Categories
ಸಿನಿ ಸುದ್ದಿ

ತೆರೆ ಮೇಲೆ ಗಂಡ ಹೆಂಡ್ತಿ ಜೋಡಿ: ಸೈಕೋ ಥ್ರಿಲ್ಲರ್ ಸಿನಿಮಾಗೆ ಚಂದನ್ ಶೆಟ್ಟಿ- ನಿವೇದಿತಾ ಮೋಡಿ

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ದಂಪತಿ ಇದೇ ಮೊದಲಬಾರಿಗೆ ಬೆಳ್ಳಿತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿರುವ ಆ ಚಿತ್ರಕ್ಕೆ ಪುನೀತ್ ಶ್ರೀನಿವಾಸ್ ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಪುನೀತ್ ಶ್ರೀನಿವಾಸ್ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ, ಶಿವಣ್ಣ, ಸುದೀಪ್ ರಂಥ ಸ್ಟಾರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ ನಂದಕಿಶೋರ್ ಅವರ ಬಳಿ ಅಧ್ಯಕ್ಷದಿಂದ ಟಗರು ಚಿತ್ರದವರೆಗೆ (ತೆಲುಗು ಸಿನಿಮಾ ಸೇರಿ) ಸುಮಾರು 12 ವರ್ಷಗಳ ಕಾಲ ಕೆಲಸ ಮಾಡಿ ನಿರ್ದೇಶನದ ಪಾಠ ಕಲಿತು ಇದೀಗ ಮೊದಲಬಾರಿಗೆ ನಿರ್ದೇಶನಕ್ಕಿಳಿಯುತ್ತಿದ್ದಾರೆ.
ಅವರು ತಮ್ಮ ಪ್ರಥಮ ಪ್ರಯತ್ನದಲ್ಲೇ ವಿಭಿನ್ನ ಕಾನ್ಸೆಪ್ಟ್ ಮೂಲಕ ತಮ್ಮ ಹೊಸ ಜರ್ನಿಯನ್ನು ಆರಂಭಿಸುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಶ್ರೀ ಚೌಡೇಶ್ಬರಿ ಸಿನಿ ಕ್ರಿಯೇಶನ್ಸ್ ಮೂಲಕ ಎಲ್.ಮೋಹನ್ ಕುಮಾರ್ ಅವರು ದೊಡ್ಡ ಮಟ್ಟದ ಬಂಡವಾಳ ಹೂಡುತ್ತಿದ್ದಾರೆ.

ಎಂ.ಎಸ್.ತ್ಯಾಗರಾಜ್ ಅವರ ಸಂಗೀತ ಸಂಯೋಜನೆ, ಕರುಣಾಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮುಂದಿನ ತಿಂಗಳಿಂದ ಆರಂಭಿಸಿ ಬಹುತೇಕ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕಿದೆ. ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಹಾಗೂ ಮಹೂರ್ತದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ನಿರ್ದೇಶಕ ಪುನೀತ್ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಕ್ ಬೆಂಚರ್ಸ್ ಸಾಂಗ್ ರಿಲೀಸ್ ಮಾಡಿದ್ರು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್

