ಎಂಬ ಪ್ರಶ್ನೆ ಹುಟ್ಟುತ್ತೆ. ಅದಕ್ಕೆ ಕಾರಣ, ಹಿಡಿತ ತಪ್ಪಿದ ಚಿತ್ರಕಥೆ. ಹೇಗೋ ನೋಡಿಸಿಕೊಂಡು ಹೋಗುವ ಸಿನಿಮಾದ ಮೊದಲರ್ಧ, ಅಲ್ಲಲ್ಲಿ ಸಣ್ಣಪುಟ್ಟ ಕುತೂಹಲ ಬಿಟ್ಟರೆ ಅಷ್ಟೇನೂ ಗಂಭೀರತೆಗೆ ದೂಡುವುದಿಲ್ಲ. ಪ್ರೇಕ್ಷಕ ಗಂಭೀರವಾಗುವುದೇ ದ್ವಿತಿಯಾರ್ಧ. ಮಧ್ಯಂತರ ಬಳಿಕ ಭಾವಚಿತ್ರ, ಮತ್ತಷ್ಟು ಕುತೂಹಲ ಕಾಯ್ದುಕೊಂಡು ಸಾಗುತ್ತೆ. ಕೆಲವು ಕಡೆ ಸಣ್ಣ ಸಣ್ಣ ಎಡವಟ್ಟುಗಳನ್ನು, ತಪ್ಪುಗಳನ್ನು ಹೊರತು ಪಡಿಸಿದರೆ, ಸಿನಿಮಾ ಭಾವುಕ ಪಯಣಕ್ಕೆ ಕರೆದೊಯ್ಯುತ್ತದೆ.

ಇಲ್ಲಿ ಪ್ರೀತಿ, ಗೆಳೆತನ, ಸಂಬಂಧ, ಬಾಂಧವ್ಯಗಳ ಮೌಲ್ಯ ಹೈಲೆಟ್. ಇಷ್ಟಕ್ಕೂ ಭಾವಚಿತ್ರದೊಳಗಿನ ಗುಟ್ಟೇನು ಎಂಬ ಪ್ರಶ್ನೆಗೆ ಉತ್ತರವಿದು ; ಇದೊಂದು ಭಾವನೆಗಳ ಜೊತೆ ಸಾಗುವ ಚಿತ್ರ. ಆ ಭಾವಚಿತ್ರದ ಚೌಕಟ್ಟಿನೊಳಗೆ ನೂರೆಂಟು ವಿಷಯಗಳು ಅಡಗಿವೆ. ಒಂದು ಫೋಟೋ ಸಾಕಷ್ಟು ವಿಷಯ ಹೇಳುತ್ತೆ, ನೂರಾರು ನೆನಪು ಹೊರಹಾಕುತ್ತೆ. ಅಂಥದ್ದೊಂದು ಅರ್ಥಪೂರ್ಣ ಕಥೆ ಇಲ್ಲಿದೆ.

ಕಥೆ ಏನು?

ನಾಯಕ ವಿಷ್ಣುಗೆ ಫೋಟೋ ಹುಚ್ಚು. ಸಮಯ ಸಿಕ್ಕಾಗೆಲ್ಲ ತನ್ನ ಫೋಟೋ ಜೊತೆ ಲಾಂಗ್ ಡ್ರೈವ್ ಹೋಗಿ ಬರುವ ಅಭ್ಯಾಸ. ಹಾಗೆ ಸಿಕ್ಕ ಸಮಯದಲ್ಲೇ ಹೆಗಲಿಗೊಂದು ಬ್ಯಾಗು ಹಾಕಿಕೊಂಡು ಬುಲೆಟ್ ಏರಿ ದೂರದೂರಿಗೆ ಹೋಗುತ್ತಾನೆ. ಕಣ್ಣಿಗೆ ಕಂಡಿದ್ದೆಲ್ಲವನ್ನು ಸೆರೆಹಿಡಿಯುತ್ತಾನೆ. ಹಾಗೆ ಸೆರೆ ಹಿಡಿಯೋ ವಿಷ್ಣು, ದೊಡ್ಡ ಕಲ್ಲುಬಂಡೆಯ ಚಿತ್ರ ತೆಗೆದಾಗ, ಆ ಕ್ಯಾಮೆರಾದಲ್ಲಿ ಬಂಡೆ ಮುಂದೆ ಒಂದು ವ್ಯಕ್ತಿಯ ಭಾವಚಿತ್ರ ಮೂಡುತ್ತೆ! ನಂತರ ಆ ಭಾವಚಿತ್ರ ಕಾಣೆ. ಅಲ್ಲಿಂದ ಕಥೆ ಕುತೂಹಲಕ್ಕೆ ಕರೆದೊಯ್ಯುತ್ತೆ. ಅತ್ತ ಗಾಬರಿಯಾಗುವ ವಿಷ್ಣು, ಕುತೂಹಲಕ್ಕೆ ಇನ್ನೊಂದು ಫೋಟೋ ಕ್ಲಿಕ್ಕಿಸುತ್ತಾನೆ.ಆಗ ಹುಡುಗ, ಹುಡುಗಿ ಜೊತೆಗಿನ ಭಾವಚಿತ್ರ ಮೂಡುತ್ತೆ!

