ಮರೀಚಿ ಆಟ ಶುರು ಗುರು: ಡಿಸೆಂಬರ್ 8ರಿಂದ ರಾಜ್ಯಾದ್ಯಂತ ಅಬ್ಬರ

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ನಟನೆಯ ಮರೀಚಿ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ಡಿಸೆಂಬರ್ 8ಕ್ಕೆ ಚಿತ್ರ ತೆರೆಗೆ ಬರ್ತಿದೆ. ಈಗಾಗ್ಲೇ ಟೀಸರ್ ಮೂಲಕ ಗಮನಸೆಳೆದಿರುವ ಮರೀಚಿ ಸಿನಿಮಾದ ಮಸಣವು ಮನಸು ಎಂಬ ಹೃದಯ ಸ್ಪರ್ಶಿ ಗೀತೆಯನ್ನು, ಇಂದು ರೆಬಲ್ ಸ್ಟಾರ್ ಅಂಬರೀಶ್ ಪುಣ್ಯ ಭೂಮಿಯಲ್ಲಿ ಅನಾವರಣ ಮಾಡಲಾಯಿತು. ಈ ವೇಳೆ ನಿರ್ದೇಶಕ ಸಿದ್ಧ್ರುವ್ ಅಂಬಿ ಸಮಾಧಿ ಬಳಿ ಮಸಣವು ಮನಸು ಎಂಬ ಗೀತೆ ರಿಲೀಸ್ ಮಾಡಿದ್ಯಾಕೆ ಎಂಬ ಕಾರಣ ಬಿಚ್ಚಿಟ್ಟರು.

ನಿರ್ದೇಶಕ ಸಿದ್ಧ್ರುವ್ ಮಾತನಾಡಿ, ಡಿಸೆಂಬರ್ 8ರಂದು ನಮ್ಮ ಸಿನಿಮಾ ಬರ್ತಿದೆ. ನಿಮ್ಮೆಲ್ಲರ ಬೆಂಬಲ ನಮಗೆ ಇರಲಿ. ಅಂಬರೀಶ್ ಅಣ್ಣನ ಸಿನಿಮಾಗಳ ನೋಡುತ್ತಾ ಬೆಳೆದವರು. ಅವರ ಅಭಿಮಾನಿಯಾಗಿದ್ದೇನೆ. ನಾನು ಮೊದಲ ಸಿನಿಮಾ ಮಾಡುವಾಗ ಅಂಬರೀಶಣ್ಣ ಕ್ಲ್ಯಾಪ್ ಮಾಡಬೇಕೆಂಬ ಆಸೆ ಇತ್ತು. ಆದ್ರೆ ಅವರು ನಮ್ಮದೊಂದಿಗೆ ಇಲ್ಲ. ಹೀಗಾಗಿ ಅವರ ಮುಂದೆಯೇ ಒಂದು ಸಾಂಗ್ ರಿಲೀಸ್ ಮಾಡಬೇಕು ಎನಿಸಿತು. ನಮ್ಮ ತಂಡದವರು ತೀರ್ಮಾನ ಮಾಡಿ ಇಲ್ಲಿ ಸಾಂಗ್ ಬಿಡುಗಡೆ ಮಾಡಲು ನಿರ್ಧಾರ ತೆಗೆದುಕೊಂಡೆವು. ಈ ಸಾಹಿತ್ಯದ ಹಾಡಿಗೂ ಜಾಗಕ್ಕೂ ಸಂಬಂಧವಿದೆ. ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಸಾಹಿತ್ಯ ಅದ್ಭುತವಾಗಿದೆ. ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಥಿಯೇಟರ್ ನಲ್ಲಿ ಮರೀಚಿ ಸಿನಿಮಾ ನೋಡಿ ಎಂದರು.

ಮಸಣವು ಮನಸು ಎಂಬ ಹೃದಯ ಸ್ಪರ್ಶಿ ಗೀತೆಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ಕೆ. ಎಸ್ ಹರಿಶಂಕರ್ ಧ್ವನಿಯಾಗಿದ್ದಾರೆ. ಮರೀಚಿ ಲವ್ ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ . ವಿಜಯ ರಾಘವೇಂದ್ರ, ಸೋನು ಗೌಡ ಜತೆಗೆ ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಎಸ್.ಎಸ್. ಆರ್‌. ಕೆ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. . ಸಸ್ಪೆನ್ಸ್ ಥ್ರಿಲ್ಲರ್‌ ಅಂಶಗಳ ಮರೀಚಿ ಟ್ರೇಲರ್ ನಿರೀಕ್ಷೆ ಹೆಚ್ಚಿಸಿದ್ದು, ಪೊಲೀಸ್ ಅವತಾರದಲ್ಲಿ ವಿಜಯ್ ರಾಘವೇಂದ್ರ ಮಿಂಚಿದ್ದಾರೆ. ಡಿಸೆಂಬರ್ 8ಕ್ಕೆ ರಾಜ್ಯಾದ್ಯಂತ ಸಿದ್ಧ್ರುವ್ ಚೊಚ್ಚಲ ಕನಸ್ಸು ಪ್ರೇಕ್ಷಕರ ಎದುರು ಹಾಜರಾಗಲಿದೆ.

Related Posts

error: Content is protected !!