ನೋಡುಗರಿಗೆ ಪರಿಶುದ್ಧ ಮನೋರಂಜನೆಯ ರಸದೌತಣ ಉಣಬಡಿಸಲು ಹೊಸತಂಡವೊಂದು ಸಿದ್ದವಾಗಿದೆ. ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯ ಅವರು ನಿರ್ಮಿಸಿರುವ, ಬಿ.ಆರ್ ರಾಜಶೇಖರ್ ನಿರ್ದೇಶನದಲ್ಲಿ ನೂತನ ಪ್ರತಿಭೆಗಳ ನಟಿಸಿರುವ ” ಬ್ಯಾಕ್ ಬೆಂಚರ್ಸ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಇತ್ತೀಚೆಗೆ ಈ ಚಿತ್ರದ ಹಾಡೊಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಕುಲ್ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಆನ್ ಲೈನ್ ಮೂಲಕ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಸುಮಾರು ಒಂದು ವರ್ಷಗಳ ಕಾಲ ವರ್ಕ್ ಶಾಪ್ ನಡೆಸಿ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ‌ ಎಂದು ಮಾತನಾಡಿದ ನಿರ್ದೇಶಕ ಬಿ.ಆರ್ ರಾಜಶೇಖರ್, “ಬ್ಯಾಕ್ ಬೆಂಚರ್ಸ್” ಚಿತ್ರದಲ್ಲಿ ಮನೋರಂಜನೆ ಪ್ರಮುಖಾಂಶ. ಎಲ್ಲರಿಗೂ ಕಾಲೇಜು ದಿನಗಳನ್ನು ನೆನಪಿಸುವ ಚಿತ್ರವಿದು. ನಮ್ಮ ಚಿತ್ರದಲ್ಲಿ ಬೇರೆ ಏನು ಇಲ್ಲ.. ಮನೋರಂಜನೆಯೇ ಎಲ್ಲಾ.. ಮೂವತ್ತೈದು ದಿನಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಸಾಕಷ್ಟು ಹೊಸ ಪ್ರತಿಭೆಗಳೆ ಹೆಚ್ಚಾಗಿ ಅಭಿನಯಿಸಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ ಎಂದರು.

ಚಿತ್ರದಲ್ಲಿ ಏಳು ಹಾಡುಗಳಿದೆ. ಮೊದಲ ಹಾಡು ಈಗ ಬಿಡುಗಡೆಯಾಗಿದೆ. ಜನಪ್ರಿಯ ಗೀತರಚನೆಕಾರರು ಹಾಗೂ ಗಾಯಕರ ಕಂಠಸಿರಿಯಲ್ಲಿ ಹಾಡುಗಳು ಮೂಡಿ ಬರುತ್ತಿದೆ. “ಲವ್ ಮಾಕ್ಟೇಲ್ 2” ಚಿತ್ರದ ನಂತರ ನಾನು ಸಂಗೀತ ನೀಡುತ್ತಿರುವ ಚಿತ್ರವಿದು ಎಂದು ಸಂಗೀತ ನಿರ್ದೇಶಕ ನಕುಲ್ ಭಯಂಕರ್ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎನ್ ಎಸ್ ಬಿ ಅಕಾಡೆಮಿ ಚೇರ್ಮನ್ ಶ್ರೀಧರ್ ಹಾಗೂ “Rajeev” “ಬ್ಯಾಕ್ ಬೆಂಚರ್ಸ್” ಗೆ ಶುಭ ಕೋರಿದರು.

ಚಿತ್ರದಲ್ಲಿ ನಟಿಸಿರುವ ಅರವಿಂದ್ ಕುಪ್ಳಿಕರ್, ರಂಜನ್ ನರಸಿಂಹಮೂರ್ತಿ, ಜತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಹ, ಮಾನ್ಯ ಗೌಡ, ಕುಂಕುಮ್, ಅನುಶಾ ಸುರೇಶ್, ಮನೋಜ್ ಶೆಟ್ಟಿ, ನಮಿತಾ ಗೌಡ ಮುಂತಾದವರು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.

Categories
ಸಿನಿ ಸುದ್ದಿ

ಕದನ ವಿರಾಮಕ್ಕೆ ಚಾಲನೆ!