ಆದರೆ ಆ ಜಾಗದಲ್ಲಿ ಏನೂ ಇರಲ್ಲ. ಫೋಟೋದಲ್ಲಿ ಮಾತ್ರ ಸೆರೆಯಾಗುತ್ತೆ. ಅಲ್ಲಿಗೆ ಕಥೆ ಇನ್ನಷ್ಟು ಗಂಭೀರವಾಗುತ್ತೆ. ಆ ಭಾವಚಿತ್ರ ವಿಚಿತ್ರ ಕುತೂಹಲ ಕೆರಳಿಸುತ್ತೆ. ಹಾಗಾದರೆ, ಅದು ಆತ್ಮಗಳ ಭಾವಚಿತ್ರವಾ? ಹೀಗೊಂದು ಪ್ರಶ್ನೆ ಮೂಲಕವೇ ಕ್ಲೈಮ್ಯಾಕ್ಸ್ ಹಂತದವರೆಗೂ ನೋಡಿಸಿಕೊಂಡು ಹೋಗುತ್ತೆ. ಹಾಗಾದರೆ, ಇದು ಆತ್ಮಕಥೆನಾ? ಆ ಭಾವಚಿತ್ರ ಯಾರದ್ದು? ಈ ಪ್ರಶ್ನೆ ಎದುರಾದರೆ, ಒಮ್ಮೆ ಚಿತ್ರ ನೋಡಲಡ್ಡಿಯಿಲ್ಲ.

ತಾಂತ್ರಿಕವಾಗಿ ಹೇಗಿದೆ?

ಇಲ್ಲಿ ಪ್ರತಿ ಪಾತ್ರಗಳು ವಿಶೇಷ ಎನಿಸುತ್ತವೆ. ಮುಖ್ಯವಾಗಿ ಚಿತ್ರ, ವಿಷ್ಣು, ಶಂಕರ, ಬಾಲ ಪಾತ್ರಗಳು ಗಮನ ಸೆಳೆಯುತ್ತವೆ. ಸಂಗೀತ ಇನ್ನಷ್ಟು ರುಚಿಸಬೇಕಿತ್ತು. ಒಂದು ಹಾಡು ಮಾತ್ರ ಗುನುಗುವಂತಿದೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಛಾಯಾಗ್ರಹಣ ಭಾವಚಿತ್ರದ ಮೇಲೆ ಅಲ್ಲಲ್ಲಿ ‘ಗ್ರಹಣ’ಬಿದ್ದಂತಾಗಿದೆ. ಸಂಕಲನ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿದೆ.

ಯಾರು ಹೇಗೆ?

ನಾಯಕ ಚಕ್ರವರ್ತಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಗಾನವಿ ಮತ್ತು ಗಿರೀಶ್ ಕುಮಾರ್ ‘ಆತ್ಮ’ ತೃಪ್ತಿ ಯಾದಂತೇ ನಟಿಸಿದ್ದಾರೆ. ಗಿರೀಶ್ ಬಿಜ್ಜಳ್, ಅವಿನಾಶ್, ಕಾರ್ತಿ, ವಿನಾಯಕ ನಾಡಕರ್ಣಿ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಬಯೋಗ್ರಫಿ ನೀನೇ ರಾಜಕುಮಾರ: ಇದು ಲೇಖಕ ಶರಣು ಹುಲ್ಲೂರು ಬರಹ

ಪುನೀತ್ ರಾಜ್ ಕುಮಾರ್ ಅವರ ಕುರಿತು ಈಗಾಗಲೇ ಅನೇಕ ಲೇಖಕರು ಪ್ರೀತಿಯಿಂದ ಪುಸ್ತಕ ಬರೆದಿದ್ದಾರೆ. ಅಂತಹ ಸಾಕಷ್ಟು ಪುಸ್ತಕಗಳ ಸಾಲಿಗೆ ಈಗ “ನೀನೇ ರಾಜಕುಮಾರ’ ಸೇರಿದೆ. ಹೌದು,ಇದು ಲೇಖಕ ಶರಣು ಹುಲ್ಲೂರು ಅವರು ಬರೆದ ಅಪ್ಪು ಬಯೋಗ್ರಫಿ. ಆ ಬಯೋಗ್ರಫಿ ಕುರಿತು ಸ್ವತಃ ಶರಣು ಹುಲ್ಲೂರು ಹೇಳಿಕೊಂಡಿದ್ದಾರೆ…

