Categories
ಸಿನಿ ಸುದ್ದಿ

ಸಿನಿ ಮಂದಿ ನೆರವಿಗೆ ರೆಡಿಯಾದ ನಟ ನೀನಾಸಂ ಸತೀಶ್ : ದಿನಸಿ ಕಿಟ್ ವಿತರಣೆಗೆ ಸಂಚಾರಿ ವಿಜಯ್ ಮತ್ತು ಗೆಳೆಯರು ಸಾಥ್

ಕೊರೊನಾ ಸಮಸ್ಯೆಗೆ ಇಡೀ ಜಗತ್ತು ತತ್ತರಿಸಿದ್ದು ಗೊತ್ತೇ ಇದೆ. ಲೆಕ್ಕವಿಲ್ಲದಷ್ಟು ಮಂದಿ ಜೀವ ಬಿಟ್ಟಿದ್ದಾರೆ. ಹಲವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕೆಲಸವಿಲ್ಲದೆ ಜನ ಕಂಗಾಲಾಗಿದ್ದಾರೆ. ಇದಕ್ಕೆ ಸಿನಿಮಾರಂಗದ ಮಂದಿಯೂ ಹೊರತಲ್ಲ. ಬದುಕು ನಡೆಸಲು ಕಷ್ಟ ಪಡುತ್ತಿರುವ, ಸಂಕಷ್ಟಕ್ಕೆ ಸಿಲುಕಿರುವ ಸಿನಿ ಮಂದಿಯ ನೋವಿಗೆ ಈಗಾಗಲೇ ಕನ್ನಡದ ಅನೇಕ ಸ್ಟಾರ್ ನಟರು ಸ್ಪಂದಿಸಿದ್ದಾರೆ. ಈಗ ನಟ ನೀನಾಸಂ ಸತೀಶ್ ಮತ್ತು ಸಂಚಾರಿ ವಿಜಯ್ ಮತ್ತು ಗೆಳೆಯರು ಕೂಡ ಸಿನಿಮಾ ಕಾರ್ಮಿಕರ ನೋವಿಗೆ ಸ್ಪಂದಿಸಲು ಮುಂದಾಗಿದ್ದಾರೆ.

ನಟ ಸಂಚಾರಿ ವಿಜಯ್, ಪತ್ರಕರ್ತ ಶರಣ್ ಹುಲ್ಲೂರು, ನಟಿಯರಾದ ಶರ್ಮಿಳಾ‌ ಮಾಂಡ್ರೆ ಹಾಗೂ ಕಾರುಣ್ಯ ರಾಮ್ ಅವರನ್ನೊಳಗೊಂಡ ಒಂದು ತಂಡದ ಮೂಲಕ ಅಗತ್ಯ ಇರುವ ಸಿನಿಮಾ ಕಾರ್ಮಿಕರಿಗೆ ಫುಡ್ ಕಿಟ್ ನೀಡಲು ಸನೀನಾಸಂ ಸತೀಶ್ ಸಿದ್ಧತೆ ನಡೆಸಿದ್ದಾರೆ.

ಇದೆಲ್ಲ ಆ ತಂಡದ ತಯಾರಿ.‌ ನಟ ಸತೀಸ್ ನೀನಾಸಂ ಕಚೇರಿಯಲ್ಲಿ ಎಲ್ಲಾ ಸಿದ್ದತೆ ನಡೆಯುತ್ತಿದೆ. ಅಕ್ಕಿ, ಬೆಳೆ, ಸಕ್ಕರೆ, ತರಕಾರಿ ಸೇರಿದಂತೆ ಅಗತ್ಯವಾಗಿ ಬೇಕಾದ ಆಹಾರ ಪದಾರ್ಥಗಳನ್ನು ತಂಡ ರೆಡಿ ಮಾಡುತ್ತಿದೆ. ಸದ್ಯಕ್ಕೆ ಇದರ ವಿತರಣೆಯೆಲ್ಲ ಹೇಗೆ, ಎಂತೂ ಗೊತ್ತಿಲ್ಲ. ಆದರೆ, ಇದೆಲ್ಲ ಹೇಗೆ ಶುರುವಾಯ್ತು‌..? ಆ ಬಗ್ಗೆ ನಟ ಸತೀಸ್ ನೀನಾಸಂ ಹೇಳುವುದು ಹೀಗೆ‌‌…

ಸತೀಶ್ ಮಾತು.
‘ಈಗಾಗಲೇ ಸಿನಿಮಾ ರಂಗದಲ್ಲಿ‌ ನಟರಾದ ಸುದೀಪ್, ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್‌, ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಹಲವರು ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಈ ಪೈಕಿ ಯಶ್ ಆಂಗ್ರಪಂಕ್ತಿಯಲ್ಲಿ ನಿಂತಿದ್ದಾರೆ.

ಹಾಗೆಯೇ ನಟ ಸಂಚಾರಿ ವಿಜಯ್ ಕೂಡ ಮೊದಲಿನಿಂದಲೂ ತಮ್ಮ ಕೈಲಾದ ಸಹಾಯ‌ ಮಾಡುತ್ತಾ ಬರುತ್ತಿದ್ದಾರೆ.

ಇವರ ಜೊತೆ ನಾನು ಸಮಾನ‌ ಮನಸ್ಕ ತಂಡದೊಂದಿಗೆ ಫುಡ್ ಕಿಟ್ ವಿತರಣೆಗೆ ರೆಡಿಯಾಗುತ್ತಿದ್ದೇನೆ’ ಎಂದಿದ್ದಾರೆ.

Categories
ಸಿನಿ ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಬಿ.ಜಯಾ ನಿಧನ

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಬಿ.ಜಯಾ (77) ಇಂದು (ಜೂನ್ 3) ನಿಧನರಾಗಿದ್ದಾರೆ. ತಿಂಗಳ ಹಿಂದಷ್ಟೇ ಅವರು ಪಾರ್ಶ್ವವಾಯುಗೆ ತುತ್ತಾಗಿ, ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಬಿ.ಜಯಾ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ ಹಾಸ್ಯನಟಿ. ನರಸಿಂಹರಾಜು ಮತ್ತು ದ್ವಾರಕೀಶ್ ಜೋಡಿಯಾಗಿ ಅವರ ಪಾತ್ರಗಳು ಬಹು ಜನಪ್ರಿಯಗೊಂಡಿದ್ದವು.
ಜಯಾ ಅವರು ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿದ್ದರು ಎಂಬುದು ವಿಶೇಷ.

ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಿದ್ದರು., ಹತ್ತಾರು ಧಾರಾವಾಹಿಗಳಲ್ಲೂ ಅವರು ಕಾಣಿಸಿಕೊಂಡಿದ್ದರು

ಜಯಾ ಅವರ ತಂದೆ ಬಸಪ್ಪನವರು ರಂಗಭೂಮಿ ಕಲಾವಿದರು. ಪುತ್ರಿಯನ್ನು ನಟಿಯಾಗಿ ರೂಪಿಸಬೇಕೆನ್ನುವ ಇರಾದೆ ಅವರದಾಗಿತ್ತು. ತಂದೆಯ ಒತ್ತಾಸೆಯಂತೆ ಜಯಾ ರಂಗಭೂಮಿ ಪ್ರವೇಶಿಸಿದರು. ಆಗ ಅವರಿಗೆ ಹತ್ತು ವರ್ಷ. ‘ಚಾಮುಂಡೇಶ್ವರಿ ನಾಟಕ ಮಂಡಳಿ’ಯಲ್ಲಿ ಪ್ರಹ್ಲಾದ, ಬಾಲಭೋಜ, ಕೃಷ್ಣ, ಋಷಿಕೇಶ, ಸನಕಾದಿಗಳ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರು ನಟನೆ ಜೊತೆಗೆ ಸಂಗೀತ, ನೃತ್ಯ ಕಲಿತರು.

‘ಭಕ್ತ ಪ್ರಹ್ಲಾದ’ (1958) ಚಿತ್ರದ ಪುಟ್ಟ ಪಾತ್ರದೊಂದಿಗೆ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಮುಂದೆ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದ ಅವರು ಮದರಾಸಿನಲ್ಲಿದ್ದಾಗ ಹಲವಾರು ರೇಡಿಯೋ ನಾಟಕಗಳಲ್ಲೂ ಪಾಲ್ಗೊಂಡಿದ್ದರು. ಆಗ ಬೆರಳೆಣಿಕೆಯಷ್ಟೇ ಕನ್ನಡ ಚಿತ್ರಗಳು ತಯಾರಾಗುತ್ತಿದ್ದುದು. ಕನ್ನಡ ಚಿತ್ರ ತಾರೆಯರು ಜೀವನೋಪಾಯಕ್ಕಾಗಿ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ ಕಟ್ಟಿದ್ದರು. ಬಿ.ಜಯಾ ಅವರು ಕೂಡ ಈ ತಂಡದ ಕಲಾವಿದೆಯಾಗಿ ರಾಜ್ಯದ ಹಲವೆಡೆ ನಾಟಕಗಳ ಪ್ರದರ್ಶನ ನೀಡಿದ್ದರು.

1983ರಲ್ಲಿ ‘ಕುಮಾರೇಶ್ವರ ನಾಟಕ ಸಂಘ’ ಕಟ್ಟಿದ ಬಿ.ಜಯಾ ಅವರು 1992ರವರೆಗೆ ಕಂಪನಿ ನಡೆಸಿದರು.

ದೈವಲೀಲೆ, ವಿಧಿ ವಿಲಾಸ, ಬೆಳ್ಳಿಮೋಡ, ನ್ಯಾಯವೇ ದೇವರು, ಚಿನ್ನದ ಗೊಂಬೆ, ಪ್ರತಿಜ್ಞೆ, ಮಹದೇಶ್ವರ ಪೂಜಾಫಲ, ಮಣ್ಣಿನ ಮಗ, ಶ್ರೀಕೃಷ್ಣ ದೇವರಾಯ, ಕುಲಗೌರವ, ಪೂರ್ಣಿಮಾ, ನಗುವ ಹೂವು, ಮುಕ್ತಿ, ಜೀವನ ಜೋಕಾಲಿ, ದೇವರು ಕೊಟ್ಟ ತಂಗಿ, ಗಂಧದ ಗುಡಿ, ಶುಭಮಂಗಳ, ದಾರಿತಪ್ಪಿದ ಮಗ, ಪ್ರೇಮದ ಕಾಣಿಕೆ… ಜಯಾ ಅವರ ಕೆಲವು ಪ್ರಮುಖ ಚಿತ್ರಗಳು. ‘ಮಹಾನ್‌ ಮರೆಗುಳಿಗಳು’ ಸರಣಿಯಿಂದ ಶುರುವಾದ ಅವರ ಕಿರುತೆರೆ ನಂಟು ಇತ್ತೀಚಿನವರೆಗೂ ಜಾರಿಯಲ್ಲಿತ್ತು.

‘ಗೌಡ್ರು’ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ (2012), ಚಿತ್ರಪ್ರೇಮಿಗಳ ಸಂಘ, ಕನ್ನಡ ಟೆಲಿವಿಷನ್ ಅಸೋಸಿಯೇಷನ್ ಗೌರವ ಸೇರಿದಂತೆ ಹತ್ತಾರು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

‘ಕುಲಗೌರವ’ ಚಿತ್ರದಲ್ಲಿ ರಾಜಕುಮಾರ್, ನರಸಿಂಹರಾಜು ಅವರೊಂದಿಗೆ
‘ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಪನಾ ಜೊತೆ
‘ಮಹದೇಶ್ವರ ಪೂಜಾಫಲ’ದಲ್ಲಿ ದ್ವಾರಕೀಶ್ ಜೊತೆ ಕಾಣಿಸಿಕೊಂಡಿದ್ದರು

Categories
ಸಿನಿ ಸುದ್ದಿ

ಕನ್ನಡ ಚಿತ್ರೋದ್ಯಮಕ್ಕೆ ಪ್ಯಾಕೇಜ್; ಸಿಎಂ ಯಡಿಯೂರಪ್ಪ ಅವರಿಗೆ ಫಿಲ್ಮ್ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅಭಿನಂದನೆ

ಕನ್ನಡ ಚಿತ್ರೋದ್ಯಮದ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅಭಿನಂದಿಸಿದ್ದಾರೆ.
ಕೊರೊನಾ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರೋದ್ಯಮಕ್ಕೆ ಆಸರೆಯಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಅವರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು.