ಶ್ರೀಬ್ರಹ್ಮಲಿಂಗೇಶ್ವರ ಫಿಲಂಸ್ ಬ್ಯಾನರ್ ನಲ್ಲಿ ಕೆ.ಭಾಸ್ಕರ್ ನಾಯ್ಕ್ (ಮಾರಣಕಟ್ಟೆ) ಹಾಗೂ ಸಾಮ್ರಾಟ್ ಮಂಜುನಾಥ್.ವಿ(ಗರುಡಾಚಾರ್ ಪಾಳ್ಯ) ನಿರ್ಮಿಸುತ್ತಿರುವ‌ ಹಾಗೂ ಮುರಳಿ ಎಸ್ ವೈ ನಿರ್ದೇಶನದ “ಕದನ ವಿರಾಮ” ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಬಿಲ್ಡರ್ ಸುರೇಶ್ ಆರಂಭ‌ ಫಲಕ ತೋರಿದರು. ಉದ್ಯಮಿ ಚಿಕ್ಕಣ್ಣ ಕ್ಯಾಮೆರಾ ಚಾಲನೆ ಮಾಡಿದರು.

“ರಿವಿಲ್” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. “ಕದನ ವಿರಾಮ” ಎಂದರೆ ಭೂಮಿ ಹಾಗೂ ಮನುಷ್ಯನ ನಡುವೆ ನಡೆಯುವ ಕಥೆ(ಲ್ಯಾಂಡ್ ವಿಚಾರವಾಗಿ). ನಿರ್ಮಾಪಕ ಭಾಸ್ಕರ್ ನಾಯ್ಕ್ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ಐದು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ.

ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ರಿಜೊ ಪಿ ಜಾನ್ ಅವರ ಛಾಯಾಗ್ರಹಣವಿರುವ “ಕದನ ವಿರಾಮ” ಚಿತ್ರದ ಬಹುತೇಕ ಚಿತ್ರೀಕರಣ ಕುಂದಾಪುರದಲ್ಲಿ ನಡೆಯಲಿದೆ. ಈ ತಿಂಗಳ ಕೊನೆಗೆ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಮುರಳಿ ಎಸ್ ವೈ ತಿಳಿಸಿದ್ದಾರೆ.

ಆಕಾಶ್ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು ಹಿಂದೆ “ನವರಂಗಿ” ಸೇರಿದಂತೆ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಸುಮಾರು ಏಳು ವರ್ಷಗಳ ನಂತರ ಆಕಾಶ್ ಶೆಟ್ಟಿ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಛಾಯಾಶ್ರೀ “ಕದನ ವಿರಾಮ” ಚಿತ್ರದ ನಾಯಕಿ. ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ‌.

Categories
ಸಿನಿ ಸುದ್ದಿ

ದುಬೈನಲ್ಲಿ ಪಾಸಾಯ್ತು ಕನ್ನಡ ಚಿತ್ರ: ಡಿಸೆಂಬರ್ 13 ಕ್ಕೆ ಟೀಸರ್ ರಿಲೀಸ್

ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರದ ಟೀಸರ್ ಡಿಸೆಂಬರ್ 10ರಂದು ದುಬೈನಲ್ಲಿ ನಡೆಯಲಿರುವ “ದುಬೈ ದಸರಾ” ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ.

ನಾಡಿನ ಹೆಸರಾಂತ ಕಲಾವಿದರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಾವಿರಾರು ಕನ್ನಡಿಗರ ಸಮ್ಮುಖದಲ್ಲಿ “ಜಸ್ಟ್ ಪಾಸ್” ಚಿತ್ರದ ಟೀಸರ್ ಪ್ರದರ್ಶನವಾಗಲಿದೆ. ಡಿಸೆಂಬರ್‌ 13‌ ರಂದು ಈ ಚಿತ್ರದ ಟೀಸರ್ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ.