ಓವರ್ ಟು ಶರಣು ಹುಲ್ಲೂರು

‘ಆತ್ಮೀಯ ಮಾಧ್ಯಮ ಬಂಧುಗಳೆ,
ಸಿನಿಮಾ ರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನಿಮಾ ರಂಗದವರಿಂದ ಪತ್ರಿಕೋದ್ಯಮಕ್ಕೂ ಅಷ್ಟೇ ಕೊಡುಗೆ ಇದೆ. ಇದೊಂದು ಕೊಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ, ನಮ್ಮವರನ್ನೇ ಕಳೆದುಕೊಂಡಷ್ಟು ನೋವು, ಸಂಕಟ.
ಪುನೀತ್ ರಾಜ್ ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಂಬನಿ ಮಿಡಿದಿದ್ದಾರೆ. ಪತ್ರಕರ್ತ ಮಿತ್ರರು ಎಷ್ಟೊಂದು ಸಂಕಟ ಪಟ್ಟಿದ್ದಾರೆಂದು ಬಲ್ಲೆ. ಸ್ಟುಡಿಯೋದಲ್ಲಿ ಕೂತ ನಿರೂಪಕ-ನಿರೂಪಕಿಯರು ಅಳುತ್ತಲೇ ಸುದ್ದಿ ಓದಿದ್ದಾರೆ. ವರದಿಗಾರರು ಭಾವುಕರಾಗಿಯೇ ವರದಿ ಮಾಡಿದ್ದಾರೆ. ಇದಕ್ಕೆ ಕಾರಣ ಅಪ್ಪು ಅವರು ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ.


ಯಾವತ್ತೂ ಅವರು ವರದಿಗಾರರ ಜತೆ ಮುನಿಸಿಕೊಂಡವರು ಅಲ್ಲ. ಫೋನಿಗೆ ಸಿಗದೇ ಸತಾಯಿಸಿದವರೂ ಅಲ್ಲ. ಮಿಸ್ಡ್ ಕಾಲ್ ಇದ್ದರೂ, ವಾಪಸ್ಸು ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲೇ ಅವರು ನಮ್ಮವರೇ ಆಗಿದ್ದರು. ಈ ಪ್ರೀತಿ ಮತ್ತೆಂದು ಸಿಗದು. ಹಾಗಾಗಿ, ಅವರ ಜತೆಗಿನ ಒಡನಾಟವನ್ನು ದಾಖಲಿಸಬೇಕು ಮತ್ತು ಈ ಮೂಲಕ ಅವರ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎನ್ನುವ ಉದ್ದೇಶದಿಂದ ‘ನಾನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಅವರ ಬಯೋಗ್ರಫಿ ಬರೆಯಬೇಕಾಯಿತು. ಇದೊಂದು ರೀತಿಯಲ್ಲಿ ಸಿನಿಮಾ ಪತ್ರಕರ್ತರ ಪರವಾಗಿ ನಾನು ಸಲ್ಲಿಸುತ್ತಿರುವ ಪುಸ್ತಕದ ಗೌರವವಿದು.


