Categories
ಸಿನಿ ಸುದ್ದಿ

ಸಾಕ್ಷಾತ್ ಲಕ್ಷ್ಮಿಯಂತೆ ಖುಷಿ ಪ್ರತ್ಯಕ್ಷ ; ದಿಯಾ ಚೆಲುವೆಗೆ ಕೈ‌ಮುಗಿದರಲ್ಲ ಫ್ಯಾನ್ಸ್ !

ಖುಷಿ ನಗು ಚೆಂದ.. ಖುಷಿ ಮಾತು ಅಂದ.. ಖುಷಿ ಅಭಿನಯ ಅನನ್ಯ ಅನುಬಂಧ. ಎಸ್, ಸೌಮ್ಯ ಸ್ವಭಾವದ ಖುಷಿ ಕಣ್ಣೋಟದ ಅಭಿನಯದ ಮೂಲಕ, ಮೊಗದಲ್ಲಿ‌ ಮೂಡುವ ನಗುವಿನ ಮೂಲಕ ಕಲಾರಸಿಕರನ್ನು ಕಟ್ಟಿಹಾಕಿದ್ದಾರೆ. ಈಗ ಮಹಾಲಕ್ಷ್ಮಿಯ ಅವತಾರವೆತ್ತಿ ಸಾಕ್ಷಾತ್ ಲಕ್ಷ್ಮಿಯೂ ಅಚ್ಚರಿಪಡುವಂತೆ ಮಾಡಿದ್ದಾರೆ.

ಖುಷಿ.. ದಿಯಾ ಖುಷಿ.. ಈ ಖುಷಿ ಅಂದ್ರೆ ಯಾರಿಗ್ ಗೊತ್ತಿಲ್ಲ ಹೇಳಿ, ‌ಎರಡಕ್ಷರದ ದಿಯಾ ಸಿನಿಮಾ.. ಎರಡೇ ಎರಡು ಅಕ್ಷರದ ಖುಷಿ ಎಂಬ ನವನಟಿಯನ್ನು ಬೆಳ್ಳಿತೆರೆಯಲ್ಲಿ ರಾರಾಜಿಸುವಂತೆ ಮಾಡಿತು. ಎರಡಕ್ಷರದ ದಿಯಾ ಎನ್ನುವ ಪಾತ್ರ ನಟಿ ಖುಷಿ ಅವರನ್ನು ಮನೆ ಮಾತು ಆಗುವಂತೆ ಮಾಡಿತು. ಆ ಮೂಲಕ ದೊಡ್ಡ ಚಿತ್ರಪ್ರೇಮಿಗಳ ಮನಸು ಗೆದ್ದ ನಟಿ ಖುಷಿ.

ಖುಷಿ ನಗು ಚೆಂದ.. ಖುಷಿ ಮಾತು ಅಂದ.. ಖುಷಿ ಅಭಿನಯ ಅನನ್ಯ ಅನುಬಂಧ. ಎಸ್, ಸೌಮ್ಯ ಸ್ವಭಾವದ ಖುಷಿ ಕಣ್ಣೋಟದ ಅಭಿನಯದ ಮೂಲಕ, ಮೊಗದಲ್ಲಿ‌ ಮೂಡುವ ನಗುವಿನ ಮೂಲಕ ಕಲಾರಸಿಕರನ್ನು ಕಟ್ಟಿಹಾಕಿದ್ದಾರೆ. ಈಗ ಮಹಾಲಕ್ಷ್ಮಿಯ ಅವತಾರವೆತ್ತಿ ಸಾಕ್ಷಾತ್ ಲಕ್ಷ್ಮಿಯೂ ಅಚ್ಚರಿಪಡುವಂತೆ ಮಾಡಿದ್ದಾರೆ. ವರಮಹಾಲಕ್ಷ್ಮಿ ದರ್ಶನಕ್ಕೆ ಇನ್ನೆರಡು ದಿನ ಬಾಕಿಯಿದೆ. ಭಕ್ತರ‌ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಿಕ್ಕೆ, ಭಕ್ತರ ಕಷ್ಟ ಸುಖ ಬಗೆಹರಿಸಲಿಕ್ಕೆ ಲಕ್ಷ್ಮವ್ವ ತಾಯಿ ಕೆಲವೇ ಗಂಟೆಗಳಲ್ಲಿ ಧರೆಗಿಳಿಯಲಿದ್ದಾಳೆ.

ಪ್ರತಿಯೊಬ್ಬರ ಮನೆಯಲ್ಲಿ ಚಕ್ಕಳಮಕ್ಕಳ ಹಾಕಿ ಕುಳಿತು ರಾರಾಜಿಸಲಿ ದ್ದಾಳೆ. ಈ ದಿವ್ಯ ಕ್ಷಣವನ್ನು ಭಕ್ತರು ಕಣ್ತುಂಬಿಕೊಳ್ಳುವ ಮೊದಲೇ ದಿಯಾ ಖುಷಿ ಸಾಕ್ಷಾತ್ ಲಕ್ಷ್ಮಿಯಂತೆ ಕಂಗೊಳಿಸಿದ್ದಾರೆ. ವೈಟ್ ಅಂಡ್ ಗೋಲ್ಡನ್ ಕಲರ್ ಕಾಂಬಿನೇಷನ್ ಸೀರೆಯುಟ್ಟಿರುವ ಖುಷಿ ವೆರೈಟಿ ವೆರೈಟಿ ಜ್ಯೂವೆಲರಿ ಹಾಕಿಕೊಂಡು ಫೋಸ್ ಕೊಟ್ಟಿದ್ದಾರೆ. ಕಮಲದಲ್ಲಿ ಕುಳಿತು ಲಕ್ಷ್ಮಿಯ ಚೆಲುವು ಬೀರಿದ್ದಾರೆ. ಧರೆಗಿಳಿದ ಲಕ್ಷ್ಮಿಯಂತೆ ಕಾಣುತ್ತಿರುವ ಖುಷಿಯನ್ನ ಕಂಡು‌ ಅವರ ಫ್ಯಾನ್ಸ್ ನಿಂತಲ್ಲೇ ಕೈಮುಗಿ ಯುತ್ತಿದ್ದಾರೆ.

ಅಂದ್ಹಾಗೇ, ಖುಷಿ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷವಾಗಿ ಈ ಫೋಟೋಶೂಟ್ ಮಾಡಿಸಿದ್ದಾರೆ. ಹರ್ಷಿತಾ ರೆಡ್ಡಿ ಖುಷಿ ಅಂದವನ್ನ ಹೆಚ್ಚಿಸೋಕೆ ಮೇಕಪ್‌ ಹಚ್ಚಿದ್ದಾರೆ. ವೈಟ್ ಸ್ಯಾರಿ ಹಾಗೂ ತರಹೇವಾರಿ ಆಭರಣದಿಂದ ಖುಷಿಯ ರಂಗು ಹೆಚ್ಚಿದೆ ಎನ್ನುವುದಕ್ಕಿಂತ ಖುಷಿ ಆ ಆಭರಣಗಳನ್ನು ತೊಟ್ಟಿರುವುದರಿಂದಲೇ ಆ ಜ್ಯೂಯಲರಿಗೆ ಹಾಗೂ ಆ ಸೀರೆಗೆ ಲಕ್ಷ್ಮಿ ಕಳೆಬಂದಿದೆ ಅಂದರೆ ತಪ್ಪಾಗಲ್ಲ ಬಿಡಿ. ಎನಿವೇ, ಖುಷಿ ದಿಯಾ ಸಿನಿಮಾ ನಂತರ ಖುಷಿಖುಷಿಯಾಗಿ ಲೈಫ್ ಲೀಡ್ ಮಾಡ್ತಿದ್ದಾರೆ. ರಿಯಲ್ ಲೈಫ್ ಜೊತೆಗೆ ರೀಲ್ ಲೈಫ್ ಕೂಡ ಸುಂದರವಾಗಿ ಸಾಗ್ತಿದೆ. ಖುಷಿಯ ಸಹಜಸುಂದರ ಅಭಿನಯಕ್ಕೆ ಅವಕಾಶಗಳು ಹರಿದುಬರುತ್ತಿವೆ. ರಂಗಿತರಂಗ ಹಾಗೂ ಅವನೇ ಶ್ರೀಮನ್ನಾರಾಯಣ ಸಿನಿಮಾ ಖ್ಯಾತಿಯ ನಿರ್ಮಾಪಕರಾದ ಎಚ್ ಕೆ ಪ್ರಕಾಶ್ ಅವರ ಮುಂದಿನ ಸಿನಿಮಾಗೆ ಖುಷಿ ಹೀರೋಯಿನ್. ನಕ್ಷೆ, ಮಾರ್ಗ ಸೇರಿದಂತೆ ಐದಾರು ಚಿತ್ರಗಳು ಖುಷಿ ಕೈಯಲ್ಲಿವೆ.

ಮದುವೆ ಆದ್ಮೇಲೆ ಹೀರೋಯಿನ್ಸ್ ಗೆ ಬಿಗ್ ಸ್ಕ್ರೀನ್ ನಲ್ಲಿ ಲೈಫ್ ಇಲ್ಲ ಗುರು ಅಂತಿದ್ದವರಿಗೆ ರಿಯಲ್ ಸ್ಟಾರ್ ಉಪ್ಪಿ ಸ್ಟೈಲ್ ನಲ್ಲಿ ಲಾಗಾ ಹೊಡೆಸಿದ್ದಾರೆ. ಬ್ಯಾಕ್ ಟು‌‌ ಬ್ಯಾಕ್ ಸಿನಿಮಾ ಒಪ್ಪಿಕೊಂಡು ಟಕ್ಕರ್ ಕೊಡ್ತಿದ್ದಾರೆ. ಹೊಸಬರ ಚಿತ್ರಗಳಾದರೂ ಕೂಡ ಅಭಿನಯಕ್ಕೆ ಸ್ಕೋಪ್ ಇರುವ, ಸ್ಪೇಸ್ ಇರುವ ಮೂವೀಗಳನ್ನೇ ಖುಷಿ ಆಯ್ಕೆಮಾಡಿ ಕೊಳ್ತಿದ್ದಾರೆ. ದಿಯಾ ಖುಷಿಯ ಸಿನಿಜರ್ನಿ ಹೀಗೆ ಸಕ್ಸಸ್ ಫುಲ್ ಆಗಿ ಸಾಗುತ್ತಿರಲಿ. ಆಲ್ ಇಂಡಿಯಾ ಕ್ರಷ್ ಪಟ್ಟದಲ್ಲಿ ಖುಷಿ ರಾರಾಜಿಸಲಿ ಅನ್ನೋದೇ ಸಿನಿಲಹರಿಯ ಆಶಯ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿ ಲಹರಿ

Categories
ಸಿನಿ ಸುದ್ದಿ

ಸುದೀಪ್ ಡೈರೆಕ್ಟ್ ಮಾಡಿದ್ರೆ ನಾನು ಆಕ್ಟ್ ಮಾಡ್ತೀನಿ ; ಹೀಗಂದ್ರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ !

  • ವಿಶಾಲಾಕ್ಷಿ

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳಿದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಕ್ಟ್ ಮಾಡೋದಕ್ಕೆ ರೆಡಿಯಂತೆ. ಇದು ಬರೀ ಅಂತೆ ಕಂತೆ ಸುದ್ದಿಯಲ್ಲ ಸ್ವತಃ ಶಿವಣ್ಣ ಅವರೇ ಸುದೀಪ್ ಪಕ್ಕದಲ್ಲಿ ನಿಂತು ಅಧಿಕೃತ ವಾಗಿ ಘೋಷಣೆ ಮಾಡಿರುವ ಸುದ್ದಿ ಇದು.