ಶ್ರೀ, ಪ್ರಣತಿ, ರಂಗಾಯಣರಘು ಸಾಧುಕೋಕಿಲ ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ಗೋವಿಂದೇಗೌಡ, ದಾನಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಮೂರನೇ ಕೃಷ್ಣಪ್ಪ ಸಿನಿಮಾದ ಹಾಡು ಬಂತು: ಇದು ಆನೇಕಲ್ ಭಾಗದ ಕಥೆ

ಲವ್ ಸ್ಟೋರಿ ಕಥೆ ಹೇಳಿ ಗೆದ್ದಿರುವ ನಿರ್ದೇಶಕ ನವೀನ್ ರೆಡ್ಡಿ ಹೊಸ ಕನಸು ‘ಮೂರನೇ ಕೃಷ್ಣಪ್ಪ’. ಅಕಿರ ಹಾಗೂ ರಿಲ್ಯಾಕ್ಸ್ ಸತ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಅವರೀಗ ವಿಭಿನ್ನ ಶೀರ್ಷಿಕೆಯೊಂದಿಗೆ ಆನೇಕಲ್ ಭಾಗದ ಕಥೆ ಹೇಳೋದಿಕ್ಕೆ ನಿಮ್ಮ ಮುಂದೆ ಬರ್ತಿದ್ದಾರೆ. ಸದ್ದಿಲ್ಲದೇ ಮೂರನೇ ಕೃಷ್ಣಪ್ಪ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಮೂರನೇ ಕೃಷ್ಣಪ್ಪ ಬಳಗವೀಗ ಪ್ರಮೋಷನ್ ಪಡಸಾಲೆಗಿಳಿದಿದೆ. ಅದರ ಮೊದಲ ಭಾಗವಾಗಿ ಕಳೆದ ವಾರವಷ್ಟೇ ಟೈಟಲ್ ಟೀಸರ್ ರಿಲೀಸ್ ಮಾಡಿ ಥ್ರಿಲ್ ಹೆಚ್ಚಿಸಿತ್ತು. ಇದೀಗ ಮೂರನೇ ಕೃಷ್ಣಪ್ಪ ಸಿನಿಮಾದ ಮೆಲೋಡಿ ಮಸ್ತಿಯೊಂದು ಅನಾವರಣಗೊಂಡಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಗೆಹರಿಯದ ಒಗಟುಗಳು ಎಂಬ ಸಾಹಿತ್ಯದ ಹಾಡು ಬಿಡುಗಡೆಯಾಗಿದೆ. ಸುಪ್ರಿತ್ ಶರ್ಮಾ ಎಸ್ ಈ ಹಾಡಿಗೆ ಸಾಹಿತ್ಯ ನೀಡುವುದರ ಜೊತೆಗೆ ಸಂಗೀತ ಕೂಡ ಒದಗಿಸಿದ್ದಾರೆ. ನಿಹಾಲ್ ಟೌರೊ ಬಗೆಹರಿಯದ ಒಗಟುಗಳು ಗೀತೆಗೆ ಧ್ವನಿಯಾಗಿದ್ದಾರೆ.

ರೆಡ್ ಡ್ರಾಗ್ಯನ್ ಫಿಲ್ಮಂಸ್ ಪ್ರೊಡಕ್ಷನ್ ಹೌಸ್ ಎರಡನೇ ಕೊಡುಗೆ ಮೂರನೇ ಕೃಷ್ಣಪ್ಪ. ಈ ಹಿಂದೆ ರಿಲ್ಯಾಕ್ಸ್ ಸತ್ಯ ಚಿತ್ರವನ್ನು ಇದೇ ಪ್ರೊಡಕ್ಷನ್ ನಡಿ ಮೋಹನ್ ರೆಡ್ಡಿ ಜಿ, ರವಿಶಂಕರ್ ನಿರ್ಮಿಸಿದ್ದರು. ಇದೀಗ ಇದೇ ಪ್ರೊಡಕ್ಷನ್ ಹೌಸ್ ನಡಿ ಇವರಿಬ್ಬರು ಮೂರನೇ ಕೃಷ್ಣಪ್ಪ ಸಿನಿಮಾಗೆ ಹಣ ಹಾಕಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಹೊತ್ತು ಬಂದಿರುವ ಈ ಚಿತ್ರದಲ್ಲಿ ಸಂಪತ್ ಮೈತ್ರೀಯಾ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶ್ರೀಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ತುಕಾಲಿ ಸಂತೋಷ್, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ.