ಇಂಥದ್ದೊಂದು ಪುಸ್ತಕ ಬರೆಯಲು ಕಾರಣವಾಗಿದ್ದು 2 ಸೆಪ್ಟಂಬರ್ 2020. ನಾನು ಸುದೀಪ್ ಅವರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನು ಪ್ರೀತಿಯಿಂದ ಬಿಡುಗಡೆ ಮಾಡಿದ್ದು ಪುನೀತ್ ರಾಜ್ ಕುಮಾರ್ ಅವರು. ಸುದೀಪ್ ಅವರ ಹುಟ್ಟು ಹಬ್ಬದಂದು ಅವರು ಪುಸ್ತಕ ಬಿಡುಗಡೆ ಮಾಡಿದಾಗ ಖ್ಯಾತ ನಿರ್ಮಾಪಕರಾದ ಜಾಕ್ ಮಂಜು ಅವರು ‘ಮುಂದಿನ ಪುಸ್ತಕವನ್ನು ಅಪ್ಪು ಅವರದ್ದೇ ಮಾಡಿ ಅಂದರು. ಅಂದು ವೀರಕಪುತ್ರ ಶ್ರೀನಿವಾಸ್ ಅವರು ಕೂಡ ಇದ್ದರು. ‘ಅಯ್ಯೋ ನನ್ನ ಪುಸ್ತಕವಾ ಬೇಡ’ ಎಂದವರು, ಎಲ್ಲರ ಒತ್ತಾಯಕ್ಕೆ ಮಣಿದು ಅಪ್ಪು ಸರ್ ಒಪ್ಪಿಕೊಂಡರು. ಅಲ್ಲಿಂದ ನನ್ನ ಕೆಲಸವನ್ನು ಶುರು ಮಾಡಿದೆ. ನಂತರ ಅವರ ಭೇಟಿಗಾಗಿ ಹಲವು ಬಾರಿ ಕರೆ ಮಾಡಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆರು ತಿಂಗಳ ನಂತರ ಶೆರ್ಟನ್ ಹೋಟೆಲ್ ನಲ್ಲಿ ನಮ್ಮಿಬ್ಬರ ಭೇಟಿ ಆಯಿತು. ‘ನಾನು ಬೇಕು ಅಂತಾನೇ ನಿಮ್ಮ ಕರೆ ಸ್ವೀಕರಿಸಲಿಲ್ಲ. ನಾನೇನು ಸಾಧನೆ ಮಾಡಿಲ್ಲ. ಅಪ್ಪಾಜಿ ಮತ್ತು ಅಮ್ಮನ ಪುಸ್ತಕದ ಜತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ. ಒಂದ್ ಸಲ ನೀವೇ ಯೋಚ್ನೆ ಮಾಡಿ’ ಎಂದು ನಿರಾಸೆ ಮಾಡಿಬಿಟ್ಟರು. ಆದರೂ, ನಾನು ನನ್ನ ಹಠ ಬಿಡಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಲೇ ಇದ್ದೆ. ದಿಢೀರ್ ಆಗಿ ಅಪ್ಪು ಹೊರಟೇ ಬಿಟ್ಟರು.
ಪುನೀತ್ ರಾಜ್ ಕುಮಾರ್ ಅವರು ನಿಧನದ ನಂತರ ಅವರ ಸಾಧನೆಗಳ ಪಟ್ಟಿ ಒಂದೊಂದೇ ಬರ ತೊಡಗಿದವು. ನಾಡೇ ಕಣ್ಣೀರಿಟ್ಟಿತು. ಆಗ ಮತ್ತೆ ನನಗೆ ನೆನಪಾಗಿದ್ದು ಅಪ್ಪು ಹೇಳಿದ ಮಾತು, “ಅಪ್ಪಾಜಿ ಮತ್ತು ಅಮ್ಮನ ಜತೆ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ” ಎನ್ನುವುದು. ಅವರ ಈ ಮಾತನ್ನು ಅಭಿಮಾನಿಗಳು ಸುಳ್ಳು ಮಾಡಿದರು. ನೀವು ಅಪ್ಪ ಅಮ್ಮನಷ್ಟೇ ಸಾಧನೆಯ ಹಾದಿಯಲ್ಲಿದ್ದೀರಿ ಎಂದು ತೋರಿಸಿದರು. ಮತ್ತೆ ನನ್ನ ಕನಸಿಗೆ ಮರುಜೀವ ಬಂತು. ಅಷ್ಟರಲ್ಲಿ ಕನ್ನಡದ ಖ್ಯಾತ ಪ್ರಕಾಶನ ಸಂಸ್ಥೆ ಜಮೀಲ್ ಸಾವಣ್ಣ ಅವರು ಪುಸ್ತಕದ ಬಗ್ಗೆ ವಿಚಾರಿಸಿದರು.

ಮತ್ತೆ ಎಲ್ಲ ಸಂಗತಿಗಳನ್ನು ಒಟ್ಟಾಗಿಸಿ ಪುಸ್ತಕ ಮಾಡಿದೆ. ಈ ಹಿಂದೆ ನನ್ನ ‘ಅಂಬರೀಶ್’ ಪುಸ್ತಕವನ್ನು ಪ್ರಕಟಿಸಿರುವ ಸಾವಣ್ಣ ಪ್ರಕಾಶನವೇ ‘ನಾನೇ ರಾಜಕುಮಾರ’ ಪುಸ್ತಕವನ್ನು ಪ್ರಕಟಿಸಿದೆ. ಬರಹಗಾರ ಜೋಗಿ ಅವರು ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಮತ್ತೆ ಸಿನಿಮಾ ರಂಗಕ್ಕೆ ಬರುತ್ತಿರುವಾಗ ಈ ಸುದ್ದಿಯನ್ನು ಮೊದಲು ಪ್ರಕಟಿಸಿ, ಮೊದಲು ಸಂದರ್ಶನ ಮಾಡಿರುವ ಹಿರಿಯ ಪತ್ರಕರ್ತರಾದ ಮುರಳೀಧರ್ ಖಜಾನೆ ಅವರು ಮುನ್ನುಡಿ ಬರೆದಿದ್ದಾರೆ.
ಡಾ.ಅಂಬರೀಶ್, ಡಾ.ವಿಷ್ಣುವಧರ್ನ್, ಕಿಚ್ಚ ಸುದೀಪ್ ಹಾಗೂ ಸಂಚಾರಿ ವಿಜಯ್ ಅವರ ಪುಸ್ತಕದ ನಂತರ ಸಿನಿಮಾ ರಂಗದವರ ಕುರಿತಾಗಿ ನಾನು ಬರೆದ ಮತ್ತೊಂದು ಪುಸ್ತಕ ಇದಾಗಿದೆ.