ಕಿಚ್ಚನ ಕಥೆಗೆ ಶಿವಣ್ಣ ಕ್ಲೀನ್ ಬೋಲ್ಡ್

ಹೌದು, ಕರುನಾಡ ಚಕ್ರವರ್ತಿಯ ‘ನೀ ಸಿಗೋವರೆಗೂ’ ಸಿನಿಮಾ ಮುಹೂರ್ತ ಕಾರ್ಯಕ್ರಮ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಗೆ ವಿಶೇಷ ಅತಿಥಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಮಿಸಿದ್ದರು. ಶಿವಣ್ಣನಿಗೆ ಫಸ್ಟ್ ಕ್ಲಾಪ್ ಮಾಡಿ 124 ನೇ ಚಿತ್ರಕ್ಕೆ ತುಂಬು ಹೃದಯದಿಂದ ಹಾರೈಸಿದರು. ಇದೇ ವೇಳೆ ಹ್ಯಾಟ್ರಿಕ್ ಹೀರೋಗೆ ಸುದೀಪ್ ಒಂದು ಕಥೆ ನರೇಟ್ ಮಾಡಿದ್ದಾರೆ. ಒನ್ ಲೈನ್ ಸ್ಟೋರಿ ಕೇಳಿ ಎಕ್ಸೈಟ್ ಆದ ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಸುದೀಪ್ ನಿರ್ದೇಶನ ಮಾಡಿದರೆ ನಾನು ಆ ಸಿನಿಮಾ ಮಾಡೋದಕ್ಕೆ ರೆಡಿಯಿದ್ದೇನೆ ಎಂದರು.

ಶಿವಣ್ಣನಿಗಾಗಿ ಡೈರೆಕ್ಟರ್ ಕ್ಯಾಪ್ ತೊಡ್ತಾರಾ ಕಿಚ್ಚ

ಶಿವಣ್ಣ ಮಾತು ಮುಗಿಸಿದ್ಮೇಲೆ ಮೈಕ್ ಕೈಗೆತ್ತಿಕೊಂಡ ಸುದೀಪ್ ಅವರು ಶಿವಣ್ಣನ ದೊಡ್ಡತನದ ಬಗ್ಗೆ ಮಾತನಾಡಿದರು. ಒಬ್ಬ ಹೀರೋ ಮತ್ತೊಬ್ಬ ಹೀರೋಗೆ ಡೈರೆಕ್ಟ್ ಮಾಡ್ತೀನಿ ಅಂಗ ಬಂದಾಗ
ಸಿನಿಮಾ ಮಾಡೋಕೆ ಬರ್ತಿದ್ದಾನಾ ಅಥವಾ ಹಾಳು ಮಾಡೋಕೆ ಬರ್ತಿದ್ದಾನಾ ಎನ್ನುವ ಯೋಚನೆ ಸಹಜವಾಗಿ ಬರುತ್ತೆ. ಜೊತೆಗೆ ಅವರೇ ಒಬ್ಬ ನಟನಾಗಿ ನನಗ್ಯಾಕೆ ಡೈರೆಕ್ಟ್ ಮಾಡಬೇಕು ಎನ್ನುವ ಥಾಟ್ ಕೂಡ ಫ್ಲ್ಯಾಶ್‌‌‌ ಆಗುತ್ತೆ. ವಾಸ್ತವ ಹೀಗಿರುವಾಗ ಡೈರೆಕ್ಟ್ ಮಾಡಿದರೆ ನಾನು ಆಕ್ಟ್ ಮಾಡ್ತೀನಿ ಅಂತ ಶಿವಣ್ಣ ಹೇಳ್ತಿದ್ದಾರೆ ಅಂದರೆ ಅದು ಅವರ ದೊಡ್ಡಗುಣ ಹಾಗೂ ಸುದೀಪ್ ಮೇಲಿರುವ ನಂಬಿಕೆ ಅಲ್ಲದೇ ಮತ್ತೇನು ಅಲ್ಲ.

ಮಾಣಿಕ್ಯ ನಿರ್ದೇಶನದ ಶಾಂತಿನಿವಾಸದಲ್ಲಿ ಮಿಂಚಿದ್ದಾರೆ ಶಿವಣ್ಣ

ಅಷ್ಟಕ್ಕೂ, ಸುದೀಪ್ ಅದ್ಯಾವ್ ಕಥೆ ಹೇಳಿದರೂ, ಸ್ಟೋರಿ ಲೈನ್ ಹೇಗಿದೆ? ಇದ್ಯಾವ ಬಗ್ಗೆಯೂ ಹೆಚ್ಚಿನ ಡಿಟೈಲ್ಸ್ ಇಲ್ಲ. ಆದರೆ, ಇಬ್ಬರು ಒಂದಾಗಿ ಸಿನಿಮಾ ಸಂದರ್ಭ ಎದುರಾದರೆ ನೂರಕ್ಕೆ ನೂರು ಪರ್ಸೆಂಟ್ ಜೊತೆಯಾಗಿ ಸಿನಿಮಾ ಮಾಡ್ತಾರೆ. ಈಗಾಗಲೇ ಒಮ್ಮೆ ಶಿವಣ್ಣನಿಗೆ ಕಿಚ್ಚ ಆಕ್ಷನ್ ಕಟ್ ಹೇಳಿದ್ದಾರೆ. ಸುದೀಪ್ ನಿರ್ದೇಶಿಸಿ‌ ನಟಿಸಿದ್ದ ಶಾಂತಿನಿವಾಸದಲ್ಲಿ
ಹ್ಯಾಟ್ರಿಕ್ ಹೀರೋ ಮಿಂಚಿ ಹೋಗಿದ್ದಾರೆ. ‘ಒಂದು ಒಳ್ಳೆ ಕಥೆಯ ಹೇಳುವೆ’ ಹಾಡಿಗೆ ಸುದೀಪ್ ಹಾಗೂ ಶಿವಣ್ಣ ಒಟ್ಟಿಗೆ ಕಂಠಕುಣಿಸಿದ್ದಾರೆ.

ಈಗಾಗಲೇ, ಜೋಗಿ ಪ್ರೇಮ್ ನಿರ್ದೇಶನದ ಮಲ್ಟಿಸ್ಟಾರರ್ ದಿ ವಿಲನ್ ಚಿತ್ರದಲ್ಲಿ ಧಗಧಗಿಸಿದ್ದಾರೆ.
ಮತ್ತೆ ಒಟ್ಟಿಗೆ ಬೆಳ್ಳಿತೆರೆ ಮೇಲೆ ಯಾವಾಗ ಅಬ್ಬರಿಸ್ತಾರೋ ಅಂತ ಫ್ಯಾನ್ಸ್ ಕೂಡ ಕಾತುರರಾಗಿ ಕಾಯ್ತಿದ್ದಾರೆ. ಈ‌ ಮಧ್ಯೆ ಸುದೀಪ್ ನಿರ್ದೇಶನದ- ಶಿವಣ್ಣನ ಅಭಿನಯದ
ಧಮಾಕೇದಾರ್ ಸುದ್ದಿ ದೊಡ್ಮನೆ ಫ್ಯಾನ್ಸ್ ಹಾಗೂ ಶಾಂತಿನಿವಾಸದ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇಬ್ಬರ ಫ್ಯಾನ್ಸ್ ಹಬ್ಬ ಮಾಡಿ ಸಂಭ್ರಮಿಸುವಂತೆ ಮಾಡಿದೆ. ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳುವ ಗಳಿಗೆಯನ್ನ ಆರಡಿ ಕಟೌಟ್ ಫ್ಯಾನ್ಸ್ ಎದುರು ನೋಡುವಂತಾಗಿದೆ. ಆ ದಿನ. ಆ ಕ್ಷಣ ಆದಷ್ಟು ಬೇಗ ಬರಲಿ. ಬಿಗ್ ಸ್ಕ್ರೀನ್ ಕೂಡ ಸಂಭ್ರಮ ಪಡಲಿ ಅಲ್ಲವೇ..

ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಾಶ್ಮೀರದಲ್ಲಿ ಹೊಸಬರ ನೆನಪು ! ಹೃದಯಕೆ ಹೈದಯವೇ ಕಡು ವೈರಿ ಆಲ್ಬಂ ಗೀತೆ ಹೊರ ಬಂತು


ಸಿನಿಮಾ ರಂಗಕ್ಕೆ ಎಂಟ್ರಿಯಾಗುವ ಬಹುತೇಕ ಹೊಸ ಪ್ರತಿಭೆಗಳು ಕಿರುಚಿತ್ರವೋ ಅಥವಾ ಆಲ್ಬಂ ಸಾಂಗ್‌ ಮೂಲಕವೋ ಎಂಟ್ರಿಯಾಗುತ್ತಿರುವುದು ಹೊಸದೇನಲ್ಲ. ಆ ಸಾಲಿಗೆ ಇಲ್ಲೊಂದು ಹೊಸತರ ತಂಡ ಒಂದು ಆಲ್ಬಂ ಸಾಂಗ್‌ನೊಂದಿಗೆ ಸದ್ದು ಮಾಡುತ್ತಿದೆ. ಹೌದು, “ನಿನದೇ ನೆನಪು” ಶೀರ್ಷಿಕೆಯ ಆಲ್ಬಂ ಸಾಂಗ್‌ವೊಂದು ಈಗ ಎಲ್ಲೆಡೆ ಜೋರು ಸುದ್ದಿಯಾಗಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಇದರದ್ದೇ ಸುದ್ದಿ.


ಗೀತ ಸಾಹಿತಿ ಗೌಸ್‌ಪೀರ್‌ ಅವರು ಬರೆದ “ಹೃದಯಕ್ಕೆ ಹೃದಯವೇ ಕಡು ವೈರಿ” ಎಂದು ಶುರುವಾಗುವ ಗೀತೆ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿದೆ. ಈ ಹಾಡಿನ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್‌ನಲ್ಲಿ ನಡೆದಿದೆ. ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸಿದ್ದಾರೆ.

ಸರವಣ್ ಈಗಾಗಲೇ ಸಬ್ ವೇ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಆ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. “ಟಿಕ್ ಟಾಕ್” ಮೂಲಕ ಮನೆ ಮಾತಾಗಿರುವ ಪ್ರತಿಮಾ ಈಗಾಗಲೇ ಕೆಲವು ಆಲ್ಬಂಗಳಲ್ಲಿ ನಟಿಸಿದ್ದಾರೆ. ಈ ಆಲ್ಬಂ ನಿರ್ಮಾಣ ಮಾಡಿರೋದು ಆಂಜಿ ಬಾಬು. ಅವರಿಗೆ ಬೆಂಬಲವಾಗಿ ನಿಂತವರು ಫೈಯಿಂಗ್ ಕಿಂಗ್ ಮಂಜು. ಈ ಮೊದಲು ಮಯೂರ್ ಪಟೇಲ್ ಅಭಿನಯದ ರಾಜೀವ ಚಿತ್ರವನ್ನೂ ಮಂಜು ನಿರ್ದೇಶಿಸಿದ್ದಾರೆ.