ಮೂರನೇ ಕೃಷ್ಣಪ್ಪ ಸಿನಿಮಾ ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣವಿದೆ. ಫ್ರೆಶ್ ಕಥೆಯೊಂದಿಗೆ ಸಿನಿಮಾಪ್ರೇಮಿಗಳ ಎದುರು ಬರ್ತಿರುವ ನವೀನ್ ರೆಡ್ಡಿ ತಮ್ಮ ಹೊಸ ಪ್ರಯೋಗವನ್ನು ಜನವರಿ ಅಥವಾ ಫೆಬ್ರವರಿ ತಿಂಗಳಂದು ಪ್ರೇಕ್ಷಕ ಎದುರು ತರಲು ಯೋಜನೆ ಹಾಕಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ದುಬೈನಲ್ಲಿ ಡಂಕಿ ಡ್ರಾಪ್-4 ಶೂಟ್

ಪಠಾಣ್ ಮತ್ತು ಜವಾನ್ ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ಬಾಲಿವುಡ್ ಬಾದ್ಷಾ ಶಾರುಖ್ ಖಾನ್, ತಮ್ಮ ಮುಂದಿನ ಸಿನಿಮಾ “ಡಂಕಿ”ಗಾಗಿ ಎದುರು ನೋಡುತ್ತಿದ್ದಾರೆ. ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ರಾಜ್ ಕುಮಾರ್ ಹಿರಾನಿ ನಿರ್ದೇಶನ ಡಂಕಿ ಸಿನಿಮಾ, ಡಿ.21ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಟ್ರೇಲರ್ ನಿಂದ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ.

ಡಂಕಿ ಡ್ರಾಪ್-3 ಬಳಿಕ ಡಂಕಿ ಡ್ರಾಪ್-4 ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ಭರದಿಂದ ಚಿತ್ರೀಕರಣ ನಡೆಸಲಾಗಿದೆ. ಬಿಡುಗಡೆ ಸಜ್ಜಾಗಿರುವ ಹೊತ್ತಲ್ಲೇ ಇದೀಗ ಚಿತ್ರೀಕರಣ ಅಂತಾ ಹುಬ್ಬೇರಿಸಬೇಡಿ. ಡಂಕಿ ಚಿತ್ರದ ಸ್ಪೆಷಲ್ ನಂಬರ್ ಇತ್ತೀಚಿಗಷ್ಟೇ ಅಬುದಬಿಯಲ್ಲಿ ಶೂಟ್ ಮಾಡಲಾಗಿದೆ. ಸುಹಾನಾ ಖಾನ್ ಡೆಬ್ಯು ಸಿನಿಮಾದ ಪ್ರೀಮಿಯರ್ ಮುಗಿಸಿ ಯುಎಇಗೆ ಹಾರಿದ ಶಾರುಖ್ ಅಂಡ್ ಟೀಂ, ಮೂರು ದಿನ ಸ್ಪೆಷಲ್ ನಂಬರ್ ಚಿತ್ರೀಕರಣ ನಡೆಸಿದೆ.

ಶಾರುಖ್ ಖಾನ್ ಜತೆಗೆ ನಟಿ ತಾಪ್ಪಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ವಿಕ್ಕಿ ಕೌಶಲ್ ಗೆಸ್ಟ್ ರೋಲ್ ಮಾಡಿದ್ದಾರೆ. ಸಂಜು ಸಿನಿಮಾದ ಬ್ಲಾಕ್ ಬಸ್ಟರ್ ಸಕ್ಸಸ್ ಬಳಿಕ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಡಂಕಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

‘ಡಂಕಿ’ ಸಿನಿಮಾವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಹಿರಿಯ ಕಲಾವಿದೆ ಲೀಲಾವತಿ ನಿಧನ

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ (85) ಡಿಸೆಂಬರ್8 ರಂದು ನಿಧನರಾಗಿದ್ದಾರೆ.