ಮುಖ್ಯಮಂತ್ರಿಯವರು ಮನವಿಗೆ ಸ್ಪಂದಿಸಿ ಪ್ಯಾಕೇಜ್ ನೀಡಿದ್ದಾರೆ. ಸಂಕಷ್ಟದಲ್ಲಿ ಪ್ಯಾಕೇಜ್ ನೀಡಿದ ಮುಖ್ಯಮಂತ್ರಿಯವರನ್ನು ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಸುನೀಲ್ ಪುರಾಣಿಕ್ ಅವರು ತಿಳಿಸಿದ್ದಾರೆ.
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಘೋಷದೊಂದಿಗೆ ಮುಖ್ಯಮಂತ್ರಿಯವರು ಎಲ್ಲರಿಗೂ ಕೊರೊನಾ ಸಂಕಷ್ಟದಲ್ಲಿ ಕೈಹಿಡಿದಿದ್ದಾರೆ. ಮೊದಲ ಪ್ಯಾಕೇಜ್ ನಲ್ಲಿ ಚಿತ್ರೋದ್ಯಮಕ್ಕೆ ಪ್ಯಾಕೇಜ್ ಕೈತಪ್ಪಿತ್ತು. ಆದರೆ, ತಾವು ಮಾಡಿದ ಮನವಿಗೆ ಅವರು ಇದೀಗ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಮುಖ್ಯಮಂತ್ರಿ ಅವರು ವಿಶೇಷ ಕಾಳಜಿಯಿಂದ ಆಹಾರ ಸಾಮಗ್ರಿಗಳ ಖರೀದಿಗೆ ಸಂಕಷ್ಟದಲ್ಲಿದ್ದ ಚಿತ್ರರಂಗದ 6500 ಮಂದಿಗೆ ತಲಾ 3000 ರೂ. ಮೌಲ್ಯದ ರಿಲೆಯನ್ಸ್ ಕೂಪನ್ ಕೊಡಿಸಿದ್ದರು. ಅಲ್ಲದೆ, ಇತ್ತೀಚಿಗೆ ಚಿತ್ರೋದ್ಯಮದವರಿಗಾಗಿ ವಿಶೇಷವಾಗಿ ಲಸಿಕೆಯನ್ನೂ ನೀಡಿ ಸಹಾಯ ಮಾಡಿದ್ದಾರೆ. ಇದನ್ನು ಕನ್ನಡ ಚಿತ್ರೋದ್ಯಮ ಸ್ಮರಿಸುತ್ತದೆ ಎಂದು ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಡಾರ್ಲಿಂಗ್ ಕೃಷ್ಣ ಹುಟ್ಟು ಹಬ್ಬಕ್ಕೆ ಶುಗರ್ ಫ್ಯಾಕ್ಟರಿ ವಿಡಿಯೋ ಟೀಸರ್

ಜೂನ್ 12 ನಟ ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬ. ಕೃಷ್ಣ ಅವರ ಹುಟ್ಟುಹಬ್ಬಕ್ಕೆ “ಶುಗರ್ ಫ್ಯಾಕ್ಟರಿ” ಚಿತ್ರದ ವಿಡಿಯೋ ಟೀಸರ್ ಬಿಡುಗಡೆಯಾಗಲಿದೆ. ಟೀಸರ್ ನಲ್ಲಿ ಸಾಮಾನ್ಯವಾಗಿ ಪೋಸ್ಟರ್ ಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ನಾವು ವಿಡಿಯೋ ತುಣುಕುಗಳನ್ನು ಬಳಸಿಕೊಂಡು ವಿಭಿನ್ನವಾಗಿ ಟೀಸರ್ ನಿರ್ಮಾಣ ಮಾಡಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ದೀಪಕ್ ಅರಸ್.

ಜೂನ್ 12ರಂದು ಆನಂದ್ ಆಡಿಯೋ ಯೂಟ್ಯೂಬ್‌ ಚಾನಲ್ ನಲ್ಲಿ ಟೀಸರ್ ಬಿಡುಗಡೆಯಾಗಲಿದೆ. ಜೂನ್ 11 ರಂದು ಸಂಜೆ 5 ಗಂಟೆಗೆ ಇನ್ ಸ್ಟಾಗ್ರಾಂ ಮೂಲಕ ಲೈವ್ ನಲ್ಲಿ ಚಿತ್ರತಂಡದ ಸದಸ್ಯರು ಟೀಸರ್ ಹಾಗೂ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಲಿದ್ದಾರೆ.
ಈಗಾಗಲೇ ಬಹತೇಕ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ.


ಲಾಕ್ ಡೌನ್ ಮುಗಿದ್ದು, ಚಿತ್ರೀಕರಣಕ್ಕೆ ಅನುಮತಿ ದೊರಕಿದ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ.
ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.

ರಂಗಾಯಣ ರಘು, ಲವ್ ಮಾಕ್ಟೇಲ್ ಅಭಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌


ಕಬೀರ್ ರಫಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನವಿರುವ ‘ಶುಗರ್ ಫ್ಯಾಕ್ಟರಿ’ ಗೆ ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆಯುತ್ತಿದ್ದಾರೆ.

Categories
ಸಿನಿ ಸುದ್ದಿ

ಖೇಲ್‌ ಪ್ಲೇ ರಮ್ಮಿ ಆಡಿ ಎಂದು ಹೇಳಿದ ನಟಿ ಹರ್ಷಿಕಾಗೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕ್ಲಾಸ್‌

ನಟಿ ಹರ್ಷಿಕಾ ಪೂಣಚ್ಚ ಈಗ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬೆಂಗಳೂರು ಮಾತ್ರವಲ್ಲ, ತಮ್ಮ ತವರು ಜಿಲ್ಲೆ ಕೊಡಗಿಗೂ ಹೋಗಿ ಅಲ್ಲಿಯೂ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರ ಜತೆಗೆ ಸೋಂಕಿತರಿಗೂ ನೆರವಾಗಿ ಮಾನವೀಯತೆ ಮೆರೆದಿದ್ದು ಎಲ್ಲರಿಗೂ ಗೊತ್ತು. ಆದರೆ ಈಗ ಸೋಷಲ್‌ ಮೀಡಿಯಾದಲ್ಲಿ ಇನ್ನೊಂದು ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದು ಮಾತ್ರವಲ್ಲ, ನೆಟ್ಟಿಗರಿಂದ ತೀವ್ರ ಮುಜುಗರಕ್ಕೆ ಒಳಗಾಗುವಂತಹ ಟೀಕೆಗಳನ್ನು ಎದುರಿಸಿದ್ದಾರೆ.

ಇಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಖೇಲ್‌ ಪ್ಲೇ ರಮ್ಮಿ ಹೆಸರಿನ ಆಟ !
ಹೌದು, ಆನ್‌ಲೈನ್‌ ನಲ್ಲೀಗ ಖೇಲ್‌ ಪ್ಲೇ ರಮ್ಮಿ ಹೆಸರಿನ ವಿಶಿಷ್ಟವಾದ ಆಟ ಶುರುವಾಗಿದೆ. ಇದರ ಜಾಹೀರಾತಿನಲ್ಲಿ ನಟಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ಅಲ್ಲಿ ನಗು ನಗುತಾ ಬರುವ ಅವರು, ಖೇಲ್‌ ಪ್ಲೇ ರಮ್ಮಿ ಆಡುವ ವಿಧಾನವನ್ನು ತಿಳಿಸುತ್ತಾರೆ. ಬಿಡುವಿನ ವೇಳೆಯನ್ನು ಮಜವಾಗಿ ಕಳೆಯಲು ಇದು ತುಂಬಾ ಇಷ್ಟವಾಗುತ್ತೆ ಎನ್ನುತ್ತಾರೆ. ಹಾಗೆಯೇ ಕೊನೆಯಲ್ಲಿ ಮತ್ತ್ಯಾಕೆ ತಡ, ಬಿಂದಾಸ್‌ ಆಗಿ ಆಡಿ ಎನ್ನುವ ಮಾತುಗಳೊಂದಿಗೆ ರಮ್ಮಿ ಆಟಕ್ಕೆ ಕರೆ ನೀಡುತ್ತಾರೆ. ಇದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಸಿನಿಮಾ ರಂಗದಲ್ಲಿರುವವರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಒಬ್ಬ ಸೆಲಿಬ್ರಿಟಿಯಾಗಿ ನೀವು ಮನೆ ಹಾಳಾಗೋ ಐಡಿಯಾ ಕೊಡಬೇಡಿ ಅಂತ ಕಿವಿ ಮಾತು ಹೇಳಿದ್ದಾರೆ. ಹಾಗೆಯೇ ರಾಘು ಜಿ ಮಹೇಶ್‌ ಎನ್ನುವವರು, ಜನಗಳನ್ನು ಜೂಜಾಟ ಆಡಿ ಅಂತ ಹೇಳೋಕ್ಕೆ ನಿಮಗೆ ನಾಚಿಕೆ ಆಗಲ್ವಾ ಅಂತ ಖಾರವಾಗಿ ಪ್ರಶ್ನಿಸಿದ್ದಾರೆ. ಸೈನಿಕರಿಗೆ ಹೆಸರಾದ ಕೊಡಗಿನಲ್ಲಿ ಹುಟ್ಟಿ ಬೆಳೆದ ನೀವು, ಹಾಕಿ, ಫುಟ್ಬಾಲ್‌ ಆಡಿ ಅಂತ ಕ್ರೀಡೆಗಳಿಗೆ ಉತ್ತೇಜನ ನೀಡುವುದನ್ನು ಬಿಟ್ಟು, ಸೋಂಬೇರಿಗಳು, ಮೈಗಳ್ಳರು ಜೂಜಾಡುವ ಆಟವನ್ನು ಆಡಿಸುವ ಕಂಪನಿ ಪರವಾಗಿ ಜಾಹೀರಾತು ಕೊಡುವುದು ನಿಮಗೆ ಶೋಭೆ ತರುವ ಕೆಲಸವಲ್ಲ ಎಂದು ಪಿರಿಯಾಪಟ್ಟಣದ ರವಿಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗೆ ಲೆಕ್ಕವಿಲ್ಲದಷ್ಟು ಟೀಕೆಗಳು ಸೋಶಿಯಲ್‌ ಮೀಡಿಯಾದಲ್ಲಿ ಬಂದಿವೆ. ಸದ್ಯಕ್ಕೆ ಇವಾವುದಕ್ಕೂ ನಟಿ ಹರ್ಷಿಕಾ ಸದ್ಯ ಪ್ರತಿಕ್ರಿಯೆ ನೀಡಿಲ್ಲ.

Categories
ಸಿನಿ ಸುದ್ದಿ

ಗೂಗಲ್ ನಲ್ಲಿ ಕನ್ನಡಕ್ಕೆ ಅವಮಾನ; ಈ ಕೃತ್ಯಕ್ಕೆ ಕನ್ನಡಿಗರು, ಸೇರಿ ತಾರೆಯರಾದ ಸುದೀಪ್, ರಾಗಿಣಿ ಹಲವರು ಕೆಂಡಾಮಂಡಲ

