ನಟ ವಿನಯ್ ರಾಜ್ ಕುಮಾರ್ ಸಿದ್ಧಾರ್ಥ, ರನ್ ಆಂಟನಿ ಸಿನಿಮಾಗಳ ಮೂಲಕ ಭರವಸೆ ನಾಯಕನಾಗಿ ಮಿಂಚಿದ್ದು, ಈಗ ಪೆಪೆ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಸದ್ಯ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್ ಶೇಕ್ ಮಾಡ್ತಿದೆ.
ವಿನಯ್ ಲವರ್ ಬಾಯ್ ಇಮೇಜ್ ನಿಂದ ಹೊರ ಬಂದು ಮಾಸ್ ಅಂಡ್ ರಗಡ್ ಲುಕ್ ನಲ್ಲಿ ಮಿಂಚಿದ್ದು, ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ತೊರೆಗೊಂದು ಶಾಪ ಇದೆಯಂತೆ, ಅಲ್ಲಿ ಹರಿಯೋ ನೀರಿನ ಕೆಳಗೆ ರಾಕ್ಷಸನ ಕೈಯಿಂದ ಜಾರಿಬಿದ್ದ ಒಂದು ವಸ್ತು ಅದೇ ಅಂತೆ ಜೀವ. ಹೀಗೆ ಪಂಚಿಂಗ್ ಡೈಲಾಗ್ಗಳಿಂದ ಕೂಡಿರುವ ಪೆಪೆ ಟೀಸರ್ ಸಸ್ಪೆನ್ಸ್ ನಿಂದ ಕೂಡಿದೆ.
ಕೈಯಲ್ಲಿ ಲಾಂಗ್ ಹಿಡಿದು ಎಂಟ್ರಿ ಕೊಡುವ ನಾಯಕ ರಕ್ತದ ಕೊಡಿಯನ್ನು ಹರಿಸಿದ್ದಾರೆ. ಉಳಿದಂತೆ ಅರುಣಾ ಬಾಲರಾಜ್, ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ಹೀಗೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.
ಪೆಪೆ ಸಿನಿಮಾಗೆ ಶ್ರೀಲೇಶ್ ಎಸ್ ನಾಯರ್ ಆಕ್ಷನ್ ಕಟ್ ಹೇಳಿದ್ದು, ಉದಯಶಂಕರ ಎಸ್ ನಿರ್ಮಾಣ ಮಾಡಿದ್ದಾರೆ. ಸಮರ್ಥ ಉಪಾದ್ಯ ಕ್ಯಾಮೆರಾ, ಮನು ಶೇಡ್ಗಾರ್ ಸಂಕಲನವಿದೆ.