ಶುಕ್ರವಾರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲ ನೀಡದೆ ಅವರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. ಆರಂಭದಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದರು. 1958ರಲ್ಲಿ ಸುಬ್ಬಯ್ಯ ಅವರು ನಿರ್ಮಿಸಿ ನಿರ್ದೇಶಿಸಿದ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ನಟಿಸಿದರು. ನಂತರ ‘ಮಾಂಗಲ್ಯ ಯೋಗ’ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರ ಸಿಕ್ಕಿತು 1960ರಲ್ಲಿ ಬಿಡುಗಡೆಯಾದ ‘ರಣಧೀರ ಕಂಠೀರವ’ ಚಿತ್ರದಲ್ಲಿ ಅವರು ಡಾ ರಾಜಕುಮಾರ್ ಗೆ ನಾಯಕಿಯಾದರು. ಬಳಿಕ ‘ಕಿತ್ತೂರು ಚೆನ್ನಮ್ಮ’, ‘ರತ್ನಮಂಜರಿ’, ‘ಗಾಳಿಗೋಪುರ’, ‘ನಂದಾದೀಪ’, ‘ಕನ್ಯಾ ರತ್ನ’, ‘ಕುಲವಧು’, ‘ವೀರಕೇಸರಿ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’ ಮುಂತಾದ ಹಲವು ಚಿತ್ರಗಳಲ್ಲಿ ರಾಜಕುಮಾರ್ ಅವರ ಜೊತೆ ಅಭಿನಯಿಸಿದರು.

ಲೀಲಾವತಿಯವರಿಗೆ ಅತ್ಯುತ್ತಮ ಪೋಷಕ ನಟಿ ಲಭಿಸಿದೆ. ‘ಗೆಜ್ಜೆಪೂಜೆ’, ‘ಸಿಪಾಯಿ ರಾಮು’ ಹಾಗೂ ‘ಡಾಕ್ಟರ್ ಕೃಷ್ಣ’ ಚಿತ್ರಗಳಿಗೆ ಅವರು ಪ್ರಶಸ್ತಿ ಪಡೆದಿದ್ದಾರೆ. ನಟನೆ ಜೊತೆ ಅವರು ತಮ್ಮ ಮಗ ವಿನೋದ್ ರಾಜ್ ಅಭಿನಯದ ‘ಕಾಲೇಜ್ ಹೀರೋ’ ಚಿತ್ರದ ಮೂಲಕ ನಿರ್ಮಾಪಕಿಯಾದರು. ಅನಂತರ ‘ಕನ್ನಡದ ಕಂದ’, ‘ಯಾರದು?’ ಚಿತ್ರಗಳನ್ನು ನಿರ್ಮಿಸಿದರು.

Categories
ಸಿನಿ ಸುದ್ದಿ

ಯಶ್ ಸಿನಿಮಾ‌ ಘೋಷಣೆ: ಟಾಕ್ಸಿಕ್ ಸಿನಿಮಾ ಹೆಸರು: ಇದು ಕೆವಿಎನ್ ಪ್ರೊಡಕ್ಷನ್ಸ್ ಚಿತ್ರ

ಯಶ್‍ ಅಭಿನಯದ 19ನೇ ಚಿತ್ರದ ಘೋಷಣೆಯಾಗಿದೆ. ಕೆವಿಎನ್‍ ಪ್ರೊಡಕ್ಷನ್ಸ್ ಈ ಚಿತ್ರ ನಿರ್ಮಿಸುತ್ತಿದ್ದು, ಗೀತು ಮೋಹನ್‍ ದಾಸ್‍ ನಿರ್ದೇಶಿಸುತ್ತಿದ್ದಾರೆ ಅಧಿಕೃತವಾಗಿದೆ. ಅಂದಹಾಗೆ ‘ಟಾಕ್ಸಿಕ್‍’ ಎಂಬುದು ಯಶ್ ಅಭಿನಯದ ಹೊಸ ಚಿತ್ರದ ಹೆಸರು. ಯಶ್ ಅವರೇ ಇದನ್ನು ಅನೌನ್ಸ್ ಮಾಡಿದ್ದಾರೆ.