ಪುಸ್ತಕದ ಕುರಿತು

ಪುನೀತ್ ರಾಜ್ ಕುಮಾರ್ ಕುರಿತಾಗಿ ಬರುತ್ತಿರುವ ಮೊದಲ ಬಯೋಗ್ರಫಿ ಇದಾಗಿದೆ. ಹಾಗಂತ ಬರೀ ಇದರಲ್ಲಿ ಪುನೀತ್ ಜೀವನ ಕುರಿತಾದ ವಿಷಯಗಳು ಮಾತ್ರವಿಲ್ಲ. ಅವರ ಬದುಕನ್ನು ಓದುತ್ತಾ, ಅದರೊಂದಿಗೆ ಸಿನಿಮಾ ಇತಿಹಾಸವನ್ನು ಓದಿಸಿಕೊಂಡು ಹೋಗುವಂತ ಗುಣವನ್ನು ಇದು ಹೊಂದಿದೆ. ಅವರ ವೃತ್ತಿ ಮತ್ತು ಖಾಸಗಿ ಜೀವನ ಕುರಿತಾದ ಅಪರೂಪದ ವಿಷಯಗಳನ್ನು ಮತ್ತು ಛಾಯಾಚಿತ್ರಗಳನ್ನು ಈ ಪುಸ್ತಕ ಒಳಗೊಂಡಿದೆ. ಬಾಲ್ಯ, ಬಾಲ್ಯದಲ್ಲಿ ನಟಿಸಿದ ಸಿನಿಮಾಗಳು ಮತ್ತು ಅರಸು ಚಿತ್ರದಿಂದ ಜೇಮ್ಸ್ ಚಿತ್ರದವರೆಗಿನ ಸಮಗ್ರ ನೋಟ ಇಲ್ಲಿದೆ. ಅವರ ಖಾಸಗಿ ಬದುಕಿನ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿವೆ. ಒಟ್ಟು 264 ಪುಟಗಳ ಸಮಗ್ರ ಜೀವನ ಚರಿತ್ರೆಯ ಪುಸ್ತಕ ಇದಾಗಿದ್ದು, ಒಟ್ಟು 34 ಅಧ್ಯಾಯಗಳನ್ನು ಇದು ಒಳಗೊಂಡಿದೆ. ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ.

ಎಂದಿನಂತೆ ನಿಮ್ಮ ಪ್ರೀತಿ ಮತ್ತು ಹಾರೈಕೆ ಬಯಸುವೆ.

ಶರಣು ಹುಲ್ಲೂರು
ಫೋನ್ : 9980003506

Categories
ಸಿನಿ ಸುದ್ದಿ

ಮೇಡ್ ಇನ್ ಚೈನಾ ಟೀಸರ್ ಬಂತು: ಇದು ಕನ್ನಡದ ಮೊದಲ ವರ್ಚುವಲ್ ಸಿನಿಮಾ !

ಇಕ್ಕಟ್ ಸಿನಿಮಾ ಮೂಲಕ ಮನರಂಜನೆಯ ರಸದೌತಣ ಉಣಬಡಿಸಿದ್ದ ನಾಗಭೂಷಣ್ ನಟನೆಯ ಮೇಡ್ ಇನ್ ಚೈನಾ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ ಪ್ರಾಮಿಸಿಂಗ್ ಆಗಿ ಮೂಡಿ‌ ಬಂದಿದೆ.

ಲಾಕ್ ಡೌನ್ ಟೈಮ್ ನಲ್ಲಿ ವಿದೇಶದಲ್ಲಿ ಲಾಕ್ ಆಗುವ ಪತಿ, ಸ್ವದೇಶಿ ನೆಲದಲ್ಲಿ ಪತ್ನಿ. ಈ ಗಂಡ ಹೆಂಡ್ತಿ‌ ನಡುವಿನ ಪ್ರೀತಿ-ಗೀತಿ-ಇತ್ಯಾದಿ ನಡುವೆ ಒಂದಷ್ಟು ಜಗಳ ಓವರ್ ಆಲ್ ಆಗಿ‌ ಮೇಡ್ ಇನ್ ಚೈನಾ ಫ್ಯಾಮಿಲಿ ಡ್ರಾಮಾ ಅನ್ನೋದು ಟೀಸರ್ ನಲ್ಲಿ ಗೊತ್ತಾಗುತ್ತಿದೆ. ನಾಗಭೂಷಣ್ ಇದ್ದಾರೆ ಅಂದರೆ ಅಲ್ಲಿ ಕಾಮಿಡಿಗೆ ಕೊರತೆ ಇರೋದಿಲ್ಲ. ಕಚಗುಳಿ ಇಡುವ ಕಾಮಿಡಿ ಡೈಲಾಗ್ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ಅದ್ಭುತ ನಟನೆ ಗಮನಸೆಳೆತಿದೆ. ಅದ್ರಲ್ಲೂ ಟೀಸರ್ ನಲ್ಲಿ ಮೂಡಿಬಂದಿರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಗಮನ ಸೆಳೆಯುತ್ತಿದೆ.