ಕನ್ನಡ ಭಾಷೆಗೆ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅವಮಾನ ಆಗುತ್ತಲೇ ಇದೆ. ಈಗ ಗೂಗಲ್ ನಂತಹ ದೈತ್ಯ ತಂತ್ರಜ್ಞಾನ ಸಂಸ್ಥೆಯಿಂದಲೇ ಕನ್ನಡಕ್ಕೆ ಅವಮಾನ ಆಗಿದೆ‌. ಗೂಗಲ್​ನ ಸರ್ಚ್ ಆಪ್ಷನ್ ನಲ್ಲಿ ಇಂಡಿಯಾದ ಆಗ್ಲಿಯೇಸ್ಟ್ ಭಾಷೆ ಯಾವುದು ಅಂತ ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದೆ. ಆ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಇಲ್ಲಿ ದೊಡ್ಡ ಅವಮಾನ ಆಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಅನಾವಶ್ಯಕವಾಗಿ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಗೂಗಲ್ ಯತ್ನದ ವಿರುದ್ಧ ಈಗಾಗಲೇ ಹಲವರು ಧ್ವನಿ ಎತ್ತಿದ್ದಾರೆ. ಗೂಗಲ್​ನಂತಹ ದೊಡ್ಡ ಸಂಸ್ಥೆ ಕನ್ನಡ ಭಾಷೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಒತ್ತಾಯಿಸುತ್ತಿದ್ದಾರೆ. ನಟ ಸುದೀಪ್ ಅವರೇ ಈ ಗೂಗಲ್ ಕೃತ್ಯವನ್ನು ಖಂಡಿಸಿದ್ದಾರೆ. ‌
ಕನ್ನಡದಂತಹ ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ ಇದು ದೊಡ್ಡ ಅವಮಾನ ಮಾಡಿದವರಿಗೆ ಅದರ ಮಹತ್ವ ಗೊತ್ತಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.
ನಟಿ ರಾಗಿಣಿ ಕೂಡ ಗೂಗಲ್ ಕೃತ್ಯಕ್ಕೆ ಆಕ್ಷೇಪ ಎತ್ತಿದ್ದಾರೆ. ಇವರ ಉದ್ದೇಶ ಏನಿರಬಹುದೋ ಗೊತ್ತಿಲ್ಲ, ಅದರೆ, ಕನ್ನಡಕ್ಕೆ ಇದು ಅವಮಾನ ಮಾಡಿದೆ. ಕನ್ನಡ ಅಂದ್ರೆ ತುಂಬಾನೆ ಸುಂದರವಾದ ಭಾಷೆ. ಇದರ ಮಹತ್ವ ತಿಳಿಯಬೇಕಾದರೆ, ಅವರು ಕನ್ನಡ ಕಲಿಯಬೇಕು ಅಂತ ಕಿಡಿಗೇಡಿಗಳ ಕಿವಿ ಹಿಂಡಿದ್ದಾರೆ.


ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿ,
“ನಾವು ಈ ವಿಚಾರವಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದೇವೆ. ಗೂಗಲ್​ನಲ್ಲಿ ಕನ್ನಡವನ್ನು ಅವಮಾನಿಸಿದ್ದನ್ನು ಖಂಡಿಸಿ ಲೀಗಲ್​ ನೋಟಿಸ್ ಕಳುಹಿಸಿದ್ದೇವೆ. ನೆಲ, ಜಲ, ಭಾಷೆ, ಸಂಸ್ಕೃತಿಯ ವಿಚಾರದಲ್ಲಿ ಇನ್ನೊಬ್ಬರನ್ನು ಅಪಮಾನ ಮಾಡುವುದನ್ನು ಸಹಿಸಲಾಗದು. ಇದೊಂದು ಬಗೆಯ ವ್ಯವಸ್ಥಿತ ಸಂಚು ಎನ್ನುವುದು ಸ್ಪಷ್ಟವಾಗಿದೆ” ಎಂದಿದ್ದಾರೆ.


ಹಾಗೆಯೇ ಸೋಷಲ್ ಮೀಡಿಯಾದಲ್ಲಿ ಕನ್ನಡದ ಹೋರಾಟಗಾರರು, ಕನ್ನಡ ಪ್ರೇಮಿಗಳು ಗೂಗಲ್ ವಿರುದ್ಧ ಕಿಡಿ ಕಾರಿದ್ದಾರೆ.

Categories
ಸಿನಿ ಸುದ್ದಿ

ಕೊರೊನಾ : ಫೀಲ್ಡಿಗಿಳಿದ ನಟ ನಿಖಿಲ್‌ ಕುಮಾರ ಸ್ವಾಮಿ – ಆರೋಗ್ಯ ಸೇವಕರಿಗೆ ಆರ್ಥಿಕ ನೆರವು ನೀಡಿದ ಯುವ ರಾಜ


ನಟ ನಿಖಿಲ್‌ ಕುಮಾರ ಸ್ವಾಮಿ ಫೀಲ್ಡಿಗಿಳಿದಿದ್ದಾರೆ. ಸದ್ಯಕ್ಕೆ ಅವರು ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿರುವ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದ್ದು, ಅದರ ನಡುವೆಯೇ ಈಗ ರಾಮನಗರ ಜಿಲ್ಲೆಯಲ್ಲಿನ ಜನರ ನೆರವಿಗೆ ನಿಂತಿದ್ದಾರೆ. ವಿಶೇಷವಾಗಿ ಕೊರೊನಾ ಸಂಕಷ್ಟದಲ್ಲಿ ಪ್ರಾಣ ಪಣಕ್ಕಿಟ್ಟು ಜನರ ಆರೋಗ್ಯ ಸೇವೆಗೆ ದುಡಿಯುತ್ತಿರುವ ರಾಮನಗರ ಜಿಲ್ಲೆಯ ಆರೋಗ್ಯ ಸೇವಕರಿಗೆ ಆರ್ಥಿಕ ನೆರವು ನೀಡಿದ್ದಾರೆ. ಗುರುವಾರ ರಾಮನಗರ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಪ್ ನರ್ಸ್ ಗಳಿಗೆ ಆರ್ಥಿಕ ನೆರವು ನೀಡಿದರು.

ಹಾಗೆಯೇ ನೆಬ್ಯುಲೈಝರ್ ಮಿಷಿನ್ ಕೂಡ ವಿತರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿದೆ. ಕಳೆದ ವರ್ಷ ಹಾಗೂ ಈ ಬಾರಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕೊರೊನಾ ವಾರಿಯರ್ಸ್ ತಮ್ಮ ಪ್ರಾಣ ಪಣಕ್ಕಿಟ್ಟು ಲಕ್ಷಾಂತರ ಜನರ ಪ್ರಾಣ ಉಳಿಸುತ್ತಿದ್ದಾರೆ. ಇವತ್ತು ಎಲ್ಲಾ ಕೋವಿಡ್ ವಾರಿಯರ್ಸ್ ನಿಜವಾದ ಹಿರೋಗಳು. ಅವರಿಗೆ ನನ್ನ ಕೈಲಾದ ಸಹಾಯ ಮಾಡಬೇಕು ಅಂತ ಯೋಚಿಸುತ್ತಿದ್ದೆ. ಅದಕ್ಕೀಗ ಕಾಲ ಕೂಡಿ ಬಂದಿದೆ ಎಂದರು.