ಯಶ್‍ ಅಭಿನಯದ ‘ಕೆಜಿಎಫ್‍ 2’ ನಂತರ ಯಶ್‍ ಅಭಿನಯದ ಹೊಸ ಚಿತ್ರ ಯಾವುದೂ ಘೋಷಣೆಯಾಗಿರಲಿಲ್ಲ. ನಿರ್ದೇಶಕಿ ಗೀತೂ ಮೋಹನ್‍ ದಾಸ್‍ ನಿರ್ದೇಶನದಲ್ಲಿ ನಟಿಸುವ ಬಗ್ಗೆ ಮಾತು ಕೇಳಿಬರುತ್ತಿತ್ತು. ಈಗ ಯಶ್ ಅದನ್ನು ಸ್ಪಷ್ಟಪಡಿಸಿದ್ದಾರೆ.

ಈ ಚಿತ್ರವು 2025ರ ಏಪ್ರಿಲ್‍ 10ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ ಎಂಬುದನ್ನೂ ಕೂಡ ಸ್ಪಷ್ಟಪಡಿಸಲಾಗಿದೆ.

Categories
ಸಿನಿ ಸುದ್ದಿ

ಮರೀಚಿ ಆಟ ಶುರು ಗುರು: ಡಿಸೆಂಬರ್ 8ರಿಂದ ರಾಜ್ಯಾದ್ಯಂತ ಅಬ್ಬರ

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ನಟನೆಯ ಮರೀಚಿ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ಡಿಸೆಂಬರ್ 8ಕ್ಕೆ ಚಿತ್ರ ತೆರೆಗೆ ಬರ್ತಿದೆ. ಈಗಾಗ್ಲೇ ಟೀಸರ್ ಮೂಲಕ ಗಮನಸೆಳೆದಿರುವ ಮರೀಚಿ ಸಿನಿಮಾದ ಮಸಣವು ಮನಸು ಎಂಬ ಹೃದಯ ಸ್ಪರ್ಶಿ ಗೀತೆಯನ್ನು, ಇಂದು ರೆಬಲ್ ಸ್ಟಾರ್ ಅಂಬರೀಶ್ ಪುಣ್ಯ ಭೂಮಿಯಲ್ಲಿ ಅನಾವರಣ ಮಾಡಲಾಯಿತು. ಈ ವೇಳೆ ನಿರ್ದೇಶಕ ಸಿದ್ಧ್ರುವ್ ಅಂಬಿ ಸಮಾಧಿ ಬಳಿ ಮಸಣವು ಮನಸು ಎಂಬ ಗೀತೆ ರಿಲೀಸ್ ಮಾಡಿದ್ಯಾಕೆ ಎಂಬ ಕಾರಣ ಬಿಚ್ಚಿಟ್ಟರು.