ಈ ಹಾಡನ್ನು ಎಂ. ವೈ. ಕೃಷ್ಣ ನಿರ್ದೇಶಿಸಿದ್ದಾರೆ. ವಾಸುಕಿ ವೈಭವ್ ಹಾಡಿರುವ ಹಾಡಿಗೆ ರೋಹಿತ್ ಸೊವಾರ್ ಸಂಗೀತವಿದೆ. ಕಾರ್ತಿಕ್ ಛಾಯಾಗ್ರಹಣ ಮಾಡಿದ್ದಾರೆ. ಚಾಣಕ್ಯ ಫಿಲಂಸ್ ಮೂಲಕ ಈ ಅಲ್ಬಂ ನಿರ್ಮಾಣಗೊಂಡಿದೆ. ನರೇಂದ್ರ ಬಾಬು, ನಿರ್ಮಾಪಕ ಸಯ್ಯದ್ ಸಲಾಂ, ರಮೇಶ್ ಹೊಸಬರ ಈ ಹಾಡಿಗೆ ಶುಭ ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಅಂತೂ ಕ್ಯಾಬ್ ಚಾಲಕನ ಕನಸು ನನಸಾಯ್ತು! ಅಂಗೈಲಿ ಅಕ್ಷರ ಸಿನ್ಮಾ ಮೂಲಕ ಬಣ್ಣದ ಹೆಜ್ಜೆ…

ಸಿನಿಮಾನೆ ಹಾಗೆ. ಇಲ್ಲಿ ಕನಸು ಕಾಣೋ ಮಂದಿಯೇ ಹೆಚ್ಚು. ಅದರಲ್ಲೂ ಇಲ್ಲಿ ಕನಸು ಕಂಡವರಿಗೆಲ್ಲಾ ಅದು ನನಸಾಗುತ್ತೆ ಅಂತ ಹೇಳುವುದಕ್ಕೂ ಆಗೋದಿಲ್ಲ. ಎಲ್ಲೋ ಒಂದಷ್ಟು ಅದೃಷ್ಟವಂತರಿಗೆ ಮಾತ್ರ ಅಂಥದ್ದೊಂದು ಲಕ್‌ ಸಿಗುತ್ತೆ. ಈಗ ಅಂಥದ್ದೊಂದು ಲಕ್‌ಗೆ ಸಿದ್ದರಾಜು ಕಾಳೇನಹಳ್ಳಿ ಕಾರಣರಾಗಿದ್ದಾರೆ. ಹೌದು, ಸರಿ ಸುಮಾರು ಎರಡು ದಶಕಗಳಿಂದಲೂ ಕ್ಯಾಬ್ ಚಾಲಕರಾಗಿರುವ ಸಿದ್ದರಾಜು ಅವರಿಗೆ ತಮ್ಮ ಅನುಭವಗಳನ್ನೇ ಆಧರಿಸಿ ಚಿತ್ರ ನಿರ್ಮಾಣ ಮಾಡಬೇಕೆಂಬ ಹಂಬಲವಿತ್ತು. ಆದರೆ, ಹಣವಿರಲಿಲ್ಲ. ಕ್ಯಾವ್‌ನಲ್ಲಿ ಪಯಣಿಸುತ್ತಿದ್ದ, ಜ್ಞಾನೇಶ್ ಅವರ ಬಳಿ ಸಿದ್ದರಾಜು ಈ ವಿಷಯ ಹೇಳಿದಾಗ, ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸುವ ಮನಸ್ಸು ಮಾಡಿದ್ದಾರೆ ಜ್ಞಾನೇಶ್. ನಂತರ ಇಬ್ಬರು ಸೇರಿ ಕೆ.ಹೆಚ್.ಎಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ.

ತಮ್ಮ ಕನಸ್ಸನ್ನೇ ನನಸು ಮಾಡಿಕೊಳ್ಳಲು ಹೆಣಗಾಡುತ್ತಿರುವವರ ನಡುವೆ ಮತ್ತೊಬ್ಬನ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಜ್ಞಾನೇಶ್. ಒಬ್ಬ ಕ್ಯಾಬ್ ಡ್ರೈವರ್ ಅನ್ನು ಡೈರೆಕ್ಟರ್ ಮಾಡಲು ಹೋಗಿ ಪ್ಯಾಸೆಂಜರ್ ಒಬ್ಬರು ಪ್ರೊಡ್ಯೂಸರ್ ಆಗಿದ್ದಾರೆ. ಇನ್ನು, ಬಾಲ್ಯದಲ್ಲೇ ತಂದೆತಾಯಿ ಕಳೆದುಕೊಂಡ ಮಕ್ಕಳು‌ ವಿದ್ಯಾಭ್ಯಾಸ ಹಾಗೂ ತಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬ ಕಥಾವಸ್ತು ಚಿತ್ರದ ಹೈಲೈಟ್.‌ ಸದ್ಯ ಚಿತ್ರೀಕರಣ ಪೂರ್ಣಗೊಂಡು, ಬಿಡುಗಡೆಗೆ ರೆಡಿಯಾಗಿದೆ.


ಹುಲಿಯೂರುದುರ್ಗ, ಮಾಗಡಿ ತಾವರೆಕೆರೆ, ಬೆಂಗಳೂರು ನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿದ್ದರಾಜು ಕಾಳೇನಹಳ್ಳಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಗೇಶ್ ಉಜ್ಜನಿ ಸಹ ನಿರ್ದೇಶನವಿದೆ. ಮಲ್ಲಿಕಾರ್ಜುನ್ ಎಮ್ ಎನ್, ಸೋಮಣ್ಣ ಅವರ ಸಹಾಯಕ ನಿರ್ದೇಶನವಿದೆ. ಅಮ್ಮನಿಂದ ದೂರವಾದ ಒಂದು ಬಡ ವರ್ಗದ ಹುಡುಗನ ಶೈಕ್ಷಣಿಕ ಹಾದಿ, ಅಮ್ಮ ಮಗನ ನಡುವಿನ ಬಾಂಧವ್ಯ ಇರುವ ಹಾಗೂ ಸಮಾಜಕ್ಕೆ ಶಿಕ್ಶಣದ ಮಹತ್ವದ ಅರಿವು ಮೂಡಿಸುವ ಕುರಿತಾದ ಈ ಚಿತ್ರದಲ್ಲಿ ಪಕ್ಕಾ ಫ್ಯಾಮಿಲಿ, ಫ್ರೆಂಡ್‍ಷಿಪ್, ಸೆಂಟಿಮೆಂಟ್ ಹಾಗೂ ಕಾಮಿಡಿಯಂತಹ ಎಲ್ಲಾ ಮನರಂಜನಾತ್ಮಕ ಅಂಶಗಳಿವೆ.

ಈ ಚಿತ್ರಕ್ಕೆ ಎ.ಟಿ.ರವೀಶ್‌ ಅವರ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ನಾಗೇಶ್ ಉಜ್ಜನಿ, ಜ್ಞಾನೇಶ ಎಂ.ಬಿ, ಶೈಲಜಾ ಎಸ್.ರಾವ್ ಸಾಹಿತ್ಯವಿದೆ. ಸರಿಗಮಪ ವಿನ್ನರ್ ಸುನಿಲ್, ಮೆಹಬೂಬ್ ಸಾಬ್, ಕನ್ನಡ ಕೋಗಿಲೆ ತನುಷ್ ರಾಜ್ ಹಾಡಿದ್ದಾರೆ. ಮಲ್ಲ, ಕೋದಂಡರಾಮ ಚಿತ್ರದ ಸಂಜೀವ್ ರೆಡ್ಡಿ ಅವರ ಸಂಕಲನವಿದ್ದು, ರಮೇಶ್ ಹಾಗೂ ನರಸಿಂಹ ಅವರ ಛಾಯಾಗ್ರಹಣವಿದೆ. ಲಯನ್ ಗಂಗರಾಜು ಅವರ ಸಾಹಸ, ಸ್ಟಾರ್ ನಾಗಿ, ಸುರೇಶ್ ಅವರ ನೃತ್ಯ ನಿರ್ದೇಶನವಿದೆ.


ಈ ಚಿತ್ರದಲ್ಲಿ ಬಾಲನಟರಾಗಿ ತನುಷರಾಜ್, ಕಾನಿಷ್ಕ ರವಿ ದೇಸಾಯಿ, ಅಮೋಘ ಕೃಷ್ಣ, ಮಧುಸೂಧನ್, ಬೇಬಿ ಅಂಕಿತ ಜಯರಾಮ್, ಬೇಬಿಶ್ರೀ, ಜೀವನ್, ಚೇತನ್, ನವನೀತ್, ಬಾ ನಾ ರವಿ, ಚಂದ್ರಪ್ರಭಾ, ಗೋವಿಂದೇಗೌಡ, ವಿನೋದ್ ಆನಂದ್, ಮೋನಿಕ, ಶ್ರೀದೇವಿ ಮಂಜುನಾಥ, ರಾಜೇಶ್, ನವೀನ್ ರಾಜ್, ಗಂಗರಾಜು ನಾಗಶ್ರೀ, ಗುರು, ರಾಜು, ಅಂಧರಾದ ಬಸವರಾಜ್, ಪ್ರತಾಪ್ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಕರ್ನಾಟಕ ಜನಸೇವಾ ಟ್ರಸ್ಟಿನ ಪ್ರಶಾಂತ್ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. ಗೋ ಸಂರಕ್ಷಕರಾದ ಮಹೇಂದ್ರ ಮುನ್ನೋತ್ ಶಿಕ್ಷಣ ಸಚಿವರಾಗಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ರಾಜ್‌ ಕುಮಾರ್‌ ಅಂದ್ರೆ ಪ್ರಜ್ವಲಿಸುವ ನಕ್ಷತ್ರ ಅಂದ್ರು ಸಿಎಂ ಬಸವರಾಜ್‌ ಬೊಮ್ಮಾಯಿ !

ಆಕಾಶದಲ್ಲಿ ಹಲವಾರು ನಕ್ಷತ್ರಗಳಿರಬಹುದು, ಆದರೆ ಒಂದೇ ಒಂದು ನಕ್ಷತ್ರ ಹೆಚ್ಚಾಗಿ ಮಿಂಚುತ್ತಿರುತ್ತದೆ, ಆ ನಕ್ಷತ್ರವೇ ರಾಜ್‌ಕುಮಾರ್..

-ರಾಜ್‌ ಕುಮಾರ್‌ ಅವರನ್ನು ಹೀಗೆ ವರ್ಣನೆ ಮಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ಡಾ. ರಾಜ್‌ ಕುಮಾರ್‌ ಅಕಾಡೆಮಿಯಿಂದ ರೂಪಿಸಿದ ಡಾ.ರಾಜ್‍ಕುಮಾರ್ ಲರ್ನಿಂಗ್ ಆಪ್ ಬಿಡುಗಡೆ ಮಾಡಿ ಮಾತನಾಡಿದರು.

ಡಾ.ರಾಜ್‍ಕುಮಾರ್ ಅಂದರೆ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ.ರಾಜ್‍ಕುಮಾರ್ ಅವರೊಬ್ಬರೆ ಮಾತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.21 ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ.ರಾಜ್‍ಕುಮಾರ್ ಅವರ ಆಪ್ ದೊಡ್ಡ ಕೊಡುಗೆ ನೀಡಿದೆ. ಮಕ್ಕಳಿಗೆ ತರ್ಕ ಬದ್ಧವಾಗಿ ಚಿಂತನೆ ಮಾಡಲು ಪ್ರೇರೇಪಿಸಬೇಕು. ಆಗ ಸಹಜವಾಗಿ ಅವರ ಸ್ಮೃತಿ ಪಟಲದಲ್ಲಿ ಉಳಿಯುತ್ತದೆ ಎಂದರು.

ಆಪ್ ಗಳ ಮೂಲಕ ಜಗತ್ತನ್ನು ತಲುಪಲು ಸಾಧ್ಯ. ನೂತನ ಶಿಕ್ಷಣ ನೀತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದು, ಈ ಆಪ್ ಶಿಕ್ಷಣ ನೀತಿಗೆ ಉಪಯುಕ್ತವಾಗಲಿದೆ. ಭಾರತದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ತಿಳಿಸಿದರು.ಡಾ.ರಾಜ್‍ಕುಮಾರ್ ಅಂದರೆ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ.ರಾಜ್‍ಕುಮಾರ್. ಅವರ ಸರಳತೆ, ನಡೆ, ನುಡಿ , ಮೌಲ್ಯಗಳನ್ನು ವಿಶೇಷವಾಗಿ ಅಧಿಕಾರಿಗಳು, ಜನಪ್ರಿಯ ವ್ಯಕ್ತಿಗಳು ಕಲಿಯಬೇಕು ಎಂದರು. ಈಗಷ್ಟೇ ಹುಟ್ಟಿರುವ ಮಗುವಿನ ಮುಗ್ಧತೆ ಅವರಲ್ಲಿತ್ತು ಎಂದು ಹೇಳಿದರು.