ಕೋವಿಡ್‌ ಎಲ್ಲರನ್ನು ಬಾಧಿಸುತ್ತಿದೆ. ಈಗಾಗಲೇ ರಾಮನಗರ ಜಿಲ್ಲೆಯ 16 ಆಶಾ ಕಾರ್ಯಕರ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಪ್ರತೀ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡ್ತೀವಿ ಅಂತಾ ಹೇಳಿತ್ತು. ಆದರೆ ಇಲ್ಲಿವರೆಗೂ ಒಂದೇ ಒಂದು ಕುಟುಂಬಕ್ಕೆ ಹಣ ಸಿಕ್ಕಿದೆ ಎಂಬುದು ಗೊತ್ತಾಗಿಲ್ಲ. ಹಾಗೆಯೇ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುತ್ತೇವೆ ಅಂದಿತ್ತು. ಅದರಲ್ಲೂ ಕೂಡ ಸರ್ಕಾರ ವಿಫಲವಾಗಿದೆ. ಆದರೆ ತಮ್ಮ ಪ್ರಾಣ ಪಣಕ್ಕಿಟ್ಟು, ನಮ್ಮ ಪ್ರಾಣ ಉಳಿಸುವ ಕೆಲಸವನ್ನ ಕೊರೋನಾ ವಾರಿಯರ್ಸ್ ಮಾಡುತ್ತಿದ್ದಾರೆ.ಅವರನ್ನ, ಅವರ ಕುಟುಂಬವನ್ನ ಉಳಿಸುವ ಕೆಲಸವನ್ನ ನಾವು ಮಾಡಬೇಕಿದೆ.

ಅದಕ್ಕಾಗಿಯೇ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದೇವೆ.ಮುಂದಿನ ದಿನಗಳಲ್ಲಿ ಮೆಡಿಕಲ್ ಕಿಟ್ ವಿತರಣೆ ಮಾಡುತ್ತೇವೆ ಅಂತ ನಿಖಿಲ್‌ ಕುಮಾರ ಸ್ವಾಮಿ ಹೇಳಿದರು.

Categories
ಸಿನಿ ಸುದ್ದಿ

ಜೂನ್ 18ಕ್ಕೆ ನೆಟ್​​ಫ್ಲಿಕ್ಸ್​ನಲ್ಲಿ ಧನುಷ್​ ನಟನೆಯ ಜಗಮೇ ತಂಧಿರಮ್ ಬಿಡುಗಡೆ – ಇದು ಕಾರ್ತಿಕ್​ ಸುಬ್ಬರಾಜು ನಿರ್ದೇಶನದ ಸಿನಿಮಾ

ಕಾಲಿವುಡ್​ ಸ್ಟಾರ್ ನಟ ಧನುಷ್ ಇದೀಗ ಚೊಚ್ಚಲ ಓಟಿಟಿ ವೇದಿಕೆಗೆ ಪದಾರ್ಪಣೆ ಮಾಡಲು ಸಿದ್ಧತೆಯಲ್ಲಿದ್ದಾರೆ. ತುಂಬ ಸದ್ದು ಮಾಡಿರುವ ಜಗಮೇ ತಂಧಿರಮ್ ಚಿತ್ರ ಇದೀಗ ನೆಟ್​ಫ್ಲಿಕ್ಸ್​​ನಲ್ಲಿ ಸ್ಟ್ರೀಮ್ ಆಗಲಿದೆ. ಜೂನ್ 18ಕ್ಕೆ ಬಿಡುಗಡೆಯ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಿದ್ದು, ಅಭಿಮಾನಿಗಳ ಕಾಯುವಿಕೆಗೆ ಉತ್ತರ ಸಿಕ್ಕಿದೆ.
ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಬೇಕಿತ್ತು. ಕೊರೋನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಸದ್ಯದ ಸ್ಥಿತಿ ನೋಡಿದರೆ ಚಿತ್ರಮಂದಿರ ತೆರೆಯುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಇದೀಗ ಓಟಿಟಿ ಮೊರೆ ಹೋಗಿದೆ ಚಿತ್ರತಂಡ.


ಚೆನ್ನೈ ಮೂಲದ ವೈನಾಟ್ ಸ್ಟುಡಿಯೋಸ್ ಮತ್ತು ರಿಲಯನ್ಸ್ ಎಂಟರ್​ಟೈನ್ಮೆಂಟ್​ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜೂ. 1ಕ್ಕೆ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಜಗಮೇ ತಂಧಿರಮ್ ಸಿನಿಮಾ ಗ್ಯಾಂಗ್​ಸ್ಟರ್​ ವೊಬ್ಬನ ಹಿನ್ನೆಲೆಯ ಕಥಾನಕ. ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಆಗಿ ಧನುಷ್ ಕಾಣಿಸಿಕೊಂಡಿದ್ದು, ಐಶ್ವರ್ಯಾ ಲಕ್ಷ್ಮೀ, ಜೊಜಿ ಜಾರ್ಜ್, ಕಲೈಅರಸನ್ ಶರತ್ ರವಿ, ಜೇಮ್ಸ್ ಕೊಸ್ಮೋ ಪಾತ್ರವರ್ಗದಲ್ಲಿದ್ದಾರೆ.


ಇನ್ನು ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ಇದು ನನ್ನ ಕನಸಿನ ಪ್ರಾಜೆಕ್ಟ್. ಎಲ್ಲೆಡೆ ಸಲ್ಲುವ ಕಥಾ ಹಂದರ ಹೊಂದಿರುವ ಈ ಸಿನಿಮಾವನ್ನು ಹಿಂದಿ, ತೆಲುಗು, ಕನ್ನಡಕ್ಕೂ ಡಬ್ ಮಾಡಿ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಮಾಡಲಿದ್ದೇವೆ. ಧನುಷ್ ತಮ್ಮ ಪಾತ್ರದ ಮೂಲಕ ವಿಭಿನ್ನವಾಗಿ ತೆರೆಮೇಲೆ ಕಾಣಿಸುತ್ತಾರೆ. ಹೊಸದಾದ ಕಥೆಯೊಂದಿಗೆ ಈ ಸಿನಿಮಾ ತೆರೆದುಕೊಳ್ಳಲಿದೆ ಎಂಬುದು ನಿರ್ದೇಶಕರ ಮಾತು.