ಅಂದಹಾಗೆ, ಮೇಡ್ ಇನ್ ಚೈನಾ ಕನ್ನಡದ ಮೊದಲ ವರ್ಚುವಲ್ ಸಿನಿಮಾವಾಗಿದ್ದು, ಅಯೋಗ್ಯ, ರತ್ನಮಂಜರಿ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿದ್ದ ಪ್ರೀತಮ್ ತೆಗ್ಗಿನಮನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದ ಜೊತೆಗೆ ಗ್ರಾಫಿಕ್, ಎಡಿಟಿಂಗ್ ಹಾಗೂ ಸಿನಿಮಾಟೋಗ್ರಾಫಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ನಾಗಭೂಷಣ್ ಹೀರೋ ಆಗಿ ಬಣ್ಣ ಹಚ್ಚಿದ್ದು, ನಾಗಭೂಷಣ್ ಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಉಳಿದಂತೆ ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಮುಂತಾದವರು ನಟಿಸಿದ್ದಾರೆ.

ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಮೇಡ್ ಇನ್ ಚೈನಾ ಸಿನಿಮಾಗೆ ಕಥೆ ಬರೆದಿದ್ದು, ವೀವಾನ್ ರಾಧಾಕೃಷ್ಣ ಸಂಗೀತವಿದೆ. ಎನ್ ಕೆ ಸ್ಟುಡಿಯೋಸ್ ಬ್ಯಾನರ್ ನಡಿ ನಂದಕಿಶೋರ್ ಸಿನಿಮಾಗೆ ಬಂಡವಾಳ ಹೂಡಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಡಿ ಟಿಆರ್ ಚಂದ್ರಶೇಖರ್ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಟ್ರೇಲರ್ ರಿಲೀಸ್; ಹೊಸಬರಿಗೆ ವಸಿಷ್ಠ ಸಿಂಹ ಮತ್ತು ಭಾಸ್ಕರ್ ರಾವ್ ಸಾಥ್

‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದ ಟ್ರೇಲರ್‌ ಅನ್ನು ಭಾಸ್ಕರ್ ರಾವ್ ಹಾಗೂ ನಟ ವಸಿಷ್ಠ ಸಿಂಹ ಬಿಡುಗಡೆ ಮಾಡಿದ್ದಾರೆ. ಪ್ರೀತಿ, ಸಸ್ಪೆನ್ಸ್, ಆಕ್ಷನ್ ಒಳಗೊಂಡ ಟ್ರೇಲರ್ ಸಧ್ಯ ಯೂಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ.

ಮೈಸೂರು ಮೂಲದವರಾದ ಅಮೇರಿಕನ್‌ ಪ್ರಜೆ ಯಶಸ್ವಿ ಶಂಕರ್ ನಿರ್ಮಾಣ‌ ಮಾಡಿರುವ ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್ ಸಿನಿಮಾದ ಮೂಲಕ ರಾಘವ್ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಎಂ ಎನ್ ಶ್ರೀಕಾಂತ್ ನಿರ್ದೇಶಕ ಮಾಡಿರುವ ಈ ಚಿತ್ರದಲ್ಲಿ ಸಂಜನಾ ಬುರ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ.

ರಾಘವ್ ಕಾಲೇಜ್ ಹುಡುಗನ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಕ್ಟಿಂಗ್, ಡ್ಯಾನ್ಸ್ ಕಲಿತಿದ್ದಾರೆ.

ತಿಂಗಳುಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಗೆ ವಿಶ್ವಜಿತ್ ರಾವ್ ಛಾಯಾಗ್ರಾಹಕರಾಗಿದ್ದಾರೆ.

Categories
ಸಿನಿ ಸುದ್ದಿ

ಗರುಡಾಕ್ಷನ ದರ್ಶನ! ಹೊಸಬರ ಸೇಡಿನ ಕಥೆ…

ಗರುಡಾಕ್ಷ… ಇದು ಈ ವಾರ ತೆರೆಗೆ ಅಪ್ಪಳಿಸುತ್ತಿರುವ ಹೊಸಬರ ಸಿನಿಮಾ. ಮಧ್ಯಮ ವರ್ಗದ ಕುಟುಂಬದ ಯಜಮಾನ ತನ್ನ ಮಗನ ಕನಸನ್ನು ನನಸು ಮಾಡಲು ಹೋಗಿ ಕೆಟ್ಟವರಿಂದ ಮೋಸಕ್ಕೆ ಒಳಗಾಗಿ ಕೊಲೆಯಾಗುತ್ತಾನೆ. ಅದನ್ನು ಆತ್ಮಹತ್ಯೆ ಎಂದು ನಿರೂಪಿಸಲಾಗುತ್ತದೆ. ನನ್ನ ತಂದೆ ಆತ್ಮಹತ್ಯೆ ಮಾಡಿಕೊಳ್ಳುವಂಥವರಲ್ಲ ಎಂಬುದನ್ನು ಅರಿತ ಮಗ ತಂದೆಯನ್ನು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವ ಕಥೆಯೇ ಈ ಚಿತ್ರದ ಹೈಲೈಟ್.