ಮಗುವಿನಲ್ಲಿರುವ ಕುತೂಹಲಕ್ಕೆ ಜ್ಞಾನ, ಅರ್ಥವನ್ನು ಕೊಡಬೇಕು. ಡಾ.ರಾಜ್‍ಕುಮಾರ್ ನಿರಂತರ ವಿದ್ಯಾರ್ಥಿಯಾಗಿದ್ದರೂ, ಮುಗ್ಧತೆ ಸದಾಕಾಲ ಇರುತ್ತಿತ್ತು ಎಂದರು. ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ವಿಜಯ್‌ ರಾಘವೇಂದ್ರ ಅವರೀಗ ಹೈ ಪ್ರೊಫೈಲ್‌ ಸೈಕಾಲಜಿಸ್ಟ್‌ – ಒಂದಷ್ಟು ಗ್ಯಾಪ್‌ ಬಳಿಕ ಅಯನ ಗಂಗಾಧರ್‌ ಕಮ್‌ ಬ್ಯಾಕ್‌ !

ಯುವ ನಿರ್ದೇಶಕ ಗಂಗಾಧರ್‌ ಸಾಲಿಮಠ್‌, ಒಂದಷ್ಟು ಗ್ಯಾಪ್‌ ಬಳಿಕ ಸಿನಿ ದುನಿಯಾಕ್ಕೆ ಮತ್ತೆ ಕಮ್‌ ಬ್ಯಾಕ್‌ ಮಾಡುತ್ತಿದ್ದಾರೆ. ಈ ಬಾರಿ ನಟ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ ಕಾಂಬಿನೇಷನ್‌ ಮೂಲಕ ತಮ್ಮ ನಿರ್ದೇಶನದ ಕೈ ಚಳಕ ತೋರಿಸಲು ಹೊರಟಿದ್ದಾರೆ. ಕನ್ನಡದಲ್ಲಿಯೇ ಕೊಂಚ ಹೊಸತೆನಿಸುವ ಟೆಕ್ನೋ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಗಂಗಾಧರ್‌ ಸಾಲಿಮಠ್‌, ಇದರಲ್ಲಿ ನಟ ವಿಜಯ್‌ರಾಘವೇಂದ್ರ ಅವರನ್ನು ಹೈ ಪ್ರೊಫೈಲ್ ಸೈಕಾಲಜಿಸ್ಟ್‌ ಆಗಿ ತೆರೆ ಮೇಲೆ ತೋರಿಸುವ ತವಕದಲ್ಲಿದ್ದಾರೆ. ಸದ್ಯಕ್ಕೆ ಈ ಚಿತ್ರಕ್ಕಿನ್ನು ಟೈಟಲ್‌ ಫೈನಲ್‌ ಆಗಿಲ್ಲ. ಹಾಗೆಯೇ ತಂತ್ರಜ್ಜರ ಜತೆಗೆ ಕಲಾವಿದರ ಆಯ್ಕೆ ಕೂಡ ಬಾಕಿ ಇದೆ. ಮೊದಲ ಹಂತದಲ್ಲಿ ಚಿತ್ರದ ನಾಯಕ ನಟ ವಿಜಯ್‌ ರಾಘವೇಂದ್ರ ಅವರ ಕಾಲ್‌ ಶೀಟ್‌ ಫೈನಲ್‌ ಆಗಿದೆ.‌

ಉಳಿದಂತೆ ಅಕ್ಟೋಬರ್‌ ಮೊದಲ ವಾರದೊಳಗೆ ಎಲ್ಲವನ್ನು ಫೈನಲ್‌ ಮಾಡಿಕೊಂಡು ಶೂಟಿಂಗ್‌ ಹೊರಡುವ ಫ್ಲಾನ್‌ನಲ್ಲಿದ್ದಾರೆ ನಿರ್ದೇಶಕ ಗಂಗಾಧರ್‌ ಸಾಲಿಮಠ್.‌ ಇನ್ನು ಈ ಗಂಗಾಧರ್‌ ಸಾಲಿಮಠ್‌ ಯಾರು ಎನ್ನುವ ಪ್ರಶ್ನೆಗೆ ಉತ್ತರ ʼಅಯನʼ ಚಿತ್ರ. ವೃತ್ತಿಯಲ್ಲಿ ಅವರು ಸಾಫ್ಟ್‌ ವೇರ್‌ ಇಂಜಿನಿಯರ್‌. ಸಿನಿಮಾ ಮೇಲಿನ ವ್ಯಾಮೋಹಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಗೆಳೆಯರ ಜತೆಗೆ ಸೇರಿಕೊಂಡು ʼಅಯನʼ ಹೆಸರಿನ ಚಿತ್ರವೊಂದನ್ನು ತೆರೆಗೆ ತಂದಿದ್ದರು. ಇದರ ನಿರ್ದೇಶಕರು ಗಂಗಾಧರ್‌ ಸಾಲಿಮಠ್‌.

ಡೆಬ್ಯೂ ಸಿನಿಮಾ. ಅಲ್ಲೊಂದು ಕುತೂಹಲಕಾರಿ ಕಥೆ ಇತ್ತು. ನಿರೂಪಣೆ ಕೂಡ ಚೆಂದವಾಗಿತ್ತು. ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತು. ಆದರೆ ಆ ಹೊತ್ತಿಗಿದ್ದ ಸ್ಟಾರ್‌ ಸಿನಿಮಾಗಳ ಅಬ್ಬರದಲ್ಲಿ ʼಅಯನʼದಂತಹ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರನ್ನು ತಲುಪು ವುದೇ ದುಸ್ತರ ಆಯಿತು. ಆದರೆ ಆಗ ಬಂದ ಹೊಸಬರ ಸಿನಿಮಾಗಳಲ್ಲಿ ʼಅಯನʼ ಒಂದಷ್ಟು ಸದ್ದು ಮಾಡಿದ್ದು ಹೌದು. ಆ ವರ್ಷ ಚೊಚ್ಚಲ ನಿರ್ದೇಶಕರ ಸಿನಿಮಾ ವಿಭಾಗದಲ್ಲಿ ಇದಕ್ಕೆ ರಾಜ್ಯ ಪ್ರಶಸ್ತಿಯೂ ಬಂತು. ಅಲ್ಲಿಂ ದ ಒಂದಷ್ಟು ಗ್ಯಾಪ್‌ ಮೂಲಕ ಗಂಗಾಧರ್‌ ಸಾಲಿಮಠ್‌ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಮತ್ತೆ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆಯೊಂದಕ್ಕೆ ಆಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ. ಸಮಕಾಲೀನ ತಂತ್ರಜ್ಣಾನಕ್ಕೆ ಪೂಕರವಾದ ಸಬ್ಜೆಕ್ಟ್ ವೊಂದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ಹೊರಟಿರುವುದು ಈಗ ವಿಶೇಷ.

ʼ ಈಗಿನ ಪ್ರೇಕ್ಷಕರಿಗೆ ತುಂಬಾ ಅಪ್ಡೇಟ್‌ ಆಗಿರುವಂತಹ ಕಥೆಯನ್ನೇ ಹೇಳ್ಬೇಕು, ಆಗ ಮಾತ್ರ ಆವರಿಗಿದು ಹೊಸತೆನಿಸುತ್ತದೆ. ಅದೇ ದೃಷ್ಟಿ ಯಲ್ಲಿ ನಾನೀಗ ಟೆಕ್ನೋ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವರ್ಚುವಲ್‌ ನಲ್ಲಿನ ಒಂದು ಗೇಮ್‌ಗೆ ಅಡಿಕ್ಟ್‌ ಆದ ಮಕ್ಕಳ ಮನಸಲ್ಲಿ ಅದು ಹೇಗೆಲ್ಲ ಪರಿಣಾಮ ಬೀರುತ್ತದೆ, ಅದರಿಂದ ಹೊರ ಬರಬೇಕಾದರೆ ಎಷ್ಟೇಲ್ಲ ಕೌನ್ಸಿಲಿಂಗ್‌ ಬೇಕಾಗುತ್ತದೆ ಎನ್ನುವ ಎಲ್ಲರಿಗೂ ಗೊತ್ತಿರುವಂತಹ ಸಂಗತಿಗಳನ್ನೇ ತೆರೆ ಮೇಲೆ ತೋರಿಸಲು ಹೊರಟಿದ್ದೇನೆ. ಅದೇ ಸಿನಿಮಾದ ವಿಶೇಷ ಎನ್ನುತ್ತಾರೆ ನಿರ್ದೇಶಕ ಗಂಗಾಧರ್‌ ಸಾಲಿಮಠ್.

ಗಂಗಾಧರ್‌ ಸಾಲಿಮಠ್‌ ಈಗ ಆಕ್ಷನ್‌ ಕಟ್‌ ಹೇಳಲು ಹೊರಟಿರುವ ಕಥೆ ಐದು ಪ್ರಮುಖ ಪಾತ್ರಗಳಿವೆಯಂತೆ. ಅದರಲ್ಲಿ ಚಿತ್ರದ ನಾಯಕನ ಪಾತ್ರ ವೂ ಒಂದು. ಅದು ಒಬ್ಬ ಹೈ ಪ್ರೊಫೈಲ್‌ ಸೈಕಾಲಜಿಸ್ಟ್.‌ ಆ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ ನಟ ಚಿನ್ನಾರಿ ಮುತ್ತಾ ವಿಜಯ್‌ ರಾಘವೇಂದ್ರ. ಉಳಿದ ನಾಲ್ಕು ಪಾತ್ರಗಳಲ್ಲಿ ಒಬ್ಬ ಬಾಲಕನ ಪಾತ್ರಕ್ಕೆ ಅಷ್ಟೇ ಆದ್ಯತೆ ಇದೆ. ಆ ಪಾತ್ರಕ್ಕೆ ತಕ್ಕಂತೆ ಒಬ್ಬ ಚೈಲ್ಡ್‌ ಆರ್ಟಿಸ್ಟ್‌ ಹುಡುಕಾಟ ನಡೆದಿದೆ. ಅದರಾಚೆ ಮೂರು ಸ್ತ್ರೀ ಪಾತ್ರಗಳಿದ್ದು, ಅದಕ್ಕೆ ಹುಡುಕಾಟ ನಡೆಸಿದ್ದಾ ರಂತೆ ನಿರ್ದೇಶಕ ಗಂಗಾಧರ್‌ ಸಾಲಿಮಠ್.‌ ಇನ್ನು ಈ ಚಿತ್ರಕ್ಕೆ ಮುಂಬೈ ನಲ್ಲಿ ನೆಲೆಸಿರುವ ಧಾರವಾಡ ಮೂಲದ ಆನಂದ್‌ ಮುಗುದ್‌ ಬಂಡವಾ ಳ ಹೂಡುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಅವರೇ ಕಥೆ ಬರೆದಿದ್ದು. ಅದಕ್ಕೆ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಗಂಗಾಧರ್‌ ಸಾಲಿಮಠ್. ಬಸವರಾಜ್‌ ಇದರ ಕಾರ್ಯಕಾರಿ ನಿರ್ಮಾಪಕ.