Categories
ಸಿನಿ ಸುದ್ದಿ

ಸೌದೆ ಸಹಾಯಕ್ಕೆ ನಿಂತ ನಿರ್ದೇಶಕ – ಸಂಕಷ್ಟದಲ್ಲಿರೋ 200 ಮಂದಿ ಸಿನಿಮಾ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಣೆಗೆ ಕೊಡಗು ಮಂಜು ರೆಡಿ!

ಯುವ ನಿರ್ದೇಶಕ ಕೊಡುಗು ಮಂಜು, ಕೊರೊನಾದ ಸಂಕಷ್ಟದಲ್ಲಿ ಸಿಲುಕಿರುವ ಅಸಹಾಯಕರಿಗೆ ತಮ್ಮ ಕೈಲಾದಷ್ಟು ನೆರವು ನೀಡಲು ಮುಂದಾಗಿದ್ದಾರೆ. ಈಗಾಗಲೇ ಅವರು ಬೆಂಗಳೂರು ನಗರದ ರುದ್ರಭೂಮಿಗಳಲ್ಲಿ ಶವ ಸುಡಲು ಸೌದೆ ಸಮಸ್ಯೆ ಉಂಟಾಗದಂತೆ ಅನೇಕ ಜನರಿಗೆ ಉಚಿತವಾಗಿ ಸೌದೆ ಸೌಲಭ್ಯ ಕಲ್ಪಿಸಿದ್ದಾರೆ. ಸದ್ದಿಲ್ಲದೆ, ಸುದ್ದಿ ಮಾಡದೆ ಈ ಕೆಲಸವನ್ನು ಅವರು ಯಾವುದೇ ಫಲಾಪೇಕ್ಷೆ ಬಯಸದೆ ಮಾಡಿಕೊಂಡು ಬಂದಿದ್ದಾರೆ. ಈಗಲೂ ಬೆಂಗಳೂರಿನ ಯಾವುದೇ ರುದ್ರಭೂಮಿಯಲ್ಲಿ ಸಾರ್ವಜನಿಕರಿಗೆ ಸೌದೆ ಸಮಸ್ಯೆ ಉಂಟಾದರೆ ತಕ್ಷಣವೇ ತಮ್ಮನ್ನು ಸಂಪರ್ಕ ಮಾಡಿದರೆ ಸಾಕು, ಅವರಿರುವ ಜಾಗಕ್ಕೆ ಅಗತ್ಯದಷ್ಟು ಸೌದೆ ತರಿಸಿಕೊಡುವ ಕೆಲಸ ತಮ್ಮದು ಎನ್ನುತ್ತಾರೆ ಯುವ ನಿರ್ದೇಶಕ ಮಂಜುನಾಥ್‌ ಕೊಡಗು.

ಈ ಕೆಲಸ ಈಗಾಗಲೇ ಯಾವುದೇ ಪ್ರಚಾರ ಇಲ್ಲದೆ ಸಾಗಿದೆ. ಈಗಲೂ ಅದೇ ನಮ್ಮ ಉದ್ದೇಶ. ಪ್ರಚಾರ ಬೇಡ. ಸಂಕಷ್ಟದಲ್ಲಿರುವ ಜನರಿಗೆ ನೆರವಾಗುದಷ್ಟೇ ನಮ್ಮ ಉದ್ದೇಶ. ಒಂದಷ್ಟು ಜನರು ಸೇರಿ ಈ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದಾಗುವ ಕೆಲಸ ಇಷ್ಟು. ಸಂಕಷ್ಟದಲ್ಲಿರುವ ಜನರಿಗೆ ಏನಾದರೂ ಸಹಾಯ ಮಾಡೋಣ ಅಂದಾಗ ನಮಗೆ ಹೊಳೆದಿದ್ದು ಇದು. ಈಗಲೂ ಇದಕ್ಕೆ ದಯಮಾಡಿ ಯಾವುದೇ ಪ್ರಚಾರ ಬೇಡ. ಯಾಕಂದ್ರೆ ಪ್ರಚಾರ ಅಂದ್ರೆ ನಂಗೆ ಭಯ. ಜನ ಇದ್ರಲ್ಲೂ ಏನಾದ್ರೂ ಅಂದುಕೊಳ್ತಾರೆʼ ಅಂತ ತಮ್ಮ ಕೆಲಸದ ಬಗ್ಗೆ ಹೇಳಿಕೊಳ್ಳುವುದಕ್ಕೂ ಮುಜುಗರ ಪಡುತ್ತಾರೆ ನಿರ್ದೇಶಕ ಮಂಜು.

ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಿಸಲು ಮುಂದಾಗಿದ್ದಾರೆ. ʼ ನಾನು ಕೂಡ ಸಿನಿಮಾ ರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಬಂದವನು. ಅವರ ಕಷ್ಟ ಏನು ಅಂತ ನಂಗೂ ಗೊತ್ತು. ಈಗ ಸುಮಾರು 200 ಮಂದಿಗೆ ಫುಡ್‌ ಕಿಟ್‌ ವಿತರಣೆ ಮಾಡುತ್ತಿದ್ದೇವೆ. ಈ ಕೆಲಸ ಶುರುವಾಗಿದೆ. ತೀರಾ ಅಗತ್ಯವಿದ್ದರವರನ್ನು ಸಂಪರ್ಕಿಸಿ, ಫುಡ್‌ ಕಿಟ್‌ ವಿತರಣೆ ಮಾಡುತ್ತಿದ್ದೇವೆ. ಸೂಕ್ತ ಮಾಹಿತಿ ಪಡೆದು ಅವರಿರುವ ಕಡೆಯೇ ಹೋಗಿ ಫುಡ್‌ ಕಿಟ್‌ ವಿತರಣೆ ಮಾಡುತ್ತಿದ್ದೇವೆʼ ಎನ್ನುತ್ತಾರೆ ಮಂಜು.