ನಿರ್ದೇಶಕ ಸಿದ್ಧ್ರುವ್ ಮಾತನಾಡಿ, ಡಿಸೆಂಬರ್ 8ರಂದು ನಮ್ಮ ಸಿನಿಮಾ ಬರ್ತಿದೆ. ನಿಮ್ಮೆಲ್ಲರ ಬೆಂಬಲ ನಮಗೆ ಇರಲಿ. ಅಂಬರೀಶ್ ಅಣ್ಣನ ಸಿನಿಮಾಗಳ ನೋಡುತ್ತಾ ಬೆಳೆದವರು. ಅವರ ಅಭಿಮಾನಿಯಾಗಿದ್ದೇನೆ. ನಾನು ಮೊದಲ ಸಿನಿಮಾ ಮಾಡುವಾಗ ಅಂಬರೀಶಣ್ಣ ಕ್ಲ್ಯಾಪ್ ಮಾಡಬೇಕೆಂಬ ಆಸೆ ಇತ್ತು. ಆದ್ರೆ ಅವರು ನಮ್ಮದೊಂದಿಗೆ ಇಲ್ಲ. ಹೀಗಾಗಿ ಅವರ ಮುಂದೆಯೇ ಒಂದು ಸಾಂಗ್ ರಿಲೀಸ್ ಮಾಡಬೇಕು ಎನಿಸಿತು. ನಮ್ಮ ತಂಡದವರು ತೀರ್ಮಾನ ಮಾಡಿ ಇಲ್ಲಿ ಸಾಂಗ್ ಬಿಡುಗಡೆ ಮಾಡಲು ನಿರ್ಧಾರ ತೆಗೆದುಕೊಂಡೆವು. ಈ ಸಾಹಿತ್ಯದ ಹಾಡಿಗೂ ಜಾಗಕ್ಕೂ ಸಂಬಂಧವಿದೆ. ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಸಾಹಿತ್ಯ ಅದ್ಭುತವಾಗಿದೆ. ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಥಿಯೇಟರ್ ನಲ್ಲಿ ಮರೀಚಿ ಸಿನಿಮಾ ನೋಡಿ ಎಂದರು.

ಮಸಣವು ಮನಸು ಎಂಬ ಹೃದಯ ಸ್ಪರ್ಶಿ ಗೀತೆಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ಕೆ. ಎಸ್ ಹರಿಶಂಕರ್ ಧ್ವನಿಯಾಗಿದ್ದಾರೆ. ಮರೀಚಿ ಲವ್ ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ . ವಿಜಯ ರಾಘವೇಂದ್ರ, ಸೋನು ಗೌಡ ಜತೆಗೆ ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಎಸ್.ಎಸ್. ಆರ್‌. ಕೆ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. . ಸಸ್ಪೆನ್ಸ್ ಥ್ರಿಲ್ಲರ್‌ ಅಂಶಗಳ ಮರೀಚಿ ಟ್ರೇಲರ್ ನಿರೀಕ್ಷೆ ಹೆಚ್ಚಿಸಿದ್ದು, ಪೊಲೀಸ್ ಅವತಾರದಲ್ಲಿ ವಿಜಯ್ ರಾಘವೇಂದ್ರ ಮಿಂಚಿದ್ದಾರೆ. ಡಿಸೆಂಬರ್ 8ಕ್ಕೆ ರಾಜ್ಯಾದ್ಯಂತ ಸಿದ್ಧ್ರುವ್ ಚೊಚ್ಚಲ ಕನಸ್ಸು ಪ್ರೇಕ್ಷಕರ ಎದುರು ಹಾಜರಾಗಲಿದೆ.

Categories
ಸಿನಿ ಸುದ್ದಿ

ಕೃಷ್ಣಂ ಪ್ರಣಯ ಸಖಿ ಶೂಟಿಂಗ್ ಮುಗೀತು: ಇದು ಗಣೇಶ್ ಸಿನಿಮಾ

ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಇಟಲಿ ಹಾಗೂ ಮಾಲ್ಟಾದಲ್ಲಿ ಚಿತ್ರೀಕರಣ ನಡೆದಿದೆ. ಪ್ರಸ್ತುತ ಡಬ್ಬಿಂಗ್ ನಡೆಯುತ್ತಿದ್ದು, ಡಬ್ಬಿಂಗ್ ಕೂಡ ಮುಕ್ತಾಯ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಲಿದೆ.

ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ.

ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು.

“ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ.

ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

error: Content is protected !!