ಹಿರಿಯ ಕಲಾವಿದೆ ಲೀಲಾವತಿ ನಿಧನ

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ (85) ಡಿಸೆಂಬರ್8 ರಂದು ನಿಧನರಾಗಿದ್ದಾರೆ.

ಶುಕ್ರವಾರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲ ನೀಡದೆ ಅವರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. ಆರಂಭದಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದರು. 1958ರಲ್ಲಿ ಸುಬ್ಬಯ್ಯ ಅವರು ನಿರ್ಮಿಸಿ ನಿರ್ದೇಶಿಸಿದ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ನಟಿಸಿದರು. ನಂತರ ‘ಮಾಂಗಲ್ಯ ಯೋಗ’ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರ ಸಿಕ್ಕಿತು 1960ರಲ್ಲಿ ಬಿಡುಗಡೆಯಾದ ‘ರಣಧೀರ ಕಂಠೀರವ’ ಚಿತ್ರದಲ್ಲಿ ಅವರು ಡಾ ರಾಜಕುಮಾರ್ ಗೆ ನಾಯಕಿಯಾದರು. ಬಳಿಕ ‘ಕಿತ್ತೂರು ಚೆನ್ನಮ್ಮ’, ‘ರತ್ನಮಂಜರಿ’, ‘ಗಾಳಿಗೋಪುರ’, ‘ನಂದಾದೀಪ’, ‘ಕನ್ಯಾ ರತ್ನ’, ‘ಕುಲವಧು’, ‘ವೀರಕೇಸರಿ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’ ಮುಂತಾದ ಹಲವು ಚಿತ್ರಗಳಲ್ಲಿ ರಾಜಕುಮಾರ್ ಅವರ ಜೊತೆ ಅಭಿನಯಿಸಿದರು.

ಲೀಲಾವತಿಯವರಿಗೆ ಅತ್ಯುತ್ತಮ ಪೋಷಕ ನಟಿ ಲಭಿಸಿದೆ. ‘ಗೆಜ್ಜೆಪೂಜೆ’, ‘ಸಿಪಾಯಿ ರಾಮು’ ಹಾಗೂ ‘ಡಾಕ್ಟರ್ ಕೃಷ್ಣ’ ಚಿತ್ರಗಳಿಗೆ ಅವರು ಪ್ರಶಸ್ತಿ ಪಡೆದಿದ್ದಾರೆ. ನಟನೆ ಜೊತೆ ಅವರು ತಮ್ಮ ಮಗ ವಿನೋದ್ ರಾಜ್ ಅಭಿನಯದ ‘ಕಾಲೇಜ್ ಹೀರೋ’ ಚಿತ್ರದ ಮೂಲಕ ನಿರ್ಮಾಪಕಿಯಾದರು. ಅನಂತರ ‘ಕನ್ನಡದ ಕಂದ’, ‘ಯಾರದು?’ ಚಿತ್ರಗಳನ್ನು ನಿರ್ಮಿಸಿದರು.

Related Posts

error: Content is protected !!