Categories
ಸಿನಿ ಸುದ್ದಿ

ನಟ ಯಶ್‌ ಕಾರ್ಯಕ್ಕೆ ಶಹಬ್ಬಾಸ್‌ ಅಂದ ಚಿತ್ರೋದ್ಯಮ – ನಾಡಿನ ಜನತೆಯಿಂದಲೇ ಅಪಾರ ಮೆಚ್ಚುಗೆ

ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರಿಗೆ ಈಗಾಗಲೇ ಚಿತ್ರರಂಗದ ಅನೇಕ ಸ್ಟಾರ್‌ಗಳು ನೆರವಿಗೆ ಧಾವಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಸುದೀಪ್‌, ಶಿವರಾಜಕುಮಾರ್, ರಾಗಿಣಿ, ಉಪೇಂದ್ರ, ಸಂಚಾರಿ ವಿಜಯ್‌, ನೀನಾಸಂ ಸತೀಶ್‌ ಸೇರಿದಂತೆ ಅನೇಕರು ಈಗಾಗಲೇ ಫೀಲ್ಡಿಗಿಳಿದು ಸಿನಿಮಾ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿನ ಜನರ ನೆರವಿಗೆ ನಿಂತಿದ್ದಾರೆ. ಈ ನಡುವೆ ಈಗ ರಾಕಿಂಗ್‌ ಸ್ಟಾರ್‌ ದೊಡ್ಡ ಮಟ್ಟದಲ್ಲೇ 3 ಸಾವಿರ ಮಂದಿ ಸಿನಿಮಾ ಕಾರ್ಮಿಕರ ನೆರವಿಗೆ ಬಂದಿರುವುದು ಚಿತ್ರೋದ್ಯಮದಲ್ಲಿ ಸಂಚಲನ ಮೂಡಿಸಿದೆ. ಎಲ್ಲರೂ ಯಶ್‌ ಅವರ ಮಹತ್‌ ಕಾರ್ಯಕ್ಕೆ ಮೆಚ್ಚುಗೆ ಹೇಳಿದ್ದಾರೆ.ʼ ಇದು ನಿಮ್ಮಿಂದಾಗುತ್ತಿರುವ ಮಹತ್‌ ಕಾರ್ಯ. ಧನ್ಯವಾದಗಳು ಯಶ್. ಇಂತಹ ಮತ್ತಷ್ಟು ಮಹತ್ಕಾರ್ಯಗಳು ತಮ್ಮಿಂದ ನಡೆಸಲು ಆ ಭಗವಂತ ತಮಗೆ ಶಕ್ತಿ ನೀಡಲಿ ಎಂದು ನಟ ಉಪೇಂದ್ರ ಅವರು ಟ್ವಿಟ್‌ ಮಾಡಿದ್ದಾರೆ. ಹಾಗೆಯೇ ನಟರಾದ ಸಂಚಾರಿ ವಿಜಯ್‌ ಕೂಡ ಯಶ್‌ ಅವರ ನೆರವಿನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರೋದ್ಯಮದ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

ಇದು ದೊಡ್ಡ ಕಾರ್ಯ. ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಕಾರ್ಮಿಕರ ನೆರವಿಗೆ ಬರುವುದಕ್ಕೂ ದೊಡ್ಡ ಮನಸ್ಸು ಇರಬೇಕು. ಅದು ನಿಮ್ಮಲ್ಲಿದೆʼ ಅಂತ ನಟ ಸಂಚಾರಿ ವಿಜಯ್‌ ಸೋಷಲ್‌ ಮೀಡಿಯಾದಲ್ಲಿ ರಿಯಾಕ್ಟ್‌ ಮಾಡಿದ್ದಾರೆ. ಅವರಂತೆಯೇ ರವಿಶಂಕರ್ ಗೌಡ ಕೂಡ ಫೇಸ್ ಬುಕ್ ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡದ ಅನೇಕ ಸ್ಟಾರ್‌ ಗಳು ಕೂಡ ಯಶ್‌ ಕಾರ್ಯಕ್ಕೆ ಮೆಚ್ಚುಗೆ ಹೇಳಿದ್ದಾರೆ. ವಿಶೇಷವಾಗಿ ಸಿನಿಮಾ ಕಾರ್ಮಿಕರ ವಲಯದಿಂದ ಯಶ್‌ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

ನಿರ್ಮಾಪಕರಾದ ಸಾ.ರಾ. ಗೋವಿಂದು, ಕಲಾವಿದರ ಸಂಘದ ದೊಡ್ಡಣ್ಣ ಸೇರಿದಂತೆ ಎಲ್ಲರೂ ಯಶ್‌ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಜನ ಕಾರ್ಯವನ್ನು ಮುಕ್ತ ಕಂಠದಿಂದ ಬಣ್ಣಿಸಿರುವ ಜನ ಸಾಮಾನ್ಯರು, ಕಷ್ಟ ಪಟ್ಟು ದುಡಿದ ಹಣದಲ್ಲಿ ಒಬ್ಬ ಸ್ಟಾರ್‌ ಇಷ್ಟೆಲ್ಲ ನೆರವಾಗಲು ಸಾಧ್ಯವಾಗುವುದಾದರೆ,

ಹಲವಾರು ವರ್ಷಗಳಿಂದ ರಾಜಕಾರಣದಲ್ಲಿದ್ದು. ಸಾವಿರಾರು ಕೋಟಿಗಳಷ್ಟು ಆಸ್ತಿ-ಅಂತಸ್ತು ಸಂಪಾದಿಸಿಕೊಂಡಿರುವ ನಾಡಿನ ರಾಜಕಾರಣಿಗಳಿಗೆ, ಸಚಿವರಿಗೆ ಈ ರೀತಿಯ ನೆರವು ನೀಡುವುದು ಯಾಕೆ ಆಗುತ್ತಿಲ್ಲ? ಎಂದು ತರಾಟೆಗೆ ತೆಗೆದುಕೊಂಡಿರುವುದು ವಿಶೇಷ.

error: Content is protected !!