Categories
ಸಿನಿ ಸುದ್ದಿ

ಕರುನಾಡ ಚಕ್ರವರ್ತಿಗೆ ಅಭಿನಯ ಚಕ್ರವರ್ತಿ ಫಸ್ಟ್‌ ಕ್ಲಾಪ್;‌ ಶಿವಣ್ಣ ಹೊಸ ಚಿತ್ರ ಶುರು…

ಒಬ್ಬರು ಕರುನಾಡ ಚಕ್ರವರ್ತಿ ಇನ್ನೊಬ್ಬರು ಅಭಿನಯ ಚಕ್ರವರ್ತಿ. ಗಂಧದಗುಡಿಯ ಈ ಇಬ್ಬರು ಚಕ್ರವರ್ತಿಗಳು ಮಂಗಳವಾರ ಬೆಳಗ್ಗೆ ೮ ಗಂಟೆ ಸುಮಾರಿಗೆ ಐಷರಾಮಿ ಹೋಟೆಲ್‌ನಲ್ಲಿ ಕ್ಯಾಮೆರಾಗೆ ಸೆರೆ ಸಿಕ್ಕರು. ಇಬ್ಬರು ಚಕ್ರವರ್ತಿಗಳನ್ನು ಒಂದೇ ಫ್ರೇಮ್‌ನಲ್ಲಿ ನೋಡಿ ಅವರಿಬ್ಬರ ಫ್ಯಾನ್ಸ್ ಮಾತ್ರವಲ್ಲ ಕ್ಯಾಮೆರಾ ಕೂಡ ಖುಷಿಪಡ್ತು. ಈ ಖುಷಿ ಹಾಗೂ ಸಂಭ್ರಮಕ್ಕೆ ಕಾರಣವಾಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ `ನೀ ಸಿಗೋವರೆಗೂ’ ಸಿನಿಮಾ.

ಸೆಂಚುರಿಸ್ಟಾರ್ ಅಭಿನಯದ ೧೨೪ನೇ ಚಿತ್ರವಾದ `ನೀ ಸಿಗೋವರೆಗೂ’ ಸಿನಿಮಾ ಮುಹೂರ್ತ ನೆರವೇರಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಫಸ್ಟ್ ಕ್ಲ್ಯಾಪ್ ಮಾಡಿ ಶಿವಣ್ಣನ ನಯಾ ಚಿತ್ರಕ್ಕೆ ಸುದೀಪ್ ಶುಭ ಕೋರಿದರು 124 ಸಿನಿಮಾ ಮಾಡೋದು ತಮಾಷೆಯ ಮಾತಲ್ಲ ಇಂಡಸ್ಟ್ರಿಗೆ ಬಂದು 35 ವರ್ಷದಲ್ಲಿ 124 ಸಿನಿಮಾ ಮಾಡಿ ಮುನ್ನುಗುತ್ತಿದ್ದಾರೆ ಅಂದರೆ, ಸಿನಿಮಾ ಮೇಲೆ ಅವರಿಗಿರುವ ಪ್ರೀತಿ-ಭಕ್ತಿ ಹಾಗೂ ಶ್ರದ್ದೆಯನ್ನು ತೋರಿಸುತ್ತೆ ಎಂದರು. ತಮ್ಮ ಕರಿಯರ್ ಆರಂಭದ ದಿನಗಳನ್ನು ಮೆಲುಕು ಹಾಕಿದ ಕಿಚ್ಚ, ನನ್ನ ಬಹುತೇಕ ಸಿನಿಮಾಗಳಿಗೆ ಶಿವಣ್ಣ ಫಸ್ಟ್ ಕ್ಲಾಪ್ ಮಾಡಿ ತುಂಬು ಹೃದಯದಿಂದ ಹಾರೈಸಿದ್ದಾರೆ ಹೀಗಾಗಿ ನನ್ನ ಸಿನಿ ಜರ್ನಿಯಲ್ಲಿ ಕರುನಾಡ ಚಕ್ರವರ್ತಿಯ ಪಾತ್ರ ಬಹಳಷ್ಟಿದೆ ಎಂದರು. ಶಿವಣ್ಣನಿಗೋಸ್ಕರ ಡೈರೆಕ್ಟರ್ಸ್ ಈಗಲೂ ಲವ್‌ಸ್ಟೋರಿ ಕಥೆಗಳನ್ನು ರಚಿಸುತ್ತಾರೆ ಆದರೆ ನಮಗ್ಯಾಕೆ ಲವ್‌ಸ್ಟೋರಿ ಕಾನ್ಸೆಪ್ಟ್ ಗಳನ್ನು ನಿರ್ದೇಶಕರು ಮಾಡ್ತಿಲ್ಲವೋ ಏನೋ? ನನಗೆ ಈ ವಿಚಾರದಲ್ಲಿ ಬೇಸರ ಇದೆ ಅಂತ ಮೀಸೆ ಮರೆಯಲ್ಲಿ ನಗುತ್ತಾ ಕಿಚ್ಚ ಹಾಸ್ಯ ಚಟಾಕಿ ಹಾರಿಸಿದರು.

ಸ್ಯಾಂಡಲ್‌ವುಡ್‌ನ ಚಿರ ಯುವಕ ಶಿವಣ್ಣ ೫೯ರಲ್ಲೂ ಯಂಗ್ ಅಂಡ್ ಎನರ್ಜಿಟಿಕ್. ಇವತ್ತಿನ ಹೀರೋಗಳಿಗೆ ಸೆಡ್ಡು ಹೊಡೆಯುವ ಹ್ಯಾಟ್ರಿಕ್ ಹೀರೋ ಮತ್ತೆ ಲವ್ವರ್ ಬಾಯ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. 124ನೇ ಚಿತ್ರ `ನೀ ಸಿಗೋವರೆಗೂ’ ಮೂವೀಯಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಮೆರೆಯಲಿದ್ದು ಟಿಟೌನ್ ಬ್ಯೂಟಿ ಮೆಹ್ರೀನ್ ಫಿರ್ಜಾದಾ ಸೆಂಚುರಿ ಸ್ಟಾರ್‌ಗೆ ಜೋಡಿಯಾಗ್ತಿದ್ದಾರೆ. ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡ್ಬೇಕು, ಕನ್ನಡದಲ್ಲೊಂದು ಸಿನಿಮಾ ಮಾಡ್ಬೇಕು ಅಂತ ಕನಸು ಕಂಡಿದ್ದ ಮೆಹ್ರೀನ್‌ಗೆ, ದೊಡ್ಮನೆ ಸೂಪರ್‌ಸ್ಟಾರ್ ಜೊತೆ ಅಭಿನಯಿಸೋ ಚಾನ್ಸ್ ಸಿಕ್ಕಿದೆ. ಹೀಗಾಗಿ ಮೆಹ್ರೀನ್ ಫುಲ್ ಎಕ್ಸೈಟ್ ಆಗಿದ್ದಾರೆ. ಡೆಬ್ಯೂ ಚಿತ್ರದ ಬಗ್ಗೆ ನೂರೆಂಟು ಕನಸು ಕಂಡಿದ್ದಾರೆ.

ಕರುನಾಡ ಚಕ್ರವರ್ತಿಗೆ ಇದೇ ಮೊದಲ ಭಾರಿಗೆ ರವಿ ಧುಲಿಪುಡಿ ಆಕ್ಷನ್ ಕಟ್ ಹೇಳ್ತಿದ್ದಾರೆ. ರವಿ ಧುಲಿಪುಡಿ ತೆಲುಗು ಮೂಲದವರಾಗಿದ್ದು ಶಿವಣ್ಣನನ್ನ 124ನೇ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ತೋರ‍್ಸೋಕೆ ಮುಂದಾಗಿದ್ದಾರೆ. ನವೀರಾದ ಪ್ರೇಮಕಥೆ ಇದಾಗಿದ್ದು ಸ್ವತಃ ಸೆಂಚುರಿಸ್ಟಾರ್ ಕೂಡ ಕೊಂಚ ಎಕ್ಸೈಟ್ ಆಗಿದ್ದಾರೆ. ಆನಂದ್ ಸಿನಿಮಾ ನೋಡಿ ಫ್ಯಾನ್ ಆಗಿರುವ ನಾರಾಲ ಶ್ರೀನಿವಾಸ್ ರೆಡ್ಡಿ ಅವರು ಇದೀಗ `ನೀ ಸಿಗೋವರೆಗೂ’ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದಾರೆ. ಇವರ ಜೊತೆಗೆ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ, ಕುಡುಪುಡಿ ವಿಜಯ್ ಕುಮಾರ್ ಕೈ ಜೋಡಿಸ್ತಿದ್ದಾರೆ. ಅದ್ದೂರಿಯಾಗಿಯೇ ಸಿನಿಮಾ ಮಾಡ್ಬೇಕು ಎನ್ನುವ ಕನಸೊತ್ತಿದ್ದಾರೆ. ಶಿವಣ್ಣ-ಮೆಹ್ರೀನ್ ಜೊತೆಗೆ ನಾಸರ್, ಸಂಪತ್, ಮಂಗ್ಲಿ, ಸಾಧುಕೋಕಿಲ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮಹೇಂದ್ರ ಸಿಂಹ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದ್ದು, ಚರಣ್ ರಾಜ್ ಮ್ಯೂಸಿಕ್ ಬಾರಿಸಲಿದ್ದಾರೆ.

ಸಂಡೇ ಹೊರತುಪಡಿಸಿ ವರ್ಷದ ೩೬೫ ದಿನವೂ ಬ್ಯುಸಿ ಇರಬೇಕು ಇದು ಹ್ಯಾಟ್ರಿಕ್ ಹೀರೋ ಶಿವಣ್ಣನ ಪಾಲಸಿ. ಅದರಂತೇ ಸದಾ ಸಿನಿಮಾ ಕೆಲಸದಲ್ಲೇ ತೊಡಗಿಸಿಕೊಳ್ತಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ತಾರೆ. ಸದ್ಯ, ಬಹುನಿರೀಕ್ಷಿತ ಭಜರಂಗಿ-೨ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಭೈರಾಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಮಧ್ಯೆ ೧೨೪ನೇ ಚಿತ್ರ ಸೆಟ್ಟೇರಿದೆ. ೧೨೫, ೧೨೬, ೧೨೭, ೧೨೮, ೧೨೯ನೇ ಸಿನಿಮಾಗಳು ಶಿವಣ್ಣನ ಅಕೌಂಟ್‌ನಲ್ಲಿ ನಾನು ಫಸ್ಟ್.. ನಾನು ಫಸ್ಟ್.. ಅಂತ ಕುಣಿಯುತ್ತಿವೆ. ಯಾವಾಗ ಯಾವ ಸಿನಿಮಾ ಕೈಗೆತ್ತಿಕೊಳ್ತಾರೋ ಕಾದುನೋಡಬೇಕಿದೆ. ಒಟ್ನಲ್ಲಿ ಸೆಂಚುರಿಸ್ಟಾರ್ ಮೋಸ್ಟ್ ಬ್ಯುಸಿಯೆಸ್ಟ್ ಆಕ್ಟರ್ ಅನ್ನೋದಂತೂ ದಿಟ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

`ಮಾರ್ಟಿನ್’ ನಾಯಕಿ ಬಗ್ಗೆ ಆಕ್ಷನ್‌ಪ್ರಿನ್ಸ್ ಹೇಳಿದ್ದೇನು ? ಬಹದ್ದೂರ್ ಬೆಂಕಿ ಚೆಂಡಿಗೆ ಇಂಥಾ ನಾಯಕಿ ಬೇಕಂತೆ!