ತಂದೆಯ ಹಂತಕರನ್ನು ಗರುಡನ ಕಣ್ಣಿನಂತೆ ಸೂಕ್ಷ್ಮವಾಗಿ ಹುಡುಕೋ ಥ್ರಿಲ್ಲಿಂಗ್ ಕಥೆಯೇ ಗರುಡಾಕ್ಷ. ಕಟ್ಟು ಕಥೆ ಖ್ಯಾತಿಯ ಚೇತನ್ ಯದು ಚಿತ್ರದ ಹೀರೋ. ರಕ್ಷಾ ನಾಯಕಿ. ಶ್ರೀಧರ್ ವೈಷ್ಣವ್ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ.


ಸತ್ಯರಾಜ್, ರಫಿಕ್, ವಸಂತ್ ಕುಮಾರ್, ಕೈಲಾಶ್ , ಕುಮುದಾ, ಪಲ್ಲವಿ, ಉಗ್ರಂ ರೆಡ್ಡಿ, ಕಲ್ಕಿ, ಆಲಿಷಾ ಅಭಿನಯಿಸಿದ್ದಾರೆ. ಶ್ರೀವತ್ಸ ಅವರ ಸಂಗೀತವಿದೆ. ವೈಲೆಂಟ್ ವೇಲು ಅವರ ಸಾಹಸವಿದೆ. ವೀರೇಶ್ ಛಾಯಾಗ್ರಹಣ ಮತ್ತು ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಶ್ರೀಕಿಗೆ ಹೊಸಬರ ಮೇಲೆ ಮನಸಾಗಿದೆ..!

ವಿಭಿನ್ನ ತ್ರಿಕೋನ ಪ್ರೇಮಕಥೆಯ ಮನಸಾಗಿದೆ ಸಿನಿಮಾ ಮೂಲಕ ಅಭಯ್ ಎಂಬ ಯುವ ಪ್ರತಿಭೆ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಫೆಬ್ರವರಿ 25 ರಂದು ರಾಜ್ಯಾದ್ಯಂತ ಬಿಡುಗಡೆಗೆಯಾಗಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ಗೆ ನಟ ಶ್ರೀಕಿ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಟ ಅಭಯ್ ನಿರ್ಮಾಪಕ ಚಂದ್ರಶೇಖರ್ ಅವರ ಪುತ್ರ. ಇನ್ನು ನಿರ್ಮಾಪಕರೇ ಚಿತ್ರದ ಕಥೆ ಬರೆದಿದ್ದಾರೆ. ಶ್ರೀನಿವಾಸ ಶಿಡ್ಲಘಟ್ಟ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ಮೇಘಶ್ರೀ ಹಾಗೂ ಅಥಿರಾ ಚಿತ್ರದ ನಾಯಕಿಯರು.


ಚಿತ್ರದಲ್ಲಿ ಪ್ರೀತಿ ಹುಡುಕಿಕೊಂಡು ಹೊರಟ ನಾಯಕನಿಗೆ ಇನ್ನೊಂದು ಪ್ರೀತಿ ಎದುರಾಗುತ್ತೆ. ಆಗ ನಾಯಕನಿಗೆ ತಾನು ಅರಸಿಕೊಂಡು ಹೋದ ಪ್ರೀತಿ ಸಿಗುತ್ತಾ, ಅಥವಾ ಎದುರಾದ ಪ್ರೀತಿ ಒಲಿಯುತ್ತಾ ಎನ್ನುವುದೇ ಮನಸಾಗಿದೆ ಚಿತ್ರದ ಕಥಾಹಂದರ.
ಟ್ರೇಲರ್ ರಿಲೀಸ್ ಮಾಡಿದ ನಟ ಶ್ರೀಕಿ, ಅಭಯ್ ಒಬ್ಬ ಪ್ರಾಮಿಸಿಂಗ್ ಹೀರೋ, ಬರ್ತ್ ಚಿತ್ರದಲ್ಲಿ ನನ್ನ ತಮ್ಮನಾಗಿ ಅಭಿನಯಿಸಿದ್ದ, ಆ್ಯಕ್ಷನ್, ಲವ್ ಎಲ್ಲದರಲ್ಲೂ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾನೆ. ನನ್ನ ಒಲವೇ ಮಂದಾರ ಚಿತ್ರಕ್ಕೆ ಡೈಲಾಗ್ ಬರೆದಿದ್ದ ರಘು, ಈ ಸಿನಿಮಾಗೂ ಸಂಭಾಷಣೆ ಬರೆದಿದ್ದಾರೆ, ಎಲ್ಲರಿಗೂ ಒಳ್ಳೇದಾಗಲಿ ಎಂದರು.


