ಕದನ ವಿರಾಮಕ್ಕೆ ಚಾಲನೆ!

ಶ್ರೀಬ್ರಹ್ಮಲಿಂಗೇಶ್ವರ ಫಿಲಂಸ್ ಬ್ಯಾನರ್ ನಲ್ಲಿ ಕೆ.ಭಾಸ್ಕರ್ ನಾಯ್ಕ್ (ಮಾರಣಕಟ್ಟೆ) ಹಾಗೂ ಸಾಮ್ರಾಟ್ ಮಂಜುನಾಥ್.ವಿ(ಗರುಡಾಚಾರ್ ಪಾಳ್ಯ) ನಿರ್ಮಿಸುತ್ತಿರುವ‌ ಹಾಗೂ ಮುರಳಿ ಎಸ್ ವೈ ನಿರ್ದೇಶನದ “ಕದನ ವಿರಾಮ” ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಬಿಲ್ಡರ್ ಸುರೇಶ್ ಆರಂಭ‌ ಫಲಕ ತೋರಿದರು. ಉದ್ಯಮಿ ಚಿಕ್ಕಣ್ಣ ಕ್ಯಾಮೆರಾ ಚಾಲನೆ ಮಾಡಿದರು.

“ರಿವಿಲ್” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. “ಕದನ ವಿರಾಮ” ಎಂದರೆ ಭೂಮಿ ಹಾಗೂ ಮನುಷ್ಯನ ನಡುವೆ ನಡೆಯುವ ಕಥೆ(ಲ್ಯಾಂಡ್ ವಿಚಾರವಾಗಿ). ನಿರ್ಮಾಪಕ ಭಾಸ್ಕರ್ ನಾಯ್ಕ್ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ಐದು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ.

ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ರಿಜೊ ಪಿ ಜಾನ್ ಅವರ ಛಾಯಾಗ್ರಹಣವಿರುವ “ಕದನ ವಿರಾಮ” ಚಿತ್ರದ ಬಹುತೇಕ ಚಿತ್ರೀಕರಣ ಕುಂದಾಪುರದಲ್ಲಿ ನಡೆಯಲಿದೆ. ಈ ತಿಂಗಳ ಕೊನೆಗೆ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಮುರಳಿ ಎಸ್ ವೈ ತಿಳಿಸಿದ್ದಾರೆ.

ಆಕಾಶ್ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು ಹಿಂದೆ “ನವರಂಗಿ” ಸೇರಿದಂತೆ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಸುಮಾರು ಏಳು ವರ್ಷಗಳ ನಂತರ ಆಕಾಶ್ ಶೆಟ್ಟಿ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಛಾಯಾಶ್ರೀ “ಕದನ ವಿರಾಮ” ಚಿತ್ರದ ನಾಯಕಿ. ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ‌.

Related Posts

error: Content is protected !!