ನಾಯಕಿ ಆಯ್ಕೆ ಬಗ್ಗೆ ನಾನು ಟೀಮ್ ಜೊತೆ ಚರ್ಚೆ ಮಾಡಲ್ಲ. ನಾಯಕಿಯಾಗಿ ಯಾರೇ ಇದ್ದರೂ ಅಭ್ಯಂತರ ಇಲ್ಲ. ಒಂದು ಕಂಡೀಷನ್ ಅಂದರೆ, ನಾನು ಹೇಳುವ ಡೈಲಾಗ್ ಎದುರು ನಿಲ್ಲೋ ನನ್ನ ಕೋಸ್ಟಾರ್ ನಾಯಕಿಗೆ ಅರ್ಥ ಆಗ್ಬೇಕು ಅಷ್ಟೇ. ಧ್ರುವ ಅವರ ಈ ಮಾತನ್ನು ಎರಡು ರೀತಿ ಅರ್ಥೈಸಿಕೊಳ್ಳಬಹುದು. ಕನ್ನಡತಿ ನಾಯಕಿಯಾಗಬೇಕು ಎನ್ನುವುದು ಮೊದಲ ಅರ್ಥವಾದರೆ, ಕನ್ನಡ ಭಾಷೆ ಬರುವ ಯಾವುದೇ ನಾಯಕಿ ತನಗೆ ಕೋಸ್ಟಾರ್ ಆಗಬಹುದು ಎನ್ನುವುದು ಮತ್ತೊಂದು ಅರ್ಥ ನೀಡುತ್ತೆ

ಮಾಯಲೋಕದಲ್ಲಿ ಮೆರೆಯುತ್ತಿರುವ ಹಾಗೂ ಸೋಷಿಯಲ್ ಲೋಕವನ್ನು ಕಳೆದ ಎರಡು ದಿನಗಳಿಂದ ಆಳುತ್ತಿರುವ ಏಕೈಕ ಹೆಸರು ಮಾರ್ಟಿನ್'. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈವೋಲ್ಟೇಜ್ ಸಿನಿಮಾ ಇದು. ಬಹದ್ದೂರ್ ಗಂಡು ನಟನೆಯ ಐದನೇ ಚಿತ್ರ. ಅದ್ಧೂರಿ ಕಾಂಬೋ ಮತ್ತೆ ಒಂದಾಗಿರುವ ಮಹಾ ಮೂವೀ. ಒಂಭತ್ತು ವರ್ಷಗಳ ನಂತರ ಮತ್ತೆ ಜೊತೆಯಾಗಿ ಸೆನ್ಸೇಷನ್ ಸೃಷ್ಟಿಸಿರುವ ಜೋಡಿಯಮಾರ್ಟಿನ್’ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಫಸ್ಟ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಇದರ ಬೆನ್ನಲ್ಲೇ ಮಾರ್ಟಿನ್ ಹೊಸ ದಾಖಲೆ ಬರೆದಿದೆ. ಸೋಷಿಯಲ್ ಲೋಕದಲ್ಲಿ ಫಸ್ಟ್ ಲುಕ್ ಹಾಗೂ ಟೀಸರ್ ಧೂಳೆಬ್ಬಿಸುತ್ತಿದೆ. ಕೇವಲ ೨೪ ಗಂಟೆಯಲ್ಲಿ ೮೦ ಲಕ್ಷ ಮಂದಿ ಟೀಸರ್‌ನ ಕಣ್ತುಂಬಿಕೊಂಡಿದ್ದಾರೆ. ಇದೆಲ್ಲದರ ನಡುವೆ `ಮಾರ್ಟಿನ್’ ನಾಯಕಿ ಯಾರಾಗ್ತಾರೆ ಎನ್ನುವ ಕೂತೂಹಲ ಫಸ್ಟ್‌ ಲುಕ್‌ ಹಾಗೂ ಟೀಸರ್‌ನ ಬೀಟ್ ಮಾಡಿ ಮುನ್ನುಗುತ್ತಿದೆ. ಇದೇ ಹೊತ್ತಲ್ಲೇ ಎಂಥಾ ನಾಯಕಿ ಬೇಕು ಅನ್ನೋದನ್ನ ಆಕ್ಷನ್‌ಪ್ರಿನ್ಸ್ ಖಾಸಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಮಾರ್ಟಿನ್‌ ನಾಯಕಿ ಯಾರು?

ಸ್ಟಾರ್ ಸಿನಿಮಾಗಳು ಸೆಟ್ಟೇರುವ ಹೊತ್ತಲ್ಲಿ ಫ್ಯಾನ್ಸ್ ಗೆ ಹಾಗೂ ಗಾಂಧಿನಗರದ ಮಂದಿಗೆ ಟೈಟಲ್ ಮೇಲೆ ಎಷ್ಟು ಕೂತೂಹಲ ಇರುತ್ತೋ ಅಷ್ಟೇ ಕ್ಯೂರಿಯಾಸಿಟಿ ಚಿತ್ರದ ನಾಯಕಿ ಮೇಲೆಯೂ ಇರುತ್ತೆ. ಚಿತ್ರತಂಡ ಟೈಟಲ್ ಅನೌನ್ಸ್ ಮಾಡಿ, ಫಸ್ಟ್ ಲುಕ್-ಮೋಷನ್ ಪೋಸ್ಟರ್-ಟೀಸರ್ ಅಂತ ಎಲ್ಲಾ ರಿವೀಲ್ ಮಾಡಿದ್ರೂ ಕೂಡ ಹೀರೋಯಿನ್ ಮೇಲಿರುವ ಕೂತೂಹಲದ ವ್ಯಾಮೋಹ ಮಾತ್ರ ಕಮ್ಮಿಯಾಗೋದಿಲ್ಲ. ಸದ್ಯಕ್ಕೆ, `ಮಾರ್ಟಿನ್’ ಹೀರೋಯಿನ್ ಯಾರು ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಹದಿನೈದು ದಿನ ಟೈಮ್ ಬೇಕು ಯಾಕಂದ್ರೆ ಇನ್ನೂ ಫೈನಲೈಸ್ ಮಾಡಿಲ್ಲ ಅಂತ ನಿರ್ದೇಶಕ ಎ.ಪಿ ಅರ್ಜುನ್ ಹೇಳಿದ್ದಾರೆ. ಇತ್ತ ಧ್ರುವ ಸರ್ಜಾ ತನ್ನ ಪಕ್ಕದಲ್ಲಿ ನಿಲ್ಲುವ ನಾಯಕನಟಿ ಹೇಗಿರಬೇಕು ಎನ್ನುವುದನ್ನು ಮುಕ್ತವಾಗಿ ಹೇಳಿದ್ದಾರೆ.

ನನ್ನ ಡೈಲಾಗ್‌ ಅವರಿಗೆ ಅರ್ಥ ಆಗ್ಬೇಕಷ್ಟೇ!

ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ಜೊತೆ ಇಲ್ಲಿಯವರೆಗೆ ಒಟ್ಟು ಐದು ಜನ ನಾಯಕಿಯರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಬಹದ್ದೂರ್ ಗಂಡಿಗೆ ಜೊತೆಯಾದ ಮೊದಲ ನಾಯಕಿ ರಾಧಿಕಾ ಪಂಡಿತ್. ಅದ್ದೂರಿ ಚಿತ್ರದಲ್ಲಿ ಧ್ರುವ-ರಾಧಿಕಾ ಕೆಮಿಸ್ಟ್ರಿ ವರ್ಕ್ ಆಗಿದ್ದೇ ಬಂತು ಬಹದ್ದೂರ್ ಚಿತ್ರಕ್ಕೆ ಮತ್ತೆ ಜೋಡಿ ಮಾಡಿದರು. ಇವರಿಬ್ಬರು ಜೊತೆಯಾಗಿ ಮೆರವಣಿಗೆ ಹೊರಟ ಎರಡು ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆದ್ವು. ಮುಂದೆ ಡಿಂಪಲ್‌ಕ್ವೀನ್-ಹರಿಪ್ರಿಯಾ-ವೈಶಾಲಿ ದೀಪಕ್ ಸೇರಿದಂತೆ ಮೂವರು ಸುಂದರಿಯರ ಜೊತೆ ಡ್ಯುಯೆಟ್ ಹಾಡಿ ಭರ್ಜರಿ' ಚಿತ್ರದಲ್ಲಿ ಹ್ಯಾಟ್ರಿಕ್ ಬಾರಿಸಿದರು. ಕಿರಿಕ್ ಕ್ವೀನ್ ಜೊತೆಯಾಗಿಪೊಗರು’ ತೋರಿಸಿದರು. ಇದೀಗ ಮಾರ್ಟಿನ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾದಲ್ಲಿ ಹವಾ ಎಬ್ಬಿಸೋಕೆ ಧ್ರುವ ಹೊರಟು ನಿಂತಿದ್ದಾರೆ.ನಾಯಕಿಯ ಆಯ್ಕೆ ಬಗ್ಗೆ ನಾನು ಟೀಮ್ ಜೊತೆ ಯಾವತ್ತೂ ಚರ್ಚೆ ಮಾಡುವುದಿಲ್ಲ. ನಾಯಕಿಯಾಗಿ ಅವರು ಯಾರನ್ನೂ ಕೊಟ್ಟರೂ ನನಗೆ ಅಭ್ಯಂತರ ಇಲ್ಲ ನಾನು ಆಕ್ಟ್ ಮಾಡ್ತೀನಿ. ನಂದು ಒಂದೇ ಒಂದು ಕಂಡೀಷನ್ ಅಂದರೆ ನಾನು ಹೇಳುವ ಮಾತು ಹಾಗೂ ಡೈಲಾಗ್ ಎದುರುಗಡೆ ನಿಲ್ಲುವ ನನ್ನ ಕೋಸ್ಟಾರ್ ನಾಯಕಿಗೆ ಅರ್ಥ ಆಗ್ಬೇಕು ಅಷ್ಟೇ.

ಪರಭಾಷೆ ಸುಂದರಿಯರು ಬರಬಹುದೇನೋ?

ಧ್ರುವ ಸರ್ಜಾರ ಈ ಮಾತನ್ನು ಎರಡು ರೀತಿಯಾಗಿ ಅರ್ಥೈಸಿಕೊಳ್ಳಬಹುದು. ಅಪ್ಪಟ ಕನ್ನಡತಿ ನಾಯಕಿಯಾಗಬೇಕು ಎನ್ನುವುದು ಮೊದಲ ಅರ್ಥವಾದರೆ, ಕನ್ನಡ ಭಾಷೆ ಬರುವ ಯಾವುದೇ ನಾಯಕಿ ತನಗೆ ಕೋಸ್ಟಾರ್ ಆಗಬಹುದು ಎನ್ನುವುದು ಮತ್ತೊಂದು ಅರ್ಥ ನೀಡುತ್ತೆ. ಅಂದ್ಹಾಗೇ, ಇಲ್ಲಿಯವರೆಗೆ ಬಹದ್ದೂರ್ ಬೆಂಕಿಚೆಂಡಿಗೆ ನಾಯಕಿಯಾಗಿರುವುದು ಅಪ್ಪಟ ಕನ್ನಡತಿಯರೇ ಕನ್ನಡದ ಮಣ್ಣಿನವರೇ. ಹೀಗಾಗಿ, ಐದನೇ ಸಿನಿಮಾಗೂ ಕನ್ನಡದ ನಟಿಯೇ ಆಗ್ತಾರೆನ್ನುವ ನಿರ್ಧಾರಕ್ಕೆ ಬರುವುದಾದರೂ? ಮಾರ್ಟಿನ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವುದರಿಂದ ಪರಭಾಷೆಯ ಕೋಟಿ ಸುಂದರಿಯರುಮಾರ್ಟಿನ್’ ಅಡ್ಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಬಹುದು. ಆಕ್ಷನ್‌ಪ್ರಿನ್ಸ್ ಪಕ್ಕದಲ್ಲಿ ನಿಂತರೂ ನಿಲ್ಲಬಹುದು.. ಜೋಗಿ ಪ್ರೇಮ್ ಏಮಿಜಾಕ್ಸನ್‌ಗೆ ಕನ್ನಡ ಹೇಳಿಕೊಟ್ಟ ಹಾಗೇ ಕನ್ನಡ ಹೇಳಿಕೊಟ್ಟು ಆಕ್ಟ್ ಮಾಡಿಸುವ ಸಂದರ್ಭ ಎ.ಪಿ ಅರ್ಜುನ್ ಸರ್‌ಗೆ ಬಂದರೂ ಬರಬಹುದು. ಸಾರಥಿಯ ಮಾತಿಗೆ ಆಕ್ಷನ್‌ಪ್ರಿನ್ಸ್ ಸೈ ಎನ್ನಬೇಕಾದ ಸಿಚ್ಯೂಯೇಷನ್ ಕ್ರಿಯೇಟ್ ಆಗಬಹುದು.