ನಿರ್ಮಾಪಕ ಚಂದ್ರಶೇಖರ್ ಮಾತನಾಡಿ, ನಾನಿವತ್ತು ತುಂಬಾ ಖುಷಿಯಲ್ಲಿದ್ದೇನೆ. ಅದಕ್ಕೆ ಕಾರಣ ಅಭಯ್, ಸಿನಿಮಾದಲ್ಲಿ ಆತ ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾನೆ. ಆತ ಗೆದ್ದೇ ಗೆಲ್ಲುತ್ತಾನೆ ಎಂಬ ಭರವಸೆ ಮೂಡಿದೆ. ಚಿತ್ರದಲ್ಲಿ ಬರೀ ಲವ್ ಮಾತ್ರ ಇಲ್ಲ, ಸಸ್ಪೆನ್ಸ್, ಆ್ಯಕ್ಷನ್, ಕಾಮಿಡಿ ಎಲ್ಲದರ ಮಿಳಿತವಾಗಿದೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತೆ, ಮಾನಸಹೊಳ್ಳ ಅದ್ಭುತ ಮೆಲೋಡಿ ಟ್ರ್ಯಾಕ್ ಮಾಡಿದ್ದಾರೆ, ಚಿತ್ರದಲ್ಲಿ ನಟಿಸಿರುವ ಇಬ್ಬರೂ ನಾಯಕಿಯರು ಅಭಯ್‌ಗೆ ಸಾಥ್ ನೀಡಿದ್ದಾರೆ. ಹಿಂದೆ ಜನವರಿ 18 ಕ್ಕೆ ಚಿತ್ರ ರಿಲೀಸ್ ಮಾಡಬೇಕೆಂಬ ಪ್ಲಾನಿತ್ತು, ಕೋವಿಡ್‌ನಿಂದ ಸಾಧ್ಯವಾಗಲಿಲ್ಲ, ಈಗ ಫೆ.25 ರಂದು ರಿಲೀಸ್‌ ಆಗಲಿದೆ ಎಂದರು.


ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟ, “ಎಲ್ಲರೂ ಒಳ್ಳೇ ಮನಸಿಟ್ಟು ಈ ಸಿನಿಮಾ ಮಾಡಿದ್ದೇವೆ, ಗೆಲ್ತೀವಿ ಎನ್ನುವ ಭರವಸೆಯಿದೆ. ಹೆಸರೇ ಹೇಳುವ ಹಾಗೆ ಇದೊಂದು ಲವ್ ಸಬ್ಜೆಕ್ಟ್ ಆದರೂ ಬೇರೆ ಥರದಲ್ಲಿ ಕಥೆ ನಿರೂಪಿಸುವ ಪ್ರಯತ್ನ ಮಾಡಿದ್ದೇವೆ, ಈವರೆಗೆ ಬಂದ ಎಲ್ಲ ಲವ್ ಸ್ಟೋರಿಗಳನ್ನು ಬಿಟ್ಟು ಹೊಸ ಕಂಟೆಂಟ್ ಈ ಚಿತ್ರದಲ್ಲಿದೆ ತಣ್ಣನೆಯ ಕ್ರೌರ್ಯ, ಮಿಸ್ ಅಂಡರ್‌ಸ್ಟಾಂಡಿಂಗ್ ಕಥೆಯೂ ಇದೆ. ಇಲ್ಲಿ ಯಾವುದೇ ವಿಲನ್ ಇಲ್ಲ, ಕ್ಲೈಮ್ಯಾಕ್ಸ್ ನಲ್ಲಿ ನಾಯಕ ತೆಗೆದುಕೊಳ್ಳುವ ದೃಢ ನಿರ್ಧಾರ ಎಲ್ಲಾ ರೀತಿಯ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ.

ಥ್ರಿಲ್ಲರ್ ಮಂಜು ಅವರು ನೀವು ಟೈಟಲ್‌ನಲ್ಲೇ ಗೆದ್ದಿದ್ದೀರಿ ಎಂದು ಆರಂಭದಿಂದಲೂ ನಮ್ಮ ಬೆನ್ನುತಟ್ಟುತ್ತಲೇ ಬಂದರು, ನಮ್ಮ ಬಜೆಟ್‌ಗೆ ತಕ್ಕಂತೆ ವಿಶೇಷವಾದ ಆಕ್ಷನ್ ಸೀನ್‌ಗಳನ್ನು ಮಾಡಿಕೊಟ್ಟರು ಎಂದು ಚಿತ್ರದಲ್ಲಿ ಕೆಲಸಮಾಡಿದ ತಂತ್ರಜ್ಞರೆಲ್ಲರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ನಾಯಕ ಅಭಯ್, ಆರಂಭದಿಂದ ನನಗ ತಂದೆಯೇ ಬ್ಯಾಕ್‌ಬೋನ್ ಆಗಿ ನಿಂತರು, ಈಗ ಜನರ ಅಭಿಪ್ರಾಯಕ್ಕಾಗಿ ಕಾದಿದ್ದೇನೆ ಎಂದು ಹೇಳಿದರು. ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಮಾತನಾಡಿ ನನ್ನ ಟ್ಯಾಲೆಂಟ್ ತೋರಿಸಲು ಒಳ್ಳೇ ಅವಕಾಶವಿತ್ತು. ಚಿತ್ರದ ಎಲ್ಲಾ ಹಾಡುಗಳನ್ನು ಯುವಪ್ರತಿಭೆಗಳ ಕೈಲೇ ಹಾಡಿಸಿದ್ದೇನೆ ಎಂದರು

error: Content is protected !!