ಇಷ್ಟೆಲ್ಲಾ ಅಂತೆ-ಕಂತೆ ನಡುವೆ ಒಂದು ಸಿನಿಮಾಗೆ ನಾಯಕಿಯ ಆಯ್ಕೆ ಹೇಗೆ ನಡೆಯುತ್ತೆ? ಅದರಲ್ಲೂ ಸ್ಟಾರ್ ಹೀರೋಗಳ ಚಿತ್ರಕ್ಕೆ ಹೀರೋಯಿನ್ ಸೆಲೆಕ್ಷನ್ ಹೇಗೆ ಮಾಡುತ್ತಾರೆ? ನಾಯಕಿಯರನ್ನು ಫೈನಲ್ ಮಾಡೋದು ನಿರ್ದೇಶಕರಾ? ನಟರಾ? ನಿರ್ಮಾಪಕರಾ? ಅಥವಾ ಸಿನಿಮಾದ ಕಥೆ ಬಯಸಿದಂತೆ ನಟಿಯರನ್ನು ಆಯ್ಕೆ ಮಾಡ್ತಾರಾ? ಈ ಎಲ್ಲಾ ಪ್ರಶ್ನೆಗೆ ಒಂದೇ ಸಾಲಿನಲ್ಲಿ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಯಾಕಂದ್ರೆ, ಒಂದೊಂದು ಸಿನಿಮಾಗೆ ಒಂದೊಂದು ರೀತಿಯ ಸೆಲೆಕ್ಷನ್ ಪ್ಯಾಟ್ರನ್ ಇರುತ್ತೆ. ಹೀರೋ ಕಾಲ್‌ಶೀಟ್ ಸಿಕ್ಕಮೇಲೆ ನಿರ್ದೇಶಕರು ಕಥೆ ಬರೆಯೋದ್ರಿಂದ ಸ್ಕ್ರಿಪ್ಟ್ ನಿರ್ದಿಷ್ಠ ನಾಯಕಿಯರನ್ನ ಕೇಳೋದಿಲ್ಲ ಎನ್ನುವ ಮಾತು ಚಾಲ್ತಿಯಲ್ಲಿದೆ.

ಇದರ ಜೊತೆಗೆ ಏನಪ್ಪಾ ಅಂದರೆ, ಅನ್ನದಾತರು ಗಟ್ಟಿ ಗುಂಡಿಗೆಯವರಾದರೆ ಹೀರೋ ಹೈಟ್‌ಗೆ-ಪರ್ಸನಾಲಿಟಿಗೆ-ಇಮೇಜ್‌ಗೆ ತಕ್ಕಂತೆ ಕೋಟಿ ಕೋಟಿ ಸುರಿದು ಬೇಡಿಕೆಯ ನಟಿಯರನ್ನೇ ಹೀರೋ ಪಕ್ಕದಲ್ಲಿ ನಿಲ್ಲಿಸುತ್ತಾರೆ. ಗುಂಡಿಗೆ ಕೊಂಚ ವೀಕ್- ಖಜಾನೆ ಸ್ವಲ್ಪ ಮಂಕು ಎನ್ನುವ ನಿರ್ಮಾಪಕರು ನಾಯಕಿಗೆ ಹೈಹೀಲ್ಸ್ ಹಾಕ್ಸಿ ಹೈಟ್ ಮ್ಯಾಚ್ ಮಾಡ್ರಿ ಸರಾ ಅಂತ ಡೈರೆಕ್ಟರ್ಸ್ ಹಾಗೂ ಹೀರೋನಾ ಕನ್‌ವಿನ್ಸ್ ಮಾಡ್ತಾರಂತೆ. ನಿರ್ಮಾಪಕರು ಅನ್ನದಾತರಾಗಿರೋದ್ರಿಂದ ಓಕೆ ಎನ್ನಬೇಕಾಗುತ್ತೇನೋ ಗೊತ್ತಿಲ್ಲ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲಂಕೆಯಲ್ಲಿ ರಾಮನ ತೇಜಸ್ಸು, ರಾವಣನ ವರ್ಚಸ್ಸು ಅವೆರೆಡೂ ಅವನ ತಾಕತ್ತು…! ಒಂಟಿಯಾಗಿ ಹೊಡೆದಾಡಿ ಸಾಮ್ರಾಜ್ಯ ಕಟ್ಟೋಕೆ ಯೋಗಿ ರೆಡಿ!!

ಯೋಗಿ ಅಂತಹ ನಟರಿದ್ದರೆ, ಇಂತಹ ಹತ್ತಾರು ಸಿನಿಮಾಗಳನ್ನು ಮಾಡಬಹುದು. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಂಬಾ ಸಹಕಾರ ಮನೋಭಾವ ಇರುವ ಯೋಗಿ ಅವರ ಪ್ರೋತ್ಸಾಹದಿಂದ ಲಂಕೆ ಸಿನಿಮಾ ಬೇರೆ ಲೆವೆಲ್‌ಗೆ ಹೋಗಿದೆ. ಈಗ “ಲಂಕೆ”ಗೆ ಬಿಡುಗಡೆ ಮೊದಲೇ ಸಿಗುತ್ತಿರುವ ರೆಸ್ಪಾನ್ಸ್‌ ನೋಡಿದರೆ, ಖಂಡಿತ ಇಲ್ಲಿ ಗಟ್ಟಿನೆಲೆ ಕಾಣುತ್ತೇವೆ ಎಂಬ ಭರವಸೆ ಇದೆ

“ಸೂರ್ಯನೆ ಕಾಣದ ಈ ಮಾಯಾ ಬಜಾರ್‌ನಲ್ಲಿ ಭಾವನೆಗೇ ಬೆಲೆ ಇಲ್ಲ… ರಾಮನ ತೇಜಸ್ಸು, ರಾವಣನ ವರ್ಚಸ್ಸು, ಇವೆರೆಡೂ ಇವನ ತಾಕತ್ತು. ಸೈನ್ಯ ಇಟ್ಕೊಂಡ್‌ ಹೋರಾಡೋನು ದಳಪತಿ, ಒಂಟಿಯಾಗಿ ಹೊಡೆದಾಡೋನು ಅಧಿಪತಿ…ʼ
ಇದು ಯೋಗಿ ಅಭಿನಯದ “ಲಂಕೆʼ ಚಿತ್ರದ ಅಫಿಷಿಯಲ್‌ ಟೀಸರ್‌ನಲ್ಲಿ ಬರೋ ಡೈಲಾಗ್.‌ ಡೈಲಾಗ್‌ ಮಾತ್ರ ಖಡಕ್‌ ಆಗಿಲ್ಲ. ಆ ಟೀಸರ್‌ನಲ್ಲಿ ಕಾಣೋ ಫೈಟು ಕೂಡ ಅಷ್ಟೇ ಖದರ್‌ ಆಗಿದೆ. ಅಲ್ಲಿಗೆ “ಲಂಕೆʼ ಪಕ್ಕಾ ಮಾಸ್‌ ಅನ್ನೋದು ಸಾಬೀತಾಗುತ್ತದೆ. ಇಷ್ಟಕ್ಕೂ ಈ “ಲಂಕೆ” ಬಗ್ಗೆ ಹೇಳೋಕೆ ಹೊರಟಿರುವ ವಿಷಯ, ಮೊನ್ನೆ ಮೊನ್ನೆಯಷ್ಟೇ ರಿಲೀಸ್‌ ಆಗಿರುವ ಅಫಿಷಿಯಲ್‌ ಟೀಸರ್‌ಗೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಟೀಸರ್‌ ನೋಡಿದವರಿಗೆ ಯೋಗಿಯ ತಾಕತ್ತಷ್ಟೇ ಅಲ್ಲ, ಆ ಸಿನಿದೊಳಗಿರುವ ತಾಕತ್ತು ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ಅಷ್ಟರಮಟ್ಟಿಗೆ ನಿರ್ದೇಶಕ ರಾಮ್‌ ಪ್ರಸಾದ್‌ ಪವರ್‌ಫುಲ್‌ ಆಗಿ ಕಟ್ಟಿಕೊಟ್ಟಿದ್ದಾರೆ.

ಒಂದು ಸಿನಿಮಾ ಮಾಡೋದು ದೊಡ್ಡ ವಿಷಯವಲ್ಲ, ಆ ಸಿನಿಮಾದೊಳಗಿರುವ ಅಂಶಗಳನ್ನು ಗುರುತಿಸಿ, ಅದನ್ನೆಲ್ಲಾ ಟೀಸರ್‌ಗೆ ಸೇರಿಸಿ ಸಿನಿಮಾಗೂ ಮೊದಲೇ ಪ್ರೇಕ್ಷಕರ ಮುಂದೆ ಬಿಡುವ ಜಾಣತನ ದೊಡ್ಡದು. ಅಂಥದ್ದೊಂದು ಜಾಣತನ ಟೀಸರ್‌ನಲ್ಲಿ ಎದ್ದು ಕಾಣುತ್ತದೆ. ನಿರ್ದೇಶಕ ರಾಮ್‌ಪ್ರಸಾದ್‌ ಈ ಬಾರಿ ಸಕ್ಸಸ್‌ ದಾರಿಯಲ್ಲಿದ್ದಾರೆ ಅನ್ನುವುದಕ್ಕೆ ಆ ಟೀಸರ್‌ ಸಾಕ್ಷಿ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದ “ಲಂಕೆ” ಟೀಸರ್‌ಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಕೂಡ ಟ್ರೆಂಡಿಂಗ್‌ನಲ್ಲಿವೆ. ಶನಿವಾರ ಚಿತ್ರದ ಆಡಿಯೋ ಕೂಡ ಹೊರಬರಲಿದೆ ಅನ್ನೋದು ಹೊಸ ಸುದ್ದಿ.

ಸದ್ಯ ಕೊರೊನಾ ಹಾವಳಿ ಅಲ್ಲಲ್ಲಿ ಇರುವುದರಿಂದ ಸಿನಿಮಾ ಬಿಡುಗಡೆ ಕೊಂಚ ತಡವಾಗಿದೆ. ವೀಕೆಂಡ್‌ ಕರ್ಪ್ಯೂ ಕೆಲವು ಜಿಲ್ಲೆಗಳಲ್ಲಿದೆ. ಅದೆಲ್ಲವೂ ತೆರೆವಾದ ನಂತರ “ಲಂಕೆ” ಪ್ರೇಕ್ಷಕನ ಮುಂದೆ ಬರಲಿದೆ. ಅಂದಹಾಗೆ, “ಲಂಕೆ” ಯೋಗಿ ಅವರಿಗೊಂದು ಕಮ್‌ಬ್ಯಾಕ್‌ ಸಿನಿಮಾ ಅಂದರೂ ತಪ್ಪಿಲ್ಲ. ಯಾಕೆಂದರೆ, ಯೋಗಿ ಅಭಿನಯದ ಹಿಂದಿನ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಈಗ “ಲಂಕೆ” ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿರುವ ಯೋಗಿಗೂ ಒಳ್ಳೆಯ ಯೋಗ ಬರುತ್ತೆ ಎಂಬ ನಂಬಿಕೆಯಂತೂ ಇದೆ. ಎಲ್ಲರ ಶ್ರಮದಿಂದಾಗಿ “ಲಂಕೆʼ ಚೆನ್ನಾಗಿ ಮೂಡಿಬಂದಿದೆ ಎಂಬುದು ನಿರ್ದೇಶಕ ರಾಮ್‌ಪ್ರಸಾದ್‌ ಅವರ ಮಾತು.

ಯೋಗಿ ಅಂತಹ ನಟರಿದ್ದರೆ, ಖಂಡಿತವಾಗಿಯೂ ಇಂತಹ ಹತ್ತಾರು ಸಿನಿಮಾಗಳನ್ನು ಮಾಡಬಹುದು. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಂಬಾನೇ ಸಪೋರ್ಟಿಂಗ್‌ ನೇಚರ್‌ ಇರುವ ಯೋಗಿ ಅವರ ಸಹಕಾರದಿಂದ ಸಿನಿಮಾ ಬೇರೆ ಲೆವೆಲ್‌ಗೆ ಹೋಗಿದೆ. ನಾವೂ ಕೂಡ ಇಷ್ಟು ದಿನಗಳ ಕಾಲ ಗಟ್ಟಿನೆಲೆ ಕಾಣಬೇಕು ಎಂಬ ತುಡಿತವಿತ್ತು. ಈಗ “ಲಂಕೆ”ಗೆ ಬಿಡುಗಡೆ ಮೊದಲೇ ಸಿಗುತ್ತಿರುವ ರೆಸ್ಪಾನ್ಸ್‌ ನೋಡಿದರೆ, ಖಂಡಿತವಾಗಿಯೂ ಇಲ್ಲಿ ಗಟ್ಟಿನೆಲೆ ಕಾಣುತ್ತೇವೆ ಎಂಬ ಭರವಸೆ ಇದೆ.
ಸದ್ಯ ‘ಲಂಕೆ’ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ಲಂಕೆ’ ಚಿತ್ರದ ವಿಡಿಯೋ ಸಾಂಗ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಾಕಷ್ಟು ಮೆಚ್ಚುಗೆ ಪಡೆದಿದೆ.

ನಯನಕೆ ನಯನ… ಎಂಬ ಬ್ಯೂಟಿಫುಲ್ ಸಾಂಗ್ಗೆ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಸಿನಿಮಾ ತಂಡ ಪ್ರಚಾರ ಶುರು ಮಾಡಿದೆ. “ಲಂಕೆ” ಒಂದು ಪಕ್ಕಾ ಮಾಸ್‌ ಸಿನಿಮಾ. ಅದು ಟೀಸರ್‌ನಲ್ಲೇ ಗೊತ್ತಾಗಲಿದೆ. ಯೋಗಿ ಅವರಿಲ್ಲಿ ಲಂಕಾಧಿಪತಿಯಾಗಿ ಅಬ್ಬರಿಸಲಿದ್ದಾರೆ. ಇನ್ನು, ಅವರಿಗೆ ಕ್ರಿಷಿ ತಾಪಂಡ ಹಾಗು ಕಾವ್ಯಾ ಶೆಟ್ಟಿ ನಾಯಕಿಯರು. ವಿಶೇಷವೆಂದರೆ, ನಟ ಸಂಚಾರಿ ವಿಜಯ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಕಾರ್ತಿಕ್‌ ಶರ್ಮ ಸಂಗೀತ ನೀಡಿದ್ದಾರೆ. ಇರುವ ನಾಲ್ಕು ಹಾಡುಗಳು ಕೂಡ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿವೆ. ಧನಂಜಯ್ ನೃತ್ಯ ನಿರ್ದೇಶನವಿದೆ. ಚಿತ್ರಕ್ಕೆ ಸುರೇಖ ರಾಮ್ ಪ್ರಸಾದ್ ಹಾಗು ಪಟೇಲ್ ಶ್ರೀನಿವಾಸ್ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ದೃಶ್ಯ 2 ನಲ್ಲಿ ಆರೋಹಿ- ಮಡಿಕೇರಿ ಮಳೆಯಲ್ಲಿ ಮಜಾ ಮಾಡ್ತಿದ್ದಾರೆ ನಳ ಮಹಾರಾಜನ ಚೆಲುವೆ

ಪಿ.ವಾಸು ಅಂದ್ರೆ ರಿಯಲಿ ಅಮೇಜಿಂಗ್….ಹಿರಿಯ ನಿರ್ದೇಶಕ ಪಿ. ವಾಸು ಅವರ ಬಗ್ಗೆ ಹೀಗೆ ಮೆಚ್ಚುಗೆಯ ಉದ್ಘಾರ ತೆಗೆದಿದ್ದು ಕನ್ನಡದ ಭರವಸೆಯ ಯುವ ನಟಿ ಆರೋಹಿ ನಾರಾಯಣ್.‌ ಭೀಮಸೇನ ನಳಮಹಾ ರಾಜನ ಈ ಚೆಲುವೆ ಈಗ ʼ ದೃಶ್ಯ 2ʼ ಚಿತ್ರದ ಚಿತ್ರೀಕರಣ ದಲ್ಲಿ ಬ್ಯುಸಿ ಆಗಿದ್ದಾರೆ. ಅಂದ ಹಾಗೆ ʼದೃಶ್ಯ 2ʼ ಹೆಸರಾಂತ ನಿರ್ದೇಶಕ ಪಿ. ವಾಸು ನಿರ್ದೇಶನದ ಸಿನಿಮಾ. ʼದೃಶ್ಯʼ ಭಾಗ ಒಂದಕ್ಕೂ ಅವರೇ ನಿರ್ದೇಶಕರು. ಕನ್ನಡಕ್ಕೆ ʼಆಪ್ತಮಿತ್ರʼದಂತಹ ಸೂಪರ್‌ ಡೂಪರ್‌ ಹಿಟ್‌ ಸಿನಿಮಾ ಕೊಟ್ಟ ಖ್ಯಾತಿ ಅವರದು. ಇದೀಗ ʼದೃಶ್ಯ 2ʼ ಮೂಲಕ ಮತ್ತೆ ಸಿನಿದುನಿಯಾದಲ್ಲಿ ಕಮಾಲ್‌ ಮಾಡಲು ಬರುತ್ತಿದ್ದು, ಕೊರೋನಾ ಭೀತಿಯ ನಡುವೆಯೂ ಈ ಚಿತ್ರಕ್ಕೆ ಈಗ ಮಡಿಕೇರಿಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ನಟ ರವಿಚಂದ್ರನ್‌ ಸೇರಿದಂತೆ ಇಡೀ ತಂಡವೇ ಅಲ್ಲಿದೆ. ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ನಟಿ ಆರೋಹಿ ನಾರಾಯಣ್‌ ಕೂಡ ಈಗ ಮಡಿಕೇರಿ ನಲ್ಲಿದ್ದಾರೆ.‌

ಮಡಿಕೇರಿಯಲ್ಲೀಗ ಮಳೆ. ಮಡಿಕೇರಿ ಮಳೆ ಅಂದ್ರೆ ಅದನ್ನು ಹೆಚ್ಚೇನು ವಿವರಿಸಬೇಕಿಲ್ಲ. ಕಾಫಿ ಕಾಡಿನಲ್ಲಿ ದಟ್ಟವಾಗಿ ಸುರಿಯುವ ಮಳೆ ಅದು. ಅದರ ನಡುವೆಯೇ ಕಳೆದ ಹಲವು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟಿ ಆರೋಹಿ ನಾರಾಯಣ್‌, ʼಸಿನಿಲಹರಿʼಯೊಂದಿಗೆ ಮಾತನಾಡುತ್ತಾ, ಚಿತ್ರೀಕರಣದ ಅನುಭವ ಹಂಚಿಕೊಂಡರು.ʼ ಚಿತ್ರೀಕರಣ ಅದ್ಬುತವಾಗಿ ನಡಯುತ್ತಿದೆ. ಇಡೀ ಟೀಮ್‌ ಜತೆಗಿದೆ. ಒಂದು ಸಿನಿಮಾ ಟೀಮ್‌ ಎನ್ನುವುದಕ್ಕಿಂತ ಒಂದೇ ಫ್ಯಾಮಿಲಿ ವಾತಾವರಣ ಇಲ್ಲಿದೆ. ತುಂಬಾ ಕಂಫರ್ಟ್‌ ಜೋನ್‌ ನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಎಲ್ಲರೂ ತುಂಬಾ ಸೇಫ್ಟಿ ತೆಗೆದುಕೊಂಡೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆನ್ನುತ್ತಾ ಅಲ್ಲಿನ ಅನುಭವ ತೆರೆದಿಟ್ಟರು. ‌

ಚಿತ್ರೀಕರಣದ ಕುರಿತು ಮಾತನಾಡಿದ್ದಕ್ಕಿಂತ ನಿರ್ದೇಶಕ ಪಿ. ವಾಸು ಅವರ ಬಗ್ಗೆಯೇ ಹೆಚ್ಚು ಮಾತನಾಡಿದರು.ʼ ಪಿ.ವಾಸು ಅವರಂತಹ ಲೆಂಜೆಡರಿ ಡೈರೆಕ್ಟರ್‌ ಕಾಂಬನೇಷನಿನಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದೆ ಒಂದು ಪುಣ್ಯ. ಸಿನಿಮಾ ಅಂತ ಬಂದಾಗ ಅವರಿಂದ ತುಂಬಾ ಕಲಿಯುವುದಿದೆ. ಅದಕ್ಕೆ ನಂಗೊಂದು ಅವಕಾಶ ಈ ಸಿನಿಮಾದಲ್ಲಿ ಸಿಕ್ಕಿದೆ ಎಂದರು.

ಇನ್ನು ನಟಿ ಆರೋಹಿ ನಾರಾಯಣ್‌ ಡಯಟ್‌ ಮಾಡುತ್ತಿದ್ದಾರಂತೆ. ಕೊಂಚ ಸಣ್ಣಾಗಬೇಕೆನ್ನುವುದು ಅವರ ಆಸೆ. ಹೀಗಾಗಿ ಫುಡ್‌ ವಿಚಾರ ದಲ್ಲಿ ತುಂಬಾ ಸ್ಟ್ರಿಕ್ಟ್ ಅಂತೆ. ʼ ಡಯೆಟ್‌ನಲ್ಲಿದ್ದಾಗ ತಕ್ಕನಾದ ಫುಡ್‌ ಸಿಗೋದು ಕಷ್ಟ. ಅದರಲ್ಲೂ ಸಿನಿಮಾ ಸೆಟ್‌ ನಲ್ಲಿ ಅಂತಹ ಫುಡ್‌ ಗೆ ಪರದಾಡಬೇಕಾಗುತ್ತದೆ. ಆದರೆ ನಿರ್ದೇಶಕರಾದ ಪಿ. ವಾಸು ಸ್ವಂತ ತಮ್ಮ ಮಕ್ಕಳಂತೆ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಡಯಟ್‌ ಪೂರಕವಾದ ಫುಡ್‌ ಅನ್ನು ಟೀಮ್‌ ಗೆ ಹೇಳಿ ತರಿಸಿಕೊಡುತ್ತಾರೆ. ಇಷ್ಟು ಕೇರ್‌ ಯಾರು ತಗೋಳ್ಳೋದಿಲ್ಲ. ಆದರೆ, ನಮ್ಮ ನಿರ್ದೇಶಕರು ಡಿಫೆರೆಂಟ್‌ ಅಂತಾರೆ ನಟಿ ಆರೋಹಿ ನಾರಾಯಣ್.

error: Content is protected !!